1816. ಆತಂಕ (೧೯೯೩)

ಆತಂಕ ಚಲನಚಿತ್ರದ ಹಾಡುಗಳು
  1. ಹತ್ತು ವರುಷದ ಹಿಂದೆ
  2. ಅನುರಾಗಾದ ಹಕ್ಕಿ
  3. ಏಕೋ ಏನೋ ಈ ಭಾವ
  4. ಹತ್ತು ವರುಷದ ಹಿಂದೆ
  5. ಪ್ರೀತಿ ಸ್ವಪ್ನ
ಆತಂಕ (೧೯೯೩) - ಹತ್ತು ವರುಷದ ಹಿಂದೆ
ಸಂಗೀತ : ಹಂಸಲೇಖ, ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ, ಗಾಯನ : ಚಿತ್ರಾ

ಹತ್ತು ವರುಷದ ಹಿಂದೆ.. ಮುತ್ತೂರ ತೇರಿನಲಿ..
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನೀವಲ್ಲವೇ..ನೀವಲ್ಲವೇ..ಏಎಏಎಏಎ ನೀ..ವಲ್ಲವೇ..
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂ..ರಿನಲಿ 
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂ..ರಿನಲಿ
ಒಪ್ಪಿ ಕೈ ಹಿಡಿದವರು ನೀವಲ್ಲವೇ.. ನೀವಲ್ಲವೇ..ಏಎಏಎಏಎ ನೀ..ವಲ್ಲವೇ...
ಹತ್ತು ವರುಷದ ಹಿಂದೇ..ಏಎಏಎಏ 

ಚಂದಿರನ ಮಗಳೆಂದು ಚಂದ್ರಮುಖಿ ನೀ..ನೆಂದು
ಹೊಸ ಹೆಸರನಿಟ್ಟವರು ನೀವಲ್ಲವೇ..
ಮಲ್ಲಿಗೆಯ ದಂಡೆಯನು ತುರುಬಿನಲಿ ಹಿಡಿದವರು
ತುಟಿಗೆ ತುಟಿ ತಂ..ದವರು ನೀವಲ್ಲವೇ..
ಕೈಗೆ ಬಳೆ ಏರದೆಯೇ.. ಅಯ್ಯೋ ನೋವೆಂ..ದಾಗ..
ಕೈಗೆ ಬಳೆ ಏರದೆಯೇ ಅಯ್ಯೋ ನೋ..ವೆಂದಾಗ
ಮಹಡಿಯಿಂದಿಳಿದವರು ನೀವಲ್ಲವೇ..
ಬಳೆಗಾರ ಶೆಟ್ಟಿಯನು ಗದ್ದರಿಸಿಕೊಂ..ಡವರು
ಬೆತ್ತವನು ತಂ..ದವರು ನೀವಲ್ಲವೇ.. ನೀವಲ್ಲವೇ..ಏಎಏಎಏಎ ನೀವಲ್ಲವೇ..
ಹತ್ತು ವರುಷದ ಹಿಂದೇ..ಏಎಏಎಏ 

ಸೆರೆಗೆಳೆದು ನಿಲ್ಲಿಸಿದ ಜಡೆಯೆಳೆದು ನೋಯಿಸಿದ
ಬಯಲು ಸೀಮೆಯ ಜಾ..ಣ ನೀವಲ್ಲವೇ..
ಮೊದಲಿರುಳು ಹೊಂಗನಸ ಮುನ್ನೀರ ದಾ..ಟಿಸಿದ
ಬೆಳಕು ಬೆಡಗಿನ ಹಡಗು ನೀವಲ್ಲವೇ..
ಬಡತನವೊ ಸಿರಿತನವೊ ಯಾರಿರಲಿ ಎಲ್ಲಿರಲಿ
ಬಡತನವೊ ಸಿರಿತನವೊ ಯಾರಿರಲಿ ಎಲ್ಲಿರಲಿ
ದೊರೆಯಾಗೆ ಮೆರೆವವರು ನೀವಲ್ಲವೇ..
ಗಂಡನಿಗೆ ಒಪ್ಪಾ..ಗಿ  ಕಂದನಿಗೆ ದಿಕ್ಕಾ..ಗಿ
ಗಂಡನಿಗೆ ಒಪ್ಪಾ..ಗಿ ಕಂದನಿಗೆ ದಿಕ್ಕಾ..ಗಿ
ಪಯಣದಲಿ ಜೊತೆಯಾಗಿ ನಾನಿಲ್ಲವೇ..
ಹತ್ತು ವರುಷದ ಹಿಂದೆ ಮುತ್ತೂ..ರ ತೇರಿನಲಿ
ಅತ್ತಿತ್ತ ಸುಳಿದವರು ನೀವಲ್ಲವೇ.. ನೀವಲ್ಲವೇ...ಏಎಏಎಏಎ ನೀ..ವಲ್ಲವೇ...
ಹತ್ತು ವರುಷದ ಹಿಂದೇ..ಏಏಏ.. 
------------------------------------------------------------------------------------

