1826. ತಾಯಿಯ ಆಸೆ (೧೯೮೮)

ತಾಯಿಯ ಆಸೆ ಚಲನಚಿತ್ರದ ಹಾಡುಗಳು 
  1. ಶ್ರೀರಾಮ ಜಯರಾಮ 
  2. ಆಯ್ ಎಮ್ ಏ ಬ್ರೇಕ್ ಡ್ಯಾನ್ಸರ್ 
  3. ಪ್ರೇಮ ಸಂಗಮದ 
  4. ರಾಮ ಎನ್ನುವ ಹೆಸರಿಗೆ 
  5. ಮಾಡಿದುಣ್ಣೋ ಮಹರಾಯ 
ತಾಯಿಯ ಆಸೆ (೧೯೮೮) - ಶ್ರೀರಾಮ ಜಯರಾಮ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ, ರಾಜಕುಮಾರ ಭಾರತಿ 

ಶ್ರೀ ರಾಮ ಜಯರಾಮ ಗುಣಧಾಮ ಬಂದನು ಕೌಸಲ್ಯ ರಾಮ ಬಂದನು 

ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ ಬಾಳಲ್ಲಿ ಆನಂದವ ತಂದನು 

ನ್ಯಾಯವನ್ನು ಉಳಿಸಲು ಹುಟ್ಟಿ ಬಂದ ಕಂದನು 
ಕೀರ್ತಿಯೆಂಬ ಗುಡಿಯಲಿ ಮೂರ್ತಿಯಾಗಿ ನಿಲುವನು 
ನ್ಯಾಯವನ್ನು ಉಳಿಸಲು ಹುಟ್ಟಿ ಬಂದ ಕಂದನು 
ಕೀರ್ತಿಯೆಂಬ ಗುಡಿಯಲಿ ಮೂರ್ತಿಯಾಗಿ ನಿಲುವನು 
ಪ್ರೀತಿ ಮಾತೆ ಉಳಿಯುವ ಎಲ್ಲರನ್ನು ಸೆಳೆಯುವ 
ಪ್ರೀತಿ ಮಾತೆ ಉಳಿಯುವ ಎಲ್ಲರನ್ನು ಸೆಳೆಯುವ 
ಚಿನ್ನದಂತ ಗುಣದಿಂದ ಮನಗೆಲ್ಲುವ 
ಶ್ರೀ ರಾಮ ಜಯರಾಮ ಗುಣಧಾಮ ಬಂದನು ಕೌಸಲ್ಯ ರಾಮ ಬಂದನು 

ಜನುಮ ಕೊಟ್ಟ ತಂದೆಗೆ ಪ್ರಾಣವಾಗಿ ಬೆಳೆವನು 
ಜೀವ ಕೊಟ್ಟ ತಾಯಿಯೇ ದೇವರೆಂದು ನುಡಿವನು 
ಜನುಮ ಕೊಟ್ಟ ತಂದೆಗೆ ಪ್ರಾಣವಾಗಿ ಬೆಳೆವನು 
ಜೀವ ಕೊಟ್ಟ ತಾಯಿಯೇ ದೇವರೆಂದು ನುಡಿವನು 
ತಂದೆತಾಯಿ ಇಬ್ಬರು ಬಾಳ ಜ್ಯೋತಿ ಎನ್ನುವ ಅವರ ಪಾದಸೇವೆ ಉಸಿರೆನ್ನುವ  
ಶ್ರೀ ರಾಮ ಜಯರಾಮ ಗುಣಧಾಮ ಬಂದನು ಕೌಸಲ್ಯ ರಾಮ ಬಂದನು 
ಶ್ರೀ ರಾಮ ಜಯರಾಮ ಗುಣಧಾಮ ಬಂದನು ಕೌಸಲ್ಯ ರಾಮ ಬಂದನು 
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ ಬಾಳಲ್ಲಿ ಆನಂದವ ತಂದನು 
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ ಬಾಳಲ್ಲಿ ಆನಂದವ ತಂದನು 
ಶ್ರೀ ರಾಮ ಜಯರಾಮ ಗುಣಧಾಮ ಬಂದನು ಕೌಸಲ್ಯ ರಾಮ ಬಂದನು 
----------------------------------------------------------------------------------------------------------
 
