1805. ಅಪೂರ್ವ ಸಂಸಾರ (೧೯೯೪)

ಅಪೂರ್ವ ಸಂಸಾರ ಚಲನಚಿತ್ರದ ಹಾಡುಗಳು 
  1. ಮಮತೆ ಎಲ್ಲಿ ಜಾರಿತು 
  2. ಜೀವನದ ಗುರಿಯೇನು 
  3. ಮಾತಿನಲ್ಲಿ ಚೂಟಿ 
  4. ನಂದಿನಿ ನಂದಿನಿ 
  5. ಖುಷಿಯಲಿ ಓಡು 
ಅಪೂರ್ವ ಸಂಸಾರ (೧೯೯೪) - ಮಮತೆ ಎಲ್ಲಿ ಜಾರಿತು 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ, ಗಾಯನ : ಸಂಗೀತಕಟ್ಟಿ, 

ಮಮತೆ ಎಲ್ಲಿ ಜಾರಿತು ಕರುಣೆ ಎಲ್ಲಿ ಹೋಯಿತು 
ಒಲುಮೆ ಎಲ್ಲಾ ಏತಕೆ ಸುಡುವ ಬೆಂಕಿ ಆಯಿತು 
ಮಮತೆ ಎಲ್ಲಿ ಜಾರಿತು ಕರುಣೆ ಎಲ್ಲಿ ಹೋಯಿತು 
ಒಲುಮೆ ಎಲ್ಲಾ ಏತಕೆ ಸುಡುವ ಬೆಂಕಿ ಆಯಿತು 
ಓಓಓಓಓ... ಓಓಓಓಓ... ಹೂಂಹೂಂಹೂಂಹೂಂಹೂಂ

ನಂಬಿದ ತಂದೆ ಪ್ರೇಮ  ಒಂದೇ ಕ್ಷಣಕೆ ಕರಗುತಿದೆ 
ನಂಬಿದ ತಂದೆ ಪ್ರೇಮ  ಒಂದೇ ಕ್ಷಣಕೆ ಕರಗುತಿದೆ 
ಪುಣ್ಯವಂತರು ನಾವು ಎಂಬ ಹೆಮ್ಮೆ ಮುಗಿಯುತಿದೆ 
ಹೂವಂತ ಪ್ರೀತಿಯೆಲ್ಲಾ ಬಾಡಿ ಬೆಂದು ಹೋಯಿತು 
ಓಓಓಓಓ... ಓಓಓಓಓ... ಹೂಂಹೂಂಹೂಂಹೂಂಹೂಂ

ಯಾರಿಗೂ ಬೇಡವಾದ ಜೀವ ನರಳಿ ಕೊರಗತಿದೆ 
ಯಾರಿಗೂ ಬೇಡವಾದ ಜೀವ ನರಳಿ ಕೊರಗತಿದೆ 
ತಾಯಿಯ ಮಡಿಲಿಗಾಗಿ ಆಸೆ ಬಯಸಿ ಮಿಡಿಯುತಿದೆ 
ಅವಳಿಲ್ಲವಾದ ಮೇಲೆ.. ಬಾಳು ಶೂನ್ಯವಾಯಿತು 
ಮಮತೆ ಎಲ್ಲಿ ಜಾರಿತು ಕರುಣೆ ಎಲ್ಲಿ ಹೋಯಿತು 
ಒಲುಮೆ ಎಲ್ಲಾ ಏತಕೆ ಸುಡುವ ಬೆಂಕಿ ಆಯಿತು 
ಸುಡುವ ಬೆಂಕಿ ಆಯಿತು ಓಓಓಓಓ... ಓಓಓಓಓ... ಓಓಓಓಓ... 
--------------------------------------------------------------------------------------------------------------------

ಅಪೂರ್ವ ಸಂಸಾರ (೧೯೯೪) - ಜೀವನದ ಗುರಿಯೇನು 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ, ಗಾಯನ : ಮನು, ಸಂಗೀತಕಟ್ಟಿ, ಬಿ.ಆರ್.ಛಾಯ

