1813. ಬಾಳೊಂದು ಚದುರಂಗ (೧೯೯೫)

ಬಾಳೊಂದು ಚದುರಂಗ ಚಲನಚಿತ್ರದ ಹಾಡುಗಳು 
  1. ಮೊಹಬ್ಬತ್ತು ಬಂದಾಗ 
  2. ಸವಿ ಜೇನಂತೆ 
  3. ಮನ್ಮಥ ಸಿಂಹಾಸನಕೆ 
  4. ಸಿಂಗನೂರು ಸಿಂಗನೂರು 
  5. ಬಾಳ ಜ್ಯೋತಿಯಾಗಿ 
  6. ಆನಂದ ಹೋಯ್ 
  7. ಮುಂಜಾನೆ ಮಂಜಲ್ಲಿ 
ಬಾಳೊಂದು ಚದುರಂಗ (೧೯೯೫) - ಸವಿ ಜೇನಂತೆ 
ಸಂಗೀತ : ಸೀನು, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ., ಚಿತ್ರಾ 

ಸವಿ ಜೇನಿನಂತೆ ನೊರೆ ಹಾಲಿನಂತೆ ಸೋಗಸಂತೆ ನಮ್ಮ ಬದುಕು 
ವಾಗ್ದೇವಿ ವೀಣೆ ಸ್ವರ ತಾನದಂತೆ ಮನೆ ತುಂಬಾ ಇರಲಿ ನಗುವು 
ಹೂವು ಗಂಧ ನಮ್ಮ ಪ್ರೇಮ 
ಸವಿ ಜೇನಿನಂತೆ ನೊರೆ ಹಾಲಿನಂತೆ ಸೋಗಸಂತೆ ನಮ್ಮ ಬದುಕು 
ವಾಗ್ದೇವಿ ವೀಣೆ ಸ್ವರ ತಾನದಂತೆ ಮನೆ ತುಂಬಾ ಇರಲಿ ನಗುವು 

ಒಲವೆಂಬ ಸಂತೋಷ ಆಗಸದಲ್ಲಿ ಹಾರಿ ಮರೆವ 
ಚೆಲುವಾದ ಸಂಸಾರ ಸಾಗರದಲ್ಲಿ ತೇಲಿ ನಲಿವ 
ಈ ಗೆಲುವಾದ ಸಂಗೀತ ಮನತುಂಬಿ ಹಾಡುತ 
ಎಂದೆಂದೂ ಹೀಗಿರಬೇಕು ಬಾಳು ಬಂಗಾರವಾಗಿರಬೇಕು 
ಸವಿ ಜೇನಿನಂತೆ ನೊರೆ ಹಾಲಿನಂತೆ ಸೋಗಸಂತೆ ನಮ್ಮ ಬದುಕು 
ವಾಗ್ದೇವಿ ವೀಣೆ ಸ್ವರ ತಾನದಂತೆ ಮನೆ ತುಂಬಾ ಇರಲಿ ನಗುವು 
ಸವಿ ಜೇನಿನಂತೆ ನೊರೆ ಹಾಲಿನಂತೆ ಸೋಗಸಂತೆ ನಮ್ಮ ಬದುಕು 
ವಾಗ್ದೇವಿ ವೀಣೆ ಸ್ವರ ತಾನದಂತೆ ಮನೆ ತುಂಬಾ ಇರಲಿ ನಗುವು 

ಬದುಕೆಂಬ ಆನಂದವು ಬಲದಲ್ಲಿ ಹಾಡಿ ಕುಣಿವ 
ಪತಿ ಪತ್ನಿ ಸಂಬಂಧ ಮಾಲೆಯ ಧರಿಸಿ ಸೇರಿ ನಡೆವ 
ನನ್ನ ಸೌಭಾಗ್ಯ ನೀನಾಗಿ ಸಿಂಧೂರ ನನ್ನಲ್ಲಿ ಚಿರಕಾಲ ನೆಲೆಸಿರಬೇಕು 
ನಮ್ಮ ಉಸಿರೆಂದು ಬೆರೆತಿರಬೇಕು 
ಸವಿ ಜೇನಿನಂತೆ ನೊರೆ ಹಾಲಿನಂತೆ ಸೋಗಸಂತೆ ನಮ್ಮ ಬದುಕು 
ವಾಗ್ದೇವಿ ವೀಣೆ ಸ್ವರ ತಾನದಂತೆ ಮನೆ ತುಂಬಾ ಇರಲಿ ನಗುವು 
ಸವಿ ಜೇನಿನಂತೆ ನೊರೆ ಹಾಲಿನಂತೆ ಸೋಗಸಂತೆ ನಮ್ಮ ಬದುಕು 
ವಾಗ್ದೇವಿ ವೀಣೆ ಸ್ವರ ತಾನದಂತೆ ಮನೆ ತುಂಬಾ ಇರಲಿ ನಗುವು 
---------------------------------------------------------------------------------------------- 

