1784. ದೈವ ಶಕ್ತಿ (೧೯೮೭)

ದೈವಶಕ್ತಿ ಚಲನಚಿತ್ರದ ಹಾಡುಗಳು 
  1. ಮಾರುತಿ ಕಾರಿನಲ್ಲಿ 
  2. ಬೇಲೂರಿನ ಬಾಲಿಕೆಯಂತೆ 
  3. ರಾಗಿ ಮಿಷನ್ ಓನರಯ್ಯೋ  
  4. ಶರಣು ಏನುವೇ 
  5. ರಾಘವೇಂದ್ರ ಮಾತನಾಡೋ 
ದೈವ ಶಕ್ತಿ (೧೯೮೭) - ಮಾರುತಿ ಕಾರಿನಲ್ಲಿ 
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಾ ಗುರುರಾಜ 

ಮಾರುತಿ ಕಾರಿನಲ್ಲಿ ರಂಪಮ್ ಪಮ್  ಮಾರುತಿ ಬಂದನಿಲ್ಲಿ ರಂಪಮ್ ಪಮ್  
ಮಾರುತಿ ಕಾರಿನಲ್ಲಿ ರಂಪಮ್ ಪಮ್  ಮಾರುತಿ ಬಂದನಿಲ್ಲಿ ರಂಪಮ್ ಪಮ್  
ಕಣ್ಣಿಗೆ ಬಣ್ಣದ ಗಾಜು ಗಾಜಿನಲ್ಲಿ ಕಣ್ಣು ಆಜುಬಾಜೂ 
ಮ್ಯಾಲೇ ಜೆಂಟಲ್ಮನ್ ಒಳಗಡೆ ಹಕ್ಕಿ ಹಿಡಿವ ಪ್ಲ್ಯಾನೂ 
ಮಾರುತಿ ಕಾರಿನಲ್ಲಿ ರಂಪಮ್ ಪಮ್  ಮಾರುತಿ ಬಂದನಿಲ್ಲಿ ರಂಪಮ್ ಪಮ್  
ಮಾರುತಿ ಕಾರಿನಲ್ಲಿ ರಂಪಮ್ ಪಮ್  ಮಾರುತಿ ಬಂದನಿಲ್ಲಿ ರಂಪಮ್ ಪಮ್  
ಕಣ್ಣಿಗೆ ಬಣ್ಣದ ಗಾಜು ಗಾಜಿನಲ್ಲಿ ಕಣ್ಣು ಆಜುಬಾಜೂ 
ಮ್ಯಾಲೇ ಜೆಂಟಲ್ಮನ್ ಒಳಗಡೆ ಹಕ್ಕಿ ಹಿಡಿವ ಪ್ಲ್ಯಾನೂ 

ಕೃಷ್ಣನ ಗೋಪಿಕೃಷ್ಣನ ಹೊಳೆಯ ಒಳಗೆ 
ಹೊಳೆಯೋ ಹೆಂಗಸರಿರುವರು ಜೋಪಾನ 
ರಂಗ ಪಾಡುರಂಗ ಅವರ ಸೀರೆ ಕುಪ್ಪಸ ಕದ್ದರೆ ಸೂರನ ಸೋಪಾನ 
ಶ್ರೀಮತಿಯರ ಕೈಯಲಿ ನಿನಗೆ ಮಂಗಳಾರತಿ 
ಲಂಕೆಯಲ್ಲಿ ಬಾಲ ಸುಟ್ಟುಕೊಂಡ ಮಾರುತಿ  
ಓಡು ಓಡು ಮುಂದೆ ಓಡು ಹಿಂದೆ ಬೇಡ ಮುಂದೆ ನೋಡು 
ಮುಂದೆ ಮುಂದೆ ಕುರಿಯ ಮಂದೆ ಬಂತು ನೋಡು 
ಹಳ್ಳಿ ಇದು ಹಳ್ಳಿ ಇದು ಹಳ್ಳಿ ಅಲ್ಲ ಡಿಲ್ಲಿ 
ಮಾರುತಿ ಕಾರಿನಲ್ಲಿ ರಂಪಮ್ ಪಮ್  ಮಾರುತಿ ಬಂದನಿಲ್ಲಿ ರಂಪಮ್ ಪಮ್  
ಮಾರುತಿ ಕಾರಿನಲ್ಲಿ ರಂಪಮ್ ಪಮ್  ಮಾರುತಿ ಬಂದನಿಲ್ಲಿ ರಂಪಮ್ ಪಮ್  
ಕಣ್ಣಿಗೆ ಬಣ್ಣದ ಗಾಜು ಗಾಜಿನಲ್ಲಿ ಕಣ್ಣು ಆಜುಬಾಜೂ 
ಮ್ಯಾಲೇ ಜೆಂಟಲ್ಮನ್ ಒಳಗಡೆ ಹಕ್ಕಿ ಹಿಡಿವ ಪ್ಲ್ಯಾನೂ 

