1800. ಬಾಳೊಂದು ಉಯ್ಯಾಲೆ (೧೯೮೫)

ಬಾಳೊಂದು ಉಯ್ಯಾಲೆ ಚಲನಚಿತ್ರದ ಹಾಡುಗಳು 
  1. ಇರಲೀ ಹೋಗೆ ಗಯ್ಯಾಳಿ 
  2. ನೀನೋ ನಾನೋ ನೋಡಿಬಿಡುವಾ 
  3. ತಪ್ಪು ಮಾಡಿದೆ ಒಪ್ಪಿಕೊಳ್ಳುವೇ 
  4. ಬಾಳಲ್ಲಿ ಇಂಥ ಸಮಯ 
ಬಾಳೊಂದು ಉಯ್ಯಾಲೆ (೧೯೮೫) - ಇರಲೀ ಹೋಗೆ ಗಯ್ಯಾಳಿ 
ಸಂಗೀತ : ಎಂ.ಎಸ್.ವಿಶ್ವನಾಥನ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಮೇಶ, ಎಲ್.ಆರ್.ಈಶ್ವರಿ 

ಗಂಡು : ಮುಚ್ಚು ಬಾಯಿ...               ಹೆಣ್ಣು : ಹೇ... ಹೇಟ್ ಯೂ... 
ಗಂಡು : ಪಾಠ ಕಲಿಸ್ತೀನಿ ಕಣೇ ... 
            ಹೇ... ಇರಲಿ ಹೋಗೆ ಗಯ್ಯಾಳಿ ನೀ ಅಮ್ಮನ ಹಾಗೆಯೇ ಮನೆಹಾಳಿ 
            ಹೇ... ಇರಲಿ ಹೋಗೆ ಗಯ್ಯಾಳಿ ನೀ ಅಮ್ಮನ ಹಾಗೆಯೇ ಮನೆಹಾಳಿ 
ಹೆಣ್ಣು : ಇಡಿಯೆಟ್...                      ಗಂಡು : ನೀನು... 
ಹೆಣ್ಣು : ಫೂಲ್...                           ಗಂಡು : ನೀನೇ... 
ಹೆಣ್ಣು : ರಾಸ್ಕಲ್... 

ಹೆಣ್ಣು : ಯೂ.... ಸ್ಕೌನ್ಡ್ರಲ್..... 
ಗಂಡು : ನಕ್ಷೆಯಲ್ಲಿ ಕೂಡ ಲಂಡನ್ ನೋಡಲಿಲ್ಲ ನೀನು 
            ತಾಯಿ ಭಾಷೆಯನ್ನು ಕಪಿಯೇ ಮರೆತು ಹೋದೆಯೇನೂ...   
ಹೆಣ್ಣು : ಆಹಾ... ನನ್ನ ಭಾಷೆಯಲ್ಲೇ ನಿನ್ನ ಬಯ್ಯಬೇಕೇ ನಾನೂ 
          ಮಂಕ ಮೂರ್ಖ ನೀನು ಪಾಪಿ ಸೊಂಟ ಮುರಿಯಲೇನು 
ಗಂಡು : ತಾಯಂತೆ ಮಗಳು ಎಂಬ ಗಾದೆ ಮಾತು ನಿಜವೇ ಆಯ್ತು 
            ನಿನಗೆ ಕೊಬ್ಬು ಜಾಸ್ತಿ ಆಯ್ತು... ಬಜಾರೀ ... 
ಹೆಣ್ಣು : ಓದೋಕೆ ಪುರಸತ್ತಿಲ್ಲ ಬಿಟ್ಟಿ ಅನ್ನ ತಿಂದು ಬೊಜ್ಜು ಮೈಯ್ಯ ಬೆಳೆಸಿಕೊಂಡ ಸೋಮಾರೀ ... 
ಗಂಡು : ಹೇಯ್ ...                        ಹೆಣ್ಣು : ಆಹಾ... 
ಹೆಣ್ಣು : ಹೇ... ಇರಲಿ ಹೋಗೋ ತಲೆಹರಟೆ ನಿನ್ನ ಬಾಯಿಗೆ ಹಾಕುವೆ ನಾ ಬಿರಟೆ 
          ಹೇ... ಇರಲಿ ಹೋಗೋ ತಲೆಹರಟೆ ನಿನ್ನ ಬಾಯಿಗೆ ಹಾಕುವೆ ನಾ ಬಿರಟೆ 
ಗಂಡು : ಮಾನ ಇದೇಯಾ...          ಹೆಣ್ಣು : ಮರ್ಯಾದೆ ಇದೇಯಾ ... 
ಗಂಡು : ರೋಷ ಇದೇಯಾ...         ಹೆಣ್ಣು : ಗೌರವ ಇದೇಯಾ... 
ಗಂಡು : ಅಯ್ಯೋ... ನೀನೊಂದು ಹೆಂಗ್ಸ.... 

