1789. ವೀರಂ (೨೦೨೩)

ವೀರಂ ಚಲನಚಿತ್ರದ ಹಾಡುಗಳು 
  1. ಹೋದಳು ಬಿಟ್ಟು ಹೋದಳೋ 
  2. ಶಿವ ಶಿವ 
  3. ಮೌನವೇ ಚೆನ್ನ 
ವೀರಂ (೨೦೨೩) - ಹೋದಳು ಬಿಟ್ಟು ಹೋದಳೋ 
ಸಂಗೀತ : ಅನೂಪ್ ಶಿಳ್ಳಿನ್, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ಸುಪ್ರಿಯಾ ರಾಮ, ಅನೂಪ್ ಶಿಳ್ಳಿನ್ 
  
ತಂದನಾನೋ ತಾನನಾನೊ ತಂದನಾನೋ ತಾನನಾನೊ
ಹೇ…. ಕುಡಿಯೋ ಮುಂಚೆ ಬಾಟ್ಲಡಿಗೆ ಎರಡು ತಟ್ಟೇ ತಟ್ತೀವಿ
ಮುಚ್ಲ ಲೂಸ್ ಆಗ್ಬೇಕಂತ ಅಂಗೈಲಿ ಎರಡು ಬಿಡ್ತೀವಿ
ಪ್ರೀತಿ ಮಾಡುವಾಗ ಎರಡು ತಟ್ಟದೇ ಸುಮ್ಮನಾದ್ರೆ ಹಿಂಗೆ ನೋವು ಸಿಗ್ತದೆ
ಮೋಸ ಹೋದಮೇಲೆ ಎದೆ ನೋಯ್ತದೆ ಏನ ಮಾಡ್ಲಿ ಬಾಟ್ಲೆತ್ತದೇ 
ಹೇಳದನ್ನ ಕೇಳದೆ ಹೋದಳೊ ಹೋದಳೋ 
ಮಾತಿಗೇನೆ ಸಿಕ್ಕದೆ ಕೈ ಕೊಟ್ಟು ಹೋದಳು
ಅವಳು ಜೊತೆ ಇಲ್ಲದೇ ಲೈಫ್ ಈಗ ಲಾಕ್ ಡೌನ್ ಆಗಿದೆ
ಹೋದಳೊ ಬಿಟ್ಟು ಹೋದಳೋ.... ಹೋದಳೊ ಬಿಟ್ಟು ಹೋದಳೋ

ಪ್ರೀತಿ ಮಾಡುವಾಗ ಮಾತಿಗೊಂದು ಮಾತು ಬಂದೇನೆ ಬರುತೈತೆ
ಹೊಂದಿಕೊಂಡು ಹೋಗು ನೀನೆ ತಲೆಬಾಗು ಒಳ್ಳೇದೆ ಆಗುತೈತೆ
ಕೇಳಿಕೊ ಮಾತು ಕೇಳಿಕೊ ಹೇಳಿಕೊ ತಪ್ಪು ಹೇಳಿಕೊ
ಹೃದಯ ಕೂಗಿದೆ ಕಣ್ಣಲ್ಲಿ ನೀರಾಡಿದೆ
ಮನಸೇ ಬಾಡಿದೆ ತಪ್ಪಿಲ್ದೇ ಬಲಿಯಾಗಿದೆ
ಶರಣಾಯ್ತು ಈ ಗಂಡೆದೆ 
ಹೇಳದನ್ನ ಕೇಳದೆ ಹೋದಳೊ ಹೋದಳೋ
ಮಾತಿಗೇನೆ ಸಿಕ್ಕದೆ ಕೈ ಕೊಟ್ಟು ಹೋದಳು
ಅವಳು ಜೊತೆ ಇಲ್ಲದೇ ಲೈಫ್ ಈಗ ಲಾಕ್ ಡೌನ್ ಆಗಿದೆ
ಹೋದಳೊ ಬಿಟ್ಟು ಹೋದಳೊ ಹೋದಳೊ ಬಿಟ್ಟು ಹೋದಳೊ