ನಮ್ಮ ಹಳ್ಳಿಯಲ್ಲಿ ಸೂಟುಬೂಟು ಕಾರಿನ ಜೋರಿಗೆ ಬಾಯಿ ತೆಗೆಯೋರಿಲ್ಲ 
ನಿಮ್ಮ ಡಿಲ್ಲಿಯಲ್ಲಿ ಡಂಭಾಚಾರವೇ ಇಲ್ಲದೆ ಹೋದರೆ ಬಾಳುವೆ ನಡೆಯೋಲ್ಲ 
ಪೋಸು ಗೀಸು ರೋಪು ಗೀಪು ಇಲ್ಲಿ ನಡೆಯದು 
ಪ್ಲೀಸ್ಸ್ ಗೀಸು ಅಂತ ಇದ್ರೇ ಮಾನ ಉಳಿವುದು 
ಮೀಸೆಯಲ್ಲಿ ಅಂದ ಇದೆ ಅಂಡದಲ್ಲಿ ಚೆಂದ ಇದೆ 
ಚೆಂದದಿಂದ ಬಂದ ನಮ್ಮ ಚೆಂದಮಾಮನೂರು 
ಯಾವುರೂ ಈ ಕಾರು ಬಲು ಜೋರು 
ಮಾರುತಿ ಕಾರಿನಲ್ಲಿ ರಂಪಮ್ ಪಮ್  ಮಾರುತಿ ಬಂದನಿಲ್ಲಿ ರಂಪಮ್ ಪಮ್  
ಮಾರುತಿ ಕಾರಿನಲ್ಲಿ ರಂಪಮ್ ಪಮ್  ಮಾರುತಿ ಬಂದನಿಲ್ಲಿ ರಂಪಮ್ ಪಮ್  
ಕಣ್ಣಿಗೆ ಬಣ್ಣದ ಗಾಜು ಗಾಜಿನಲ್ಲಿ ಕಣ್ಣು ಆಜುಬಾಜೂ 
ಮ್ಯಾಲೇ ಜೆಂಟಲ್ಮನ್ ಒಳಗಡೆ ಹಕ್ಕಿ ಹಿಡಿವ ಪ್ಲ್ಯಾನೂ 
---------------------------------------------------------------------------------------

ದೈವ ಶಕ್ತಿ (೧೯೮೭) - ಬೇಲೂರಿನ ಬಾಲಿಕೆಯಂತೆ 
ಸಂಗೀತ : ಹಂಸಲೇಖ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ 

