1815. ಹೊಸ ಕಾವ್ಯ (೧೯೮೯)



ಹೊಸ ಕಾವ್ಯ ಚಲನಚಿತ್ರದ ಹಾಡುಗಳು 
  1. ಟಿಪ್ಪು ಸುಲ್ತಾನ 
  2. ಟಿಪ್ಪು ಸುಲ್ತಾನ 
  3. ಚಳಿ ಚಳಿ ತಂಪಿನ ಗಾಳಿ 
  4. ಹೆಣ್ಣಲ್ಲಿ ಅಂದ 
  5. ತಾಯೆಂಬ ದೇವತೆ 
ಹೊಸ ಕಾವ್ಯ (೧೯೮೯) - ಟಿಪ್ಪು ಸುಲ್ತಾನ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, 

ಟಿಪ್ಪು ಸುಲ್ತಾನ ಮೈಸೂರ ಹುಲಿ ಈ ರೌಡಿ ರೋಷನ್ ಪಟ್ಟೆ ಹುಲಿ 
ಆ ಗಂಡುಭೀರಿ ಹೆಣ್ಣಿಗಿಂತ ಕಾಲ ಬಂದಿದೆ ಅಯ್ಯೋ ಪಾಪ...ಅಯ್ಯೋ ಪಾಪ... 
ಅರೇ ... ಟಿಪ್ಪು ಸುಲ್ತಾನ ಮೈಸೂರ ಹುಲಿ ಈ ರೌಡಿ ರೋಷನ್ ಪಟ್ಟೆ ಹುಲಿ 
ಆ ಗಂಡುಭೀರಿ ಹೆಣ್ಣಿಗಿಂತ ಕಾಲ ಬಂದಿದೆ ಅಯ್ಯೋ ಪಾಪ...ಅಯ್ಯಯ್ಯೋ...  ಅಯ್ಯೋ ಪಾಪ... 

ಹೇ.. ಕನ್ಯಾಕುಮಾರಿ ಬೀದಿ ಬಜಾರಿ ಲಜ್ಜೆ ನಾಚಿಕೆ ಕಾಶ್ಮೀರದಾಚೆ ರೀ... ನಾರಿ ಆ ಮಾರೀ 
ಡಂಗಡಂಗಡಿಂಗಡಾಂಗ್  ಆ ಡಿಂಗುಡಿಂಗುಡುಂಗೂಡಾಂಗ್ 
ಬಣ್ಣದ ಚಿಟ್ಟೆಯೋ ಜಂಭದ ಕೋಳಿ ಮೊಟ್ಟೆಯೋ 
ಆ ಕಣ್ಣ ನೀರಿದು ಕನ್ನಂಬಾಡಿ ಕಟ್ಟೆಯೋ ಸಾರೀ...  ಸಾರೀ... ಆಆಆಆ 
ಕಲಿಯುಗ ಕಾಳಿ ನೀನು ಶೂರ್ಪಣಖಿ ತಂಗಿ ನೀನೂ ಹುಡುಗಿಯ ಹಾಗೆ ಬಂದ      
ಗಿಡಿಗಿಯೋ ನೀನು ಚಿನ್ನ ಬನ್ನಿರೋ ಎತ್ತೀ ಆರುತಿ ಮುಖಕೆ ಮಂಗಳಾರುತಿ... ಆಆಆ 
ಹೇಳೇ ಚೆಲುವಿನ ರತಿ ಯಾಕೆ ಕೆಂಡ ಕಾರುತಿ... 
ಟಿಪ್ಪು ಸುಲ್ತಾನ ಮೈಸೂರ ಹುಲಿ ಈ ರೌಡಿ ರೋಷನ್ ಪಟ್ಟೆ ಹುಲಿ 
ಆ ಗಂಡುಭೀರಿ ಹೆಣ್ಣಿಗಿಂತ ಕಾಲ ಬಂದಿದೆ ಅಯ್ಯೋ ಪಾಪ...ಅಯ್ಯೋ ಪಾಪ... 
ಟಿಪ್ಪು ಸುಲ್ತಾನ... ಯ್ಯಾ ... ಅಹ್ಹಹ್ಹಹಾ... ರೌಡಿ ರೋಷನ್ ಗೂರ್ರ್....  
ಆ ಗಂಡುಭೀರಿ ಹೆಣ್ಣಿಗಿಂತ ಕಾಲ ಬಂದಿದೆ ಅಯ್ಯೋ ಪಾಪ... ಪಾಪ... ಪಾಪ... ಪಾಪ... 
 ---------------------------------------------------------------------------------------------
  
