- ಸಂಜೆ ಕೆಂಪು ಹಾಸಿ ತಂಪು ಗಾಳಿ ಬೀಸಿ
- ಚಿನ್ನ ಬಲು ಮೋಜದ ಅಂತೂ ಅಂತಿದೆ
- ಕೇಳು ತಮ್ಮಣ್ಣ ತಿಳಿಯೋ ತಿಮ್ಮಣ್ಣ
- ಸಿಂಗಾರ ಹೆಣ್ಣ ಕಂಡು
- ನಿನ್ನೇ ಏನೆಂದು ಇನ್ನೂ ಮರೆತಿಲ್ಲ
ಕಾಳಿಂಗ ಸರ್ಪ (೧೯೮೪) - ಸಂಜೆ ಕೆಂಪು ಹಾಸಿ ತಂಪು ಗಾಳಿ ಬೀಸಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಆಹಾ... ಸಂಜೆ ಕೆಂಪು ಹಾಸಿ ತಂಪು ಗಾಳಿ ಬೀಸಿ... ಮೇಯ್ಯೆಲ್ಲಾ ಝಲ್ಲೆಂದಿದೇ... ಓ...
ಏನೋ ಸಂತೋಷ... ಏನೋ ಉಲ್ಲಾಸ...
ಏನೋ ಸಂತೋಷ... ಏನೋ ಉಲ್ಲಾಸ...
ಏನೋ ಸಂತೋಷ... ಏನೋ ಉಲ್ಲಾಸ...
ಆಕಾಶ ಕೆಂಪಾಗಿದೆ ಈ ಭೂಮಿ ರಂಗಾಗಿದೆ ಹೊನ್ನ ಚೆಲ್ಲಿದಂತೆ ಬಣ್ಣ ಕೂಗಿದೆ..
ಬಾನಾಡಿ ಹಾರಾಡಿದೆ ಜೊತೆಗಾಗಿ ಹುಡುಕಾಡಿದೇ ...
ಗುಂಪು ಕೂಡಿಕೊಂಡು ಹಿಗ್ಗಿ ಹಾಡಿದೇ ...
ಗುಂಪು ಕೂಡಿಕೊಂಡು ಹಿಗ್ಗಿ ಹಾಡಿದೇ ...
ದುಂಬಿಯ ಗುಯ್ ಗುಯ್ ಗುಯ್ ಗುಯ್ ಗುಯ್ ಗುಯ್ ಗುಯ್ ಗುಯ್
ಗಾಳಿಯ ಸೂಯ್ಯ್ ಸೂಯ್ಯ್ ಸೂಯ್ಯ್ ಸೂಯ್ಯ್ ಸೂಯ್ಯ್ ಸೂಯ್ಯ್ ಸೂಯ್ಯ್
ಓ...ಓ... ಆ...ಆ... ಆಆಆಆಅ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್
ಓಹೋ ... ಆಹಾ... ಸಂಜೆ ಕೆಂಪು ಹಾಸಿ ತಂಪು ಗಾಳಿ ಬೀಸಿ... ಮೇಯ್ಯೆಲ್ಲಾ ಝಲ್ಲೆಂದಿದೇ... ಓ...
ಏನೋ ಸಂತೋಷ... ಏನೋ ಉಲ್ಲಾಸ... ತಾನೇ ತಂದಾನ ತಾನೇ ತಂದಾನ ತಾನೇ ತಂದಾನ
ಹಗಲಲ್ಲಿ ಅಲೆದಾಟವು ಇರುಳಲ್ಲಿ ಮೈಯ್ಯ ಭಾರವು ಬಾಡಿ ಹೋಯ್ತು ಮೊಗವು ಜೋಡಿ ಕಾಣದೆ
ಸಂಗಾತಿ ನೀನಿಲ್ಲದೇ ಸಂತೋಷ ಮನಕೆಲ್ಲಿದೇ ಒಂಟಿ ಹೆಣ್ಣು ನಿನ್ನ ದಾರಿ ಕಾದಿದೇ ...
