1779. ಲವ್ ೩೬೦ (೨೦೨೨)



ಲವ್ ೩೬೦ ಚಲನ ಚಿತ್ರದ ಹಾಡುಗಳು
  1. ಜಗವೇ ನೀನು ಗೆಳತಿಯೇ 
  2. ಸಖಿಯೇ 
  3. ಭೋರ್ಗರೆದು ಕೇಳಿದೆ ಕಡಲು 
  4. ಝಜಾಂಗ ಜಾಂಗ್ 
ಲವ್ ೩೬೦ (೨೦೨೨) - ಜಗವೇ ನೀನು 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಶಶಾಂಕ, ಗಾಯನ : ಸಿದ ಶ್ರೀರಾಮ, 

ಮರುಭೂಮಿ ನಡುವಲ್ಲಿ ಕಂಡ ಓ ಚಿಲುಮೆಯೇ
ಕನಸುಗಳ ರಾಶಿಯನು ತಂದ ಓ ಚೆಲುವೆಯೇ
ಒಣ ಒಂಟಿ ಜೀವದಾ ಕೂಗಿಗೆ ತಂಗಾಳಿ ತಂದ ಓ ದೈವವೇ
ನಿನಗೇನು ನಾನು ನೀಡಲೇ

ಜಗವೇ ನೀನು ಗೆಳತಿಯೆ ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ ನನ್ನನ್ನು ನಡೆಸೋ ಸಾಥಿಯೇ
ಜಗವೇ ನೀನು ಖುಷಿ ಎಲ್ಲ ಕಲೆ ಹಾಕಿ
ನಿನಗಾಗಿ ನಾನು ಹೊತ್ತು ತರುವೆ
ನಿನ್ನ ಕನಸೆಲ್ಲ ನಾ ನನಸು ಮಾಡುವೆ

ಯಾರಿರಲಿ ಎದುರಲ್ಲಿ ನಾನೆಂದು ನಿನ್ನ ಮುಂದೆ ನಿಲ್ಲುವೆ
ನೋವೇ ಬರದಂತೆ ಪ್ರತಿ ನಿಮಿಷ ಕಾಯುವೆ
ನಡೆಯುವೆ ಜೊತೆ ನೆರಳಂತೆ ಬಯಸುವೆ ಕೊನೆ ಇರದಂತೆ
ಮುಳುಗಡೆಯ ಭೀತಿಯ ಬದುಕಿಗೆ ನೆರವಾಗಿ ಬಂದ ಓ ದೈವವೇ
ನಿನಗೇನು ನಾನು ನೀಡಲೇ 
ಜಗವೇ ನೀನು ಗೆಳತಿಯೇ ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ ನನ್ನನ್ನು ನಡೆಸೋ ಸಾಥಿಯೇ
ಜಗವೇ ನೀನು 
----------------------------------------------------------------------------------------------------------

ಲವ್ ೩೬೦ (೨೦೨೨) - ಸಖಿಯೇ ಸಖಿಯೇ ಸಾವರಿಸು
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಶಶಾಂಕ, ಗಾಯನ : ಸಂಜಿತಾ ಹೆಗಡೆ 

ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು ನೀನೆ ನನ್ನ ಬೇಲಿ
ಈ ಲೋಕ ಏನನಲಿ ನೂರೊಂದು ದೂಷಿಸಲಿ
ನಾನಿರುವೆ ನಿನ್ನ ಜೊತೆ ಸುಖಾಂತ ನಮ್ಮ ಕತೆ
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು

ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ
ಕರಗದೆ ಉಳಿವುದೆ ಆಗಸದಲಿ ಮೂಡಿದ ಮೋಡವು
ದೂರಾಗದೆ ಉಳಿವುದೆ ಈ ಕಹಿ ಸಮಯದಿ ಕಾಡುವ ಶೋಕವು
ನಿಜ ಪ್ರೀತಿಯ ಎದುರು ಬಂದು ಗೆಲ್ಲಲಾರದು ಸುಳ್ಳು ಎಂದೂ
ಕಲ್ಲೆದೆಯ ಈ ಜನರ ದಿಕ್ಕರಿಸಿ ಮುನ್ನಡೆವ
ನಾನಿರುವೆ ನಿನ್ನ ಜೊತೆ ಸುಖಾಂತ ನಮ್ಮ ಕತೆ
ಸಖಿಯೇ……ಸಖಿಯೇ…….ಸಖಿಯೇ.
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು

ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು ನೀನೆ ನನ್ನ ಬೇಲಿ
ನೀನೆ ಸರಿ ನೀನೆ ಗುರಿ ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು ನೀನೆ ನನ್ನ ಬೇಲಿ
--------------------------------------------------------------------------------------------------------

ಲವ್ ೩೬೦ (೨೦೨೨) - ಭೋರ್ಗರೆದು ಕೇಳಿದೆ ಕಡಲು
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಶಶಾಂಕ, ಗಾಯನ : ಕೀರ್ತನ ಹೊಳ್ಳ 

ಭೋರ್ಗರೆದು ಕೇಳಿದೆ ಕಡಲು
ಬೇರೇನಿದೆ ಇಲ್ಲಿ ಮಿಗಿಲು
ಒಲವಲ್ಲವೇ ಮನುಜ ನಿನ್ನ
ಕಾಯುತಿಹುದು ಹಗಲು-ಇರುಳು

ಕರುಣೆ ಸಹನೆ ಮಮತೆ ತಾನೇ
ಮನುಜನು ಎನಿಸುವ ಗುಣವು
ಅದನೆ ಮರೆತು ಮೆರೆವೆ ಏಕೆ?
ಒಳಗಿಲ್ಲವೇನು ಅರಿವೂ..
ನಶ್ವರದ ಬದುಕಿದು ನೆನಪಿರಲಿ..
-------------------------------------------------------------------------------------------------------

ಲವ್ ೩೬೦ (೨೦೨೨) - ಜಜಾಂಗ್ ಜಾಂಗ್ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜಭಟ್ಟ, ಗಾಯನ : ಅರ್ಜುನಜನ್ಯ 

ಕಾಳು ಹಾಕಿದ ಹುಡ್ಗಿ ಸಿಕ್ಬಿಟ್ಲು ಇನ್ನೇನು ಬೇಕು ಜಜಾಂಗ್ ಜಾಂಗ್
ಖಾಲಿ ಜೀವನ ಸೆಟ್ಲಾಗಿ ಬಿಡ್ತು ಇನ್ನೇನು ಬೇಕು ಜಜಾಂಗ್ ಜಾಂಗ್

ಮೂರೊತ್ತು ಊಟ ಮುದ್ದಾದ ಬೆಡಗಿ
ಇನ್ನೇನು ಬೇಕು ಜಜಾಂಗ್ ಜಾಂಗ್
ಕಮ್ಮಿ ಬಾಡಿಗೆಗೆ ಸಿಂಗಲ್ ಬೆಡ್ ರೂಮ್ ಸಿಕ್ಬಿಟ್ರೆ ಸಾಕು
ಜಜಾಂಗ್ ಜಾಂಗ್
ಛತ್ರ ಹುಡುಕ್ಲಾ ಜಜಾಂಗ್ ಜಾಂಗ್
ಸೀರೆ ತರ್ಲಾ ಜಜಾಂಗ್ ಜಾಂಗ್
ಪ್ರಸ್ತಕ್ಕೆ ಮುಂಚೆ ತೊಟ್ಲು ತಂದಿಡ್ಲ ಜಜಾಂಗ್ ಜಾಂಗ್
ಬ್ಯಾಚುಲರ್ ಬಾಳು ಮುಗ್ದಂಗೆ ಲೆಕ್ಕ ಜಜಾಂಗ್ ಜಾಂಗ್
ಸಾಗ್ವಾನಿ ಮಂಚ ಬುಕ್ಕಿಂಗು ಪಕ್ಕ ಜಜಾಂಗ್ ಜಾಂಗ್
ಜಾಂಗ್ ಜಾಂಗ್ ಜಜಾಂಗ್
ಜಾಂಗ್ ಜಾಂಗ್ ಜಜಾಂಗ್
ತಾನ ತಂದನೋ ತಂದಾನಿ ತಾನೋ ತಂದನೋ
ತಾನ ತಂದನೋ ತಂದಾನಿ ತಾನೋ ತಂದನೋ

