ಗಂಡನಿಗೆ ತಕ್ಕ ಹೆಂಡ್ತಿ ಚಲನಚಿತ್ರದ ಹಾಡುಗಳು
- ಆಡು ತಮಾಷೆ ನೋಡು
- ಹಾಕು ಹೆಜ್ಜೆ
- ಎಂಥ ಚಂದವು
- ಸಂಗೀತ ಈ ಜೀವನ
- ಕುಣಿಯೋಣ ಬಾ
ಗಂಡನಿಗೆ ತಕ್ಕ ಹೆಂಡ್ತಿ (೧೯೯೧) - ಆಡು ತಮಾಷೆ ನೋಡು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ರುದ್ರಮೂರ್ತಿಶಾಸ್ತ್ರೀ ಗಾಯನ : ಎಸ್.ಪಿ.ಬಿ, ಚಿತ್ರಾ, ಕೋರಸ್
ಗಂಡು : ಆಡು ತಮಾಷೆ ನೋಡು ಆಟ ಆಡು ತಮಾಷೆ ನೋಡು
ಸುತ್ತ ಮುತ್ತ ನೋಡದೇ ಅತ್ತ ಇತ್ತ ಹೋಗದೆ ಆಡು ನೀ... ಗೆಲ್ಲುವೇ ...
ಹೆಣ್ಣು : ಆಡು ತಮಾಷೆ ನೋಡು ಆಟ ಆಡು ತಮಾಷೆ ನೋಡು
ಸುತ್ತ ಮುತ್ತ ನೋಡದೇ ಅತ್ತ ಇತ್ತ ಹೋಗದೆ ಆಡು ನೀ... ಗೆಲ್ಲುವೇ ...
ಗಂಡು : ಆಡು ತಮಾಷೆ ನೋಡು ಹೆಣ್ಣು : ಆಟ ಆಡು ತಮಾಷೆ ನೋಡು
ಗಂಡು : ಬಾಳೆಂಬ ಜೂಜಿಗೆ ನೂರಾರು ಓಟಿದೆ ನಿನ್ನಾಟ ರಂಗೇರಿದಾಗ ...
ಬಾಳೆಂಬ ಜೂಜಿಗೆ ನೂರಾರು ಓಟಿದೆ ನಿನ್ನಾಟ ರಂಗೇರಿದಾಗ ... ಮತ್ತೇರಲು
ಹೆಣ್ಣು : ಸುತ್ತಾಡಲೂ ... ಹೊತ್ತು ಗೊತ್ತು ನೋಡಿ ಆಡೂ ....
ವಯ್ಯಾರಿ ಅಪ್ಸರೇ ಬಳುಕಾಡಿ ಬಂದರೆ ಮೈಯ್ಯ ತುಂಬಾ ರೋಮಾಂಚದಾಟ..
ವಯ್ಯಾರಿ ಅಪ್ಸರೇ ಬಳುಕಾಡಿ ಬಂದರೆ ಮೈಯ್ಯ ತುಂಬಾ ರೋಮಾಂಚದಾಟ.. ಮೈಯ್ಯ ಸೋಕಲು
ಗಂಡು : ಮೈಯ್ಯ ತಾಕಲು.. ಕೂಡಿ ಆಡು ಮೋಜು ಮಾಡು
ಆಡು ತಮಾಷೆ ನೋಡು ಆಟ ಆಡು ತಮಾಷೆ ನೋಡು
ಹೆಣ್ಣು : ಸುತ್ತ ಮುತ್ತ ನೋಡದೇ ಅತ್ತ ಇತ್ತ ಹೋಗದೆ
ಇಬ್ಬರು : ಆಡು ನೀ... ಗೆಲ್ಲುವೇ ...
ಹೆಣ್ಣು : ಆಡು ತಮಾಷೆ ನೋಡು ಗಂಡು : ಆಟ ಆಡು ತಮಾಷೆ ನೋಡು... ಯ್ಯಾ...