ಒಂಟಿ ಹೆಣ್ಣು ನಿನ್ನ ದಾರಿ ಕಾದಿದೇ ...
ಸಾಗೋಣ ಸೈ ಸೈ ಸೈ ಸೈ ಸೈ ಸೈ ಸೈ ಸೈ ಸೈ ಸೈ
ಕುಣಿಯೋಣ... ಥೈ ಥೈ ಥೈ ಥೈ ಥೈ ಥೈ ಥೈ ಥೈ ಥೈ ಓಓ... ಆಆ ... ಓಹೋ .. ಹಾ....
ಹಯ್ಯಾ... ಆಹಾ... ಸಂಜೆ ಕೆಂಪು ಹಾಸಿ ತಂಪು ಗಾಳಿ ಬೀಸಿ... ಮೇಯ್ಯೆಲ್ಲಾ ಝಲ್ಲೆಂದಿದೇ... ಓ...
ಏನೋ ಸಂತೋಷ... ಏನೋ ಉಲ್ಲಾಸ... ತಾನೇ ತಂದಾನ ತಾನೇ ತಂದಾನ ತಾನೇ ತಂದಾನ
------------------------------------------------------------------------------------------
ಕಾಳಿಂಗ ಸರ್ಪ (೧೯೮೪) - ಚಿನ್ನ ಬಲು ಮೋಜದ ಅಂತೂ ಅಂತಿದೆ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಚಿನ್ನ ಬಲು ಮೋಜಾದ ಅಂಟು ಅಂಟಿದೆ ನಿನ್ನ ಜೊತೆ ನನ್ನನ್ನು ಗಂಟು ಹಾಕಿದೆ
ಕೈಯ್ಯಿಗೇ ಕೈಯ್ಯೇ... ಮೈಯ್ಯಿಗೇ ಮೈಯ್ಯಿ... ಕಣ್ಣಿಗೇ ಕಣ್ಣು... ಗಂಡಿಗೆ ಹೆಣ್ಣು
ಕೈಯ್ಯಿಗೇ ಕೈಯ್ಯೇ... ಮೈಯ್ಯಿಗೇ ಮೈಯ್ಯಿ... ಕಣ್ಣಿಗೇ ಕಣ್ಣು... ಗಂಡಿಗೆ ಹೆಣ್ಣು
ಅಂಟಿಂದಲೇ ಉಂಟಾದ ಬಂಧನ ನಂಟಿಂದಲೇ ಉಲ್ಲಾಸ ಜೀವನ
ಚಿನ್ನ ಬಲು ಮೋಜಾದ ಅಂಟು ಅಂಟಿದೆ
ನನಗೊಂದು ಕಾಣಿಕೆ ನೀಡೆಂದು ಬೇಡುವೆ
ನೀ ನನ್ನ ಬಿಟ್ಟರೆ ಬೇಕಾದ್ದು ನೀಡುವೆ
ಒಂದು ನೀ ತಂದೆ ನೂರು ನಾ ತಂದೆ ಬೇಕೇ ಇನ್ನೇನು ಹೇಳೆಂದೇ...
ಸಾಕು ಸಾಕಾಗಿ ಲಜ್ಜೆ ಮೈಯ್ಯಾಗಿ ಕೆನ್ನೆ ಕೆಂಪಾಗಿ ನಾ ನಿಂತೇ
ನಾ ಎಲ್ಲೇ ನಿಂತರು ಕಣ್ಣಲೇ ಕರೆಯುವೆ
ನಾ ಮುಂದೆ ಹೋದರು ನೀ ಹಿಂದೆ ನಡೆಯುವೆ
ನನ್ನ ನಿನ್ನಲ್ಲಿ ಬೇಧ ಇನ್ನೆಲ್ಲಿ ಜೋಡಿ ನಾವಾಗಿ ನಿಂತಾಗ
ಮಾತು ಒಂದಾಗೆ ಮನಸ್ಸು ಒಂದಾಗೆ ಕನಸ್ಸು ಒಂದಾಗಿ ಆದಾಗ...
ಈ ಪ್ರೇಮ ಬಂತಿಗ್ ಹೂವಂತೇ ...
