ಈ ಚಿತ್ರದ ಹಾಡುಗಳ ಸಾಹಿತ್ಯವನ್ನು ಒದಗಿಸಿದವರು ಶ್ರೀಯುತ.ಶಿವರಾಮ). ಅವರಿಗೆ ತುಂಬಾ ಧನ್ಯವಾದಗಳು
- ಮನವೇ ಮಧುವಾಗಿದೇ
- ನಂಬಿದೆ ಗೌರಿ ಭವಾನೀ
- ಭವಾನೀ ಭವಾನೀ ಸಕಲ ಲೋಕ ಜನನಿ
- ಜಯಹೇ ಸುಕುಮಾರ ವೀರ
- ರಾಮಲಾಲಿ ಭೃಗುಕುಲ ಸೋಮಲಾಲಿ
- ಪ್ರಿಯತಮ ಸ್ವಾಗತ
- ಮಾಡದೇ ಪಾಪ ದಾರುಣ
- ಜಯಹೋ ರಾಜಾಧಿರಾಜ
- ಸರಿಯಾ ಕಾಣೆ
- ಶಾಂತಕರಂ ಭುಜಗಶಯನಂ
- ಅಂಬಾ ಮೋಹಿನಿ ದೇವತಾ
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಮನವೇ ಮಧುವಾಗಿದೇ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ
ಮನವೇ ಮಧುವಾಗಿದೆ ಜಗವೆಲ್ಲ ತನ್ನ ಚೆಲುವಿಂದ
ನನ್ನ ಬಾರೆಂದು ನಗುತಾ ಕರೆದಂತಿದೆ
ಮನವೇ ಮಧುವಾಗಿದೆ ಜಗವೆಲ್ಲ ತನ್ನ ಚೆಲುವಿಂದ
ನನ್ನ ಬಾರೆಂದು ನಗುತಾ ಕರೆದಂತಿದೆ
ಭೂರಮೆ ಶುಭಶೋಭೆ ವಯ್ಯಾರದಲಿ ನಲಿದಾಗ
ಪ್ರಿಯಕರ ಶೃಂಗಾರ ಅನುರಾಗ ರಾಗ
ಭೂರಮೆ ಶುಭಶೋಭೆ ವಯ್ಯಾರದಲಿ ನಲಿದಾಗ
ಪ್ರಿಯಕರ ಶೃಂಗಾರ ಅನುರಾಗ ರಾಗ
ಅನುಪಮ ಆನಂದ ಸ್ವಾಗತ ಭೋಗ
ಹೊಸ ಬಾಳು ಹೊಂದಿತು ರಸಪೂರ್ಣ ಯೋಗ
ತಾವರೆ ನನಗಾಗಿ ರವಿರಾಜ ಬಂದ
ಕೋಗಿಲೆ ದನಿ ಕೇಳಿ ಋತು ರಾಜನಿಂದ
ತಾವರೆ ನನಗಾಗಿ ರವಿರಾಜ ಬಂದ
ಕೋಗಿಲೆ ದನಿ ಕೇಳಿ ಋತು ರಾಜನಿಂದ
ಇಲ್ಲಿಹ ಈ ಗಾನ ಈ ಅಂದ ಚೆಂದ
ಎಂದೆಂದೂ ಚಿರದಿವ್ಯ ಪ್ರೇಮಾನುಬಂಧ..