ಹೆಣ್ಣು : ಒಪ್ಪತ್ತಿನಾಸೆಗೆ ಇಪ್ಪತ್ತು ಬಾಗಿಲೂ ಬಾ ಎಂದು ಕೈಯ್ಯ ಬೀಸಿದಾಗ
ಗಂಡು : ಅಹ್ಹಹ್ಹಾ... ಒಪ್ಪತ್ತಿನಾಸೆಗೆ ಇಪ್ಪತ್ತು ಬಾಗಿಲೂ ಬಾ ಎಂದು ಕೈಯ್ಯ ಬೀಸಿದಾಗ
ಹೆಣ್ಣು : ಒಳ ಸೇರಿಕೋ ಗಂಡು : ಸುಖ ದೋಚಿಕೋ
ಇಬ್ಬರು : ಎಲ್ಲಾ ಇಂದೂ ನಾಳೆ ಇರದೂ ...
ಗಂಡು : ಮುಚ್ಚಿಟ್ಟ ಗುಟ್ಟನು ಹಾಕೊಂಡು ಪಟ್ಟನು ಎದುರಾಳಿ ಪರದಾಡಬೇಕು... ಹ್ಹಾ
ಹೆಣ್ಣು : ಮುಚ್ಚಿಟ್ಟ ಗುಟ್ಟನು ಹಾಕೊಂಡು ಪಟ್ಟನು ಎದುರಾಳಿ ಪರದಾಡಬೇಕು... ಹ್ಹಾ
ಗಂಡು : ಜಯವೆಂಬುದೂ... ಹೆಣ್ಣು : ನಿನ್ನ ಕೈಯಲ್ಲಿದೇ...
ಇಬ್ಬರು : ಆಟ ಆಡು ಲೂಟಿ ಮಾಡು...
ಗಂಡು : ಯ್ಯಾ ಯ್ಯಾ... ಆಡು ಹೆಣ್ಣು : ತಮಾಷೆ ನೋಡು ಆಟ ಆಡು
ಗಂಡು : ತಮಾಷೆ ನೋಡು ಓ..ಹೊಯ್ ಸುತ್ತ ಮುತ್ತ ನೋಡದೇ
ಹೆಣ್ಣು : ಅತ್ತ ಇತ್ತ ಹೋಗದೆ
ಇಬ್ಬರು : ಆಡು ನೀ... ಗೆಲ್ಲುವೇ ...
ಹೆಣ್ಣು : ಆಡು ಗಂಡು : ತಮಾಷೆ ನೋಡು ಆಟ ಆಡು
ಹೆಣ್ಣು : ತಮಾಷೆ ನೋಡು... ಸುತ್ತ ಮುತ್ತ ನೋಡದೇ
ಗಂಡು : ಅತ್ತ ಇತ್ತ ಹೋಗದೆ
ಇಬ್ಬರು : ಆಡು ನೀ... ಗೆಲ್ಲುವೇ ... ಆಡು ತಮಾಷೆ ನೋಡು ಆಟ ಆಡು ತಮಾಷೆ ನೋಡು ನೋಡು ಯ್ಯಾ....
---------------------------------------------------------------------------------------------------------
ಗಂಡನಿಗೆ ತಕ್ಕ ಹೆಂಡ್ತಿ (೧೯೯೧) - ಹಾಕು ಹೆಜ್ಜೆ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಚಿತ್ರಾ,
ಗಂಡು : ಹಾಕು ಹೆಜ್ಜೇ .. ಓ ಡಾರ್ಲಿಂಗ್ ಹಾಕು ಹೆಜ್ಜೇ
ಮೈ ಡಾರ್ಲಿಂಗ್ ಹ್ಯಾಪೀ ಲೈಫಿನ ಹಾದಿ ಸಾಗಲು ಒಲಿದು ಒಂದಾಗಲೂ ...
ಹೆಣ್ಣು : ಹಾಕು ಹೆಜ್ಜೇ .. ಓ ಡಾರ್ಲಿಂಗ್ ಹಾಕು ಹೆಜ್ಜೇ
ಮೈ ಡಾರ್ಲಿಂಗ್ ಹ್ಯಾಪೀ ಲೈಫಿನ ಹಾದಿ ಸಾಗಲು ಒಲಿದು ಒಂದಾಗಲೂ ...
ಗಂಡು : ಹಾಕು ಹೆಜ್ಜೇ .. ಓ ಡಾರ್ಲಿಂಗ್ ಹಾಕು ಹೆಜ್ಜೇ ಹ್ಹ..ಹ್ಹ..ಅಹ್ಹಹ್ಹ..
