- ಪ್ರೇಮ ಬಾಳಗೀತೆ
- ಮೋಡದ ನಡುವಲ್ಲಿ
- ನೀ ಮಾಡೋ ಈ ಮೋಸಕೇ
- ವರುಷಕ್ಕೊಮ್ಮೆ ದೀಪಾವಳಿ
ನ್ಯಾಯ ನೀತಿ ಧರ್ಮ (೧೯೮೦) - ಪ್ರೇಮ ಬಾಳಗೀತೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಲಲಲಲಾಲಾಲಾ ಲಲಲಲಾಲಾಲಾ ಲಲಲಲಾಲಾಲಾ ಲಲಲಲಾಲಾಲಾ
ಪ್ರೇಮ.. ಬಾಳಗೀತೆ... ಸ್ನೇಹ .. ಭಾವಗೀತೆ..
ಹರೆಯದ ಆಸೆಯೇ ಪ್ರೇಮದ ತಾಣ ಹೃದಯವ ಬೆಸೆಯುವ ಸ್ನೇಹದ ಗಾನ..
ಹ್ಯಾಪೀ ವೇಲ್ಕಮ್ ಟೂ ಆಲ್ ... ಓಓಓಓಓ
ಪ್ರೇಮ.. ಬಾಳಗೀತೆ... ಸ್ನೇಹ .. ಭಾವಗೀತೆ..
ಒಲವಿರುವ ಜೀವನ ನಗು ನಗುವ ಹೂಬನ
ಸರಸಮಯ ಭಾವನ ಸುಖ ತರುವ ಬಂಧನ
ನಲಿವಿನ ಚೆಲುವಿನ ಹೊನಲಲಿ ನಿಂದು
ಮನಸಿನ ಚಿಂತೆಯ ಮರೆಯುವ ಇಂದು
ನಲಿವಿನ ಚೆಲುವಿನ ಹೊನಲಲಿ ನಿಂದು
ಮನಸಿನ ಚಿಂತೆಯ ಮರೆಯುವ ಇಂದು
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ ತಾಳಕ್ಕೆ ತಾಳ ಹಾಕಿ ಬನ್ನಿ
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ ತಾಳಕ್ಕೆ ತಾಳ ಹಾಕಿ ಬನ್ನಿ
ಪ್ರೇಮ.. ಬಾಳಗೀತೆ... ಸ್ನೇಹ .. ಭಾವಗೀತೆ..
ಚೆಲುವಿಹುದು ಹೆಣ್ಣಿಗೆ ಅದರ ಸುಖ ಕಣ್ಣಿಗೆ
ಪರಿಮಳವು ಹೂವಿಗೆ ಅದರ ಸುಖ ಗಾಳಿಗೆ
ಪದಗಳು ಸೇರಲು ಹೊಸ ಹೊಸರಾಗ
ಮನಗಳು ಸೇರಲು ಅರೆಯದ ವೇಗ
ಪದಗಳು ಸೇರಲು ಹೊಸ ಹೊಸರಾಗ
ಮನಗಳು ಸೇರಲು ಅರೆಯದ ವೇಗ
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ
ಗೆಳೆತನ ತೋರಿ ಒಂದಾಗಿ ಇಲ್ಲಿ ಸೇರಿ
ತಾಳಕ್ಕೆ ತಾಳ ಹಾಕಿ ಬನ್ನಿ
ಪ್ರೇಮ.. ಬಾಳಗೀತೆ... ಸ್ನೇಹ .. ಭಾವಗೀತೆ..
ಹರೆಯದ ಆಸೆಯೇ ಪ್ರೇಮದ ತಾಣ ಹೃದಯವ ಬೆಸೆಯುವ ಸ್ನೇಹದ ಗಾನ..
