1819. ಸಿಬಿಐ ವಿಜಯ್ (೧೯೯೧)

ಸಿಬಿಐ ವಿಜಯ ಚಲನಚಿತ್ರದ ಹಾಡುಗಳು 
  1. ಚಿರಕಾಲ ನೀ ಬಾಳು 
  2. ಮಧ್ಯರಾತ್ರಿ 
  3. ಪ್ರೀತಿಯ ಸ್ವಾಗತ 
  4. ಲೆಫ್ಟ್ ರೈಟ್ ಸ್ಟೆಪ್ 
ಸಿಬಿಐ ವಿಜಯ್ (೧೯೯೧) - ಚಿರಕಾಲ ನೀ ಬಾಳು 
ಸಂಗೀತ : ಗುಣಸಿಂಗ್, ಸಾಹಿತ್ಯ : ಶ್ರೀವತ್ಸ ರಂಗನಾಥ, ಗಾಯನ : ವಿಷ್ಣು, ಬಿ.ಆರ್.ಛಾಯ 

ಚಿರಕಾಲ ನೀ ಬಾಳು ಎಂದು ಈ ತಂಗಿ ಹಾರೈಕೆ ಅಣ್ಣಾ.. 
ಶುಭವ ನುಡಿವ... 
ಶುಭವ ನುಡಿವ ಒಂದೇ ಬಳ್ಳಿ ಹೂವೇ ಹೀಗೆ ನಗುತಿರು ಹಾಯಾಗಿ 
ಚಿರಕಾಲ ನೀ ಬಾಳು ಎಂದು ಈ ತಂಗಿ ಹಾರೈಕೆ ಅಣ್ಣಾ.. 
ಶುಭವ ನುಡಿವ... 
ಶುಭವ ನುಡಿವ ಒಂದೇ ಬಳ್ಳಿ ಹೂವೇ ಹೀಗೆ ನಗುತಿರು ಹಾಯಾಗಿ 

ಹಡೆದವರ ಒಡನಾಟ ಕೊನೆಯಾಗಲು ಮಮತೆಯ ಬಳ್ಳಿ ಚಿಗುರನು ಕಾದೆ 
ನೆರವಿಗೆ ನಿಂತು ನೆರಳನು ತಂದೆ ಅರಿವನು ನೀಡಿ ಗುರುವು ನೀನಾದೇ 
ತವರಿನ ಬಂಧು ಕರುಳಿನ ಸಿಂಧು ಸಿರಿಸುಖ ತುಂಬಿ ಹರುಷದಿ ಎಂದು 
ನಗು ತುಂಬಿ ನನ ಬಾಳ ಬೆಳಕಾಗಿರೂ 
ಚಿರಕಾಲ ನೀ ಬಾಳು ಎಂದು ಈ ತಂಗಿ ಹಾರೈಕೆ ಅಣ್ಣಾ.. 
ಶುಭವ ನುಡಿವ... 
ಶುಭವ ನುಡಿವ ಒಂದೇ ಬಳ್ಳಿ ಹೂವೇ ಹೀಗೆ ನಗುತಿರು ಹಾಯಾಗಿ 

ಜೊತೆಯಲಿ ಒಡನಾಡಿ ಬೆಳೆದಾಗಲೇ ಒಲವನು ತೋರಿ ಕಿರುನಗೆ ಬೀರಿ 
ಹಿತವನು ತೋರಿ ಮಮತೆಯ ಸಾರಿ ಬದುಕಿಗೆ ನೀನು ಬೆಳಕನು ತಂದೆ 
ಹರುಷವ ತುಂಬಿ ವರುಷವು ನೂರು ಅರಿಶಿನ ಕುಂಕುಮ ಹಣೆಯಲ್ಲಿ ಇಟ್ಟು 
ಹಸೆ ಏರಿ ಪಸಿರಾಗಿ ಹೆಸರಾಗಿರೂ 
ಚಿರಕಾಲ ನೀ ಬಾಳು ಎಂದು ಈ ತಂಗಿ ಹಾರೈಕೆ ಅಣ್ಣಾ.. 
ಶುಭವ ನುಡಿವ... 
ಶುಭವ ನುಡಿವ ಒಂದೇ ಬಳ್ಳಿ ಹೂವೇ ಹೀಗೆ ನಗುತಿರು ಹಾಯಾಗಿ 
ಚಿರಕಾಲ ನೀ ಬಾಳು ಎಂದು ಈ ತಂಗಿ ಹಾರೈಕೆ ಅಣ್ಣಾ.. 
ಶುಭವ ನುಡಿವ... 
ಶುಭವ ನುಡಿವ ಒಂದೇ ಬಳ್ಳಿ ಹೂವೇ ಹೀಗೆ ನಗುವ ಹಾಯಾಗಿ 
---------------------------------------------------------------------------------------
 