ಗಂಡು : ಪ್ರೀತಿ ಹುಡುಗಿಯ ಬ್ಯುಟಿಯೂ
ಪ್ರೀತಿ ಹುಡುಗಿಯ ಬ್ಯುಟಿಯೂ ದಿನದಿನ ಕ್ಷಣಕ್ಷಣ ತಂತೂ ರೋಮಾಂಚನ..
ಹೆಣ್ಣು : ಘಾಟಿ ಹುಡುಗನ ಘಾಟಿಯು
ಘಾಟಿ ಹುಡುಗನ ಘಾಟಿಯು ಹಗಲಲಿ ಇರುಳಲಿ ಬಳಸಿದೆ ಚುಂಬನಾಗ
ಗಂಡು : ಕ್ರೇಜೀ ... ಕ್ರೇಜೀ ...ಕ್ರೇಜೀ ... ಹ್ಹ ಹ್ಹ ಹ್ಹ ಹ
ಹೆಣ್ಣು : ಹಾಕು ಹೆಜ್ಜೇ .. ಗಂಡು : ಓ ಡಾರ್ಲಿಂಗ್ ಹಾಕು ಹೆಜ್ಜೇ
ಹೆಣ್ಣು : ಮೈ ಡಾರ್ಲಿಂಗ್ ಹ್ಯಾಪೀ ಲೈಫಿನ ಹಾದಿ ಸಾಗಲು ಒಲಿದು ಒಂದಾಗಲೂ ...
ಗಂಡು : ಹಾಕು ಹೆಜ್ಜೇ .. ಹೆಣ್ಣು : ಓ ಡಾರ್ಲಿಂಗ್ ಹಾಕು ಹೆಜ್ಜೇ
ಗಂಡು : ಮೈ ಡಾರ್ಲಿಂಗ್ ಹ್ಯಾಪೀ ಲೈಫಿನ ಹಾದಿ ಸಾಗಲು ಒಲಿದು ಒಂದಾಗಲೂ ...
ಹೆಣ್ಣು : ಹಾಕು ಹೆಜ್ಜೇ .. ಓ ಡಾರ್ಲಿಂಗ್ ಹಾಕು ಹೆಜ್ಜೇ ಹ್ಹ..ಹ್ಹ..ಅಹ್ಹಹ್ಹ..
ಹೆಣ್ಣು : ಟೀನು ಎಜಿನ್ ಮೋಜಲಿ
ಟೀನು ಎಜಿನ್ ಮೋಜಲಿ ಬೆರೆಯಲು ಮೆರೆಯಲು ಜಗವು ನವನೂತನ
ಗಂಡು : ಲವ್ಲೀ ಹಾಡಿನ ರಂಗಲೀ
ಲವ್ಲೀ ಹಾಡಿನ ರಂಗಲೀ ನಲಿಯಲು ಕುಣಿಯಲು ಸುಖವೂ ಈ ಬಂಧನ...
ಹೆಣ್ಣು : ಕ್ರೇಜೀ ... ಕ್ರೇಜೀ ...ಕ್ರೇಜೀ ... ಹ್ಹ ಹ್ಹ ಹ್ಹ ಹ
ಗಂಡು : ಹಾಕು ಹೆಜ್ಜೇ .. ಓ ಡಾರ್ಲಿಂಗ್ ಹಾಕು ಹೆಜ್ಜೇ ಮೈ ಡಾರ್ಲಿಂಗ್
ಇಬ್ಬರು : ಹ್ಯಾಪೀ ಲೈಫಿನ ಹಾದಿ ಸಾಗಲು ಒಲಿದು ಒಂದಾಗಲೂ ...
ಗಂಡು : ಹಾಕು ಹೆಜ್ಜೇ .. ಓ ಡಾರ್ಲಿಂಗ್ ಹೆಣ್ಣು : ಹಾಕು ಹೆಜ್ಜೇ ಮೈ ಡಾರ್ಲಿಂಗ್
ಇಬ್ಬರು : ಹ್ಯಾಪೀ ಲೈಫಿನ ಹಾದಿ ಸಾಗಲು ಒಲಿದು ಒಂದಾಗಲೂ ...