ಜೀವನದ ಗುರಿ ಏನು ಕಡು ನೋವು ಸುಡುವಾಗ 
ಎದೆಭಾವ ಎಡಬಿಡದೇ ದಿನದಿನವೂ ಕುದಿವಾಗ 
ಸೋಲುಗಳ ಸುಳಿಯಲ್ಲಿ ಆಸೆಗಳು ಮುಳುಗಿರಲು 
ಮುಂದೇನು ಗತಿಯೆಂದು ತಳಮಳಿಸಿ ಅಳುವಾಗ 
ಸಂಗಡ ಬಂದ ಸಂಗಾತಿ ಇಲ್ಲಾ  ವಾತ್ಸಲ್ಯ ತೋರೋ ಆ ತಾಯೀ ಇಲ್ಲ  
ದೇವರೇ ನೀನು ನೂರಾರು ಬವಣೆ ನೀಡಿದರೇನು ನಾ ಸೋಲುವವನೇ... 

ಈ ಮನೆಯ ಆನಂದ ಚಿರಕಾಲ ನಗುತಿರಲಿ ಬೆಳಗಿರಲಿ ಮಂಗಳದ ಮನೆ ದೀಪ   
ಈ ಮನೆಯ ಆನಂದ ಚಿರಕಾಲ ನಗುತಿರಲಿ ಬೆಳಗಿರಲಿ ಮಂಗಳದ ಮನೆ ದೀಪ   
ಮಲ್ಲಿಗೆಯ ಸೌಗಂಧ ಹಿತವಾಗಿ ಹರಡಿರಲಿ 
ಮಲ್ಲಿಗೆಯ ಸೌಗಂಧ ಹಿತವಾಗಿ ಹರಡಿರಲಿ 
ಬದುಕೆಲ್ಲಾ ನಲಿವಿಂದ ಹೊಸ ರೂಪ... 
ಈ ಮನೆಯ ಆನಂದ ಚಿರಕಾಲ ನಗುತಿರಲಿ ಬೆಳಗಿರಲಿ ಮಂಗಳದ ಮನೆ ದೀಪ   
  
ಬೆಂಕಿಯದಾಗಿ ನೀ ನೊಂದು ಬೆಂದೇ ಆದರೂ ನಮಗೆ ಸಂತೋಷ ನೀ ತಂದೆ 
ಬೆಂಕಿಯದಾಗಿ ನೀ ನೊಂದು ಬೆಂದೇ ಆದರೂ ನಮಗೆ ಸಂತೋಷ ನೀ ತಂದೆ 
ಯಾವುದೇ ಕೊರತೆ ನಮಗಿಲ್ಲದಂತೆ ಅಕ್ಕರೆಯಿಂದ ನೀ ಅನುಗಾಲ ಕೊರೆದೆ 
ನೀ ತಾಯಿ ನೀ ತಂದೆ ನೀ  ದೈವವಾದೇ ... 
ನೀ ತಾಯಿ ನೀ ತಂದೆ ನೀ  ದೈವವಾದೇ ... 
ಈ ಮನೆಯ ಆನಂದ ಚಿರಕಾಲ ನಗುತಿರಲಿ ಬೆಳಗಿರಲಿ ಮಂಗಳದ ಮನೆ ದೀಪ   
ಈ ಮನೆಯ ಆನಂದ ಚಿರಕಾಲ ನಗುತಿರಲಿ ಬೆಳಗಿರಲಿ ಮಂಗಳದ ಮನೆ ದೀಪ   
--------------------------------------------------------------------------------------------------------------------
 
ಅಪೂರ್ವ ಸಂಸಾರ (೧೯೯೪) - ಮಾತಿನಲ್ಲಿ ಚೂಟಿ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ, ಗಾಯನ : ಎಸ್.ಪಿ.ಬಿ., ಸಂಗೀತಕಟ್ಟಿ,

