- ಕಂದಮ್ಮಾ ಕಂದಮ್ಮಾ
- ಕುಣಿ ಕುಣಿ
- ಸಂತೆಯ ಬೀದಿಯಲ್ಲಿ
- ಗೋಪಾಲ ಗೋಪಾಲ
- ಚುಕ್ಕು ಬುಕ್ಕು
- ಹೆತ್ತವರು ಬೇಕು
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರಾ
ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮಾ
ಜೋ ಲಾಲಿ ಜೋ ಜೋ ಲಾಲಿ ಜೋ
ಕಣ್ತುಂಬ ಕನಸಿಟ್ಟು ನಿದಿರೆ ಮಾಡು ಹಾಯಾಗಿ
ಜೋ ಲಾಲಿ ಜೋ ಜೋ ಲಾಲಿ ಜೋ
ಈ ಪ್ರೀತಿ ಲಾಲಿಯಲಿ ನನ್ನ ಉಸಿರ ಪದಗಳಿವೆ
ಬೊಗಸೆಯಲ್ಲಿ ತುಂಬಿಟ್ಟ ಏಳು ಜನ್ಮದಾಸೆಯಿದೆ
ಮಲಗಮ್ಮ ಮಲಗೋ ಕಂದಮ್ಮ ತಣ್ಣನೇ... ಈ ಮಡಿಲ ಪಲ್ಲಕಿಯಲಿ
ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮಾ
ಜೋ ಲಾಲಿ ಜೋ ಜೋ ಲಾಲಿ ಜೋ
ಆಆಆಅ... ಆಅಅ ... ಒಂದು ಹನಿ ಕಣ್ಣೀರು ಕಣ್ಣಿಂದ ಬರದಂತೆ
ರೆಪ್ಪೆಯಲಿ ಕುಳಿತಿದ್ದು ಕಾಯುವೆ ನಿನಗಂತೆ
ಬಳ್ಳಿಗೆ ಹೂವು ಭಾರಾನ ಕಾಯಿ ಮರಕೆ ಭಾರಾನ
ತಾಯಿಗೆ ಮಗು ಭಾರಾನ ತಿಳಿದೋರು ಬರೆದಂತೆ
ಹುಟ್ಟಿ ಬೆಳೆದ ಹಾಗೆ ಮನಸು ಬೆಳೆಯಬೇಕು
ತಂದೆ ತೋಳಿನಾಸರೇ ಕಣ್ಣಮುಂದೆ ಇರಬೇಕು
ದೇವಕಿಯೇ ಹೆತ್ತರೂ ಕೃಷ್ಣನ ಇಲ್ಲಿ ಯಶೋಧೆಯು ತಾಯಿಯಲ್ಲವೇ...
ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮಾ
ಜೋ ಲಾಲಿ ಜೋ ಜೋ ಲಾಲಿ ಜೋ
ಪುಣ್ಯವಂತರು ನಾವು ಭಾಗ್ಯವಂತರು ನಾವು
ಪುಣ್ಯಕೋಟಿ ಕಥೆಯಂತೆ ಪಾತ್ರಧಾರಿಗಳು ನಾವು
ಒಳ್ಳೆತನವೇ ಐಶ್ವರ್ಯ ಒಳ್ಳೆ ಗುಣವೇ ಆಂತರ್ಯ
ಎಲ್ಲ ಹಂಚಿ ಬದುಕೋದೇ ನಮ್ಮ ಎದೆಯ ಔದಾರ್ಯ
ಕರುಳ ಕನ್ನಡಿಯಲಿ ನಾವು ನಿತ್ಯ ನಗಬೇಕು
ನಮ್ಮ ನಗೆಯ ತುಂಬಾ ಹೆತ್ತವರೇ ಇರಬೇಕು
ಸಂತೋಷ ಒಂದೇ ಈ ಮನೆಯ ತೋರಣವು
ನೆತ್ತಿಯಲಿ ಬದುಕು ಹಸಿರಾಗಿ...
ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮಾ
ಜೋ ಲಾಲಿ ಜೋ ಜೋ ಲಾಲಿ ಜೋ
ಕಣ್ತುಂಬ ಕನಸಿಟ್ಟು ನಿದಿರೆ ಮಾಡು ಹಾಯಾಗಿ
ಜೋ ಲಾಲಿ ಜೋ ಜೋ ಲಾಲಿ ಜೋ
ಈ ಪ್ರೀತಿ ಲಾಲಿಯಲಿ ನನ್ನ ಉಸಿರ ಪದಗಳಿವೆ
ಬೊಗಸೆಯಲ್ಲಿ ತುಂಬಿಟ್ಟ ಏಳು ಜನ್ಮದಾಸೆಯಿದೆ
ಮಲಗಮ್ಮ ಮಲಗೋ ಕಂದಮ್ಮ ತಣ್ಣನೇ... ಈ ಮಡಿಲ ಪಲ್ಲಕಿಯಲಿ
ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮಾ
ಜೋ ಲಾಲಿ ಜೋ ಜೋ ಲಾಲಿ ಜೋ
ಕಣ್ತುಂಬ ಕನಸಿಟ್ಟು ನಿದಿರೆ ಮಾಡು ಹಾಯಾಗಿ
-------------------------------------------------------------------------------
ಮಹಾರಾಜ (೨೦೦೫) - ಕುಣಿ ಕುಣಿ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ
--------------------------------------------------------------------------------
ಮಹಾರಾಜ (೨೦೦೫) - ಸಂತೆಯ ಬೀದಿಯಲ್ಲಿ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ರಾಜೇಶ, ಮಂಜುಳ ಗುರುರಾಜ
ಹೇಹೇಹೇಹೇಹೇ ... ಏಏಏಏಏಏಏಏಏ....
ಗಂಡು : ಸಂತೆಯಾ ಬೀದಿಲಿ ನನಗೆ ಕಣ್ಣ ಹೊಡೆದೋಳೇ
ಹೆಣ್ಣು : ಊರಿನ ದಾರೀಲಿ ಕೈಯ್ಯಿ ಹಿಡಿದೋನೇ
ಗಂಡು : ಆ... ಸಂತೆಯಾ ಬೀದಿಲಿ ನನಗೆ ಕಣ್ಣ ಹೊಡೆದೋಳೇ
ಹೆಣ್ಣು : ಊರಿನ ದಾರೀಲಿ ಕೈಯ್ಯಿ ಹಿಡಿದೋನೇ
ಗಂಡು : ಮಾವಿನ ತೋಪಲ್ಲಿ ಬಾರೋ ಮಾವ ಅಂದೋಳೆ
ಹೆಣ್ಣು : ಸೀಬೆಯ ತೋಟದಾಗೆ ಸಿಕ್ಕು ಅಂತ ಅಂದವನೇ...
ಗಂಡು : ಕುಂತವಳೇ ಕುಂತವಳೇ ಗುಂಡಿಗೆ ಗೂಡಲ್ಲಿ ಕುಂತವಳೇ
ಹೆಣ್ಣು : ನಿಂತವ್ನೆ ನಿಂತವ್ನೆ ಸೀರೆ ಸೆರಗಲಿ ನಿಂತವ್ನೆ
ಗಂಡು : ರಂಗಿ ಓ ರಂಗಿ ಹಾಡಲೇನೆ ಶೋಭಾನೇ
ಚಿನ್ನ ನಾ ನಿನ್ನ ಬಿಡೆನು... ಉಉಉಉಉ
ಹೆಣ್ಣು : ರನ್ನ ಓ ರನ್ನ ಕಣ್ಣಲ್ಲೇ ಲಗ್ನಾನೇ ಚೆನ್ನ ನೀ ನನ್ನ ಮಜುನು
ಗಂಡು : ಹೊಳಿಗೆಯಂತ ಮೈಯ್ಯೋಳೇ ನೀ ಬಂದ್ರೆ ಹಬ್ಬ
ಹೆಣ್ಣು : ತೋಳದ ಹಂಗೆ ಬೀಳೋನೇ ಅಬ್ಬಬ್ಬಾ ಇನ್ನು ಪಂಚಾಯ್ತಿ ಬೇಡ
ಗಂಡು : ಹಳೆಮನೆಯಾಗ ಹೋಗೋಣ
ಹೆಣ್ಣು : ಅಯ್ಯೋ ಕಚ್ಚಕೊಂತು ಜೇಡ ಆಷಾಡದಾಗು ಸುಗ್ಗಿನಾ..