ಗಂಡು : ಬೇಲೂರಿನ ಬಾಲಿಕೆಯಂತೆ ಬಂದೋಳೆ ಬುತ್ತಿಯಲ್ಲಿ ಏನ್ ತಂದೆ ಸೀತವ್ವೋ  
ಹೆಣ್ಣು : ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ ಬುತ್ತಿನಲ್ಲಿ ಮನಸ್ಸ ತಂದೆ ರಾಮಯ್ಯೋ 
ಗಂಡು : ಮುತ್ತೂರ ಸೀತಮ್ಮನೀ ತಂದ ಮನಸ್ಸನ್ನ ತಿನ್ನೋದು ಉಂಟೇನೇ 
ಹೆಣ್ಣು : ಮುತ್ತೂರ ರಾಮಯ್ಯ ಮುತ್ತಂತ ಮನಸ್ಸನ್ನ ಕಾಪಾಡು ನೀನೇನೇ 
ಗಂಡು : ಓಓಓ...  ಬೇಲೂರಿನ ಬಾಲಿಕೆಯಂತೆ ಬಂದೋಳೆ ಬುತ್ತಿಯಲ್ಲಿ ಏನ್ ತಂದೆ ಸೀತವ್ವೋ  
ಹೆಣ್ಣು : ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ ಬುತ್ತಿನಲ್ಲಿ ಮನಸ್ಸ ತಂದೆ ರಾಮಯ್ಯೋ 
  
ಹೆಣ್ಣು : ಓ ಕಾಲಿನ ಗೆಜ್ಜೆ ಆಡೋ ಮಾತಲ್ಲಿ ಕೇಳಿತು ಪ್ರೀತಿ ಮಾತು ಕಿವಿಯಲ್ಲಿ 
ಗಂಡು :  ಆ ನಿನ್ನಯ ತುಂಟ ಮೊಗದ ಪ್ರೀತಿಯಲ್ಲಿ ತುಂಬಿದೆ ನೋಡು ನನ್ನ ಒಡಲಲ್ಲಿ 
ಹೆಣ್ಣು :ಕಾಯೋ ಹಣ್ಣೋ ಕಲ್ಲೋ ಮಣ್ಣೋ 
ಗಂಡು : ಗಂಡು ಹೆಣ್ಣು ಎಲ್ಲ ಒಂದೇ ಕೇಳಲೇ ಜಾಣೆ ಪ್ರೀತಿಯ ಆಣೆ 
            ಬೇಲೂರಿನ ಬಾಲಿಕೆಯಂತೆ ಬಂದೋಳೆ ಬುತ್ತಿಯಲ್ಲಿ ಏನ್ ತಂದೆ ಸೀತವ್ವೋ  
ಹೆಣ್ಣು : ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ ಬುತ್ತಿನಲ್ಲಿ ಮನಸ್ಸ ತಂದೆ ರಾಮಯ್ಯೋ 

ಹೆಣ್ಣು : ಓ ಪ್ರೀತಿಯ ಚೆಲುವ ಬಾರೋ ಮಡಿಲಲ್ಲಿ ಜೋಗುಳ ಹಾಡೋ ಆಸೆ ಎದೆಯಲ್ಲಿ 
ಗಂಡು : ಓ ಓ ಓಓ ಓ ತಾಂಬೂಲ ತಿಂದ ಕೆಂಪ ತುಟಿಯಲ್ಲಿ ಜೇನನು ಹೀರೊ ಆಸೆ ಮನದಲ್ಲಿ 
ಹೆಣ್ಣು : ಕಣ್ಣ ಮುಚ್ಚೆ ಕಾಡೇಗೂಡೆ ಕಣ್ಣ ಮುಚ್ಚೆ ಕಾಡೇಗೂಡೆ ಜೀವನ ಆಟ ಮೋಜಿನಾಟ  
ಗಂಡು : ಬೇಲೂರಿನ ಬಾಲಿಕೆಯಂತೆ ಬಂದೋಳೆ ಬುತ್ತಿಯಲ್ಲಿ ಏನ್ ತಂದೆ ಸೀತವ್ವೋ  
ಹೆಣ್ಣು : ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ ಬುತ್ತಿನಲ್ಲಿ ಮನಸ್ಸ ತಂದೆ ರಾಮಯ್ಯೋ 
ಗಂಡು : ಮುತ್ತೂರ ಸೀತಮ್ಮನೀ ತಂದ ಮನಸ್ಸನ್ನ ತಿನ್ನೋದು ಉಂಟೇನೇ 
ಹೆಣ್ಣು : ಮುತ್ತೂರ ರಾಮಯ್ಯ ಮುತ್ತಂತ ಮನಸ್ಸನ್ನ ಕಾಪಾಡು ನೀನೇನೇ ... ಓಓಓ 
ಗಂಡು : ಓಓಓ...  ಬೇಲೂರಿನ ಬಾಲಿಕೆಯಂತೆ ಬಂದೋಳೆ ಬುತ್ತಿಯಲ್ಲಿ ಏನ್ ತಂದೆ ಸೀತವ್ವೋ  
ಹೆಣ್ಣು : ಪ್ಯಾಟೆಯ ಶೋಕಿ ಬಿಟ್ಟು ಪೇಟ ಕಟ್ಟಿ ನಿಂತೋನೆ ಬುತ್ತಿನಲ್ಲಿ ಮನಸ್ಸ ತಂದೆ ರಾಮಯ್ಯೋ 
--------------------------------------------------------------------------------------