ಕಾಳು ಹಾಕಿದ ಹುಡ್ಗಿ ಸಿಕ್ಬಿಟ್ಲು ಇನ್ನೇನು ಬೇಕು ಜಜಾಂಗ್ ಜಾಂಗ್ 
ಖಾಲಿ ಜೀವನ ಸೆಟ್ಲಾಗಿ ಬಿಡ್ತು ಇನ್ನೇನು ಬೇಕು ಜಜಾಂಗ್ ಜಾಂಗ್
ನನ್ನಾನಿ ನನ್ನಾನಿ ನನ್ನಾನನೆ ನನ್ನಾನಿ ನನ್ನಾನಿ ನನ್ನಾನನೆ
ನನ್ನಾನಿ ನನ್ನಾನಿ ನನ್ನಾನನೆ 

ಮೂಲೆ ಮನೆ ಆಂಟಿ ನಂಗೆ ಕುಂಡುಸ್ಕೊಂಡು ಹೇಳವ್ರೆ
ತಿಂಗಳು ಸಂಬಳ ಸಾಕಾಗಲ್ಲ ಸಂಸಾರಸ್ತ ಆಗೋದ್ರೆ
ಬಾಂಡ್ಲಿ ತಲೆ ಅಂಕಲ್ ಒಬ್ರು ಕೈ ಹಿಡಿಕೊಂಡು ಹೇಳವ್ರೆ
ಕೂದ್ಲು ಒಂದು ಉಳಿಯೋದಿಲ್ಲ ಹೆಂಡ್ತಿರೆಲ್ಲ ಹೊಡೆಯೋರೆ
ಆಗಿದ್ ಆಗ್ಲಿ ಜಜಾಂಗ್ ಜಾಂಗ್
ಕಟ್ಕೋ ಬಿಡ್ತೀನಿ ಜಜಾಂಗ್ ಜಾಂಗ್
ಕಷ್ಟ ಬಂದ್ರೂನು ಜಜಾಂಗ್ ಜಾಂಗ್
ಇಷ್ಟ ಪಡ್ತೀನಿ ಜಜಾಂಗ್ ಜಾಂಗ್
ನಮ್ಮ ಹುಡುಗಿ ಒಮ್ಮೆ ಮುಟ್ಟಿದ್ರೆ ಎಲ್ಲಾ ಚು ಚು ಚು
ಆಕಾಶ ಬಿದ್ರು ಟೆಂಕ್ಷನ್ ಆಗಲ್ಲ ಜ ಜ ಜ ಜಾಂಗ್
ಜಾಂಗ್ ಜಾಂಗ್ ಜಜ ಜಾಂಗ್ 
ತಾನಿ ತಂದಾನೋ ತಂದಾನಿ ತಾನೋ ತಂದನೋ
ತಾನಿ ತಂದಾನೋ ತಂದಾನಿ ತಾನೋ ತಂದನೋ
ಕಾಳು ಹಾಕಿದ ಹುಡ್ಗಿ ಸಿಕ್ಬಿಟ್ಲು ಇನ್ನೇನು ಬೇಕು ಜಜಾಂಗ್ ಜಾಂಗ್
ಖಾಲಿ ಜೀವನ ಸೆಟ್ಲಾಗಿ ಬಿಡ್ತು ಇನ್ನೇನು ಬೇಕು ಜಜಾಂಗ್ ಜಾಂಗ್
-------------------------------------------------------------------------------------------------------

No comments:

Post a Comment