ಸಮರ್ಪಣೆ ಚಲನಚಿತ್ರದ ಹಾಡುಗಳು
- ಮನದ ಮನದ
- ಈ ಬಾಳಿನಲ್ಲಿ
- ಶುಭಯೋಗ ಕೂಡಿದೆ
- ಪ್ರೇಮದ ಸುಖ
ಸಮರ್ಪಣೆ (೧೯೮೩) - ಮನದ ಮನದ
ಸಂಗೀತ : ಎಂ.ರಂಗರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಹೆಣ್ಣು: ಆ.... ಆಆ ಆಆ ಆ ಆ
ಗಂಡು: ಮನದ ಮನದ ಸರಳ ಸಮಾಗಮ ಸರಸ ಸಮ್ಮಿಲನ ಅನುರಾಗ ಸ ರಿ ಗ ಮ
ಹೆಣ್ಣು:ಮನದ ಮನದ ಸರಳ ಸಮಾಗಮ ಸರಸ ಸಮ್ಮಿಲನ ಅನುರಾಗ ಸ.. ರಿ.. ಗ.. ಮ..ಆ
ಸರಿಗಮ....
ಗಂಡು: ಆ ಕುಂಚದಲಿ ಸೌಂದರ್ಯ ಸಿರಿ ಮೈತಾಳುತಿದೆ ಅಂದಕ್ಕೆ ಎಣೆ ಎಲ್ಲಿ
ಹೆಣ್ಣು: ಕೈ ಸೇರಿದೆನು ನಾ ಕುಂಚದಲಿ ನಿನ್ನಾಸೆ ರೂಪಸಿ ತೆರದಲ್ಲಿ
ಗಂಡು: ಆ ಆಹಾ..
ಹೆಣ್ಣು: ಓ ಓಹೋ..
ಗಂಡು: ಆ ಕುಂಚದಲಿ ಸೌಂದರ್ಯ ಸಿರಿ ಮೈತಾಳುತಿದೆ ಅಂದಕ್ಕೆ ಎಣೆ ಎಲ್ಲಿ
ಹೆಣ್ಣು: ಕೈ ಸೇರಿದೆನು ನಾ ಕುಂಚದಲಿ ನಿನ್ನಾಸೆಗಳ ರೂಪಸಿ ತೆರದಲ್ಲಿ
ಗಂಡು: ಭಾವ ಒಂದಾಗಿ
ಹೆಣ್ಣು: ಬಾಳು ಹಾಡಾಗಿ
ಗಂಡು: ಭಾವ ಒಂದಾಗಿ
ಹೆಣ್ಣು: ಬಾಳು ಹಾಡಾಗಿ
ಇಬ್ಬರೂ: ಸುಖದ ಸಿರಿಯು ನಮಗೆ ನಿರಂತರ
ಸರಸ ಸಮ್ಮಿಲನ ಅನುರಾಗ
ಗಂಡು: ಸರಿಗಮಾ...ಆ.. ಆ....
ಗಂಡು: ನನ್ನಾಸೆಗಳೆ ಹೆಣ್ಣಂದದಲ್ಲಿ ಈ ರೂಪಿನಲಿ ಕಾಣುತ ಬೆರಗಾದೆ
ಹೆಣ್ಣು: ಈ ರಾಗದಲಿ ಆನಂದದಲಿ ಸಂಗೀತ ಸವಿ ಹಿರುತ ಮರುಳಾದೆ
ಗಂಡು: ಏ ಹೇ ಹೆಏಏಏ
ಹೆಣ್ಣು: ಓ ಹೋ ಓ ಓ
ಗಂಡು: ನನ್ನಾಸೆಗಳೆ ಹೆಣ್ಣಂದದಲ್ಲಿ ಈ ರೂಪಿನಲಿ ಕಾಣುತ ಬೆರಗಾದೆ
ಹೆಣ್ಣು: ಈ ರಾಗದಲಿ ಆನಂದದಲಿ ಸಂಗೀತ ಸವಿ ಹಿರುತ ಮರುಳಾದೆ
ಗಂಡು: ಎಂಥ ಸಂತೋಷ
ಹೆಣ್ಣು: ಏನೋ ಉಲ್ಲಾಸ
ಗಂಡು: ಎಂಥ ಸಂತೋಷ
ಹೆಣ್ಣು: ಏನೋ ಉಲ್ಲಾಸ
ಇಬ್ಬರೂ: ಮನದ ಮನದ ಮಿಲನ ಮನೋಹರ
ಸರಸ ಸಮ್ಮಿಲನ
ಸರಿಗಮಾ......