ಗಂಡು : ಮಾತಿನಲ್ಲಿ ಚೂಟಿ ಕೋಪದಲ್ಲಿ ಹಾಟಿ 
            ಮಾತಿನಲ್ಲಿ ಚೂಟಿ ಕೋಪದಲ್ಲಿ ಹಾಟಿ 
            ಈ ಹುಡುಗಿ ನಾಟಿ ನಾಟಿ ಮಹಾ ಘಾಟಿ ಓ ಬಂಡಲ್ ರಾಣಿ
            ಓ ಬಂಡಲ್ ರಾಣಿ ಕಿಂಡಲ್ ಮಾಡದೇ ಸುಮ್ಮನೆ ನೀ ಹೋಗೆ 
            ಓ ಬಂಡಲ್ ರಾಣಿ ಕಿಂಡಲ್ ಮಾಡದೇ ಸುಮ್ಮನೆ ನೀ ಹೋಗೆ 
ಹೆಣ್ಣು : ನೋಟದಲ್ಲಿ ಚೂಪು ಮೂತಿ ಮಂಕಿ ಶೇಪು 
          ನೋಟದಲ್ಲಿ ಚೂಪು ಮೂತಿ ಮಂಕಿ ಶೇಪು 
          ಈ ಹುಡುಗ ಟಾಪು ಟಾಪು ಮಹಾ ಟಾಪು... ಓ... ಬಂಡಲ್ ರಾಜಾ ... 
          ಓ.. ಬಂಡಲ್ ರಾಜ ಬೆಂಡನು ತೆಗೆಯುವೆ ಸುಮ್ಮನೇ ನೀ ಹೋಗೂ   
          ಓ.. ಬಂಡಲ್ ರಾಜ ಬೆಂಡನು ತೆಗೆಯುವೆ ಸುಮ್ಮನೇ ನೀ ಹೋಗೂ   
   
ಹೆಣ್ಣು : ಹಲ್ಲನು ಕಿರಿಯೋ ಗಂಡಿನ ಕಣ್ಣನು ಹೊಡೆಯೋ ಪುಂಡನ 
          ಹಲ್ಲನು ಕಿರಿಯೋ ಗಂಡಿನ ಕಣ್ಣನು ಹೊಡೆಯೋ ಪುಂಡನ 
          ತರಲೆ ಮರಿ ಮನಮೋಹನ... ಕೆಣಕದೆ ಮೊಗ್ಗು ಬಳ್ಳಿ ನಾ 
ಗಂಡು : ಕಿಲಕಿಲ ನಗೋದು ಸುಂದರ... ಆಹಾ ಬಳಕುತ ಬರೋದು ಸುಂದರ 
            ಅಯ್ಯೋ ಸಿಡಿಯೋ ನುಡಿ ಬಲು ಸುಂದರ ಕಾಲೇಜ್ ಕನ್ಯೆಯ ಬಲ್ಲಿರಾ... 
ಹೆಣ್ಣು : ಹ್ಹಾ... ಜಂಭದ ಹುಂಜಕೆ ಅಂಜುವೆನೇನು ಕೂಡಲೇ ಜಾಗ ಖಾಲಿ ಮಾಡು 
ಗಂಡು : ಮಾತಿನಲ್ಲಿ ಚೂಟಿ ಕೋಪದಲ್ಲಿ ಹಾಟಿ 
ಹೆಣ್ಣು : ನೋಟದಲ್ಲಿ ಚೂಪು ಮೂತಿ ಮಂಕಿ ಶೇಪು 