ತಾಯಿಯ ಆಸೆ (೧೯೮೮) - ಆಯ್ ಎಮ್ ಏ ಬ್ರೇಕ್ ಡ್ಯಾನ್ಸರ್ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ, ಎಸ್.ಪಿ.ಬಿ 

ಆಯ್ ಎಮ್ ಏ ಬ್ರೇಕ್ ಡ್ಯಾನ್ಸರ್... ಬ್ರೇಕ್  ಬ್ರೇಕ್  ಬ್ರೇಕ್  ಬ್ರೇಕ್  ಬ್ರೇಕ್  ಬ್ರೇಕ್  
ಆಯ್ ಎಮ್ ಏ ಪಾಪ ಸಿಂಗರ್.... ಪಾಪ್  ಪಾಪ್  ಪಾಪ್  ಪಾಪ್  ಪಾಪ್  ಪಾಪ್  
ಆಯ್ ಎಮ್ ಏ ಬ್ರೇಕ್ ಡ್ಯಾನ್ಸರ್  ಆಯ್ ಎಮ್ ಏ ಪಾಪ ಸಿಂಗರ್ 
ನಾ ಆಡುವ ತಾಳಕ್ಕೆ ತೂಗಾಡಿ ನಾ ಹಾಡುವ ರಾಗದೇ ತೇಲಾಡಿ 

ನಾಟ್ಯ ನನ್ನ ಎದೆಯಲ್ಲಿ ನರನರನಾಡಿಯಲ್ಲಿ ಚಿಮ್ಮಿ ಚಿಮ್ಮಿ ಹೊಮ್ಮಿ ಬಂದಿದೆ 
ಹಾಡು ನನ್ನ ಉಸಿರಲ್ಲಿ ಆಡೋ ಪ್ರತಿ ಮಾತಲ್ಲಿ ಸ್ವರವಾಗಿ ತುಂಬಿ ಬಂದಿದೆ 
ನಾ ಕಂಡ ಆನಂದದಲ್ಲಿ ಈ ಭೂಮಿ ತೇಲಾಡಿತಿಲ್ಲಿ   
ನಾ ಕಂಡ ಆನಂದದಲ್ಲಿ ಈ ಭೂಮಿ ತೇಲಾಡಿತಿಲ್ಲಿ   
ಬ್ರೇಕ್  ಬ್ರೇಕ್  ಬ್ರೇಕ್  ಬ್ರೇಕ್  ಬ್ರೇಕ್  ಬ್ರೇಕ್ 
ಪಾಪ್  ಪಾಪ್  ಪಾಪ್  ಪಾಪ್  ಪಾಪ್  ಪಾಪ್  
ಆಯ್ ಎಮ್ ಏ ಬ್ರೇಕ್ ಡ್ಯಾನ್ಸರ್  ಆಯ್ ಎಮ್ ಏ ಪಾಪ ಸಿಂಗರ್ 
ನಾ ಆಡುವ ತಾಳಕ್ಕೆ ತೂಗಾಡಿ ನಾ ಹಾಡುವ ರಾಗದೇ ತೇಲಾಡಿ 
ನಾ ಆಡುವ ತಾಳಕ್ಕೆ ತೂಗಾಡಿ ನಾ ಹಾಡುವ ರಾಗದೇ ತೇಲಾಡಿ 

ಕನ್ನಡದ ಮಣ್ಣಿನಲಿ ಕನ್ನಡ ನುಡಿಯಲಿ ಆಡಿ ಹಾಡಿ ನಾ ಬಾಳುವೇ 
ನಿಮ್ಮೆಲ್ಲರ ಸ್ನೇಹದಲ್ಲಿ ನೀವೂ ತೋರೋ ಪ್ರೀತಿಯಲ್ಲಿ ಮೈಮರೆತು ತೇಲಿ ಹೋಗುವೇ 