ದೈವ ಶಕ್ತಿ (೧೯೮೭) - ರಾಗಿ ಮಿಷನ್ ಓನರಯ್ಯೋ  
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಾ ಗುರುರಾಜ, ಜಯಪಾಲ  

ಅಯ್ಯಯ್ಯಪ್ಪೋ... ತಬ್ಬಕೊಳಪ್ಪೋ... 
ರಾಗಿ ಮಿಷಿನ್ ಓನರಯ್ಯೋ ಪ್ರೀತಿಯ ಮಾಡೋದು ಅಂದ್ರೇ ಏನೂ  
ಹೇಯ್ ಮಳ್ಳಿ ಮಳ್ಳಿ ಕುಳ್ಳ ಬೆಳ್ಳೊಳ್ಳಿ ಮಂಚಕ್ಕೆ ಕಾಲೇಷ್ಟು ಅನ್ನೋಳು ನೀನು 
ನಿನ್ನಾಣೆ ನಂಗ್ಯಾವ ವಿಷ್ಯ ಗೊತ್ತಿಲ್ಲಪ್ಪೋ 
ಗೊತ್ತಿಲ್ಲ ಅಂತಿದ್ದಾಳಲ್ಲ ಅಯ್ಯಯ್ಯಪ್ಪೋ 
ಸೂಜಿಯ ಹಿಂದೆನೇ ದಾರ ನಾ ನಿನ್ನ ಹಿಂದೆನೇ ಬಾರಾ 
ಅಯ್ಯಯ್ಯಯ್ಯೋ .. ರಾಗಿ ಮಿಷಿನ್ ಓನರಯ್ಯೋ ಪ್ರೀತಿಯ ಮಾಡೋದು ಅಂದ್ರೇ ಏನೂ  

ನೀರಿಗಿಟ್ಟ ಹುರುಳಿಯಂತೇ ನನ್ನ ಮನಸ್ಸು ನಿನ್ನ ನೆನೆದು ನೋಡು ಹೇಗೆ ಮೊಳಕೆ ಬಿಟ್ಟಿದೇ 
ಬೆಂಕಿಗಿಟ್ಟ ಹಂಚಿನಲ್ಲಿ ರಾಗಿ ಹಿಟ್ಟು ತಟ್ಟಿದಂತೆ ಮುಟ್ಟಿ ನೋಡು ಕೈಯ್ಯ್ ಸುಟ್ಟಿದ್ದೇ 
ಪ್ರೇಮ ಅಲ್ಲ ಇದು ಕಾಮ ಹೌದು ಇದು 
ಈಗ ಹೋಗದಿದು ಬೇಗ ಇಳಿಯದಿದು 
ಸೂಜಿಯ ಹಿಂದೆನೇ ದಾರ ನಾ ನಿನ್ನ ಹಿಂದೆನೇ ಬಾರಾ 
ಅಯ್ಯಯ್ಯಯ್ಯೋ .. ರಾಗಿ ಮಿಷಿನ್ ಓನರಯ್ಯೋ ಪ್ರೀತಿಯ ಮಾಡೋದು ಅಂದ್ರೇ ಏನೂ  
ಹೇಯ್ ಮಳ್ಳಿ ಮಳ್ಳಿ ಕುಳ್ಳ ಬೆಳ್ಳೊಳ್ಳಿ ಮಂಚಕ್ಕೆ ಕಾಲೇಷ್ಟು ಅನ್ನೋಳು ನೀನು 

