- ಮೊದಲ ರಾತ್ರಿ ಇದು ಮರೆಯದ ರಾತ್ರಿ
- ಸ್ವಾಗತ ಸುಸ್ವಾಗತ
- ನಾನ್ ಯಾರು
- ರಾತ್ರಿ ತಂಪು
ಮನೇಲಿ ಇಲಿ ಬೀದೀಲಿ ಹುಲಿ (೧೯೯೧) - ಮೊದಲ ರಾತ್ರಿ ಇದು ಮರೆಯದ ರಾತ್ರಿ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು, ಮಂಜುಳಾ ಗುರುರಾಜ,
ಗಂಡು : ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮಧು ಚಂದ್ರದ ಸವಿಗನಸಿನ ಸಂಗಮ ರಾತ್ರಿ
ಬಾಳ ಪಯಣ ಜೊತೆ ಸೇರಿ ಸಾಗುವ ರಾತ್ರಿ
ಹೆಣ್ಣು : ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮಧು ಚಂದ್ರದ ಸವಿಗನಸಿನ ಸಂಗಮ ರಾತ್ರಿ
ಮಧುಮಗಳು ತನುಮನವ ಅರ್ಪಿಸೋ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಗಂಡು : ಏಳು ಎದ್ದೇಳು ಮೇಲೇಳು ಚಿನ್ನ ನಾನು ನೀನು ಸಮಾನ ಕೇಳು ಇನ್ನ
ಹೆಣ್ಣು : ತಾಳು ನೀ ತಾಳು ಸ್ವಲ್ಪ ನೀ ತಾಳು ಇನ್ನ ಮೈಯ್ಯೆಲ್ಲ ನೋಯುತಿದೆ ಕೇಳು ಚೆನ್ನ
ಗಂಡು : ಬಾ ಬಾ ಬಾ ಬಾ ಎಲ್ಲಿ ನೋವು ಎಲ್ಲಿ
ಗಂಡು : ಡಾರ್ಲಿಂಗ್ ಓ ಡಾರ್ಲಿಂಗ್
ಹೆಣ್ಣು : ಹನಿಮೂನಿಗೇ ಬಂದಾಗಲೇ ಸೊಂಟ ರಿಪೇರಿ ಆಯ್ತೆನ್ರೀ
ಹನಿಮೂನಿಗೇ ಬಂದಾಗಲೇ ಸೊಂಟ ರಿಪೇರಿ ಆಯ್ತೆನ್ರೀ
ಗಾಡಿ ಪಂಚರ್ ಹಾಕೋದ್ರಲ್ಲಿ ಬಾಡಿ ಬೆಂಡಾಗ್ ಹೋಯ್ತೆನ್ರೀ
ಗಾಡಿ ಪಂಚರ್ ಹಾಕೋದ್ರಲ್ಲಿ ಬಾಡಿ ಬೆಂಡಾಗ್ ಹೋಯ್ತೆನ್ರೀ
ರೀ ರೀ ರಾಮರಾಮ ರೀ ರೀ ರಾಮರಾಮ
ಗಂಡು : ಸ್ಟಾಪ್ ನಿಂತ್ಕ್ ಕೂತ್ಕೋ ಅಪ್ಕೋ ಬಿದ್ಕೋ... ಹಂಗೇ ...