ಆತಂಕ (೧೯೯೩) - ಅನುರಾಗಾದ ಹಕ್ಕಿ 
ಸಂಗೀತ : ಹಂಸಲೇಖ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ 

ಹೂಂಹೂಂಹೂಂಹೂಂಹೂಂ... ಓಓಓಓಓ... 
ಹೂಂಹೂಂಹೂಂಹೂಂಹೂಂ... ಓಓಓಓಓ... 
ಹೂಂಹೂಂಹೂಂಹೂಂಹೂಂ... ಓಓಓಓಓ... 
ಹೂಂಹೂಂಹೂಂಹೂಂಹೂಂ... ಓಓಓಓಓ... 
ಅನುರಾಗದ ಹಕ್ಕಿ ಕೂಗಿ ಹಾರಾಡಿದೆ ಎಲ್ಲೇ ಮೀರಿ 
ಸಂತೋಷದ ರೆಕ್ಕೆ ತೂಗಿ ತೇಲಾಡಿದೆ ಬಾನಿಗೇರಿ 
ಹೂಂಹೂಂಹೂಂಹೂಂಹೂಂ... ಓಓಓಓಓ... 
ಹೂಂಹೂಂಹೂಂಹೂಂಹೂಂ... ಓಓಓಓಓ... 
ಹೂಂಹೂಂಹೂಂಹೂಂಹೂಂ... ಆಆಆಅ...   

ಸಂಗಾತಿ ಸನಿಹವ ಸೇರಿ ದಾಂಪತ್ಯ ಸವಿಯನು ಹೀರಿ 
ಮಧುರವಾಗಿ ಹಾಲು ಜೇನು ಹೊಳೆಯಲಿ ಮಿಂದು 
ಮನಸಾರೆ ಸರಸವ ಕಂಡು ಸುಖದ ಸುಗ್ಗಿ  
ಅನುರಾಗದ ಹಕ್ಕಿ ಕೂಗಿ ಹಾರಾಡಿದೆ ಎಲ್ಲೇ ಮೀರಿ 
ಸಂತೋಷದ ರೆಕ್ಕೆ ತೂಗಿ ತೇಲಾಡಿದೆ ಬಾನಿಗೇರಿ 

ಒಡಲಾಳ ಒಲವನು ಬಯಸಿ ಸಲ್ಲಾಪ ಕಾಮನೆ ಅರಸಿ 
ಸಂಗ ಸಾಗಿ ಒಂದಾಗಿ ಅಕ್ಕರೆ ಕಂಡು 
ಸಂಸಾರ ಸುಧೆಯನು ಸವಿದು ಮಿಲನ ಮಿನುಗಿ 
ಅನುರಾಗದ ಹಕ್ಕಿ ಕೂಗಿ ಹಾರಾಡಿದೆ ಎಲ್ಲೇ ಮೀರಿ 
ಸಂತೋಷದ ರೆಕ್ಕೆ ತೂಗಿ ತೇಲಾಡಿದೆ ಬಾನಿಗೇರಿ 

ಉತ್ತಂಗ ಶೃಂಗವ ಸೇರಿ ತಂಗಾಳಿ ತೆರೆಗಳ 
ಈಜಿ ಮನಸು ಮಾಗಿ ನೂರಾರು ಯೋಜನ ದಾರಿ 
ಆವರಿಸಿ ಆಸೆಯ ಲಹರಿ ಹೃದಯ ಹಿಗ್ಗಿ 
ಅನುರಾಗದ ಹಕ್ಕಿ ಕೂಗಿ ಹಾರಾಡಿದೆ ಎಲ್ಲೇ ಮೀರಿ 
ಸಂತೋಷದ ರೆಕ್ಕೆ ತೂಗಿ ತೇಲಾಡಿದೆ ಬಾನಿಗೇರಿ 
ಹೂಂಹೂಂಹೂಂಹೂಂಹೂಂ... ಓಓಓಓಓ... 
ಹೂಂಹೂಂಹೂಂಹೂಂಹೂಂ... ಓಓಓಓಓ... 
ಹೂಂಹೂಂಹೂಂಹೂಂಹೂಂ... ಆಆಆಅ... 
-----------------------------------------------------------------------------------

ಆತಂಕ (೧೯೯೩) - ಏಕೋ ಏನೋ ಈ ಭಾವ 
ಸಂಗೀತ : ಹಂಸಲೇಖ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ 

