ಸಿಂಹಾಸನ ಚಲನಚಿತ್ರದ ಹಾಡುಗಳು
- ಮತ್ತೇ ಮತ್ತೇ
- ನಾಡ ದೇವಿಯೇ...
ಸಿಂಹಾಸನ (೧೯೮೩) - ಮತ್ತೇ ಮತ್ತೇ
ಸಂಗೀತ : ಅಶ್ವಥ ವೈದಿ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ರಾಜಕುಮಾರ ಭಾರತಿ, ಕಸ್ತೂರಿ ಶಂಕರ, ಕೋರಸ್
ಮತ್ತೇ ಮತ್ತೇ ನಿಮ್ಮನ್ನೇ ನಾವು ನಂಬಿ ನಿಂತಿರುವೇವು
ನಮ್ಮ ಉಸಿರೇ ನೀವೆಂದುಕೊಂಡು ನಿಮನ್ನೆ ಆರಿಸಿಹೆವು
ಜಿಂಗಿಚಕ್ಕೂ ಹ್ಹಾ ಚುಕ್ಕೂ ಜಿಂಗಿಚಕ್ಕೂ ಹ್ಹಾ ಚುಕ್ಕೂ
ಜಿಂಗಿಚಕ್ಕೂ ಹ್ಹಾ ಚುಕ್ಕೂ ಜಿಂಗಿಚಕ್ಕೂ
ಮತ್ತೇ ಮತ್ತೇ ನಿಮ್ಮನ್ನೇ ನಾವು ನಂಬಿ ನಿಂತಿರುವೇವು
ನಮ್ಮ ಉಸಿರೇ ನೀವೆಂದುಕೊಂಡು ನಿಮನ್ನೆ ಆರಿಸಿಹೆವು
ಬಲು ದುಬಾರಿ ಸವಲತ್ತನೆಲ್ಲಾ ನಾವೆಂದೂ ಬೇಡಲಿಲ್ಲ
ಚೂರು ರೊಟ್ಟಿಗೂ ತುಂಡು ಬಟ್ಟೆಗೂ ಅವನೇ ತಪ್ಪಲಿಲ್ಲ
ಸಾವಿರದ ಜನರ ತಲೆ ಮೇಲೆ ಕೂಡ ಒಯ್ನಾದ ಸೂರು ಇಲ್ಲ
ಒಯ್ನಾದ ಸೂರು ಇಲ್ಲ ಭರವಸೆಯನಿಟ್ಟು ಅಧಿಕಾರ ಹೊತ್ತ
ನಿಮಗೇಕೆ ತಿಳಿಯದೆಲ್ಲಾ... ಅರೆರೆರೆರೇ...
ಭರವಸೆಯನಿಟ್ಟು ಅಧಿಕಾರ ಹೊತ್ತ ನಿಮಗೇಕೆ ತಿಳಿಯದೆಲ್ಲ
ಮತ್ತೇ ಮತ್ತೇ ನಿಮ್ಮನ್ನೇ ನಾವು ನಂಬಿ ನಿಂತಿರುವೇವು
ನಮ್ಮ ಉಸಿರೇ ನೀವೆಂದುಕೊಂಡು ನಿಮನ್ನೆ ಆರಿಸಿಹೆವು
ಶ್ರಮಕೆ ತಕ್ಕ ಫಲವಾದರೂನು ಸಿಕ್ಕಿತ್ತೇನು ನಮಗೆ (ಇಲ್ಲಾ... ಇಲ್ಲಾ)
ಹಣಕ್ಕೆ ತಕ್ಕ ದಿನ ಬಳಕೆ ವಸ್ತು ದಕ್ಕೀತೇನು ಕೊನೆಗೆ (ಇಲ್ಲಾ... ಇಲ್ಲಾ)
ನಗೆ ಮಿನುಗಲಿಲ್ಲ ಬೆಗೆ ದಣಿಯಲಿಲ್ಲ ಬರಿ ದುಡಿಮೆ ದಣಿವು ಎಲ್ಲಾ...
ಬೆಲೆ ಇಲ್ಲ ಇಲ್ಲ ನೆಲೆ ಇಲ್ಲ ಇಲ್ಲ ನೆಮ್ಮದಿಯೇ ಕಾಣಲಿಲ್ಲ...