ನಿನ್ನ ತೊರೆದೆಂದೆಂದು ದೂರ ಹೋಗೆನು
ನಿನ್ನ ಜೊತೆ ನಾ ನಿಂದು ಒಂದೇ ಅದೇನು
ಹಂಗೆ ಆಗಬೇಕು ಹುಲ್ಲು ಮುರಿಬೇಕು ನೀ ಅಳಬೇಕು ನಾ ನಗಬೇಕು
ಅಹ್ಹಹ್ಹಹ್ಹಾಹಾ... ಅಹ್ಹಹ್ಹಹ್ಹಾಹಾ... ಅಹ್ಹಹ್ಹಹ್ಹಾಹಾ... ಅಹ್ಹಹ್ಹಹ್ಹಾಹಾ...
ಅಂಟಿಂದಲೇ ಉಂಟಾದ ಬಂಧನ ನಂಟಿಂದಲೇ ಉಲ್ಲಾಸ ಜೀವನ
ಚಿನ್ನ ಬಲು ಮೋಜಾದ ಅಂಟು ಅಂಟಿದೆ
ಆಆ ಲಾಲಾಲಲಲ ಲಾಲಾಲಲಲ ಲಾಲಾಲಲಲ ಆ ಲಾಲಾಲಲಲ ಅ ಲಾಲಾಲಲಲ
ಹದಿನಾರು ಬಂದರೆ ನೂರಾರು ತೊಂದರೆ
ಏನೇನೋ ತಳಮಳ ಬಳಿ ನೀನು ಬಂದರೆ
ಇಂಥ ಮಾತೆಲ್ಲ ಒಳ್ಳೆದೇನಲ್ಲಾ ತಾಳಿ ಕಟ್ಟೋದೇ ಒಳ್ಳೇದು
ಕಾಲಕಾಲಕ್ಕೆ ಆಗಬೇಕಾದ್ದು ಆಗಬೇಕಾದ್ದೇ ಒಳ್ಳೇದು
ಬಿರುಗಾಳಿ ಬಂದರೂ ನಿನ್ನನ್ನೇ ನಂಬುವೇ
ಸಂದೇಹ ಏತಕೆ ನನ್ನನ್ನೇ ನೀಡುವೆ
ಹೆಣ್ಣು ಹೂವಂತೆ ಬಾಳ ಕಣ್ಣಂತೆ ಬಿಡದೆ ಕಾಪಾಡು ಜೋಪಾನ...
ಪ್ರೀತಿ ಬಲ್ಲೋನು ಹೃದಯ ಗೆದ್ದೋನು ಪೂಜೆ ಮಾಡೋನು ನಾ ನಿನ್ನ...
ಆವಾಗ ಈ ಬಾಳು ಜೇನಂತೇ ...
ನಿನ್ನ ತೊರೆದೆಂದೆಂದು ದೂರ ಹೋಗೆನು
ನಿನ್ನ ಜೊತೆ ನಾ ನಿಂದು ಒಂದೇ ಅದೇನು
ಹಂಗೆ ಆಗಬೇಕು ಹುಲ್ಲು ಮುರಿಬೇಕು ನೀ ಅಳಬೇಕು ನಾ ನಗಬೇಕು
ಅಹ್ಹಹ್ಹಹ್ಹಾಹಾ... ಅಹ್ಹಹ್ಹಹ್ಹಾಹಾ... ಅಹ್ಹಹ್ಹಹ್ಹಾಹಾ... ಅಹ್ಹಹ್ಹಹ್ಹಾಹಾ...