ಹಾಕು ಹೆಜ್ಜೇ .. ಓ ಡಾರ್ಲಿಂಗ್ ಹಾಕು ಹೆಜ್ಜೇ ಹ್ಹ ಹ್ಹ ಹ್ಹಹ
--------------------------------------------------------------------------------------------------------
ಗಂಡನಿಗೆ ತಕ್ಕ ಹೆಂಡ್ತಿ (೧೯೯೧) - ಎಂಥ ಚಂದವು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ರೀರಂಗ, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ, ಕೋರಸ್
ಗಂಡು : ರಾಮರಸಕ್ಕಿಂತಾ ರಸವಿಲ್ಲಾ .... ಆಆಆ... ರಾಮನಾಮಕ್ಕಿಂತಾ ರಾಮವಿಲ್ಲ..ಐ..
ಎಂಥ ಚಂದವೋ ನಿನ್ನ ಧ್ಯಾನ ಏನೋ ರುಚಿಯೋ ರಸಪಾನ
ಅಮೃತ ಹೊಟ್ಟೆಗೇ ಬಿದ್ದ ಮೇಲೆ ಆಡುವಾ ಆಟವು ನಿನ್ನ ಲೀಲೆ...
ಓ.. ರಾಮ ರಾಮ ರಾಮ... ಆಆಆ... ಅಹ್ಹಹ್ಹಹ
ಹೆಣ್ಣು : ಎಂಥ ಚಂದವೋ ನಿನ್ನ ಧ್ಯಾನ ಏನೋ ರುಚಿಯೋ ರಸಪಾನ
ಅಮೃತ ಹೊಟ್ಟೆಗೇ ಬಿದ್ದ ಮೇಲೆ ಆಡುವಾ ಆಟವು ನಿನ್ನ ಲೀಲೆ...
ಕೋರಸ್ : ತನ್ನನಾ ತಾನೋ ನಾನೋ ತಾನನೋ ತಾನೋ
ತನ್ನನಾ ತಾನೋ ನಾನೋ ತಾನನೋ ತಾನೋ
ತೈಯ್ಯನ್ನ ತೈಯ್ಯನ್ನ ತನ್ನತಾನ ತಾನೋ
ಗಂಡು : ಆಕಾಶವೇ ನಮ್ಮ ಅಂಗೈಯಲೇ ಆ ಸೂರ್ಯನೂ ನಮ್ಮ ಪ್ಯಾಕೆಟನಲೀ
ಅಹ್... ನಲ್ಲಿರಲೂ ಖುಶಿಯಾಗಲೂ ಹೋಯ್ ಏಳೇಳೂ ಲೋಕವಿಲ್ಲಿ ಚೆಲ್ಲಾಪಿಲ್ಲಿ.. ಓಹ್ಹೋಹೋ
ಹೆಣ್ಣು : ಸಂಗೀತದ ಗುಂಗೂ ಎಂಥಾ ಮಜಾ ಸಂತೋಷ ಸಾಮ್ರಾಜ್ಯ ಇಲ್ಲೇ ನಿಜ...
ತಲೆದೂಗುತ ಕುಣಿದಾಡುತಾ ಆಡೋಣ ಎಲ್ಲಾ ಸೇರಿ ಜೊತೆಗೂಡುತ..
ಗಂಡು : ಅರೇ .. ರಾಮ ನಿನ್ನ ನಾಮ ಭಜಗೋವಿಂದಂ ದಂದಂದಂದಂದಂ
ಹೆಣ್ಣು : ಎಂಥ ಚಂದವೋ ನಿನ್ನ ಧ್ಯಾನ ಗಂಡು : ಏನೋ ರುಚಿಯೋ ರಸಪಾನ
ಹೆಣ್ಣು : ಅಮೃತ (ಹೋಯ್) ಹೊಟ್ಟೆಗೇ (ಹೋಯ್) ಬಿದ್ದ ಮೇಲೆ
ಗಂಡು ಅರೇ ... ಆಡುವಾ (ಹಾ) ಆಟವು (ಹಾ) ನಿನ್ನ ಲೀಲೆ...