ಭೂರಮೆ ಶುಭಶೋಭೆ ವಯ್ಯಾರದಲಿ ನಲಿದಾಗ
ಪ್ರಿಯಕರ ಶೃಂಗಾರ ಅನುರಾಗ ರಾಗ
ಅನುಪಮ ಆನಂದ ಸ್ವಾಗತ ಭೋಗ
ಹೊಸ ಬಾಳು ಹೊಂದಿತು ರಸಪೂರ್ಣ ಯೋಗ
--------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ನಂಬಿದೆ ಗೌರಿ ಭವಾನೀ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಸಕಲ ಚರಚರಾ ಭಾಗ್ಯವಿಧಾತೇ ಕರುಣಿಸೋ ಶರಣಂಬೆ ಲೋಕೈಕಮಾತೆ
ನಂಬಿದೆ ಗೌರಿ ಭವಾನೀ ಜನನಿ
ಸಕಲ ಚರಚರಾ ಭಾಗ್ಯವಿಧಾತೇ ಕರುಣಿಸೋ ಶರಣಂಬೆ ಲೋಕೈಕಮಾತೆ
ನಂಬಿದೆ ಗೌರಿ ಭವಾನೀ ಜನನಿ
ಸಕಲ ಚರಚರಾ ಭಾಗ್ಯವಿಧಾತೇ ಕರುಣಿಸೋ ಶರಣಂಬೆ ಲೋಕೈಕಮಾತೆ
ದಾತೆಗೆ ನೀದಾತೆ ಔದಾರ್ಯದಲ್ಲಿ ಮಾತೆಗೆ ನೀ ಮಾತೆ ವಾತ್ಸಲ್ಯದಲ್ಲಿ
ದಾತೆಗೆ ನೀದಾತೆ ಔದಾರ್ಯದಲ್ಲಿ ಮಾತೆಗೆ ನೀ ಮಾತೆ ವಾತ್ಸಲ್ಯದಲ್ಲಿ
ಲೀಲಾ ಕಲ್ಪಿತ ಭೂಚಕ್ರದಲಿ ಶ್ರೀ ಚಕ್ರ ಸ್ಥಿತಳಾದೆ ನೀ ಕಲ್ಪವಲ್ಲಿ...
ನಂಬಿದೆ ಗೌರಿ ಭವಾನೀ ಜನನಿ
ಸಕಲ ಚರಚರಾ ಭಾಗ್ಯವಿಧಾತೇ ಕರುಣಿಸೋ ಶರಣಂಬೆ ಲೋಕೈಕಮಾತೆ
ಜಗವೆಲ್ಲ ನಿನ್ನಯ ಸಂಕಲ್ಪ ಮಾತ್ರ ನಿನ್ನಾಟ ಲೋಕದ ಆಧಾರ ಸೂತ್ರ
ಜಗವೆಲ್ಲ ನಿನ್ನಯ ಸಂಕಲ್ಪ ಮಾತ್ರ ನಿನ್ನಾಟ ಲೋಕದ ಆಧಾರ ಸೂತ್ರ
ಪಾದಾರವಿಂದದೆ ಗತಿಯೆಂದೇ ನಾನು ವೇದ ಸ್ವರೂಪಿಣಿ ದಯೆ ತೋರು ನೀನು
ನಂಬಿದೆ ಗೌರಿ ಭವಾನೀ ಜನನಿ
ಸಕಲ ಚರಚರಾ ಭಾಗ್ಯವಿಧಾತೇ ಕರುಣಿಸೋ ಶರಣಂಬೆ ಲೋಕೈಕಮಾತೆ
--------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಜಯಹೇ ಸುಕುಮಾರ ವೀರ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಬಿ.ವಸಂತ, ವಾಣಿಜಯರಾಂ
ಜಯಹೇ ಸುಕುಮಾರ ವೀರ ಸರಸ ಶೃಂಗಾರ ರಸಿಕ ಕಲೆಗಾರ
ನೀ ಚಿರಕಾಲ ಬಾಳಯ್ಯ ಜಗದೀಶ್ವರ...
ಜಯಹೇ ಸುಕುಮಾರ ವೀರ ಸರಸ ಶೃಂಗಾರ ರಸಿಕ ಕಲೆಗಾರ
ನೀ ಚಿರಕಾಲ ಬಾಳಯ್ಯ ಜಗದೀಶ್ವರ...
ಚಂದ್ರನ ನಾಚಿಸೋ ಸೌಂದರ್ಯ ಸಿಂಹಕು ಮಿಂಬಿದ ಗಾಂಭೀರ್ಯ..
ಕರುಣೆಯ ಕಡಲೀ ಆಂತರ್ಯ ಧರ್ಮದ ನೆಲೆನೀ ಕಾರ್ತವೀರೈ
ರಣಧೀರ ಶೂರ ರಾಜಪರಮೇಶ್ವರ ದೀನ ದಾತ ಶ್ರಿತರತ್ನಾಕರ
ಭುವಿಯೆಲ್ಲ ನಿನಗಾಗಿ ತಲೆಬಾಗಿದೆ ದಿವಿಯೆಲ್ಲ ನಿನ್ನನ್ನು ಕೊಂಡಾಡಿದೆ
ಜಯಹೇ ಸುಕುಮಾರ ವೀರ ಸರಸ ಶೃಂಗಾರ ರಸಿಕ ಕಲೆಗಾರ
ನೀ ಚಿರಕಾಲ ಬಾಳಯ್ಯ ಜಗದೀಶ್ವರ...
