1788. ಬಾನುದಾರಿಯಲ್ಲಿ (೨೦೨೨)



ಬಾನುದಾರಿಯಲ್ಲಿ ಚಲನಚಿತ್ರದ ಹಾಡುಗಳು 
  1. ನಿನ್ನನ್ನು ನೋಡಿದ ನಂತರ ಜೀವಕೆ 
  2. ಬಾನ ದಾರಿಯಲ್ಲಿ ಹೋದೆ ಎಲ್ಲಿ
  3. ಮೈ ಗೋಲ್ಡ್ ಫಿಶ್ ಗರ್ಲ್
ಬಾನುದಾರಿಯಲ್ಲಿ (೨೦೨೨) - ನಿನ್ನನ್ನು ನೋಡಿದ ನಂತರ ಜೀವಕೆ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಸೋನು ನಿಗಮ್ 

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು ನನ್ನ ಈ ಜನ್ಮವೇ ಮೀಸಲು…
ನಿನ್ನನು ನೋಡಿದ ನಂತರ ಜೀವಕೆ ಬಾಕಿಯೇ ಇಲ್ಲವೇ ಯಾವುದೇ ಕೋರಿಕೆ

ನೀರಿನಲ್ಲಿ ನೀನು ಮೆಲ್ಲ ಪಾದ ಊರಿದೆ
ನೋಡು ಕಡಲು ನಾಚಿಕೊಂಡಿದೆ 
ಚಂದ್ರ ಬಂದರೂನು ನಿನ್ನ ಅಂದ 
ನೋಡುತ್ತ ನಿಂತುಬಿಟ್ಟ ಸೂರ್ಯ ಮುಳುಗದೆ

ನಿನ್ನ ಅಂಗಾಲಿನ ಕೆಂಪು ಸಾಲ ಕೊಡು
ಚೂರು ಮುಸ್ಸಂಜೆಗೆ ಬಣ್ಣ ಹಚ್ಚೋದಿದೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು
ನಿನ್ನನು ನೋಡಿದ ನಂತರ ಜೀವಕೆ ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು
----------------------------------------------------------------------------------------------

ಬಾನುದಾರಿಯಲ್ಲಿ (೨೦೨೨) - ಬಾನ ದಾರಿಯಲ್ಲಿ ಹೋದೆ ಎಲ್ಲಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ರಾಜೇಶ 

ಬಾನ ದಾರಿಯಲ್ಲಿ ಹೋದೆ ಎಲ್ಲಿ
ನೀ ಬಾನ ದಾರಿಯಲ್ಲಿ ಹೋದೆ ಎಲ್ಲಿ

ಸಿಗಬೇಕು ಮತ್ತೆ ನಾವು
ಜೊತೆಯಾಗಿ ನೂರು ಸಾವು
ನಮದಿನ್ನೂ ಬಾಕಿ ಇದೆ ಬೇಗ ಬಂದು ಬಿಡು
ಬಾನ ದಾರಿಯಲ್ಲಿ ಹೋದೆ ಎಲ್ಲಿ

ನೀನಂದ ಮಾತೇ ನೀ ಮರೆತೋದೆಯಾ
ಮತ್ತೊಂದು ಬೇಟಿಗೆ ಬರಲಾರೆಯ
ಆ ನಿನ್ನ ನಗು ಚೆಲ್ಲಿ ಹೋದ ನಾದ 
ಅಲೆಯಾಗಿ ಇಲ್ಲೇ ಇದೆ
ನೀ ಸಿಗು ಸಿಗು ಮತ್ತೆ ಅಲ್ಲೇ ಒಮ್ಮೆ
ಪಿಸುಮಾತು ನೂರಾರಿದೆ

ಸಿಗಬೇಕು ಮತ್ತೆ ನಾವು 
ಜೊತೆಯಾಗಿ ನೂರು ಸಾವು
ನಮದಿನ್ನೂ ಬಾಕಿ ಇದೆ ಬೇಗ ಬಂದು ಬಿಡು
ಬಾನ ದಾರಿಯಲ್ಲಿ ಹೋದೆ ಎಲ್ಲಿ
ನೀ ಬಾನ ದಾರಿಯಲ್ಲಿ ಹೋದೆ ಎಲ್ಲಿ
-----------------------------------------------------------------------------------------------------------

