1791. ಪರಮೇಶಿ ಪ್ರೇಮ ಪ್ರಸಂಗ (೧೯೮೫)

ಪರಮೇಶಿ ಪ್ರೇಮ ಪ್ರಸಂಗ ಚಲನಚಿತ್ರದ ಹಾಡುಗಳು 
  1. ಬದುಕೇ ಬರಿ ಭ್ರಮೆಯೋ 
  2. ಪ್ರೀತಿ ಲೋಕದ ಸೂರ್ಯ ನೀನು 
  3. ಉಪ್ಪಿಲ್ಲ ಮೆಣಸಿಲ್ಲ 
ಪರಮೇಶಿ ಪ್ರೇಮ ಪ್ರಸಂಗ (೧೯೮೫) - ಬದುಕೇ ಬರಿ ಭ್ರಮೆಯೋ 
ಸಂಗೀತ : ಜೆ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡ ರಂಗೇಗೌಡ, ಗಾಯನ : ಎಸ್.ಜಾನಕೀ 

ಬದುಕೇ ಬರಿ ಭೃಮೆಯೋ ಒಲವೇ ಸಿಗದ ಶೃತಿಯೋ 
ದಿನವೂ ನೂರು ನೋವು ನಮ್ಮ ಪ್ರೀತಿ ತುಂಬಾ ಬೇವು 
ಇಂದು ಸ್ನೇಹ ಸಂಗ ದೂರ ಎಲ್ಲಾ ಮೋಹ ಬೆಂಕಿ ತೀರ
ಬದುಕೇ ಬರಿ ಭೃಮೆಯೋ ಒಲವೇ ಸಿಗದ ಶೃತಿಯೋ 

ಸಂಗಾತಿ ಬೇರೆಯಾಗಿ ಅನುರಾಗ ಕೂಡದೇ ....  
ಏನೇನೋ ಹಾದಿ ಸಾಗಿ ಒಡನಾಟ ಮೂಡದೇ 
ಆನಂದ ಕಂದ ನೊಂದು ಗಾರದ ಜೀವ ಬೆಂದು 
ಕನಸೆಲ್ಲಾ ಕದಡಿತಲ್ಲಾ ಮನಸೆಲ್ಲ ಒಡೆಯಿತಲ್ಲ 
ಬದುಕೇ ಬರಿ ಭೃಮೆಯೋ ಒಲವೇ ಸಿಗದ ಶೃತಿಯೋ 

ಒಡಕಾದ ಪ್ರೇಮಬಂಧ ಒಂದಾಗಿ ಸೇರದೇ...  
ಉಸಿರಾದ ಮೋಹ ಗಾನ ಹೊಸರಂಗು ತಾರದೆ 
ಏಕಾಂತ ಬೇಸರಾಗಿ ಜೀವಂತೆ ಆಸೆ ತೂಗಿ 
ಚೆಲುವೆಲ್ಲ ಬಾಡಿತಲ್ಲ ಮರಭೂಮಿ ಆಯಿತಲ್ಲ    
ಬದುಕೇ ಬರಿ ಭೃಮೆಯೋ ಒಲವೇ ಸಿಗದ ಶೃತಿಯೋ 
ದಿನವೂ ನೂರು ನೋವು ನಮ್ಮ ಪ್ರೀತಿ ತುಂಬಾ ಬೇವು 
ಇಂದು ಸ್ನೇಹ ಸಂಗ ದೂರ ಎಲ್ಲಾ ಮೋಹ ಬೆಂಕಿ ತೀರ
ಬದುಕೇ ಬರಿ ಭೃಮೆಯೋ ಒಲವೇ ಸಿಗದ ಶೃತಿಯೋ 
-------------------------------------------------------------------------------------------

ಪರಮೇಶಿ ಪ್ರೇಮ ಪ್ರಸಂಗ (೧೯೮೫) - ಪ್ರೀತಿ ಲೋಕದ ಸೂರ್ಯ ನೀನು 
ಸಂಗೀತ : ಜೆ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡ ರಂಗೇಗೌಡ, ಗಾಯನ : ರಾಜಕುಮಾರ ಭಾರತಿ, ಮಂಜುಳಾ ಗುರುರಾಜ 

