- ನಾಗರಾಜನೇ ನಾಗರಾಜನೇ
- ಹೊನ್ನ ತೇರಿನಲಿ
- ಹುಡುಕಾಟ
- ನಾಗರಹಾವೆ ಹಾವೋಳು ಹೂವೇ
- ದೇವಾ ನನಗೀಗ ಗತಿ ನೀನೇ
ಪೂಜಾಫಲ (೧೯೮೪) - ನಾಗರಾಜನೇ ನಾಗರಾಜನೇ
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಜಾನಕೀ
ನಾಗರಾಜನೇ ... ನಾಗರಾಜನೇ ... ನಾಗರಾಜನೇ ... ನಾಗರಾಜನೇ ...
ಬಾಳಲ್ಲಿ ಬಲು ನೊಂದೆನು ಕಣ್ಣಿರಲೇ ಮಿಂದೇನು
ಕಾಣದೆ ನಿನ್ನ ಓಡುತ ಬಂದೆ ದರುಶನ ನೀಡೆಯಾ

ನಾಗರಾಜನೇ ... ನಾಗರಾಜನೇ ...
ಯಾವುದೋ ಜನ್ಮದ ಪಾಪಕ್ಕೆ ಈ ಪರಿ ವೇದನೆ ಏಕೆ ನೀ ನೀಡುವೇ

ನೊಂದರೆ ನಾನು ಸಂತಸವೇನೂ...
ನೊಂದರೆ ನಾನು ಸಂತಸವೇನೂ
ಕರುಣಾಳು ನೀ ಹೇಳು ಇದು ನ್ಯಾಯವೇನು...
ನಾಗರಾಜನೇ ... ನಾಗರಾಜನೇ ...
ಬಾಳಲಿ ಕತ್ತಲೆ ತುಂಬಿದೆ ತಂದೆಯೇ ದಾರಿಯ ತೋರಿ ನಡೆಸೆನ್ನನು
ಪನ್ನಗರಾಯ ಬಾ ಮಹನೀಯ....
ಪನ್ನಗರಾಯ ಬಾ ಮಹನೀಯ ಮೊಗ ತೋರಿ ಹರಸೆನ್ನ ಕಾಪಾಡಲಾರೆಯಾ ...
ನಾಗರಾಜನೇ ... ನಾಗರಾಜನೇ ... ನಾಗರಾಜನೇ ... ನಾಗರಾಜನೇ ...
ಬಾಳಲ್ಲಿ ಬಲು ನೊಂದೆನು ಕಣ್ಣಿರಲೇ ಮಿಂದೇನು
ಕಾಣದೆ ನಿನ್ನ ಓಡುತ ಬಂದೆ ದರುಶನ ನೀಡೆಯಾ
ನಾಗರಾಜನೇ ... ನಾಗರಾಜನೇ ... ನಾಗರಾಜನೇ ... ನಾಗರಾಜನೇ ...
------------------------------------------------------------------------------------
ಪೂಜಾಫಲ (೧೯೮೪) - ಹೊನ್ನ ತೇರಿನಲಿ
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಹೊನ್ನ ತೇರಿನಲಿ ತೋರುತ ಅಂದ ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ

ಹಾಡದ ಬಾಯಿಗೆ ಹಾಡನು ತಂದ ನಮಗಾಗಿ ಬಂದೆ ಅಂದಾನ
ತಂದಾನ ಜಾಣರಂಗೆ ಬಂದಾನ ಊರ್ಗೆಲ್ಲಾ ಹೊಂಬೆಳಕ ತಂದಾನ

ಆ ದಿಬ್ಬದ ಮ್ಯಾಗಳದಿಂದ ದಿಬ್ಬಣ ತಂದ ಈ ದಿಬ್ಬಣ ಬಂದಾದ ಮೇಲೆ ಹಬ್ಬವೇ ಅಂದಾ

ನೀ ನಂಗೆ ಹೆಜ್ಜೇನು ಬೇಕಿಲ್ಲ ಹೆಚ್ಚೇನೂ ನೀನೊಮ್ಮೆ ನಕ್ಕಿಬಿಟ್ರೇ ನಂಗಾಗಿ ಕಲ್ಲ ಸಕ್ಕರೆ
ಇಂಥ ಅಂದ ಇಂಥ ಚೆಂದ ನಮ್ಗೆಲ್ಲಾ ಎಂತು ಕೊಟ್ಟಾನ
ತಂದಾನ ಜಾಣರಂಗೆ ಬಂದಾನ ಊರ್ಗೆಲ್ಲಾ ಹೊಂಬೆಳಕ ತಂದಾನ
ಹೋತ್ತನೋಡಿ ಮುತ್ತಿನ ಹಾರವ ಕಟ್ಟುತ ಬಂದಾ ಮುತ್ತಿನಿಂದಲೇ ಮೆಲ್ಲಮೆಲ್ಲನೆ ತಟ್ಟುವನೆಂದ

ಇಷ್ಟೊಂದು ಸಡಗರ ನಿಂಗ್ಯಾಕೋ ಸರದಾರ ಇನ್ಯಾಕೆ ನಂಗಿಲ್ಲ ಈ ಊರು ಬಲು ದೂರ
ಇದೇನೇ ಸುಗ್ಗಿ ಎನ್ನುತ ಹಿಗ್ಗಿ ಇಗಲೇನೆ ಲಗ್ಗೆ ಹಾಕ್ಯಾನಾ
ತಂದಾನ ಜಾಣರಂಗೆ ಬಂದಾನ ಊರ್ಗೆಲ್ಲಾ ಹೊಂಬೆಳಕ ತಂದಾನ
ಹೊನ್ನ ತೇರಿನಲಿ ತೋರುತ ಅಂದ ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ
ಹಾಡದ ಬಾಯಿಗೆ ಹಾಡನು ತಂದ ನಮಗಾಗಿ ಬಂದೆ ಅಂದಾನ
ತಂದಾನ ಜಾಣರಂಗೆ ಬಂದಾನ ಊರ್ಗೆಲ್ಲಾ ಹೊಂಬೆಳಕ ತಂದಾನ
ತಂದಾನ ಜಾಣರಂಗೆ ಬಂದಾನ ಊರ್ಗೆಲ್ಲಾ ಹೊಂಬೆಳಕ ತಂದಾನ
------------------------------------------------------------------------------------
ಪೂಜಾಫಲ (೧೯೮೪) - ಹುಡುಕಾಟ
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
-------------------------------------------------------------------------------------
ಪೂಜಾಫಲ (೧೯೮೪) - ನಾಗರಹಾವೆ ಹಾವೋಳು ಹೂವೇ
ಸಂಗೀತ : ಸತ್ಯಂ, ಸಾಹಿತ್ಯ : ಪಂಜೆ ಮಂಗೇಶರಾವ್, ಗಾಯನ : ಪಿ.ಸುಶೀಲಾ
-------------------------------------------------------------------------------------
ಪೂಜಾಫಲ (೧೯೮೪) - ದೇವಾ ನನಗೀಗ ಗತಿ ನೀನೇ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
-------------------------------------------------------------------------------------
No comments:
Post a Comment