ಈ ಭವ್ಯ ಸಂತೋಷದಲ್ಲಿ ಒಂದಾಗಿ ಹೋದೆ ನಿಮ್ಮಲಿ 
ಈ ಭವ್ಯ ಸಂತೋಷದಲ್ಲಿ ಒಂದಾಗಿ ಹೋದೆ ನಿಮ್ಮಲಿ 
ಆಯ್ ಎಮ್ ಏ ಬ್ರೇಕ್ ಡ್ಯಾನ್ಸರ್  ಆಯ್ ಎಮ್ ಏ ಪಾಪ ಸಿಂಗರ್ 
ನಾ ಆಡುವ ತಾಳಕ್ಕೆ ತೂಗಾಡಿ ನಾ ಹಾಡುವ ರಾಗದೇ ತೇಲಾಡಿ 
ನಾ ಆಡುವ ತಾಳಕ್ಕೆ ತೂಗಾಡಿ ನಾ ಹಾಡುವ ರಾಗದೇ ತೇಲಾಡಿ 
----------------------------------------------------------------------------------------------
 
ತಾಯಿಯ ಆಸೆ (೧೯೮೮) - ಪ್ರೇಮ ಸಂಗಮದ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಬಿ.ಆರ್.ಛಾಯ, ಎಸ್.ಪಿ.ಬಿ 

ಪ್ರೇಮ ಸಂಗಮದ ಮಧುರ ಪಲ್ಲವಿಯೋ 
ಪ್ರೇಮ ಸಂಗಮದ ಮಧುರ ಪಲ್ಲವಿಯೋ 
ಮೈತಾಳಿ ಬಂದಂತ ಸೌಂದರ್ಯ ಶಿಲೆಯೋ 
ವಸಂತ ಸಂಗೀತ ಆನಂದ ಸುಧೆಯೋ  
ತಂಗಾಳಿ ತಂಪನು ಬಾನಾಡಿ ಇಂಪನು ನೀ ತಂದೆ ಬಾಳಲಿ 

ಪ್ರೀತಿ ಎನ್ನುವ ಸ್ವರದ ಮೇಳವ ಮಿಡಿದು ಬಂದ ಶಿವರಂಜಿನಿ 
ಸ್ನೇಹದ ಮಳೆ ಎಲ್ಲೂ ಚೆಲ್ಲಲು ಬಾನ ಆಳುವ ಮೇಘರಾಜ ನೀ 

ಶೃಂಗಾರ ರಸದ ವಾಹಿನಿ ಈ ಪ್ರೇಮ ಕಾವ್ಯದ ಸ್ಫೂರ್ತಿ ನೀ 
ಶೃಂಗಾರ ರಸದ ವಾಹಿನಿ ಈ ಪ್ರೇಮ ಕಾವ್ಯದ ಸ್ಫೂರ್ತಿ ನೀ 
ಪ್ರೇಮ ಸಂಗಮದ ಮಧುರ ಪಲ್ಲವಿಯೋ 
ಪ್ರೇಮ ಸಂಗಮದ ಮಧುರ ಪಲ್ಲವಿಯೋ 
ಮೈತಾಳಿ ಬಂದಂತ ಸೌಂದರ್ಯ ಶಿಲೆಯೋ 
ವಸಂತ ಸಂಗೀತ ಆನಂದ ಸುಧೆಯೋ  

ನಿನ್ನ ಸನಿಹದೇ ಒಡಲ ಕಣಕಣ ಅರಿಯದಂತ ಹೊಸ ಕಂಪನ 
ಹೂವ ಕರಗಳ ಪ್ರಥಮ ಸ್ಪರ್ಶದಿ ಮಿಂಚು ಬೆರೆತ ರೋಮಾಂಚನ 

ನಿನ್ನಲ್ಲಿ ಬೆರೆತು ಹೋದೆ ನಾ ಇದು ಏಳೇಳು ಜನ್ಮದ ಬಂಧನ 
ನಿನ್ನಲ್ಲಿ ಬೆರೆತು ಹೋದೆ ನಾ ಇದು ಏಳೇಳು ಜನ್ಮದ ಬಂಧನ 
ಪ್ರೇಮ ಸಂಗಮದ ಮಧುರ ಪಲ್ಲವಿಯೋ 
ಪ್ರೇಮ ಸಂಗಮದ ಮಧುರ ಪಲ್ಲವಿಯೋ 
ಮೈತಾಳಿ ಬಂದಂತ ಸೌಂದರ್ಯ ಶಿಲೆಯೋ 
ವಸಂತ ಸಂಗೀತ ಆನಂದ ಸುಧೆಯೋ  
ತಂಗಾಳಿ ತಂಪನು ಬಾನಾಡಿ ಇಂಪನು ನೀ ತಂದೆ ಬಾಳಲಿ 
----------------------------------------------------------------------------------------------------------
 
