1806. ರಾಜಾ ಕೆಂಪು ರೋಜ (೧೯೯೦)



ರಾಜಾ ಕೆಂಪು ರೋಜ ಚಲನಚಿತ್ರದ ಹಾಡುಗಳು
  1. ಸಖಿ ಯಾರೇ ಕರೆದವರೂ
  2. ಗುಲಾಬಿ ರಂಗೋ ರಂಗು
  3. ಬಾನು ಭೂಮಿ ಸೇರಿದಂತೆ
  4. ಈ ಹಾಳು ಸೊಳ್ಳೆ ಕಡಿದಾಗ
  5. ಆತುರ ತೋರಿ ಆಡಿದ ಮಾತು
  6. ಸವಿ ನೆನಪು ಅದೇಕೋ ಕಣೇ
ರಾಜಾ ಕೆಂಪು ರೋಜ (೧೯೯೦) - ಸಖಿ ಯಾರೇ ಕರೆದವರೂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಯಾರೇ ಕರೆದವರು ಸಖಿ ಯಾರೇ ಕರೆದವರು
ಸಖಿ ಯಾರೇ ಕರೆದವರು
ಹುಣ್ಣಿಮೆ ರಾತ್ರೀಲಿ ತಣ್ಣನೆ ಗಾಳೀಲಿ ಮೆಲ್ಲನೆ ಕಿವಿಯಲ್ಲಿ ಸಣ್ಣನೆ ದನಿಯಲ್ಲಿ
ನಲ್ಲನ ಹಾಗೆ ಸೆರಗನು ಹಿಡಿದೆಳೆದು
ಯಾರೇ ಕರೆದವರು ಸಖಿ ಯಾರೇ ಕರೆದವರು
ಹೇ.. ಬೇಬಿ ಲುಕ್ ಈಯರ್ ಮೈ ನೇಮ್ ಇಸ್ ಮಿಸ್ಟರ್ ರಾಜ
ನೌವ್ ಆಯ್ ವಿಲ್ ಷೋ ಯೂ ವಾಟ್ ಡ್ಯಾನ್ಸಿಂಗ್ ಇಸ್
ನಾನೇ ... ಯ್ಯಾ... ನಾನೇ ನಾನೇ ನಿನ್ನ ಕರೆದವನು
ನಾನೇ.. ಓಯ್... ನಾನೇ ನಾನೇ ನಿನ್ನ ಕರೆದವನು
ಜಾಣೇ ನಾನೇ ನಾನೇ ಸೆರಗನು ಎಳೆದವನು

ಸೆರಗನು ಹಿಡಿದೋನು ಪ್ರಿಯತಮೆ ಎಂದೋನು
ಎದುರಿಗೆ ಬಂದಾಗ ನಾಚಿಕೆ ಬರದೇನು
ನನ್ನಲ್ಲಿ ಹುಡುಗಾಟ ಬೇಡದ ತುಂಟಾಟ
ಹೇಳೇ ಸರಿಯೇನು ಸಖಿ ಹೇಳೇ ಸರಿಯೇನು

ಕಣ್ಣು ಕಣ್ಣು ಹ್ಹಾ... ಕಲೆತ ಮೇಲೆ ಹ್ಹಾ... ಬೇರೆ ಮಾತೇನೂ
ಹೇ... ಕಣ್ಣು ಕಣ್ಣು ಕಮಾನ್ ಹೇ... ಕಲೆತ ಮೇಲೆ ಯ್ಯಾ... ಬೇಬಿ
ಬೇರೆ ಮಾತೇನೂ ಪ್ರೀತಿಯಿಂದ ಬೆರೆತ ಮೇಲೆ ಭೀತಿ ನಮಗೇನು
ಪ್ರೀತಿಯ ಮಾತೇಕೆ ಭೀತಿಯ ಮಾತೇಕೆ ಹೆದರಿದ ಹೆಣ್ಣಲ್ಲಿ ಆಸೆಯೂ ನಿನಗೇಕೆ
ರಾಧೆಯು ನಾನಲ್ಲ ಕೃಷ್ಣನು ನೀನಲ್ಲ ದೂರ ಸರಿಯಿನ್ನೂ
ಬೇಗ... ದೂರ ಸರಿಯಿನ್ನೂ
----------------------------------------------------------------------------------------------------