ಅಂಟಿಂದಲೇ ಉಂಟಾದ ಬಂಧನ ನಂಟಿಂದಲೇ ಉಲ್ಲಾಸ ಜೀವನ
ಚಿನ್ನ ಬಲು ಮೋಜಾದ ಅಂಟು ಅಂಟಿದೆ ನಿನ್ನ ಜೊತೆ ನನ್ನನ್ನು ಗಂಟು ಹಾಕಿದೆ
-------------------------------------------------------------------------------------------
ಕಾಳಿಂಗ ಸರ್ಪ (೧೯೮೪) - ಕೇಳು ತಮ್ಮಣ್ಣ ತಿಳಿಯೋ ತಿಮ್ಮಣ್ಣ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ ನನ್ ತಮ್ಮ ನೀನು ನಾನು ನಿಮ್ಮಣ್ಣ
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ ನನ್ ತಮ್ಮ ನೀನು ನಾನು ನಿಮ್ಮಣ್ಣ
ರಾಜ ಆಗಲೀ ಮಂತ್ರಿ ಆಗಲೀ ಲೀಡರ್ ಆಗಲೀ ಪ್ಲೀಡರ್ ಆಗಲೀ
ದೊಡ್ಡೋನಾಗಲೀ ಸಣ್ಣೋನಾಗಲೀ ತಪ್ಪು ಮಾಡಲಿ ಮಾಡದೇ ಹೋಗಲೀ
ಸಿಕ್ಕೊಂಡಮೇಲೆ ಕಂಬಿ ಎಣಿಸಬೇಕಣ್ಣ... ಆಹ್... ನಗ ನಗತಾ ನೋವ ಮರೆಯಬೇಕಣ್ಣ
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ ನನ್ ತಮ್ಮ ನೀನು ನಾನು ನಿಮ್ಮಣ್ಣ
ಶ್ರೀ ಕೃಷ್ಣನು ಜೈಲಲ್ಲೇ ಹುಟ್ಟಿದಂತೇ ಗಾಂಧೀ ನೆಹರೂನು ಇಲ್ಲಿದ್ದು ಹೋದರೇ ಅಂತೇ
ಶ್ರೀ ಕೃಷ್ಣನು ಜೈಲಲ್ಲೇ ಹುಟ್ಟಿದಂತೇ ಗಾಂಧೀ ನೆಹರೂನು ಇಲ್ಲಿದ್ದು ಹೋದರೇ ಅಂತೇ
ಹಿಂಗಿರಲೂ ನಮಗೇನು ಅವಮಾನವು ಅರಮನೆಯೋ... ಸೆರೆಮನೆಯೋ
ಬಂದು ಹೋಗೋ ನಮಗೆ ಇದೇ ತೌರು ಮನೆಯು
ಅಮ್ಮನ್ ಹೊಟ್ಟೆಲ್ ಒಂಬತ್ತ ಮಾಸ ಆಮೇಲ್ ಲೋಕದಲ್ ಕಷ್ಟದ ವಾಸ
ಸರಿಯಾಗಿ... ಹ್ಹಾ... ಸರಿಯಾಗಿ ಅರೆರೆರೆರೇ... ಸರಿಯಾಗಿ ನೋಡಿದ್ರೇಲ್ಲಾ ಜೈಲೇ ಕಾಣಣ್ಣ...
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ ನನ್ ತಮ್ಮ ನೀನು ನಾನು ನಿಮ್ಮಣ್ಣ... ಆಹ್ ...
ಮಾನವಾಗಿ ಹೊರಗೆ ದುಡಿಯೋ ಕೆಲಸ ಸಿಕ್ಕೋದಿಲ್ಲ
ಕೈಯ್ಯ ಚಳಕ ತೋರಿಸಿದರೇ ಒಳಕ್ಕೆ ತಳ್ಳತಾರಲ್ಲಾ...
ಅಲ್ಲಿಗೂ ಇಲ್ಲಿಗೂ ಬೇಧ ಇಲ್ಲಾ... ಒಳಗೆ ಬಂದು ಹೊರಗೆ ಹೋದರೇ
ಲೋಕದಲ್ಲೇ ಬಾಳೊಕ್ ನಮಗೆ ಜಾಗಾನೇ ಇಲ್ಲ
ಈ ನರಕಾನ ಸ್ವರ್ಗ ಅನ್ಕೊಂಡ್ ಇಲ್ಲಿನ ಸಜಾನ ಮಜಾ ಅನ್ಕೊಂಡ್
ಕೊಟ್ಟಿದ್ದೂ ... ಆ... ಕೊಟ್ಟಿದ್ದೂ ... ಇಲ್ಲಿ ಕೊಟ್ಟಿದ್ದು ತಿಂದು ಬಿದ್ಕೊಬೇಕಣ್ಣಾ ...