ಹೊಸ ಕಾವ್ಯ (೧೯೮೯) - ಟಿಪ್ಪು ಸುಲ್ತಾನ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ 

ಟಿಪ್ಪು ಸುಲ್ತಾನ ಮೈಸೂರು ಹುಲಿ ಬೆಪ್ಪು ಹೈವಾನ ನಮ್ಮೂರ ಇಲೀ 
ಗಂಡುಗೋವಿ ಗಂಡಿಗಿಂತ ಕಾಲ ಬಂದಿತೇ ಅಯ್ಯೋ ಪಾಪ ಹ್ಹಾ... ಅಯ್ಯೋ ಪಾಪ 
ಟಿಪ್ಪು ಸುಲ್ತಾನ ಮೈಸೂರು ಹುಲಿ ಬೆಪ್ಪು ಹೈವಾನ ನಮ್ಮೂರ ಇಲೀ 
ಗಂಡುಗೋವಿ ಗಂಡಿಗಿಂತ ಕಾಲ ಬಂದಿತೇ ಅಯ್ಯೋ ಪಾಪ ಅಹ್ಹಹ್ಹಾ... ಅಯ್ಯೋ ಪಾಪ... ಹ್ಹಾ...  

ಬೀದಿ ರೋಮಿಯೋ ಮಣ್ಣು ಮುಕ್ಕಿದ ಲೇಡಿ ಕಿಲ್ಲರೋ ಲಾಗ ಹಾಕಿದ 
ಹೀರೋ ಜೀರೋ......  ಹೀರೋ ಜೀರೋ 
ಪ್ರೇಮ ಪಾಠದಿ ಎಲ್.ಕೇಜಿಯೇ ಇವ ಹೆಣ್ಣ ಕಂಡರೆ ಹಲ್ಲಹಲ್ಲ ಕಿರಿಯುವ 
ಬೋರು ಬೋರು.... ಬೋರು ಬೋರು....   
ಹೇ... ಕಲಿಯುವ ವಾತ್ಸಾಯನ ಹೇ... ಬರೆದಿಹ ಪ್ರೇಮಾಯಣ 
ಹೇ... ಹುಡುಗಿಯರಿದ್ದಲ್ಲಿಯೇ .. ಹೇ.. ಇವನಿಗೆ ಬೃಂದಾವನ 
ಬನ್ನೀರಿ ಎತ್ತಿ ಆರುತಿ ಅಹ್ಹಹ್ಹಹ್ಹಾ... ಮುಖಕೆ ಮಂಗಳಾರತಿ... 
ಡಿಸ್ನಿಯ ವ್ಯಂಗ್ಯ ಚಿತ್ರಕೂ ಹ್ಹಾ ಸಿಗದ ಅಸಲು ಮಾರುತಿ 
ಟಿಪ್ಪು ಸುಲ್ತಾನ ಮೈಸೂರು ಹುಲಿ ಹ್ಹಾ... ಬೆಪ್ಪು ಹೈವಾನ ನಮ್ಮೂರ ಇಲೀ 
ಗಂಡುಗೋವಿ ಗಂಡಿಗಿಂತ ಕಾಲ ಬಂದಿತೇ ಅಯ್ಯೋ ಪಾಪ ಹ್ಹಾ... ಅಯ್ಯೋ ಪಾಪ 
      