ರಾಜಾ ಕೆಂಪು ರೋಜ (೧೯೯೦) - ಗುಲಾಬಿ ರಂಗೋ ರಂಗು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಶ್ರೀರಂಗ, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ, ಕೋರಸ್

ಆಹ್ ಚಿನ್ನ ನನ್ ರನ್ನ ನನ್ ಮುತ್ತು ನನ್ ಹವಳಾ 
ಅರೇ ಗುಲಾಬಿ ರಂಗೋ ರಂಗು ನಾನು ಕಾಲೇಜೂ ಕಿಂಗೋ ಕಿಂಗು 
ಓ ಗುಲಾಬಿ ರಂಗೋ ರಂಗು ನಾನು ಕಾಲೇಜೂ ಕಿಂಗೋ ಕಿಂಗು 
ಗೆದ್ದೋರು (ಜಾಣಮರಿ) ಬಿದ್ದೋರು (ಕೂಸುಮರಿ) 
ಬೆಪ್ಪಾಗಿ (ಹಲ್ಲು ಕಿರಿ) ಬೇಕೇನು (ಕಳ್ಳ ಕುರಿ) 
ಅರೇ ಮೋಟು ಜಡೆ ಕುಲುಕು ನಡೆ ಮುದ್ದು ಮುಖ ಉದ್ದಿನ ವಡೆ 
ಚಾಲಾಕಿ ನಾಯ್ಡೋ ನಾಯ್ಡು ನಮ್ಮ ಹುಬ್ಬಲ್ಲು ಸುಬ್ಬರಾಯ್ಡು 
ಚಾಲಾಕಿ ನಾಯ್ಡೋ ನಾಯ್ಡು ನಮ್ಮ ಹುಬ್ಬಲ್ಲು ಸುಬ್ಬರಾಯ್ಡು 
ಕ್ಲಾಸಲ್ಲಿ (ಮುದ್ದು ಕುರಿ) ಮಾತಲ್ಲಿ (ಗುಳ್ಳೆನರಿ)   
ದಾದಾತ.. (ತಸ್ಸಗಿರಿ) ಬಾ...ಬಾ... (ಬುಡಂಗಿ)
ಬಿಎಸ್ಈ  ಗ್ರ್ಯಾಜೆಯೇಟು ಬುದ್ದಿಲಿ ಈಡಿಯಟೂ   
ಗುಲಾಬಿ ರಂಗೋ ರಂಗು ನಾನು ಕಾಲೇಜೂ ಕಿಂಗೋ ಕಿಂಗು ಆ...ಹಾ 
ಯಮ್ಮಾ... ಚಾಲಾಕಿ ನಾಯ್ಡೋ ನಾಯ್ಡು ನಮ್ಮ ಹುಬ್ಬಲ್ಲು ಸುಬ್ಬರಾಯ್ಡು... ಅಯ್ಯೋ... 
 
ಕೋಟು ಜೀನ್ಸು ಪ್ಯಾಂಟು ಹ್ಯಾಟು ಹಾಕಿದ ಈ ಬ್ಯೂಟಿ ಹೇಗಿದೇ ... 
ವ್ವೆ ವ್ವೆ ವ್ವೆ ವ್ವೆ ವ್ವೆ .... ಕುರ್ ಕುರ್ ಕುರ್... 
ಅರೆರೇ ಕೋಟು ಹ್ಹಾ ಜೀನ್ಸು ಪ್ಯಾಂಟು ಹ್ಯಾಟು ಹ್ಹಾ 
ಹಾಕಿದ ಈ ಬ್ಯೂಟಿ ಹೇಗಿದೇ  ಹಾಡಿ ಹ್ಹಾ ಪ್ಲಾನೂ ಮಾಡಿ 
ಟೋಪಿ ಹಾಕಿದ ಈ ಜೋಕು ಹೇಗಿದೇ ... ಹೇ 
ಕಾಲೇಜು ಕಿನ್ನರೀ ಟೀನೇಜು ಸುಂದರೀ 
ಕೈಯ್ಯಗೊಂದು ಕತ್ತರಿ ಬೇಕೇನೇ ಬಿತ್ತರಿ   
ಮುನಿಸೂ... ಹ್ಹಾ... ಬಿರುಸೂ... ಹ್ಹಾ 
ಮುನಿಸು ಬಿರುಸು `ನಡೆಯದು ಪ್ಯಾರೇ ... 
ಚಾಲಾಕಿ ನಾಯ್ಡೋ ನಾಯ್ಡು ನಮ್ಮ ಹುಬ್ಬಲ್ಲು ಸುಬ್ಬರಾಯ್ಡು... ಅಯ್ಯೋ... 
ಅರೇ ಗುಲಾಬಿ ರಂಗೋ ರಂಗು ನಾನು ಕಾಲೇಜೂ ಕಿಂಗೋ ಕಿಂಗು ಕಿಂಗು ಕಿಂಗು ಕಿಂಗು 