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ ನನ್ ತಮ್ಮ ನೀನು ನಾನು ನಿಮ್ಮಣ್ಣ
ರಾಜ ಆಗಲೀ ಮಂತ್ರಿ ಆಗಲೀ ಲೀಡರ್ ಆಗಲೀ ಪ್ಲೀಡರ್ ಆಗಲೀ
ದೊಡ್ಡೋನಾಗಲೀ ಸಣ್ಣೋನಾಗಲೀ ತಪ್ಪು ಮಾಡಲಿ ಮಾಡದೇ ಹೋಗಲೀ
ಸಿಕ್ಕೊಂಡಮೇಲೆ ಕಂಬಿ ಎಣಿಸಬೇಕಣ್ಣ... ಆಹ್... ನಗ ನಗತಾ ನೋವ ಮರೆಯಬೇಕಣ್ಣ
ಕೇಳೋ ತಮ್ಮಣ್ಣ ತಿಳಿಯೋ ತಿಮ್ಮಣ್ಣ ನನ್ ತಮ್ಮ ನೀನು ನಾನು ನಿಮ್ಮಣ್ಣ
ಲಾಲಾಲಾಲಾ... ಲಾಲಾಲಾಲಾ... ಲಾಲಾಲಾಲಾ... ಲಾಲಾಲಾಲಾ... ಲಾಲಾಲಾಲಾ...
------------------------------------------------------------------------------------------
ಕಾಳಿಂಗ ಸರ್ಪ (೧೯೮೪) - ಸಿಂಗಾರ ಹೆಣ್ಣ ಕಂಡು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಹೂಂ ಹೂಂ ಹೂಂ ಹೂಂ ಹೂಂ ಹೂಂ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಸಿಂಗಾರ ಹೆಣ್ಣ ಕಂಡು ಮಂಗನಂತೆ ಯಾಕೆ ನಿಂತೇ
ಸಂಗ ಕಟ್ಟು ಸೇರೋ ಬಾರೋ ಮಾವಾ ... ಲೋ.. ನೀನಿಲ್ದೇ ನಿಲ್ಲದಲ್ಲೋ ಜೀವ
ನನ್ನ ಕಣ್ಣಾಸೆ ಕರೆದೈತೆ ಬಾ... ನಿನ್ನ ಮನದಾಸೆ ಪೂರೈಸು ಬಾ ಮತ್ತೇರೋ ಮುತ್ತಾಗಿ ಬಾ...ಬಾ...
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಹ್ಹಾ.... ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಕಾಲ್ ಗೆಜ್ಜೆ ಘಲ್ ಎಂದೈತೆ ಕೈಯ್ಯ ಬಳೆಯು ಝಲ್ಲೆಂದೈತೆ
ಕಾಲ್ ಗೆಜ್ಜೆ ಘಲ್ ಎಂದೈತೆ ಕೈಯ್ಯ ಬಳೆಯು ಝಲ್ಲೆಂದೈತೆ
ನಿನ್ನ ಕಂಡು ನನ್ನ ಎದೆ ಜುಮ್ಮೆನ್ನದೈತೆ ಕಣ್ಣ ನೋಟ ಕಳೆಯಾಗೈತೇ
ಮೈಯ್ಯ ಮಾಟ ಮುಪ್ಪಾಗೈತೇ
ನನ್ನ ನಿನ್ನ ಮನ ಮನ ಒಂದಾಗೈತೇ
ಕಾಲ ಕೂಡೈತೆ ಗಾಳಿ ತೀಡೈತೆ ಮತ್ತೆ ಮತ್ತೆ ಸಂಗ ಸುಖ ಬೇಕಾಗೈತೇ ...
