- ಈ ಕಣ್ಣ ಮುಚ್ಚಾಲೆ
- ಕಾಲೇಜಲ್ಲಿ ಓದೋರೆಲ್ಲಾ
- ವಿಕ್ರಂ ವಿಕ್ರಂ
- ವಂದನೆ ಅಭಿವಂದನೆ
- ಕಣ್ಣ ಮುಚ್ಚಾಲೆ
ಭೂಮಿ ತಾಯಾಣೆ (೧೯೮೮) - ಈ ಕಣ್ಣ ಮುಚ್ಚಾಲೆ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಬಿ.ಆರ್.ಛಾಯ, ರಾಜಕುಮಾರ ಭಾರತಿ,
ಈ ಕಣ್ಣ ಮುಚ್ಚಾಲೆ ದೇವರ ಲೀಲೆ
ಆಡಿಸಿದಂತ ಆಡುತ್ತಿರುವ ಬಾಳ ಉಯ್ಯಾಲೆ... ಬಾಳ ಉಯ್ಯಾಲೆ...

ಸೇರಿ ಆಡಲಿ ಎಂಥ ಉಲ್ಲಾಸ ಕೂಡಿ ಬಾಳಲು ಎಂಥ ಸಂತೋಷ

ಸಂಸಾರ ಒಂದು ಹಕ್ಕಿಯ ಗೂಡು ಪ್ರೇಮದಿ ಆಡೋ ಮಾತೆಲ್ಲ ಹಾಡು

ಅರಿತು ಕಲಿತು ಬದುಕಿದಾಗ ಮನೆಯೇ ಸ್ವರ್ಗದಂತೆ... ಮನೆಯೇ ಸ್ವರ್ಗದಂತೆ...
ಈ ಕಣ್ಣ ಮುಚ್ಚಾಲೆ ದೇವರ ಲೀಲೆ
ಆಡಿಸಿದಂತ ಆಡುತ್ತಿರುವ ಬಾಳ ಉಯ್ಯಾಲೆ... ಬಾಳ ಉಯ್ಯಾಲೆ...
ನೀಲಿ ಬಾನಿಗೆ ತಾರೆ ಅಂದವು ಪುಟ್ಟ ಮಕ್ಕಳೇ ಮನೆಗೆ ಚೆಂದವು

ಮಕ್ಕಳ ಮಾತೆ ಕೆನೆ ಹಾಲಂತೆ ಮಕ್ಕಳ ಸ್ನೇಹ ಸವಿ ಜೇನಂತೆ

ನಗುತ ನಗುತ ನಲಿಯುವಾಗ ಬಳಿಗೆ ಬರದು ಚಿಂತೆ... ಬಳಿಗೆ ಬರದು ಚಿಂತೆ
ಈ ಕಣ್ಣ ಮುಚ್ಚಾಲೆ ದೇವರ ಲೀಲೆ
ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ... ಬಾಳ ಉಯ್ಯಾಲೆ...

-----------------------------------------------------------------------------------------------------
ಭೂಮಿ ತಾಯಾಣೆ (೧೯೮೮) - ಕಾಲೇಜಲ್ಲಿ ಓದೋರೆಲ್ಲಾ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮಂಜುಳಗುರುರಾಜ, ರಾಜಕುಮಾರ ಭಾರತಿ,
ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ... ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ... ಓದಿರೋರೆ ಅಲ್ಲ...

