- ಹುಲಿ ಹುಲಿ ಹುಲಿ ಹುಲಿ
- ಹೂಂ ಅನ್ನೂ ಅಷ್ಟೇ ಸಾಕು
- ಅಕ್ಕ ನಿನ್ನ ಪಕ್ಕ
- ಎಲ್ಲಿ ರಾಮನೋ ಅಲ್ಲಿ ಸೀತೆಯೋ
- ಬಿರಿಯಲಿ ಭೂಮಿ
ಸಿಡಿಲು (೧೯೮೪) - ಹುಲಿ ಹುಲಿ ಹುಲಿ ಹುಲಿ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್. ಪಿ.ಬಿ.
ಹುಲಿ ಹುಲಿ ಹುಲಿ ಹುಲಿ ಹೆಬ್ಬುಲಿ ಬಂದಿತು
ರೋಷದ ಹುಲಿ ಆವೇಶದ ಹುಲಿ ಅಬ್ಬರಿಸುತ ಹೆಬ್ಬುಲಿ ಬಂದಿತು
ಅರೇ ಬಂದ ಹುಲಿರಾಯ ಇಲ್ಲಿಗೆ ನೋಡಿರಿ ತಂದ ಭಯವನ್ನು ಎದೆಗೆ.. ಹ್ಹಾ...
ಬಂದ ಹುಲಿರಾಯ ಇಲ್ಲಿಗೆ... ನೋಡಿರಿ ತಂದ ಭಯವನ್ನು ಎದೆಗೆ.. ಹ್ಹಾ...
ಆನೆಯನ್ನೇ ಹೆದರಿಸೋ ಹುಲಿಯು ಸಿಂಹವನ್ನೇ ನುಂಗುವ ಹುಲಿಯು
ಮೋಸ ಮಾಡೋ ನರಿಗಳ ತುಳಿದು ಧ್ವಂಸ ಮಾಡೇ ಬಂದ ಹುಲಿಯು
ಆ... ಆನೆಯನ್ನೇ ಹೆದರಿಸೋ ಹುಲಿಯು ಸಿಂಹವನ್ನೇ ನುಂಗುವ ಹುಲಿಯು
ಮೋಸ ಮಾಡೋ ನರಿಗಳ ತುಳಿದು ಧ್ವಂಸ ಮಾಡೇ ಬಂದ ಹುಲಿಯು
ಬೇಟೆಗಾರರ ಗುಂಡು ಸಿಡಿಯಲಿ ಸಾವು ಮುಟ್ಟದು ಸಿಡಿಲೆ ಬಡಿಯಲಿ
ಬಂದ ಹುಲಿರಾಯ ಇಲ್ಲಿಗೆ... ನೋಡಿರಿ ತಂದ ಭಯವನ್ನು ಎದೆಗೆ..
ಹುಲಿ ಹುಲಿ ಹುಲಿ ಹುಲಿ ಹೆಬ್ಬುಲಿ ಬಂದಿತು
ರೋಷದ ಹುಲಿ ಆವೇಶದ ಹುಲಿ ಅಬ್ಬರಿಸುತ ಹೆಬ್ಬುಲಿ ಬಂದಿತು
ಅರೇ ಬಂದ ಹುಲಿರಾಯ ಇಲ್ಲಿಗೆ ನೋಡಿರಿ ತಂದ ಭಯವನ್ನು ಎದೆಗೆ..
ಆಸೆಯಿಂದ ನಲಿದ ಹುಲಿಯು ಮೋಸದಿಂದ ನೊಂದ ಹುಲಿಯು
ಪೆಟ್ಟು ತಿಂದು ಆರ್ಭಟಿಸುತ ಛಲದಲ್ಲಿ ಬಂದ ಹಸಿದ ಹುಲಿಯು

ಮೋಸಗಾರರ ಸೀಳಿ ಹಾಕಲು ರೋಷದಿಂದಲೀ ರಕ್ತ ಕುಡಿಯಲೂ ...