ಕೋಪದಾಗೆ ಮೂಗು ಕುಯ್ದು ಕೊಂಡಮ್ಯಾಲೆ ಇನ್ನೊಮ್ಮೆ ಬರುತೈತ
ನಿನ್ನ ಹಾಗೆ ಅವಳು ಎಣ್ಣೆ ಬೇಕು ಅಂದ್ರೆ ಪರಪಂಚ ಉಳಿತೈತ
ನೋಡಿಕೊ ಇನ್ನು ನೋಡಿಕೊ ಬೇಡಿಕೊ ದೇವ್ರ ಬೇಡಿಕೊ
ಮೊದಲ ಬಾರಿಗೆ ಸಂಕಟ ಈ ಬಾಳಿಗೆ
ಪ್ರೀತಿಯ ಹಾಲಿಗೆ ಹಲ್ಲೀನೆ ಬಿದ್ದೋದಂಗೆ ಕನ್ ಫ್ಯೂಸು ಈ ಗುಂಡಿಗೆ
ಹೇ…. ಕುಡಿಯೋ ಮುಂಚೆ ಬಾಟ್ಲಡಿಗೆ ಎರಡು ತಟ್ಟೇ ತಟ್ತೀವಿ
ಮುಚ್ಲ ಲೂಸ್ ಆಗ್ಬೇಕಂತ ಅಂಗೈಲಿ ಎರಡು ಬಿಡ್ತೀವಿ
ಪ್ರೀತಿ ಮಾಡುವಾಗ ಎರಡು ತಟ್ಟದೇ ಸುಮ್ಮನಾದ್ರೆ ಹಿಂಗೆ ನೋವು ಸಿಗ್ತದೆ
ಮೋಸ ಹೋದಮೇಲೆ ಎದೆ ನೋಯ್ತದೆ ಏನ ಮಾಡ್ಲಿ ಬಾಟ್ಲೆತ್ತದೇ
ಹೇಳದನ್ನ ಕೇಳದೆ ಹೋದಳೊ ಹೋದಳೋ
ಮಾತಿಗೇನೆ ಸಿಕ್ಕದೆ ಕೈ ಕೊಟ್ಟು ಹೋದಳು
ಅವಳು ಜೊತೆ ಇಲ್ಲದೇ ಲೈಫ್ ಈಗ ಲಾಕ್ ಡೌನ್ ಆಗಿದೆ
-------------------------------------------------------------------------------------------------------

ವೀರಂ (೨೦೨೩) - ಶಿವ ಶಿವ 
ಸಂಗೀತ : ಅನೂಪ್ ಶಿಳ್ಳಿನ್, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ಅನನ್ಯ ಭಟ್ಟ 

ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ
ಯಾಕ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ…
ಎಡವಿಸಿ ತಾಳ ಉರುಳಿಸಿ ದಾಳ ನಡೆಸಿದಿ ಬಾಳ
ಶಿವ ಶಿವ ಶಿವ ಶಿವ ಶಿವ  ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ

ನಾ ಹೂವು ಹಣ್ಣು ತಂದೆ ಕಣ್ಣೀರು ನೀನು ತಂದೆ
ನಾನು ಆಳಲಿಲ್ಲೋ ತನ್ನಂತಾನೇ ಬಂತಲ್ಲೋ
ನೀನು ನಗಬೋದ ನನಗಾಗಿ ಅಳಬೋದ
ಹೇ ಶಿವಾ… ಜೀವವಾ ಕಾಡುತಿ ಯಾಕೋ ಶಿವ
ಕನಸು ಒಡೆದಾವ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಕೇಳೋ ಮಾದೇವ ಮನ್ಸನ ಜೀವ 
ನೀ ನುಡಿಸಿ ಆಡಾಕ ಡಮರು ಆಗ್ಯವ 

