1773. ಗೂಂಡಾ ಗುರು (೧೯೮೫)



ಗೂಂಡಾ ಗುರು ಚಲನಚಿತ್ರದ ಹಾಡುಗಳು 
  1. ಈ ಮನೆಯ ದೀಪವು ನೀನೇ 
  2. ಒಂದು ಸಲ ಪ್ರಾಣಿಗಳ ಸಭೆ ಸೇರಿತು 
  3. ಬದ್ದು ತೋಡಿ ಗಿಲ್ಲಿ ಎತ್ತು 
  4. ಏ.. ಎಲ್ಲಿಗೆ ಹೋಗ್ತಿಯೇ ಯಾಕೆ ರಂಗಾಗ್ತಿಯೇ 
 ಗೂಂಡಾ ಗುರು (೧೯೮೫) - ಈ ಮನೆಯ ದೀಪವು ನೀನೇ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ 

ಈ ಮನೆಯ ದೀಪವು ನೀನೇ ಮಂಗಳದ ಕಳಶವು ನೀನೇ 
ವಾತ್ಸಲ್ಯ ನಿಧಿ ನೀನಾಗಿ ಸೌಭಾಗ್ಯ ಸಾವಿರ ತಂದೆ 
ನಗುವ ಮನೆಯ ಹೀಗೆ ಎಂದೆಂದೂ ನಗುತಾ ಇರಲಿ 
ಈ ಮುತ್ತಿನ ಅತ್ತಿಗೆ ಪ್ರೀತಿ ಎಂದೆಂದೂ ನಮಗೆ ಸಿಗಲೀ... 
ಈ ಮನೆಯ ದೀಪವು ನೀನೇ ಮಂಗಳದ ಕಳಶವು ನೀನೇ 
ವಾತ್ಸಲ್ಯ ನಿಧಿ ನೀನಾಗಿ ಸೌಭಾಗ್ಯ ಸಾವಿರ ತಂದೆ 

ಈ ಮನೆಯನು ತುಂಬಿದೆ ನೀ ಮಹಾಲಕ್ಷ್ಮಿಯ ಹಾಗೇ 
ಈ ಮಮತೆಯ ಕುಡಿ ತಂದು ಬೆಳಗಿದೆ ಕುಲ ಜ್ಯೋತಿ 
ಜೊತೆಯಾಗಿ ನೀನು ಬರಲು ಜೀವನವೇ ಜೇನ ಕಡಲು 
ಜೊತೆಯಾಗಿ ನೀನು ಬರಲು ಜೀವನವೇ ಜೇನ ಕಡಲು 
ಸುಖದ ಸವಿಯ ರಸ ಹೊನಲು 
ಈ ಮನೆಯ ಕಂಗಳು ನೀವು ಈ ಬಾಳ ಭಾಗ್ಯವು ನೀವು 
ನೂರಾರು ಜನ್ಮವೇ ಬರಲಿ ಈ ಬಂಧ ನನಗೆ ಸಿಗಲೀ 
ನಗುವ ಮನೆಯು ಹೀಗೆ ಎಂದೆಂದೂ ನಗುತಾ ಇರಲಿ 
ಈ ಮುತ್ತಿನ ಅತ್ತಿಗೆ ಪ್ರೀತಿ ಎಂದೆಂದೂ ನಮಗೆ ಸಿಗಲಿ 

ನಾ ಕಾಣದಿಹ ದೈವವನು ಈ ಗುಡಿಯಲ್ಲಿ ಕಂಡೆ 
ಆ ದೈವದ ಸೇವೆಯಲಿ ಹೊಸ ಹರುಷವ ಕಂಡೆ 
ಈ ಮಮತೆಯ ಮಡಿಲಿನಲಿ ಮಗುವಾಗಿ ನಾನು ನಲಿವೆ 
ಈ ಮಮತೆಯ ಮಡಿಲಿನಲಿ ಮಗುವಾಗಿ ನಾನು ನಲಿವೆ 
ಟಾಯೆ ನಿನಗೆ ಕೈಯ್ಯ್ ಮುಗಿವೇ 
ಈ ಮನೆಯ ಕಂಗಳು ನೀವು ಈ ಬಾಳ ಭಾಗ್ಯವು ನೀವು 
ನೂರಾರು ಜನ್ಮವೇ ಬರಲಿ ಈ ಬಂಧ ನನಗೆ ಸಿಗಲೀ 
ನಗುವ ಮನೆಯು ಹೀಗೆ ಎಂದೆಂದೂ ನಗುತಾ ಇರಲಿ 
ಈ ಮುತ್ತಿನ ಅತ್ತಿಗೆ ಪ್ರೀತಿ ಎಂದೆಂದೂ ನಮಗೆ ಸಿಗಲಿ 
------------------------------------------------------------------------------------------------------

