1810. ಬಾಳಿದ ಮನೆ (೧೯೯೭)

ಬಾಳಿದ ಮನೆ ಚಲನಚಿತ್ರದ ಹಾಡುಗಳು 
  1. ತಾಯಿ ತಂದೆ ಪ್ರೀತಿಯಿಂದ 
  2. ನಿನ್ನ ಕಂಡು ಈ ಮನಸು 
  3. ಆ ವಿಧಿ ಕೆರಳಿತೇ 
  4. ನಗುನಗುತ ಬಂದವಳೇ 
  5. ಬಾಳಿದ ಮನೆ  
  6. ಆಹಾ ಛಳಿಯ ತಾಳೆನು 
ಬಾಳಿದ ಮನೆ (೧೯೯೭) - ತಾಯಿ ತಂದೆ ಪ್ರೀತಿಯಿಂದ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ರುದ್ರಮೂರ್ತಿ ಶಾಸ್ತ್ರೀ ಗಾಯನ : ಎಸ್.ಪಿ.ಬಿ. ಚಿತ್ರಾ

ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ 
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ 
ನೀವೇ ನಮ್ಮ ದೇವರು ನೀವೇ ಶ್ರೀಗುರು ನೀವೇ ನಮ್ಮ ಭಾಗ್ಯವಂತರು 
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ 
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ 
ಸ ನಿ ಪ ಮ ನಿ ಪ ಮ ದ ಚಮ್ ಚಮ್ ಚಮ್ ಚ್ ನ ನ ಚಮ್ ಚಮ್ 

ಕೈಯ್ಯ ತುತ್ತು ನೀಡುವ ತಾಯಿ ಪೂಜ್ಯ ದೇವತೆ ಮಾತನು ಆಡಲು ನೀತಿ ಸಂಹಿತೆ 
ಬಾಳ ಹಾದಿ ತೋರುವ ತಂದೆ ಬುದ್ದಿಯ ಹೇಳಲು 
ತಂಗಿ ತಮ್ಮ ಎಲ್ಲರ ಕೂಡಿ ನಲಿಯೇ ಹಾಡಿ ಕುಣಿಯೇ ಮನೆಯೇ ನಂದನ 
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ 
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ 
ನೀವೇ ನಮ್ಮ ದೇವರು ನೀವೇ ಶ್ರೀಗುರು ನೀವೇ ನಮ್ಮ ಭಾಗ್ಯವಂತರು 
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ 
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ 

ಪ್ರೇಮದಿಂದ ಸಾಗಲು ಇದುವೇ ನಂದ ಗೋಕುಲ 
ರಾಗದ ರಂಗಿನ ಒಲುಮೆ ಸಂಕುಲ ಹೊಂದಿ ನಾವು ಬಾಳಲು 
ಹೃದಯವ ಅರಿಯಲು ನಲ್ಮೆ ಭಾಷೆಯು ತಾಳ್ಮೆಯಿಂದ ಸಂಸಾರ ಸ್ವರ್ಗವು 
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ 
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ 
ನೀವೇ ನಮ್ಮ ದೇವರು ನೀವೇ ಶ್ರೀಗುರು ನೀವೇ ನಮ್ಮ ಭಾಗ್ಯವಂತರು 
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ 
ಸ್ನೇಹ ಸಹನೆ ಶಾಂತಿಯಿಂದ ತುಂಬಿದ ಮನೆ 
-------------------------------------------------------------------------------------------------------

ಬಾಳಿದ ಮನೆ (೧೯೯೭) - ನಿನ್ನ ಕಂಡು ಈ ಮನಸು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ಚಿತ್ರಾ

ನಿನ್ನ ಕಂಡು ಈ ಮನಸು ಕುಣಿದಾಡಿದೆ ನೀ ಬಳಿಗೆ ಬಂದಾಗ ರಂಗೇರಿದೆ 
ಬಯಕೆಗಳು ಪುಟಿಪುಟಿದು ನಲಿದಾಡಿದೆ 
ನಿನ್ನ ಕಂಡು ಈ ಮನಸು ಕುಣಿದಾಡಿದೆ ನೀ ಬಳಿಗೆ ಬಂದಾಗ ರಂಗೇರಿದೆ 
ಬಯಕೆಗಳು ಪುಟಿಪುಟಿದು ನಲಿದಾಡಿದೆ 
ನಿನ್ನ ಕಂಡು ಈ ಮನಸು ಕುಣಿದಾಡಿದೆ ನೀ ಬಳಿಗೆ ಬಂದಾಗ ರಂಗೇರಿದೆ 