ನಿದ್ದಿಗಣ್ಣಲಿ ಬ್ರಹ್ಮ ಮಾಡಿದ ಬುದ್ದಿ ಇಡದೆಯೇ ನಿದ್ದೆ ಮಾಡಿದ 
ಟೂ ಬ್ಯಾಡ್ ಟೂ ಬ್ಯಾಡ್ ಟೂ ಬ್ಯಾಡ್ ಟೂ ಬ್ಯಾಡ್ 
ಬಾಡಿ ಬ್ಯೂಟಿಗೆ ಭೀಮ ನಾಚಿದ ಕುಸ್ತಿ ಮಾಡಲು ರಾಮ ಅಂಜಿದ 
ನಾಕೌಟ್ ನೋ ಡಾಟ್... ನಾಕೌಟ್ ನೋ ಡಾಟ್   
ಹೇ... ಬಿಡು ಬಿಡು ದೂರ ಸರಿ ಹೇ... ತಲೆಯಲಿ ನೀರು ಸುರಿ 
ಹೇ... ಹಣೆಯಲಿ ನಾಮ ಬರಿ ಹೇ... ಮುಖದಲಿ ಬಿಳಿ ಕರಿ... 
ಅಹ್ಹಹ್ಹಾ... ಎಂಥ ಮನ್ಮಥ... ಹ್ಹಾ... ಚೆಲುವಾ ಇವನು ಖಂಡಿತ 
ಕಾಮಶಾಸ್ತ್ರ ಪಂಡಿತ...  ಹೇಯ್ ...   ಯಾಕ್ರೀ.. ಮಾನ ಹೋಯಿತಾ... 
ಟಿಪ್ಪು ಸುಲ್ತಾನ ಮೈಸೂರು ಹುಲಿ ಹ್ಹಾ... ಬೆಪ್ಪು ಹೈವಾನ ನಮ್ಮೂರ ಇಲೀ 
ಗಂಡುಗೋವಿ ಗಂಡಿಗಿಂತ ಕಾಲ ಬಂದಿತೇ ಅಯ್ಯೋ ಪಾಪ ಹ್ಹಾ... ಅಯ್ಯೋ ಪಾಪ 
ಅಹ್ಹಹ್ಹಹಾ... ಲಲಲಲಾಲಾಲಾಲ  ಲಲಲಲಾಲಾಲಾಲ ಲಲಲಲಾಲಾಲಾಲ 
ಹೇ... ಲಲಲಲಾಲಾ ಲಾಲ ಲಾಲ ಲಾಲ ಲಲಾಲ ಲಾಲ 
--------------------------------------------------------------------------------------------
  
ಹೊಸ ಕಾವ್ಯ (೧೯೮೯) - ಚಳಿ ಚಳಿ ತಂಪಿನ ಗಾಳಿ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ 

ಹೆಣ್ಣು : ಚಳಿ ಚಳಿ ತಂಪಿನ ಗಾಳಿ 
ಗಂಡು : ತಕಿಟತಾಂ  ತಕಿಟತಾಂ ತಕಿಟತಾಂ 
ಹೆಣ್ಣು : ಒಡಲಲಿ ಆಸೆಯ ದಾಳಿ 
           ಚಳಿ ಚಳಿ ತಂಪಿನ ಗಾಳಿ ಈ ಒಡಲಲಿ ಆಸೆಯ ದಾಳಿ 
           ಅಮ್ಮಮ್ಮಾ ... ತಾಳೆ ಅಮ್ಮಮ್ಮಾ .. 
           ಮೈಯ್ಯೆಲ್ಲಾ ಏಕೋ ಮಿಂಚಾಯ್ತು ಇಂದು ಹುಚ್ಚಾದೇ ಸೋತು ನಾನಮ್ಮ 
ಗಂಡು  : ಚಳಿ ಚಳಿ ತಂಪಿನ ಗಾಳಿ 
ಹೆಣ್ಣು  : ತಕಿಟತಾಂ  ತಕಿಟತಾಂ ತಕಿಟತಾಂ 
ಗಂಡು : ಒಡಲಲಿ ಆಸೆಯ ದಾಳಿ 
            ಚಳಿ ಚಳಿ ತಂಪಿನ ಗಾಳಿ ಈ ಒಡಲಲಿ ಆಸೆಯ ದಾಳಿ 
            ಅಮ್ಮಮ್ಮಾ ... ತಾಳೆ ಅಮ್ಮಮ್ಮಾ .. 
            ಮೈಯ್ಯೆಲ್ಲಾ ಏಕೋ ಮಿಂಚಾಯ್ತು ಇಂದು ಹುಚ್ಚಾದೇ ಸೋತು ನಾನಮ್ಮ 