ಹೆಣ್ಣು : ಯೋ... ಯೋ... ಯೋ... ಯೋ... ಯೋ... ಯೋ... ಯೋ... ಯೋ... 
ಗಂಡು : ಯೋ... ಯೋ... ಯೋ... ಯೋ... ಯೋ... ಯೋ... ಯೋ... ಯೋ... 
            ಎಣ್ಣೆಯ ಮೋರೆಯ ಸುಂದರೀ ರಾವಣ ರಾಯರ ಸೋದರಿ 
            ಎಣ್ಣೆಯ ಮೋರೆಯ ಸುಂದರೀ ರಾವಣ ರಾಯರ ಸೋದರಿ 
            ನಮ್ಮ ಕಾಲದ ಹೊಸ ಮಾದರಿ ಇವಳನು ಕಾಯೋ ಶ್ರೀ ಹರಿ... ಶ್ರೀಹರಿ... 
ಹೆಣ್ಣು : ಹೂಂ... ತಂಟೆಯ ಮಾಡೋ ತುಂಟನ ವಾನರ ವಂಶದ ನೆಂಟನ... 
          ಹುಡುಗಾಟಕೆ ಸೋತೆ ನಾ  ಜಗಳದ ಶೂರನೂ ನೀನೇನಾ... 
ಗಂಡು : ಸಿಂಪಲ್ ಹುಡುಗ ಸ್ಯಾಂಪಲ್ ಕೊಡುವೇ ಹತ್ತಿರ ಬಾರೆ ನನ್ನ ಸೇರೇ ... 
           ಮಾತಿನಲ್ಲಿ ಚೂಟಿ ಕೋಪದಲ್ಲಿ ಹಾಟಿ 
ಹೆಣ್ಣು : ಈ ಹುಡುಗ ಟಾಪು ಟಾಪು ಮಹಾ.. ಟಾಪು 
ಗಂಡು : ಈ ಹುಡುಗಿ ನಾಟಿ ನಾಟಿ ಮಹಾ ಘಾಟಿ 
ಹೆಣ್ಣು : ಓ ಬಂಡಲ್ ರಾಜಾ ... 
ಗಂಡು : ಅರೆರೆರೆರೇ ಓ ಬಂಡಲ್ ರಾಣೀ ... 
            ಕಿಂಡಲ್ ಮಾಡದೆ ಸುಮ್ಮನೆ ನೀ ಹೋಗೆ 
ಹೆಣ್ಣು : ಓ ಬಂಡಲ್ ರಾಜ ಬೆಂಡನು ತೆಗೆಯುವೆ ನೀ ಸುಮ್ಮನೆ ನೀ ಹೋಗೋ 
ಗಂಡು : ಅಯ್ಯೋ.. ಓ ಬಂಡಲ್ ರಾಣೀ ಕಿಂಡಲ್ ಮಾಡದೆ ಸುಮ್ಮನೆ ನೀ ಹೋಗೆ 
           ಹೋಗೇ....ಹೋಗೇ....ಹೋಗೇ....   
ಹೆಣ್ಣು : ಓ ಬಂಡಲ್ ರಾಜ ಬೆಂಡನು ತೆಗೆಯುವೆ ನೀ ಸುಮ್ಮನೆ ನೀ ಹೋಗೋ 
ಗಂಡು : ಆಹಾ.... 
---------------------------------------------------------------------------------------------------------
 
ಅಪೂರ್ವ ಸಂಸಾರ (೧೯೯೪) - ನಂದಿನಿ ನಂದಿನಿ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ, ಗಾಯನ : ಮನು,