ಒಮ್ಮೆ ನೀನು ನನ್ನ ಕೈಯ್ಯ ಸ್ಪರ್ಶ ಮಾಡಲು 
ಒಮ್ಮೆ ನೀನು ನನ್ನ ಕೈಯ್ಯ ಸ್ಪರ್ಶ ಮಾಡಲು ಜುಮ್ಮಂದು ಮೈಯ್ಯಲ್ಲಿ ಏನೋ ಆವೇಗ 
ಮೆಚ್ಚಿದೋಳೆ ಲಜ್ಜೆ ಏಕೆ ನನ್ನ ಸೇರಲು 
ಮೆಚ್ಚಿದೋಳೆ ಲಜ್ಜೆ ಏಕೆ ನನ್ನ ಸೇರಲು ಹುಚ್ಚನು ಹಿಡಿಸಿದೆ ನಿನ್ನ ಅನುರಾಗ 
ಕಾಲ ಮೀರಿ ಹೋಗದಂತೆ ಸೇರಿ ಆಡುವಾ ಬಾಳನೆಲ್ಲ ಜಾಲಿಯಾಗಿ ಕಳೆಯುವ  
ನಿನ್ನ ಕಂಡು ಈ ಮನಸು ಕುಣಿದಾಡಿದೆ ನೀ ಬಳಿಗೆ ಬಂದಾಗ ರಂಗೇರಿದೆ 
ಬಯಕೆಗಳು ಪುಟಿಪುಟಿದು ನಲಿದಾಡಿದೆ 
ನಿನ್ನ ಕಂಡು ಈ ಮನಸು ಕುಣಿದಾಡಿದೆ ನೀ ಬಳಿಗೆ ಬಂದಾಗ ರಂಗೇರಿದೆ 

ಅಮ್ಮಂಗೂ ಚಿನ್ನ ನಿನ್ನ ಸೇವೆ ಮಾಡುವೆ 
ಅಮ್ಮಂಗೂ ಚಿನ್ನ ನಿನ್ನ ಸೇವೆ ಮಾಡುವೆ ಈ ನಿನ್ನ ಆರೈಕೆ ಎಂಥ ಭಾಗ್ಯವೇ 
ಪುಟ್ಟ ಪಾಪ ಹುಟ್ಟಿ ಬರಲಿ ತೊಟ್ಟಿಲ ತೂಗುವೇ 
ಪುಟ್ಟ ಪಾಪ ಹುಟ್ಟಿ ಬರಲಿ ತೊಟ್ಟಿಲ ತೂಗುವೆ ನಿನ್ನ ಕಂದ ಮಲಗಲು ಲಾಲಿ ಹಾಡುವೇ  
ಮೆಟ್ಟಿಲನ್ನು ಏರಬೇಡ ಎತ್ತಿಕೊಳ್ಳುವೇ ಪ್ರೀತಿಯಿಂದ ನಾನೇ ಅನ್ನ ಬಡಿಸುವೆ 
ನಿನ್ನ ಕಂಡು ಈ ಮನಸು ಕುಣಿದಾಡಿದೆ ನೀ ಬಳಿಗೆ ಬಂದಾಗ ರಂಗೇರಿದೆ 
ಬಯಕೆಗಳು ಪುಟಿಪುಟಿದು ನಲಿದಾಡಿದೆ 
ನಿನ್ನ ಕಂಡು ಈ ಮನಸು ಕುಣಿದಾಡಿದೆ ನೀ ಬಳಿಗೆ ಬಂದಾಗ ರಂಗೇರಿದೆ 
------------------------------------------------------------------------------------------------------

ಬಾಳಿದ ಮನೆ (೧೯೯೭) - ಆ ವಿಧಿ ಕೆರಳಿತೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ರುದ್ರಮೂರ್ತಿ ಶಾಸ್ತ್ರೀ ಗಾಯನ : ಎಸ್.ಪಿ.ಬಿ. ಚಿತ್ರಾ

ಆ ವಿಧಿ ಕೆರಳಿತೆ.... ಆ.. ಆಆಆ... ಆಆಆಆ... 
ಆ ವಿಧಿ ಕೆರಳಿತೆ ನಗುವ ನಲಿವೆಲ್ಲಾ ನೋವಾಯಿತೇ 
ಬದುಕೆಲ್ಲ ನೂರಾರು ಚೂರಾಯಿತೇ 
ಆ ವಿಧಿ ಕೆರಳಿತೆ ನಗುವ ನಲಿವೆಲ್ಲಾ ನೋವಾಯಿತೇ 
ಬದುಕೆಲ್ಲ ನೂರಾರು ಚೂರಾಯಿತೇ 