ಬಾಳೊಂದು ಚದುರಂಗ (೧೯೯೫) - ಮನ್ಮಥ ಸಿಂಹಾಸನಕೆ 
ಸಂಗೀತ : ಸೀನು, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ., ಚಿತ್ರಾ 

ಮನ್ಮಥನ ಸಿಂಹಾಸನಕೆ ರಾಣಿ ನೀನೆ 
ಪ್ರೇಮದಲಿ ವಾತ್ಸಾಯನನ ಶ್ರೀಮತಿ ನೀನೆ 
ಮುತ್ತುಗಳ ರಾಶಿ ಮೇಲೆ ಮಲಗಿಸು ನನ್ನನ್ನು 
ಮತ್ತಿನಲಿ ತೇಲಿ ತೇಲಿ ಅಪ್ಪುವೆ ನಿನ್ನನ್ನೂ 
ನನ್ನ ಶೃಂಗಾರ ಗೀತಾಂಜಲಿ ನಿನಗೆ ಈ ನನ್ನ ಪ್ರೇಮಾಂಜಲಿ 

ಮಾತಿನಲಿ ಮೋಡಿ ಮಾಡೋ ಮಾಂತ್ರಿಕ ನೀನೆ 
ನನ್ನೆದೆಯ ವೀಣೆ ಮೀಟೋ ವೈಣಿಕ ನೀನೆ 
ಮುತ್ತುಗಳ ತೊಟ್ಟಿಲ ಮೇಲೆ ಮಲಗಿಸಿ ನಿನ್ನನ್ನು 
ಜೋಗುಳವ ಹಾಡಿ ಮೈಯ್ಯ ಮರೆಸುವೆ ನಿನಗಿನ್ನೂ 
ನಿನಗೆ ಮಂದಾರ ಪುಷ್ಪಾಂಜಲಿ ನನ್ನ ಈ ಪ್ರೀತಿ ನಿತ್ಯಾಂಜಲೀ  

ನಿನ್ನ ಮೆತ್ತನೆ ಮಡಿಲು ಹೂವಿನ ತೊಟ್ಟಿಲು 
ನಿನ್ನ ತೋಳಿನ ಬಂಧ ಸ್ವರ್ಗಕ್ಕೆ ಬಾಗಿಲು 
ತುಳಿಯಲೇ ಬೇಕು ಸಪ್ತಪದಿಯನು ನಾವು ಸೇರಲೂ 
ಆ ಕ್ಷಣಕ್ಕಾಗಿ ನಾನು ಕಾದಿರುವೆ ಚೆಲುವೆ 
ಹುಚ್ಚನಂತೆ ಈಗ ಮತ್ತೇಕೆ ನೀ ಕಾಡುವೇ 
ಮನ್ಮಥನ ಸಿಂಹಾಸನಕೆ ರಾಣಿ ನೀನೆ 
ನನ್ನೆದೆಯ ವೀಣೆ ಮೀಟೋ ವೈಣಿಕ ನೀನೆ 
ಮುತ್ತುಗಳ ರಾಶಿ ಮೇಲೆ ಮಲಗಿಸು ನನ್ನನ್ನು 
ಜೋಗುಳವ ಹಾಡಿ ಮೈಯ್ಯ ಮರೆಸುವೆ ನಿನಗಿನ್ನೂ 
ನನ್ನ ಶೃಂಗಾರ ಗೀತಾಂಜಲಿ ನನ್ನ ಈ ಪ್ರೀತಿ ನಿತ್ಯಾಂಜಲೀ  

ರಾತ್ರಿ ವೇಳೆ ನನ್ನ ಕನಸಲು ಕಾಡಿದೆ 
ಈಗ ಎದುರು ನಿಂತು ಆಸೆಯ ಕೆಣಕಿದೆ 
ಆಸೆ ಕನಸಿಗೆ ಕಡಿವಾಣವನು ಹಾಕು ಈಗಲೇ 
ಹೀಗೆ ಅಡ್ಡಿ ಮಾಡಿದರೇ ಆಗುವೆ ಸನ್ಯಾಸಿ 
ಕೊಂಚ ಕಾಲ ಕಾದರೆ ಆದೆಯ ನನ್ನ ಪ್ರಿಯ 
ಮನ್ಮಥನ ಸಿಂಹಾಸನಕೆ ರಾಣಿ ನೀನೆ 
ನನ್ನೆದೆಯ ವೀಣೆ ಮೀಟೋ ವೈಣಿಕ ನೀನೆ 
ಮುತ್ತುಗಳ ರಾಶಿ ಮೇಲೆ ಮಲಗಿಸು ನನ್ನನ್ನು 
ಜೋಗುಳವ ಹಾಡಿ ಮೈಯ್ಯ ಮರೆಸುವೆ ನಿನಗಿನ್ನೂ 
----------------------------------------------------------------------------------------------- 

