1801. ಅಖಂಡ ಬ್ರಹ್ಮಚಾರಿಗಳು (೧೯೮೦)


ಅಖಂಡ ಬ್ರಹ್ಮಚಾರಿಗಳು ಚಲನಚಿತ್ರದ ಹಾಡುಗಳು 
  1. ಜೊತೆಗಾರ ಬೇಕೆಂದು 
  2. ರಾಮ ನಾಮ ಸಿಹಿಯ ಜೇನು 
ಅಖಂಡ ಬ್ರಹ್ಮಚಾರಿಗಳು (೧೯೮೦) - ಜೊತೆಗಾರ ಬೇಕೆಂದು 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ವಾಣಿಜಯರಾಂ 

ಜೊತೆಗಾರ ಬೇಕೆಂದು ನೋವಿಂದ ನಾ ಬೆಂದೆ 
ಬರಿದಾದ ಬದುಕಿಗೆ ಒಲವಿಂದ ನೀ ಬಂದೆ 
ಜೊತೆಗಾರ ಬೇಕೆಂದು ನೋವಿಂದ ನಾ ಬೆಂದೆ 
ಬರಿದಾದ ಬದುಕಿಗೆ ಒಲವಿಂದ ನೀ ಬಂದೆ 

ಇನಿದಾದ ದನಿಯಾಗಿ ಶ್ರುತಿಯನ್ನೇ ತಂದೆ 
ಹಿತವಾದ ನೆಲೆಯಾಗಿ ಪ್ರೀತಿಯ ಕಂಡೆ...  
ಇನಿದಾದ ದನಿಯಾಗಿ ಶ್ರುತಿಯನ್ನೇ ತಂದೆ 
ಹಿತವಾದ ನೆಲೆಯಾಗಿ ಪ್ರೀತಿಯ ಕಂಡೆ 
ಸುಖವಾಗಿದೆ ಬಾಳು ಹೊಸತಾಗಿದೆ 
ಏನೇನೋ ಮನಸಲ್ಲಿ ಕನಸಾಗಿದೆ 
ಜೊತೆಗಾರ ಬೇಕೆಂದು ನೋವಿಂದ ನಾ ಬೆಂದೆ 
ಬರಿದಾದ ಬದುಕಿಗೆ ಒಲವಿಂದ ನೀ ಬಂದೆ 

ಚೆಲುವಾದ ಮಳೆಯಾಗಿ ತಂಪನ್ನೇ ಸುರಿದೆ 
ಹೊಳಪಾದ ಗುಣವಾಗಿ ನಲ್ಮೆಲೀ ಮಿಡಿದೆ 
ಚೆಲುವಾದ ಮಳೆಯಾಗಿ ತಂಪನ್ನೇ ಸುರಿದೆ 
ಹೊಳಪಾದ ಗುಣವಾಗಿ ನಲ್ಮೆಲೀ ಮಿಡಿದೆ 
ಹಗುರಾಗಿದೆ ಮೈಯ್ಯ ಹೂವಾಗಿದೇ 
ನೂರಾರು ಬಯಕೆಗಳು ತೆರವಾಗಿವೇ... 
ಜೊತೆಗಾರ ಬೇಕೆಂದು ನೋವಿಂದ ನಾ ಬೆಂದೆ 
ಬರಿದಾದ ಬದುಕಿಗೆ ಒಲವಿಂದ ನೀ ಬಂದೆ 
-------------------------------------------------------------------------------------------

ಅಖಂಡ ಬ್ರಹ್ಮಚಾರಿಗಳು (೧೯೮೦) - ರಾಮ ನಾಮ ಸಿಹಿಯ ಜೇನು 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಕೆ.ಜೆ.ಏಸುದಾಸ್ 