ನಂದಿನಿ ನಂದಿನಿ ನಂದಿನಿ ನಂದಿನಿ ನಂದಿನಿ 
ಹಗಲು ಇರುಳಿನಲಿ ಅಲೆದು ಅಲೆದಲೆದು ನಾವು 
ಅಲೆದಲೆದು ನಾವು ನಂದಿನಿ ಮರೆಯಾದೆ ದಾರಿ ಕಾಣದೆ... 
ಹಗಲು ಇರುಳಿನಲಿ ಅಲೆದು ಅಲೆದಲೆದು ನಾವು 
ಅಲೆದಲೆದು ನಾವು ನಂದಿನಿ ಮರೆಯಾದೆ ದಾರಿ ಕಾಣದೆ... 
ದಿನ ದಿನ ಮನೆ ಮನೆ ಹುಡುಕಿ ಹುಡುಕಿದರೂ 
ಕರೆದು ಸೊರಗಿದರೂ ಬಳಿಗೆ ಬರದಿರುವೇ .... 
ಓ... ಹಗಲು ಇರುಳಿನಲಿ ಅಲೆದು ಅಲೆದಲೆದು ನಾವು 
ಅಲೆದಲೆದು ನಾವು ನಂದಿನಿ ಮರೆಯಾದೆ ದಾರಿ ಕಾಣದೆ... 
ನಂದಿನಿ... ಓ... ಮರೆಯಾದೆ ದಾರಿ ಕಾಣದೆ 
ನಿಸಗಮಪ... ಪದಪನಿದಪಮಗಪ ... ದಪಮಗಮ... 
ಪಪ ದದದದದದದ... ನಂದಿನಿ       

ನಗರದಲ್ಲಿ ಹಾಲು ಇಲ್ಲದೆ ಜನತೆಯಲಿ ಚಿಂತೆ ಮೂಡಿದೆ 
ನಗರದಲ್ಲಿ ಹಾಲು ಇಲ್ಲದೆ ಜನತೆಯಲಿ ಚಿಂತೆ ಮೂಡಿದೆ 
ಬಿಸಿಬಿಸಿಯ ಕಾಫಿ ಕೈಯ್ಯಗೇ ಬರಗಾಲ ಬಂದು ಕೂಡಿದೆ 
ಅಡಿಗೆ ಮನೆ ಸಪ್ಪೆಯಾಗಿದೆ ಮಡದಿಯರ ಮೂಡು ಕೆಟ್ಟಿದೆ 
ಅಡಿಗೆ ಮನೆ ಸಪ್ಪೆಯಾಗಿದೆ ಮಡದಿಯರ ಮೂಡು ಕೆಟ್ಟಿದೆ 
ಇರದಿರಲು ಬೆಣ್ಣೆ ತುಪ್ಪ ಬದುಕುವುದೇ ಕಷ್ಟವಾಗಿದೆ... 
ಇರದಿರಲು ಬೆಣ್ಣೆ ತುಪ್ಪ ಬದುಕುವುದೇ ಕಷ್ಟವಾಗಿದೆ 
ನಂದಿನಿ...  ಕೂಡಲೇ ಓಡಿ ಬಾ... ಈಗಲೇ ಓಡೋಡಿ ಬಾ 
ಕೂಡಲೇ ಓಡಿ ಬಾ... ಈಗಲೇ ಓಡೋಡಿ ಬಾ 
ದಿನ ದಿನ ಮನೆ ಮನೆ ಹುಡುಕಿ ಹುಡುಕಿದರೂ 
ಕರೆದು ಸೊರಗಿದರೂ ಬಳಿಗೆ ಬರದಿರುವೇ .... 
ಓ... ಹಗಲು ಇರುಳಿನಲಿ ಅಲೆದು ಅಲೆದಲೆದು ನಾವು 
ಅಲೆದಲೆದು ನಾವು ನಂದಿನಿ ಮರೆಯಾದೆ ದಾರಿ ಕಾಣದೆ... 