ಗಂಡು : ಕುಂತವಳೇ ಕುಂತವಳೇ ಗುಂಡಿಗೆ ಗೂಡಲ್ಲಿ ಕುಂತವಳೇ
ಹೆಣ್ಣು : ನಿಂತವ್ನೆ ನಿಂತವ್ನೆ ಸೀರೆ ಸೆರಗಲಿ ನಿಂತವ್ನೆ
ಗಂಡು : ಸಂತೆಯಾ ಬೀದಿಲಿ ನನಗೆ ಕಣ್ಣ ಹೊಡೆದೋಳೇ
ಹೆಣ್ಣು : ಊರಿನ ದಾರೀಲಿ ಕೈಯ್ಯಿ ಹಿಡಿದೋನೇ
ಕೋರಸ್ : ಓಯ್ ಓಯ್ ಓಯ್ ಚಣಕ್ ಚಾಣಕತಾನಾ
ಚಣಕ್ ಚಾಣಕತಾನಾ ಚಣಕ್ ಚಾಣಕತಾನಾ ಚಣಕ್ ಚಾಣಕತಾನಾ
ಗಂಡು : ಸೊಂಟ ಈ ಸೊಂಟ ಡಾಬನ್ನು ಕೇಳೈತಾ ಬೆಳ್ಳಿ ಡಾಬನ್ನು ತರಲೇ ... ಏಏಏಏ
ಹೆಣ್ಣು : ತುಂಟ ಹೇ ತುಂಟಾ ಫ್ಯಾಶನ್ ನಗತೈತಾ ಕಳ್ಳ ಯಾಕಿಲ್ಲಿ ತರಲೇ ....
ಗಂಡು : ಬುತ್ತಿ ತರುವ ನೆಪದಾಗೆ ಪ್ರೀತೀನ ತಂದೆ
ಹೆಣ್ಣು : ತುಂಟಾಟ ಆಡೋ ನೆಪದಾಗೆ ಮೈ ಸವರಿಕೊಂಡೇ
ಗಂಡು : ನಮ್ಮ ಕೇರಿ ಏರಿ ಮ್ಯಾಗ್ ನನ್ನ ನಿನ್ನ ಚೆಲ್ಲಾಟ
ಹೆಣ್ಣು : ನಮ್ಮ ಹೊಲಗದ್ದೆಯಾಗೆ ಕೈಕೈ ಮಸೆಯೋ ಕಳ್ಳಾಟ
ಗಂಡು : ಕುಂತವಳೇ ಕುಂತವಳೇ ಗುಂಡಿಗೆ ಗೂಡಲ್ಲಿ ಕುಂತವಳೇ
ಹೆಣ್ಣು : ನಿಂತವ್ನೆ ನಿಂತವ್ನೆ ಸೀರೆ ಸೆರಗಲಿ ನಿಂತವ್ನೆ
--------------------------------------------------------------------------------
ಮಹಾರಾಜ (೨೦೦೫) - ಗೋಪಾಲ ಗೋಪಾಲ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ರಾಜೇಶ, ಕಲ್ಪನಾ
ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ...
ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ...
ಸುಂದರಿ ಸುಂದರಿ ಸೂಪರ್ರೂ ಚೋಕರಿ
ಪುಂಗಿ ಊದಿ ನನ್ನ ಹಿಡಿದೆಯಲ್ಲೇ...
ಕಿನ್ನರ ಕಿನ್ನರ ಚಿಗುರು ಮೀಸೆ ಸುಂದರ
ಭಂಗಿ ಹಾಗೆ ನನ್ನ ಕುಡಿದೆಯಲ್ಲೋ..
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರ್ತೀನಿ ಏರೋಪ್ಲೇನು...
ಹಯ್..ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರ್ತೀನಿ ಏರೋಪ್ಲೇನು ಹೂ...
ಹೋಯ್ ಹೋಯ್ ಹೋಯ್ ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ...