ಹೆಣ್ಣು : ಪ್ರೀತಿ ಲೋಕದ ಸೂರ್ಯ ನೀನು ತೇಜ ರಾಶಿಯ ತಂದೆ ನೀನು 
           ಬಾರೋ ಕಂದ ನೀನೇ ನಮ್ಮ ಬಾಳ ಬೆಳಕು 
ಗಂಡು : ಪ್ರೀತಿ ಲೋಕದ ಸೂರ್ಯ ನೀನು ತೇಜ ರಾಶಿಯ ತಂದೆ ನೀನು 
           ಬಾರೋ ಕಂದ ನೀನೇ ನಮ್ಮ ಬಾಳ ಬೆಳಕು 

ಗಂಡು : ನೀ ಹೆಜ್ಜೆ ಇಡಲು ಕುಣಿದಂತೆ ನವಿಲು ನೀ ಓಡಿ ಬರಲು ಹರಿದಂತೆ ಹೊನಲು 
ಹೆಣ್ಣು : ಹೂವಂತೆ ನೀನು ನವಿರಾಗಿ ನಗಲು ಮಾತೆಲ್ಲ ಜೇನೋ ಸಂಗೀತ ತೊದಲು 
ಗಂಡು : ಕಣ್ತುಂಬ ಭಾವ...          ಹೆಣ್ಣು : ಮಿಂಚನ್ನೇ ತಂದ ... 
ಇಬ್ಬರು : ನಮ್ಮೆಲ್ಲ ಆಸೆ ಕನಸಾಗಿ ಬಂದ 
ಹೆಣ್ಣು : ಪ್ರೀತಿ ಲೋಕದ ಸೂರ್ಯ ನೀನು 
ಗಂಡು : ತೇಜ ರಾಶಿಯ ತಂದೆ ನೀನು 
ಇಬ್ಬರು : ಬಾರೋ ಕಂದ ನೀನೇ ನಮ್ಮ ಬಾಳಬೆಳಕು 

ಗಂಡು : ಏನೊಂದು ನೋವು ನೀ ಕಾಣದಂತೆ ಎಂದೆಂದೂ ನಲಿವು ಒಡನಾಡುವಂತೆ  
ಹೆಣ್ಣು : ನೀ ನಡೆವ ಹಾದಿ ಬಂಗಾರವಾಗಿ ನೀ ಚೆಂದ ಬದುಕೇ ಸಂತೋಷ ತುಳುಕಿ              
ಗಂಡು : ಉಲ್ಲಾಸ ಹುರುಪು        ಹೆಣ್ಣು : ನೀ ತೋರು ಕಂದ 
ಇಬ್ಬರು : ಶ್ರೀಗಂಧ ಕಂಪು ನೀ ಬೀರು ಕಂದ  
ಹೆಣ್ಣು : ಪ್ರೀತಿ ಲೋಕದ ಸೂರ್ಯ ನೀನು     ಗಂಡು : ತೇಜ ರಾಶಿಯ ತಂದೆ ನೀನು 
ಇಬ್ಬರು : ಬಾರೋ ಕಂದ ನೀನೇ ನಮ್ಮ ಬಾಳಬೆಳಕು 
ಹೆಣ್ಣು : ಆ ಆ ಆ ಅ... ಆಆಆಆ... 
ಇಬ್ಬರು : ಆ ಆ ಆ ಅ... ಆಆಆಆ...  ಲಾಲಾಲಾಲಾಲಾ 
             ಹೂಂಹೂಂಹೂಂಹೂಂಹೂಂ...  
------------------------------------------------------------------------------------------