ಹೆಣ್ಣು : ಹೆಣ್ಣು ಹುಡುಗಿ ಕೈಯಲ್ಲೀ ಹೀಗೆ ಜಗಳವಾಡುವೆಯಾ 
          ಮಾನವಿಲ್ಲವೆಂದು ಒಪ್ಪಿ  ತಲೆಯ ತಗ್ಗಿಸುವೇಯಾ 
ಗಂಡು : ಹೇ... ಹೆಣ್ಣು ಎಂದು ನಿನ್ನ ಮಂಕೆ ಹೇಳುವರಾರಿಲ್ಲ      
            ಮೀಸೆ ಒಂದು ಕಮ್ಮಿ ಹುಡುಗಿ ಬೇರೆ ಏನಿಲ್ಲಾ... 
ಹೆಣ್ಣು : ಮಾತಾಡಬೇಡ ಇನ್ನೂ ಕಣ್ಣು ಕಣ್ಣು ಬಿಟ್ಟುಕೊಂಡು 
          ಬಾಯಿ ಸೊಟ್ಟ ಮಾಡಿಕೊಂಡ ಕಮಂಗಿಯೇ... 
ಗಂಡು : ಸಾಕಿನ್ನೂ ದೂರ ನಿಲ್ಲು ಎಮ್ಮೆಯಂತೆ ನುಗ್ಗಬೇಡ 
            ಕತ್ತೆಯಂತೆ ಕೂಗಬೇಡ ಬಜಾರೀ ... ಹೇ... 
ಹೆಣ್ಣು : ಆಹಾ...                    ಗಂಡು: ಹೇ... ಹೇಯ್ ... 
ಗಂಡು : ಹೇ... ಇರಲಿ ಹೋಗೆ ಗಯ್ಯಾಳಿ ನೀ ಅಮ್ಮನ ಹಾಗೆಯೇ ಮನೆಹಾಳಿ 
ಹೆಣ್ಣು : ಹೇ... ಇರಲಿ ಹೋಗೋ ತಲೆಹರಟೆ ನಿನ್ನ ಬಾಯಿಗೆ ಹಾಕುವೆ ನಾ ಬಿರಟೆ 
ಗಂಡು : ಮಾನ ಇದೇಯಾ...          ಹೆಣ್ಣು : ಮರ್ಯಾದೆ ಇದೇಯಾ ... 
ಗಂಡು : ರೋಷ ಇದೇಯಾ...         ಹೆಣ್ಣು : ಗೌರವ ಇದೇಯಾ... 
ಗಂಡು : ಅಯ್ಯೋ... ನೀನೊಂದು ಹೆಂಗ್ಸ.... 
------------------------------------------------------------------------------------------------------  

ಬಾಳೊಂದು ಉಯ್ಯಾಲೆ (೧೯೮೫) - ನೀನೋ ನಾನೋ ನೋಡಿಬಿಡುವಾ 
ಸಂಗೀತ : ಎಂ.ಎಸ್.ವಿಶ್ವನಾಥನ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಮೇಶ, ಏಸುದಾಸ್ 