ಕೆಂಪಾಗೆ ಹೋರೇವಂತ ತೊಂಡೆ ತುಟಿ ನನಗೆ ತಾನೇ ಗ್ಯಾರಂಟಿ
ಕೆಂಪಾಗೆ ಹೋರೇವಂತ ತೊಂಡೆ ತುಟಿ ನನಗೆ ತಾನೇ ಗ್ಯಾರಂಟಿ
ಮೊದಲ ಟಚ್ಚಲ್ಲೇ ಅರೇ ನಾ ನಿನ್ನ ಮೆಚ್ಚಿದೆ
ಮನವು ಹುಚ್ಚೆದ್ದು ಕುಣಿ ಕುಣಿವಂತೆ ಆಗಿದೆ
ಧಡಕ್ಕೂ ಧಡಕ್ಕೂ ಅಂತೂ ನನ್ನ ದಿಲ್ಲೂ ಡಿಮ್ ಡಿಮ್ ಥಳಕು ಬಳುಕು ಕಂಡರೇ ನಂಗೇ ಭಾರಿ ಸಂಭ್ರಮ
ಚಂದನ ಬಚ್ಚಕೋ ಏಳೋ ಚಂದಮಾಮ
ಆನಂದನ ದೋಚಕೊಳ್ಳಲೋ ಪೋಲಿ ಶ್ಯಾಮ
ನಿನ್ನಿಂದ ನನಗೀಗ ಹಬ್ಬದೂಟ ಮುತ್ತಲ್ಲೆ ಆಡೋಣ ರಂಗಿನಾಟ
ಹೇಯ್ ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ...
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ...
ಬೆಲ್ಲದ ಅಚ್ಛಂತೆ ಭಾಮಾಮಣಿ
ಕೆನ್ನೆಯ ಕಚ್ಚಲೇ ಚಿಂತಾಮಣಿ
ಬೆಲ್ಲದ ಅಚ್ಛಂತೆ ಭಾಮಾಮಣಿ
ಕೆನ್ನೆಯ ಕಚ್ಚಲೇ ಚಿಂತಾಮಣಿ
ರಾಜಾ ಓ ರಾಜಾ ರತಿಶೃಂಗಾರ ನೀನಾದೆ
ರಾಣಿ ಓ ರಾಣಿ ಮೈ ಮನಸೆಲ್ಲ ತುಂಬಿದೆ
ಹುಡುಕು ಹುಡುಕು ಬುದ್ದಿಯು ನೀನು ಚಂಚಲ
ಥಳಕು ಬೆಳಗು ಬೆಡಗಿನ ದ್ರಾಕ್ಷಿಗೊಂಚಲ
ಎಸ್ ಎಂದೂ ಎಷ್ಟೊತ್ತು ಆಯಿತು
ಮಿಸ್ ಅನ್ನು ಮಿಸೆಸ್ ಆಗಿಸಯ್ಯೋ
ಒಂದಾಯ್ತು ಈ ಪ್ರೀತಿ ಸೇರುಬಾರೇ
ಬೊಂಬಾಟು ಮಾಡೋಣ ಬಾರೇ ಬಾರೇ ಹೇ..
ಹೇಯ್ ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ...
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ...
ಸುಂದರಿ ಸುಂದರಿ ಸೂಪರ್ರೂ ಚೋಕರಿ
ಪುಂಗಿ ಊದಿ ನನ್ನ ಹಿಡಿದೆಯಲ್ಲೇ...
ಕಿನ್ನರ ಕಿನ್ನರ ಚಿಗುರು ಮೀಸೆ ಸುಂದರ
ಭಂಗಿ ಹಾಗೆ ನನ್ನ ಕುಡಿದೆಯಲ್ಲೋ..
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಪುಂಗಿ ಊದಿ ನನ್ನ ಹಿಡಿದೆಯಲ್ಲೇ...
ಕಿನ್ನರ ಕಿನ್ನರ ಚಿಗುರು ಮೀಸೆ ಸುಂದರ
ಭಂಗಿ ಹಾಗೆ ನನ್ನ ಕುಡಿದೆಯಲ್ಲೋ..
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರ್ತೀನಿ ಏರೋಪ್ಲೇನು ಹೂ...