ಹೇ... ಹೇ...  ಹೇ... ಹೇ...  ಹೇ... ಹೇ... ಲಾಲಾಲಾಲಾಲಾ...ಲಾಲಾಲಾಲಾಲಾ...  
ಆಜ್ ಕೆಂಪು ರೋಜಾ ನಿನ್ನ ಸಂಚನು ನಾನೆಲ್ಲ ಬಲ್ಲೇನು 
ಆಜ್ ಕೆಂಪು ರೋಜಾ ನಿನ್ನ ಸಂಚನು ನಾನೆಲ್ಲ ಬಲ್ಲೇನು 
ಗಂಡು ಬೆಂಕಿ ಚೆಂಡು ಎಂದು ಸೋಲದ ಕಿಲಾಡಿ ಮಲ್ಲನು... 
ಕಿಲಾಡಿ ಮಲ್ಲಡ ಏ ಉರಿ ಅಲ್ಲುಡ ನಾವೆಲ್ಲಾ ಕನ್ನಡ ನೀವೆಲ್ಲ ಬೊಂಬಡಾ 
ಬೇಕಾ.... (ಓಯ್) ನಿನಗೆ (ಓಯ್) ಬೇಕಾ ನಿನಗೆ ಬಿಸಿ ಬಿಸಿ ಬೋಂಡಾ 
ಅರೇ ಗುಲಾಬಿ ರಂಗೋ ರಂಗು ನಾನು ಕಾಲೇಜೂ ಕಿಂಗೋ ಕಿಂಗು 
ಅರೆರೇ ಚಾಲಾಕಿ ನಾಯ್ಡೋ ನಾಯ್ಡು ನಮ್ಮ ಹುಬ್ಬಲ್ಲು ಸುಬ್ಬರಾಯ್ಡು... ಅಯ್ಯೋ... 
ಗೆದ್ದೋರು (ಜಾಣಮರಿ) ಮಾತಲ್ಲಿ (ಗುಳ್ಳೆ ನರಿ) 
ಬೆಪ್ಪಾಗಿ (ಹಲ್ಲು ಕಿರಿ) ದಾದಾತ (ತಸ್ಸಾಗಿರಿ) 
ಅರೇ ಮೋಟು ಜಡೆ ಕುಲುಕು ನಡೆ ಮುದ್ದು ಮುಖ ಉದ್ದಿನ ವಡೆ 
ಚಾಲಾಕಿ ನಾಯ್ಡೋ ನಾಯ್ಡು ನಮ್ಮ ಹುಬ್ಬಲ್ಲು ಸುಬ್ಬರಾಯ್ಡು... ಅಯ್ಯೋ... 
ಅರೆರೇ ನಾನು ಕಾಲೇಜೂ ಕಿಂಗೋ ಕಿಂಗು ಕಿಂಗು ಕಿಂಗು ಕಿಂಗು ಕಿಂಗು 
ಲಾಲಾಲಾಲಾಲಾ ಲಾಲಾಲಾಲಾಲಾ ಲಾಲಾಲಾಲಾಲಾ 
----------------------------------------------------------------------------------------------------

ರಾಜಾ ಕೆಂಪು ರೋಜ (೧೯೯೦) - ಬಾನು ಭೂಮಿ ಸೇರಿದಂತೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ

ಹೇಹೇ...  ಹೇಹೇ ಹೇಹೇ ಹೇಹೇ ಹೇ...  ಓಓಓಓಓಓಓ... 
ಹೇ.. ಬಾನು ಭೂಮಿ ಸೇರಿದಂತೆ ಆಯ್ತು ನನ್ನ ಮೈಯ್ಯಗೆ ನಿಂತು ಸೋಕಿದಂತೆ ಆಯ್ತು 
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು  
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ  
ಬಾನು ಭೂಮಿ ಸೇರಿದಂತೆ ಆಯ್ತು ನನ್ನ ಮೈಯ್ಯಗೆ ನಿಂತು ಸೋಕಿದಂತೆ ಆಯ್ತು 
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ  

ಸವಿಯಾದ ಕನಸುಗಳು ನನ್ನ ಕಣ್ಣ ತುಂಬಿವೆ 
ಹೊಸದಾದ ಬಯಕೆಗಳು ಎದೆಯಲ್ಲಿ ಉಕ್ಕಿ ಬಂದಿವೆ 
ನಿನ್ನ ಹಾಗೇ (ಆಹಾ) ಆಸೆಗಳು (ಒಹೋ) ನಲ್ಲ ನನ್ನ ಕಾಡಿವೇ... ಆಆಆ 
ಅನುರಾಗ (ಹೇ... ಹೇ...) ಇಂಪಾಗಿ (ಓಹೋ) ಹೊಸದೊಂದು ರಾಗ ಹಾಡಿದೆ 
ನಿನ್ನ ಮಾತೆಲ್ಲ ಹೊನ್ನ ಹೂವಂತೇ ನಿನ್ನ ತುಟಿ ಮುತ್ತು ಸವಿ ಜೇನಂತೇ... 
ನಲ್ಲ ಇನ್ನೊಂದು ಕೋಡಲಾರೆ ನಾನೀಗಲೇ... (ಆಹಾ) 
ಬಾನು ಭೂಮಿ ಸೇರಿದಂತೆ ಆಯ್ತು ನನ್ನ ಮೈಯ್ಯಗೆ ನಿಂತು ಸೋಕಿದಂತೆ ಆಯ್ತು 
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ  

ನಿಜವನ್ನೇ (ಹೂಂ ಹೂಂ) ನುಡಿಯುವೇನು (ಓ ಓ) ನಿನಗಿಂದು ಸೋತೆನು (ಆಆಆಹಾ)
ಒಲವಿಂದ (ಓ ಓ) ಬೆರೆತಾಗ (ಹೇ ಹೇ) ಹೊಸಲೋಕ ಒಂದು ಕಂಡೇನು... 
ಮನಸ್ಸನ್ನು (ಆಹಾ) ಅರಿತಾಗ (ಓ ಓ) ಕಹಿಯನ್ನು ಕಾಣೆನು... (ಆ) 
ಬದುಕೆಲ್ಲ (ಆಹಾ) ಸಿಹಿಯಾಗಿ (ಆಹಾ) ಸುಖವೊಂದೇ ಇಂದು ಕಂಡೇನು 
ಇನ್ನೂ ಮಾತೇಕೆ ದೂರ ಹೀಗೇಕೆ ಇಂಥ ಸಂಕೋಚ ಇನ್ನೂ ನಮಗೇಕೆ 
ನನ್ನ ತುಟಿಗೊಂದು ಮುತ್ತನ್ನು (ಹೂ.. ಹೂಂ) ಅಹ್ಹಹ್ಹಹ್ಹಹ್ಹಾ... 
ಹೇ... ಬಾನು ಭೂಮಿ ಸೇರಿದಂತೆ ಆಯ್ತು ನನ್ನ ಮೈಯ್ಯಗೆ ನಿಂತು ಸೋಕಿದಂತೆ ಆಯ್ತು 
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು ಚಿನ್ನ ನಿನ್ನನ್ನು ಬಿಡಲಾರೆ ಇನ್ನೆಂದಿಗೂ  
ಹೇ... ಬಾನು ಭೂಮಿ ಸೇರಿದಂತೆ ಆಯ್ತು ನನ್ನ ಮೈಯ್ಯಗೆ ನಿಂತು ಸೋಕಿದಂತೆ ಆಯ್ತು 
ಕೆನ್ನೆ ಬಿಸಿಯಾಯಿತು ಇನ್ನೊಂದು ಬೇಕೆಂದಿತು ಲಲಲಲಾ ಲಾಲಲಲಲಾಲ  
---------------------------------------------------------------------------------------------------

