1799. ಶೃಂಗಾರ ಮಾಸ (೧೯೮೪)

ಶೃಂಗಾರ ಮಾಸ ಚಲನಚಿತ್ರದ ಹಾಡುಗಳು
  1. ಶಂಕೆಯೆಂಬ ಬೆಂಕಿ
  2. ಬಾ ಚಿನ್ನ ಬಾ
  3. ಬಂತಿದೋ ಶೃಂಗಾರ ಮಾಸ
  4. ಪ್ರೀತಿ ಕಾವಿಗೆ ಕರಗಿ
ಶೃಂಗಾರ ಮಾಸ (೧೯೮೪) - ಶಂಕೆಯೆಂಬ ಬೆಂಕಿ
ಸಂಗೀತ : ರಾಜೀವ ತಾರಾನಾಥ, ಸಾಹಿತ್ಯ : ಏನ್.ಎಸ್.ಲಕ್ಷ್ಮೀನಾರಾಯಣಭಟ್ಟ, ಗಾಯನ : ರಾಜೀವ ತಾರಾನಾಥ

ಶಂಕೆ ಎಂಬ ಬೆಂಕಿ ಸೋಕಿ ಬೇಯುವ ಮನ
ಮೌನವಾಗಿ ನರಳುತಿದೆ ಉರಿದು ಹೂಬನ
ಉರಿದು ಹೂಬನ 
ಶಂಕೆ ಎಂಬ ಬೆಂಕಿ ಸೋಕಿ ಬೇಯುವ ಮನ
ಮೌನವಾಗಿ ನರಳುತಿದೆ ಉರಿದು ಹೂಬನ
ಉರಿದು ಹೂಬನ

ಪಚ್ಚೆ ಕಾಡ ನಡುವೆ ಹರಿವ ಸ್ವಚ್ಛ ಧಾರೆಗೆ
ನೂರು ತಿರುವು ನೂರು ಇಳಿವು ಒಲುಮೆ ಬಾಳಿಗೆ
ಪಚ್ಚೆ ಕಾಡ ನಡುವೆ ಹರಿವ ಸ್ವಚ್ಛ ಧಾರೆಗೆ
ನೂರು ತಿರುವು ನೂರು ಇಳಿವು ಒಲುಮೆ ಬಾಳಿಗೆ
ನೂರು ತಿರುವು ನೂರು ಇಳಿವು ಒಲುಮೆ ಬಾಳಿಗೆ
ಶಂಕೆ ಎಂಬ ಬೆಂಕಿ ಸೋಕಿ ಬೇಯುವ ಮನ

ಜೀವ ಜೀವ ಹಾಡಿ ಎಣೆದ ಒಲುಮೆ ಗೂಡಿದು
ಬರಿದಾಗಿದೆ ಹೂಯ್ದಾಡಿದೆ ಸಣ್ಣ ಗಾಳಿಗೂ
ಜೀವ ಜೀವ ಹಾಡಿ ಎಳೆದ ಒಲುಮೆ ಗೂಡಿದು
ಬರಿದಾಗಿದೆ ಹೂಯ್ದಾಡಿದೆ ಸಣ್ಣ ಗಾಳಿಗೂ
ಸಣ್ಣ ಗಾಳಿಗೂ
ಶಂಕೆ ಎಂಬ ಬೆಂಕಿ ಸೋಕಿ ಬೇಯುವ ಮನ

ದುಃಖದ ಹಿಮ ಸುರಿದು ಕುಸಿದ ಮೊಲ್ಲೆ ಹೂವನು
ಪ್ರೇಮದ ಹೊಂಬಿಸಿಲು ಹರಿಸಿ ಕಾಯ್ದುಕೊಳ್ಳುವೆನು
ದುಃಖದ ಹಿಮ ಸುರಿದು ಕುಸಿದ ಮೊಲ್ಲೆ ಹೂವನು
ಪ್ರೇಮದ ಹೊಂಬಿಸಿಲು ಹರಿಸಿ ಕಾಯ್ದುಕೊಳ್ಳುವೆನು
ಪ್ರೇಮದ ಹೊಂಬಿಸಿಲು ಹರಿಸಿ ಕಾಯ್ದುಕೊಳ್ಳುವೆನು
ಶಂಕೆ ಎಂಬ ಬೆಂಕಿ ಸೋಕಿ ಬೇಯುವ ಮನ
ಮೌನವಾಗಿ ನರಳುತಿದೆ ಉರಿದು ಹೂಬನ
ಉರಿದು ಹೂಬನ
ಶಂಕೆ ಎಂಬ ಬೆಂಕಿ ಸೋಕಿ ಬೇಯುವ ಮನ
---------------------------------------------------------------------------------------------------------------

