1778. ಪದವಿ ಪೂರ್ವ (೨೦೨೨)



ಪದವಿ ಪೂರ್ವ ಚಲನಚಿತ್ರದ ಹಾಡುಗಳು 
  1. ಯಾಕೇ ಸಿಕ್ಕೇ ನೀನು ಯಾಕೆ ಸಿಕ್ಕೇ 
  2. ಬಾರೋ ಪಿಕ್ಚರ್ ಹೋಗೋಣ 
  3. ಹುಟ್ಟು ಸಾವು ನಡುವಲಿ 
ಪದವಿ ಪೂರ್ವ (೨೦೨೨) - ಯಾಕೇ ಸಿಕ್ಕೇ ನೀನು ಯಾಕೆ ಸಿಕ್ಕೇ 
ಸಂಗೀತ : ಅರ್ಜುನಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ನಿಹಾಲ್ ಟೌರೋ 

ಎಂತದೆ ಮಿಡಿತ ಯಾವುದೆ ತುಡಿತ ಯಾತಕೆ 
ಸೆಳೆತ ಕಾಡಿದೆ ಸತತ ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಕಲಿಯದೆ ಕಲಿತ ಕಣ್ಣ ಕಾಗುಣಿತ
ಕಲಿಸಿದೆ ಕುಣಿತ ಕಚಗುಳಿ ಉಚಿತ ಯಾಕೆ ಸಿಕ್ಕೆ ನೀನು ಯಾಕೆ ನಕ್ಕೆ
ಕಲ್ಪನೆಯಲ್ಲಿ ಕಣ್ಣು ಹೊಡೆ ಹೊಡೆದು ಕಷ್ಟ ಪಟ್ಟಿರುವೆನು
ಚಂದ್ರನ ಹಿಡಿದು ನಿನ್ನ ಹಣೆಮೇಲೆ ಬೊಟ್ಟು ಇಟ್ಟಿರುವೆನು
ಕ್ಯೂಟಾ ಕ್ಯೂಟಾ ಕ್ಯೂಟು ನೀನು
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ

ಹೇಳದೆ ಕೇಳದೆ ನೋಟಕೆ ನೋಟವು ಸೇರಿಕೊಂಡಾಗ 
ಮೈತುಂಬಾ ಉನ್ಮಾದ ಗೆಳೆಯರು ಹಳಿವರು ನೋಡುತ ನನ್ನನು
ಯಾಕೊ ಗೊತ್ತಿಲ್ಲ ನಮ್ ಹುಡುಗ ಹಿಂಗಾದ
ಕದ್ದು ಕಲಿತ ಮುದ್ದ ಮಾತು ಹೇಳಿ ಬಿಡಲೆ ಎದ್ದು ನಿಂತು
ಗೊತ್ತೇ ಇಲ್ಲ ನನಗೂ ಕೂಡ ನಂಗ್ಯಾವತ್ತು ಲವ್ ಆಯಿತು
ಸುಮ್ಮನೆ ಇರದೆ ಹೃದಯಕೆ ಬಣ್ಣ ಬಳಿದು ಕೊಂಡಿರುವೆನು
ಹೀಗೆಯೆ ನಿನ್ನ ಮನೆಯ ಬೀದೀಲಿ ಕುಳಿತು ಕೊಂಡಿರುವೆನು
ಮೆಂಟಲ್ ಮೆಂಟಲ್ ಮೆಂಟಲ್ ನಾನು
ಯಾಕೆ ಸಿಕ್ಕೆ ನಾನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ

ಢವ ಢವ ಸದ್ದಿದು ಬಗ್ಗದ ಊರಿಗೆ
ಕೇಳುತಿರುವಾಗ ನಿಂಗ್ಯಾಕೆ ಕೇಳಲ್ಲ
ಪದಗಳ ಜೊತೆಯಲ್ಲಿ  ಪದಗಳ ಪೋಣಿಸಿ
ನಿಂಗೆ ಹೇಳೋಕೆ ನಾನಂತು ಕವಿಯಲ್ಲ
ನಿನ್ನ ಬೆರಳು ಕೊರಳಿಗೆ ಸೋಕಿ ಜೀವ ಹೋದ ಹಾಗಾಯಿತು
ಕುಳಿತುಕೊಂಡೆ ಕಾಲು ನಡುಗಿ ನಂಗೊತ್ತಿಲ್ಲ ಏನಾಯಿತು
ಕನಸಲಿ ನಿಂಗೆ ಕಾಮನಬಿಲ್ಲು ಗಿಪ್ಟು ಕೊಟ್ಟಿರುವೆನು
ಕಂಗಳ ಮುಚ್ಚಿ ನಿನ್ನ ತುಟಿ ಮೇಲೆ ನನ್ನ ತುಟಿಯನ್ನಿಟ್ಟಿರುವೆನು
ಸ್ವೀಟು ಸ್ವೀಟು ಸ್ವೀಟು ನೀನು ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ
-----------------------------------------------------------