ಗಂಡು : ಹಕ್ಕಿಗೂ ಕೆಂಡಕ್ಕೂ ನಂಟಾದರೇ ಉರಿಯುವ ಜ್ವಾಲೆಯೇ ಪ್ರೇಮಕೆ ನಿದರ್ಶನ 
ಹೆಣ್ಣು : ಆಆಆ... ಯೌವ್ವನ ತಂದಂಥ ಈ ಕಂಪನ ತಂದಿದೆ ಹಿಂದೆ ನಾ ಕಾಣದ ರೋಮಾಂಚನ 
ಗಂಡು : ಹದಿಹರೆಯವೆಂಬ ಕಾರಂಜಿಯಲ್ಲಿ ಮಿಂದಂಥ ವೇಳೆ ಸಂಕೋಚವೆಲ್ಲಿ  
ಹೆಣ್ಣು : ಚಳಿ ಚಳಿ ತಂಪಿನ ಗಾಳಿ ಈ ಒಡಲಲಿ ಆಸೆಯ ದಾಳಿ ಅಮ್ಮಮ್ಮಾ ... ತಾಳೆ ಅಮ್ಮಮ್ಮಾ .. 
ಗಂಡು : ಓ... ಮೈಯ್ಯೆಲ್ಲಾ ಏಕೋ ಮಿಂಚಾಯ್ತು ಇಂದು ಹುಚ್ಚಾದೇ ಸೋತು ನಾನಮ್ಮ 

ಗಂಡು : ಪ್ರೀತಿಯ ನೋಟಕ್ಕೆ ಮಾತಿದ್ದರೇ ಪುಟಪುಟ ತುಂಬುವ ರಸಿಕತೆ ಕಾದಂಬರಿ... ಆಆಆ 
ಹೆಣ್ಣು : ಗಾಳಿಗೂ ಗಂಧಕ್ಕೂ ಜೊತೆಯಾದರೇ ಬೀಸುವ ಸೌರಭ ಸ್ನೇಹದ ಆರಾಧನ .. 
ಗಂಡು : ವೇದ ವೇದಾಂತ ಹರೆಯಕೆ ಬೇಡ ಇಲ್ಲಿಯೇ ಕಾಂತ ಕರೆದಿದೆ ನೋಡ... 
ಹೆಣ್ಣು : ಚಳಿ ಚಳಿ ತಂಪಿನ ಗಾಳಿ 
ಗಂಡು : ತಕಿಟತಾಂ  ತಕಿಟತಾಂ ತಕಿಟತಾಂ 
ಹೆಣ್ಣು : ಒಡಲಲಿ ಆಸೆಯ ದಾಳಿ 
ಗಂಡು : ಚಳಿ ಚಳಿ ತಂಪಿನ ಗಾಳಿ ಈ ಒಡಲಲಿ ಆಸೆಯ ದಾಳಿ 
ಹೆಣ್ಣು : ಅಮ್ಮಮ್ಮಾ ... ತಾಳೆ ಅಮ್ಮಮ್ಮಾ .. 
ಗಂಡು : ಓ... ಮೈಯ್ಯೆಲ್ಲಾ ಏಕೋ ಮಿಂಚಾಯ್ತು 
ಹೆಣ್ಣು : ಇಂದು ಹುಚ್ಚಾದೇ ಸೋತು ನಾನಮ್ಮ 
--------------------------------------------------------------------------------------------
  
