ಅಗ್ನಿ ಕನ್ಯೆ ಚಲನಚಿತ್ರದ ಹಾಡುಗಳು
- ಮಿಕ್ಕಿ ಮಿಕ್ಕಿ
- ಮನದ ಕೋಟೆ ಮುತ್ತಿದಾಗ
- ಹೇ ದುಂಡು ಹೆಣ್ಣೇ
- ದುಷ್ಟ ರಾಕ್ಷಸರ
ಅಗ್ನಿ ಕನ್ಯೆ (೧೯೮೭) - ಮಿಕ್ಕಿ ಮಿಕ್ಕಿ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಶೈಲಜಾ
ಸುವ್ವಿ..ಸುವ್ವಿ... ಆಆಆ ಸುವ್ವಿ..ಸುವ್ವಿ... ಆಆಆ
ಹೇ... ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ ನೋಡು ನೋಡು ಎಂಥ ಲಕ್ಕಿ ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆ ಬಿಚ್ಚಿ ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ
ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ ನೋಡು ನೋಡು ಎಂಥ ಲಕ್ಕಿ ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆ ಬಿಚ್ಚಿ ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ
ಮಳೆಬಿಲ್ಲು ಕೈಯ್ಯಲ್ಲಿ ನೂರಾರು ರಂಗಲ್ಲಿ ನೋಡಿದೆ ಬೆಡಗನು ತಂದಿದೆ
ಬಂಗಾರ ಸಿಂಗಾರ ರಸದೂಟ ಹೊಸನೋಟ ನಮ್ಮದೇ ಎಲ್ಲವೂ ನಮ್ಮದೇ
ನಾವೆಲ್ಲಾ ಒಂದೇನೇ ಎಲ್ಲ ನಿಮ್ಮದೇನೇ ಬಾಳೋಣ ಹೀಗೇನೆ ಇಲ್ಲ ಚಿಂತೇನೇ
ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ ನೋಡು ನೋಡು ಎಂಥ ಲಕ್ಕಿ ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆ ಬಿಚ್ಚಿ ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ
ಹಣದಲ್ಲೇ ಮನೆಮಾಡಿ ಅದರಲ್ಲೇ ಹೊರಳಾಡಿ ಬಾಳುವ ಜಗವನೇ ಆಳುವ
ನೋಟುಗಳ ಮಳೆಯಲ್ಲಿ ನೆನೆಯೋಣ ನಲಿದಾಡಿ ಆಡುವ ಸುಖದಲ್ಲಿ ಹಾಡುವ
ಆ ಸ್ವರ್ಗ ಈ ನಮ್ಮ ಅಂಗೈಯೊಳಗೇನೇ ಈ ಸ್ನೇಹ ಈ ಬಂಧ ಇರಲೀ ಹೀಗೇನೇ ...
ಮಿಕ್ಕಿ ಮಿಕ್ಕಿ ರಿಕ್ಕಿ ರಿಕ್ಕಿ ನೋಡು ನೋಡು ಎಂಥ ಲಕ್ಕಿ ಆಗಬೇಡ ಕಕ್ಕಾಬಿಕ್ಕಿ ಚಿನ್ನ
ದುಡ್ಡು ಎಂಬ ಹಕ್ಕಿ ತನ್ನ ರೆಕ್ಕೆ ಬಿಚ್ಚಿ ಹುಡುಕಿ ಬಂತು ನನ್ನ
ಸಂತೋಷ ಉಲ್ಲಾಸ ಸಂತೋಷ ಉಲ್ಲಾಸ
-------------------------------------------------------------------------------------------------
ಅಗ್ನಿ ಕನ್ಯೆ (೧೯೮೭) - ಮನದ ಕೋಟೆ ಮುತ್ತಿದಾಗ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಮನದ ಕೋಟೆ ಮುತ್ತಿಗೆ ಹಾಕಿ ನನ್ನ ಗೆದ್ದೋನೇ ಇತ್ತಿತ್ತ ಬಾ..
ಕನಸು ನೂರು ಕಣ್ಣತುಂಬ ತುಂಬಿ ತಂದೋನೆ ಮುತ್ತೊಂದ ತಾ...