ಇಬ್ಬರು : ಓ ... ರಾಮ ರಾಮ ರಾಮ
ಎಲ್ಲರು : ಎಂಥ ಚಂದವೋ ನಿನ್ನ ಧ್ಯಾನ ಏನೋ ರುಚಿಯೋ ರಸಪಾನ
ಅಮೃತ ಹೊಟ್ಟೆಗೇ ಬಿದ್ದ ಮೇಲೆ ಆಡುವಾ ಆಟವು ನಿನ್ನ ಲೀಲೆ...
ಹೆಣ್ಣು : ರಾಮಣ್ಣ ಹೋಗೋಣ ಬಿಟ್ಟಾಯ್ತು ಗಂಡು : ಪ್ರೇಮದ ಹೊಸ ಜೋಡಿ ಸೆಟ್ಟಾಯಿತು
ಹೆಣ್ಣು : ಚಳಿಯಲ್ಲಿಯೂ ಗಂಡು : ಬಿಸಿ ಏರಿತೂ
ಇಬ್ಬರು : ಈಜಿಯ ಗಮ್ಮತ್ತು ಗೊತ್ತಾಯಿತು...
ಗಂಡು : ಲತೆಯಂತೆ ಈ ಸೊಂಟ ಬಳುಕಾಡಿದೆ.. ಅಯ್ಯೋ..
ಹೆಣ್ಣು : ಸಿಹಿ ಮುತ್ತಿಗೆ ಕೆನ್ನೇ ಕೆಂಪೇರಿದೇ ..
ಗಂಡು : ಮೈಯ್ಯಲ್ಲೆವೂ ಹೆಣ್ಣು : ಜುಮ್ಮೆನ್ನಲೂ
ಇಬ್ಬರು : ಎಂದೆಂದೂ ಕಾಣದಂಥ ಸುಖ ತಂದಿದೇ ...
ಅರೇ .. ರಾಮ ನಿನ್ನ ನಾಮ ಭಜಗೋವಿಂದಂ ದಂದಂದಂದಂದಂ
ಎಲ್ಲರು : ಎಂಥ ಚಂದವೋ ನಿನ್ನ ಧ್ಯಾನ ಏನೋ ರುಚಿಯೋ ರಸಪಾನ
ಅಮೃತ ಹೊಟ್ಟೆಗೇ ಬಿದ್ದ ಮೇಲೆ ಆಡುವಾ ಆಟವು ನಿನ್ನ ಲೀಲೆ...
ಓ ... ರಾಮ ರಾಮ ರಾಮ
ಎಂಥ ಚಂದವೋ ನಿನ್ನ ಧ್ಯಾನ ಏನೋ ರುಚಿಯೋ ರಸಪಾನ
ಅಮೃತ ಹೊಟ್ಟೆಗೇ ಬಿದ್ದ ಮೇಲೆ ಆಡುವಾ ಆಟವು ನಿನ್ನ ಲೀಲೆ...
ಅಮೃತ ಹೊಟ್ಟೆಗೇ ಬಿದ್ದ ಮೇಲೆ ಆಡುವಾ ಆಟವು ನಿನ್ನ ಲೀಲೆ...
---------------------------------------------------------------------------------------------------------
ಗಂಡನಿಗೆ ತಕ್ಕ ಹೆಂಡ್ತಿ (೧೯೯೧) - ಸಂಗೀತ ಈ ಜೀವನ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ, ಚಿತ್ರಾ,
ಗಂಡು : ಸಂಗೀತ ಈ ಜೀವನ ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನಾ... ಪ್ರೀತಿಯ ತುಂಬಿದ ಆರಾಧನ...
ಹೆಣ್ಣು : ಸಂಗೀತ ಈ ಜೀವನ ಸಂತೋಷ ಈ ಯೌವ್ವನ
ಸ್ನೇಹದ ಜೋಡಿಯ ಈ ಭಾವನಾ... ಪ್ರೀತಿಯ ತುಂಬಿದ ಆರಾಧನ...