ರಾಜಾ ಕೆಂಪು ರೋಜ (೧೯೯೦) - ಈ ಹಾಳು ಸೊಳ್ಳೆ ಕಡಿದಾಗ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಶ್ರೀ.ರಂಗ, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ

ಗಂಡು : ಈ ಹಾಳು ಸೊಳ್ಳೆ ಕಡಿದಾಗ ಈ ಪ್ರೇಮದ ಜ್ವರವು ಬಂದಾಗ 
            ಈ ಹಾಳು ಸೊಳ್ಳೆ ಕಡಿದಾಗ ಈ ಪ್ರೇಮದ ಜ್ವರವು ಬಂದಾಗ 
            ಫಜೀತಿ ಅಯ್ಯೋ... ಮೈಯ್ಯ ಬಿಸಿಯಾಗಿ ನಿದ್ದೆ ಬಾರದಲ್ಲ  
            ಈ ಹಾಳು ಸೊಳ್ಳೆ ಕಡಿದಾಗ ಈ ಪ್ರೇಮದ ಜ್ವರವು ಬಂದಾಗ 
            ಫಜೀತಿ ಅಯ್ಯೋ... ಮೈಯ್ಯ ಬಿಸಿಯಾಗಿ ನಿದ್ದೆ ಬಾರದಲ್ಲ  

ಗಂಡು :  ಓ...ಓಓಓಓಓ ಮಳ್ಳಿ ಹಂಗೆ ಮಲಗಿರುವ ಬಳ್ಳಿ ಹಂಗೆ ಬಳುಕೋಳೇ 
            ಕಳ್ಳ ನಿದ್ದೆ ಹೋಗಿರುವ ಮಲ್ಲಿಗೆಯ ಮೈಯ್ಯೋಳೇ... 
            ಮಳ್ಳಿ ಹಂಗೆ ಮಲಗಿರುವ ಬಳ್ಳಿ ಹಂಗೆ ಬಳುಕೋಳೇ 
            ಕಳ್ಳ ನಿದ್ದೆ ಹೋಗಿರುವ ಮಲ್ಲಿಗೆಯ ಮೈಯ್ಯೋಳೇ... 
            ಮಧ್ಯರಾತ್ರಿಯಲಿ ನಿದ್ದೆಬಾರದೇ    
            ಮಧ್ಯರಾತ್ರಿಯಲಿ ನಿದ್ದೆಬಾರದೇ ಮನಸ್ಸು ಬಿತ್ತು ನಿನ್ನ ಮೇಲೆ ಬಿತ್ತು ನಿನ್ನ ಮೇಲೆ   
ಹೆಣ್ಣು : ಸನ್ನೆಲೇ ನೀನು ಕರೆದಾಗ ಈ ಮನದ ಕದವ ತೆರೆದಾಗ ನನ್ನಾಸೆಯ ಮಾವ ನಿನಗಾಗಿ 
          ನಾ ಎದ್ದು ಬಂದೆನಲ್ಲಾ... 
ಗಂಡು : ಈ ಹಾಳು ಸೊಳ್ಳೆ ಕಡಿದಾಗ         ಹೆಣ್ಣು : ಈ ಪ್ರೇಮದ ಜ್ವರವು ಬಂದಾಗ 
ಗಂಡು : ಫಜೀತಿ ಅಯ್ಯೋ... ಮೈಯ್ಯ ಬಿಸಿಯಾಗಿ ನಿದ್ದೆ ಬಾರದಲ್ಲ  