ಸೂತ್ರದ ದಾರ ನಾ ಎಳೆದಾಗ ಬೋಂಬೆ ಹಾಗೆ ನೀ ಕುಣಿಬೇಕು
ನಾನು ಪುಂಗಿ ಊದಿದಾಗ ನೀ ಹೆಡೆಯ ಎತ್ತಿ ಆಡಬೇಕು
ಹೆಣ್ಣು : ಗೊತ್ತಾಯ್ತು
ಗಂಡು : ಬೇಗ ಬಾರೇ ಇಲ್ಲಿ ನನ್ನ ಮನಸ್ಸು ಕದ್ದ ಕಳ್ಳಿ
ಏನೂ ಗೊತ್ತಿಲ್ಲದ್ದಂಗೇ ನಟನ ಮಾಡೋ ಮಳ್ಳಿ
ಹೆಣ್ಣು : ಬೇಡ ಬೇಡ ರಾಯ ನೀ ಮಾಡಬೇಡ ಗಾಯ
ಬೇಡ ಬೇಡ ರಾಯ ನೀ ಮಾಡಬೇಡ ಗಾಯ
ಗಂಡು : ಆತರ ಏಕೆ ಹಿಂಗೇ ನಾ ಆಗದಿಲ್ಲ ಮಾಯ
ಆತರ ಏಕೆ ಹಿಂಗೇ ನಾ ಆಗದಿಲ್ಲ ಮಾಯ
-------------------------------------------------------------------------------------------------------------
ಮನೇಲಿ ಇಲಿ ಬೀದೀಲಿ ಹುಲಿ (೧೯೯೧) - ಸ್ವಾಗತ ಸುಸ್ವಾಗತ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮಂಜುಳಾ ಗುರುರಾಜ,
ಸ್ವಾಗತ ಸುಸ್ವಾಗತ ಸ್ವಾಗತ ಸುಸ್ವಾಗತ
ರಾಜ ಮಹಾರಾಜ ಬಾರಾ ನನ್ನ ರಾಜ
ಒಲವ ದೊರೆಯೇ ಚೆಲುವ ಖನಿಯೇ ಸ್ವಾಗತ
ಈ ನಿನ್ನ ದಾಸಿ ತಂದಂತ ಸೇವೆ ಕೈಗೊಳ್ಳೋ ಇನ್ನೂ ಪ್ರಿಯತಮ
ರಾಜ ಮಹಾರಾಜ ಬಾರಾ ನನ್ನ ರಾಜ
ಹಾಲಲ್ಲೇ ನಿನಗೆ ಅಭಿಷೇಕ ನೇಯ್ವೆ ಹೃದಯವನಿನ್ನ ಪಾದದೇ ಇಡುವೇ
ಪ್ರೇಮದ ಹೂವ ಅರ್ಚನೆಗೈವೇ ಹಗಲು ಇರುಳು ನಿನ್ನನೇ ನೆನೆವೆ
ಉಸಿರಲಿ ಉಸಿರನು ಬೆರೆಸುತ ಬಾರಾ ಮರೆಯದ ಒಲವಿನ ನಗೆ ಸುಮ ತಾರಾ
ಪ್ರೇಮಲೋಕದಲ್ಲಿ ವಿಹರಿಸೆನ್ನ ಜೊತೆ ಪ್ರಿತಿರಾಗದಲ್ಲಿ ಹಾಡು ನಮ್ಮ ಕಥೆ
ರಾಜ ಮಹಾರಾಜ ಬಾರಾ ನನ್ನ ರಾಜ
ಏಳು ಸ್ವರದಲೀ ಮೀಟು ಹೊಸದೊಂದು ಪ್ರೇಮ ರಸಕಾವ್ಯವ
ನೀನೇ ಮುನ್ನಡಿಯೂ ನೀನೇ ಹಿನ್ನುಡಿಯೂ ಶೃಂಗಾರಕೆ
ಪ್ರೇಮವೇ ಜೀವನ ಸತಿಪತಿ ಶೃತಿಲಯ ಬೆರೆತರೆ ಸಿಹಿಸಿಹಿ
ರಾಜ ಮಹಾರಾಜ ಬಾರಾ ನನ್ನ ರಾಜ
ನಮ್ಮ ಪ್ರೀತಿಯ ದೋಣಿ ಸಾಗಲಿ ಪ್ರೇಮ ತೀರಕೆ ಸೇರಲಿ
ನನ್ನ ನಿನ್ನಯ ಜೋಡಿ ಎಂದಿಗೂ ಹೀಗೆ ಸುಖದಲಿ ಬಾಳಲಿ
ಹೀಗೆ ಸುಖದಲಿ ಬಾಳಲಿ ಹೀಗೆ ಸುಖದಲಿ ಬಾಳಲಿ
ಹೀಗೆ ಸುಖದಲಿ ಬಾಳಲಿ