ಗಂಡು : ಸಂಗೀತ ಈ ಜೀವನ ಹೆಣ್ಣು : ಸಂತೋಷ ಈ ಯೌವ್ವನ
ಗಂಡು : ನಿನ್ನ ಸಂಗ ಹಾಡುವಾಗ ಎಂಥ ಯೋಗ
ನಿನ್ನ ಸಂಗ ಹಾಡುವಾಗ ಎಂಥ ಯೋಗ ಏನೊಂದು ಸೌಂದರ್ಯ ರಾಗ
ಹುಚ್ಚಾಯ್ತು ನನ್ನೆದೆಯ ವೇಗ
ಹೆಣ್ಣು : ನಿನ್ನ ನಾಚಿ ನೋಡಿ ನಾನು ಸೋತು ಹೋದೆ
ನಿನ್ನ ನಾಚಿ ನೋಡಿ ನಾನು ಸೋತು ಹೋದೆ ಬಾಳಲ್ಲಿ ಆನಂದ ಬೇಡಿ...
ಕಾಣದ ಉಲ್ಲಾಸ ಕಂಡೇ ..
ಗಂಡು : ಆಸೇ ಇದ್ದ ದಾಸನಾದೇ ಆಮ್ಮಮ್ಮಾ ...
ಹೆಣ್ಣು : ಇದೇನಾ... ಪ್ರೇಮ ವಿಧಾನ...
ಗಂಡು : ಸಂಗೀತ ಈ ಜೀವನ ಹೆಣ್ಣು : ಸಂತೋಷ ಈ ಯೌವ್ವನ
ಗಂಡು : ಸ್ನೇಹದ ಜೋಡಿಯ ಈ ಭಾವನಾ... ಹೆಣ್ಣು : ಪ್ರೀತಿಯ ತುಂಬಿದ ಆರಾಧನ...
ಇಬ್ಬರು : ಸಂಗೀತ ಈ ಜೀವನ ಸಂತೋಷ ಈ ಯೌವ್ವನ
ಹೆಣ್ಣು : ಇಂದು ಹೀಗೆ ಮಾಡುವಾಸೇ ಡಿಸ್ಕೋ ಡ್ಯಾನ್ಸೂ
ಇಂದು ಹೀಗೆ ಮಾಡುವಾಸೇ ಡಿಸ್ಕೋ ಡ್ಯಾನ್ಸೂ ಮೈಯ್ಯ ಮನಸ್ಸೂ ಕುಣಿವಾಗ ಛಾನ್ಸೂ
ನಮ್ಮ ಆಯಸ್ಸೂ ನಡೆವಂಥ ವಯಸ್ಸೂ..
ಗಂಡು : ತಪ್ಪು ಮಾಡೋ ಕಾಲದಲ್ಲಿ ಎಂಥ ಮಿಂಚೂ
ತಪ್ಪು ಮಾಡೋ ಕಾಲದಲ್ಲಿ ಎಂಥ ಮಿಂಚೂ ಹೋಯ್ ಲವ್ವು ಮಾಡೋ ಕಾಲದಲ್ಲಿ ಎಂಥ ಮಿಂಚೂ
ಅಂಗಾಗ ಶೃಂಗಾರ ಸಂಚೂ... ಲಾವಣ್ಯ ನನಗೇನೇ ಬಂತೂ
ಹೆಣ್ಣು : ನೋಟದಲ್ಲಿ ಲೂಟಿಯಾಗಿ ಅಮ್ಮಮ್ಮಾ ... ಗಂಡು : ಕಣ್ಣಲ್ಲಿ ಆಯ್ತು ಸಂಭ್ರಮಾ...
ಹೆಣ್ಣು : ಸಂಗೀತ ಈ ಜೀವನ ಸಂತೋಷ ಈ ಯೌವ್ವನ
ಗಂಡು : ಸ್ನೇಹದ ಜೋಡಿಯ ಈ ಭಾವನಾ... ಪ್ರೀತಿಯ ತುಂಬಿದ ಆರಾಧನ...
ಹೆಣ್ಣು : ಸಂಗೀತ ಈ ಜೀವನ ಗಂಡು : ಸಂತೋಷ ಈ ಯೌವ್ವನ
ಹೆಣ್ಣು : ಸ್ನೇಹದ ಜೋಡಿಯ ಈ ಭಾವನಾ... ಗಂಡು : ಪ್ರೀತಿಯ ತುಂಬಿದ ಆರಾಧನ...