ಗೌರವದ ಗಣಿಯಾಗಿ ಬಾಳಿದ ಮನೆಯ 
ಗೌರವದ ಗಣಿಯಾಗಿ ಬಾಳಿದ ಮನೆಯ ಅಭಿಮಾನ ಬೀದಿಯಲಿ ಧೂಳಾಯಿತೇ... 
ಎಲ್ಲಕ್ಕೂ ಮಿಗಿಲಾದ ಸಂಸಾರವಾದ ಮನೆತನದ ಮರ್ಯಾದೆ ಹಾಳಾಯಿತೇ 
ಭೂಮಿಯೇ ಬಿರಿದರೇ ಆಸರೆ ಏನಿದೆ ದೇವರೇ ಮುನಿದರೆ ರಕ್ಷಣೆ ಎಲ್ಲಿದೇ .. 
ದೇವರೇ ಮುನಿದರೆ ರಕ್ಷಣೆ ಎಲ್ಲಿದೇ .. 
ಆ ವಿಧಿ ಕೆರಳಿತೆ ನಗುವ ನಲಿವೆಲ್ಲಾ ನೋವಾಯಿತೇ 
ಬದುಕೆಲ್ಲ ನೂರಾರು ಚೂರಾಯಿತೇ 
ಆ ವಿಧಿ ಕೆರಳಿತೆ ನಗುವ ನಲಿವೆಲ್ಲಾ ನೋವಾಯಿತೇ 

ವಾತ್ಸಲ್ಯದ ಸೆಳೆಯಾದ ಮನಸ್ಸುಗಳಲ್ಲಿ 
ವಾತ್ಸಲ್ಯದ ಸೆಳೆಯಾದ ಮನಸ್ಸುಗಳಲ್ಲಿ ನೂರಾರು ಬಗೆ ನೋವುಗಳ ನೆಲೆಯಾಯಿತೇ 
ಸೌಜನ್ಯದ ಸಿರಿಯಾದ ಈ ಸಂಸಾರವು ಅಪಮಾನದ ಬಲೆಯಲಿ ಸೆರೆಯಾಯಿತೇ 
ಪ್ರೀತಿಗೆ ಸಿಕ್ಕಿದೆ ದ್ವೇಷದ ಕಾಣಿಕೆ ತಪ್ಪನು ಮಾಡದೆ ಶಿಕ್ಷೆಯು ಏತಕೇ ... 
ತಪ್ಪನು ಮಾಡದೆ ಶಿಕ್ಷೆಯು ಏತಕೇ ... 
ಆ ವಿಧಿ ಕೆರಳಿತೆ ನಗುವ ನಲಿವೆಲ್ಲಾ ನೋವಾಯಿತೇ 
ಬದುಕೆಲ್ಲ ನೂರಾರು ಚೂರಾಯಿತೇ 
ಆ ವಿಧಿ ಕೆರಳಿತೆ ನಗುವ ನಲಿವೆಲ್ಲಾ ನೋವಾಯಿತೇ 
-------------------------------------------------------------------------------------------------------

ಬಾಳಿದ ಮನೆ (೧೯೯೭) - ನಗುನಗುತ ಬಂದವಳೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ಚಿತ್ರಾ

ನಗು ನಗುತ ಬಂದವಳೇ ಮಂದಾರ ಹೂವೇ ಸಿಂಗಾರದ ಸಿರಿಯೆ ನೀನಾಗಿರುವೇ 
ಸಿಂಗಾರದ ಸಿರಿಯೆ ನೀನಾಗಿರುವೇ 
ಚಾಂಚ ಜಾಂಚಾ ಚ ಚಾಂಚ ಜಾಂಚಾ ಚ ತಾರಾರಂ ತಾ ತಾರಾರಂ ತಾ 
ತಾರರತ್ತ ತಾರರತ್ತ ತಾ 