ಸಿಬಿಐ ವಿಜಯ್ (೧೯೯೧) - ಮಧ್ಯರಾತ್ರಿ 
ಸಂಗೀತ : ಗುಣಸಿಂಗ್, ಸಾಹಿತ್ಯ : ಶ್ರೀವತ್ಸ ರಂಗನಾಥ, ಗಾಯನ : ವಿಷ್ಣು, ಬಿ.ಆರ್.ಛಾಯ 

ಹೆಣ್ಣು : ಮಧ್ಯರಾತ್ರಿ ಗುಡುಗು ಮಿಂಚು ಗಾಳಿ ಧೂಳು ಒಂಟಿ ಹೆಣ್ಣು 
          ಪುಂಡರೆಲ್ಲ ಸೇರಿಕೊಂಡು ದಾಳಿ ಮಾಡಿ ಕಾಡುವಾಗ 
          ಕಾದವನು ಯಾರಿವನೂ 
ಗಂಡು : ಐ ಸೀ ಹಾಗೆಲ್ಲ ಕೇಳಬಾರದು
ಹೆಣ್ಣು : ಮಧ್ಯರಾತ್ರಿ ಗುಡುಗು ಮಿಂಚು ಗಾಳಿ ಧೂಳು ಒಂಟಿ ಹೆಣ್ಣು 
          ಪುಂಡರೆಲ್ಲ ಸೇರಿಕೊಂಡು ದಾಳಿ ಮಾಡಿ ಕಾಡುವಾಗ 
          ಕಾದವನು ಯಾರಿವನೂ 
ಗಂಡು : ಗೆಸ್ ಯುವರ್ ಸೆಲ್ಫ್...        ಹೆಣ್ಣು : ಆರ್ ಯೂ ಷೇರಾಲ್ಕ್ ಹೋಮ್ಸ್  
ಗಂಡು : ನೋ ಐ ಎಮ್ ವಿಜಯ..

ಹೆಣ್ಣು : ಯಾವೂರು ಹೇಳು ನೀನು ಇಲ್ಲೇಕೆ ಬಂದೆ ನೀನು 
          ಯಾವೂರು ಹೇಳು ನೀನು ಇಲ್ಲೇಕೆ ಬಂದೆ ನೀನು 
          ಕಣ್ಣಲ್ಲೇ ಕಾಡಬೇಡ.. ಓಓಓಓಓ ನನ್ನೊಂಟಿ ಮಾಡಬೇಡವೋ.. 
          ಕಣ್ಣಲ್ಲೇ ಕಾಡಬೇಡ.. ಓಓಓಓಓ ನನ್ನೊಂಟಿ ಮಾಡಬೇಡವೋ.. 
ಗಂಡು : ಯಾವೂರ ಹೆಣ್ಣು ನೀನು ಏಕಾಂಗಿ ಏಕೆ ಹೇಳು 
            ಯಾವೂರ ಹೆಣ್ಣು ನೀನು ಏಕಾಂಗಿ ಏಕೆ ಹೇಳು 
            ಮತ್ತಲ್ಲಿ ಕಾಡಬೇಡವೇ ಮುತ್ತನ್ನೂ ಕೇಳಬೇಡವೇ 
ಹೆಣ್ಣು : ಮಧ್ಯರಾತ್ರಿ ಗುಡುಗು ಮಿಂಚು ಗಾಳಿ ಧೂಳು ಒಂಟಿ ಹೆಣ್ಣು 
 