ಬಳ್ಳಿ ಹಾಗೆ ಬಳುಕಿ ಬಂದು ಕಣ್ಣಲ್ಲಿ ಕೊಂದೊಳೇ
ಮಳ್ಳಿ ಹಾಗೆ ಆಸೆ ಕೆಣಕಿ ನಗುತ ನಿಂದೋಳೆ
ಬಳ್ಳಿ ಹಾಗೆ ಬಳುಕಿ ಬಂದು ಕಣ್ಣಲ್ಲಿ ಕೊಂದೊಳೇ
ಮಳ್ಳಿ ಹಾಗೆ ಆಸೆ ಕೆಣಕಿ ನಗುತ ನಿಂದೋಳೆ
ಮುಂಭಾರ ಹೆಚ್ಚಾಗಿ ಹೇಳಿದ ಕಥೆಯನ್ನ ಹಿಂಭಾರ ಹೆಚ್ಚಾಗಿ ಕುಣಿಸಿದೆ ಇಂದೆನ್ನ..
ನಿನ್ನಿಂದ ನಾ ಕಂಡೆ ಪ್ರೇಮದ ಮಿಂಚನ್ನ... ಎಲ್ಲೆಲ್ಲೋ ತೇಲಾಡಿ ಹೋದೆನು ನಾ ಚಿನ್ನ
ನಕ್ಕಾಗ ನೀನು ರಂಗಾಯ್ತು ಬಾನು ನನ್ನಲ್ಲಿ ನಾನು ನಿನ್ನಲ್ಲಿ ನಾನು
ಹೊಸರಾಗ ಮೀಟಿದೆ ಅನುರಾಗ ನೀಡಿದೆ
ಮನದ ಕೋಟೆ ಮುತ್ತಿಗೆ ಹಾಕಿ ನನ್ನ ಗೆದ್ದೋನೇ ಇತ್ತಿತ್ತ ಬಾ..
ಕನಸು ನೂರು ಕಣ್ಣತುಂಬ ತುಂಬಿ ತಂದೋನೆ ಮುತ್ತೊಂದ ತಾ...
ಮುದ್ದಾದ ಮನೆಯೊಂದು ಪ್ರೀತಿಯ ಬನದಲ್ಲಿ ಒಲವೆಂಬ ತೋರಣವ ಕಟ್ಟುವ ಅದರಲ್ಲಿ
ನಗುವೆಂಬ ದೀಪವನ್ನು ಹಚ್ಚುವ ಮನೆಯಲ್ಲಿ ಮೈಮರೆತು ನಾನಿರುವೇ ನಿನ್ನಯ ತೋಳಲಿ
ನನ್ನಲ್ಲಿ ಏನು ಸಂತೋಷ ತಂದೆ ಬಾಳಲ್ಲಿ ಇಂದು ಸಂಗೀತ ತಂದೆ
ಹೊಸರಾಗ ಮೀಟಿದೆ ಅನುರಾಗ ನೀಡಿದೆ
ಮನದ ಕೋಟೆ ಮುತ್ತಿಗೆ ಹಾಕಿ ನನ್ನ ಗೆದ್ದೋನೇ ಇತ್ತಿತ್ತ ಬಾ..
ಕನಸು ನೂರು ಕಣ್ಣತುಂಬ ತುಂಬಿ ತಂದೋನೆ ಮುತ್ತೊಂದ ತಾ...
