- ಊರೆಲ್ಲಾ ನಿನ್ನಾ ಹಿಂದೇ
- ನಲ್ಲೆಯ ಸವಿಮಾತೇ
- ಸನಿಹ ನೀನಿರಲೂ
- ಆಸೇ ಹೆಚ್ಚಾಗಿದೆ
ಇಂದಿನ ರಾಮಾಯಣ (೧೯೮೪) - ಊರೆಲ್ಲಾ ನಿನ್ನಾ ಹಿಂದೇ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಹೇ... ಹೇ... ರೂ...ರೂ...ರೂ...ರೂ...ಲ... ಲ... ಲ... ಲ... ಹ್ಹಾ... ಆ...ಆ...
ಹೇ... ಹೇ... ಊರೆಲ್ಲ ನಿನ್ನ ಹಿಂದೆ ನೀನು ನಗುವಾಗ
ಯಾರಿಲ್ಲ ನಿನ್ನ ಜೊತೆಗೆ ಸೋತು ಅಳುವಾಗ
ಈ ನಿಜವಾ ಅರಿತರೆ ನಿನಗಿಲ್ಲ ತೊಂದರೆ
ನೀ ಒಂಟಿ ಜೀವ ಎಂಬ ನಿಜವಾ ಮರೆತೀಯಾ ಜೋಕೆ
ಹೇ... ಹೇ... ಊರೆಲ್ಲ ನಿನ್ನ ಹಿಂದೆ ನೀನು ನಗುವಾಗ
ಆ ಆ ಆ ಅ ಅಹ್ಹಹ್ಹಾ...
ಹೇ...ಹೇ...ಹೇ...ಹೇ...
ಮರೆಯಲ್ಲಿ ತಪ್ಪನ್ನೂ ಮಾಡೋನಲ್ಲ
ಎಂದು ನಾನು ನೀನು ಬಲ್ಲೆಯೇನು ಅರೇ ... ನೀನು ಬಲ್ಲೆಯೇನು
ಗುಂಡನ್ನು ಹಾಕೋಕೆ ಎಂದು ನಾನು ನಾಚೋದಿಲ್ಲ
ನೋಡು ನನ್ನ ನೀನು ಅರೇ ... ನೋಡು ನನ್ನ ನೀನೂ
ಶಿವನಾಣೆ... ಹೇ... ಬಾಳಿನಲ್ಲಿ ಎಂದು ನಾನು ನಟನೆ ಮಾಡೆನು
ಆಯ್ ಕೆ ನಾಟ್ ಆಕ್ಟ್ ಮವಯಾನ್ ಬೀಲಿವ್ ಮೀ...
ಹೇ... ಹೇ... ಊರೆಲ್ಲ ನಿನ್ನ ಹಿಂದೆ ನೀನು ನಗುವಾಗ
ಆ ಆ ಆ ಅ ಅಹ್ಹಹ್ಹಾ... ಲಲಲಲಲಲಲಾ ಹೌದು
ಹೂ... ಹೂ... ಮಾತಲ್ಲಿ ಎಲ್ಲರು ನೀತಿ ಹೇಳೋರೇನೆ
ಇಲ್ಲಿ ಮಾತು ಸುಲಭ ತಾನೇ ಒಣ ಮಾತು ಸುಲಭ ತಾನೇ
ಕೈಯ್ಯ ತುಂಬಾ ಇರುವಾಗ ಎಲ್ಲಾ ನಿನ್ನ ಹಿಂದೆ ತಾನೇ
ಎಲ್ಲಾ ಹಣದ ಮಹಿಮೆ ತಾನೇ ಬರಿ ಹಣದ ಮಹಿಮೆ ತಾನೇ
ಶಿವನಾಣೆ... ಕಾಲ ಕೆಡಲು ಯಾರು ನಿನ್ನ ತಿರುಗಿ ನೋಡರು
ನೋ ಬಡಿ ವಿಲ್ ಲುಕ್ ಯಾಟ್ ಯೂ ಮ್ಯಾನ್
ಹೇ... ಹೇ... ಆ ಆ ಆ ಅ ಊರೆಲ್ಲ ನಿನ್ನ ಹಿಂದೆ ನೀನು ನಗುವಾಗ ಆ ಆ ಆ ಅ
ಯಾರಿಲ್ಲ ನಿನ್ನ ಜೊತೆಗೆ ಸೋತು ಅಳುವಾಗ ಹೂಂ.. ಹೂಂ..ಹೂಂ..ಹೂಂ..