ಗೂಂಡಾ ಗುರು (೧೯೮೫) - ಒಂದು ಸಲ ಪ್ರಾಣಿಗಳ ಸಭೆ ಸೇರಿತು 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಕೋರಸ್ 

ಒಂದಾನೊಂದು ಕಾಲದಲ್ಲಿ ಒಂದು ದೊಡ್ಡ ಕಾಡು 
ಆ ಕಾಡು ಥರಥರ ಪ್ರಾಣಿಗಳ ಬೀಡು 

ಒಂದು ಸಲ ಪ್ರಾಣಿಗಳ ಸಭೆ ಸೇರಿತು 
ಬುದ್ದಿವಂತ ಯಾರು ಅನ್ನೋ ಚರ್ಚೆ ಆಯಿತು 
ಒಂದು ಸಲ ಪ್ರಾಣಿಗಳ ಸಭೆ ಸೇರಿತು 
ಬುದ್ದಿವಂತ ಯಾರು ಅನ್ನೋ ಚರ್ಚೆ ಆಯಿತು 
ನಾನೇ ನಾನೇ ನಾನೇ ಅಂತಾ ಬಂತು ಹುಲಿ ಮುಂದೆ... 
ನೀವುಗಳೆಲ್ಲಾ ಲೆಕ್ಕ ಇಲ್ಲ ಎಂದು ನನ್ನ ಮುಂದೆ 

ಜಂಭ ಬೇಡ ಹುಲಿರಾಯ ಅಂತ ಹೇಳ್ತು ನರಿರಾಯ 
ಮನುಷ್ಯನೆಂಬ ಪ್ರಾಣಿ ಉಂಟು ಅದಕೆ ತುಂಬಾ ಬುದ್ದಿ ಉಂಟು 

ಹ್ಹಾ.. ಮನುಷ್ಯ ಅನ್ನೋ ಪ್ರಾಣಿನೇ ನನಗಿಂತ ಬುದ್ದಿವಂತನೇ.. 
ಅಹ್ಹಹ್ಹಹ್ಹ.. ಯಾರವನು ಎಲ್ಲಿದಾನೇ .. 

ನಾವು ಯಾರು ಮನುಷ್ಯ ಪ್ರಾಣಿಯನ್ನೇ ನೋಡಿಲ್ಲಾ.. (ನೋಡಿಲ್ಲಾ) 
ಕಾಡಿನಾಗೆ ಇದ್ದಾರೆ ಎಂದು ಹೇಳ್ತಾರೇ ಎಲ್ಲಾ... 

ಹಿಂದೆ ನನ್ನ ಮುತ್ತಾತ ಅವನ ಕೈಯ್ಯಲ್ಲ ಸಿಕ್ಕೊಂಡ 
ಮನುಷ್ಯ ಹೇಳದಂಗ ಲಾಗ ಹಾಕ್ಕೊಂಡ ಅಲ್ಲೇ ಕುಣಿತ್ತಿದ್ದ 

ಕೋತಿ ಹೇಳಿದ ಮಾತನ್ನ ಕೇಳ್ತು ಹುಲಿಗೆ ತುಂಬಾ ಕೋಪ ಬಂತು 
ಆ ಮನುಷ್ಯ ಪ್ರಾಣಿ ಯಾರು ಅಂತ ನೋಡೇ ಬೀಡ್ತೀನಿ 
ಬುದ್ದಿವಂತ ನಾನೇ ಅಂತ ಸವಾಲು ಹಾಕ್ತಿನೀ 
ಘರ್ಜನೆ ಮಾಡ್ತಾ ಹೆಜ್ಜೆ ಹಾಕ್ತಾ ಹೋರಟ ಹುಲಿರಾಯ 

ಅವಾಗ ನನ್ನ ಹಾಗೆ ಒಬ್ಬ ಮನುಷ್ಯ ಕಟ್ಟಿಗೆ ಕಡಿತಾ ಇದ್ದ 
ಎಲವೋ ಪ್ರಾಣಿ ಎಲ್ಲಿರುವನೋ ಆ ಮನುಷ್ಯ ಪ್ರಾಣಿ 