ನೀನೋ ನಾನೋ ನೋಡೇ ಬಿಡುವಾ ಅವಸರವೇಕೆ ನಿನಗೀಗ... 
ಆಹಾ... ಕಮಾನ್ ಕ್ಲ್ಯಾಪ್...   ಒನ್ .. ಟೂ... ತ್ರೀ ... ಫೋರ್... 
ನೀನೋ ನಾನೋ ನೋಡೇ ಬಿಡುವಾ
ನೀನೋ ನಾನೋ ನೋಡೇ ಬಿಡುವಾ ಅವಸರವೇಕೆ ನಿನಗೀಗ... 
ಹೇ ಹೇ... ಹೇ ಹೇ ಹೇ ಹೇ...   ಆಹ್ಹಾ... 
ನೀನೋ ನಾನೋ ನೋಡೇ ಬಿಡುವಾ ಅವಸರವೇಕೆ ನಿನಗೀಗ... 
ನ್ಯಾಯವ ಯಾರೇ ಎದುರಿಸಲಿ ಗೆಲ್ಲುವುದಿಲ್ಲ ಬದುಕಿನಲಿ 
ನ್ಯಾಯವ ಯಾರೇ ಎದುರಿಸಲಿ ಗೆಲ್ಲುವುದಿಲ್ಲ ಬದುಕಿನಲಿ... ಹೇ... 
 
ಹೆಣ್ಣು ಎಂದೂ ತಲೆಯನು ತಗ್ಗಿಸೇ ಬಾಳಲಿ ಎನ್ನುವುದಿಲ್ಲ... 
ಹೆಣ್ಣು ಎಂದೂ ತಲೆಯನು ತಗ್ಗಿಸೇ ಬಾಳಲಿ ಎನ್ನುವುದಿಲ್ಲ
ಧನ ಮದದಿಂದ ಗರ್ವದಿ ಮೆರೆವುದು ಅವಳಿಗೆ ಭೂಷಣವಲ್ಲ 
ಧನ ಮದದಿಂದ ಗರ್ವದಿ ಮೆರೆವುದು ಅವಳಿಗೆ ಭೂಷಣವಲ್ಲ 
ಅಲ್ಪನಿಗೆ ಸಿರಿ ಬಂದರೆ ರಾತ್ರಿಯೂ ಕೊಡೆಯನು ಹಿಡಿದೆ ನಿಲುವಾ 
ಅಲ್ಪನಿಗೆ ಸಿರಿ ಬಂದರೆ ರಾತ್ರಿಯೂ ಕೊಡೆಯನು ಹಿಡಿದೆ ನಿಲುವಾ 
ಗೌರವ ಘನತೆಯ ಮರೆತವನಂತೇ ಎಲ್ಲರ ಕಾಲಲಿ ಒದೆವ ...  
ಆಹ್ಹಾಹ...  ಎಲ್ಲರ ಕಾಲಲಿ ಒದೆವ ...  
ನೀನೋ ನಾನೋ ನೋಡೇ ಬಿಡುವಾ 
ನೀನೋ ನಾನೋ ನೋಡೇ ಬಿಡುವಾ ಅವಸರವೇಕೆ ನಿನಗೀಗ... 
ನ್ಯಾಯವ ಯಾರೇ ಎದುರಿಸಲಿ ಗೆಲ್ಲುವುದಿಲ್ಲ ಬದುಕಿನಲಿ 
ನ್ಯಾಯವ ಯಾರೇ ಎದುರಿಸಲಿ ಗೆಲ್ಲುವುದಿಲ್ಲ ಬದುಕಿನಲಿ... ಹೇ... 