ಶಾಂತಿಯ ಸೂಸುವ ಚಂದನವು ಶೀತಲ ಕಾಂತಿಯ ಸಂಪದವು
ಸಾವಿರ ತೋಳಿನ ಬಂಧನವು ಮಧುರಧರಾಮೃತ ಚುಂಬನವು
ಸಾಮ ದಾನ ಬೇಧ ಚತುರೋಪಾಯನೇ
ಗಾನ ನಾಟ್ಯ ಕಲ ಸಕಾರನೇ ಸುರಶಕ್ತಿ ನರಶಕ್ತಿ ಈ ಸಂಗಮ
ನಿನ್ನಲ್ಲಿ ನಾ ಕಂಡೆ ಭೂ ಚಂದ್ರಮ ರಿಗಮಪ ರಿಗಪ ರಿಮಗಪ
ಜಯಹೇ ಸುಕುಮಾರ ವೀರ ಸರಸ ಶೃಂಗಾರ ರಸಿಕ ಕಲೆಗಾರ
ನೀ ಚಿರಕಾಲ ಬಾಳಯ್ಯ ಜಗದೀಶ್ವರ...
---------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ರಾಮಲಾಲಿ ಭೃಗುಕುಲ ಸೋಮಲಾಲಿ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, ಪಿ.ಬಿ.ಎಸ್
ರಾಮಲಾಲಿ ಭೃಗುಕುಲ ಸೋಮಲಾಲಿ
ನಿತ್ಯಾನಂದ ನಿರುಪಮ ಸತ್ಯ ಪ್ರೇಮಲಾಲಿ
ರಾಮಲಾಲಿ ಭೃಗುಕುಲ ಸೋಮಲಾಲಿ
ನಿತ್ಯಾನಂದ ನಿರುಪಮ ಸತ್ಯ ಪ್ರೇಮಲಾಲಿ
ಈರೇಳು ಲೋಕಗಳು ತೊಟ್ಟಿಲು ನಿನಗೆ ಆ ನಾಲ್ಕು ವೇದಗಳು ಸರಪಣಿ ತೂಗೇ
ಈರೇಳು ಲೋಕಗಳು ತೊಟ್ಟಿಲು ನಿನಗೆ ಆ ನಾಲ್ಕು ವೇದಗಳು ಸರಪಣಿ ತೂಗೇ
ಫಣಿರಾಜ ಮೃದುವಾದ ಹಾಸಿಗೆಯಾಗೆ ಪವಡಿಸು ನೀ ಪರವಶದೇ ಹಾಡುವೆ ಲಾಲಿ
ಜೋ ಜೋ ಜೋ ಜೋ ಜೋ ಜೋ ಜೋ ಜೋ
ರಾಮಲಾಲಿ ಭೃಗುಕುಲ ಸೋಮಲಾಲಿ ನಿತ್ಯಾನಂದ ನಿರುಪಮ ಸತ್ಯ ಪ್ರೇಮಲಾಲಿ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ವೇದಾಂತ ವೇದ್ಯನಿಗೆ ಅಕ್ಷರ ಬೇಕೇ ನೆಪಮಾತ್ರ ಈ ಶಾಸ್ತ್ರ ವಿದ್ಯೆಯ ಕಲಿಕೆ
ಅರಿವಿಲ್ಲದ ಮಗುವಂತೆ ನಟಿಸುವುದೇಕೆ ಈ ಲೀಲೆ ನೀನಾಡಿ ನೋಡಲು ಸಾಕೆ
ರಾಮ ಬಾಳೂ ಭೃಗುಕುಲ ರಾಮ ಬಾಳೋ ನಿತ್ಯಾನಂದ ನಿರುಪಮ ಸತ್ಯ ಪ್ರೇಮ ಬಾಳೋ
ಗುರು ಸಾಕ್ಷಾತ ಪರಬ್ರಹ್ಮ ತಸ್ಮೈ ಶ್ರೀ ಗುರುವೆನಮಃ
ಅವತಾರ ಧಾರಿಗೆ ಅಸುರ ಸಂಹಾರಿಗೆ ಅಸ್ತ್ರ ಸಂಧಾನವು ಅವಲೀಲೆ ತಾನೇ
ಅವತಾರ ಧಾರಿಗೆ ಅಸುರ ಸಂಹಾರಿಗೆ ಅಸ್ತ್ರ ಸಂಧಾನವು ಅವಲೀಲೆ ತಾನೇ
ಮುಕ್ಕೋಟಿ ದೇವರಿಗೆ ದೇವತನಾದರೂ ನರರೂಪ ತಾಳಿ ತಾನು ತೋರಿಹ ನಟನೆ
ಅವತಾರ ಧಾರಿಗೆ ಅಸುರ ಸಂಹಾರಿಗೆ ಅಸ್ತ್ರ ಸಂಧಾನವು ಅವಲೀಲೆ ತಾನೇ
ಅವತಾರ ಧಾರಿಗೆ ಅಸುರ ಸಂಹಾರಿಗೆ ಅಸ್ತ್ರ ಸಂಧಾನವು ಅವಲೀಲೆ ತಾನೇ