ಹ್ಯಾಪೀ ವೇಲ್ಕಮ್ ಟೂ ಆಲ್ ... ಓಓಓಓಓ
ಪ್ರೇಮ.. ಬಾಳಗೀತೆ... ಲಲಲಲಲಾಲಾಲಾ
---------------------------------------------------------------------------------------------------
ನ್ಯಾಯ ನೀತಿ ಧರ್ಮ (೧೯೮೦) - ಮೋಡದ ನಡುವಲ್ಲಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಮೋಡದ ನಡುವಲಿ... ಓಡುವ ರವಿಯಲಿ
ಮೋಡದ ನಡುವಲಿ... ಓಡುವ ರವಿಯಲಿ
ಕಂಡೇ ನಿನ್ನ ಮೊಗವನು ಜೀಲಾ ಜೀಲ್ ಜೀಲಾ ಜೀಲ್
ಕುಣಿಯೋ ಅಲೆಯಲೆಯಲಿ ಕಂಡೆ ನಿನ್ನ ನಗುವನು
ಜೀಲಾ ಜೀಲ್ ಜೀಲಾ ಜೀಲ್
ಕುಣಿಯೋ ಅಲೆಯಲೆ ಕಂಡೆ ನಿನ್ನ ನಗುವನು
ನಾ ಕಂಡೆ ನಿನ್ನ ನಗುವನು ಓ.. ಗೆಳೆಯಾ ಓ..
ಓ.. ಇನಿಯ.. ಓ..
ಎಲ್ಲೆಡೇ.. ತುಂಬಿರುವ ಪರಿಮಳ ತಂದಿದೆ ಎದೆಯಲಿ ನಿನ್ನ ಸವಿನೆನಪು...
ಸಂಜೆಯ ಗಾಳಿಯಲಿ ಹಾರುವ ಹಕ್ಕಿಯು ಮೀಟಿದೆ ಪ್ರೀತಿಯ ಹೊಸ ಪಲಕು
ನಿನ್ನಯ ಪ್ರತಿಬಿಂಬ ನಿಂತಿರೆ ಕಣ್ತುಂಬ ಮರೆತೆ ನಾನು ನನ್ನನು....
ಚಿತ್ರದಿ ಕುಣಿಯುವ ನವಿಲಿನ ರೀತಿ ನಾ ನಲಿದೆ ಕಂಡು ನಿನ್ನನ್ನು
ನಾ ನಲಿದೆ ಕಂಡು ನಿನ್ನನು ಲಲಲಲಲಾ.. ಲಲಲಲಲಾ..
ಮೋಡದ ನಡುವಲಿ... ಓಡುವ ರವಿಯಲಿ
ಕಂಡೇ ನಿನ್ನ ಮೊಗವನು ಜೀಲಾ ಜೀಲ್ ಜೀಲಾ ಜೀಲ್
ಹೂವಿನ ಹಾಸಿಗೆಯ ಬನಸಿರಿ ಹಾಸಿದೆ ಮನಗಳ ಮಿಲನದ ದಾರಿಯಲಿ...
ನಿನ್ನಯ ಇನಿದನಿಯ ಕೇಳಿದೆ ಹರುಷದಿ ಹಾಡುವ ಕೋಗಿಲೆ ಗಾನದಲೀ...
ಆಸೆಯ ಉಯ್ಯಾಲೇ ಆಡಿದೆ ಮನದಲ್ಲೇ ಜೇನ ತಂದ ಸಂಭ್ರಮ ಸಾಗರ ಸಂಗಮ
ಬಯಸಿದ ನದಿಯೊಳು ಹರಸಿ ಬಂದೆ ನಿನ್ನನು ನಾ ಹರಸಿ ಬಂದೆ ನಿನ್ನನೂ
ಓ.. ಗೆಳೆಯಾ.. ಓ.. ಓ..ಇನಿಯಾ ಓ..
--------------------------------------------------------------------------------------------------
ನ್ಯಾಯ ನೀತಿ ಧರ್ಮ (೧೯೮೦) - ನೀ ಮಾಡೋ ಈ ಮೋಸಕೇ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಬಸವರಾಜ್ ಕೆಸ್ತೂರ, ಗಾಯನ : ಎಸ್.ಪಿ.ಬಿ.