ಬಿಸಿ ನೀರ ಸ್ನಾನ ಮಾಡಿಸಿ ನಳಪಾಕ ನಿನಗೆ ಬಡಿಸುವೆ 
ಬಿಸಿ ನೀರ ಸ್ನಾನ ಮಾಡಿಸಿ ನಳಪಾಕ ನಿನಗೆ ಬಡಿಸುವೆ 
ತಿನಿಸುವೆನು ಹಲ್ವಾ ಗಿಲ್ವಾ ಕೆಂಪಿಯನು ಲಗ್ನವಾಗುವೇ 
ತಿನಿಸುವೆನು ಹಲ್ವಾ ಗಿಲ್ವಾ ಕೆಂಪಿಯನು ಲಗ್ನವಾಗುವೇ 
ಎಲ್ಲಿರುವೇ .. ಕರಿಯೆ ಸುಂದರೀ ... ಬಾರಿಸುವೆ ನಾನು ಕಿನ್ನೂರಿ 
ನಗುತ ನಗುತ ಬಂದ್ರೆ ನೀನು ತೋರಿಸುವೇ ಚಿತ್ರಮಂಜರೀ ... 
ನಗುತ ನಗುತ ಬಂದ್ರೆ ನೀನು ತೋರಿಸುವೇ ಚಿತ್ರಮಂಜರೀ ... 
ನಂದಿನೀ ... ಕೆಂಪಿಯ ಕಾಮಿನಿ ಮಾಯದ ಮೋಹಿನಿ 
ಕೂಡಲೇ ಓಡಿ ಬಾ ಈಗಲೇ ಓಡಿ ಬಾ ನಂದಿನೀ ... ನಂದಿನೀ ... ನೀನಿನೀನಿನಿ 
ಮರೆಯದೆ ದಾರಿ ಕಾಣದೇ ... 
ಹಗಲು ಇರುಳಿನಲಿ ಅಲೆದು ಅಲೆದಲೆದು ನಾವು 
ಅಲೆದಲೆದು ನಾವು ನಂದಿನಿ ಮರೆಯಾದೆ ದಾರಿ ಕಾಣದೆ... 
ದಿನ ದಿನ ಮನೆ ಮನೆ ಹುಡುಕಿ ಹುಡುಕಿದರೂ 
ಕರೆದು ಸೊರಗಿದರೂ ಬಳಿಗೆ ಬರದಿರುವೇ .... 
ಓ... ಹಗಲು ಇರುಳಿನಲಿ ಅಲೆದು ಅಲೆದಲೆದು ನಾವು 
ಅಲೆದಲೆದು ನಾವು ನಂದಿನಿ ಮರೆಯಾದೆ ದಾರಿ ಕಾಣದೆ... 
ಮರೆಯಾದೆ ದಾರಿ ಕಾಣದೆ... ಮರೆಯಾದೆ ದಾರಿ ಕಾಣದೆ... ನಂದಿನೀ .... 
--------------------------------------------------------------------------------------------------------------------
 
ಅಪೂರ್ವ ಸಂಸಾರ (೧೯೯೪) - ಖುಷಿಯಲಿ ಓಡು 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ, ಗಾಯನ : ಸಂಗೀತಕಟ್ಟಿ, ಬಿ.ಆರ್.ಛಾಯ

ಖುಷಿಯಲಿ ಓಡು ಬಯಲಲಿ ಓಡು ಪಾರ್ಕಲಿ ಜೋಡಿ ಕೂಡಿ ಓಡೋಣ ... 
ಹೊಸ ಜನರನು  ನೋಡು ನೋಡು ಜೊತೆ ಬೆರೆಯುತ ಆಡು ಆಡು 
ಕಸರತ್ತು ನೀನು ಕೂಡ ಮಾಡಿ ನೋಡು 
ಖುಷಿಯಲಿ ಓಡು ಬಯಲಲಿ ಓಡು ಪಾರ್ಕಲಿ ಜೋಡಿ ಕೂಡಿ ಓಡೋಣ ... 
ಹೊಸ ಜನರನು  ನೋಡು ನೋಡು ಜೊತೆ ಬೆರೆಯುತ ಆಡು ಆಡು 
ಕಸರತ್ತು ನೀನು ಕೂಡ ಮಾಡಿ ನೋಡು 
ನಮ್ಮಪ್ಪ ಶಿಸ್ತು ಚಿಕ್ಕಪ್ಪ ವೇಸ್ಟು  
ನಮ್ಮಪ್ಪ ಶಿಸ್ತು ಚಿಕ್ಕಪ್ಪ ವೇಸ್ಟು ಅಯ್ಯಯ್ಯೋ ತಮ್ಮಯ್ಯ ಸುಸ್ತೂ ... 
ಖುಷಿಯಲಿ ಓಡು ರಪಪಪಪಾ ಬಯಲಲಿ ಓಡು ರಪಪಪಪಾ 
ಪಾರ್ಕಲಿ ಜೋಡಿ ಕೂಡಿ ಓಡೋಣ ... 
ಲಾಲಾ ಲಾಲಾಲಾ ಲಾ  ಲಾಲಾ ಲಾಲಾಲಾ ಲಾ  

