ಹೊಸತೀರ್ಪು ಚಲನಚಿತ್ರದ ಹಾಡುಗಳು
- ಸಂಜೆಯಲಿ ಈ ಹೆಣ್ಣ
- ಹತ್ತೇ ಪೈಸಕ್ಕೆ ಬನ್ನಿ ತೋರಿಸುವೆ ಸಿನಿಮಾ
- ಈ ನಮ್ಮ ಗಂಡು
- ಬರ್ತಿಯೇನೇ ಹುಡುಗಿ
ಹೊಸತೀರ್ಪು (೧೯೮೩) - ಸಂಜೆಯಲಿ ಈ ಹೆಣ್ಣ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಆಆಆಅ ಆಆಆಅ ಆಆಆಅ ಆಆಆಅ ಸಂಜೆಯಲೀ....
ಸಂಜೀಯಲೀ ಈ ಹೆಣ್ಣ ನೆನಪಾಯಿತೇ ನಿನ್ನೆ ಕಂಡ ಸುಖ ಮತ್ತೇ ಬೇಕಾಯಿತೇ
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಾಳಿಗೆ
ಸಂಜೇ ... ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ... ಸಂಜೆಯಲಿ...
ಸಂಜೀಯಲೀ ಈ ಹೆಣ್ಣ ನೆನಪಾಯಿತೇ ನಿನ್ನೆ ಕಂಡ ಸುಖ ಮತ್ತೇ ಬೇಕಾಯಿತೇ
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಾಳಿಗೆ
ಮೈಯ್ಯಲ್ಲಿ ಹೊಸ ಅಸೆ ಕಾವೇರಿದಾಗ ಯೌವ್ವನ ರಸ ತುಂಬಿ ಕರೆ ನೀಡಿದಾಗ
ಯಾವುದೋ ಬರಿ ಚಿಂತೆ ಮನ ಕಾಡಿದಾಗ ಮರೆಸುವ ಸಂಗಾತಿ ಜೊತೆ ಸೇರುವಾಗ
ಕೆಂಪಿನ ಮೂಗುತಿ ಮಿಂಚಾಡುವಾಗ ಮನದಲಿ ಬಯಕೆ ತಾ ಮೀಟಿದಾಗ
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಾಳಿಗೆ
ಸಂಜೆಯಲಿ... ಸಂಜೀಯಲೀ ಈ ಹೆಣ್ಣ ನೆನಪಾಯಿತೇ ನಿನ್ನೆ ಕಂಡ ಸುಖ ಮತ್ತೇ ಬೇಕಾಯಿತೇ
ಹೂವಿನ ಮಂಚವು ಬಾ ಎನ್ನುವಾಗ ಕೆದರಿದ ಕುಂಕುಮ ಕಥೆ ಹೇಳುವಾಗ
ತುಟಿಗಳು ನಿನದಾಗಿ ಕಾದಿರುವಾಗ ಸಿಹಿ ನೂರು ಕಾಣಲು ಬೇಡಿರುವಾಗ
ಬೆಳಗುವ ಈ ದೀಪ ತಾ ಆರುವಾಗ ಇನಿಯಳ ಈ ತೋಳು ಮೈಯ್ಯ ಬಳುಸುವಾಗ
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಾಳಿಗೆ
ಸಂಜೆಯಲಿ... ಹ್ಹಾ... ಸಂಜೀಯಲೀ ಈ ಹೆಣ್ಣ ನೆನಪಾಯಿತೇ ನಿನ್ನೆ ಕಂಡ ಸುಖ ಮತ್ತೇ ಬೇಕಾಯಿತೇ
----------------------------------------------------------------------------------------------
ಹೊಸತೀರ್ಪು (೧೯೮೩) - ಹತ್ತೇ ಪೈಸಕ್ಕೆ ಬನ್ನಿ ತೋರಿಸುವೆ ಸಿನಿಮಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ
ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ...