ಹೆಣ್ಣು : ಓ... ಓಓಓ ... ಮನವ ಗೆದ್ದ ನನ್ನ ಜಾಣ ನಿನ್ನ ಮೇಲೆ ನನ್ನ ಪ್ರಾಣ 
          ಭಾವಗಳು ಬೆರೆತಿರಲು ಇಲ್ಲೇ ನಮ್ಮ ಕಲ್ಯಾಣ... ಹ್ಹಾ 
          ಮನವ ಗೆದ್ದ ನನ್ನ ಜಾಣ ನಿನ್ನ ಮೇಲೆ ನನ್ನ ಪ್ರಾಣ 
          ಭಾವಗಳು ಬೆರೆತಿರಲು ಇಲ್ಲೇ ನಮ್ಮ ಕಲ್ಯಾಣ... ಹ್ಹಾ    
          ಮೂರೂ ಲೋಕಗಳು ಮುಳುಗಿ ಹೋದರೂ 
          ಮೂರೂ ಲೋಕಗಳು ಮುಳುಗಿ ಹೋದರೂ 
         ನೀನೇ ನನ್ನ ಯಜಮಾನ... ನನ್ನ ಯಜಮಾನ 
ಗಂಡು : ಬರೀನಾ ಹಾರಾವೇ ಚಿನ್ನದಾನ ನಾ ಕೊಡುವೆ ಮುತ್ತಿನ ಬಹುಮಾನ 
            ನಮ್ಮತ್ತೇ ಮಗಳೇ ಐನಾತಿ ನಿನಗ್ಯಾರು ಸಾಟಿಯಿಲ್ಲ 
ಗಂಡು : ಈ ಹಾಳು ಸೊಳ್ಳೆ ಕಡಿದಾಗ         ಹೆಣ್ಣು : ಈ ಪ್ರೇಮದ ಜ್ವರವು ಬಂದಾಗ 
ಗಂಡು : ಫಜೀತಿ ಅಯ್ಯೋ... ಮೈಯ್ಯ ಬಿಸಿಯಾಗಿ ನಿದ್ದೆ ಬಾರದಲ್ಲ  
----------------------------------------------------------------------------------------------------

ರಾಜಾ ಕೆಂಪು ರೋಜ (೧೯೯೦) - ಆತುರ ತೋರಿ ಆಡಿದ ಮಾತು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ,

ಆತುರ ತೋರಿ ಆಡಿದ ಮಾತು ಹಾಳಾಯ್ತೋ 
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತು 
ಆತುರ ತೋರಿ ಆಡಿದ ಮಾತು ಹಾಳಾಯ್ತೋ 
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ  
ಅವಮಾನದ ಘಳಿಗೆ ಬರಲು ನನ್ನ ಕೋಮಲ ಹೃದಯಕೆ ಅಳಲು 
ತೊಳಲಾಟದ ಅಲೆಗಳು ಮುತ್ತಲು ಬಿರುಗಾಳಿಗೆ ಕುದಿಯಿತು ಬಾಳಿನ ಕಡಲು 
ಆತುರ ತೋರಿ ಆಡಿದ ಮಾತು ಹಾಳಾಯ್ತೋ 
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ 

ಝಣ ಝಣದ ಕುಣಿತಕ್ಕೆ ಮಣಿಯದ ಜನರು ಯಾರಿಹರೂ 
ಝಣ ಝಣದ ಕುಣಿತಕ್ಕೆ ಮಣಿಯದ ಜನರು ಯಾರಿಹರೂ 
ಮಿಣು ಮಿಣುಗೋ ಹೊನ್ನಿನಲಿ ಮತಿಯನು ಮರೆತು ಸೋಲುವರು 
ಅಂಕೆಯ ಮೀರಿ ಬಿಂಕವ ಬೀರೋ ಮೋಜನು ಮಾಡಿ ಜಂಬವ ತೋರು 
ಅಂತಸ್ತೆಲ್ಲಿ... ಶಾಶ್ವತವೋ... 
ಆತುರ ತೋರಿ ಆಡಿದ ಮಾತು ಹಾಳಾಯ್ತೋ 
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ 