ಮನದ ಮನದ ಸರಳ ಸಮಾಗಮ ಸರಸ ಸಮ್ಮಿಲನ ಅನುರಾಗ ಸ.. ರಿ.. ಗ.. ಮ..
ಸರಿಗಮ....ಆ...ಆ..
-------------------------------------------------------------------------------------------------
ಸಮರ್ಪಣೆ (೧೯೮೩) - ಈ ಬಾಳಿನಲ್ಲಿ
ಸಂಗೀತ : ಎಂ.ರಂಗರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಲಾ... ಲಾಲಾಲಾಲಾ... ಲಾ... ಲಾಲಾಲಾಲಾ (ಆಹಾ...) ಆ...(ಆಹಾ...)
ಓ.. (ಆಹಾ) ಆ... (ಆಹಾ)... ಹೇ... (ಆಹಾ ಆಹಾ ಹೇ... )
ಈ ಬಾಳಿನಲ್ಲಿ ಯಾರು ಹೆಚ್ಚು ಈ ಪಂದ್ಯದಲ್ಲಿ ಯಾರು ಹೆಚ್ಚು
ಇಲ್ಲಾ ಇಲ್ಲಿ ರಾಜಿ ಬಾಗಿ ಸೋತು ಹೋಗುತ್ತೀಯ ನೀನು
ಬಾಯಿ ಮುಚ್ಚು... ಬಾಯಿ ಮುಚ್ಚು
ಹೆಣ್ಣು : ಈ ಬಾಳಿನಲ್ಲಿ ಯಾರು ಹೆಚ್ಚು ಈ ಪಂದ್ಯದಲ್ಲಿ ಯಾರು ಹೆಚ್ಚು
ನೀನು ಹೆಚ್ಚೋ ನಾನು ಹೆಚ್ಚೋ ಇಲ್ಲಾ ಇಲ್ಲಿ ರಾಜಿ ಬಾಗಿ
ನೀನು ಗೆಲ್ಲೋ ಮಾತೆ ಇಲ್ಲಾ ಏಕೆ ಹುಚ್ಚು.. ಏಕೆ ಹುಚ್ಚು
ಗಂಡು : ಹೆಣ್ಣಿಗೆ ಗಂಡೇ ದಿಕ್ಕು (ಆಹಾ) ಚೆಂದವೇ ಹೆಣ್ಣಿನ ಹಕ್ಕು (ಓಹೋ)
ಹೆಣ್ಣಿಗೆ ಗಂಡೇ ದಿಕ್ಕು (ಆ) ಚೆಂದವೇ ಹೆಣ್ಣಿನ ಹಕ್ಕು
ಆದರೆ ಬಾಳಲಿ ಅಂದು ಇಂದು ಎಂದೆಂದೂ ಒಂದೇ ಗುಟ್ಟು... ಇದೇ ಸಿಕ್ಕು
ಹೆಣ್ಣು : ಗಂಡಿಗೆ ತಾಯೇ ದಿಕ್ಕು (ಆಹಾ) ಜಂಭವೇ ಗಂಡಿನ ಸೊಕ್ಕು (ಆಹಾ)
ಗಂಡಿಗೆ ತಾಯೇ ದಿಕ್ಕು (ಓ..ಓ) ಜಂಭವೇ ಗಂಡಿನ ಸೊಕ್ಕು (ಓಓ)
ಆದರೆ ಬಾಳಿಗೆ ಅಂದ ಚೆಂದ ತಂದ ಹೆಣ್ಣು ಇಲ್ಲದಾದಾಗ.... ಮಣ್ಣು ಮುಕ್ಕು