ತಾಯಿಯ ಆಸೆ (೧೯೮೮) - ರಾಮ ಎನ್ನುವ ಹೆಸರಿಗೆ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ರಾಮ ಎನ್ನುವ ಹೆಸರಿಗೇ... ನೀ ಅವಮಾನ... ನೀ ಅವಮಾನ... 

ದಾನವನೊರ್ವ ಜನಸಿದನೆಂಬ ಅನುಮಾನ..ಹ್ಹ.. ಅನುಮಾನ 
ಯಾರು ಮಾಡಿದ ಪಾಪ ಇದು ಯಾರು ನೀಡಿದ ಶಾಪ 
ರಾಮ ಎನ್ನುವ ಹೆಸರಿಗೇ... ನೀ ಅವಮಾನ... ನೀ ಅವಮಾನ... 

ದೇವನೇ ಆದರೂ ತಾಯಿಯೇ ದೇವರೂ ಎಂದನು ಶ್ರೀರಾಮ... 
ಹೆತ್ತವಳನ್ನೂ ತಾಯಿಯೇ ಅಲ್ಲ ಎಂದನೂ ಈ ರಾಮ.. ಅಹಹಹ್ಹ್ಹ  
ದೇವನೇ ಆದರೂ ತಾಯಿಯೇ ದೇವರೂ ಎಂದನು ಶ್ರೀರಾಮ... 
ಹೆತ್ತವಳನ್ನೂ ತಾಯಿಯೇ ಅಲ್ಲ ಎಂದನೂ ಈ ರಾಮ 
ಪ್ರೇಮದ ಮೂರ್ತಿ ಅವನೂ ... ರಾಕ್ಷಸನಾದ ಇವನೂ ... 
ಹುಟ್ಟಿದ ಮನೆಯಲೀ ಕತ್ತಲೆ ಮಾಡಿ ದೂರಕೆ ಓಡಿದನು ಪಾಪಿ.. ವೇದನೆ ನೀಡಿದನು 
ರಾಮ ಎನ್ನುವ ಹೆಸರಿಗೇ... ನೀ ಅವಮಾನ... ನೀ ಅವಮಾನ... 

ತಂದೆಯ ಮಾತಿಗೆ ಕಾಡಿಗೇ ಹೋದನು ನಗುತಲೀ ಶ್ರೀರಾಮ... 
ಮಾತಿನ ಶೂಲದಿ ಜನನಿಯ ಮಸಣಕೆ ಅಟ್ಟಿದ ಈ ರಾಮ.. 

ತ್ಯಾಗದ ಮೂರ್ತಿ ಅವನೂ ... ಪಾಪದ ಮೂರ್ತಿ ಇವನೂ ... 
ನೆಮ್ಮದಿ ನುಂಗುತ ನೋವನು ತುಂಬಿ ಬೆಂಕಿಗೇ ತಳ್ಳಿದನು.. ನಮ್ಮ ಹಣವ ಹೀರಿದನು 
ರಾಮ ಎನ್ನುವ ಹೆಸರಿಗೇ... ನೀ ಅವಮಾನ... ನೀ ಅವಮಾನ... 
ದಾನವನೊರ್ವ ಜನಸಿದನೆಂಬ ಅನುಮಾನ.... ಅನುಮಾನ....  ಅನುಮಾ....  
----------------------------------------------------------------------------------------------------------
 
ತಾಯಿಯ ಆಸೆ (೧೯೮೮) - ಮಾಡಿದುಣ್ಣೋ ಮಹರಾಯ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಬಿ.ಆರ್.ಛಾಯ, ಎಸ್.ಪಿ.ಬಿ  