ಬಳ್ಳಿ ಹಾಗೆ ಬಳುಕಿ ಬಂದು ಕಣ್ಣಲ್ಲಿ ಕೊಂದೊಳೇ
ಮಳ್ಳಿ ಹಾಗೆ ಆಸೆ ಕೆಣಕಿ ನಗುತ ನಿಂದೋಳೆ
------------------------------------------------------------------------------------------------
ಅಗ್ನಿ ಕನ್ಯೆ (೧೯೮೭) - ಹೇ ದುಂಡು ಹೆಣ್ಣೇ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಮೇಶ, ಮಂಜುಳಗುರುರಾಜ
ಗಂಡು : ಹೇ ದುಂಡು ಹೆಣ್ಣೇ ಓ ನಿಂಬೆ ಹಣ್ಣೇ
ಹೇ ದುಂಡು ಹೆಣ್ಣೇ ಓ ನಿಂಬೆ ಹಣ್ಣೇ
ಕಣ್ಣಿನಲ್ಲೇ ನನ್ನ ಕಾಡದೆ ಅಂದದಲ್ಲೇ ನನ್ನ ಕೊಲ್ಲದೇ
ಪ್ರೀತಿಯ ತೋರಿಸಿ ನನ್ನಾಸೆ ಪೂರೈಸು... ನನ್ನನ್ನೂ ಸಂತೈಸು
ಹೆಣ್ಣು : ನೀ ಎಂಥ ಗಂಡು ಓ ಕಲ್ಲುಗುಂಡು
ನೀ ಎಂಥ ಗಂಡು ಓ ಕಲ್ಲುಗುಂಡು
ಆತುರವೂ ಇನ್ನೂ ಏತಕೆ ಕಾತುರವೂ ನಿನ್ನಲೇತಕೆ
ಕಾಲವು ಬಂದಿತು ಪೂರೈಸಿ ಹೋಗೋಣ ಎಂದೇನೇ ಬಂದಿದ್ದೂ
ಗಂಡು : ನಿನ್ನ ನುಡಿಯ ಕೇಳಿ ನನ್ನ ಮನವು ಹೂವಾಗಿ ಹೋಯಿತು
ನಿನ್ನ ಸನಿಹ ಸೇರಿ ಈಗ ಇರುಳೇ ಬಂದಂತೆ ಆಯಿತು
ಹೆಣ್ಣು : ಗೆಳೆಯ ಕೊನೆಯ ಘಳಿಗೆ ಬರಲೀ ತಾಳೂ ನಿಧಾನಿಸು
ಗೆಳೆಯ ಕೊನೆಯ ಘಳಿಗೆ ಬರಲೀ ತಾಳೂ ನಿಧಾನಿಸು
ಗಂಡು : ಕ್ಷಣದಲೇ ಮುಗಿಸುವೇನು ಸ್ವರ್ಗಕ್ಕೆ ಕಳಿಸುವೆನು
ಹೇ ದುಂಡು ಹೆಣ್ಣೇ ಓ ನಿಂಬೆ ಹಣ್ಣೇ
ಕಣ್ಣಿನಲ್ಲೇ ನನ್ನ ಕಾಡದೆ ಅಂದದಲ್ಲೇ ನನ್ನ ಕೊಲ್ಲದೇ
ಪ್ರೀತಿಯ ತೋರಿಸಿ ನನ್ನಾಸೆ ಪೂರೈಸು... ನನ್ನನ್ನೂ ಸಂತೈಸು
ಹೆಣ್ಣು : ನೀ ಎಂಥ ಗಂಡು ಓ ಬಲು ಗುಂಡು
ಹೆಣ್ಣು : ಉರಿವ ದೀಪ ಕಂಡು ಹಾರಿ ಬರುವ ಪತಂಗದಂತೆ
ನೀನೇ ಬಳಿಗೆ ಬಂದೆ ಇನ್ನೂ ಚೆಲುವ ನನಗೆಲ್ಲಿ ಚಿಂತೇ
ಗಂಡು : ಗೆಳತೀ ಇರುಳೆ ಮುಗಿಯುವ ಸಮಯ ಬೇಗ ಸುಧಾರಿಸು
ಗೆಳತೀ ಇರುಳೆ ಮುಗಿಯುವ ಸಮಯ ಬೇಗ ಸುಧಾರಿಸು
ಕರೆದಲ್ಲಿ ನಾ ಬರುವೆ ಪ್ರಾಣವನ್ನೇ ನಾ ಕೊಡುವೆ
ಹೆಣ್ಣು : ನೀ ಎಂಥ ಗಂಡು ಓ ಕಲ್ಲುಗುಂಡು
ಗಂಡು : ಕಣ್ಣಿನಲ್ಲೇ ನನ್ನ ಕಾಡದೆ ಅಂದದಲ್ಲೇ ನನ್ನ ಕೊಲ್ಲದೇ
ಹೆಣ್ಣು : ಕಾಲವು ಬಂದಿತು ಪೂರೈಸಿ ಹೋಗೋಣ ಎಂದೇನೇ ಬಂದಿದ್ದೂ