ಹೂ ಮುಳ್ಳು ಒಂದೇ ಗಿಡಕ ಹೆಂಗಾರ ಜೋಡಿಸಿಟ್ಟಿ
ಬೇದ ನಮಗಿಲ್ಲೋ ನಿನ್ನಾಟ ಸರಿ ಇಲ್ಲೋ
ನೀನು ವಿಷ ಕುಡಿದಿ ನಾವುನು ಕುಡಿಬೇಕಾ
ಚಾಲಕ ಪಾಲಕ ನಾಮವು ನಿಂಗ್ಯಾತಕ ನೀನು ನಮಗ್ಯಾಕ….
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಯಾಕೋ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ….
-------------------------------------------------------------------------------------------------------

ವೀರಂ (೨೦೨೩) - ಮೌನವೇ ಚೆನ್ನ 
ಸಂಗೀತ : ಅನೂಪ್ ಶಿಳ್ಳಿನ್, ಸಾಹಿತ್ಯ : ಕವಿರಾಜ, ಗಾಯನ : ನಿಹಾಲ್ ಟೌರೋ 

ಮೌನವೇ ಚೆನ್ನ ಅರೆ ಮಾತು ಯಾಕಿನ್ನ
ಸೋತೆನು ನನ್ನ ಪದೇ ಪದೇ ನೋಡುತ ನಿನ್ನ
ಕಣ್ಣೊಳಗೆ ಈಗ ನೀನಿರುವಾಗ ಇರದು ಕನಸಿಗೆ ಜಾಗ
ಮೌನವೇ ಚೆನ್ನ ಅರೆ ಮಾತು ಯಾಕಿನ್ನ

ಜೊತೆಗೆ ಹೆಜ್ಜೆ ಹಾಕೋ ಘಳಿಗೆ ಜಗವೇ ಕಾಲ್ಕೆಳಗೆ
ತರಲೆ ಅನ್ನೋ ಪದವಿಯನ್ನ ಬೇಗ ಕೊಡು ನೀ ನಂಗೆ
ನಿನ್ನದೆ ಪರಿಣಾಮ ನೋಡು ಎದೆಯಲಿ ಹೊಸ ಹೊಸ ಹಾಡು
ತೀರಿಸೋಕೆ ಇದೆ ಸಿಹಿ ಸೇಡು
ಮೌನವೇ ಚೆನ್ನ ಅರೆ ಮಾತು ಯಾಕಿನ್ನ

ನಿಜವೋ ಭ್ರಮೆಯೋ ನೋಡುತೀನಿ ನನ್ನೇ ತುಸು ಚಿವುಟಿ
ಜೊತೆಗೆ ಇರಲು ಈಗ ನಿನ್ನ ನೆರಳ ಜೊತೆ ಪೈಪೋಟಿ
ಸುಮ್ಮನೆ ಸುಳಿದಾಗ ನೀನು ಗಮ್ಮನೆ ಪರಿಮಳವೇನು
ಮೆಲ್ಲ ಮೆಲ್ಲ ಪರವಶ ನಾನು
ಮೌನವೇ ಚೆನ್ನ ಅರೆ ಮಾತು ಯಾಕಿನ್ನ
ಸೋತೆನು ನನ್ನ ಪದೇ ಪದೇ ನೋಡುತ ನಿನ್ನ
ಕಣ್ಣೊಳಗೆ ಈಗ ನೀನಿರುವಾಗ ಇರದು ಕನಸಿಗೆ ಜಾಗ
-------------------------------------------------------------------------------------------------------

ವೀರಂ (೨೦೨೩) - ಮೌನವೇ ಚೆನ್ನ 
ಸಂಗೀತ : ಅನೂಪ್ ಶಿಳ್ಳಿನ್, ಸಾಹಿತ್ಯ : ಕವಿರಾಜ, ಗಾಯನ : ನಿಹಾಲ್ ಟೌರೋ 

-------------------------------------------------------------------------------------------------------

No comments:

Post a Comment