ಮುಕ್ಕೋಟಿ ದೇವರಿಗೆ ದೇವತನಾದರೂ ನರರೂಪ ತಾಳಿ ತಾನು ತೋರಿಹ ನಟನೆ
ರಾಮ ಜಯತು ಭೃಗುಕುಲ ಸೋಮ ಜಯತು ನಿತ್ಯಾನಂದ ನಿರುಪಮ ಸತ್ಯ ಪ್ರೇಮ ಜಯತು
ರಾಮ ಜಯತು ಭೃಗುಕುಲ ಸೋಮ ಜಯತು ನಿತ್ಯಾನಂದ ನಿರುಪಮ ಸತ್ಯ ಪ್ರೇಮ ಜಯತು
ರಾಮ ಜಯತು ಭೃಗುಕುಲ ಸೋಮ ಜಯತು ನಿತ್ಯಾನಂದ ನಿರುಪಮ ಸತ್ಯ ಪ್ರೇಮ ಜಯತು
--------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಪ್ರಿಯತಮ ಸ್ವಾಗತ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ., ಪಿ.ಸುಶೀಲಾ
ರತಿ : ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ
ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ
ಮನ್ಮಥ : ವಿಲಾಸ ನವಜೀವನವಿದು ರಾಗ ರಂಜಿತೆ
ಮನ್ಮಥ : ಚಂದದ ಯೌವ್ವನ ತುಂಬಿದ ಚಂದಿರ ಮಂಚದ ವಯ್ಯಾರಿ ಮಧು ಮೋಹಿನಿ
ಚಂದದ ಯೌವ್ವನ ತುಂಬಿದ ಚಂದಿರ ಮಂಚದ ವಯ್ಯಾರಿ ಮಧು ಮೋಹಿನಿ
ರತಿ : ಶೃಂಗಾರ ಸೌಭಾಗ್ಯ ಈ ಪ್ರೇಮ ಸಂಗೆ ಆನಂದ ವೈಭೋಗ ರಂಗ
ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ
ರತಿ : ಸುಮಧುರ ಪ್ರಣಯದ ಸುಧೆಯನು ತಂದಿಹ ಸುಂದರ ಹಮ್ಮಿರ ಮಧುಮೋಹನ
ಸುಮಧುರ ಪ್ರಣಯದ ಸುಧೆಯನು ತಂದಿಹ ಸುಂದರ ಹಮ್ಮಿರ ಮಧುಮೋಹನ
ಮನ್ಮಥ : ಚಿರ ಚಿರತ್ರ ಸುರಮೈತ್ರಿ ಸಂತೋಷದಿಂದ ಅನುಗಾಲ ಅನುರಾಗ ಬಂಧ
ರತಿ : ಪ್ರಿಯತಮ ಸ್ವಾಗತ ಇದೆ ಸುಖಮಯ ರಸಲೋಕ
-------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಮೂಡದೇ ಪಾಪ ದಾರುಣ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ. ಪಿ.ಬಿ.ಎಸ್
ಮೂಡದೇ ಪಾಪ ದಾರುಣ ಶಾಪ
ಏತಕೆ ನನಗೀ ಶಿಕ್ಷೇ ಈಶಾ ಏನೀ ಕಠಿಣ ಪರೀಕ್ಷೇ ಈಶಾ
ಮೂಡದೇ ಪಾಪ ದಾರುಣ ಶಾಪ
ಏತಕೆ ನನಗೀ ಶಿಕ್ಷೇ ಈಶಾ ಏನೀ ಕಠಿಣ ಪರೀಕ್ಷೇ ಈಶಾ
ಬಾಳೇ ಭಾರ ವಿಧಿಯೇ ಕ್ರೂರ ಪ್ರಕೃತಿಯೇ ನಿರಾಧಾರ ಇಲ್ಲ ಆಧಾರ
ಬಾಳೇ ಭಾರ ವಿಧಿಯೇ ಕ್ರೂರ ಪ್ರಕೃತಿಯೇ ನಿರಾಧಾರ ಇಲ್ಲ ಆಧಾರ
ದಾಟುವೆನೆಂತು ಶೋಕ ಸಾಗರ ಎಲ್ಲೀ ಕರುಣೆಯ ತೀರ ...