ಹ್ಹಾ... ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ... ಸಿನಿಮಾ... ಒಳ್ಳೇ ಸಿನಿಮಾ
ಹಿಂದೆಂದೂ ಕಾಣದಂಥ ಸಿನಿಮಾ... ಕತ್ತಲು ಮಾಡೋಲ್ಲ ಕುರ್ಚಿಯು ಹಾಕಲ್ಲ
ಕತ್ತಲು ಮಾಡೋಲ್ಲ ಕುರ್ಚಿಯು ಹಾಕಲ್ಲ ಕಚ್ಚೋಕೆ ತಿಗೆಣೆಗಳು ಇಲ್ಲಾ...
ಇಲ್ಲಿ ಕಚ್ಚೋಕೆ ತಿಗೆಣೆಗಳು ಇಲ್ಲಾ...
ಹ್ಹಾ... ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ... ಸಿನಿಮಾ... ಒಳ್ಳೇ ಸಿನಿಮಾ
ಹಿಂದೆಂದೂ ಕಾಣದಂಥ ಸಿನಿಮಾ...
(ದುಬೈಮಾಮ ಆಟ ನೋಡ್ಬೇಕು ಈ ಮೋಹಿನಿ ಆಟ ಬ್ಯಾಡ್ ನಿನಗ್ ಬೇರೇ ಆಟ
ಇಲ್ಲ.. ಅದನ್ನೇ ನೋಡಬೇಕು ಅತ್ತೇರೇ ಇಟ್ಟ ಮೇಲೆ ಅವರೇ ಕಾಯ್ ನಡೀ ... )
ನೋಡು ಬೆಂಗಳೂರು ನೋಡು ಮಂಗಳೂರು ಹಿಂದೆ ಹಿಂದೆ ನಿಂತ ಗುಮ್ಮಟನ ನೋಡೂ
ನೋಡು ಕಲ್ಲೂರು ನೋಡು ಮೈಸೂರು ಕೈಯ್ಯ ಎತ್ತಿ ನಿಂತಾ ಮಹಿಷನ್ ನೋಡು
ಎಂಥ ಚೆಂದ ಎಂಥ ಅಂದ
ಎಂಥ ಚೆಂದ ಎಂಥ ಅಂದ ಮೇಲಿಂದ ಜಲಪಾತ ಬೀಳೋದು ನೀ ನೋಡು
ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ...
ಹ್ಹಾ... ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ... ಸಿನಿಮಾ... ಒಳ್ಳೇ ಸಿನಿಮಾ
ಹಿಂದೆಂದೂ ಕಾಣದಂಥ ಸಿನಿಮಾ...
ಏ ಮರಿ ಅಲ್ಲೆನ ನೋಡ್ತಾ ಇದ್ದೀಯಾ ಬಾ ಇಲ್ಲ ನೋಡು
ನೋಡೋ ಗಾಂಧಿಜೀ ನೋಡು ನೆಹರೂಜಿ
ಶಿರಡಿಯಾ ಬಾಬಾಗೇ ನೀ ಕೈಯ್ಯ ಮುಗಿದು ನೋಡು
ಕೆವಿ ಪುಟ್ಟಪ್ಪ ಡಿವಿ ಗುಂಡಪ್ಪ ಈ ನಮ್ಮ ನಾಡ ಕವಿಗಳನ್ನೂ ನೋಡು
ನಮ್ಮ ನಾಡು ಕಲೆಯ ಬಿಡು
ನಮ್ಮ ನಾಡು ಕಲೆಯ ಬಿಡು ಬೇಲೂರು ಚೆಲುವಾದ ಬೊಂಬೆಯ ನೀ ನೋಡು
ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ... ಸಿನಿಮಾ... ಒಳ್ಳೇ ಸಿನಿಮಾ
ಹಿಂದೆಂದೂ ಕಾಣದಂಥ ಸಿನಿಮಾ...
ಕತ್ತಲು ಮಾಡೋಲ್ಲ ಕುರ್ಚಿಯು ಹಾಕಲ್ಲ ಕಚ್ಚೋಕೆ ತಿಗೆಣೆಗಳು ಇಲ್ಲಾ...
ಇಲ್ಲಿ ಕಚ್ಚೋಕೆ ತಿಗೆಣೆಗಳು ಇಲ್ಲಾ...
ಹ್ಹಾ... ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ... ಸಿನಿಮಾ... ಒಳ್ಳೇ ಸಿನಿಮಾ
ಹಿಂದೆಂದೂ ಕಾಣದಂಥ ಸಿನಿಮಾ...