ಬೀಸಲಾಗದಂತ ಬತ್ತ ದೂರ ಹೋಗೆ ನೀನು ಅತ್ತ ನಿನ್ನ ತಂಟೆ ನಂಗೇ ಬ್ಯಾಡವೇ 
ಘಟ್ಟಿ ಒಣಗಿದ ಅವರೇಕಾಳು ಏನೇ ಇದು ನಿನ್ನ ಗೋಳು ನನ್ನ ಯಾಕೇ ಹಿಂಗೇ ಕಾಡುವೆ 
ದೂರ ಹೋಗೋದಿಲ್ಲ.. ಅಯ್ಯೋ ಭಾರ ಆಗೋದಿಲ್ಲ 
ಕಾಟ ತಪ್ಪೋದಿಲ್ಲ ನಿನ್ನ ಬಿಡೋದಿಲ್ಲ 
ಸೂಜಿಯ ಹಿಂದೆನೇ ದಾರ ನಾ ನಿನ್ನ ಹಿಂದೆನೇ ಬಾರಾ 
ರಾಗಿ ಮಿಷಿನ್ ಓನರಯ್ಯೋ ಪ್ರೀತಿಯ ಮಾಡೋದು ಅಂದ್ರೇ ಏನೂ  
ಹೇಯ್ ಮಳ್ಳಿ ಮಳ್ಳಿ ಕುಳ್ಳ ಬೆಳ್ಳೊಳ್ಳಿ ಮಂಚಕ್ಕೆ ಕಾಲೇಷ್ಟು ಅನ್ನೋಳು ನೀನು 
--------------------------------------------------------------------------------------

ದೈವ ಶಕ್ತಿ (೧೯೮೭) - ಶರಣು ಏನುವೇ 
ಸಂಗೀತ : ಹಂಸಲೇಖ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ 

ಶರಣು ಎನುವೆ ಮಂತ್ರಾಲಯ ಗುರುವೇ ಹರಸಲು ಬಾರಯ್ಯ 
ಕರುಣೆ ತೋರೋ ಬೃಂದಾವನ ಪ್ರಭುವೇ ಹರುಷವ ತಾರಯ್ಯ 
ಬೇಡಿದ ವರ ನೀಡೋ ಗುರುರಾಯ ಭಕುತರ ಕಾಪಾಡೋ ಮಹನೀಯ 
ಶರಣು ಎನುವೆ ಮಂತ್ರಾಲಯ ಗುರುವೇ ಹರಸಲು ಬಾರಯ್ಯ 
ಕರುಣೆ ತೋರೋ ಬೃಂದಾವನ ಪ್ರಭುವೇ ಹರುಷವ ತಾರಯ್ಯ 
ಬೇಡಿದ ವರ ನೀಡೋ ಗುರುರಾಯ ಭಕುತರ ಕಾಪಾಡೋ ಮಹನೀಯ 
 