ಏನೀ ಕಠಿಣ ಪರೀಕ್ಷೇ ಈಶಾ
ಮೂಡದೇ ಪಾಪ ದಾರುಣ ಶಾಪ
ಏತಕೆ ನನಗೀ ಶಿಕ್ಷೇ ಈಶಾ ಏನೀ ಕಠಿಣ ಪರೀಕ್ಷೇ ಈಶಾ
ಕಾಣೆ ಪತಿ ಪಾದ ಸಾನಿಧ್ಯವನ್ನು ಕಟ್ಟಿದ ಕನಸೆಲ್ಲ ಧೂಳಾಯಿತಿನ್ನು
ಕಾಣೆ ಪತಿ ಪಾದ ಸಾನಿಧ್ಯವನ್ನು ಕಟ್ಟಿದ ಕನಸೆಲ್ಲ ಧೂಳಾಯಿತಿನ್ನು
ಅಳಿಯಿತು ಈ ಬಾಳ ಭಾಗ್ಯ ಸೌಧ ಉಸಿರಾಗಿ ಬಂತೀಗ ಖೇದ ಈಶಾ
ಉಸಿರಾಗಿ ಬಂತೀಗ ಖೇದ ಈಶಾ
ಆಸರೆ ಕೊನೆಯಲ್ಲಿ ನೆರಳಾಗಿ ಬಂತು ಮಮತೆಯು ಭ್ರಮೆಯಾಗಿ ತೊರೆದಾಗ ಮರೆತು
ತಾಯಿ ತಂದೆಯೇ ದೂಡಿದರಿಂತು ಅನಾಥೆ ನಾನಾದೆ ಸೋತು ಈಶಾ
ಏತಕೆ ಈ ಮೌನ ಸಾಂಬಶಿವ ತಾಳೆನು ಈ ನೋವ ಅಪಮಾನವ
ಏತಕೆ ಈ ಮೌನ ಸಾಂಬಶಿವ ತಾಳೆನು ಈ ನೋವ ಅಪಮಾನವ
ಕಂಬನಿ ಅಭಿಷೇಕ ಮಾಡಲು ಬಂದೆ ನೀಡಲು ನೈವೇದ್ಯೆ ತನುವನು ತಂದೆ
ಶಿವಶಂಕರಾ... ಅಭಯಂಕರಾ... ಕರುಣಾಕರಾ... ಗಂಗಾಧರಾ...