ಈ ನಿಜವಾ ಅರಿತರೆ ನಿನಗಿಲ್ಲ ತೊಂದರೆ
ನೀ ಒಂಟಿ ಜೀವ ಎಂಬ ನಿಜವಾ ಮರೆತೀಯಾ ಜೋಕೆ
ಹೇ... ಹೇ... ಊರೆಲ್ಲ ನಿನ್ನ ಹಿಂದೆ ನೀನು ನಗುವಾಗ
ಹೇ... ಹೇ... ಹೂಂಹೂಂ
----------------------------------------------------------------------------------
ಇಂದಿನ ರಾಮಾಯಣ (೧೯೮೪) - ನಲ್ಲೆಯ ಸವಿಮಾತೇ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಗಂಡು : ಹೇ.. ಹೇಹೇ ... ಹೂ... ಹೂ... ಹೇ... ಲಾ... ಲಾಲಲಾಲಾ
ಆ... ಲಾಲ... ಲಲಲಲಲಾ
ನಲ್ಲೆಯಾ... ಸವಿ ಮಾತೆ ಚೆಂದವು
ಹೆಣ್ಣು : ನನ್ನ ನಲ್ಲನಾ... ನುಡಿಯೆಲ್ಲ ಅಂದವು
ಗಂಡು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಹೆಣ್ಣು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಗಂಡು : ಪ್ರೀತಿಯೋ... ಮೋಹವೋ... ಒಂದು ಕಾಣೆನು
ನಿನ್ನ ಸೇರಿ ಇಂದು ಜಗವನ್ನೇ ಮರೆತೆನು
ಹೆಣ್ಣು : ಸೂರ್ಯನೋ... ಚಂದ್ರನೋ... ಇನಿಯಾ ಅರಿಯೆನು...
ನಿನ್ನ ಪ್ರೀತಿ ಕಂಡು ಬೆರಗಾಗಿ ಹೋದೆನು
ಗಂಡು : ಹೀಗೆ ಅನುದಿನ ಲಲಲಾ... ಪಯಣ ಸಾಗಲಿ
ಹೆಣ್ಣು : ದಿನವೆಲ್ಲಾ... ಆನಂದವ ಬದುಕು ಕಾಣಲಿ
ಗಂಡು : ನಲ್ಲೆಯಾ... (ಲಾಲಾ) ಸವಿ ಮಾತೆ ಚೆಂದವು
ಹೆಣ್ಣು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಹೆಣ್ಣು : ಕಾಮನಬಿಲ್ಲನು ಕಂಡು ಬಾನಲಿ
ಆಸೇ ನೂರು ಬಂತು ನನಗಿಂದು ಎದೆಯಲಿ
ಗಂಡು : ಕಾಮನಬಿಲ್ಲನು ನಾನು ಕಂಡೇನು
ನಲ್ಲೆ ಇಂದು ನಿನ್ನ ಸೊಗಸಾದ ಕಣ್ಣಲಿ
ಹೆಣ್ಣು : ನನ್ನ ಚೆಲುವನು ಲಾಲಾಲಾ ಎಂಥ ರಸಿಕನೂ
ಗಂಡು : ನಿನ್ನಂಥ ನುಡಿ ಜಾಣೆಯಾ ಎಲ್ಲೂ ಕಾಣೇನೂ
ಹೆಣ್ಣು : ನನ್ನ ನಲ್ಲನಾ... ನುಡಿಯೆಲ್ಲ ಅಂದವು
ಗಂಡು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಇಬ್ಬರು : ಲಾ ಲಾ ಲಾ ಲಾ ಲಾ ಲಾ ಲಾ ಲಾ