ಕಾಮಧೇನುವೇ ಕಲ್ಪವೃಕ್ಷವ ನಿನ್ನ ಸನ್ನಿಧಾನವೇ ಪರಮಪೂಜ್ಯವಲ್ಲವೇ 
ನಿನ್ನ ನಾಮವೇ ಶಾಂತಿಧಾಮವೇ ನಿನ್ನ ಸೇವೆ ಮಾಡುವೆ ಪಾಪವೆಲ್ಲ ನೀಗುವೆ 
ಪಾದ ಧೂಳಿಯಾಗಿ ಲೋಕ ಓಡಿ ಓಡಿ ಬಂದಿದೆ 
ರಾಘವೇಂದ್ರ ಕಾಯೋ ಎಂದು ಬೇಡಿ ಬೇಡಿ ನಿಂತಿದೆ 
ಕೈಯ್ಯ ಹಿಡಿದು ನೀ ನಡೆಸೋ ಗುರುರಾಜನೇ ಬಾರೋ 
ಶರಣು ಎನುವೆ ಮಂತ್ರಾಲಯ ಗುರುವೇ ಹರಸಲು ಬಾರಯ್ಯ 
ಕರುಣೆ ತೋರೋ ಬೃಂದಾವನ ಪ್ರಭುವೇ ಹರುಷವ ತಾರಯ್ಯ 
ಬೇಡಿದ ವರ ನೀಡೋ ಗುರುರಾಯ ಭಕುತರ ಕಾಪಾಡೋ ಮಹನೀಯ 
ರಾಘವೇಂದ್ರ ಮೌನಿಂದ್ರ ಯೋಗಿರಾಜ ಸೂರ್ಯತೇಜ 

ಪ್ರೇಮ ಸಿಂಧೂವೇ ಕಾಯೋ ಬಂಧುವೇ 
ಬಂಜೆ ಮಗುವ ಬೇಡಲು ತೊಟ್ಟಿಲನು ತೂಗುವೇ 
ಭಾಗ್ಯಧಾತನೇ ಯೋಗಿವರ್ಯನೇ 
ಯೋಗ ದೃಷ್ಠಿ ಬೀರುತ ಎಲ್ಲ ರೋಗ ನೀಗುವೆ 
ನಗುತಲಿ ಎಂದು ನಮ್ಮ ಬಾಳ ಮನೆಯ ತೋರಣ 
ಬಾಳ ದೋಣಿ ತೀರ ಸೇರೆ ನೀನೇ ತಾನೇ ಕಾರಣ 
ಮತಿ ನೀಡೋ ಗತಿ ತೋರೊ ಮತಿ ಮಾತರ ಬಾರೋ 
ಶರಣು ಎನುವೆ ಮಂತ್ರಾಲಯ ಗುರುವೇ ಹರಸಲು ಬಾರಯ್ಯ 
ಕರುಣೆ ತೋರೋ ಬೃಂದಾವನ ಪ್ರಭುವೇ ಹರುಷವ ತಾರಯ್ಯ 
ಬೇಡಿದ ವರ ನೀಡೋ ಗುರುರಾಯ ಭಕುತರ ಕಾಪಾಡೋ ಮಹನೀಯ 
ಶರಣು ಎನುವೆ ಮಂತ್ರಾಲಯ ಗುರುವೇ ಹರಸಲು ಬಾರಯ್ಯ 
ಕರುಣೆ ತೋರೋ ಬೃಂದಾವನ ಪ್ರಭುವೇ ಹರುಷವ ತಾರಯ್ಯ 
ಬೇಡಿದ ವರ ನೀಡೋ ಗುರುರಾಯ ಭಕುತರ ಕಾಪಾಡೋ ಮಹನೀಯ 
--------------------------------------------------------------------------------------

ದೈವ ಶಕ್ತಿ (೧೯೮೭) - ರಾಘವೇಂದ್ರ ಮಾತನಾಡೋ 
ಸಂಗೀತ : ಹಂಸಲೇಖ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಮಂಜುಳಾ ಗುರುರಾಜ 

