ಮಾತೃ ಭಾಗ್ಯ ಚಲನಚಿತ್ರದ ಹಾಡುಗಳು
- ಹಾಡುತ ಹಾಡುತ
- ನೀ ನಗಲು
- ತಾಳಲಾರೇ ನಾ
- ನಗುತಾ ಬಾಳಲ್ಲಿ
ಮಾತೃ ಭಾಗ್ಯ (೧೯೯೧) - ಹಾಡುತ ಹಾಡುತ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಶ್ರೀರಂಗ, ಗಾಯನ : ಮಂಜುಳಾಗುರುರಾಜ
ಏ... ಹಾಡುತ ಹಾಡುತ ಎಣ್ಣೆ ಹಾಕಿದಾಗ
ಹಾರುತ ಜಾರುತ ನಾನು ಕುಣಿದಾಗ ಆಹಾಹಾಹಾ ಎಂಥಾ ಮಜಾ...

ಮತ್ತು ತುಂಬಿದ ಕೆಂಪು ಕಣ್ಣು ಮುತ್ತು ನೀಡುವ ಮುದ್ದು ಹೆಣ್ಣು
ತುಟಿಯಂಚೆಲ್ಲ ಮಿಂಚಾಗಿದೆ
ಹಾಡುತ ಹಾಡುತ ಎಣ್ಣೆ ಹಾಕಿದಾಗ ಹಾರುತ ಜಾರುತ ನಾನು ಕುಣಿದಾಗ
ಆಹಾಹಾಹಾ ಎಂಥಾ ಮಜಾ...
ಕೊರ್ಟಿನ ವಕೀಲರು ಬೀಟಿನ ಪೊಲೀಸರು
ಕೊರ್ಟಿನ ವಕೀಲರು ಬೀಟಿನ ಪೊಲೀಸರು ಪೇಟೆಯಲಿ ನನ್ನ ನೋಡಿ ಎಲ್ಲರು ದಂಗಾದರೂ
ಆ ದೇಶ ಆಳೋ ರಾಜರು ಆಫೀಸು ಮ್ಯಾನೇಜರು ಪಾರ್ಟಿಯಲಿ ನನ್ನ ಕಂಡು ಆಗಲೇ ದಂಗಾದರೂ
ಯಾರೇನು ಅಂದರು ಊರೆಲ್ಲ ಬಂದರೂ ಈ ಹೆಣ್ಣು ನಿನ್ನದು ಬೇರೇನೂ ಒಲ್ಲದು
ಸ್ವರ್ಗವನ್ನೇ ಸೂರೆಮಾಡೋಣ
ಹಾಡುತ ಹಾಡುತ ಎಣ್ಣೆ ಹಾಕಿದಾಗ ಹಾರುತ ಜಾರುತ ನಾನು ಕುಣಿದಾಗ
ಆಹಾಹಾಹಾ ಎಂಥಾ ಮಜಾ...
ಬಳ್ಳಿಯಂತ ಬಾಡಿಗೆ ಬಳುಕುವಂತ ಲೇಡಿಗೆ ...
ಬಳ್ಳಿಯಂತ ಬಾಡಿಗೆ ಬಳುಕುವಂತ ಲೇಡಿಗೆ ...
ಜೋಡಿಯಾದ ಗಂಡು ನೀನು ಗುಂಡು ಹಾಕೋ ಮೋಡಿಗೆ
ದೇಹ ಬೆಚ್ಚಗಾಗಿದೆ ಮೋಹ ಬಿಚ್ಚಿಕೊಂಡಿದೆ
ನಾನು ನೀನು ಒಂದೇ ಆಗಿ ಲೋಕ ಕಾಣದಾಗಿದೆ
ವೇಟಿಂಗ್ ಏತಕೆ ಮೀಟಿಂಗ್ ಆಗಲಿ
ಮೀಟಿಂಗ್ ನಂತರ ಶೂಟಿಂಗ್ ನಡೆಯಲೀ ...
ಒಂದುಗೂಡಿ ಜಾಲಿ ಮಾಡೋಣ ಬಾ...ಬಾ
ಹಾಡುತ ಹಾಡುತ ಎಣ್ಣೆ ಹಾಕಿದಾಗ ಹಾರುತ ಜಾರುತ ನಾನು ಕುಣಿದಾಗ
ಆಹಾಹಾಹಾ ಎಂಥಾ ಮಜಾ...
ಹಾಡುತ ಹಾಡುತ ಎಣ್ಣೆ ಹಾಕಿದಾಗ ಹಾರುತ ಜಾರುತ ನಾನು ಕುಣಿದಾಗ
ಆಹಾಹಾಹಾ ಎಂಥಾ ಮಜಾ...
ಮತ್ತು ತುಂಬಿದ ಕೆಂಪು ಕಣ್ಣು ಮುತ್ತು ನೀಡುವ ಮುದ್ದು ಹೆಣ್ಣು
ತುಟಿಯಂಚೆಲ್ಲ ಮಿಂಚಾಗಿದೆ
ಹಾಡುತ ಹಾಡುತ ಎಣ್ಣೆ ಹಾಕಿದಾಗ ಹಾರುತ ಜಾರುತ ನಾನು ಕುಣಿದಾಗ
ಆಹಾಹಾಹಾ ಎಂಥಾ ಮಜಾ... ಆಹಾಹಾಹಾ ಎಂಥಾ ಮಜಾ...
-------------------------------------------------------------------------------------------
ಮಾತೃ ಭಾಗ್ಯ (೧೯೯೧) ನೀ ನಗಲು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಚಿತ್ರಾ
ನೀ ನಗಲು ಮನ ಹಾಡುತಿದೆ ಸರಿಗಮದ ಸ್ವರ ಮೀಟುತಿದೆ