ಬಂದ ಹುಲಿರಾಯ ಇಲ್ಲಿಗೆ... ನೋಡಿರಿ ತಂದ ಭಯವನ್ನು ಎದೆಗೆ..
ಅರೆರೆರೆರೇ... ಹುಲಿ ಹುಲಿ ಹುಲಿ ಹುಲಿ ಹೆಬ್ಬುಲಿ ಬಂದಿತು
ರೋಷದ ಹುಲಿ ಆವೇಶದ ಹುಲಿ ಅಬ್ಬರಿಸುತ ಹೆಬ್ಬುಲಿ ಬಂದಿತು
ಅರೇ ಬಂದ ಹುಲಿರಾಯ ಇಲ್ಲಿಗೆ ನೋಡಿರಿ ತಂದ ಭಯವನ್ನು ಎದೆಗೆ.. ಹ್ಹಾ...
-------------------------------------------------------------------------------
ಸಿಡಿಲು (೧೯೮೪) - ಹೂಂ ಅನ್ನೂ ಅಷ್ಟೇ ಸಾಕು
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್. ಪಿ.ಬಿ. ಪಿ.ಸುಶೀಲಾ
ಹೆಣ್ಣು : ಹೂಂ ಅನ್ನೂ ಅಷ್ಟೇ ಸಾಕು ಬಾ ಅನ್ನು ಅಷ್ಟೇ ಸಾಕು
ಆ ಕ್ಷಣದಲ್ಲೇ ಹೂವಿನ ಮಂಚದ ಸುಖವ ಕಾಣುವೇ ...
ಗಂಡು : ಹೂಂ ಅನ್ನೂ ಅಷ್ಟೇ ಸಾಕು ಬಾ ಅನ್ನು ಅಷ್ಟೇ ಸಾಕು
ಆ ಕ್ಷಣದಲ್ಲೇ ಹೂವಿನ ಮಂಚದ ಸುಖವ ಕಾಣುವೇ ...
ಹೆಣ್ಣು : ಹೂಂ ಅನ್ನೂ ಅಷ್ಟೇ ಸಾಕು
ಗಂಡು : ಬಾ ಅನ್ನು ಅಷ್ಟೇ ಸಾಕು
ಹೆಣ್ಣು : ಕೆನ್ನೆಯು ತಟ್ಟಿ ಆಸೆ ತುಂಬಬೇಡವೋ ಮೈಯ್ಯನ್ನು ಮುಟ್ಟಿ ನಲ್ಲ ಕೆಣಕಬೇಡವೋ
ಗಂಡು : ಮುಟ್ಟುವ ಆಸೆ ಬಂತು ಮಾತನಾಡಲು ಕೆಟ್ಟೇನು ಹೆಣ್ಣೇ ನಿನ್ನ ಅಂದ ನೋಡಲೂ
ಹೆಣ್ಣು : ಚೆಲುವ ನಿನ್ನ ನುಡಿಯೇ ಸೊಗಸು ಮಾತು ಸಾಕು ಪ್ರೀತಿಸು
ಗಂಡು : ಹೂಂ ಅನ್ನೂ ಅಷ್ಟೇ ಸಾಕು
ಹೆಣ್ಣು : ಬಾ ಅನ್ನು ಅಷ್ಟೇ ಸಾಕು
ಗಂಡು : ಓ.... ಆ ಕ್ಷಣದಲ್ಲೇ ಹೂವಿನ ಮಂಚದ ಸುಖವ ಕಾಣುವೇ ...
ಹೆಣ್ಣು : ಹೂಂ ಅನ್ನೂ ಅಷ್ಟೇ ಸಾಕು
ಗಂಡು : ಬಾ ಅನ್ನು ಅಷ್ಟೇ ಸಾಕು
ಗಂಡು : ಹಗಲು ರಾತ್ರಿ ಬೇಧ ಕಾಣದಾಗಲೂ ಸೂರ್ಯ ಚಂದ್ರ ಯಾರೋ ತಿಳಿಯದಾಗಲೂ
ಹೆಣ್ಣು : ಮಾಗಿ ಚಳಿಯು ತುಂಬಿ ನೀನು ನಡುಗಲು ತೋಳಲಿ ಗೆಳೆಯ ನನ್ನ ಬಂಧಿಯಾಗಲು
ಗಂಡು : ಬಾನಲ್ಲಿ ತೇಲೋ ಮೋಡದ ಹಾಗೇ ಹರುಷದಿ ಆಗ ತೆಲುವೇ ...