ಬಾನುದಾರಿಯಲ್ಲಿ (೨೦೨೨) - ಮೈ ಗೋಲ್ಡ್ ಫಿಶ್ ಗರ್ಲ್
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ನಿಶಾನ್ ರೈ, ಐಶ್ವರ್ಯ ರಂಗರಾಜನ್  

ಮುಂಜಾನೆ ನೀನೆ ಮುಸ್ಸಂಜೆ ನೀನೇ
ಆಕಾಶ ನೀನೆ ಭೂಮಿನು ನೀನೆ
ಪ್ರಾಣಾನು ನೀನೆ ತ್ರಾಣಾನು ನೀನೆ
ದೈವಾನು ನೀನೆ ಧ್ಯಾನಾನು ನೀನೆ
ಆರಂಭ ನೀನೆ ಅಂತ್ಯಾನು ನೀನೆ
ಬೇಕಿಲ್ಲ ಇನ್ನೇನು ಬೇಡಲ್ಲ ಬೇರೇನೂ ನೀನೇನೆ ನಂಗೆಲ್ಲವು
ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್

ಬಂಗಾರ ನೀನೆ ಸಿಂಗಾರ ನೀನೇ
ಆಸೇನು ನೀನೆ ಆಕಾರ ನೀನೇ
ಸಂಗೀತ ನೀನೆ ಸಂತೋಷ ನೀನೇ
ಸಮ್ಮೋಹ ನೀನೆ ಸಂಪದ ನೀನೇ
ಸರ್ವಸ್ವ ನೀನೆ ಸ್ವಾರಸ್ಯ ನೀನೇ
ನೀನೆಲ್ಲೂ ನಾನಲ್ಲೆ ನಾನಿನ್ನೂ ನಿನ್ನಲ್ಲೇ ನಿನ್ನಲ್ಲೇ ನನ್ನ ನೆಲೆ
ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್  ಮೈ ಗೋಲ್ಡ್ ಫಿಶ್ ಗರ್ಲ್

ಚಂದಿರ ನಿನ್ನ ಸೋದರನೇನು ಚಂದಾಗಾರನೆ
ನೂರಾರು ತಾರೆ ನುಂಗಿದ ಕಣ್ಣು ನಿಂದು ಚೋರನೆ
ತಂಗಾಳಿ ತೇಲುತ್ತ ಬಂತು ನೀ ಯಾರು ಹೇಳಂತ ಅಂತು
ನಾ ನಾಚಿಕೊಂಡು ಕೈ ಕಚ್ಚಿಕೊಂಡು ಹೇಳಿದೆ ನೀನು ನನ್ನವನೆಂದು
ನನ್ನವನು ನೀನೆಂಬ ಮುದ್ದಾದ ಈ ಜಂಬ ತುಂಬಾನೇ ಹೆಚ್ಚಾಗಿದೆ
ಮೈ ಗೋಲ್ಡ್ ಫಿಶ್ ಗರ್ಲ್ ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್  ಮೈ ಗೋಲ್ಡ್ ಫಿಶ್ ಗರ್ಲ್
ಮುಂಜಾನೆ ನೀನೆ ಮುಸ್ಸಂಜೆ ನೀನೇ
ಆಕಾಶ ನೀನೆ ಭೂಮಿನು ನೀನೆ
ಪ್ರಾಣಾನು ನೀನೆ ತ್ರಾಣಾನು ನೀನೆ
ದೈವಾನು ನೀನೆ ಧ್ಯಾನಾನು ನೀನೆ
ಆರಂಭ ನೀನೆ ಅಂತ್ಯಾನು ನೀನೆ
ಬೇಕಿಲ್ಲ ಇನ್ನೇನು ಬೇಡಲ್ಲ ಬೇರೇನೂ ನೀನೇನೆ ನಂಗೆಲ್ಲವು
ಮೈ ಗೋಲ್ಡ್ ಫಿಶ್ ಗರ್ಲ್  ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್  ಮೈ ಗೋಲ್ಡ್ ಫಿಶ್ ಗರ್ಲ್
---------------------------------------------------------------------------------------------------

No comments:

Post a Comment