ಶೃಂಗಾರ ಮಾಸ (೧೯೮೪) - ಬಾ ಚಿನ್ನ ಬಾ
ಸಂಗೀತ : ಕೋನಾರ್ಕ, ಸಾಹಿತ್ಯ : ಮನು ಆಚಾರ, ಗಾಯನ : ಮಧುಲಿಕ

---------------------------------------------------------------------------------------------------------------

ಶೃಂಗಾರ ಮಾಸ (೧೯೮೪) - ಬಂತಿದೋ ಶೃಂಗಾರ ಮಾಸ
ಸಂಗೀತ : ರಾಜೀವ ತಾರಾನಾಥ, ಸಾಹಿತ್ಯ : ದ.ರಾ.ಬೇಂದ್ರೆ, ಗಾಯನ : ವಾಣಿಜಯರಾಂ

ಬಂತಿದೋ ಶೃಂಗಾರ ಮಾಸ ತಂತು ನಕ್ಕ ಚಂದ್ರಹಾಸ
ಎಂತು ತುಂಬಿದಾಕಾಶ ಕಂಡವರನು ಹರಸಲೂ
ಬಂತಿದೋ ಶೃಂಗಾರ ಮಾಸ ತಂತು ನಕ್ಕ ಚಂದ್ರಹಾಸ

ಗಂಗೆ ಯಮುನೆ ಕೂಡಿ ಹರಿದು ಸಂಗಮ ಜಲ ಇಳಿದು ಕರೆದು
ಗಂಗೆ ಯಮುನೆ ಕೂಡಿ ಹರಿದು ಸಂಗಮ ಜಲ ಇಳಿದು ಕರೆದು
ತಿಂಗಳ ನಗೆ ಮೀರಿ ಒರಿದು
ತಿಂಗಳ ನಗೆ ಮೀರಿ ಒರಿದು ಬೇರೆ ಮಿರುಗು ನೀರಿದು
ಬಂತಿದೋ ಶೃಂಗಾರ ಮಾಸ ತಂತು ನಕ್ಕ ಚಂದ್ರಹಾಸ

ನಾನು ನೀನು ಜೊತೆಗೆ ಬಂದು ಈ ನದಿಗಳ ತಡಿಗೆ ನಿಂದು
ನಾನು ನೀನು ಜೊತೆಗೆ ಬಂದು ಈ ನದಿಗಳ ತಡಿಗೆ ನಿಂದು
ಅನುರಾಗದಿಂದ ಇಂದು
ಅನುರಾಗದಿಂದ ಇಂದು ದೀಪ ತೇಲಿ ಬಿಟ್ಟೆವೇ
ದೀಪ ತೇಲಿ ಬಿಟ್ಟೆವು... ದೀಪ ತೇಲಿ ಬಿಟ್ಟೆವು
ಬಂತಿದೋ ಶೃಂಗಾರ ಮಾಸ ತಂತು ನಕ್ಕ ಚಂದ್ರಹಾಸ
ಎಂತು ತುಂಬಿದಾಕಾಶ ಕಂಡವರನು ಹರಸಲೂ ಬಂತಿದೋ ಶೃಂಗಾರ ಮಾಸ
---------------------------------------------------------------------------------------------------------------

ಶೃಂಗಾರ ಮಾಸ (೧೯೮೪) - ಪ್ರೀತಿ ಕಾವಿಗೆ ಕರಗಿ
ಸಂಗೀತ : ರಾಜೀವ ತಾರಾನಾಥ, ಸಾಹಿತ್ಯ : ಗೋಪಾಲ ಕೃಷ್ಣ ಅಡಿಗ, ಗಾಯನ : ರಾಜೀವ ತಾರಾನಾಥ

---------------------------------------------------------------------------------------------------------------

No comments:

Post a Comment