ಹೆಣ್ಣು : ಹೂಂ ಅನ್ನೂ ಅಷ್ಟೇ ಸಾಕು
ಗಂಡು : ಬಾ ಅನ್ನು ಅಷ್ಟೇ ಸಾಕು
ಹೆಣ್ಣು : ಆ ಕ್ಷಣದಲ್ಲೇ ಹೂವಿನ ಮಂಚದ ಸುಖವ ಕಾಣುವೇ ...
ಗಂಡು : ಹೂಂ ಅನ್ನೂ ಹೆಣ್ಣು : ಅಷ್ಟೇ ಸಾಕು
ಗಂಡು : ಬಾ ಅನ್ನು ಹೆಣ್ಣು : ಅಷ್ಟೇ ಸಾಕು
ಹೆಣ್ಣು : ಹೂಂ ಅನ್ನೂ ಗಂಡು : ಅಷ್ಟೇ ಸಾಕು
ಹೆಣ್ಣು : ಬಾ ಅನ್ನು ಗಂಡು : ಅಷ್ಟೇ ಸಾಕು
------------------------------------------------------------------------------
ಸಿಡಿಲು (೧೯೮೪) - ಅಕ್ಕ ನಿನ್ನ ಪಕ್ಕ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್. ಪಿ.ಬಿ. ಪಿ.ಸುಶೀಲಾ
ಅಕ್ಕ ನಿನ್ನ ಪಕ್ಕ ಭಾವನು ನಿಲ್ಲುವನು ನಾಚಿದ ನಿನ್ನ ನೋಡುವನು
ಇಂಥ ಅಂದಗಾತಿ ಎಲ್ಲೂ ಕಾಣೆ ಎನ್ನುವನು

ಹೋಗು ಎಂದರು ಆಚೆಗೆ ಹೋಗದೆ ಬಾಗಿಲ ಬಳಿಯೇ ನಿಂತಿರುವ
ನಾನು ನೀನು ಮರೆಯಾದರೆ ಆ ನಿಮಿಷವೇ ಇವಳ ಕೈಯ್ಯ ಹಿಡಿವ

ಕಣ್ಣಲಿ ಅಂದವ ಹೀರುತಲಿ ಈ ಚೆಂದುಟಿಗೊಂದು ಸಿಹಿ ಕೊಡುವ
ಕಣ್ಣಲಿ ಅಂದವ ಹೀರುತಲಿ ಈ ಚೆಂದುಟಿಗೊಂದು ಹಹ್ಹಹ್ಹಾ...