------------------------------------------------------------------------------------------------------------
ಮನೇಲಿ ಇಲಿ ಬೀದೀಲಿ ಹುಲಿ (೧೯೯೧) - ನಾನ್ ಯಾರು
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು,
ನಾ ಯಾರು ಗೊತ್ತೇನೂ ಮೈಕಲ್ ಜಾಕ್ಸನ್ನೂ
ಹಾಗಂತ ಹೇಳ್ತಾರೇ ನೋಡದೋರು ನನ್ನನ್ನೂ
ರಾಜ್ಯ ಆಳಲಿ ನಾನು ಚಾಲೆಂಜ್ ಮಾಡುವಿರೇನೂ
ಶೇಕ್ ಜೊತೆ ಜೊತೆಗೆ ಬ್ರೇಕ್ ಖುಷಿ ನನಗೆ
ನಾ ಯಾರು ಗೊತ್ತೇನೂ ಮೈಕಲ್ ಜಾಕ್ಸನ್ನೂ
ಹಾಗಂತ ಹೇಳ್ತಾರೇ ನೋಡದೋರು ನನ್ನನ್ನೂ
ಹೆಜ್ಜೆಗೂ ಹೆಜ್ಜೆ ಮೋಜು ನಾ ಡಿಸ್ಕೋ ಮಾಡುವಾಗ
ಸಪ್ಪೆಯೂ ಕುದುರೆಯ ಜೂಜು ಈ ಡಾನ್ಸಲ್ಲೀ ತುಂಬಿದೆ ವೇಗ
ಲಂಡನ್ ಪ್ಯಾರಿಸ್ ನಂಗೆಲ್ಲಾ ಒಂದೇ ನಿಲ್ಲೋರಿಲ್ಲ ನನ್ನಾಟದ ಮುಂದೆ
ಆಟಕೆ ಬೇಕು ಜೋಡಿ ಜೊತೆಯಾಗಲು ಬಾ ಬಾ ಓಡಿ
ಮೈಮರೆಸುವ ನೂತನ ಮೋಡಿ ಬೇಕಾದರೇ ಬಾ ಜೊತೆ ನೀಡಿ ಗೆಳತೀ
ನಾ ಯಾರು ಗೊತ್ತೇನೂ ಮೈಕಲ್ ಜಾಕ್ಸನ್ನೂ
ಹಾಗಂತ ಹೇಳ್ತಾರೇ ನೋಡದೋರು ನನ್ನನ್ನೂ
ರಾಜ್ಯ ಆಳಲಿ ನಾನು ಚಾಲೆಂಜ್ ಮಾಡುವಿರೇನೂ
ಶೇಕ್ ಜೊತೆ ಜೊತೆಗೆ ಬ್ರೇಕ್ ಖುಷಿ ನನಗೆ
ನಾ ಯಾರು ಗೊತ್ತೇನೂ ಮೈಕಲ್ ಜಾಕ್ಸನ್ನೂ
ಹಾಗಂತ ಹೇಳ್ತಾರೇ ನೋಡದೋರು ನನ್ನನ್ನೂ
ಜೀವನ ಸಾವಿರ ರಂಗು ಈ ಯೌವ್ವನ ಆಡೋವಾಗ
ಕಣ್ಣಲ್ಲಿ ಕನಸಿನ ಗುಂಗು ಮೈಯಿದು ತೂಗಿರುವಾಗ
ಪ್ರೇಮ ಬಂದ್ರೆ ಮೊದಲೆಲ್ಲ ಚೆಂದ ಮದುವೆಯಾದ್ರೆ ಆವ ಇಂಗು ತಿಂದ
ದೂರದೇ ಹೊಡೆದರೇ ಸೈಟು ನೀ ಹಿಡಿದಿರೋ ದಾರಿ ರೈಟು
ತಾಳಿ ಕಟ್ಟಿದ ನೈಟು ಪ್ರಾರಂಭ ಮುಗಿಯದ ಫೈಟು ಗೆಳೆಯ
ನಾ ಯಾರು ಗೊತ್ತೇನೂ ಮೈಕಲ್ ಜಾಕ್ಸನ್ನೂ
ಹಾಗಂತ ಹೇಳ್ತಾರೇ ನೋಡದೋರು ನನ್ನನ್ನೂ
ರಾಜ್ಯ ಆಳಲಿ ನಾನು ಚಾಲೆಂಜ್ ಮಾಡುವಿರೇನೂ
ಶೇಕ್ ಜೊತೆ ಜೊತೆಗೆ ಬ್ರೇಕ್ ಖುಷಿ ನನಗೆ
ನಾ ಯಾರು ಗೊತ್ತೇನೂ ಮೈಕಲ್ ಜಾಕ್ಸನ್ನೂ
ಹಾಗಂತ ಹೇಳ್ತಾರೇ ನೋಡದೋರು ನನ್ನನ್ನೂ
------------------------------------------------------------------------------------------------------------