ಸವಿ ಮಾತನಾಡುವನೇ ಮಾತಲ್ಲೇ ಗೆಲ್ಲುವೆ ಜಾಣರಲ್ಲಿ ಜಾಣ ನೀನಲ್ಲವೇ 
ಜಾಣರಲ್ಲಿ ಜಾಣ ನೀನಲ್ಲವೇ 
ಪುಟ್ಟ ಬೊಂಬೆಯಂತೆ ನೀ ನಲಿಸುವೆ 
ಪುಟ್ಟ ಬೊಂಬೆಯಂತೆ ನೀ ನಲಿಸುವೆ ದಿನ ದಿನ ಮನಸಿನ ಚಿಂತೆ ಮರೆಸುವೆ 
ದೊಡ್ಡ ಮಾತು ದೊಡ್ಡತನ ನಿನ್ನಲ್ಲಿದೆ ನಿನ್ನಯ ಪ್ರೀತಿಯೇ ಎದೆಯಲ್ಲಿ ಚೇತನ 
ಎದೆಯಲ್ಲಿ ಚೇತನ ನೀನೇ ಆಗಿದೆ 
ಸವಿ ಮಾತನಾಡುವನೇ ಮಾತಲ್ಲೇ ಗೆಲ್ಲುವೆ ಜಾಣರಲ್ಲಿ ಜಾಣ ನೀನಲ್ಲವೇ 
ಜಾಣರಲ್ಲಿ ಜಾಣ ನೀನಲ್ಲವೇ 
ಚಾಂಚ ಜಾಂಚಾ ಚ ಚಾಂಚ ಜಾಂಚಾ ಚ ತಾರಾರಂ ತಾ ತಾರಾರಂ ತಾ 
ತಾರರತ್ತ ತಾರರತ್ತ ತಾ 
ನಗು ನಗುತ ಬಂದವಳೇ ಮಂದಾರ ಹೂವೇ ಸಿಂಗಾರದ ಸಿರಿಯೆ ನೀನಾಗಿರುವೇ 
ಸಿಂಗಾರದ ಸಿರಿಯೆ ನೀನಾಗಿರುವೇ 

ಎಲ್ಲೂ ಇಲ್ಲ ನಿನ್ನಂತ ಗೆಳೆಯನು 
ಎಲ್ಲೂ ಇಲ್ಲ ನಿನ್ನಂತ ಗೆಳೆಯನು ಎಲ್ಲರ ಸ್ನೇಹವ ನೀ ಪಡೆದಿರುವೆ 
ನನ್ನ ಗೆಳತೀ ನೀನಾಗಿ ಜೊತೆಗಿರಲು ಹೃದಯವು ಅರಳಿದೆ 
ಗೆಲುವು ಮೂಡಿದೆ ಸಂತಸ ಹೊಮ್ಮಿದೆ 
ಸಂತಸ ಹೊಮ್ಮಿದೆ ಜೀವ ಹಿಗ್ಗಿದೇ  
ನಗು ನಗುತ ಬಂದವಳೇ ಮಂದಾರ ಹೂವೇ ಸಿಂಗಾರದ ಸಿರಿಯೆ ನೀನಾಗಿರುವೇ 
ಸಿಂಗಾರದ ಸಿರಿಯೆ ನೀನಾಗಿರುವೇ 
ಸವಿ ಮಾತನಾಡುವನೇ ಮಾತಲ್ಲೇ ಗೆಲ್ಲುವೆ ಜಾಣರಲ್ಲಿ ಜಾಣ ನೀನಲ್ಲವೇ 
ಜಾಣರಲ್ಲಿ ಜಾಣ ನೀನಲ್ಲವೇ 
ಚಾಂಚ ಜಾಂಚಾ ಚ ಚಾಂಚ ಜಾಂಚಾ ಚ ತಾರಾರಂ ತಾ ತಾರಾರಂ ತಾ 
ತಾರರತ್ತ ತಾರರತ್ತ ತಾ 
-------------------------------------------------------------------------------------------------------

ಬಾಳಿದ ಮನೆ   (೧೯೯೭) - ಬಾಳಿದ ಮನೆ  
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ  ಗಾಯನ : ಎಸ್.ಪಿ.ಬಿ. ಚಿತ್ರಾ 

-------------------------------------------------------------------------------------------------------

ಬಾಳಿದ ಮನೆ (೧೯೯೭) - ಆಹಾ ಛಳಿಯ ತಾಳೆನು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ರುದ್ರಮೂರ್ತಿ ಶಾಸ್ತ್ರೀ ಗಾಯನ : ಎಸ್.ಪಿ.ಬಿ. ಚಿತ್ರಾ

ಆಹ್ ಛಳಿಯ ತಾಳೆನು ಬಾರೋ ಹತ್ತಿರ ಏನೋ ಹೇಳಲಾರೇನು ಎದೆಯ ತತ್ತಾರ 
ಓಹೋ ಓ ಓ ಓಹೂ ಓಹೋ ಓ ಓ  ಓಹೂ 
ಆಹ್ ಛಳಿಯ ತಾಳೆಯ ನನ್ನ ಅಪ್ಪಿಕೋ ಆನಂದವ ತೋಳಲಿ ನನ್ನ ಸುತ್ತಿಕೋ 
ಓಹೋ ಓ ಓ ಓಹೂ ಓಹೋ ಓ ಓ  ಓಹೂ 