ಅಕ್ಕ ನಿನ್ನ ಪಕ್ಕ ಭಾವನು ನಿಲ್ಲುವನು ನಾಚಿದ ನಿನ್ನ ನೋಡುವನು
ಇಂಥ ಅಂದಗಾತಿ ಎಲ್ಲೂ ಕಾಣೆ ಎನ್ನುವನು
ಒಂದೇ ವರುಷದಿ ತೊಟ್ಟಿಲ ತೂಗಿ ಅತ್ತಿಗೆ ಲಾಲಿ ಹಾಡುವಳು
ಅಕ್ಕನ ಮಗನಿಗೆ ಜೋಡಿ ಎನ್ನುತ ಇವಳು ಜೋಗುಳ ಹಾಡುವಳು

ಬೀಗರು ನಾಳೆ ನಾವುಗಳು ಆನಂದದ ವನದ ಹೂವುಗಳು
ಬೀಗರು ನಾಳೆ ನಾವುಗಳು ಆನಂದದ ವನದ ಹೂವುಗಳು
ಅಕ್ಕ ನಿನ್ನ ಪಕ್ಕ ಭಾವನು ನಿಲ್ಲುವನು ನಾಚಿದ ನಿನ್ನ ನೋಡುವನು
ಹ್ಹಾ... ಇಂಥ ಅಂದಗಾತಿ ಎಲ್ಲೂ ಕಾಣೆ ಎನ್ನುವನು
ಇಂಥ ಅಂದಗಾತಿ ಎಲ್ಲೂ ಕಾಣೆ ಎನ್ನುವನು
-------------------------------------------------------------------------------
ಸಿಡಿಲು (೧೯೮೪) - ಎಲ್ಲಿ ರಾಮನೋ ಅಲ್ಲಿ ಸೀತೆಯೋ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್. ಪಿ.ಬಿ. ಪಿ.ಸುಶೀಲಾ
ಎಲ್ಲಿ ರಾಮನೋ ಅಲ್ಲಿ ಸೀತೆಯೂ ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯೂ

ನೀನೆಲ್ಲಿರುವೆಯೋ ಅಲ್ಲೇ ನಾನೂ ... ನನ್ನ ಪ್ರಾಣವೇ ನೀನೂ

ಕಲ್ಲೇ ಇರಲಿ ಮುಳ್ಳೇ ಇರಲಿ ನಗುತಲಿ ಬರುವೆ ಜೊತೆಯಾಗಿ
ಭಯವೇಕೆ ಏನಗೆ ಬದುಕಲಿ ನೀನು ಬಳಿಯಲಿ ಇರಲು ನನಗಾಗಿ
ನಿನ್ನ ಗುರಿಯೇ ನನ್ನ ಗುರಿಯು
ನಿನ್ನ ಗುರಿಯೇ ನನ್ನ ಗುರಿಯು ಬಾಳುವೇ ನಾ ನಿನಗಾಗಿ
ಎಲ್ಲಿ ರಾಮನೋ ಅಲ್ಲಿ ಸೀತೆಯೂ ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯೂ
ನೀನೆಲ್ಲಿರುವೆಯೋ ಅಲ್ಲೇ ನಾನೂ ... ನನ್ನ ಪ್ರಾಣವೇ ನೀನೂ
ಎಲ್ಲಿ ರಾಮನೋ ಅಲ್ಲಿ ಸೀತೆಯೂ ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯೂ
ನಲ್ಲೇ ನಿನ್ನ ನುಡಿಯೇ ಚೆನ್ನ ಕೇಳುತ ಇಂದು ಬೆರಗಾದೆ....
ಅರಿತು ನಿನ್ನ ಮನವ ಚಿನ್ನ ತುಂಬಿದ ಪ್ರೀತಿಗೆ ಮರುಳಾದೆ
ಇನ್ನೂ ಎಂದು ಬಿಡೇನು ನಿನ್ನ
ಇನ್ನೂ ಎಂದು ಬಿಡೇನು ನಿನ್ನ ನನ್ನಲ್ಲಿ ನೀ ಒಂದಾದೆ
ಎಲ್ಲಿ ರಾಮನೋ ಅಲ್ಲಿ ಸೀತೆಯೂ ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯೂ
ನೀನೆಲ್ಲಿರುವೆಯೋ ಅಲ್ಲೇ ನಾನೂ ... ನನ್ನ ಪ್ರಾಣವೇ ನೀನೂ
ಎಲ್ಲಿ ರಾಮನೋ ಅಲ್ಲಿ ಸೀತೆಯೂ ಎಲ್ಲಿ ಕೃಷ್ಣನೋ ಅಲ್ಲಿ ರಾಧೆಯೂ
-------------------------------------------------------------------------------
ಸಿಡಿಲು (೧೯೮೪) - ಬಿರಿಯಲಿ ಭೂಮಿ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್. ಪಿ.ಬಿ.