ಬಾಳೊಂದು ಚದುರಂಗ (೧೯೯೫) - ಆನಂದ ಹೋಯ್ 
ಸಂಗೀತ : ಸೀನು, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ., ಚಿತ್ರಾ, ಮಂಜುಳಾಗುರುರಾಜ  

ಆನಂದ ಹೋಯ್ ಮಹದಾನಂದ ಹೋಯ್ ನಾವೆಲ್ಲ ಒಂದಾಗಲೂ 
ಆನಂದ ಹೋಯ್ ಮಹದಾನಂದ ಹೋಯ್ ನಾವೆಲ್ಲ ಒಂದಾಗಲೂ 
ಹೃದಯಗಳು ನಗುತಿರಲಿ ಆಸೆಗಳು ಹೊಮ್ಮಿರಲಿ ಕನಸುಗಳು ಹೂವಾಗಲೀ 
ಹೆತ್ತವರ ಮಮತೆಯಲಿ ಈ ಮಡಿಲ ಹರಕೆಯಲಿ ಜೀವನವು ಜೇನಾಗಲೀ 
ಆನಂದ ಹೋಯ್ ಮಹದಾನಂದ ಹೋಯ್ ನಾವೆಲ್ಲ ಒಂದಾಗಲೂ 
ಹೃದಯಗಳು ನಗುತಿರಲಿ ಆಸೆಗಳು ಹೊಮ್ಮಿರಲಿ ಕನಸುಗಳು ಹೂವಾಗಲೀ 

ನೆರಳಿನಲೇ ಇರಲೀ ಬಿಸಿಲಿನಲೇ ಇರಲಿ ಒಲವಿರಲಿ ನಮ ಬಾಳಲೀ 
ಜೊತೆಗಿರಲು ನಲಿವು ಮರೆಯುವುದು ನಗುವು ಸುಖವೆಂದು ನಮ ಬದುಕಲಿ 
ಓಡಾಡುವ ಈ ದೇವರ ಹಾರೈಕೆಯ ಮನೆ ಬೆಳಕಾಗಲಿ 
ಸ್ನೇಹದ ಸಂಕೋಲೆ ಎಲ್ಲರ ಸೇರಿಸಲಿ ಅಂಗಳದ ಮುಂಬೆಳಕು ಎಲ್ಲೆಲ್ಲೂ ಚೆಲ್ಲಿರಲಿ 
ಆನಂದ ಹೋಯ್ ಮಹದಾನಂದ ಹೋಯ್ ನಾವೆಲ್ಲ ಒಂದಾಗಲೂ 
ಹೆತ್ತವರ ಮಮತೆಯಲಿ ಈ ಮಡಿಲ ಹರಕೆಯಲಿ ಜೀವನವು ಜೇನಾಗಲೀ 
 
ಬೆಚ್ಚನೆಯ ಮನೆಯು ಮನ ಅರಿತ ಮಡದಿ ಇರುವಾಗ ಇದು ಸ್ವರ್ಗವೇ 
ಮೆಚ್ಚಿರುವ ಪತಿಯು ಮುದ ನೀಡೋ ಮಕ್ಕಳು ಇದು ಮನೆ ಗುಡಿಯಾಗಿದೆ 
ಮಮತೆಯ ತಾಯಿ ಪ್ರೀತಿಸುವ ತಂದೆ ನಮ ದೇವರೇ ಇವರೇ ಎಂದೆಂದಿಗೂ 
ರಾಗವು ತಾಳವು ಸೇರಲು ಸಂತಸವು ಸಂಭ್ರಮವೇ ತುಂಬಿರಲಿ ಚಿರಕಾಲ ನಮ್ಮಲೀ 
ಆನಂದ ಹೋಯ್ ಮಹದಾನಂದ ಹೋಯ್ ನಾವೆಲ್ಲ ಒಂದಾಗಲೂ 
ಆನಂದ ಹೋಯ್ ಮಹದಾನಂದ ಹೋಯ್ ನಾವೆಲ್ಲ ಒಂದಾಗಲೂ 
ಹೃದಯಗಳು ನಗುತಿರಲಿ ಆಸೆಗಳು ಹೊಮ್ಮಿರಲಿ ಕನಸುಗಳು ಹೂವಾಗಲೀ 
ಹೆತ್ತವರ ಮಮತೆಯಲಿ ಈ ಮಡಿಲ ಹರಕೆಯಲಿ ಜೀವನವು ಜೇನಾಗಲೀ 
ಆನಂದ ಹೋಯ್ ಮಹದಾನಂದ ಹೋಯ್ ನಾವೆಲ್ಲ ಒಂದಾಗಲೂ 
ಹೃದಯಗಳು ನಗುತಿರಲಿ ಆಸೆಗಳು ಹೊಮ್ಮಿರಲಿ ಕನಸುಗಳು ಹೂವಾಗಲೀ 
---------------------------------------------------------------------------------------------- 