ನೀ ಮಾಡೋ ಈ ಮೋಸಕೆ ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು ಕಾಸಿನ ಆಸೆಯ ಮನದಲಿಟ್ಟು
ಬಡವರನೇಕೆ ಕಾಡುವಿರೋ..
ನೀ ಮಾಡೋ ಈ ಮೋಸಕೆ ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು ಕಾಸಿನ ಆಸೆಯ ಮನದಲಿಟ್ಟು
ಬಡವರನೇಕೆ ಕಾಡುವಿರೋ..
ಯಾರೇ ಆದರೂ ಬಿಡೇನು ಅನ್ಯಾಯಕೆ ತಲೆಯ ಬಾಗಿಸೇನು
ಯಾರೇ ಆದರೂ ಬಿಡೇನು ಅನ್ಯಾಯಕೆ ತಲೆಯ ಬಾಗಿಸೇನು
ಮೋಸ ಇದ್ದಲ್ಲಿ ದೋಷ ಕಂಡಲ್ಲಿ ಇರುವೇ ನಾನಲ್ಲಿ ಆ ಕ್ಷಣವೇ
ನೀ ನಗಲು ಹೊಸ ನಗಲು
ನೀ ನಗಲು ಹೊಸ ನಗಲು ಜನರಲಿ ನಗುವನು ನಾ ತರುವೇ
ನೀ ಮಾಡೋ ಈ ಮೋಸಕೆ ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು ಕಾಸಿನ ಆಸೆಯ ಮನದಲಿಟ್ಟು
ಬಡವರನೇಕೆ ಕಾಡುವಿರೋ..
ಬಡವ ಬಲ್ಲಿದರ ನಡುವೆ ಇರುವ ಗೋಡೆಯ ಒಡೆಯಲು ಭಯವೇ
ಬಡವ ಬಲ್ಲಿದರ ನಡುವೆ ಇರುವ ಗೋಡೆಯ ಒಡೆಯಲು ಭಯವೇ
ನಾವೇ ನಮ್ಮಲ್ಲಿ ಒಂದೇ ಆದಲ್ಲಿ ಒಡೆಯಬಲ್ಲೆವು ಈ ಕ್ಷಣವೇ
ಆ ಛಲವು ನಮಗಿರಲು
ಆ ಛಲವು ನಮಗಿರಲು ಬಾಳಲಿ ಬೆಳಕನು ಕಾಣುವೆವು
ನೀ ಮಾಡೋ ಈ ಮೋಸಕೆ ಈ ಜನರ ಬಲಿಯಾಗಿದೆ
ನ್ಯಾಯ ನೀತಿ ಧರ್ಮವ ಬಿಟ್ಟು ಕಾಸಿನ ಆಸೆಯ ಮನದಲಿಟ್ಟು
ಬಡವರನೇಕೆ ಕಾಡುವಿರೋ..
--------------------------------------------------------------------------------------------------
ನ್ಯಾಯ ನೀತಿ ಧರ್ಮ (೧೯೮೦) - ವರುಷಕ್ಕೊಮ್ಮೆ ದೀಪಾವಳಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಭಂಗಿರಂಗ, ಗಾಯನ : ಎಸ್.ಪಿ.ಬಿ, ಜಯಚಂದ್ರ
ಆಆಆಆಆಆಆಅ
ವರುಷಕೆ ಒಮ್ಮೆ ದೀಪಾವಳಿ
ವರುಷಕೆ ಒಮ್ಮೆ ದೀಪಾವಳಿ ಹರುಷದಿ ಬಂತು ನಮ್ಮ ಬಳಿ