ಬಿರಿಯಲಿ ಭೂಮಿ ಉಕ್ಕಲಿ ಕಡಲು ಪುಡಿಪುಡಿಯಾಗಲಿ ಪರ್ವತವೂ
ಕೆರಳಲಿ ಬಾನು ಸಿಡಿಯಲಿ ಸಿಡಿಲು ಪ್ರಳಯ ನೋಡಲಿ ಈ ಜಗವು
ಬೆದುರುವಿದಿಲ್ಲಾ ನಾನೂ ಬೆಚ್ಚುವುದಿಲ್ಲ ಹ್ಹಾ... ದೇವರೇ ಕಂಡು
ತಡೆದರು ಬಂದು ಉಳಿಸುವುದಿಲ್ಲ ವೈರಿಯ ಉಳಿಸುವುದಿಲ್ಲ
ಸೇಡು... ಸೇಡು... ಸೇಡು...
ಹುಟ್ಟಿದ ಮೇಲೆ ಸಾಯಲೇಬೇಕು ಸಾವಿಗೆ ಅಂಜುವುದಿಲ್ಲ
ಸತ್ತರೆ ಮತ್ತೆ ಹುಟ್ಟುವನೆನುವರು ಅದನು ನಂಬುವುದಿಲ್ಲ

ಬಾಳುವ ಹೆಣ್ಣಿನ ಬದುಕಲಿ ಬೆಂಕಿಯ ಸುರಿದ ರಕ್ಕಸರನ್ನು
ನನ್ನ ಕೆಣಕಿದ ಪಾಪಿಗಳನ್ನು ಉಳಿಸುವುದಿಲ್ಲ... ಇನ್ನೂ ಉಳಿಸುವುದಿಲ್ಲ...
ಬಿರಿಯಲಿ ಭೂಮಿ ಉಕ್ಕಲಿ ಕಡಲು ಪುಡಿಪುಡಿಯಾಗಲಿ ಪರ್ವತವೂ
ಕೆರಳಲಿ ಬಾನು ಸಿಡಿಯಲಿ ಸಿಡಿಲು ಪ್ರಳಯ ನೋಡಲಿ ಈ ಜಗವು
ಬಾನಲಿ ನಿಂತು ಏತಕೆ ಅಳುವೇ ಅಕ್ಕ ನಾ ಸತ್ತಿಲ್ಲಾ...
ಕೈಯ್ಯಗಳ ಕಡಿಯಲಿ ಕಾಲ್ಗಳ ಮುರಿಯಲೀ ಸೇಡನು ಮರೆಯುವುದಿಲ್ಲ

ನಿನ್ನ ಕಣ್ಣಿನ ಹನಿ ಹನಿ ನೀರಿಗೂ ರಕ್ತ ದಹನೆಗಳ ಚೆಲ್ಲಿ
ಅವರ ದೇಹವ ಮಣ್ಣಲಿ ಚೆಲ್ಲಿ ಮುಗಿಸುವ ಕಥೆಯಾ
ನಾನು ಮುಗಿಸುವ ಕಥೆಯಾ
ಬಿರಿಯಲಿ ಭೂಮಿ ಉಕ್ಕಲಿ ಕಡಲು ಪುಡಿಪುಡಿಯಾಗಲಿ ಪರ್ವತವೂ
ಕೆರಳಲಿ ಬಾನು ಸಿಡಿಯಲಿ ಸಿಡಿಲು ಪ್ರಳಯ ನೋಡಲಿ ಈ ಜಗವು
ಬೆದುರುವಿದಿಲ್ಲಾ ನಾನೂ ಬೆಚ್ಚುವುದಿಲ್ಲ ಹ್ಹಾ... ದೇವರೇ ಕಂಡು
ತಡೆದರು ಬಂದು ಉಳಿಸುವುದಿಲ್ಲ ವೈರಿಯ ಉಳಿಸುವುದಿಲ್ಲ
ಸೇಡು... ಸೇಡು... ಸೇಡು...
------------------------------------------------------------------------------
No comments:
Post a Comment