ಭರವಸೆಯನ್ನಿಟ್ಟು ಅಧಿಕಾರ ಹೊತ್ತ ನಿಮಗೇಕೆ ತಿಳಿಯದೆಲ್ಲ
ಭರವಸೆಯನ್ನಿಟ್ಟು ಅಧಿಕಾರ ಹೊತ್ತ ನಿಮಗೇಕೆ ತಿಳಿಯದೆಲ್ಲ
ಮತ್ತೆ ಮತ್ತೇ ಮತ್ತೇ ಮತ್ತೇ ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ
ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ
ಪ್ರಜೆಯ ಹಿತಕ್ಕೆ ಸಾಕಷ್ಟು ಗಮನ ನೀಡಲಿಲ್ಲ ನಾವೂ ... (ನಾವೂ ನಾವೂ )
ಎಲ್ಲಾ ರಂಗದಲ್ಲೂ ಎಲ್ಲಾ ಹೃದಯವನು ನೋಡಲಿಲ್ಲ ನಾವು (ನಾವೂ ನಾವೂ )
ಸ್ವರ್ಗಗಳ ಅಳಿಸಿ ವರ್ಣಗಳ ಸಲಿಸಿ ನಿಜ ಸಮತೆ ತೋರಲಿಲ್ಲ...
ಸಮುದಾಯ ಬಿಟ್ಟು ಹುಸಿ ಘನತೆ ತೊಟ್ಟು ನಮ್ಮ ನಾಡ ಕಟ್ಟಲಿಲ್ಲ
ನಮ್ಮ ನಾಡ ಕಟ್ಟಲಿಲ್ಲ
ಭರವಸೆಯನ್ನಿಟ್ಟು ಅಧಿಕಾರ ಹೊತ್ತ ನಮಗೇಕೆ ತಿಳಿಯಲಿಲ್ಲ
ನಮಗೇಕೆ ತಿಳಿಯಲಿಲ್ಲ....
-------------------------------------------------------------------------------------------------------------------
ಸಿಂಹಾಸನ (೧೯೮೩) - ನಾಡ ದೇವಿಯೇ...
ಸಂಗೀತ : ಅಶ್ವಥ ವೈದಿ, ಸಾಹಿತ್ಯ : ಕೆ.ಎಸ್.ನಿಸಾರ ಅಹ್ಮದ, ಗಾಯನ : ಸಿ.ಅಶ್ವಥ, ಕಸ್ತೂರಿ ಶಂಕರ, ಕೋರಸ್
ಓ..ಓಓ ಓಓಓ.... ಓ..ಓಓ ಓಓಓ....ಓ..ಓಓ ಓಓಓ....
ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಅಂಥ ದೃಶ್ಯ
ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಅಂಥ ದೃಶ್ಯ
ನೋವು ನಗುವ ಸಂಮ್ಮಿಶ್ರದಲ್ಲಿ ಎದೆಯಾಯಿತದೇಕೆ ವರ್ಷ
ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಬೇಧ ತಾಯೀ
ಆಆಆ.... ಆ.... ಆಆಆ... ಆಆಆ....ಆಆಆ.... ಆ.... ಆಆಆ... ಆಆಆ....
ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಬೇಧ ತಾಯೀ
ಒಂದೇ ನೆಲದ ರಸ ಹೀರಲೇನು ಸಿಹಿಕಹಿಯ ರುಚಿಯ ತಾಯಿ
ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಅಂಥ ದೃಶ್ಯ
ಓ..ಓಓ ಓಓಓ.... ಓ..ಓಓ ಓಓಓ....ಓ..ಓಓ ಓಓಓ....
ಕತ್ತಲಲ್ಲಿ ಕಂಗೆಟ್ಟು ಎಡವಿ ತಡವರಿಸುತಿರಲು ಮಂದಿ
ಕಡೆಗಣಿಸುತವರ ನಡೆದಿರುವನೊಬ್ಬ ಸ್ವಹಿತಕ್ಕೆ ಹಿರಿದು ದೊಂಬಿ
ಸಂಸ್ಕಾರ ಹೆಣಕೆಂದು ತಲೆಗೆ ಕೈಯ್ಯ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬ...
ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಅಂಥ ದೃಶ್ಯ
ಅನ್ನವಿರದ ಹಸುಳೆಗಳ ತಬ್ಬಿ ಅಳುತಿರುವ ತಾಯ ಕಂಡೇ
ದುಃಖ ಪೂರ ಉಕ್ಕುಕ್ಕಿ ಮೊರೆಯೇ ಹೊಚ್ಚಿತ್ತು ಬಾಳ ದಂಡೆ
ನರನನ್ನೇ ಗಾಳವಾಗಿಸಿವೆ ಬಾಳ ನೀರಲ್ಲಿ ನರಿಗಳೆಷ್ಟೋ
ನಾವೆಲ್ಲಾ ಒಂದೇನುವ ಸತ್ಯ ಮೆಟ್ಟಿದ ನಾಡಿನ ಹರಿಗಳೆಷ್ಟೋ
ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಅಂಥ ದೃಶ್ಯ
----------------------------------------------------------------------------------------------------------------
No comments:
Post a Comment