ನಾಲ್ಕು ಗೋಡೆ ಮಧ್ಯದಲ್ಲೇ ವಿದ್ಯೆಯೆಂಬುದಿಲ್ಲ... ವಿದ್ಯೆಯೆಂಬುದಿಲ್ಲ
ಬಾಳು ಕಲಿಸೋ ಪಾಠಕ್ಕಿಂತ ಬೇರೆ ಪಾಠವಿಲ್ಲ... ಬೇರೆ ಪಾಠವಿಲ್ಲ

ದೇಶವನ್ನು ಆಳೋರೆಲ್ಲ ಬಿಎ ಎಂಏ ಅಲ್ಲ ಡಿಗ್ರಿ ಹೊತ್ತ ಜನಗಳೆಲ್ಲ ಕೆಲಸದಲ್ಲಿ ಇಲ್ಲ
ಅಯ್ಯೋ... ದೇಶವನ್ನು ಆಳೋರೆಲ್ಲ ಬಿಎ ಎಂಏ ಅಲ್ಲ... ಬಿಎ ಎಂಏ ಅಲ್ಲ
ಡಿಗ್ರಿ ಹೊತ್ತ ಜನಗಳೆಲ್ಲ ಕೆಲಸದಲ್ಲಿ ಇಲ್ಲ.... ಕೆಲಸದಲ್ಲಿ ಇಲ್ಲ
ಜಾಣರನ್ನೇ ಹುಡುಕಿ ಇಲ್ಲಿ ಸೀಟು ಕೊಡೋದಿಲ್ಲ... ಸೀಟು ಕೊಡೋದಿಲ್ಲ
ಅಯ್ಯೋ ಕಟ್ಟು ಕಟ್ಟು ನೋಟು ಕೊಡದೆ ಇಲ್ಲಿ ಜಾಗವಿಲ್ಲ
ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ... ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ... ಓದಿರೋರೆ ಅಲ್ಲ...
ಗೀತೆ ನುಡಿದ ಕೃಷ್ಣ ಬಂದು ಇಲ್ಲಿ ಓದಲಿಲ್ಲ
ಅಮರಶಿಲ್ಪಿ ಜಕಣಾಚಾರಿ ಇಲ್ಲಿ ಕಲಿಯಲಿಲ್ಲ
ಗೀತೆ ನುಡಿದ ಕೃಷ್ಣ ಬಂದು ಇಲ್ಲಿ ಓದಲಿಲ್ಲ... ಇಲ್ಲಿ ಓದಲಿಲ್ಲ...
ಅಮರಶಿಲ್ಪಿ ಜಕಣಾಚಾರಿ ಇಲ್ಲಿ ಕಲಿಯಲಿಲ್ಲ.... ಇಲ್ಲಿ ಕಲಿಯಲಿಲ್ಲ
ನಿನ್ನ ಹೊರಗೆ ಅಟ್ಟಲೇನು ಏನು ನಷ್ಟವಿಲ್ಲ... ಏನು ನಷ್ಟವಿಲ್ಲ...
ನನ್ನ ಇಟ್ಟುಕೊಳ್ಳೋ ಭಾಗ್ಯ ಪ್ರಿನ್ಸಿಪಾಲಿಗಂತು ಇಲ್ಲ
ಕಾಲೇಜಲ್ಲಿ ಓದೋರೆಲ್ಲ ಜಾಣರೇನು ಅಲ್ಲ... ಜಾಣರೇನು ಅಲ್ಲ
ಬುದ್ದಿವಂತರಾದೋರೆಲ್ಲ ಓದಿರೋರೆ ಅಲ್ಲ... ಓದಿರೋರೆ ಅಲ್ಲ...
ನಾಲ್ಕು ಗೋಡೆ ಮಧ್ಯದಲ್ಲೇ ವಿದ್ಯೆಯೆಂಬುದಿಲ್ಲ... ವಿದ್ಯೆಯೆಂಬುದಿಲ್ಲ
ಬಾಳು ಕಲಿಸೋ ಪಾಠಕ್ಕಿಂತ ಬೇರೆ ಪಾಠವಿಲ್ಲ... ಬೇರೆ ಪಾಠವಿಲ್ಲ
----------------------------------------------------------------------------------------------------------
ಭೂಮಿ ತಾಯಾಣೆ (೧೯೮೮) - ವಿಕ್ರಂ ವಿಕ್ರಂ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು, ವಾಣಿಜಯರಾಂ
ವಿಕ್ರಂ ವಿಕ್ರಂ ವಿಕ್ರಂ ವಿಕ್ರಂ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ ಹರುಷದಿ ಜೀವವು ತೇಲಿರಲು ತೇಲಿರಲು ತೇಲಿರಲು
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ ಐ ಲವ್ ಯೂ
ಪ್ರೀಯ ಪ್ರೀಯ ಪ್ರೀಯ ಪ್ರೀಯ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು... ಅರಳಿರಲು... ಅರಳಿರಲು...
ಮನಸ್ಸಿದು ಗರಿಯನು ತೆರೆಯುತ ಹಾರಿದೆ ಹರುಷದಿ ಜೀವವು ತೇಲಿರಲು.. ತೇಲಿರಲು... ತೇಲಿರಲು
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ ಐ ಲವ್ ಯೂ
ಹರೆಯದ ಸೆಳೆತವು ಬಳಿಯಲಿ ಕರೆದಿದೆ ಪ್ರೇಮದ ಕಥೆಯನು ಮೌನದೇ ಬರೆದಿದೆ