ಮಮಮಮ ಮನುಷ್ಯನೇ ಯಾ ಯಾ ಯಾಕಪ್ಪ ಹುಲಿರಾಯ 
ಅಹ್ಹಹ್ಹಹಾ.. ಬುದ್ದಿವಂತ ಅವನಂತೆ ಅದೇ ನೋಡು ನನ್ ಚಿಂತೇ 
ನನ್ನ ಕೈಲಿ ಸಿಕ್ಕಿದರವನು ಕಚ್ ಕಚ್ ತಿಂತಿನ್ ನಾನೂ 

ಅಯ್ಯೋ ಅಯ್ಯೋ ಹುಲಿರಾಯ ನೀ ಕಾಡಿಗೆ ರಾಜ ಮಹರಾಯ 
ಆ ಮನುಷ್ಯ ಪ್ರಾಣೀನ ನೀನು ಹುಡ್ಕೊಂಡ ಹೋಗೋದೇನು 
ಕರೆಸು ನಿನ್ನ ಅರಮನೆಗೆ ಬರಲಿ ನೀನಿರೋ ಕಡೆಗೆ.... 
ಅರಮನೆ ಅಂದ್ರೇ ... ನಿನ್ನಂಥ ರಾಜ ಇರೋ ಮನೆ 
ಅಂಥದ್ದು ಯಾವುದು ಇಲ್ವಲ್ಲಾ ಕಟ್ಟಕೊಡ ಬಲ್ಲೆ ನಾನೆಲ್ಲ 
ಹಾಗಾದ್ರೇ ಕಟ್ಕೋಡು 

ಆಹಾ.. ರಾಜ ನಿನ್ನ ಅರಮನೆ ನೋಡು 
ಪ್ರವೇಶ ಮಾಡೋ ಏರ್ಪಾಡು ಮಾಡು 
ಕಾಡಿನ ಪ್ರಾಣಿಗಳೆಲ್ಲ ಬರಲೀ ಅರಮನೆ ಪ್ರವೇಶ ಎಲ್ಲಾ ನೋಡ್ಲಿ 
ಓ ನರಿರಾಯ ಹೂ... ಹಾಕು ಡಂಗುರ 

ಪ್ರಾಣಿಗಳೆಲ್ಲಾ ಬನ್ನಿರೀ ಕೂಡಿ ಕೂಡಿ 
ಹುಲಿರಾಯನ ಅರಮನೆ ನೋಡಿ ನೋಡಿ ನೋಡಿ 
ಸಂತಸದಿಂದ ಎಲ್ಲರೂ ಹಾಡಿ .. ಹಾಡಿ ... ಹಾಡಿ ... 
ಮನುಷ್ಯ ಪ್ರಾಣಿಯ ಸೋಲನು ನೋಡಿ ನೋಡಿ ನೋಡಿ 

ಹೆಮ್ಮೆಯಿಂದ ಹುಲಿರಾಯ ಹೊಕ್ಕಿತು ಅರಮನೆಯ 
ಥಟ್ಟನೆಯ ಕೋಲಿನ ಬಾಗಿಲು ಬಿದ್ದಿತು ಹೆದರಿಸಿ ಆ ಹುಲಿಯಾ 

ಮೇಷ್ಟ್ರೇ ಆಮೇಲೆ ಏನಾಯ್ತು... 
ಆಮೇಲೆ ಆ ಮರ ಕಡಿಯೋನತ್ರ ಹೋಗಿ 
ಯಾಕೆ ಹೀಗೆ ಮಾಡಿದೆಯೋ ನೀನು ಹೇಳಯ್ಯಾ 
ನೀನು ಹುಡುಕಿದ ಆ ಮನುಷ್ಯ ನಾನೇ ಕೇಳಯ್ಯ 
ಹ್ಹಾ... ಮನುಷ್ಯ ಪ್ರಾಣಿ ನೀನೇ .. ಹೌದು ನಾನೇ ನಾನೇ 
ನಿನಗಿಂತ ನಾ ಬುದ್ದಿವಂತ ಏಕೆ ಗೊತ್ತೇ 
ಮಾತಾಡಿದ್ದ ಬರೆಯಲು ಬಲ್ಲೆ ಬರೆದಿದ್ದೆಲ್ಲ ಓದಲೂ ಬಲ್ಲೇ 
ಎಲ್ಲಾ ವಿಷಯ ತಿಳಿಯಲೂ ಬಲ್ಲೇ 
ನಿನ್ನಂಥವರ ಹಿಡಿಯಲು ಬಲ್ಲೇ 
ನೀ ಕಾಡಿನ ರಾಜ ಆದರೇನೂ ವಿದ್ಯಾಬುದ್ಧಿ ಸೊನ್ನೆ 
ಸರ್ಕಸ ಚಾಟಿ ಪಟಿರೇಟು ಕಾದಿದೆ ನಿನ್ನೆ ನಿನ್ನೆ 