------------------------------------------------------------------------------------------
ಹೊಸತೀರ್ಪು (೧೯೮೩) - ಹತ್ತೇ ಪೈಸಕ್ಕೆ ಬನ್ನಿ ತೋರಿಸುವೆ ಸಿನಿಮಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ
ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ...
ಹ್ಹಾ... ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ... ಸಿನಿಮಾ... ಬಿಟ್ಟಿ ಸಿನಿಮಾ
ಹಿಂದೆಂದೂ ಕಾಣದಂಥ ಸಿನಿಮಾ... ಕತ್ತಲು ಮಾಡೋಲ್ಲ ಕುರ್ಚಿಯು ಹಾಕಲ್ಲ
ಕತ್ತಲು ಮಾಡೋಲ್ಲ ಕುರ್ಚಿಯು ಹಾಕಲ್ಲ ಕಚ್ಚೋಕೆ ತಿಗೆಣೆಗಳು ಇಲ್ಲಾ...
ಇಲ್ಲಿ ಕಚ್ಚೋಕೆ ತಿಗೆಣೆಗಳು ಇಲ್ಲಾ...
ಹ್ಹಾ... ಹತ್ತೇ ಪೈಸಕ್ಕೆ ಬನ್ನೀ ತೋರಿಸುವೇ... ಸಿನಿಮಾ... ಬಿಟ್ಟಿ ಸಿನಿಮಾ
ಹಿಂದೆಂದೂ ಕಾಣದಂಥ ಸಿನಿಮಾ...
(ಮಿಟಕಲಾಡಿ ವಿಷಯ ಏನಪ್ಪಾ ಅಂದರೇ .. (ಕೆಮ್ಮು) ಆಹಾ ಸರಿ ಸರಿ ಕೂತ್ಕೊಳ್ಳಿ ನಾ ಕೇಳ್ತೀನಿ
ರಾಧಾ.. ಈ ಹಾಡ ಬಿಟ್ರೇ ಬೇರೇ ಹಾಡು ಬರೋದಿಲ್ಲವಾ ಅಂತಾ ಕೇಳ್ತಾ ಇದ್ದಾರೇ ...
ಹಾಡಿದ್ದೇ ಹಾಡೋ ಕಿಸಿಬಾಯಿ ದಾಸ ಅಂತಾ
ಹತ್ತ ಪೈಸಾ ಸಿನಿಮಾ ತೋರಿಸ್ತೀನಿ ತಿಗಣೆ ಇದೇನಾ
ನಿಶ್ಚಿರ್ಥಾ ಶುಭ ಸಮಯ ಒಂದು ಶೋಭಾನೆ ಪದ ಎತ್ತೀ .. )
ಎಸೀತೀನಿ ಓಸಿ ತಡ್ಕ ಹೆಂಗಪ್ಪಾ ಸ್ವಲ್ಪ ಎಲ್ಲಾರೂ ಅರ್ಥ ಮಾಡ್ಕೊಳ್ಳಿ
ನ್ಯಾಯ ಇಲ್ಲಿಲ್ಲ ನೀತಿ ಇಲ್ಲಿಲ್ಲ ಗುಣವನ್ನು ನೋಡಿ ಮೆಚ್ಚೋರು ಇಲ್ಲಾ...
ಸುಳ್ಳು ಮಾತಲ್ಲಿ ಮೋಸ ಮನದಲ್ಲಿ ದುಡ್ಡೇ ದೊಡ್ಡಪ್ಪ ಈ ಜನರಿಗೆಲ್ಲ
ಇಂಥ ಜನರ ನಂಬಿಕೊಂಡು...
ಇಂಥ ಜನರ ನಂಬಿಕೊಂಡು ಬಾಳೋಕೆ ಬದುಕೋಕೆ ಬಲು ಧೈರ್ಯ ಬೇಕಪ್ಪ...
ದುಡ್ಡು ಬೇಕಿಲ್ಲ ಕಾಸು ಬೇಕಿಲ್ಲ
ದುಡ್ಡು ಬೇಕಿಲ್ಲ ಕಾಸು ಬೇಕಿಲ್ಲ ಸಿನಿಮಾ... ಹಿಂದೆಂದೂ ಕಾಣದಂಥ ಸಿನಿಮಾ...