----------------------------------------------------------------------------------
ಇಂದಿನ ರಾಮಾಯಣ (೧೯೮೪) - ಸನಿಹ ನೀನಿರಲೂ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮಂಜುಳಗುರುರಾಜ,
ಸನಿಹ ನೀನಿರಲೂ ವಿರಹ ದೂರಾಯ್ತು
ಸನಿಹ ನೀನಿರಲೂ ವಿರಹ ದೂರಾಯ್ತು
ಇಂಪಾಗಿ ಪ್ರೇಮ ಗೀತೆಯ ಮನವು ಹಾಡಿತು
ಇಂಪಾಗಿ ಪ್ರೇಮ ಗೀತೆಯ ಮನವು ಹಾಡಿತು
ಸನಿಹ ನೀನಿರಲೂ ವಿರಹ ದೂರಾಯ್ತು
ದೇವರು ತಂದ ಸಂಬಂಧ ನಿನ್ನ ಪ್ರೀತಿಯು ತಂದ ಆನಂದ
ದೇವರು ತಂದ ಸಂಬಂಧ ನಿನ್ನ ಪ್ರೀತಿಯು ತಂದ ಆನಂದ
ಎಂಥ ಹರುಷ ತಂದಿದೆ ಎಂಥ ಸೊಗಸ ನೋಡಿದೆ
ಎಂಥ ಹರುಷ ತಂದಿದೆ ಎಂಥ ಸೊಗಸ ನೋಡಿದೆ
ಎಂಥಾ ಸುಖವಾ ನೀಡಿದೆ...
ಸನಿಹ ನೀನಿರಲೂ ವಿರಹ ದೂರಾಯ್ತು
ರೂ ರೂ ರೂ ರೂ ರೂ ರೂ ರೂ ರೂ ರೂ ರೂ
ರೂ ರೂ ರೂ ರೂ ರೂ ರೂ ರೂ ರೂ ರೂ ರೂ
ಹೀಗೆಯೇ ಎಂದೂ ಇರುವಾಸೆ ನಿನ್ನ ಪ್ರೇಮಕೆ ಜೀವ ಕೊಡುವಾಸೆ
ನಿನ್ನೇ ಪೂಜೆ ಮಾಡುವೇ .. ನಿನ್ನೇ ನಂಬಿ ಬಾಳುವೆ
ನಿನ್ನೇ ಪೂಜೆ ಮಾಡುವೇ .. ನಿನ್ನೇ ನಂಬಿ ಬಾಳುವೆ
ಪ್ರೀತಿಯೊಂದೇ ಬೇಡುವೇ ...
ಸನಿಹ ನೀನಿರಲೂ ವಿರಹ ದೂರಾಯ್ತು
ಇಂಪಾಗಿ ಪ್ರೇಮ ಗೀತೆಯ ಮನವು ಹಾಡಿತು
ಇಂಪಾಗಿ ಪ್ರೇಮ ಗೀತೆಯ ಮನವು ಹಾಡಿತು
ಸನಿಹ ನೀನಿರಲೂ ವಿರಹ ದೂರಾಯ್ತು
---------------------------------------------------------------------------------
ಇಂದಿನ ರಾಮಾಯಣ (೧೯೮೪) - ಆಸೇ ಹೆಚ್ಚಾಗಿದೆ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಮಂಜುಳಾ ಗುರುರಾಜ,
ಹೇ... ರೂರು.. ರೂರು.. ರೂರು.. ರೂರು.. ಹೇ.. ತರರರರಾ...
ಹೇ... ಹೇ...ಹೇ...ಓ... ಹೇ... ಹ್ಹ... ಅಹ್ಹ... ಅಹ್ಹಹ್ಹಹಾ...