ನೋಟವು ಕಲೆತಿದೆ ಜೀವವು ಬೆರೆತಿದೆ ಹೊಸ ಅನುಭವ ಹೊಸ ಕಂಪನ
ಹೊಸ ಅನುಭವ ಹೊಸ ಕಂಪನ ತನುವಲಿ ಮಿಂಚಲು ಸುಳಿಯುತಿದೆ
ವಿಕ್ರಂ ವಿಕ್ರಂ ವಿಕ್ರಂ ವಿಕ್ರಂ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು ಅರಳಿರಲು ಅರಳಿರಲು
ಮನಸ್ಸಿದು ಗರಿಯನು ತೆರೆಯುತ ಹಾರಿದೆ ಹರುಷದಿ ಜೀವವು ತೇಲಿರಲು ತೇಲಿರಲು ತೇಲಿರಲು
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ ಐ ಲವ್ ಯೂ
ನೆನೆದಿಹ ಒಡಲಿದು ಬಿಸಿಬಿಸಿ ಎನಿಸಿದೆ ಆಸೆಯ ಕಳಿಸಿದ ಸಂದೇಶ ತಲುಪಿದೆ

ತೊಳಲಿ ಬೆರೆಯುವೆ ಈ ಜಗ ಮರೆಯುವೆ ಶೃತಿ ಬೆರೆತಿದೆ ಲಯ ಕಲೆತಿದೆ
ಶೃತಿ ಬೆರೆತಿದೆ ಲಯ ಕಲೆತಿದೆ ಎಲ್ಲೆಲ್ಲೂ ಸಂಗೀತ ಕೇಳುತಿದೆ
ಪ್ರೀಯ ಪ್ರೀಯ ಪ್ರೀಯ ಪ್ರೀಯ
ಹೃದಯವು ಮಿಡಿದಿದೆ ಒಲವಿನ ಹೂವಿದು ಅರಳಿರಲು... ಅರಳಿರಲು... ಅರಳಿರಲು...
ಮನಸ್ಸಿದು ಗರಿಯನು ತೆರೆಯುತ ಹಾರಿದೆ ಹರುಷದಿ ಜೀವವು ತೇಲಿರಲು.. ತೇಲಿರಲು... ತೇಲಿರಲು
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ ಐ ಲವ್ ಯೂ
-----------------------------------------------------------------------------------------------------------
ಭೂಮಿ ತಾಯಾಣೆ (೧೯೮೮) - ವಂದನೆ ಅಭಿವಂದನೆ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು, ವಾಣಿಜಯರಾಂ
ವಂದನೆ ಅಭಿನಂದನೆ ನನ್ನ ಪ್ರೇಮದ ಚಂದ್ರಮನೇ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವನೇ
ವಂದನೆ ಅಭಿನಂದನೆ ನನ್ನ ಪ್ರೇಮದ ಚಂದ್ರಮನೇ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವನೇ
ಆಗಸದಂಚನು ಮುಟ್ಟಲು ಸೂರ್ಯನು ರಂಗೇರಿತು ಬಾನು
ಸಾಗರದಲೆಯ ಚುಂಬಿಸಿ ಚಂದ್ರನು ಅದರಲಿ ತಲ್ಲಣವೇನು