ಅಕ್ಷರ ಜ್ಞಾನ ಇಲ್ಲದವ ಅಳಲು ತಕ್ಕವನಲ್ಲ    
ವಿದ್ಯಾಬುದ್ಧಿ ಇಲ್ಲದವ ಬಾಳಲು ತಕ್ಕವನಲ್ಲ 
ಅಕ್ಷರ ಜ್ಞಾನ ಇಲ್ಲದವ ಅಳಲು ತಕ್ಕವನಲ್ಲ    
ವಿದ್ಯಾಬುದ್ಧಿ ಇಲ್ಲದವ ಬಾಳಲು ತಕ್ಕವನಲ್ಲ 
ಅಕ್ಷರ ಜ್ಞಾನ... ಬೇಕು ಬೇಕು ವಿದ್ಯಾಬುದ್ಧಿ ಬೇಕು ಬೇಕು 
ಶಭಾಷ್... 
ಅಕ್ಷರ ಜ್ಞಾನ... ಬೇಕು ಬೇಕು ವಿದ್ಯಾಬುದ್ಧಿ ಬೇಕು ಬೇಕು 
ಅಕ್ಷರ ಜ್ಞಾನ... ಬೇಕು ಬೇಕು ವಿದ್ಯಾಬುದ್ಧಿ ಬೇಕು ಬೇಕು... ಅಹ್ಹಹ್ಹಹಾ  
 -------------------------------------------------------------------------------------------------------

ಗೂಂಡಾ ಗುರು (೧೯೮೫) - ಬದ್ದು ತೋಡಿ ಗಿಲ್ಲಿ ಎತ್ತು 
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

-------------------------------------------------------------------------------------------------------

ಗೂಂಡಾ ಗುರು (೧೯೮೫) - ಏ.. ಎಲ್ಲಿಗೆ ಹೋಗ್ತಿಯೇ ಯಾಕೆ ರಂಗಾಗ್ತಿಯೇ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಗಂಡು : ಹೇ.. ಎಲ್ಲೋಗ್ತಿಯೇ... ಯಾಕೆ ರಂಗಾಗ್ತೀಯೇ 
           ನಂತವಾ ಕದ್ದಿದ್ದು ಗುಟ್ಟಾಗಿ ಇಟ್ಟಿದ್ದು ಎಲ್ಲಾ ಈಗ ರಟ್ಟಾಗೋಯ್ತು 
ಹೆಣ್ಣು : ಹೇ.. ಏನಂತೀಯೋ.. ಯಾಕೇ ಹಿಂಗಾಡ್ತೀಯೋ 
          ಮೈಯ್ಯಿ ಮುಟ್ಟಿ ಮಿಂಚಾಯ್ತು ಗುಡುಗುಡುಗಿ ನೀರಾಯ್ತು 
          ನನ್ನ ಚಳಿ ಬಿಟ್ಟೋಡೋಯ್ತು 
ಗಂಡು : ಹೇ.. ಎಲ್ಲೋಗ್ತಿಯೇ... ಯಾಕೆ ರಂಗಾಗ್ತೀಯೇ 