ಹೊಸ ಕಾವ್ಯ (೧೯೮೯) - ಹೆಣ್ಣಲ್ಲಿ ಅಂದ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, 

ಹೆಣ್ಣಾಗೇ ಅಂದ ತುಂಬಿಟ್ಟ ಪರದೇಸಿ ಬ್ರಹ್ಮ ಗಂಡಲ್ಲಿ ಆಸೆ ತಂದಿಟ್ಟ ಆವ್ ನಾಸನವಾಗ್ 
ಓಯ್.. ಹೆಣ್ಣಲ್ಲಿ ಅಂದ ತುಂಬಿಟ್ಟ ಪರದೇಸಿ ಬ್ರಹ್ಮ ಗಂಡಲ್ಲಿ ಆಸೆ ತಂದಿಟ್ಟ ಅವ್ ನಾಸನವಾಗ್ 
ಕಣ್ಣಲ್ಲಿ ಮಧುವ ತುಂಬಿಟ್ಟ ಬಿಕಾನಸಿ ಬ್ರಹ್ಮ ನನ್ನಲ್ಲಿ ದಾಹ ತಂದಿಟ್ಟ 
ಹೊಂಬಾಳೆ ಬಣ್ಣದ ಮೈಯ್ಯೇ ಹಿತ್ತಾಳೆ ಕಡಗದ ಕೈಯ್ಯೇ... ಹೇಹೇಹೇಹೇಹೇಹೇ 
ಹೊಂಬಾಳೆ ಬಣ್ಣದ ಮೈಯ್ಯೇ ಹಿತ್ತಾಳೆ ಕಡಗದ ಕೈಯ್ಯೆ 
ಗುಂಗಿನ ಮತ್ತನು ಮೀರಿದ ಗುಂಗನು ಮುತ್ತಲ್ಲಿ ಏಕಿಟ್ಟ .....  
ಓಯ್.. ಹೆಣ್ಣಲ್ಲಿ ಅಂದ ತುಂಬಿಟ್ಟ ಪರದೇಸಿ ಬ್ರಹ್ಮ ಗಂಡಲ್ಲಿ ಆಸೆ ತಂದಿಟ್ಟ ಅವ್ ನಾಸನವಾಗ್ 
  
ವಿಳ್ಯದಲೇ ಹಾಕ್ಕೊಂಡ್ ಕೆಂದುಟಿ ಅಂಚು ಮುಸಿ ಮುಸಿ ನಕ್ಕಾಗ ಎದೆಯಾಗ ಮಿಂಚು 
ಓ.. ಕೂಯ್ಯೋ ಮುರ್ರೋ ಅಂತೂ ಸೊಂಟ ಲಾವಣಿ ಹಾಡದಂಗೆ... 
ಹಚ್ಚೆ ಹಾಕಿದ ಕಾಲನ್ ಕಂಡ್ರೆ ಕುಚುಗುಳಿ ಇಟ್ಟಂಗೇ ... 
ಮೂಗಲ್ಲಿ ಆಡಿರೆ ಮುತ್ತಿನತ್ತು... ನನ್ನಲ್ಲಿ ಆಗಿತ್ತು ಯಾರಿಗೊತ್ತು 
ಸಾಕಪ್ಪ ದ್ಯಾವ್ರೇ ಎಂಥ ಕಷ್ಟ ಅಯ್ಯಯ್ಯೋ.... 
ಸಾಕಪ್ಪ ದ್ಯಾವ್ರೇ ಎಂಥ ಕಷ್ಟ ಆ...ಆ......    
ಹೆಣ್ಣಲ್ಲಿ ಅಂದ ತುಂಬಿಟ್ಟ ಪರದೇಸಿ ಬ್ರಹ್ಮ ಗಂಡಲ್ಲಿ ಆಸೆ ತಂದಿಟ್ಟ ಅವ್ ನಾಸನವಾಗ್ 
ಕಣ್ಣಲ್ಲಿ ಮಧುವ ತುಂಬಿಟ್ಟ ಬಿಕಾನಸಿ ಬ್ರಹ್ಮ ನನ್ನಲ್ಲಿ ದಾಹ ತಂದಿಟ್ಟ 
ಟಂಕ ಟಾಂಕ ಟಕಟಕನಕಟಕಟ 
ಹೊಂಬಾಳೆ ಬಣ್ಣದ ಮೈಯ್ಯೇ ಹಿತ್ತಾಳೆ ಕಡಗದ ಕೈಯ್ಯೆ 
ಗುಂಗಿನ ಮತ್ತನು ಮೀರಿದ ಗುಂಗನು ಮುತ್ತಲ್ಲಿ ಯಾಕಿಟ್ಟ ..... ಹ್ಹಾ... 