ಗಂಡು : ಈ ಬಾಳಿನಲ್ಲಿ ಯಾರು ಹೆಚ್ಚು ಈ ಪಂದ್ಯದಲ್ಲಿ ಯಾರು ಹೆಚ್ಚು
ಇಲ್ಲಾ ಇಲ್ಲಿ ರಾಜಿ ಬಾಗಿ ಸೋತು ಹೋಗುತ್ತೀಯ ನೀನು
ಬಾಯಿ ಮುಚ್ಚು... ಬಾಯಿ ಮುಚ್ಚು
ಹೆಣ್ಣು : ಈ ಬಾಳಿನಲ್ಲಿ ಯಾರು ಹೆಚ್ಚು ಈ ಪಂದ್ಯದಲ್ಲಿ ಯಾರು ಹೆಚ್ಚು
ನೀನು ಹೆಚ್ಚೋ ನಾನು ಹೆಚ್ಚೋ ಇಲ್ಲಾ ಇಲ್ಲಿ ರಾಜಿ ಬಾಗಿ
ನೀನು ಗೆಲ್ಲೋ ಮಾತೆ ಇಲ್ಲಾ ಏಕೆ ಹುಚ್ಚು.. ಏಕೆ ಹುಚ್ಚು
ಗಂಡು : ನಾಳಿನ ಬಾಳಲಿ ಗೊತ್ತು ಯಾವುದು ಯಾರ ಸ್ವತ್ತು
ನಾಳಿನ ಬಾಳಲಿ ಗೊತ್ತು ಯಾವುದು ಯಾರ ಸ್ವತ್ತು
ಆಸೆಯ ಜಾಲವ ಬಿಸಿದಂತ ಹೆಣ್ಣು ನನ್ನ ಕೂಡಿ ಬಂದಾಗ ಎಂಥಾ ಮತ್ತು...
ಹೆಣ್ಣು : ಬಲ್ಲೆನು ನಿನ್ನೀ ಗತ್ತು ಬಂದಿರೇ ನಿನಗೆ ಹೊತ್ತು
ಬಲ್ಲೆನು ನಿನ್ನೀ ಗತ್ತು ಬಂದಿರೇ ನಿನಗೆ ಹೊತ್ತು
ಎಂದಿಗೂ ಹೆಣ್ಣಿಗೆ ಪ್ರಾಣಕ್ಕಿಂತ ಮಾನ ಹೆಚ್ಚು ಜಾರಿ ಬಿದ್ದಿಯೋ ನಡಿ ಹೆಚ್ಚೆತ್ತು..
ಗಂಡು : ಈ ಬಾಳಿನಲ್ಲಿ ಯಾರು ಹೆಚ್ಚು ಈ ಪಂದ್ಯದಲ್ಲಿ ಯಾರು ಹೆಚ್ಚು
ಇಲ್ಲಾ ಇಲ್ಲಿ ರಾಜಿ ಬಾಗಿ ಸೋತು ಹೋಗುತ್ತೀಯ ನೀನು
ಬಾಯಿ ಮುಚ್ಚು... ಬಾಯಿ ಮುಚ್ಚು
ಹೆಣ್ಣು : ಈ ಬಾಳಿನಲ್ಲಿ ಯಾರು ಹೆಚ್ಚು ಈ ಪಂದ್ಯದಲ್ಲಿ ಯಾರು ಹೆಚ್ಚು
ನೀನು ಹೆಚ್ಚೋ ನಾನು ಹೆಚ್ಚೋ ಇಲ್ಲಾ ಇಲ್ಲಿ ರಾಜಿ ಬಾಗಿ
ನೀನು ಗೆಲ್ಲೋ ಮಾತೆ ಇಲ್ಲಾ ಏಕೆ ಹುಚ್ಚು.. ಏಕೆ ಹುಚ್ಚು
-------------------------------------------------------------------------------------------------