ನಾವೆಲ್ಲರೂ ಜೊತೆಗೂಡಿ ಸಂತೋಷದಿ ನಲಿದಾಡಿ
ನಾವೆಲ್ಲರೂ ಜೊತೆಗೂಡಿ ಸಂತೋಷದಿ ನಲಿದಾಡಿ
ಆನಂದದಲಿ ಬಾಳುವ ಯೋಗ ಕೂಡಿ ಬಂದಿದೆ ಈಗ
ವರುಷಕೆ ಒಮ್ಮೆ ದೀಪಾವಳಿ ಹರುಷದಿ ಬಂತು ನಮ್ಮ ಬಳಿ
ನಾವೆಲ್ಲರೂ ಜೊತೆಗೂಡಿ ಸಂತೋಷದಿ ನಲಿದಾಡಿ
ಆನಂದದಲಿ ಬಾಳುವ ಯೋಗ ಕೂಡಿ ಬಂದಿದೆ ಈಗ
ವರುಷಕೆ ಒಮ್ಮೆ ದೀಪಾವಳಿ ಆಆಆಅ... ಆಆಆಅ
ಮನದಲಿ ನಮದಿಲ್ಲ ಏನೊಂದು ಬೇಧ ಇರುವುದು ನಮಗೊಂದೇ ನೀತಿ
ಜಗದಲಿ ಮಾನವ ಕುಲವೆಲ್ಲ ಒಂದೇ ನಮಗಿಲ್ಲ ಯಾವದೊಂದು ಜಾತಿ
ಮರೆಯುವೆ ನಾನೆಲ್ಲ ನೂರಾರು ನೋವ ನನಗಿರಲು ಈ ನಿಮ್ಮ ಪ್ರೀತಿ
ಬಯಸುವ ಕನಸಿಂದು ನನಸಾಗಲೆಂದು
ಬನ್ನಿರೀ ಬೆಳಗೋಣ ಜ್ಯೋತಿ ತೋರಿ ಮಾನವ ಪ್ರೀತಿ
ಓಓಓಓಓ ತೋರಿ ಮಾನವ ಪ್ರೀತಿ
ವರುಷಕೆ ಒಮ್ಮೆ ದೀಪಾವಳಿ ಹರುಷದಿ ಬಂತು ನಮ್ಮ ಬಳಿ
ಸಿರಿತನ ಬೇಕೆಂಬ ಅತಿ ಆಸೆ ಬೇಡ ಮಾನವ ಗುಣವೊಂದೇ ಸಾಕು
ಸಕಲರ ಪಾಲಿಗೆ ಸುಖ ನೀಡುವಂತ ಚಿನ್ನದ ಗರಿಯೊಂದು ಬೇಕು
ನಗುವಿನ ನೂತನ ಸಂದೇಶ ತಂದ ಬಾಳಿದು ಬಂಗಾರದಂತೆ
ಜನತೆಯ ಹಿತಕ್ಕಾಗಿ ನಾವಿಂದು ಮುಂದೆ ಸಾಗುವ ಸೋಲಿಲ್ಲದಂತೆ
ಬೇಡ ಯಾವುದು ಚಿಂತೇ ಓಓಓಓಓ ಬೇಡ ಯಾವುದು ಚಿಂತೆ
ವರುಷಕೆ ಒಮ್ಮೆ ದೀಪಾವಳಿ ಹರುಷದಿ ಬಂತು ನಮ್ಮ ಬಳಿ
ನಾವೆಲ್ಲರೂ ಜೊತೆಗೂಡಿ ಸಂತೋಷದಿ ನಲಿದಾಡಿ
ನಾವೆಲ್ಲರೂ ಜೊತೆಗೂಡಿ ಸಂತೋಷದಿ ನಲಿದಾಡಿ
ಆನಂದದಲಿ ಬಾಳುವ ಯೋಗ ಕೂಡಿ ಬಂದಿದೆ ಈಗ
ವರುಷಕೆ ಒಮ್ಮೆ ದೀಪಾವಳಿ ಹರುಷದಿ ಬಂತು ನಮ್ಮ ಬಳಿ
ವರುಷಕೆ ಒಮ್ಮೆ ದೀಪಾವಳಿ ಹರುಷದಿ ಬಂತು ನಮ್ಮ ಬಳಿ
ವರುಷಕೆ ಒಮ್ಮೆ ದೀಪಾವಳಿ ಹರುಷದಿ ಬಂತು ನಮ್ಮ ಬಳಿ
--------------------------------------------------------------------------------------------------
No comments:
Post a Comment