ತಾಳಿ ಕಟ್ಟೋಕೆ ಕೂಲಿ ಬೇಕೇನು ದುಡಿಯೋ ತಾಕತ್ತು ನಿನಗಿಲ್ಲವೇನು
ಪ್ರೀತಿ ಬಂದಾಗ ಚಿನ್ನ ಅಂದಾಗ ಈ ನಿನ್ನ ಅಪ್ಪ ಸತ್ತಿದ್ದನೇನು
ಮೀಸೆ ಬೇರೆ ದಂಡ ನಿನಗೆ
ಮೀಸೆ ಬೇರೆ ದಂಡ ನಿನಗೆ ಮುದ್ದಾದ ಆ ಹೆಣ್ಣು ನಿನಗೇಕೆ ಹೋಗಯ್ಯಾ..
ದುಡ್ಡು ಬೇಕಿಲ್ಲ ಕಾಸು ಬೇಕಿಲ್ಲ
ದುಡ್ಡು ಬೇಕಿಲ್ಲ ಕಾಸು ಬೇಕಿಲ್ಲ ಸಿನಿಮಾ... ಹಿಂದೆಂದೂ ಕಾಣದಂಥ ಸಿನಿಮಾ...
ಪ್ರೀತಿಯ ಹೆಣ್ಣೊಂದು ಭೀತಿಯ ಗಂಡೊಂದು
ಪ್ರೀತಿಯ ಹೆಣ್ಣೊಂದು ಭೀತಿಯ ಗಂಡೊಂದು ಜೊತೆಯಾಗಿ ಸೇರೋದು ಎಂದೂ
---------------------------------------------------------------------------------------------
ಹೊಸತೀರ್ಪು (೧೯೮೩) - ಈ ನಮ್ಮ ಗಂಡು
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಈ ನಮ್ಮ ಗಂಡು ಮುದ್ದಿನ ಚೆಂಡು ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು ಪ್ರೀತಿಲಿ ನಮ್ಮನ್ನು ಗೆದ್ದುಕೊಂಡ
ಓ... ಹಳ್ಳಿಯ ಬೆಳಕಾಗಿ ಉಳಿದುಕೊಂಡ
ಓ... ಹಳ್ಳಿಯ ಬೆಳಕಾಗಿ ಉಳಿದುಕೊಂಡ
ಈ ನಮ್ಮ ಗಂಡು ಮುದ್ದಿನ ಚೆಂಡು ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು ಪ್ರೀತಿಲಿ ನಮ್ಮನ್ನು ಗೆದ್ದುಕೊಂಡ
ಓ... ಹಳ್ಳಿಯ ಬೆಳಕಾಗಿ ಉಳಿದುಕೊಂಡ
ಓ... ಹಳ್ಳಿಯ ಬೆಳಕಾಗಿ ಉಳಿದುಕೊಂಡ
ಬೆವರನು ಸುರಿಸಿ ದುಡಿವುದ ಕಲಿಸಿ ನಗುತಲಿ ನಗಿಸುತ ಪ್ರೇಮದಿ ಕೂಡಿ
ಓಯ್... ಓಯ್... ಓಯ್... ಓಯ್...
ಬೆವರನು ಸುರಿಸಿ ದುಡಿವುದ ಕಲಿಸಿ ನಗುತಲಿ ನಗಿಸುತ ಪ್ರೇಮದಿ ಕೂಡಿ
ಗೆಳೆತನ ತೋರಿದ ಮನವನು ಸೇರಿದ
ಗೆಳೆತನ ತೋರಿದ ಮನವನು ಸೇರಿದ ನಮಗಾಗಿ ಹೊಸದಾದ ಆನಂದವನ್ನು ತಂದ
ಏನೋ ರಂಗ ಏನೋ ಗಂಗಾ ನೀನೇ ಹೇಳು ಓ ನರಸಿಂಗ..