ಪ್ರಕೃತಿಯೇ ಎಲ್ಲೆಡೆ ಪ್ರೀತಿ ಬಾಳಿಗೆ ಇದುವೇ ನೀತಿ

ವಂದನೆ ಅಭಿನಂದನೆ ಕವಿ ಕಲ್ಪನೆ ಮಿಡಿದವಳೇ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವಳೇ
ನನ್ನಯ ಜೀವನ ನನ್ನಯ ಪ್ರೀತಿಯೇ ಆರಾಧನೆ ನಿನಗೆ
ಸೌಂದರ್ಯ ದೇವತೆ ನಿನ್ನಯ ಪೂಜೆಯ ಗೀತಾರ್ಚನೆ ನನಗೆ

ಅರ್ಪಿಸುವೆ ನನ್ನ ನಿನಗೆ ಇದು ಜನ್ಮಾಂತರದ ಬೆಸುಗೆ
ಅರ್ಪಿಸುವೆ ನನ್ನ ನಿನಗೆ ಇದು ಜನ್ಮಾಂತರದ ಬೆಸುಗೆ
ವಂದನೆ ಅಭಿನಂದನೆ ಕವಿ ಕಲ್ಪನೆ ಮಿಡಿದವಳೇ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವಳೇ
ವಂದನೆ ಅಭಿನಂದನೆ ನನ್ನ ಪ್ರೇಮದ ಚಂದ್ರಮನೇ
ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವನೇ
-----------------------------------------------------------------------------------------------------------
ಭೂಮಿ ತಾಯಾಣೆ (೧೯೮೮) - ಕಣ್ಣ ಮುಚ್ಚಾಲೆ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮನು, ಕೋರಸ್
ಕಣ್ಣ ಮುಚ್ಚಾಲೆ ದೇವರ ಲೀಲೆ ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ

ಬದುಕು ಎಂಬುವ ಪಗಡೆಯಾಟದಿ ನಾವು ಕಾಯ್ಗಳು ಅವನೇ ಕೈಯ್ಯಗಳು

ಆಟದ ರೀತಿ ಬಲ್ಲವರಾರು ಬೇಕೆಂದು ಬೇಡೆಂದು ಹೇಳೋರು ಯಾರು

ಅವನ ಎದುರು ನಿಲ್ಲವರಾರೂ
ಕಣ್ಣ ಮುಚ್ಚಾಲೆ ದೇವರ ಲೀಲೆ ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಏನು ಹೇಳದೆ ದೂರಮಾಡುವ ಯಾರ ಕೇಳದೆ ಒಂದು ಮಾಡುವ
ಏನು ಹೇಳದೆ ದೂರಮಾಡುವ ಯಾರ ಕೇಳದೆ ಒಂದು ಮಾಡುವ
ತನ್ನಾಸೆಯಂತೆ ಕುಣಿಸುವ ಅವನು ತನ್ನಾಸೆಯಂತೆ ಅಳಿಸುವ ಅವನು

ಆಟ ಮುಗಿವ ತನಕ ಬಿಡನು
ಕಣ್ಣ ಮುಚ್ಚಾಲೆ ದೇವರ ಲೀಲೆ ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಕಣ್ಣ ಮುಚ್ಚಾಲೆ ದೇವರ ಲೀಲೆ ಆಡಿಸಿದಂತೆ ಆಡುತ್ತಿರುವ ಬಾಳ ಉಯ್ಯಾಲೆ
ಬಾಳ ಉಯ್ಯಾಲೆ ಬಾಳ ಉಯ್ಯಾಲೆ ಬಾಳ ಉಯ್ಯಾಲೆ
------------------------------------------------------------------------------------------------------------
No comments:
Post a Comment