ಮುಡಿದ ಮಲ್ಲೇ ಹೂವು ಘಮ್ಮ್ ಅಂದ್ರೇ ವಿಶ್ವಾಮಿತ್ರಂಗ್ ಕೂಡಾ ಸಾವಿರ ತೊಂದ್ರೇ... 
ಲಗಾಮ್ ಇಲ್ದೇ ಓಡ್ತು ಮನಸ್ಸೂ ಹೇಳಿದ್ ಕೇಳ್ದಂಗೇ 
ಹೆಣ್ಣನ್ ಒಮ್ಮೆ ತಬ್ಬಕೋ ಅಂತೂ ನಾಚ್ಕೆ ಇಲ್ದಂಗೇ 
ತಲೆ ಯಾಕೋ ಘುಮ್ಮ ಅಂತಾ ತಿರುಗುತೈತೆ 
ಅವಳನ್ನು ಹಿಡುಕೊಂಡಾಗ ಹಾಯಾಗೈತೆ    
ಸೋಮಾರಿ ಮನ್ಮಥ ಕಾಡಿಸಿಬಿಟ್ಟ ಅಯ್ಯಯ್ಯಯ್ಯೋ ... 
ಸೋಮಾರಿ ಮನ್ಮಥ ಕಾಡಿಸಿಬಿಟ್ಟ
ಹೆಣ್ಣಲ್ಲಿ ಅಂದ ತುಂಬಿಟ್ಟ ಪರದೇಸಿ ಬ್ರಹ್ಮ ಗಂಡಲ್ಲಿ ಆಸೆ ತಂದಿಟ್ಟ ಅವ್ ನಾಸನವಾಗ್ 
ಕಣ್ಣಲ್ಲಿ ಮಧುವ ತುಂಬಿಟ್ಟ ಬಿಕಾನಸಿ ಬ್ರಹ್ಮ ನನ್ನಲ್ಲಿ ದಾಹ ತಂದಿಟ್ಟ 
ಹೊಂಬಾಳೆ ಬಣ್ಣದ ಮೈಯ್ಯೇ ಹಿತ್ತಾಳೆ ಕಡಗದ ಕೈಯ್ಯೆ... ಹೇಹೇಹೇಹೇಹೇ  
ಹೊಂಬಾಳೆ ಬಣ್ಣದ ಮೈಯ್ಯೇ ಹಿತ್ತಾಳೆ ಕಡಗದ ಕೈಯ್ಯೆ... 
ಗುಂಗಿನ ಮತ್ತನು ಮೀರಿದ ಗುಂಗನು ಮುತ್ತಲ್ಲಿ ಯಾಕಿಟ್ಟ .....ಆ ಆ ಆ ಆ ಅ .. 
---------------------------------------------------------------------------------------------
  
ಹೊಸ ಕಾವ್ಯ (೧೯೮೯) - ತಾಯೆಂಬ ದೇವತೆ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ 