ಹೇ... ಹೇಹೇ ... ಹೇ... ಹೇಹೇ ... ಹೇ... ಹೇಹೇ ...
ಹೇ... ಹೇ ... ಆ... ಆ... ಆಸೇ ಹೆಚ್ಚಾಗಿದೇ ಓ ಓ ಓ ಓ ಮನಸ್ಸು ಹುಚ್ಚಾಗಿದೆ
ಇಂದೆಂದು ಹೀಗಿಲ್ಲಾ ಈ ರಾತ್ರಿ ಹಿತವಲ್ಲ ಮೈಯೆಲ್ಲಾ ಬಿಸಿಯಾಗಿದೆ
ಹೇ... ಇಂದೆಂದು ಹೀಗಿಲ್ಲಾ ಈ ರಾತ್ರಿ ಹಿತವಲ್ಲ ಮೈಯೆಲ್ಲಾ ಬಿಸಿಯಾಗಿದೆ
ಹೇ... ಹೇ ... ಆ... ಆ... ಆಸೇ ಹೆಚ್ಚಾಗಿದೇ
ಹೇ... ನನ್ನ ಮನದ ಕೂಗಿಗೆ ನನ್ನ ಎದೆಯ ನೋವಿಗೆ ಇಂದು ಈ ರಾತ್ರಿಗೆ...
ಆ... ನಾನು ನುಡಿವ ಮಾತಿಗೆ ನಾ ಕೊಡುವ ಪ್ರೀತಿಗೆ
ಹ್ಹಾ... ಇಂದು ಸಂತೋಷಕೆ ಜೋಡಿಯೊಂದು ಬೇಕೇ ಬೇಕು
ನಾನು ಮೋಡಿ ಹಾಕಬೇಕು... ಎಲ್ಲಿ ನೀ ಓಡುವೇ ... ಹೇ...ಹೇ...ಹೇ...ಹೇ...ಆ
ಆಹಾ... ಪರರಬಪಬಪರಬಪ ಆಸೆ ಹೆಚ್ಚಾಗಿದೆ... ಆ...ಆ...ಆ.. ಹ್ಹಾ...
ನೆನ್ನೆ ಕುಡಿದ ಬ್ರಾಂದಿಗೆ ಇಂದು ಮತ್ತು ಏರಿದೆ ಕಣ್ಣು ಕೆಂಪಾಗಿದೆ
ನನ್ನ ಹೊನ್ನ ಮೈಯ್ಯಿಗೆ ನಿನ್ನ ಮನದ ದಾಹಕೆ ಬೇಕು ಈ ಕಾಣಿಕೆ... ಆಹ್ಹಾ....
ಏಕೆ ಹೀಗೆ ದೂರ ನಿಂತೇ ತಾಳಲರೇ ನಿನ್ನ ಚಿಂತೆ ಬಾರೇ ನೀ ಬೇಗನೇ...
ಹೇ..ಹೇ..ಹೇ..ಹೇ..
ಆಹಾ ... ಆ... ಆ... ಆಸೇ ಹೆಚ್ಚಾಗಿದೇ ಆಹಾ... ಹ... ಆಹಾಹಾ... ಆ ಮನಸ್ಸು ಹುಚ್ಚಾಗಿದೆ
ಇಂದೆಂದು ಹೀಗಿಲ್ಲಾ ಈ ರಾತ್ರಿ ಹಿತವಲ್ಲ ಮೈಯೆಲ್ಲಾ ಬಿಸಿಯಾಗಿದೆ
ಹೇ... ಇಂದೆಂದು ಹೀಗಿಲ್ಲಾ ಈ ರಾತ್ರಿ ಹಿತವಲ್ಲ ಮೈಯೆಲ್ಲಾ ಬಿಸಿಯಾಗಿದೆ ಹ್ಹೂಂ...
----------------------------------------------------------------------------------
No comments:
Post a Comment