ಮಾಡಿದ್ದುಣ್ಣೋ ಮಹರಾಯ ಮಣ್ಣು ತಿನ್ನೋ ತಿಮ್ಮರಾಯ 
ಮಾಡಿದುಣ್ಣೋ ಮಹರಾಯ್ತಿ ಮಣ್ಣು ತಿನ್ನೇ ಭಾಗೀರಥೀ 
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವೂ ಬಂದಾಯ್ತು 
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು 

ನಗುತ ಇದ್ದ ಸಂಸಾರದಲ್ಲಿ ಹುಳಿಯ ಹಿಂಡಿ ಗೋಳನು ಮಾಡಿ 
ಬೆಂಕೀಲಿ ಹೆಜ್ಜೆ ಇಟ್ಟು ಕೂಗೋದ್ಯಾಕೆ ಯಾಕೇ ... ಯಾಕೇ ... 
ಹಾವನ್ನು ಕೈಯ್ಯಲ್ಲಿ ಮುಟ್ಟಿ ಸಾಯೋದ್ಯಾಕೇ... ಯಾಕೇ ... 

ನಿನ್ನ ಮೋಸ ತಿಳಿಯಿತು ಚಿನ್ನ ನಿನ್ನ ಕಥೆ ಮುಗಿಯಿತು ರನ್ನ 
ಏನೇ ಬರಲಿ ಧೈರ್ಯವಿರಲೀ ...  ಏನೇ ಬರಲಿ ಧೈರ್ಯವಿರಲೀ ... 
ಮಾಡಿದ್ದುಣ್ಣೋ ಮಹರಾಯ ಮಣ್ಣು ತಿನ್ನೋ ತಿಮ್ಮರಾಯ 
ಮಾಡಿದುಣ್ಣೋ ಮಹರಾಯ್ತಿ ಮಣ್ಣು ತಿನ್ನೇ ಭಾಗೀರಥೀ 

ಹಳ್ಳಿ ಹಳ್ಳಿ ಎನ್ನುವುದೇಕೆ ದೇಶಕ್ಕೆ ಹಳ್ಳಿಯ ಜೀವ ಜೋಕೆ 
ಮೈಸೂರು ಊರು ನಮ್ಮ ಊರು ಬಲ್ಲೇ ಏನೇ... ಹುಲಿಯಂತೆ ನಮ್ಮ ಅಪ್ಪ ಗೊತ್ತೇ ಹೆಣ್ಣೇ 

ಇನ್ನೂ ನಿನಗೆ ಸೇವೆಯೇ ಉಸಿರು ಅಯ್ಯೋ ನಿನ್ನ ಬಾಯಿಗೆ ಕೆಸರು 
ಏನೇ ಬರಲಿ ಕಂಬನಿ ಇರಲೀ... ಏನೇ ಬರಲಿ ಕಂಬನಿ ಇರಲೀ... 
ಮಾಡಿದ್ದುಣ್ಣೋ ಮಹರಾಯ ಮಣ್ಣು ತಿನ್ನೋ ತಿಮ್ಮರಾಯ 
ಮಾಡಿದುಣ್ಣೋ ಮಹರಾಯ್ತಿ ಮಣ್ಣು ತಿನ್ನೇ ಭಾಗೀರಥೀ 
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವೂ ಬಂದಾಯ್ತು 
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು 
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು 
ಮಾಡಿದ್ದುಣ್ಣೋ ಮಹರಾಯ ಮಣ್ಣು ತಿನ್ನೋ ತಿಮ್ಮರಾಯ 
ಮಾಡಿದುಣ್ಣೋ ಮಹರಾಯ್ತಿ ಮಣ್ಣು ತಿನ್ನೇ ಭಾಗೀರಥೀ 
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವೂ ಬಂದಾಯ್ತು 
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು 
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು 
ಮಾಡಿದುಣ್ಣೋ ಮಹರಾಯ್ತಿ ಮಣ್ಣು ತಿನ್ನೇ ಭಾಗೀರಥೀ 
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವೂ ಬಂದಾಯ್ತು 
ಮಾಡಿದುಣ್ಣೋ ಮಹರಾಯ್ತಿ ಮಣ್ಣು ತಿನ್ನೇ ಭಾಗೀರಥೀ 
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವೂ ಬಂದಾಯ್ತು 
----------------------------------------------------------------------------------------------------------

No comments:

Post a Comment