------------------------------------------------------------------------------------

ಆತಂಕ (೧೯೯೩) - ಹತ್ತು ವರುಷದ ಹಿಂದೆ 
ಸಂಗೀತ : ಹಂಸಲೇಖ, ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ, ಗಾಯನ : ಎಸ್.ಜಾನಕೀ 

------------------------------------------------------------------------------------

ಆತಂಕ (೧೯೯೩) - ಪ್ರೀತಿ ಸ್ವಪ್ನ 
ಸಂಗೀತ : ಹಂಸಲೇಖ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ 

ತರಾರ್.... ತರಾರ್ 
ಪ್ರೀತಿ ಸ್ವಪ್ನ ಸುಂದರ (ತರಾರ್) ಆಸೆ ಹಸಿರ ಹಂದರ (ತರಾರ್)
ಮನಸೂ ಮನಸೂ ಕೂಡಿ ಸ್ನೇಹ ಸಾಗರ ಹೃದಯ ಹೃದಯ ಸೇರಿ ಒಲವಿನಾಗರ 
ಬಾಳಿನಂಬರ... ತುಂಬ ಚಂದಿರ ಹೊಳೆದು ಬೆಳಗುತಾ... ಪ್ರೇಮದಂಕುರ... 
ಪ್ರೀತಿ ಸ್ವಪ್ನ ಸುಂದರ (ತರಾರ್) ಆಸೆ ಹಸಿರ ಹಂದರ (ತರಾರ್)
ಮನಸೂ ಮನಸೂ ಕೂಡಿ ಸ್ನೇಹ ಸಾಗರ ಹೃದಯ ಹೃದಯ ಸೇರಿ ಒಲವಿನಾಗರ 
ಬಾಳಿನಂಬರ... ತುಂಬ ಚಂದಿರ ಹೊಳೆದು ಬೆಳಗುತಾ... ಪ್ರೇಮದಂಕುರ... 
 
ರಾಗ ನಿನ್ನದೂ... ತಾನ ನಿನ್ನದೂ ನನ್ನ ಹಾಡಿಗೆ ಭಾವ ನಿನ್ನದು 
ಜೀವ ನಿನ್ನದು... ಮಾತು ನಿನ್ನದೇ... ಮೌನ ನಿನ್ನದೇ... 
ನಿನ್ನ ಬಿಟ್ಟರೇ ಬೇರೆ ಏನಿದೇ... ಎಲ್ಲಾ ನಿನ್ನದೇ 
ಸಂಗಾತಿಯೇ ನೀ ಚಂದಿರ ಈ ಬಾಳಿಗೆ 
ಪ್ರೀತಿ ಸ್ವಪ್ನ ಸುಂದರ (ತರಾರ್) ಆಸೆ ಹಸಿರ ಹಂದರ (ತರಾರ್)
ಮನಸೂ ಮನಸೂ ಕೂಡಿ ಸ್ನೇಹ ಸಾಗರ ಹೃದಯ ಹೃದಯ ಸೇರಿ ಒಲವಿನಾಗರ 
ಕೋಟಿ ತೊಂದರೆ... ದಾಟಿ ಬಂದರೇ... ಒಲುಮೆ ತೋರಿದ ಸ್ವರ್ಗ ಈ ಧರೆ 
  
ಆಸೇ ನಿನ್ನದು ಕನಸು ನಿನ್ನದೂ ನನ್ನ ಬಾಳಿನ ಹಾದಿ ನಿನ್ನದು ಸ್ಫೂರ್ತಿ ನಿನ್ನದು 
ಭಾವ ನಿನ್ನದೇ ಬಂಧ ನಿನ್ನದೇ... ನನ್ನ ನಲಿವಿನ ಲಾಸ್ಯ ನಿನ್ನದು ಭಾಷ್ಯ ನಿನ್ನದು  
ಸಂಗಾತಿಯೇ ನೀ ಚಂದಿರ ನನ್ನ ಬಾಳಿಗೆ 
ಪ್ರೀತಿ ಸ್ವಪ್ನ ಸುಂದರ (ತರಾರ್) ಆಸೆ ಹಸಿರ ಹಂದರ (ತರಾರ್)
ಮನಸೂ ಮನಸೂ ಕೂಡಿ ಸ್ನೇಹ ಸಾಗರ ಹೃದಯ ಹೃದಯ ಸೇರಿ ಒಲವಿನಾಗರ 
ಅಂತರಾಳದ ಒಸಗೆ ನಡೆದರೆ ಅಂಕೆ ಮೀರಿದ ಒಲವಿನ ತೊರೆ     
-----------------------------------------------------------------------------------

No comments:

Post a Comment