ಗಂಡು : ಶೂರಾಧಿ ಶೂರ ಕೇಳೇ ಕನ್ನಡದ ಧೀರ ಕಣೇ 
            ಶೂರಾಧಿ ಶೂರ ಕೇಳೇ ಕನ್ನಡದ ಧೀರ ಕಣೇ 
            ಮೈಯ್ಯ ಮುಟ್ಟಿ ಕಾಡಬೇಡವೇ ಪೈಪೋಟಿ ಮಾಡಬೇಡವೇ 
            ಮೈಯ್ಯ ಮುಟ್ಟಿ ಕಾಡಬೇಡವೇ ಪೈಪೋಟಿ ಮಾಡಬೇಡವೇ 
ಹೆಣ್ಣು : ಕತ್ತಲ ಹೊತ್ತು ಕೇಳು ಸುತ್ತ ಯಾರಿಲ್ಲ ನೋಡು 
          ಕತ್ತಲ ಹೊತ್ತು ಕೇಳು ಸುತ್ತ ಯಾರಿಲ್ಲ ನೋಡು 
          ಹೊತ್ತೇರೋವರೆಗೂ ಕೂಡಿ ನಂದೆಲ್ಲ ನೀಡುವೆ ಬಾರೋ ... ಪ್ಲೀಸ್.. ಪ್ಲೀಸ್ 
ಗಂಡು : ಪುಂಡರೆರಲ್ಲ ಸೇರಿಕೊಂಡು ದಾಳಿಮಾಡಿ ಕಾಡಿದಾಗ 
            ಕಾಯಲೆಂದೇ ಬಂದವನು ನಾ.... 
-------------------------------------------------------------------------------------
 
ಸಿಬಿಐ ವಿಜಯ್ (೧೯೯೧) - ಪ್ರೀತಿಯ ಸ್ವಾಗತ 
ಸಂಗೀತ : ಗುಣಸಿಂಗ್, ಸಾಹಿತ್ಯ : ಶ್ರೀವತ್ಸ ರಂಗನಾಥ, ಗಾಯನ : ವಿಷ್ಣು, ಬಿ.ಆರ್.ಛಾಯ 

ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ 
ಪ್ರೇಮದ ಕೋಟೆಗೆ ಕಾಣದ ಕಾವಿಗೆ 
ಜೋಡಿಯು ಬೇಡುತ ಯೌವ್ವನ ಹಾಡಿದೆ...  ಯೌವ್ವನ ಹಾಡಿದೆ...  
ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ... ಸ್ನೇಹದ ದುಂಬಿಗೆ 

ಭಾನು ಭೂಮಿ ದೂರ ಏಕೆ ದುಂಬಿ ಹೂವ ಜೋಡಿ ಸಾಕೆ ಹೇಳು ನೀ ಉತ್ತರ 
ಜೇನು ತುಂಬಿ ನಿಂತ ವೇಳೆ ಹೀರಿ ಸೂರೆ ಮಾಡು ಬೇಗ 
ಭಾರವ  ತಾಳೇ ನಾ ಮೋಡಿಮಾಡಿ ಓಡಬೇಡ ಮೈಯ್ಯಭಾರ ಮಾಡಬೇಡ 
ಮೋಹದ ಚಂದಿರ ಮೋಹದ ಮಂದಿರ 
ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ... ಸ್ನೇಹದ ದುಂಬಿಗೆ 

ಸಾಟಿಯಾದ ಕಾವಲಿಲ್ಲ ಲೂಟಿಮಾಡಿ ಕೋಟೆಯಾಳೋ ರಾಜ ನೀನಾಗೂ ಬಾ.. 
ತೋಟ ಕಾಯೋ ಮಾಲಿ ಇಲ್ಲ ಬೇಲಿ ದಾಟಿ ದಾಳಿ ಮಾಡೋ ಗೂಳಿ ನೀನಾಗೂ ಬಾ 
ಜೋಡಿ ಕೂಡಿ ಕಾವು ನೀಡು ನೋವಿನಿಂದ ಪಾರು ಮಾಡು ಕಾಡದೇ ನನ್ನನೇ... ಕಾಡದೇ ನನ್ನನೇ 
ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ 
ಪ್ರೇಮದ ಕೋಟೆಗೆ ಕಾಣದ ಕಾವಿಗೆ 
ಜೋಡಿಯು ಬೇಡುತ ಯೌವ್ವನ ಹಾಡಿದೆ...  ಯೌವ್ವನ ಹಾಡಿದೆ...  
ಪ್ರೀತಿಯ ಸ್ವಾಗತ ಸ್ನೇಹದ ದುಂಬಿಗೆ... ಸ್ನೇಹದ ದುಂಬಿಗೆ 
--------------------------------------------------------------------------------------

ಸಿಬಿಐ ವಿಜಯ್ (೧೯೯೧) - ಲೆಫ್ಟ್ ರೈಟ್ ಸ್ಟೆಪ್
ಸಂಗೀತ : ಗುಣಸಿಂಗ್, ಸಾಹಿತ್ಯ : ಶ್ರೀವತ್ಸ ರಂಗನಾಥ, ಗಾಯನ : ವಿಷ್ಣು, ಬಿ.ಆರ್.ಛಾಯ

---------------------------------------------------------------------------------------

No comments:

Post a Comment