ಹ್ಹಾ... ಗೀ ಗೀ ಗೀ ಗೀ ಗೀ ಗೀ ಗೀ ಗೀ ಓಯ್ .... ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಸಿಂಗಾರ ಹೆಣ್ಣ ಕಂಡು ಮಂಗನಂತೆ ಯಾಕೆ ನಿಂತೇ
ಸಂಗ ಕಟ್ಟು ಸೇರೋ ಬಾರೋ ಮಾವಾ ... ಲೋ.. ನೀನಿಲ್ದೇ ನಿಲ್ಲದಲ್ಲೋ ಜೀವ
ಬಾರೋ ಬೇಗ ನನ್ನ ಧಣಿ ಆಹಾ... ಆಹಾ.. ನಾನೇ ನಿನ್ನ ಮುದ್ದಿನ ಗಿಣಿ... ಹೇಹೇಹೇ ..
ಬಾರೋ ಬೇಗ ನನ್ನ ಧಣಿ ಆಹಾ... ಆಹಾ.. ನಾನೇ ನಿನ್ನ ಗೀ...ಗೀ...ಗೀ...ಗಿಣಿ...
ಲಜ್ಜೆ ಬಿಟ್ಟು ಹೆಜ್ಜೆ ಹಾಕಿ ಜೊತೆಗೆ ಕುಣಿ ಹೋಯ್ಯಾ... ಹೋಯ್ಯಾ...
ನಾನು ನೀನು ಒಂದಾದರೇ ಏನು ಇಲ್ಲ ಮುಚ್ಚು ಮರೆ
ಎಲ್ಲ ನಿಜ ಒಳ್ಳೆ ಮಜಾ ಬಳಿ ಬಂದರೆ ಕಣ್ಣ ಹಾಕ್ತಾರೇ ಬಣ್ಣ ಕಟ್ಟತಾರೇ
ಎಲ್ಲಾ ತೊರೆ ನನ್ನ ಬೆರೆ ಬಾರೋ ದೊರೇ...
ಹಯ್ಯ್ ... ಗೀ ಗೀ ಗೀ ಗೀ ಗೀ ಗೀ ಗೀ ಗೀ ಓಯ್ ಓಯ್ .... ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಸಿಂಗಾರ ಹೆಣ್ಣ ಕಂಡು ಮಂಗನಂತೆ ಯಾಕೆ ನಿಂತೇ
ಸಂಗ ಕಟ್ಟು ಸೇರೋ ಬಾರೋ ಮಾವಾ ... ಲೋ.. ನೀನಿಲ್ದೇ ನಿಲ್ಲದಲ್ಲೋ ಜೀವ
ನನ್ನ ಕಣ್ಣಾಸೆ ಕರೆದೈತೆ ಬಾ... ನಿನ್ನ ಮನದಾಸೆ ಪೂರೈಸು ಬಾ ಮತ್ತೇರೋ ಮುತ್ತಾಗಿ ಬಾ...ಬಾ...
ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಹ್ಹಾ.... ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ ಗೀ
ಸಿಂಗಾರ ಹೆಣ್ಣ ಕಂಡು ಮಂಗನಂತೆ ಯಾಕೆ ನಿಂತೇ
ಸಂಗ ಕಟ್ಟು ಸೇರೋ ಬಾರೋ ಮಾವಾ ... ಲೋ.. ನೀನಿಲ್ದೇ ನಿಲ್ಲದಲ್ಲೋ ಜೀವ
ಓ... ತಂದಾನ... ತಾನ ತಂದಾನಾನನ
------------------------------------------------------------------------------------------
ಕಾಳಿಂಗ ಸರ್ಪ (೧೯೮೪) - ನಿನ್ನೇ ಏನೆಂದು ಇನ್ನೂ ಮರೆತಿಲ್ಲ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ನೆನ್ನೆ ಏನೆಂದು ಇನ್ನೂ ಮರೆತಿಲ್ಲ ನಾಳೆ ಹೇಗೆಂಬ ಭೀತಿ ನನಗಿಲ್ಲ
ನೆನ್ನೆ ಏನೆಂದು ಇನ್ನೂ ಮರೆತಿಲ್ಲ ನಾಳೆ ಹೇಗೆಂಬ ಭೀತಿ ನನಗಿಲ್ಲ
ನಾನೇ ಕಾಳಿಂಗ ಸರ್ಪ... ಕಾಳಿಂಗ ಸರ್ಪ... ಕಾಳಿಂಗ ಸರ್ಪ...