ದೇವಾದಿ ದೇವ ದಿವ್ಯ ಪ್ರಭಾವ ಶಿವಶಂಕರ ಮಹದೇವ
ಪಾರ್ವತೀಶ ಪರಮೇಶ ಶ್ರೀ ಪಾರ್ವತೀಶ ಪರಮೇಶ
ಪಾರ್ವತೀಶ ಪರಮೇಶ ಶ್ರೀ ಪಾರ್ವತೀಶ ಪರಮೇಶ
-------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಜಯಹೋ ರಾಜಾಧಿರಾಜ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ಉದಯಕುಮಾರ, ಗಾಯನ : ಬಿ.ವಸಂತ
ಜಯಹೋ ರಾಜಾಧಿರಾಜ ಜಯಹೋ ಮಾರ್ತಾಂಡ ತೇಜ
ಜಯಜಯ ಶ್ರೀಕರ್ತ ವೀರ್ಯ ಸಹಸ್ರ ಬಾಹು ಭುಜ ಬಲ ನೀನೇ
ಕ್ಷಾತ್ರ ತೇಜಕೆ ಶೇಖರ ನೀನೇ
ಕ್ಷಾತ್ರ ತೇಜಕೆ ಶೇಖರ ನೀನೇ
ಗಂಡರ ಗಂಡ ರಣ ಪ್ರಚಂಡ ವೀರ ವಿಕ್ರಮ್ ಬಿರುದಾಂಕಿತನೇ
ಜಯಹೋ ರಾಜಾಧಿರಾಜ ಜಯಹೋ ಮಾರ್ತಾಂಡ ತೇಜ
ಜಯಜಯ ಶ್ರೀಕರ್ತ ವೀರ್ಯ ಸಹಸ್ರ ಬಾಹು ಭುಜ ಬಲ ನೀನೇ
ಬಾರಯ್ಯೋ ಬೆನಕ ರಾಜ ಏನಯ್ಯೋ ರಸಿಕ ರಾಜ
ಬಿಂಕಾ ಬಿಗುಮಾನವೇಕಯ್ಯಾ
ಓ.. ಮಾವಯ್ಯ ಅಂಕೆ ಶಂಕೆ ನಿನಗೇಕಯ್ಯ
ನೆರಜವ್ವನ ತುಂಬಿದೆ ಸಿಂಗರಿಸಿ ನಿಂತಿದೆ ಸಮಯ ಕಳೆಯದೆ ಕೂಡುವ ಮನಸಿದ
ಸಮಯ ಕಳೆಯದೆ ಕೂಡುವ ಮನಸಿದ
ಥಯ್ಯಾ ಥಯ್ಯಾ ಆಡುವ ಸಯ್ಯಾ ಸಯ್ಯ ಹಾಡುವ
ಬಯಸಿ ಬಂದ ಹೆಣ್ಣು ನಿನಗೆ ಬೇಡವೆನಯ್ಯಾ..
ಬಾರಯ್ಯೋ ಬೆನಕ ರಾಜ ಏನಯ್ಯೋ ರಸಿಕ ರಾಜ
ಬಿಂಕಾ ಬಿಗುಮಾನವೇಕಯ್ಯಾ
ಹಪ್ಪಳ ಸಂಡಿಗೆ ಉಪ್ಪಿನಕಾಯಿ ಬೇಕೇನೂ
ಸವಿ ಮಾಗಿದ ಮಾವಿನ ಹಣ್ಣಿನ ರಸವು ಸಾಕೇನೂ
ಷಡ್ರಸೋಪೇತ ಸಮಾರಾಧನೆ ಸವಿಯುವಿರಾ
ಮನಸಿನ ಭಾವನೆ ಕನಸಿನ ಕಲ್ಪನೆ ನೋಡಿದೀರಾ ..
ಜಯಹೋ ರಾಜಾಧಿರಾಜ ಜಯಹೋ ಮಾರ್ತಾಂಡ ತೇಜ
ಜಯಜಯ ಶ್ರೀಕರ್ತ ವೀರ್ಯ ಸಹಸ್ರ ಬಾಹು ಭುಜ ಬಲ ನೀನೇ
ಕ್ಷಾತ್ರ ತೇಜಕೆ ಶೇಖರ ನೀನೇ
ಕ್ಷಾತ್ರ ತೇಜಕೆ ಶೇಖರ ನೀನೇ
ಗಂಡರ ಗಂಡ ರಣ ಪ್ರಚಂಡ ವೀರ ವಿಕ್ರಮ್ ಬಿರುದಾಂಕಿತನೇ
ಜಯಹೋ ರಾಜಾಧಿರಾಜ ಜಯಹೋ ಮಾರ್ತಾಂಡ ತೇಜ
ಜಯಜಯ ಶ್ರೀಕರ್ತ ವೀರ್ಯ ಸಹಸ್ರ ಬಾಹು ಭುಜ ಬಲ ನೀನೇ