ತಾಯೆಂಬ ಆ ದೇವತೆ ಕಣ್ಣ ಕಂಡ ನಿಜ ದೇವತೆ 
ವಾತ್ಸಲ್ಯ ಪ್ರತಿ ರೂಪ ಬಾಳಲ್ಲಿ ನಿಜ ದೀಪ 
ಆಕಾಶಕೆ ಒಂದು ಚಂದ್ರ ಭೂಮಿಗೆ ಬೆಳದಿಂಗಳು ತಂತು 
ತಾಯೆಂಬ ಹುಣ್ಣಿಮೆ ಚಂದ್ರ ದೈವಿಕ ಮಮತೆಯ ತಂತು 
ಈ ಮಡಿಲು ಎನಾನಂದವು... ಈ ಮಡಿಲು ಏನೋ ಚೆಂದವೂ  
ಆಕಾಶಕೆ ಒಂದು ಚಂದ್ರ ಭೂಮಿಗೆ ಬೆಳದಿಂಗಳು ತಂತು 

ಭೂಮಿಗೆ ಹೆಸರಂತೆ ತಾಳ್ಮೆ ತಾಯಿಗೂ ಅದೇ ನೋಡು ಹಿರಿಮೆ 
ಕರುಳಲ್ಲೇ ಅವಳೆಲ್ಲಾ ಉಸಿರು ಆ ಪ್ರೀತಿ ಎಂದೆಂದೂ ಹಸಿರು 
ಹೆತ್ತೋಳ ನಾ ಕಾಣಲಿಲ್ಲ ಈ ಜೀವ ನನಗಾಯ್ತು ಎಲ್ಲ 
ಈ ತಾಯಿ ತಂದಂತ ತೂತ್ತು ನಾ ಮರೆಯೇ ಯಾವೊಂದು ಹೊತ್ತು 
ಧನ್ಯ ಇಂಥ ಜೀವ... ತಾಯೇ ಬಾಳ ದೈವ... 
ಆಕಾಶಕೆ ಒಂದು ಚಂದ್ರ ಭೂಮಿಗೆ ಬೆಳದಿಂಗಳು ತಂತು 
ತಾಯೆಂಬ ಹುಣ್ಣಿಮೆ ಚಂದ್ರ ದೈವಿಕ ಮಮತೆಯ ತಂತು 
ಈ ಮಡಿಲು ಎನಾನಂದವು... ಈ ಮಡಿಲು ಏನೋ ಚೆಂದವೂ  

ಜ್ಞಾನಕೆ ಹೆಸರಂತೆ ಗೀತೆ... ತ್ಯಾಗಕೆ ಹೆಸರಂತೆ ಮಾತೆ 
ಬಂದರೂ ನೂರೊಂದು ನೋವು ಬಾಡದು ಮಮತೆಯ ಹೂವು 
ಬಾಳಲಿ ನೂರೊಂದು ವರುಷ ಈ ತಾಯ ಚೆಲ್ಲುತ ಹರುಷ  
ಬಂದರೂ ನೋಡಿಲ್ಲಿ ಯಮನೇ... ಕಾಯುವೇ ತಾಯನ್ನು ನಾನೇ 
ಅಮ್ಮಾ ಎಂದು ಬಾಳಲೀ... ನಿಮ್ಮ ಪ್ರೀತಿ ಜೇನಲಿ   
ಆಕಾಶಕೆ ಒಂದು ಚಂದ್ರ ಭೂಮಿಗೆ ಬೆಳದಿಂಗಳು ತಂತು 
ತಾಯೆಂಬ ಹುಣ್ಣಿಮೆ ಚಂದ್ರ ದೈವಿಕ ಮಮತೆಯ ತಂತು 
ಈ ಮಡಿಲು ಎನಾನಂದವು... ಈ ಮಡಿಲು ಏನೋ ಚೆಂದವೂ  
ಲಾಲಾಲಾಲಾಲಾ... ಲಾಲಾಲಾಲಾಲಾ... ಲಾಲಾಲಾಲಾಲಾ... 
ಲಾಲಾಲಾಲಾಲಾ... ಲಾಲಾಲಾಲಾಲಾ... ಲಾಲಾಲಾಲಾಲಾ...  
------------------------------------------------------------------------------------------

No comments:

Post a Comment