ಯಾರದೋ ಯಾರಿಗೋ ಗರ್ವ ಯಾರಿಗೂ ನೆಮ್ಮದಿ ಇಲ್ಲಾ... 
ಯಾರದೋ ಯಾರಿಗೋ ಗರ್ವ ಯಾರಿಗೂ ನೆಮ್ಮದಿ ಇಲ್ಲಾ... 
ಈ ಅಧಿಕಾರಕೆ ಎಂದಿಗೇ ಕೊನೆಯೋ ಆ... ಈಶ್ವರನೇ ಬಲ್ಲ... 
ಈ ಅಧಿಕಾರಕೆ ಎಂದಿಗೇ ಕೊನೆಯೋ ಆ... ಈಶ್ವರನೇ ಬಲ್ಲ... 
ಕುದರೆಯ ಪಳಗಿಸೇ ಚಾವುಟಿಗಿಂತಾ ಬೇರೆ ಅಸ್ತ್ರವೂ ಇಲ್ಲಾ ... 
ಕುದರೆಯ ಪಳಗಿಸೇ ಚಾವುಟಿಗಿಂತಾ ಬೇರೆ ಅಸ್ತ್ರವೂ ಇಲ್ಲಾ ... 
ಜಂಭದ ಕೋಳಿಯ ಸೊಕ್ಕನ್ನು ಮುರಿಯಲು ನಮ್ಮನು ಬಿಟ್ಟರೇ ಇಲ್ಲ...  
ಅಹ್... ನಮ್ಮನು ಬಿಟ್ಟರೇ ಇಲ್ಲ...  
ನೀನೋ ನಾನೋ... ಅರೇ ...  ನೋಡೇ ಬಿಡುವಾ 
ನೀನೋ ನಾನೋ ನೋಡೇ ಬಿಡುವಾ ಅವಸರವೇಕೆ ನಿನಗೀಗ... 
ನ್ಯಾಯವ ಯಾರೇ ಎದುರಿಸಲಿ ಗೆಲ್ಲುವುದಿಲ್ಲ ಬದುಕಿನಲಿ 
ನ್ಯಾಯವ ಯಾರೇ ಎದುರಿಸಲಿ ಗೆಲ್ಲುವುದಿಲ್ಲ ಬದುಕಿನಲಿ... ಹೇ... 
-----------------------------------------------------------------------------------------------------  

ಬಾಳೊಂದು ಉಯ್ಯಾಲೆ (೧೯೮೫) - ತಪ್ಪು ಮಾಡಿದೆ ಒಪ್ಪಿಕೊಳ್ಳುವೇ 
ಸಂಗೀತ : ಎಂ.ಎಸ್.ವಿಶ್ವನಾಥನ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಮೇಶ, 

ತಪ್ಪು ಮಾಡಿದೆ ಒಪ್ಪಿಕೊಳ್ಳುವೇ 
ಹೇ... ತಪ್ಪು ಮಾಡಿದೆ ಒಪ್ಪಿಕೊಳ್ಳುವೇ ಮುದ್ದು ಅರಗಿಣಿ ಸಿಡುಕಬೇಡವೇ... 
ಕಲಹ ಏತಕೆ ನಮಗೆ ವಿರಹ ಏತಕೆ... 
ಕಲಹ ಏತಕೆ ನಮಗೆ ವಿರಹ ಏತಕೆ... 

ಹೂವಾದ ಮೇಲೆ ಬಿಸಿಲೆಂದು ಸುಮವು ಮೊಗ್ಗಾಗುವುದೇ ... ಮತ್ತೇ ಮೊಗ್ಗಾಗುವುದೇ... 
ಹೇ ಹೇ ಹೇಯ್ ಹೂವಾದ ಮೇಲೆ ಬಿಸಿಲೆಂದು ಸುಮವು ಮೊಗ್ಗಾಗುವುದೇ 
ಮತ್ತೇ ಮೊಗ್ಗಾಗುವುದೇ... 
ಕಡಲನ್ನು ಬೆರೆತ ನದಿ ಕೋಪಗೊಂಡು ಬಿಟ್ಟೋಡುವುದೇ... ಕಡಲ ಬಿಟ್ಟೋಡುವುದೇ
ಕಡಲನ್ನು ಬೆರೆತ ನದಿ ಕೋಪಗೊಂಡು ಬಿಟ್ಟೋಡುವುದೇ... ಕಡಲ ಬಿಟ್ಟೋಡುವುದೇ
ಮನವನ್ನು ಮನವು ಅರಿತಾದ ಮೇಲೆ ಒಲವಿಂದ ನಾವು ಒಂದಾದ ಮೇಲೆ ಅನುಮಾನ ಇನ್ನೇತಕೆ... 
ಅನುಮಾನ ಇನ್ನೇತಕೆ... ಅನುಮಾನ ಇನ್ನೇತಕೆ... ಅನುಮಾನ ಇನ್ನೇತಕೆ... 
ಹೇ... ತಪ್ಪು ಮಾಡಿದೆ ಒಪ್ಪಿಕೊಳ್ಳುವೇ ಮುದ್ದು ಅರಗಿಣಿ ಸಿಡುಕಬೇಡವೇ... 
ಕಲಹ ಏತಕೆ ನಮಗೆ ವಿರಹ ಏತಕೆ... 