ಇಬ್ಬರು : ಲಾ ಲಾಲಲ ಲಾಲಲ ಲಾಲಲ ಲಾಲಲ ಲಾಲಲ
---------------------------------------------------------------------------------------------------------
ಗಂಡನಿಗೆ ತಕ್ಕ ಹೆಂಡ್ತಿ (೧೯೯೧) - ಕುಣಿಯೋಣ ಬಾ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಪಿ.ಬಿ, ಚಿತ್ರಾ,ಮಂಜುಳಗುರುರಾಜ
ಗಂಡು : ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನೂ ನೋಡಿ
ಹೆಣ್ಣು : ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನೂ ನೋಡಿ
ಇಬ್ಬರು : ಹ್ಹಾ... ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ಗಂಡು : ಮೂಡಿ ಬಂದಿದೆ ಮಿಲನ ಸಂಭ್ರಮ
ಹೆಣ್ಣು : ಮಂದಹಾಸ ಬಿರುವಂಥ ಮಧುರ ಸಂಗಮ
ಗಂಡು : ಮೂಡಿ ಬಂದಿದೆ ಮಿಲನ ಸಂಭ್ರಮ
ಹೆಣ್ಣು : ಮಂದಹಾಸ ಬಿರುವಂಥ ಮಧುರ ಸಂಗಮ
ಗಂಡು : ನಿಮ್ಮ ಪ್ರೀತಿಯ ಚಿಲುಮೆ ಚಿಮ್ಮಲೀ ಒಳಗೆ ಇದ್ದ ಆಸೆಯೆಲ್ಲಾ ಹೊರಗೆ ಹೊಮ್ಮಲಿ
ಹೆಣ್ಣು : ಅಪ್ಪ ನನ್ನನೂ ಅಪ್ಪಿಕೊಳ್ಳಲೀ ಅಮ್ಮಾ ಕೆನ್ನೆಗೇ ಮುದ್ದು ನೀಡಲಿ ಹ್ಹಾ...
ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನೂ ನೋಡಿ
ಗಂಡು : ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನೂ ನೋಡಿ
ಎಲ್ಲರು : ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
ಗಂಡು : ಆಅ .. ಆಹಾಆಆ ... ಆ ಹೆಣ್ಣು : ಅ .. ಆಹಾಆಆ ... ಆಆಆಆ
ಎಲ್ಲರು : ಲಾಲರರಲಾ ಲಾಲರರಲಾ ಲಾಲರರಲಾ
ಹೆಣ್ಣು : ಗಂಡ ಹೆಂಡತಿ ಜಗಳವೆಂದರೇ
ಗಂಡು : ಉಂಡು ಮಲಗಿ ಹೊತ್ತಿಗಾಗೋ ತನಕವಲ್ಲವೇ
ಹೆಣ್ಣು : ಗಂಡ ಹೆಂಡತಿ ಜಗಳವೆಂದರೇ
ಗಂಡು : ಉಂಡು ಮಲಗಿ ಹೊತ್ತಿಗಾಗೋ ತನಕವಲ್ಲವೇ
ಹೆಣ್ಣು : ಪುಟ್ಟ ತಮ್ಮನು ನನಗೆ ಸಿಕ್ಕಲಿ ನಕ್ಕು ನಕ್ಕು ನನ್ನ ಜೊತೆಗೆ ಅವನು ಆಡಲಿ
ಗಂಡು : ಮತ್ತೇ ಕಾಣಲಿ ಮೊದಲ ರಾತ್ರಿಯೂ ಮುಂದಕೆ ಸಾಗಲೀ ಪ್ರೇಮ ಯಾತ್ರೆಯೂ
ಎಲ್ಲರು : ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನೂ ನೋಡಿ
ಎಲ್ಲರು : ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ ತಾಳವ ಹಾಕುತ ಒಂದುಗೂಡಿ
ಲೋಕವು ಮೆಚ್ಚಲಿ ನಮ್ಮನೂ ನೋಡಿ
ಕುಣಿಯೋಣ ಬಾ ತಂದಾನ ಹಾಡಿ
ಕುಣಿಯೋಣ ಬಾ ತಂದಾನ ಹಾಡಿ
--------------------------------------------------------------------------------------------------------
No comments:
Post a Comment