ಪರಮೇಶಿ ಪ್ರೇಮ ಪ್ರಸಂಗ (೧೯೮೫) - ಉಪ್ಪಿಲ್ಲ ಮೆಣಸಿಲ್ಲ 
ಸಂಗೀತ : ಜೆ.ಕೆ.ವೆಂಕಟೇಶ, ಸಾಹಿತ್ಯ : ಎಂ.ಏನ್.ವ್ಯಾಸರಾವ, ಗಾಯನ : ರಾಜಕುಮಾರ ಭಾರತಿ, ಮಂಜುಳಾ ಗುರುರಾಜ 

ಗಂಡು : ತತ್ತದದೇ... ಲಲ್ಲಲಾ... ಹೂಂಹೂಂ ಹೂಂಹೂಂ ಹೂಂಹೂಂ ಲಲ್ಲಲಾ...
            ಉಪ್ಪಿಲ್ಲ ಮೆಣಸಿಲ್ಲ ತರಕಾರಿ ಏನಿಲ್ಲ ಎಣ್ಣಿಲ್ಲ ಬೆಣ್ಣಿಲ್ಲ ಕಾಯನ್ನು ತಂದಿಲ್ಲ 
             ಏನೂ ಮಾಡಲೀ ನಾನೂ ಏನ್ ಮಾಡಲೀ 
             ಬೆಂದಿಲ್ಲ ಇಂಗಿಲ್ಲ ಕರಬೇವು ಸೊಪ್ಪಿಲ್ಲ ಉಪ್ಪಿಲ್ಲ ಮೆಂತಿಲ್ಲ ದಾಲ್ಚಿನ್ನಿ ಚೂರಿಲ್ಲ 
             ಏನ್ ಮಾಡಲೀ ನಾನೂ ಏನ್ ಮಾಡಲೀ 
              ಹೇಳಮ್ಮ ಏನ್ ಮಾಡಲೀ ಸುತ್ತೂರ ಸಿಂಗಾರಿ ಸುರಸುಂದರಿ 
              ರಮಾಮಣಿ ಎಲ್ಲೆಲ್ಲೀ ಏನಿದೇ ಅಂತಾ ಸ್ವಲ್ಪ ಹೇಳೇ.. 
              ನನ್ ಕೈಗೇ ಏನ್ ಸಿಗತ್ತಾ ಇಲ್ವಲ್ಲೇ... 

ಹೆಣ್ಣು : ನಾಲ್ಕನೇ ಸಾಲಲ್ ಜೀರ್ಗೆ ತುಪ್ಪ  ಮೂರನೇ ಸಾಲಲ್ಲೇ ಸಾಸುವೇ ಡಬ್ಬ 
          ಅಲ್ಲಿ ನೋಡಪ್ಪ ಮುಂಚೆ ಬೇಳೆ ಹಾಕಪ್ಪ 
ಗಂಡು : ಏನೇನೇನನ .... ಏನು  
ಹೆಣ್ಣು : ನಾಲ್ಕನೇ ಸಾಲಲ್ ಜೀರ್ಗೆ ತುಪ್ಪ  ಮೂರನೇ ಸಾಲಲ್ಲೇ ಸಾಸುವೇ ಡಬ್ಬ 
          ಅಲ್ಲಿ ನೋಡಪ್ಪ ಅಯ್ಯೋ ಮುಂಚೆ ಬೇಳೆ ಹಾಕರೀ... 
ಗಂಡು : ಓಹೋ ಬೆಳೆ ಇಲ್ಲಿದಿಯೋ ...  
ಹೆಣ್ಣು : ಹ್ಹಾ... ಅದರಲ್ ಹುಳ ಇದೇ ... ಸ್ವಲ್ಪ ಆರಿಸಿ ಹಾಕಿ... 
ಗಂಡು : ಓ..  ಬರಿ ಆಲೂಗಡ್ಡೆ ಈರುಳ್ಳಿ ಇದೇ ಸಾಕೇನೇ 
ಹೆಣ್ಣು : ಅಯ್ಯೋ ಕೈಗೇ ಸಿಕ್ಕಿದ್ ಹಾಕಿ ಏನೋ ಒಂದ್ ಮಾಡ್ರೀ...  (ಸರೀ ...) 
          ನೀರ್ ಕುದಿತಾ ಇದೇ .. ಬೇಗ ಹಾಕ್ರೀ ... ಹ್ಹಾ... ಹಾಗೇ ಒಗ್ಗರಣೆನೂ ಹಾಕೊಳ್ಳಿ  .... 