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರ್ತೀನಿ ಏರೋಪ್ಲೇನು ಹೂ...ಹೋಯ್ -------------------------------------------------------------------------------
ಮಹಾರಾಜ (೨೦೦೫) - ಚುಕ್ಕು ಬುಕ್ಕು
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಮಾಲತಿ
--------------------------------------------------------------------------------
ಮಹಾರಾಜ (೨೦೦೫) - ಹೆತ್ತವರು ಬೇಕು
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಎಸ್.ಎ.ರಾಜಕುಮಾರ,
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ ಮಕ್ಕಳಿರಬೇಕು ಹೆತ್ತಕರುಳಿಗೆ
ರೆಕ್ಕೆಯು ಬೆಳೆದ ಹಕ್ಕಿಗಳು ಮಮತೆಯ ಧೂಳು ದಾಟಿದವು
ಇಲ್ಲಿ ನಮ್ಮೋರೆಂಬ ನಂಬಿಕೆಗಳು ಬರಿ ನಾಟಕವಯ್ಯಾ...
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ ಮಕ್ಕಳಿರಬೇಕು ಹೆತ್ತಕರುಳಿಗೆ
ಆಆಆಆ... ಆಆಆಆ... ಆಆಆಆ...
ಒಂದು ತುತ್ತಿನ ಬಂಧವು ಎಂದು ತುಟಿಯವರೆಗೂ...
ಒಂದು ಪ್ರೀತಿಯ ಬಂಧುವು ಎಂದು ಬಣ್ಣಿಸೋವರೆಗೂ...
ತಂದೆ ತಾಯಿ ಬಂಧು ಮಿತ್ರರು ಎಂದು ಮನೆಯವರೆಗೂ
ಕಾಲ ಸರಿದರೆ ಕಾಯೋರು ಯಾರು ಕೊನೆಯವರೆಗೂ
ಯಾರಿಗೆ ಯಾರು ಇಲ್ಲ ಎಲ್ಲ ಮಾತಿನ ಮಾಯಾ
ಬರೆದ ಬ್ರಹ್ಮನಿಗಂತೂ ತಲೆಯ ಕೆಟ್ಟಿತಯ್ಯಾ
ಸಂಬಂಧಳಿಗೂ ಅನುಬಂಧಗಳಿಗೂ ಅರ್ಥವಿಲ್ಲಯ್ಯಾ...
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ ಮಕ್ಕಳಿರಬೇಕು ಹೆತ್ತಕರುಳಿಗೆ
ಆಆಆಆ... ಆಆಆಆ... ಆಆಆಆ...
ನಿನ್ನ ನಡತೆ ನಿನ್ನ ಘನತೆ ನಿನ್ನ ತ್ಯಾಗವೇ
ಕರ್ಣನ ದಾನಕ್ಕೂ ರಾಮನ ಬಾಣಕ್ಕೂ ಸರಿಸಮಾನವೇ...
ಪಾಪ ಪುಣ್ಯದ ತಕ್ಕಡಿಯನ್ನ ತೂಗುವರೆಯವರೆಗೆ...
ಕಣ್ಣಿಗೆ ಬಟ್ಟೆಯ ಕಟ್ಟುವರಲ್ಲ ಏನಿದು ನ್ಯಾಯವೇ
ನಂಟಿನ ಹೆಸರಿನಲ್ಲಿ ಗಂಟಿನ ಕಳ್ಳರು ಎಲ್ಲಾ...
ಎಲ್ಲವು ಸ್ವಾರ್ಥವೇ ಆದರೆ ಬದುಕು ಎಂಬುದೇ ಇಲ್ಲ
ಇಲ್ಲಿದು ದಿನ ಕಟ್ಟಿಲೆ ಸವಾರಿ ಆಯ್ತು ಹೆತ್ತೋರ ಪಾಲಿಗೆ...
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ ಮಕ್ಕಳಿರಬೇಕು ಹೆತ್ತಕರುಳಿಗೆ
ರೆಕ್ಕೆಯು ಬೆಳೆದ ಹಕ್ಕಿಗಳು ಮಮತೆಯ ಧೂಳು ದಾಟಿದವು
ಇಲ್ಲಿ ನಮ್ಮೋರೆಂಬ ನಂಬಿಕೆಗಳು ಬರಿ ನಾಟಕವಯ್ಯಾ...
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ ಮಕ್ಕಳಿರಬೇಕು ಹೆತ್ತಕರುಳಿಗೆ
ಆಆಆಆ... ಆಆಆಆ... ಆಆಆಆ...
--------------------------------------------------------------------------------
No comments:
Post a Comment