ಸಮರ್ಪಣೆ (೧೯೮೩) - ಶುಭಯೋಗ ಕೂಡಿದೆ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ, ಕೋರಸ್
ತನನಂ ತನನಂ ತನನಂ ತನನಂ ತನನಂ ತನನಂ ತನನಂ ತನನಂ
ತನನಂ ತನನಂ ತನನಂ ತನನಂ ತನನಂ ತನನಂ ತನನಂ ತನನಂ
ಶುಭ ಯೋಗ ಕೂಡಿದೆ ಅನುರಾಗ ಹಾಡಿದೆ
ಮನದಾಸೆ ಮೂಡಿ ಬಂದು ರೋಮಾಂಚನ ಮೈ ತುಂಬಿದೆ
ಸಲ್ಲಾಪ ಸಮ್ಮೋಹ ಉಸಿರಾಗಿದೆ
ಆಆಆಆ.... ಆಆಆಅ... ಓಓಓಓಓಓಓ... ಹೂಂಹೂಂಹೂಂಹೂಂಹೂಂ
ಶುಭ ಯೋಗ ಕೂಡಿದೆ ಅನುರಾಗ ಹಾಡಿದೆ
ಮನದಾಸೆ ಮೂಡಿ ಬಂದು ರೋಮಾಂಚನ ಮೈ ತುಂಬಿದೆ
ಸಲ್ಲಾಪ ಸಮ್ಮೋಹ ಉಸಿರಾಗಿದೆ
ಆಆಆಆ.... ಆಆಆಅ... ಓಓಓಓಓಓಓ... ಹೂಂಹೂಂಹೂಂಹೂಂಹೂಂ
ಆ... ಆ... ಓ... ಓಓಓ.... ಆ... ಆ... ಆ...ಆ... ಆ... ಆ...
ಈ ರಾತ್ರಿ ಚೆಂದವಾಗಿ ಸಂಗಾತಿ ಬಂಧವಾಗಿ
ಸಂಬಂಧ ಕಂಪು ಬೀರಿ ಏನೇನೋ ತಾಪ ತೋರಿ
ಈ ರಾತ್ರಿ ಚೆಂದವಾಗಿ ಸಂಗಾತಿ ಬಂಧವಾಗಿ
ಸಂಬಂಧ ಕಂಪು ಬೀರಿ ಏನೇನೋ ತಾಪ ತೋರಿ
ಎದೆಯಾಳ ತಲ್ಲಣಗೊಂಡು ಮನಸಾರೆ ಸೌಖ್ಯ ಉಂಡು
ಎದೆಯಾಳ ತಲ್ಲಣಗೊಂಡು ಮನಸಾರೆ ಸೌಖ್ಯ ಉಂಡು
ಈ ಬಯಕೆ ತಂದಾಯ್ತು... ಬಾಳೆಲ್ಲಾ ಸೊಗಸಾಯ್ತು
ಶುಭ ಯೋಗ ಕೂಡಿದೆ ಅನುರಾಗ ಹಾಡಿದೆ
ಈ ಮಂಚವಿಂದು ಹಾಸಿ ಬಿಸಿಯಾದ ಗಾಳಿ ಬೀಸಿ
ಆನಂದ ಮೋಹವಾಗಿ ಆವೇಶ ದಾಹವಾಗಿ
ಆಆಆಆಅ ಆಆಆಆ ಆಆಆಆಅ ಆಆಆಆ
ಹೊಸದಾದ ಭಾವನೆ ತಂದು ಹಿತವಾದ ಕಾಮನೆ ಮಿಂದು
ಹೊಸದಾದ ಭಾವನೆ ತಂದು ಹಿತವಾದ ಕಾಮನೆ ಮಿಂದು
ಹೊಂಗನಸು ಹಸಿರಾಯ್ತು ಹಾಲ್ಜೇನು ಹೊಳೆಯಾಯ್ತು...