ಪದವಿ ಪೂರ್ವ (೨೦೨೨) - ಬಾರೋ ಪಿಚ್ಚರಗೆ ಹೋಗೋಣ 
ಸಂಗೀತ : ಅರ್ಜುನಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಅರ್ಜುನ ಜನ್ಯ, ಯೋಗರಾಜ ಭಟ್ಟ 

ಬಾರೋ ಪಿಕ್ಚರ್ ಗೆ ಹೋಗೋಣ ಬ್ಯಾಡ ಟೀಚರ್ ನೋಡೋಣ
ಚೂರು ಕ್ರಿಕೆಟ್ ಆಡೋಣ ಯಾವ್ದು….. ಬ್ಯಾಡ…..
ಬಾರೋ ಕ್ಲಾಸಿಗೆ ಹೋಗೋಣ ಬ್ಯಾಡ ಚಕ್ಕರ್ ಹಾಕೋಣ
ಹುಡ್ಗಿರಿಗೆ ಕುಡ್ಸೋಣ ಬೈ ಟೂ ಸೋಡಾ…
ವಯಸ್ಸು ಹದಿನೇಳಾಯ್ತು ಮನಸ್ಸು ಹದಿಗೆಟ್ಟೋಯ್ತು
ಮನೇಲಿ ಒದೆ ಕೊಟ್ಟಾಯ್ತು ದೊಡ್ಡೊರಾದ್ವಿ ಅಂತು ಇಂತೂ
ಬಾರೋ ಪಿಕ್ಚರ್ ಗೆ ಹೋಗೋಣ ಬ್ಯಾಡ ಟೀಚರ್ ನೋಡೋಣ
ಚೂರು ಕ್ರಿಕೆಟ್ ಆಡಣ ಯಾವ್ದು….. ಬ್ಯಾಡ…..

ಕಡೆ ಕಡೆ ರುಧ್ರ ವೀರ ಭದ್ರ.. ಕೊನೆ ಬೆಂಚು ಮ್ಯಾಲೆ ಬರೆದ
ಹೆಸರು ಹೆಸರು ನೆನಪಿರುತ್ತೆ ಇರೋ ತಂಕ ಉಸಿರು ಉಸಿರು
ಕೊನೆ ಪೇಜಿನಲ್ಲಿ ಪ್ರಿನ್ಸಿಪಾಲ್ರೂ ಪ್ರಿನ್ಸಿಪಾಲ್ರು..
ಯಾಕಗವ್ರೆ ಗಂಡ್ಸಾಗಿದ್ರು ಬಸಿರು… ಬಸಿರು…
ಟ್ಯೂಶನ್ ಗೆ ಹೋದ್ರೆ ಟೆನ್ಶನ್ ಗಳು ನೂರು
ತಿಳ್ಕಬೇಕು ಬೇಗ ಈ ಹುಡ್ಗಿರೆಲ್ಲ ಯಾರು
ಮಿರರ್ರು ಮುಂದೆ ನಿಂತು ಒಂದೊಂದೆ ಮೀಸೆ ಬಂತು
ದಾಡಿಗೆ ಇಲ್ಲ ಲೆಂತ್ ಉದ್ದ ಆದ್ವಿ ಅಂತೂ ಇಂತೂ
ಬಾರೋ ಪಿಕ್ಚರ್ ಗೆ ಹೋಗೋಣ ಬ್ಯಾಡ ಟೀಚರ್ ನೋಡೋಣ
ಚೂರು ಕ್ರಿಕೆಟ್ ಆಡಣ ಯಾವ್ದು….. ಬ್ಯಾಡ…..

ಪಂಪ್ ಹೌಸ್ ಅಲ್ಲಿ ಯಾವ್ದೋ ಎಣ್ಣೆ ಪಾರ್ಟಿ ಪಾರ್ಟಿ
25 ಆದೋರಿಗೆ ಎಂಟ್ರಿ ಎಂಟ್ರಿ
ನಮ್ಮ ಮ್ಯಾಲೆ ಯಾರ್ಗೂ ಇಲ್ಲ ಪ್ರೀತಿ ಪ್ರೀತಿ
ಆಳೋದೆಂಗೆ ನಾವು ನಾಳೆ ಕಂಟ್ರಿ ಕಂಟ್ರಿ
ದೊಡ್ಡೋರಲ್ವ ನಾವು ಬಾಡಿಲಿಲ್ವ ಕಾವು
ಮೋರೆ ತುಂಬ ಮೊಡವೆ ಮಿಡ್ ನೈಟ್ಎಲ್ಲ ನೋವು
ಅದೇನೊ ಕಳ್ದಂಗ್ ಆಯ್ತು ಇನ್ನೇನು ಪಡೆದಂಗಾಯ್ತು
ಇನ್ಯಾವುದೋ ಉಳದಂಗಾಯ್ತು ಗೊತ್ತಾಗ್ತಿಲ್ಲ ಏನು ಎಂದು
ಬಾರೋ ಪಿಕ್ಚರ್ ಗೆ ಹೋಗೋಣ ಬ್ಯಾಡ ಟೀಚರ್ ನೋಡೋಣ
ಚೂರು ಕ್ರಿಕೆಟ್ ಆಡಣ ಯಾವ್ದು….. ಬ್ಯಾಡ…..
------------------------------------------------------------------------------------