ಈ ನಮ್ಮ ಗಂಡು ಮುದ್ದಿನ ಚೆಂಡು ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು ಪ್ರೀತಿಲಿ ನಮ್ಮನ್ನು ಗೆದ್ದುಕೊಂಡ
ಓ... ಹಳ್ಳಿಯ ಬೆಳಕಾಗಿ ಉಳಿದುಕೊಂಡ
ಓ... ಹಳ್ಳಿಯ ಬೆಳಕಾಗಿ ಉಳಿದುಕೊಂಡ
ಊರೇ ಹಾಡಿದರು ಊರೇ ಹೊಗಳಿದರೂ ಏಕೋ ಕಾಣೆ ಸಂತೋಷವೂ
ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ
ಊರೇ ಹಾಡಿದರು ಊರೇ ಹೊಗಳಿದರೂ ಏಕೋ ಕಾಣೆ ಸಂತೋಷವೂ
ಒಂದು ಜೀವ ನೋವಾ ಮರೆತು
ಒಂದು ಜೀವ ನೋವಾ ಮರೆತು ನನ್ನ ಕ್ಷಮಿಸಿ ನನ್ನನು ಹರಿಸಿ
ನನ್ನ ಮನಕೆ ಉಲ್ಲಾಸ ಬೆರೆಸಿ ತಮ್ಮನ ಬಾಳಿಗೆ... ಹೇ... ಹೇ... ಓಯ್
ತಮ್ಮನ ಬಾಳಿಗೆ ನೆಮ್ಮದಿ ತಂದರೆ ಬಾಳೆಲ್ಲಾ ಬಂಗಾರವಾದಂತೆ ಕೇಳೇ ಚಿನ್ನ..
ಏನೋ ರಂಗ ಹೇಳೇ ಗಂಗಾ ನೀನೇನಂತೀ ಓ ನರಸಿಂಗ
ಈ ನಮ್ಮ ಗಂಡು ಮುದ್ದಿನ ಚೆಂಡು ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು ಪ್ರೀತಿಲಿ ನಮ್ಮನ್ನು ಗೆದ್ದುಕೊಂಡ
ಓ... ಹಳ್ಳಿಯ ಬೆಳಕಾಗಿ ಉಳಿದುಕೊಂಡ
ಓ... ಹಳ್ಳಿಯ ಬೆಳಕಾಗಿ ಉಳಿದುಕೊಂಡ ಹೇ ಹೇ ಹೇ ಹೇ ಹೇ ಹೇ ಹೇ
----------------------------------------------------------------------------------------------
ಹೊಸತೀರ್ಪು (೧೯೮೩) - ಬರ್ತಿಯೇನೇ ಹುಡುಗಿ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಗಂಡು : ಬಾರೇ ಹುಡುಗಿ ಅರೇ ತಾರೇ ಗಡಗಿ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬರ್ತಿನ್ ಕಣೋ ದಡ್ಬಡ್ ಬರ್ತಿನ್ ಕಣೋ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬರ್ತಿನ್ ಕಣೋ ದಡ್ಬಡ್ ಬರ್ತಿನ್ ಕಣೋ
ಬರ್ತಿಯೇನೇ ಹುಡುಗಿ ಬರ್ತಿಯೇನೇ
ಹ್ಹ.... ಬರ್ತಿಯೇನೇ ಹುಡುಗಿ ಬರ್ತಿಯೇನೇ
ಹೆಣ್ಣು : ಸೀರೇ ಸೆರಗ ಬಿಡು ಬಿಡು ಸೀರೆ ಸೆರಗ
ಸೀರೇ ಸೆರಗ ಬಿಡು ಬಿಡು ಸೀರೆ ಸೆರಗ
ಗಂಡು : ಮಾತಲ್ಲಿ ಸಿಡುಕೇನು ಅರೆರೆರೆರೇ ಅಹ್ಹಹ್ಹ.. ಹ್ಹ
ತುಟಿಯಲ್ಲಿ ನಗುವೇನೂ ಅರೆರೇ ಅಹ್ಹ.. ಹ್ಹ.. ಹ್ಹ
ಮಾತಲ್ಲಿ ಸಿಡುಕೇನು ತುಟಿಯಲ್ಲಿ ನಗುವೆನು
ಹೆಣ್ಣು : ಪೇಟೆಯ ಬೀದಿಲಿ ಚೆಲ್ಲಾಟ ಸರಿಯೇನೂ
ಸೀರೇ ಸೆರಗ ಬಿಡು ಬಿಡು ಸೀರೆ ಸೆರಗ
ಗಂಡು : ಹ್ಹ.... ಬರ್ತಿಯೇನೇ ಹುಡುಗಿ ಬರ್ತಿಯೇ... ನೇ
ಗಂಡು : ಬಲಗಡೆ ತಿರುಗಲು ಊರಾಚೆ ಹೊಳೆಯೊಂದಿದೆ
ಹೊಂಗೆಯ ಮರವಿದೆ ನನ್ನೊಡನೇ ಬರಬಾರದೇ...