ಗಂಡು : ಮೈಯ್ಯ ಮುಟ್ಟದಂತೇ ನೀ ನಲ್ಲಿ  ಕೂತೇ .. 
            ಪ್ರಾರಾಬ್ಧ ನಾನೇ ಕೈಯ್ಯ ಹೆಚ್ಚಿ ಕೊಂಡೇ 
ಹೆಣ್ಣು : ಬಳಿ ಇದ್ದರೇನೂ ಬರಲಾರೇ ನಾನು 
           ಮನಸೆಲ್ಲಾ ಅಲ್ಲೇ ಮನದಾಸೆ ಬಲ್ಲೆ 
ಗಂಡು : ರಗ್ಗಿಲ್ಲಾ.. ದಿಂಬಿಲ್ಲಾ.. ಜೊತೆಯಲ್ಲಿ ನೀನಿಲ್ಲ.. 
            ಏನ್  ಮಾಡಲೀ ನಾನೂ ಏನ್ ಮಾಡಲೀ 
             ಹೇಳಮ್ಮ ಏನ್ ಮಾಡಲೀ ಸುತ್ತೂರ ಸಿಂಗಾರಿ ಸುರಸುಂದರಿ 

ಹೆಣ್ಣು : ಸ್ನಾನಕ್ ಮುಂಚೆ ಕಾಡದಂತೇ, ಕಣ್ಣು ಹೊಂಚು ಹಾಕದಂತೆ  
          ನೀರು ಹಾಕಪ್ಪಾ.. ಸೀರೆ ತಂದು ನಿಲ್ಲಪ್ಪಾ... 
           ಸ್ನಾನಕ್ ಮುಂಚೆ ಕಾಡದಂತೇ, ಕಣ್ಣು ಹೊಂಚು ಹಾಕದಂತೆ  
           ನೀರು ಹಾಕಪ್ಪಾ.. ಸೀರೆ ತಂದು ನಿಲ್ಲಪ್ಪಾ... 

ಗಂಡು : ಮೈಯ್ಯ ಮೆಚ್ಚಕಾದು ಬೆಂಡಾಗಿ ಹೋದೇ... 
            ಮೈಯ್ಯ ತುಂಬಿ ಬಂದು ಆರೈಕೆ ಮಾಡ್ದೆ 
ಹೆಣ್ಣು : ತುಸು ಕೋಪ ತಳ್ಳಿ ಸಂತೋಷ ತಾಳಿ,  ಸಿಹಿ ಮಾತನಾಡಿ ಆಫೀಸಿಗೇ ಹೋಗಿ 
ಗಂಡು : ತೋಳನ್ನೂ ಬಳಸಿಲ್ಲ, ಸಿಹಿ ಮುತ್ತು ಕೊಟ್ಟಿಲ್ಲ 
            ಏನ್ ಮಾಡಲೀ ನಾನೂ ಏನ್ ಮಾಡಲೀ 
ಹೆಣ್ಣು : ಹೋಗಪ್ಪ ಆಫೀಸಿಗೇ ಪುಟ್ಟನಾಳ ಪರಮೇಶಿ ಬಸ್ ಸ್ಟಾಪಿಗೇ 
          ಹೋಗಪ್ಪ ಆಫೀಸಿಗೇ ಪುಟ್ಟನಾಳ ಪರಮೇಶಿ ಬಸ್ ಸ್ಟಾಪಿಗೇ 
ಗಂಡು : ಅಯ್ಯೋ... ಏನ್ ಮಾಡಲೀ ನಾನೂ ಏನ್ ಮಾಡಲೀ 
            ಏನೂ ಮಾಡಲೀ ಅಯ್ಯೋ... ನಾನೂ ಏನ್ ಮಾಡಲೀ                    
-------------------------------------------------------------------------------------------

No comments:

Post a Comment