ಬಾಳೊಂದು ಚದುರಂಗ (೧೯೯೫) - ಬಾಳ ಜ್ಯೋತಿಯಾಗಿ 
ಸಂಗೀತ : ಸೀನು, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ., 

ಬಾಳ ಜ್ಯೋತಿಯಾಗಿ ಬಂದೆ ನೀನು ಬರಿ ದೀಪವಾಗಿ ಹೋದೆ ನೀನು 
ಆಸರೆ ಇರದ ಬಳ್ಳಿ ನಾನು 
ಬಾಳ ಜ್ಯೋತಿಯಾಗಿ ಬಂದೆ ನೀನು ಬರಿ ದೀಪವಾಗಿ ಹೋದೆ ನೀನು 

ಹೆಣ್ಣು ರೂಪದ ಕಣ್ಣಾಗಿದ್ದು ನೀನು ಎಲ್ಲರಿಗು ದಾರಿ ತೋರದೆ 
ಮಾತೆ ರೂಪದ ಮಮತೆಯಿಂದ ನಮಗೆಲ್ಲ ಸುಖ ನೀಡಿದೆ 
ಕನಸೆಲ್ಲವೂ ಕೈಯ್ಯ ಜಾರಿಹೆ ವಿಧಿ ನಕ್ಕು ಸುಮ್ಮನಾಯಿತೆ 
ಬಾಳ ಜ್ಯೋತಿಯಾಗಿ ಬಂದೆ ನೀನು ಬರಿ ದೀಪವಾಗಿ ಹೋದೆ ನೀನು 
ಆಸರೆ ಇರದ ಬಳ್ಳಿ ನಾನು 
 
ಹೆತ್ತಮಕ್ಕಳೇ ಮೃತ್ಯುವಾದರೇ ದೈವವಿಂದು ಮೌನವಾಯಿತೇ 
ಸತ್ತು ಗೆದ್ದೇ ನೀ ಇದ್ದು ಸೋತೆ ನಾ ಬದುಕಿಂದು ಕತ್ತಲಾಯಿತೇ   
ನನಸೆಲ್ಲವೂ ಹುಸಿಯಾಯಿತೇ ಜಗವೆಲ್ಲ ಶೂನ್ಯವಾಯಿತೇ 
ಬಾಳ ಜ್ಯೋತಿಯಾಗಿ ಬಂದೆ ನೀನು ಬರಿ ದೀಪವಾಗಿ ಹೋದೆ ನೀನು 
ಆಸರೆ ಇರದ ಬಳ್ಳಿ ನಾನು 
----------------------------------------------------------------------------------------------- 

ಬಾಳೊಂದು ಚದುರಂಗ (೧೯೯೫) - ಮುಂಜಾನೆ ಮಂಜಲ್ಲಿ 
ಸಂಗೀತ : ಸೀನು, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ., ಮಂಜುಳಗುರುರಾಜ 

----------------------------------------------------------------------------------------------- 

ಬಾಳೊಂದು ಚದುರಂಗ (೧೯೯೫) - ಮೊಹಬ್ಬತ್ತು ಬಂದಾಗ 
ಸಂಗೀತ : ಸೀನು, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ., ಚಿತ್ರಾ 

----------------------------------------------------------------------------------------------- 

ಬಾಳೊಂದು ಚದುರಂಗ (೧೯೯೫) - ಸಿಂಗನೂರು ಸಿಂಗನೂರು 
ಸಂಗೀತ : ಸೀನು, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಮಂಜುಳಗುರುರಾಜ 

----------------------------------------------------------------------------------------------- 

No comments:

Post a Comment