ನಮ್ಮಪ್ಪ ಏಕೆ ಓಡುವಾ... ತನಗೊಬ್ಬ ಮಗನು ಸಿಕ್ಕಿದ 
ಚಿಕ್ಕಪ್ಪ ಏಕೆ ಓಡುವಾ... ಗೊತ್ತಿಲ್ಲ ಪಾಪ ಸೋಲುವಾ 
ನಮ್ಮಯ ಓಟ ಏತಕೆ ಎಲ್ಲರ ಹಿಂದೆ ಮೋಜಿಗೆ 
ಅಪ್ಪನು ಗುಸುಗುಸು ಉಸಿರನು ಬಿಡುವನು 
ಹುಡುಗನ ತುಟಿಯಲಿ ಮುಸಿ ಮುಸಿ ನಗುವನು 
ಅರ್ಲಿ ಮಾರ್ನಿಂಗ್ ಮಾಡು ಜಾಗಿಂಗ್ 
ಖುಷಿಯಲಿ ಓಡು ಬಯಲಲಿ ಓಡು ಪಾರ್ಕಲಿ ಜೋಡಿ ಕೂಡಿ ಓಡೋಣ ... 
ಹೊಸ ಜನರನು  ನೋಡು ನೋಡು ಜೊತೆ ಬೆರೆಯುತ ಆಡು ಆಡು 
ಕಸರತ್ತು ನೀನು ಕೂಡ ಮಾಡಿ ನೋಡು 
 
ಆ ಬೊಜ್ಜು ಮೈಯ್ಯ ಕರಗಿಸಲು ಓಡುತಿರುವ ಆ ದಡಿಯ 
ಸಾವನು ಗೆಲ್ಲೋ ಆಸೆಗೆ ಇಣುಕುತ್ತಿರುವ ಈ ಮುದಿಯ 
ಯೌವ್ವನ ಬಂದು ಕಾಡಿದೆ ಹೆಣ್ಣಿನ ಹಿಂದೆ ಓಡಿದೆ ... 
ವಿಧ ವಿಧ ವಯಸ್ಸಿನ ಜನತೆಯ ಕೂಡಿ 
ತರತರ ಚಪಲಕೆ ಜಗವೇ ಓಡಿ 
ಅರ್ಲಿ ಮಾರ್ನಿಂಗ್ ಮಾಡು ಜಾಗಿಂಗ್ 
ಖುಷಿಯಲಿ ಓಡು ಬಯಲಲಿ ಓಡು ಪಾರ್ಕಲಿ ಜೋಡಿ ಕೂಡಿ ಓಡೋಣ ... 
ಹೊಸ ಜನರನು  ನೋಡು ನೋಡು ಜೊತೆ ಬೆರೆಯುತ ಆಡು ಆಡು 
ಕಸರತ್ತು ನೀನು ಕೂಡ ಮಾಡಿ ನೋಡು 
ಖುಷಿಯಲಿ ಓಡು ಬಯಲಲಿ ಓಡು ಪಾರ್ಕಲಿ ಜೋಡಿ ಕೂಡಿ ಓಡೋಣ ... 
--------------------------------------------------------------------------------------------------------------------

No comments:

Post a Comment