ಗಂಡು : ಹಳ್ಳಿ ಹುಡುಗಿ ಮಳ್ಳಿ ಹಂಗೆ ಬಂದು ಮೇಲೆ ಬಿದ್ದೆ 
ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ 
ಗಂಡು : ಬಳ್ಳಿ ಮೈಯ್ಯ ಕಳ್ಳಿ ನೀನು ನನ್ನ ಮನಸ್ಸೂ ಕದ್ದೆ 
           ಅರೆರೇ ಹಳ್ಳಿ ಹುಡುಗಿ ಮಳ್ಳಿ ಹಂಗೆ ಬಂದು ಮೇಲೆ ಬಿದ್ದೇ 
           ಹ್ಹಾ.. ಬಳ್ಳಿ ಮೈಯ್ಯ ಕಳ್ಳಿ ನೀನು ನನ್ನ ಮನಸ್ಸೂ ಕದ್ದೆ   
ಹೆಣ್ಣು : ಹೇ... ಪಟ್ಟಣದ ಗಂಡು ಬೆಡಗಿನ ಕಂಡು ಸ್ತುತ್ತಿಯಂತ ಗೊತ್ತು 
          ಮೈಯ್ಯ ಮುಳುಗೋಯ್ತು ನೀರ ಒಳಗೆ ಕೊಟ್ಟಾಗ ನೀ ಮುತ್ತು 
ಗಂಡು : ಹೇ.. ಎಲ್ಲೋಗ್ತಿಯೇ... ಯಾಕೆ ರಂಗಾಗ್ತೀಯೇ 
ಹೆಣ್ಣು : ಮೈಯ್ಯಿ ಮುಟ್ಟಿ ಮಿಂಚಾಯ್ತು ಗುಡುಗುಡುಗಿ ನೀರಾಯ್ತು 
          ನನ್ನ ಚಳಿ ಬಿಟ್ಟೋಡೋಯ್ತು ಹೇ... ಏನಂತೀಯೋ..  
ಗಂಡು : ಅರೇ ಯಾಕೆ ರಂಗಾಗ್ತೀಯೇ 

ಹೆಣ್ಣು : ರಾಗಿ ಮುದ್ದೆ ರಾತ್ರಿ ನಿದ್ದೆ ಸಾಕು ಅಂತಾ ಇದ್ದೇ 
ಗಂಡು : ಆಹಾಹಾ ಆಹಾಹಾ ಆಹಾಹಾ  
ಹೆಣ್ಣು : ಗಂಡೇ ನಿನ್ನ ಕಂಡಾಗಿಂದ ಕಣ್ಣಿಗೆಲ್ಲಿ ನಿದ್ದೇ 
ಗಂಡು : ಓಹೋ .. ಓ ಓ ಓ ಓ ಓ ಓ ಓ   
ಹೆಣ್ಣು : ರಾಗಿ ಮುದ್ದೆ ರಾತ್ರಿ ನಿದ್ದೆ ಸಾಕು ಅಂತಾ ಇದ್ದೇ (ಆಹಾ) 
          ಗಂಡೇ ನಿನ್ನ ಕಂಡಾಗಿಂದ ಕಣ್ಣಿಗೆಲ್ಲಿ ನಿದ್ದೇ 
ಗಂಡು : ಅರೇ .. ಹೇ.. ಹಣ್ಣು ಹುಳಿ ಅಂತಾ ಹೇಳ್ತಾ ಕೆನ್ನೆ ನೀನು ಕೊಟ್ಟೆ 
            ಕೆನ್ನೆ ಕಚ್ಚಿ ರುಚಿ ನೋಡಿ ಹುಚ್ಚನಾಗಿ ಬಿಟ್ಟೇ .. 
ಹೆಣ್ಣು : ಹೇ.. ಏನಂತೀಯೋ.. ಯಾಕೇ ಹಿಂಗಾಡ್ತೀಯೋ 
ಗಂಡು : ನಂತವಾ ಕದ್ದಿದ್ದು ಗುಟ್ಟಾಗಿ ಇಟ್ಟಿದ್ದು ಎಲ್ಲಾ ಈಗ ರಟ್ಟಾಗೋಯ್ತು 
           ಹೇ.. ಎಲ್ಲೋಗ್ತಿಯೇ... 
ಹೆಣ್ಣು : ಯಾಕೇ ಹಿಂಗಾಡ್ತೀಯೋ 
ಗಂಡು : ಅರೇ ನನ ನಾನನ ನಾ 
ಹೆಣ್ಣು : ಲಾ..ಲಾ.. ಲಾಲಲಲಲಾ 
ಗಂಡು : ಅರೇ ನನ ನಾನನ ನಾ 
ಹೆಣ್ಣು : ಲಾ..ಲಾ.. ಲಾಲಲಲಲಾ 
-------------------------------------------------------------------------------------------------------

No comments:

Post a Comment