ಹೂವಾಗಿದೆ ಒಲವು ಚೆಲುವೆ ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ

ಮುತ್ತುಗಳ ಮಳೆಯಲಿ ನಾ ನೆನೆವ ಕ್ಷಣದಲಿ
ಮುತ್ತುಗಳ ಮಳೆಯಲಿ ನಾ ನೆನೆವ ಕ್ಷಣದಲಿ
ಮಧುವನು ಕುಡಿದಂತೆ ಏನೇನೋ ಗುಂಗಿಲ್ಲಿ
ಓಓಓ ತೋಳುಗಳ ಬಲದಲ್ಲಿ ಅಪ್ಪುಗೆಯ ಸುಖದಲ್ಲಿ
ಮಿಂಚೊಂದು ಸುಳಿದಂತೆ ರೋಮಾಂಚ ಮೈಯ್ಯಲ್ಲಿ
ನಿನ್ನ ನೋಡಿದೆ ಇನ್ನೂ ನೆಮ್ಮದಿ ಎಲ್ಲಿ
ಹಸಿವು ದಾಹವು ದೂರವಾಯಿತು ಇಲ್ಲಿ
ಈ ಕಂಗಳು ಕಥೆ ಹೇಳಿದೆ ಪ್ರತಿ ಮಾತು ಪ್ರೇಮಗೀತೆ
ನೀ ನಗಲು ಮನ ಹಾಡುತಿದೆ ಸರಿಗಮದ ಸ್ವರ ಮೀಟುತಿದೆ
ಕಣ್ಣುಗಳ ಕನಸಲ್ಲಿ ನಿನ್ನೊಲವ ಸೊಗಸಲ್ಲಿ
ಕಣ್ಣುಗಳ ಕನಸಲ್ಲಿ ನಿನ್ನೊಲವ ಸೊಗಸಲ್ಲಿ
ಅನುಭವ ಹೊಳೆಯಲಿ ನಾ ಮಿಂದೆ ಇರುಳಲ್ಲಿ
ಆ ಕನಸ್ಸು ನನಸಾಗಿ ಜೀವನದೇ ಜೊತೆಯಾಗಿ
ಬೆರೆಯುತ ನಡೆಯೋಣ ಒಂದಾಗಿ ಬಾಳಲ್ಲಿ
ನೀನು ಪ್ರೇಮದ ಬೆಳಕು ಬಾಳಿಗೆ ತಂದೆ
ಇನ್ನೂ ಎಂದಿಗೂ ನನ್ನ ಜೀವವು ನಿಂದೆ ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ
ನೀ ನಗಲು ಮನ ಹಾಡುತಿದೆ ಸರಿಗಮದ ಸ್ವರ ಮೀಟುತಿದೆ
ನೀ ನಗಲು ಮನ ಹಾಡುತಿದೆ ಸರಿಗಮದ ಸ್ವರ ಮೀಟುತಿದೆ
ಹೂವಾಗಿದೆ ಒಲವು ಚೆಲುವೆ ಈ ಕಂಗಳು ಕಥೆ ಹೇಳಿದೆ
ಪ್ರತಿ ಮಾತು ಪ್ರೇಮಗೀತೆ
ನೀ ನಗಲು ಮನ ಹಾಡುತಿದೆ ಸರಿಗಮದ ಸ್ವರ ಮೀಟುತಿದೆ
ನೀ ನಗಲು ಮನ ಹಾಡುತಿದೆ ಸರಿಗಮದ ಸ್ವರ ಮೀಟುತಿದೆ
------------------------------------------------------------------------------------------
ಮಾತೃ ಭಾಗ್ಯ (೧೯೯೧) ತಾಳಲಾರೇ ನಾ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ
ತಾಳಲಾರೇ ನಾ ಅಬ್ಬಬ್ಬಾಬ್ಬಾ ಹೇಳಲಾರೇ ನಾ ಅಬ್ಬಬ್ಬಾಬ್ಬಾ

ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೇ ಆಯ್ತು ಮಂಚದಲ್ಲಿಯೇ ನಾನು ಅಬ್ಬಬ್ಬಾಬ್ಬಾ...

ಹಾಸಿಗೆ ನೂಕಿದೇ ದಿಂಬನು ನೂಕಿದೇ ನೆಲದಲ್ಲಿ ಉರಳಾಡಿದೇ
ಆಸೆಯ ತಾಳದೆ ಹೇಳಲು ಆಗದೇ ನಾ ಒಂಟಿ ನರಳಾಡಿದೆ...

ತಣ್ಣನೆ ಗಾಳಿಯು ಮೈಯ್ಯನು ಸೋಕಲು ಬೆದರುತ ನಾ ಬೆಚ್ಚಿದೆ
ಜೋಡಿಯ ಕಾಣದ ವೇದನೆ ತಾಳದೆ ತುಟಿಯನು ನಾ ಕಚ್ಚಿದೆ
ಆಸೆಯಲ್ಲಿ ತೊಳಲಿದೆ ಬೇಸರದಿ ಬಳಲಿದೆ
ಆಸೆಯಲ್ಲಿ ತೊಳಲಿದೆ ಬೇಸರದಿ ಬಳಲಿದೆ
ನನ್ನ ಮನಸ್ಸು ನಿನ್ನಲ್ಲಿ ಬಯಕೆ ನನ್ನಲ್ಲಿ ಚೆಲುವೆ ಬಾ ಬೇಗ ಬಾ...
ತಾಳಲಾರೇ ನಾ ಅಬ್ಬಬ್ಬಾಬ್ಬಾ ಹೇಳಲಾರೇ ನಾ ಅಬ್ಬಬ್ಬಾಬ್ಬಾ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೇ ಆಯ್ತು ಮಂಚದಲ್ಲಿಯೇ ನಾನು ಅಬ್ಬಬ್ಬಾಬ್ಬಾ...
ತೀರದ ದಾಹಕೆ ಆರದ ಮೋಹಕೆ ಎದೆಯಲ್ಲಿ ಉರಿಯಾಯಿತು
ಏತಕೋ ಕಾಣೆನು ನಿಜವನೆ ನುಡಿವೆನು ಉಡುಪೆಲ್ಲ ಬಿಗಿಯಾಯಿತು