ಮನೇಲಿ ಇಲಿ ಬೀದೀಲಿ ಹುಲಿ (೧೯೯೧) - ರಾತ್ರಿ ತಂಪು
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು, ಮಂಜುಳಾ ಗುರುರಾಜ,
ರಾತ್ರಿ ತಂಪು ಹೊತ್ತಲ್ಲಿ ಏನಾಯ್ತೋ ಈ ಮೈಯ್ಯಲ್ಲಿ
ಬೆಂಕಿ ಕೆಂಡ ಆಯ್ತಿಲ್ಲಿ ನಾ ತಾಳೆ ನೀ ನೋಡಲ್ಲಿ
ಹೀಗೇಕೆ ಆಯ್ತೋ ಅಮ್ಮಮ್ಮ ತಣ್ಣೀರು ಆವಿ ಆಯ್ತಮ್ಮಾ
ಬಾರೋ ಬಾರೋ ಈ ಬೇಗೆ ತೀರೋ
ರಾತ್ರಿ ತಂಪು ಹೊತ್ತಲ್ಲಿ ಏನೇನೋ ಹೊಸ ಮತ್ತಿಲ್ಲಿ
ನೋಡ್ತಾ ನೋಡ್ತಾ ಏರಿಳಿತ ನೂರಾಸೆ ಈ ನನ್ನಲ್ಲಿ
ಜೋರಾಗಿ ಅಪ್ಪು ನೀ ನನ್ನ ಹಿಂಡೋಕೆ ಒಪ್ಪು
ನಾ ನಿನ್ನನ್ನ ಚೆಂದ ಚೆಂದ ಈ ಆಟ ಚೆಂದ
ನಾಜೂಕು ನನ್ನ ಸೊಂಟ ಜೋಪಾನ ಮೇಲ್ಗೊ ತುಂಟ
ಏಯ್ ತೋಳೋ ಬಾಳೆದಿಂಡು ಹಿಡಿಯಂತು ನನ್ನ ಕಂಡು
ನಿನ್ನಾಟ ಈ ಚೆಲ್ಲಾಟ ಅಬ್ಬಬ್ಬಾ ಈ ಪುಂಡಾಟ
ಕೊಟ್ಟಂತ ಮುತ್ತು ಸವಿಜೇನಂಗಿತ್ತು ನಿನ್ನೋಳಗೆ ನಾನು ಸೇರೋದೇ
ರಾತ್ರಿ ತಂಪು ಹೊತ್ತಲ್ಲಿ ಏನಾಯ್ತೋ ಈ ಮೈಯ್ಯಲ್ಲಿ
ಬೆಂಕಿ ಕೆಂಡ ಆಯ್ತಿಲ್ಲಿ ನಾ ತಾಳೆ ನೀ ನೋಡಲ್ಲಿ
ಹೀಗೇಕೆ ಆಯ್ತೋ ಅಮ್ಮಮ್ಮ ತಣ್ಣೀರು ಆವಿ ಆಯ್ತಮ್ಮಾ
ಬಾರೋ ಬಾರೋ ಈ ಬೇಗೆ ತೀರೋ
ರಾತ್ರಿ ತಂಪು ಹೊತ್ತಲ್ಲಿ ಏನೇನೋ ಹೊಸ ಮತ್ತಿಲ್ಲಿ
ರಾತ್ರಿ ತಂಪು ಹೊತ್ತಲ್ಲಿ
ಏಯ್ ಏ ಒನ್ ಈಗ ಮೂಡು ಶಿವರಾತ್ರಿ ಇಂದು ನೋಡು
ಪೂಜೆ ಬೇಗ ಮಾಡು ಕೇಳಬೇಡ ನನ್ನ ಪಾಡು
ಕಣ್ಣಲ್ಲಿ ನನ್ನ ನೀ ಕೊಂದೆ ಹಣ್ಣಂಗೆ ನನ್ನ ನೀ ತಿಂದೆ
ಚಳಿಯೆಲ್ಲ ಹೋಯ್ತು ಕಾಮಾಗ್ನಿ ಬಂತು ನಿನ್ನೊಳಗೆ ನಾ ಸೇರೋದೇ
ರಾತ್ರಿ ತಂಪು ಹೊತ್ತಲ್ಲಿ ಏನಾಯ್ತೋ ಈ ಮೈಯ್ಯಲ್ಲಿ
ಬೆಂಕಿ ಕೆಂಡ ಆಯ್ತಿಲ್ಲಿ ನಾ ತಾಳೆ ನೀ ನೋಡಲ್ಲಿ
ಜೋರಾಗಿ ಅಪ್ಪು ನೀ ನನ್ನ ಹಿಂಡೋಕೆ ಒಪ್ಪು
ನಾ ನಿನ್ನನ್ನ ತಣ್ಣೀರು ಆವಿ ಆಯ್ತಮ್ಮ ಚೆಂದ ಚೆಂದ ಈ ಆಟ ಚೆಂದ
-------------------------------------------------------------------------------------------------------------
No comments:
Post a Comment