ನೆನ್ನೆ ಏನೆಂದು ಇನ್ನೂ ಮರೆತಿಲ್ಲ ನಾಳೆ ಹೇಗೆಂಬ ಭೀತಿ ನನಗಿಲ್ಲ
ನಾನೇ ಕಾಳಿಂಗ ಸರ್ಪ... ಕಾಳಿಂಗ ಸರ್ಪ... ಕಾಳಿಂಗ ಸರ್ಪ...
ಹರೆಯದ ಈ ಹೆಣ್ಣು ಕರೆಯುವ ಈ ಕಣ್ಣು ನಾನೆಲ್ಲೂ ಕಾಣೆನು ರಂಗಾದ ರೂಪ
ರಂಗೇರೋ ತಾಪ ನಾನಿಂದು ಕಂಡೇನು
ಕಣ್ಣಿನಲಿ ಮಿಂಚು ಮನಸಿನಲಿ ಸಂಚು ನಿನ್ನಾಸೆ ಬಲ್ಲೇನು...
ಮಾತಲ್ಲಿ ಮೋಹ ಮೋಜಲ್ಲಿ ದಾಹ ಏನೆಂದು ತಿಳಿದೇನು ...
ಮಾಡೋ ತುಂಟಾಟ ಆಡೋ ಚೆಲ್ಲಾಟ
ಕಾಡೋ ಕಳ್ಳಾಟ ನೋಡೋ ಮುನ್ನೋಟ ಬಲ್ಲೆ.. ಬಲ್ಲೆ.. ಬಲ್ಲೆ..
ಯಾರು ಏನೆಂದು ಬಲ್ಲೆ ನಾನೆಲ್ಲಾ ದಾರಿ ನೂರೊಂದು ಗೊತ್ತು ನನಗೆಲ್ಲಾ...
ನಾನೇ ಕಾಳಿಂಗ ಸರ್ಪ... ನಾನೇ ಕಾಳಿಂಗ ಸರ್ಪ...
ಬಡವರನೇ ಹೀರಿ ಸಿರಿತನವ ತೋರಿ ಮೆರೆಯೋರ ಬಲ್ಲೇನು
ಅನ್ಯಾಯ ಮಾಡಿ ಊರಿಂದ ಓಡಿ ಎಲ್ಲಿರಲಿ ಹಿಡಿವೆನು
ಹಗಲಿನಲೀ ವೇಷ... ಇರುಳಿನಲಿ ಮೋಸ ಮಾಡೋರ ಮುರಿವೇನು...
ಮರೆತಿಲ್ಲ ದ್ವೇಷ.. ಮುಗಿದಿಲ್ಲ ರೋಷ... ಹೋರಾಡಿ ತುಳಿವೆನು...
ಬಲ್ಲೆ ರಂಪಾಟ... ಬಲ್ಲೆ ಪುಂಡಾಟ...ಬಲ್ಲೆ ಮೊಂಡಾಟ... ಬಲ್ಲೆ ಬಂಡಾಟ...
ಬಲ್ಲೇ ... ಬಲ್ಲೇ ... ಬಲ್ಲೇ ... ಬಲ್ಲೇ ... ಬಲ್ಲೇ ...
ನೆನ್ನೆ ಏನೆಂದು ಇನ್ನೂ ಮರೆತಿಲ್ಲ ನಾಳೆ ಹೇಗೆಂಬ ಭೀತಿ ನನಗಿಲ್ಲ
ನಾನೇ ಕಾಳಿಂಗ ಸರ್ಪ... ಕಾಳಿಂಗ ಸರ್ಪ... ಕಾಳಿಂಗ ಸರ್ಪ...
-------------------------------------------------------------------------------------------
No comments:
Post a Comment