ಚಳಿಗಾಲ ಬಾಳಿನಲ್ಲಿ ಅನುಗಾಲ ಇದ್ದರೆ ಒಲಿದಂತ ಜೋಡಿಗಳ ಎಷ್ಟೊಂದು ತೊಂದರೆ 
ಚಳಿಗಾಲ ಬಾಳಿನಲ್ಲಿ ಅನುಗಾಲ ಇದ್ದರೆ ಒಲಿದಂತ ಜೋಡಿಗಳ ಎಷ್ಟೊಂದು ತೊಂದರೆ 
ಪ್ರಿಯ ಓ ಪ್ರಿಯ ಪ್ರಿಯ ಪ್ರಿಯೇ ಪ್ರಿಯೆ ಪ್ರಿಯೆ 
ಮಳೆಯಲ್ಲಿ ನೆಂದಮೇಲೆ ಚಳಿಗೇಕೆ ಅಂಜುವೆ ಹಿಂದೆಹಿಂದೆ ಬಂದು ನನ್ನ ಹೀಗೇಕೆ ಕೆಂಜುವೇ 
ಈ ವಿರಹ ಜ್ವಾಲೆಯಲಿ ಬೇಯೋದು ಏತಕೋ ಪ್ರೀತಿ ಭಾಷೆ ತಿಳಿಯದಂತೆ ಆಡಬೇಡ ಒಪ್ಪಿಕೋ 
ಆಹ್ ಛಳಿಯ ತಾಳೆಯ ನನ್ನ ಅಪ್ಪಿಕೋ ಆನಂದವ ತೋಳಲಿ ನನ್ನ ಸುತ್ತಿಕೋ 
ಆಹ್ ಛಳಿಯ ತಾಳೆನು ಬಾರೋ ಹತ್ತಿರ ಏನೋ ಹೇಳಲಾರೇನು ಎದೆಯ ತತ್ತಾರ 
ಓಹೋ ಓ ಓ ಓಹೂ ಓಹೋ ಓ ಓ  ಓಹೂ 

ಕಲಿಗಾಲ ಹೋದರೂ ಹೊಸಕಾಲ ಬಂದರು ಜಗದಿಂದ ಪ್ರೇಮಕಾಲ ಎಂದೆಂದೂ ಹೋಗದು 
ಕಲಿಗಾಲ ಹೋದರೂ ಹೊಸಕಾಲ ಬಂದರು ಜಗದಿಂದ ಪ್ರೇಮಕಾಲ ಎಂದೆಂದೂ ಹೋಗದು 
ಪ್ರಿಯೇ ಓ ಪ್ರಿಯೆ ಪ್ರಿಯೆ ಪ್ರಿಯ  ಪ್ರಿಯ ಪ್ರಿಯ 
ಬದುಕಲ್ಲಿ ಪ್ರೇಮಗಾಳಿ ತಾನಾಗೇ ಬೀಸಿದೆ ಪಥವೆಲ್ಲ ಹಿಗ್ಗಿನಿಂದ ಹೂ ರಾಶಿ ಹಾಸಿದೆ 
ಈ ನಮ್ಮ ಪ್ರೇಮವೂ ಆನಂದ ಧಾಮವು ಹಮ್ಮುಗಿಮ್ಮು ಬಿಟ್ಟು ನನ್ನ ಹೆಮ್ಮೆಯಿಂದ ಹಬ್ಬಿಕೊ 
ಆಹ್ ಛಳಿಯ ತಾಳೆನು ಬಾರೋ ಹತ್ತಿರ ಏನೋ ಹೇಳಲಾರೇನು ಎದೆಯ ತತ್ತಾರ 
ಓಹೋ ಓ ಓ ಓಹೂ ಓಹೋ ಓ ಓ  ಓಹೂ 
ಆಹ್ ಛಳಿಯ ತಾಳೆಯ ನನ್ನ ಅಪ್ಪಿಕೋ ಆನಂದವ ತೋಳಲಿ ನನ್ನ ಸುತ್ತಿಕೋ 
ಓಹೋ ಓ ಓ ಓಹೂ ಓಹೋ ಓ ಓ  ಓಹೂ 
-------------------------------------------------------------------------------------------------------

No comments:

Post a Comment