ರಾಘವೇಂದ್ರ ಮಾತನಾಡೋ ಗುರುವೇ ದಯತೋರೋ ಕಂದನ ಕರೆತಾರೋ 
ಜೀವನ ನದಿಯಲೀ ಭೀಕರ ಮಡುವಲೀ  ತಿರುಗುವ ಸುಳಿಯಲೀ ನೂಕಿರುವೆ 
ಧಾರುಣ ಸ್ಥಿತಿಯಲಿ ದುಃಖದ ಕರುಳಿಗೆ ಸುಡುತಿರೋ ಬರೆಯನು ಹಾಕಿರುವೆ 
ಕರುಣಾಸಾಗರ ನಿನ್ನೀ ಚರಣ ಬಿಡೇನು ಏನೇ ಆಗಲೀ ನಿನ್ನನು ನಂಬದೆರಿಯೆನು 
ಗುರುವೇ ದಯೇತೋರೋ ಕಂದನ ಕರೆ ತಾರೋ ಕಾಣದ ಮಗುವನ್ನ ಕಾಯುವರಿನ್ಯಾರೋ  
ಜೀವನ ನದಿಯಲೀ ಭೀಕರ ಮಡುವಲೀ  ತಿರುಗುವ ಸುಳಿಯಲೀ ನೂಕಿರುವೆ 

ಹೆಣ್ಣು ಎಂದರೇ ಕಣ್ಣೀರೊಂದೇ ಗತಿಯೇ ಗತಿಯೇ 
ನನ್ನೀ ಶೋಕಕೆ ಕಾರಣ ವಿಧಿಯೇ ವಿಧಿಯೇ 
ಭಗ್ಗನೇ ದಳ್ಳೂರಿ ದಗ್ಗನೇ ಎದೆಯಲಿ ಜಗ್ಗದೆ ಇರುವೆನೋ ಬಾಳಿನಲಿ 
ಕಂದನ ಕಾಣದೆ ಕರ್ಮವಿದೆನ್ನುತ ಧರ್ಮಕೆ ಬಾಗುತ ನಿಂತಿರುವೆ 
ಮರವ ನೆಡುವೆ ಫಲವ ಕೊಡುವೆ ಮರೆತು ಬಿಡುವೆ ಏಕೆ ಹೇಳು.. ಗುರುವೇ ಹೇಳೂ ... 
ಗುರುವೇ ದಯತೋರೋ ಕಂದನ ಕರೆತಾರೋ ಕಾಣದ ಮಗುವನ್ನ ಕಾಯುವರಿನ್ಯಾರೋ  
ಜೀವನ ನದಿಯಲೀ ಭೀಕರ ಮಡುವಲೀ  ತಿರುಗುವ ಸುಳಿಯಲೀ ನೂಕಿರುವೆ 

ಯಾರದೋ ಪಾಪಕೆ ಶಾಪವು ನನಗೆ ಸರಿಯೇ ಪ್ರಭುವೇ... 
ಇನ್ನೂ ಕಾಯುವ ಶಕ್ತಿಯಿಲ್ಲವೋ ಗುರುವೇ  
ಭೂತವೇ ಕಾಡಲಿ ಭೂಮಿಯೇ ಭೀರಿಯಲೀ ನಿಶ್ಚಲ ನಂಬಿಕೆಯಿಟ್ಟಿರುವೆ 
ಮಂತ್ರಾಲಯದ ಮಾಂತ್ರಿಕ ಶಕ್ತಿಗೆ ಮಗುವನು ಮೀಸಲು ಮಾಡಿರುವೆ 
ತಂದೆ ತಾಯಿ ಬಂಧು ಬಳಗ ಗುರುವು ದೈವ ಎಲ್ಲ ಎಲ್ಲ ನೀನೇ ಕಾಯೋ.. ಗುರುವೇ ಕಾಯೋ... 
ಕಡಲು ಉಕ್ಕುತಿರಲಿ ಕೊನೆಯು ಸಿಕ್ಕದಿರಲಿ ದಿಕ್ಕು ತಪ್ಪುತಿರಲಿ ಶಕ್ತಿ ಕುಗ್ಗುತ್ತಿರಲಿ 
ಬೆಂಕಿ ಮಳೆಯೇ ಬರಲೀ ಪ್ರಳಯ ನಾಶ ತರಲಿ ನಿನ್ನ ಪಾದಕೆ ಪ್ರಾಣ ಕಾಣಿಕೆ 
ನಿನ್ನ ಪಾದಕೆ ಪ್ರಾಣ ಕಾಣಿಕೆ 
--------------------------------------------------------------------------------------

No comments:

Post a Comment