- ದೇವಾ ಗುರುಗಳೇಮಗೆ ಕೊಡಲಿ ನಮಗೆ ದಿವ್ಯ ಶುಭವನು
- ಭಲೇ ಭಲೇ ಪಾರ್ವತೀ
- ಭಕ್ತ ನೋಡೋದೇ
- ಸಿಂಗಾರಿ ನಿನ್ನಂದದ ವಯ್ಯಾರಕೆ
ಸತಿ ಸುಲೋಚನ (೧೯೩೪) - ಸಿಂಗಾರಿ ನಿನ್ನಂದದ ವಯ್ಯಾರಕೆ
ಸಂಗೀತ : ನಾಗೇಂದ್ರರಾವ, ಪದ್ಮನಾಭಶಾಸ್ತ್ರಿ ಸಾಹಿತ್ಯ : ಬೆಳ್ಳಾವೆ ನರಹರಿಶಾಸ್ತ್ರಿ, ಗಾಯನ : ಲಕ್ಷ್ಮೀಬಾಯಿ, ನಾಗೇಂದ್ರರಾವ
ಹೆಣ್ಣು : ಆಆಆಅ ಆಆಆಅ ಆಆಆ ಆಆಆ ಆ ಆ ಆ
ಗಂಡು : ಓ.. ಸಿಂಗಾರಿ ನಿನ್ನಂದ ಬಿನ್ನಾಣಕೆ (ಬಿನ್ನಾಣಕೆ)
ತಂಗಾಳಿ ಹೂಬಳ್ಳಿ ಶರಣಾಗಿರೇ (ಓಓಓಓಓ)
ಓ.. ಸಿಂಗಾರಿ ನಿನ್ನಂದ ಬಿನ್ನಾಣಕೆ ತಂಗಾಳಿ ಹೂಬಳ್ಳಿ ಶರಣಾಗಿರೇ (ಓಓಓಓಓ)
ಸಾಲಾಗಿ ನಿಂತ ಈ ರಮ್ಯರಾಶಿ ನಸು ನಾಚಿ ತಲೆ ಬಾಗಿದೆ( ಆಆಆ)
ಓ.. ಸಿಂಗಾರಿ ನಿನ್ನಂದ ಬಿನ್ನಾಣಕೆ ತಂಗಾಳಿ ಹೂಬಳ್ಳಿ ಶರಣಾಗಿರೇ (ಓಓಓಓಓ)
ಗಂಡು : ನಿನ್ನ ಮುಂಗುರುಳ ಕೊಂಕಲ್ಲೇ ಸೊಗಸು (ಸೊಗಸು) ಅಲ್ಲೇ ನಾ ಕಂಡೆ ನೂರಾರು ಕನಸು (ಕನಸು)
ನಿನ್ನ ಮುಂಗುರುಳ ಕೊಂಕಲ್ಲೇ ಸೊಗಸು ಅಲ್ಲೇ ನಾ ಕಂಡೆ ನೂರಾರು ಕನಸು
ನಲ್ಲೆ ಬಳಿ ಸಾರಿ ನಗೆಬೀರಿ ನಿಲ್ಲೇ .. ನನ್ನ ನರನಾಡಿ ಶರಣಾಗುವಲ್ಲೇ... (ಆಆಆಆ)
ಓ.. ಸಿಂಗಾರಿ ನಿನ್ನಂದ ಬಿನ್ನಾಣಕೆ ತಂಗಾಳಿ ಹೂಬಳ್ಳಿ ಶರಣಾಗಿರೇ....
ಹೆಣ್ಣು : ಆಆಆಅ ಆಆಆ ಅಆಆಆಅ
ಗಂಡು : ಹರೆಯ ಹೆಣ್ಣಾಗಿ ವಯ್ಯಾರ ಮೇರೆಯೇ (ಆಹ್ಹಹಾ)
ಹೃದಯ ಕಳುವಾಗಿ ಕೈಜಾರಿ ಸರಿಯೇ.. (ಅಹ್ಹ..ಓಓಓಓಓ)
ಹರೆಯ ಹೆಣ್ಣಾಗಿ ವಯ್ಯಾರ ಮೇರೆಯೇ ಹೃದಯ ಕಳುವಾಗಿ ಕೈಜಾರಿ ಸರಿಯೇ..