ಶುಭ ಯೋಗ ಕೂಡಿದೆ ಅನುರಾಗ ಹಾಡಿದೆ
ಮನದಾಸೆ ಮೂಡಿ ಬಂದು ರೋಮಾಂಚನ ಮೈ ತುಂಬಿದೆ
ಸಲ್ಲಾಪ ಸಮ್ಮೋಹ ಉಸಿರಾಗಿದೆ
ಆಆಆಆ....ಓಓಓಓಓಓಓ... ಲಾಲಾಲಾಲಾಲಾ... ಲಾಲಾಲಾಲಾಲಾ
-------------------------------------------------------------------------------------------------
ಸಮರ್ಪಣೆ (೧೯೮೩) - ಪ್ರೇಮದ ಸುಖ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ, ಕೋರಸ್
ಆ ಆ ಆ ಅ ಆ ಆ ಆ ಆ ಅ ಆ
ಪ್ರೇಮದ ಸುಖಸಂಬಾವು ಶೋಕದ ಕಡಲಾಯಿತೇ
ಪ್ರೀತಿಯ ಬಳ್ಳಿ ಬಾಡಿದೆ ಎಲ್ಲಿ ಮಾತಾಯ್ತು ಮೌನ ಬಾಳಾಯ್ತು ಶೂನ್ಯ....
ಪ್ರೇಮದ ಸುಖಸಂಬಾವು ಶೋಕದ ಕಡಲಾಯಿತೇ
ಸಂತೋಷವೆಂಬ ಸೌಗಂಧ ತಂದೆ ಸಂಗಾತಿ ಜೀವ ಸಂಗೀತವಾದೆ... ಆಆಆಆ
ಸಂತೋಷವೆಂಬ ಸೌಗಂಧ ತಂದೆ ಸಂಗಾತಿ ಜೀವ ಸಂಗೀತವಾದೆ
ಮಲ್ಲಿಗೆ ಬಾಳಿಗೆ ಗಲ್ಲುರಿ ಬಿದ್ದಿತೆ
ಮಲ್ಲಿಗೆ ಬಾಳಿಗೆ ಗಲ್ಲುರಿ ಬಿದ್ದಿತೆ ನುಡಿಯೇ ಒಡಲಾ ವ್ಯಥೆಯ ಕಥೆಯ...
ಪ್ರೇಮದ ಸುಖಸಂಬಾವು ಶೋಕದ ಕಡಲಾಯಿತೇ...
ಆ ಆ ಆ ಅ ಆ ಆ ಆ ಆ ಅ ಆ
ಸಂಸಾರವಿಂದು ನಿಸ್ಸಾರವಾಯ್ತು ಜೇನಂತ ಮನಸು ಬೇವಾಗಿ ಹೋಯ್ತು
ಸಂಸಾರವಿಂದು ನಿಸ್ಸಾರವಾಯ್ತು ಜೇನಂತ ಮನಸು ಬೇವಾಗಿ ಹೋಯ್ತು
ಕಣ್ಣಿನ ದೋಷಕೆ ಹೆಣ್ಣಿಗೆ ಶಾಪವೇ...
ಕಣ್ಣಿನ ದೋಷಕೆ ಹೆಣ್ಣಿಗೆ ಶಾಪವೇ
ಮರೆಯೇ ಮನವ ಸುಡುವ ಉರಿಯ
ಪ್ರೇಮದ ಸುಖಸಂಬಾವು ಶೋಕದ ಕಡಲಾಯಿತೇ...
ಪ್ರೀತಿಯ ಬಳ್ಳಿ ಬಾಡಿದೆ ಎಲ್ಲಿ ಮಾತಾಯ್ತು ಮೌನ ಬಾಳಾಯ್ತು ಶೂನ್ಯ....
ಪ್ರೇಮದ ಸುಖಸಂಬಾವು ಶೋಕದ ಕಡಲಾಯಿತೇ
ಪ್ರೇಮದ ಸುಖಸಂಬಾವು ಶೋಕದ ಕಡಲಾಯಿತೇ
-------------------------------------------------------------------------------------------------
No comments:
Post a Comment