ಈ ಸಂಜೆ ತಂದ ತಂಗಾಳಿಯಿಂದ ಚಳಿಯಾಗುತಿದೆ ನಲ್ಲೇ .. ಚಳಿಯಾಗುತಿದೆ 
ಹೇ ಹೇ ... ಹ್ಹಾ ..  ಈ ಸಂಜೆ ತಂದ ತಂಗಾಳಿಯಿಂದ ಚಳಿಯಾಗುತಿದೆ ನಲ್ಲೇ .. ಚಳಿಯಾಗುತಿದೆ 
ಆನಂದ ತಂದ ಈ ನನ್ನ ಅಂದಾ ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ 
ಆನಂದ ತಂದ ಈ ನನ್ನ ಅಂದಾ ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ 
ನಿನ್ನಲ್ಲಿ ಛಲವೂ ಸರಿಯಲ್ಲ ಜಾಣೆ ಇನ್ನೆಂದೂ ನಿನಗೆ ನಾ ಬೇಡವೇನೇ... ಈ ಮೌನ ಇನ್ನೇತಕೇ ... 
ಈ ಮೌನ ಇನ್ನೇತಕೇ ...  ಈ ಮೌನ ಇನ್ನೇತಕೇ ... ಈ ಮೌನ ಇನ್ನೇತಕೇ ... 
ತಪ್ಪು ಮಾಡಿದೆ ಅರೇ... ಒಪ್ಪಿಕೊಳ್ಳುವೇ 
ಹೇ... ತಪ್ಪು ಮಾಡಿದೆ ಒಪ್ಪಿಕೊಳ್ಳುವೇ ಮುದ್ದು ಅರಗಿಣಿ ಸಿಡುಕಬೇಡವೇ... 
ಕಲಹ ಏತಕೆ ನಮಗೆ ವಿರಹ ಏತಕೆ... 
ಕಲಹ ಏತಕೆ ನಮಗೆ ವಿರಹ ಏತಕೆ... 
-----------------------------------------------------------------------------------------------------  

ಬಾಳೊಂದು ಉಯ್ಯಾಲೆ (೧೯೮೫) - ಬಾಳಲ್ಲಿ ಇಂಥ ಸಮಯ 
ಸಂಗೀತ : ಎಂ.ಎಸ್.ವಿಶ್ವನಾಥನ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ, ಬಿ.ಆರ್.ಛಾಯ 

ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲ... ಅಹ್ಹಹ್ಹಹ್ಹಹ... ಎಂದೂ ಬಂದೆ ಇಲ್ಲ.
ನೀರಲ್ಲಿ ಎಂದು ಹೀಗೆ ನಿಂತೇ ಇಲ್ಲಾ ಅಹ್ಹಹ್ಹಹ್... ನಾನು ನಿಂತೇ ಇಲ್ಲ.. 
ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲ ಎಂದೂ ಬಂದೆ ಇಲ್ಲ.
ನೀರಲ್ಲಿ ಎಂದು ಹೀಗೆ ನಿಂತೇ ಇಲ್ಲ ನಾನು ನಿಂತೇ ಇಲ್ಲ.. 
ಯೌವ್ವನ ತಂದ ಬಿಸಿಯು ಒಡಲಲ್ಲೆಲ್ಲಾ ತಣ್ಣೀರು ತಂದ ಚಳಿಯು ಮೈಯ್ಯಿ ಮೇಲೆಲ್ಲಾ 
ಯೌವ್ವನ ತಂದ ಬಿಸಿಯು ಒಡಲಲ್ಲೆಲ್ಲಾ ತಣ್ಣೀರು ತಂದ ಚಳಿಯು ಮೈಯ್ಯಿ ಮೇಲೆಲ್ಲಾ 