ಹೆಣ್ಣು : ಗಂಗೆಯೋ ಗೌರಿಯೋ ಹೊಳೆಯಲ್ಲಿ ಈಜಾಡಲೂ
ಬಂದರೆ ಅಂದರೆ ಊರೆಲ್ಲಾ ಗೊತ್ತಾಗದೇ ...
ಅಣ್ಣನು ಬಡಿಯುವಾ ತಮ್ಮನು ಬಯ್ಯುವಾ
ಅಪ್ಪನು ನನ್ನನು ಹೊರಗಡೆ ತಳ್ಳುವಾ...
ಗಂಡು : ಅರೇ ಕೈಯ್ಯ ಬೀಡು ನನ್ನ ನೋಡು
ಹ್ಹ.... ಬರ್ತಿಯೇನೇ ಹುಡುಗಿ ಬರ್ತಿಯೇ... ನೇ
ಹೆಣ್ಣು : ಸೀರೇ ಸೆರಗ ಬಿಡು ಬಿಡು ಸೀರೆ ಸೆರಗ
ಹೆಣ್ಣು : ಸೂರ್ಯನು ಮುಳಗಲಿ ಹುಣ್ಣಿಮೆ ಬೆಳಕಾಗಲೀ ... (ಅಹ್ಹಹ್ಹಾ)
ಜನಗಳು ಮಲಗಲೀ ನನ್ನೆದೆಯ ಭಯ ಹೋಗಲೀ...
ಗಂಡು : ಒಲವಿನ ಗೆಳತಿಯೇ ಈ ರಾತ್ರಿ ನಮದಾಗಲೀ
ಮರೆತರೇ ಉಳಿಯನೂ ಈ ಮಾತು ನೆನಪಾಗಲೀ ...
ಮರಗಳ ಮರೆಯಲಿ ಇರುಳಲಿ ನಿಲುವೇನು
ಬಳೆಗಳ ಘಲಘಲ ಕೇಳಲು ಬರುವೆನು
ಹೆಣ್ಣು : ಸರಿ ನನ್ನ ಕೈಯ್ಯ ಬೀಡು
ಸೀರೇ ಸೆರಗ ಬಿಡು ಬಿಡು ಸೀರೆ ಸೆರಗ
ಗಂಡು : ಬರ್ತಿಯೇನೇ ಹುಡುಗಿ ಬರ್ತಿಯೇ... ನೇ
ಮಾತಲ್ಲಿ ಸಿಡುಕೇನು ತುಟಿಯಲ್ಲಿ ನಗುವೆನು
ಹೆಣ್ಣು : ಪೇಟೆಯ ಬೀದಿಲಿ ಚೆಲ್ಲಾಟ ಸರಿಯೇನೂ
ಸೀರೇ ಸೆರಗ ಬಿಡು ಬಿಡು ಸೀರೆ ಸೆರಗ
ಗಂಡು : ಹೂಂ ಹೂಂ ಹುಡುಗಿ ಬಾರೇ ಬಾರೇ ಬಾರೇ ಹುಡುಗಿ ಅರೇ ತಾರೇ ಗಡಗಿ
ಬರ್ತಿನ್ ಕಣೋ ದಡ್ಬಡ್ ದಡ್ಬಡ್ ಬರ್ತಿನ್ ಕಣೋ
-----------------------------------------------------------------------------------------------
No comments:
Post a Comment