ಗರಿ ಗರಿಯ ವೇಷಕ್ಕೆ ಒಲಿಯದ ಮಂದಿ ಎಲ್ಲಿಹರು... ಹ್ಹಾ... 
ಗರಿ ಗರಿಯ ವೇಷಕ್ಕೆ ಒಲಿಯದ ಮಂದಿ ಎಲ್ಲಿಹರು
ಹೊಸ ಹೊಸದು ಪಾಶಕ್ಕೆ ಕಲಿತವರೆಲ್ಲಾ ಸಿಲುಕಿಹರು 
ಪ್ರೀತಿ ಸ್ನೇಹ ಮರೆಯುತ ಸಾಗೋ... 
ಬಣ್ಣ ಬಣ್ಣ ಮೆರೆಯುತ ಬೀಗೋ ಅಂತಸ್ಥೆಲ್ಲಿ... ಶಾಶ್ವತವೋ... 
ಆತುರ ತೋರಿ ಆಡಿದ ಮಾತು ಹಾಳಾಯ್ತೋ 
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ 
ಅವಮಾನದ ಘಳಿಗೆ ಬರಲು ನನ್ನ ಕೋಮಲ ಹೃದಯಕೆ ಅಳಲು 
ತೊಳಲಾಟದ ಅಲೆಗಳು ಮುತ್ತಲು ಬಿರುಗಾಳಿಗೆ ಕುದಿಯಿತು ಬಾಳಿನ ಕಡಲು 
ಆತುರ ತೋರಿ ಆಡಿದ ಮಾತು ಹಾಳಾಯ್ತೋ... ಅಹ್ಹಹ್ಹ...  
ಚಿಂತೆಯ ಮರೆಯಲು ಈ ಪರಮಾತ್ಮ ಬೇಕಾಯ್ತೋ... ಅಹ್ಹಹ್ಹಹ್ಹಾ.. ಊಊಊಊ
-------------------------------------------------------------------------------------------------

ರಾಜಾ ಕೆಂಪು ರೋಜ (೧೯೯೦) - ಸವಿ ನೆನಪು ಅದೇಕೋ ಕಣೇ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಜಾನಕೀ

ಸವಿ ನೆನಪು ಅದೇಕೋ ಕಾಣೆ ತೇಲಾಡಿ... 
ಹೃದಯವನು ಕಲಕುತಿದೆ ಅನುದಿನ ಈ ಬಾಳಲಿ 
ಸವಿ ನೆನಪು ಅದೇಕೋ ಕಾಣೆ ತೇಲಾಡಿ... 
ಹೃದಯವನು ಕಲಕುತಿದೆ ಅನುದಿನ ಈ ಬಾಳಲಿ 

ಅಧರ ತಂದಾಗ ನೀನು ಆನಂದ ಚಿಮ್ಮಿತು 
ಮಧುರ ಪರಾಗ ಜೇನು ಮೈಯ್ಯ ತುಂಬಿ ಅರಳಿತು 
ಅಧರ ತಂದಾಗ ನೀನು ಆನಂದ ಚಿಮ್ಮಿತು 
ಮಧುರ ಪರಾಗ ಜೇನು ಮೈಯ್ಯ ತುಂಬಿ ಅರಳಿತು 
ನೀನೇಕೆ ದೂರವಾಗಿ ಈ ನೋವು ನೀಡಿದೆ 
ನೀನೇಕೆ ದೂರವಾಗಿ ಈ ನೋವು ನೀಡಿದೆ 
ಸವಿ ನೆನಪು ಅದೇಕೋ ಕಾಣೆ ತೇಲಾಡಿ... 
ಹೃದಯವನು ಕಲಕುತಿದೆ ಅನುದಿನ ಈ ಬಾಳಲಿ 

ಲಾಲಾಲಾಲಾಲಾ... ಲಾಲಾಲಾಲಾಲಾ... ಲಾಲಾಲಾಲಾಲಾ... ಲಾಲಾಲಾಲಾಲಾ... 
ಸರಸ ಸಲ್ಲಾಪವೆಲ್ಲ ಕನಸಂತೆ ಜಾರಿದೇ... ಹೇಹೇಹೇ 
ಆ ಮೋಹ ದಾಹವಿಂದು ಮುಳ್ಳಾಗಿ ಇರಿದಿದೆ 
ಸರಸ ಸಲ್ಲಾಪವೆಲ್ಲ ಕನಸಂತೆ ಜಾರಿದೇ... ಹೇಹೇಹೇ 
ಆ ಮೋಹ ದಾಹವಿಂದು ಮುಳ್ಳಾಗಿ ಇರಿದಿದೆ 
ನೀ ನನ್ನ ಸೇರಲೆಂದು ಈ ಜೀವ ಕಾದಿದೆ 
ನೀ ನನ್ನ ಸೇರಲೆಂದು ಈ ಜೀವ ಕಾದಿದೆ 
ಸವಿ ನೆನಪು ಅದೇಕೋ ಕಾಣೆ ತೇಲಾಡಿ... 
ಹೃದಯವನು ಕಲಕುತಿದೆ ಅನುದಿನ ಈ ಬಾಳಲಿ....  
----------------------------------------------------------------------------------------------------

No comments:

Post a Comment