ಪದವಿ ಪೂರ್ವ (೨೦೨೨) - ಬಾರೋ ಪಿಚ್ಚರಗೆ ಹೋಗೋಣ 
ಸಂಗೀತ : ಅರ್ಜುನಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿಜಯ ಪ್ರಕಾಶ 

ಹುಟ್ಟು ಸಾವು ನಡುವಲ್ಲಿ ನಾಕ್ ದಿನ 
ದುಡ್ಡು ಕಾಸು ಇರಲೀ ಇಸ್ಟನ್ ಫ್ರೆಂಡ್ಸ್ ಇದ್ದರೇನೇ ಜೀವನ 
ಫ್ರೆಂಡ್ಸ್ ಇದ್ದರೇನೇ ಜೀವನ 

ಬಂಧು ಬಳಗ ಲೆಕ್ಕಕ್ಕೆ ನೂರ ಜನ 
ಕಷ್ಟ ಬಂದಾಗ ಒಬ್ಬರೂ ಇಲ್ಲವಣ್ಣಾ ... 
ಫ್ರೆಂಡ್ಸ್ ಇದ್ದರೇನೇ ಜೀವನ 
ಫ್ರೆಂಡ್ಸ್ ಇದ್ದರೇನೇ ಜೀವನ 

ಸುಖವೋ ದುಃಖವೋ ಎಲ್ಲ ಒಟ್ಟಿಗಿರಣ 
ಫ್ರೆಂಡ್ಸ್ ಇದ್ದರೇನೇ ಜೀವನ  ಫ್ರೆಂಡ್ಸ್ ಇದ್ದರೇನೇ ಜೀವನ 
ಫ್ರೆಂಡ್ಸ್ ಇದ್ದರೇನೇ ಜೀವನ  ಫ್ರೆಂಡ್ಸ್ ಇದ್ದರೇನೇ ಜೀವನ 

ಯಾರಿಗೂ ಹೇಳದ ಮಾತುಗಳ ಗೆಳೆಯನು ತಿಳಿಯುವನು 
ಯಾತನೇ ವೇದನೆ ನೂರಿರಲೀ ನಗಿಸುತ ಮರೆಸುವನು 
ಹೊರಲಾರದ ಭಾರಕೇ ಹೆಗಲು ಕೊಡಲಾರ ಆ ಭಗವಂತ.. 
ದೇವರ ಬದಲಿಗೆ ಇಲ್ಲವೇ.. ಕೊನೆ ಬೆಂಚಿನಲಿ ಕುಳಿತ ಸ್ನೇಹಿತ 
ಫ್ರೆಂಡ್ಸ್ ಇದ್ದರೇನೇ ಜೀವನ  ಫ್ರೆಂಡ್ಸ್ ಇದ್ದರೇನೇ ಜೀವನ 
ಫ್ರೆಂಡ್ಸ್ ಇದ್ದರೇನೇ ಜೀವನ  ಫ್ರೆಂಡ್ಸ್ ಇದ್ದರೇನೇ ಜೀವನ 

ಗಳಿಸದ ಗರಿಗರಿ ನೋಟಗಳು ತಿನ್ನಲೂ ಆಗುವುದೇ 
ನಮ್ಮದು ಎಲ್ಲದೂ ಒಂದು ದಿನ ಮಣ್ಣಲಿ ಹೋಗುವುದೇ 
ಜೊತೆಗಾಡಿದ ಮಿತ್ರನ ನೆನಪು ಇರದವನು ಇದ್ದರೂ ಒಂದೇ 
ಅಜರಾಮರ ದೋಸ್ತಿಯ ಮಹಿಮೆ ಗೊತ್ತಿರದವ ಸತ್ತರು ಒಂದೇ 
ಎಲ್ಲರ ಗೆಳೆಯ ನಗುವಿನ ಒಡೆಯ ಫ್ರೆಂಡ್ಸ್ ಶಿಪ್ ಡೇ 
ಹ್ಯಾಪಿ ಫ್ರೆಂಡ್ಸ್ ಶಿಪ್ ಡೇ 
------------------------------------------------------------------------------------

No comments:

Post a Comment