ಮಾತಲಿ ಕಾಲವ ಕಳೆಯುವೆ ಏತಕೆ ಬಾ ಇಲ್ಲಿ ನೀ ಮೆಲ್ಲಗೆ
ತೋಳನು ಬಳುಸುತ ಮುತ್ತನು ಸುರಿಸುತ ನಿಂತಲ್ಲೇ ಸುಖ ತುಂಬುವೇ
ಆಸೆಗಳು ಕೆಣಕಲಿ ನೋವುಗಳು ಮರೆಯಲಿ
ಆಸೆಗಳು ಕೆಣಕಲಿ ನೋವುಗಳು ಮರೆಯಲಿ
ನಿಂತ ನೆಲವೇ ಹೂವು ಬಿತ್ತೆ ಸನಿಹ ಬಾ ಮತ್ತೆ ವಿರಹ ನಾ ತಾಳೆ ಬಾ
ತಾಳಲಾರೇ ನಾ ಅಬ್ಬಬ್ಬಾಬ್ಬಾ ಹೇಳಲಾರೇ ನಾ ಅಬ್ಬಬ್ಬಾಬ್ಬಾ
ತಾಳಲಾರೇ ನಾ ಅಬ್ಬಬ್ಬಾಬ್ಬಾ ಹೇಳಲಾರೇ ನಾ ಅಬ್ಬಬ್ಬಾಬ್ಬಾ
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೇ ಆಯ್ತು ಮಂಚದಲ್ಲಿಯೇ ನಾನು ಅಬ್ಬಬ್ಬಾಬ್ಬಾ...
ನಿದ್ದೆ ಬಾರದೆ ಹೋಯ್ತು ನಿನ್ನ ಚಿಂತೆಯೇ ಆಯ್ತು ಮಂಚದಲ್ಲಿಯೇ ನಾನು ಅಬ್ಬಬ್ಬಾಬ್ಬಾ...
------------------------------------------------------------------------------------------
ಮಾತೃ ಭಾಗ್ಯ (೧೯೯೧) ನಗುತಾ ಬಾಳಲ್ಲಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ,
ನಗುತ ಬಾಳಲಿ ಪ್ರೀತಿಯ ಜೋಡಿ ಮಧುರವಾಗಲಿ ಸ್ನೇಹವು ಕೂಡಿ

ಸುಗಮ ಸಂಬಂಧ ಮೂಡಿ ಒಲುಮೆ ಜೀವನ ಸುಖವ ನೀಡಲಿ
ಹೊಸತು ಹಾದಿಯ ಪಯಣ ಸಾಗಲಿ ನಿಮಗೆ ನನ್ನ ಶುಭಾಷಯ

ಸುಗಮ ಸಂಬಂಧ ಮೂಡಿ
ಅನುದಿನ ಅರಿತು ಬೆರೆತು ಮನೆಯನು ಸ್ವರ್ಗವ ಮಾಡಿ
ಬವಣೆಯ ನೀವು ಸಹಿಸಿ ಸಹನೆಯ ದೀಪ ಬೆಳಗಿ
ಪ್ರಣಯ ತೇರನು ಎಳೆದು ಸಾಗಿ ಹೃದಯ ಮೀಟುತ
ಮುಂದೆ ಹೋಗಿ ನಿಮಗೆ ನನ್ನ ಶುಭಾಷಯ
ನಗುತ ಬಾಳಲಿ ಪ್ರೀತಿಯ ಜೋಡಿ ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ
ನಿಜವನು ಪೂರ ತಿಳಿದು ವಿರಸವ ಎಲ್ಲಾ ಮರೆತು
ಮಸುಕಿನ ಮಬ್ಬು ತೊರೆದು ಅರಿವಿನ ಜ್ಯೋತಿ ಹಿಡಿದು
ತಪ್ಪು ತಿಳಿಯದೆ ಬದುಕಿ ಬಾಳಿ ಪ್ರೇಮ ಹೊನಲಲಿ
ನೀವು ತೇಲಿ ನಿಮಗೆ ನನ್ನ ಶುಭಾಷಯ
ನಗುತ ಬಾಳಲಿ ಪ್ರೀತಿಯ ಜೋಡಿ ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ ಒಲುಮೆ ಜೀವನ ಸುಖವ ನೀಡಲಿ
ಹೊಸತು ಹಾದಿಯ ಪಯಣ ಸಾಗಲಿ ನಿಮಗೆ ನನ್ನ ಶುಭಾಷಯ
ನಗುತ ಬಾಳಲಿ ಪ್ರೀತಿಯ ಜೋಡಿ ಮಧುರವಾಗಲಿ ಸ್ನೇಹವು ಕೂಡಿ
ಸುಗಮ ಸಂಬಂಧ ಮೂಡಿ
------------------------------------------------------------------------------------------
No comments:
Post a Comment