ನಲ್ಲನ ಆ ಕಂಗಳು ಎಂದೆಂದೂ ಕಾಣದಂತ ಅಂದ ತಂಗಾಳಿ ತಂದಿತಲ್ಲೆ ಇಂದೂ 
ನಲ್ಲನ ಆ ಕಂಗಳು ಎಂದೆಂದೂ ಕಾಣದಂತ ಅಂದ ತಂಗಾಳಿ ತಂದಿತಲ್ಲೆ ಇಂದೂ 
ನಲ್ಲೆಯ ತನುವೆಲ್ಲವ ಸಂಗಾತಿ ಮುತ್ತಿನಂತೆ ಇಂದು ಈ ನೀರು ಹುಟ್ಟಿತಲ್ಲೇ ಬಂದು 
ಕಾಮನ ಕುಣಿತ ನನ್ನ ಎದೆಯಲೆಲ್ಲಾ ನೀನೇನು ಆಸೆ ಹೇಳಲಾರೆ ನಲ್ಲ 
ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲ... ಅಹ್ಹಹ್ಹಹ್ಹಹ... ಎಂದೂ ಬಂದೆ ಇಲ್ಲ.
ನೀರಲ್ಲಿ ಎಂದು ಹೀಗೆ ನಿಂತೇ ಇಲ್ಲಾ ಅಹ್ಹಹ್ಹಹ್... ನಾನು ನಿಂತೇ ಇಲ್ಲ.. 

ರಾತ್ರಿಯ ಪ್ರಿಯ ಕನಸೆಲ್ಲವೂ ಕಣ್ಣಲ್ಲಿ ಮೂಡಿದಂತೆ ಕಂಡೇ 
ಹೇಳೋಕೆ ಅಸೆ ನಾಚಿ ನಿಂತೇ 
ರಾತ್ರಿಯ ಪ್ರಿಯ ಕನಸೆಲ್ಲವೂ ಕಣ್ಣಲ್ಲಿ ಮೂಡಿದಂತೆ ಕಂಡೇ 
ಹೇಳೋಕೆ ಅಸೆ ನಾಚಿ ನಿಂತೇ ತೀರದ ನೂರಾಸೆಯೂ ... 
ನನ್ನನು ಕಾಡಿ ಇಂದು ಸೋತೆ ಇಂದೇನೋ ದಾರಿ ಕಾಣದಾದೆ 
ಜೋಡಿಯು ಬರದೇ ಜೀವ ನಿಲ್ಲೋದಿಲ್ಲ 
ಹಿಂದೆಂದೂ ನಂಗೆ ಹೀಗೆ ಆಗೇ ಇಲ್ಲಾ... 
ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲ... ಅಹ್ಹಹ್ಹಹ್ಹಹ... ಎಂದೂ ಬಂದೆ ಇಲ್ಲ.
ನೀರಲ್ಲಿ ಎಂದು ಹೀಗೆ ನಿಂತೇ ಇಲ್ಲಾ ಅಹ್ಹಹ್ಹಹ್... ನಾನು ನಿಂತೇ ಇಲ್ಲ.. 
ಯೌವ್ವನ ತಂದ ಬಿಸಿಯು ಒಡಲಲ್ಲೆಲ್ಲಾ ತಣ್ಣೀರು ತಂದ ಚಳಿಯು ಮೈಯ್ಯಿ ಮೇಲೆಲ್ಲಾ 
ತಣ್ಣೀರು ತಂದ ಚಳಿಯು ಮೈಯ್ಯಿ ಮೇಲೆಲ್ಲಾ 
-----------------------------------------------------------------------------------------------------  

No comments:

Post a Comment