------------------------------------------------------------------------------------------------
ಅಗ್ನಿ ಕನ್ಯೆ (೧೯೮೭) - ದುಷ್ಟ ರಾಕ್ಷಸರ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಜಾನಕೀ
ದುಷ್ಟರಕ್ಕಸರ ಚಂಡಮುಂಡಗಳ ಚೆಂಡಾಡಿ
ಚೆಂಡಮುಂಡರನು ತುಂಡು ಮಾಡಿದಳು ಚಾಮುಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ ಪಾಪಿಕೂಟಕೆ ರುಧ್ರೀ ನಾನಾಗಿ
ನಾರಿಯಾದವಳು ಮಾರಿಯಾಗುವಳು ಈ ಚಂಡಿ
ಭಂಡ ಪುಂಡರನು ಬೇಟೆಯಾಡುವಳು ರಣಚೆಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ ಪಾಪಿಕೂಟಕೆ ರುಧ್ರೀ ನಾನಾಗಿ
ಜನ್ಮ ನೀಡಿ ಮಮತೆಯುಣಿಸುವ ತಾಯಿ ಹೆಣ್ಣು
ಆದರಿಂದು ಅವಳನು ಬಿಡದಿದೇ ಕಾಮಿ ಕಣ್ಣು
ಕಾಯೋದೇ ಹೆಣ್ಣಿನ ಮಾನ ಆ ಮಾನವ ದೋಚುವರಿಲ್ಲಿ
ತಾಯಿಯು ತಂಗಿಯೂ ಹೆಣ್ಣೇ ಆ ಭಾವನೇ ಹೋಯಿತು ಎಲ್ಲಿ
ಪರರವನಿತೆ ಪಡೆವ ಬಯಕೆ ಈ ಸತ್ಯ ಇಂದಾಯಿತೇನೂ
ಶೋಷಣೆ ತಾಳದೆ ಹೂವಿಂದು ಮುಳ್ಳಾಗದೇನು
ಶೋಷಣೆ ತಾಳದೆ ಹೂವಿಂದು ಮುಳ್ಳಾಗದೇನು
ದುಷ್ಟರಕ್ಕಸರ ಚಂಡಮುಂಡಗಳ ಚೆಂಡಾಡಿ
ಚೆಂಡಮುಂಡರನು ತುಂಡು ಮಾಡಿದಳು ಚಾಮುಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ ಪಾಪಿಕೂಟಕೆ ರುಧ್ರೀ ನಾನಾಗಿ
ಹೆಣ್ಣು ಎಂದು ಒಲವಿಗೆ ಒಲವಿನ ಹೂವಿನಂತೆ
ಕಾಡಿದಾಗ ಕೆಣಕಲು ಕೆರಳಲು ಹಾವಿನಂತೆ
ತಂಗಿಯ ಕೂಗನು ಕೇಳೋ ಶ್ರೀಕೃಷ್ಣನು ಈಗಿಹನೆಲ್ಲಿ
ಹೆಣ್ಣನು ಬೆತ್ತಲೆ ಮಾಡೋ ಆ ದುಶ್ಯಾಸನರೇ ಇಲ್ಲಿ
ಜಗದ ಬವಣೆ ಸಹಿಸು ಸಿಡಿದು ಧಾವಾಗ್ನಿ ತಾನಾಗಲೇನು
ತನ್ನಯ ರಕ್ಷೇಗೆ ಬೇರಿಲ್ಲ ದಾರಿ ಇನ್ನೇನೂ ...
ತನ್ನಯ ರಕ್ಷೇಗೆ ಬೇರಿಲ್ಲ ದಾರಿ ಇನ್ನೇನೂ ...
ದುಷ್ಟರಕ್ಕಸರ ಚಂಡಮುಂಡಗಳ ಚೆಂಡಾಡಿ
ಚೆಂಡಮುಂಡರನು ತುಂಡು ಮಾಡಿದಳು ಚಾಮುಂಡಿ
ಇಂದು ನಾನಾಗಿ ಚಂಡಿ ಚಾಮುಂಡಿ ಪಾಪಿಕೂಟಕೆ ರುಧ್ರೀ ನಾನಾಗಿ
-----------------------------------------------------------------------------------------------
No comments:
Post a Comment