ರಾಮನಾಮ ಸಿಹಿಯ ಜೇನು ಕೃಷ್ಣನಾಮ ಸಿರಿಯ ಹೊನ್ನು 
ರಾಮನಾಮ ಸಿಹಿಯ ಜೇನು ಕೃಷ್ಣನಾಮ ಸಿರಿಯ ಹೊನ್ನು 
ಪೂಜೆಯೊಂದೇ ಫಲ... ರಾಮ ಪೂಜೆಯೊಂದೇ ಫಲ.... ಹಾಡಿ ... 
ರಾಮನಾಮ ಸಿಹಿಯ ಜೇನು ಕೃಷ್ಣನಾಮ ಸಿರಿಯ ಹೊನ್ನು 
ಪೂಜೆಯೊಂದೇ ಫಲ... ರಾಮ ಪೂಜೆಯೊಂದೇ ಫಲ.... ಹಾಗೇ  ... 
ರಾಮಕೃಷ್ಣ ಗೋವಿಂದ... ರಾಮಕೃಷ್ಣ ಗೋವಿಂದ... 
ರಾಮಕೃಷ್ಣ ಗೋವಿಂದ... ರಾಮಕೃಷ್ಣ ಗೋವಿಂದ... 

ಹೊಟ್ಟೆಗಾಗಿ ಮೋಸ...  ಬಟ್ಟೆಗಾಗಿ ವೇಷ... ಕೃಷ್ಣ... 
ಹೊಟ್ಟೆಗಾಗಿ ಮೋಸ...  ಬಟ್ಟೆಗಾಗಿ ವೇಷ...
ಇರದೋ ಇಳೆಯಲಿ ನೇಮ... 
ಸಾವಿರ ಧ್ಯಾನ ಮಾಡುವ ಜನರು 
ಸಾವಿರ ಧ್ಯಾನ ಮಾಡುವ ಜನರು 
ವೇಷಾಗಿ ಕಪಟ ತೊರ್ಯಾರೋ  
ಪೂಜೆಯೊಂದೇ ಫಲ... ರಾಮ ಪೂಜೆಯೊಂದೇ ಫಲ.... ಹಾಡಿ  ... 
ರಾಮಕೃಷ್ಣ ಗೋವಿಂದ... ರಾಮಕೃಷ್ಣ ಗೋವಿಂದ... 
ರಾಮಕೃಷ್ಣ ಗೋವಿಂದ... ರಾಮಕೃಷ್ಣ ಗೋವಿಂದ... 

ಮಣ್ಣಿಗಾಗಿ ದ್ಯಾಸ ಹೆಣ್ಣಿಗಾಗಿ ದಾಸ...ಆಆಆ 
ಮಣ್ಣಿಗಾಗಿ ದ್ಯಾಸ ಹೆಣ್ಣಿಗಾಗಿ ದಾಸ
ಕರಾಗೋ ಬದುಕಿಗೆ ಕ್ಷೇಮ  
ಮೋಹಕ ಮೌನ ತೋರುವ ಜನರು 
ಮೋಹಕ ಮೌನ ತೋರುವ ಜನರು 
ವೇಷಾಗಿ ತಾಳಕದಾಡ್ಯಾರೋ 
ಪೂಜೆಯೊಂದೇ ಫಲ... ರಾಮ ಪೂಜೆಯೊಂದೇ ಫಲ.... ಹಾಡಿ  ... 
ರಾಮಕೃಷ್ಣ ಗೋವಿಂದ... ರಾಮಕೃಷ್ಣ ಗೋವಿಂದ... 
ರಾಮಕೃಷ್ಣ ಗೋವಿಂದ... ರಾಮಕೃಷ್ಣ ಗೋವಿಂದ... 
ರಾಮನಾಮ ಸಿಹಿಯ ಜೇನು ಕೃಷ್ಣನಾಮ ಸಿರಿಯ ಹೊನ್ನು 
ಪೂಜೆಯೊಂದೇ ಫಲ... ರಾಮ ಪೂಜೆಯೊಂದೇ ಫಲ....... 
-------------------------------------------------------------------------------------------

No comments:

Post a Comment