ಇನ್ನೂ ನಾ ನೀನು ನೀ ನಾನು ಜಾಣೆ... ನಮ್ಮ ಬಾಳೊಂದು ಬಂಗಾರ ವೀಣೆ(ಆಆಆಆ)
ಓ.. ಸಿಂಗಾರಿ ನಿನ್ನಂದ ಬಿನ್ನಾಣಕೆ ತಂಗಾಳಿ ಹೂಬಳ್ಳಿ ಶರಣಾಗಿರೇ (ಓಓಓಓಓ)
ಸಾಲಾಗಿ ನಿಂತ ಈ ರಮ್ಯರಾಶಿ ನಸು ನಾಚಿ ತಲೆ ಬಾಗಿದೆ( ಆಆಆ)
ಸಿಂಗಾರಿ ನಿನ್ನಂದ ಬಿನ್ನಾಣಕೆ (ಹೂಂಹೂಂಹೂಂಹೂಂಹೂಂ)
------------------------------------------------------------------------------------------------------------------
ಸತಿ ಸುಲೋಚನ (೧೯೩೪) - ಭಕ್ತನಾದೊಡೆ
ಸಂಗೀತ : ನಾಗೇಂದ್ರರಾವ, ಪದ್ಮನಾಭಶಾಸ್ತ್ರಿ ಸಾಹಿತ್ಯ : ಬೆಳ್ಳಾವೆ ನರಹರಿಶಾಸ್ತ್ರಿ, ಗಾಯನ : ಲಕ್ಷ್ಮೀಬಾಯಿ
ಭಕ್ತನಾದೊಡೇ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೇ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೇ ನಡೆ ನುಡಿ ಶುದ್ಧವಾಗಿರಬೇಕು
ಭಕ್ತನಾದೊಡೇ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೆ ವಿವಿಧ ಭಕ್ತಿಯನರಿತಿರಬೇಕು
ಭಕ್ತನಾದೊಡೆ ಸದಾಚಾರ ಸಂಪನ್ನಾಗಿರಬೇಕು
ಭಕ್ತನಾದೊಡೇ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೆ ಸದ್ವಿಚಾರ ಪರಿಪೂರ್ಣವಾಗಿರಬೇಕು
ಭಕ್ತನಾದೊಡೆ ಗುರುಲಿಂಗ ಜಂಗಮ.. ಪ್ರೇಮಿಯಾಗಿರಬೇಕು
ಭಕ್ತನಾದೊಡೇ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೆ ಶರಣರ ಸ್ನೇಹದಲ್ಲಿರಬೇಕು
ಭಕ್ತನಾದೊಡೆ ಲಿಂಗಪತಿ ಶರಣಸತಿ ತಾನಾಗಬೇಕು
ಭಕ್ತನಾದೊಡೇ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೇ ನಡೆ ನುಡಿ ಶುದ್ಧವಾಗಿರಬೇಕು
ಭಕ್ತನಾದೊಡೇ ಭಯ ಭಕ್ತಿ ತುಂಬಿರಬೇಕು
-------------------------------------------------------------------------------------------------------------------
ಸತಿ ಸುಲೋಚನ (೧೯೩೪) - ದೇವಾ ಗುರುಗಳೆಮಗೆ ಕೊಡಲಿ ನಮಗೆ ಶುಭವನು
ಸಂಗೀತ : ನಾಗೇಂದ್ರರಾವ, ಪದ್ಮನಾಭಶಾಸ್ತ್ರಿ ಸಾಹಿತ್ಯ : ಬೆಳ್ಳಾವೆ ನರಹರಿಶಾಸ್ತ್ರಿ, ಗಾಯನ : ಆರ್.ನಾಗೇಂದ್ರರಾವ್
-------------------------------------------------------------------------------------------------------------------
ಸತಿ ಸುಲೋಚನ (೧೯೩೪) - ಭಲೇ ಭಲೇ ಪಾರ್ವತಿ
ಸಂಗೀತ : ನಾಗೇಂದ್ರರಾವ, ಪದ್ಮನಾಭಶಾಸ್ತ್ರಿ ಸಾಹಿತ್ಯ : ಬೆಳ್ಳಾವೆ ನರಹರಿಶಾಸ್ತ್ರಿ, ಗಾಯನ : ಲಕ್ಷ್ಮೀಬಾಯಿ
-------------------------------------------------------------------------------------------------------------------
No comments:
Post a Comment