--------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಸರಿಯಾ ಕಾಣೆ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ಉದಯಕುಮಾರ, ಗಾಯನ : ಎಸ್.ಪಿ.ಬಿ. ಬಿ.ವಸಂತ
ಗಂಡು : ಸರಿಯ ಕಾಣೆನೋ ಧರಾಣಿಯೊಳಗಮ್ಮಾ ನೀ ಕರುಣೆ ಎಲ್ಲಮ್ಮಾ
ಹೆಣ್ಣು : ಎಲ್ಲು ಕಾಣೆ ಎಲ್ಲು ಕಾಣೆ ಎಲ್ಲಮ್ಮನಂಥಾ ದೇವಿಯ ಎಲ್ಲು ಕಾಣೆ
ಝಣ ಝಣ ಝೇಂಕಾರದ ಎಲ್ಲಮ್ಮಾ ಉಧೋ ಉಧೋ ಓಂಕಾರದ ತಾಯವ್ವ
ಉಧೋ ಉಧೋ ಓಂಕಾರದ ರತುನದ ಹಣೆಯ ಬೊಟ್ಟು
ಬೇವಿನ ಸೀರೆ ಉಟ್ಟು ಅರಿಶಿನ ಕುಪ್ಪಸ ತೊಟ್ಟು ಕಾಲಿಗೆ ಚಿನ್ನದ ಮೆಟ್ಟು
ಎಲ್ಲು ಕಾಣೆ ಎಲ್ಲು ಕಾಣೆ ಎಲ್ಲಮ್ಮನಂಥಾ ದೇವಿಯ ಎಲ್ಲು ಕಾಣೆ
ಗಂಡು : ಕಣಜಕ್ಕೆ ಬೆಂಕಿ ಇಟ್ಟು ಗೌಡಂಗೇ ಗರ್ವವ ಮೆಟ್ಟಿ
ಕಣಜಕ್ಕೆ ಬೆಂಕಿ ಇಟ್ಟು ಗೌಡಂಗೇ ಗರ್ವವ ಮೆಟ್ಟಿ
ಘೋರ ರೋಗ ತನುವಿಗೆ ತೊಟ್ಟಿ ಬಾಳೆಲ್ಲಾ ನರಳಿಸಿ ಬಿಟ್ಟೆ
ಘೋರ ರೋಗ ತನುವಿಗೆ ತೊಟ್ಟಿ ಬಾಳೆಲ್ಲಾ ನರಳಿಸಿ ಬಿಟ್ಟೆ
ಪಾಲ್ಕಿಗೆ ಹೆಗಲ ಕೊಟ್ಟು ದೇವಿಗೆ ರೊಟ್ಟಿಯ ಕೊಟ್ಟು
ಪಾಲ್ಕಿಗೆ ಹೆಗಲ ಕೊಟ್ಟು ದೇವಿಗೆ ರೊಟ್ಟಿಯ ಕೊಟ್ಟು
ಪಾದಾಗೇ ಶಿರವ ಇಟ್ಟು ಬಂಗಾರ ಬುತ್ತಿ ಕೊಟ್ಟೇ
ಎಲ್ಲು ಕಾಣೆ ಎಲ್ಲು ಕಾಣೆ ಎಲ್ಲಮ್ಮನಂಥಾ ದೇವಿಯ ಎಲ್ಲು ಕಾಣೆ
ಗಂಡು : ದೇವಿಗೆ ಹರಕೆ ಕೊಟ್ಟು ಮನದಲ್ಲಿ ಬಕುತಿಯನಿಟ್ಟು
ದೇವಿಗೆ ಹರಕೆ ಕೊಟ್ಟು ಮನದಲ್ಲಿ ಬಕುತಿಯನಿಟ್ಟು
ಏಳು ಕೊಳ್ಳು ಕಾಣಲು ಉಂಟು ಪಾಪಿಗು ಪುಣ್ಯದ ಗಂಟು
ಏಳು ಕೊಳ್ಳು ಕಾಣಲು ಉಂಟು ಪಾಪಿಗು ಪುಣ್ಯದ ಗಂಟು
ಎಲ್ಲು ಕಾಣೆ ಎಲ್ಲು ಕಾಣೆ ಎಲ್ಲಮ್ಮನಂಥಾ ದೇವಿಯ ಎಲ್ಲು ಕಾಣೆ
ಝಣಕ್ ಝಣಕ್ ಝೇಂಕಾರದ..... ಓಓಓಓಓಓಓ
---------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಶಾಂತಕರಂ ಭುಜಗಶಯನಂ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ಶ್ಲೋಕ , ಗಾಯನ : ಎ.ವಿ.ಏನ್.ಮೂರ್ತಿ
ಶಾಂತಾಕಾರಂ ಭುಜಗಶಯನಂ
ಶಾಂತಾಕಾರಂ ಭುಜಗಶಯನಂ ಪದ್ಮನಾಭು ಸುರೇಶಂ
ಪದ್ಮನಾಭು ಸುರೇಶಂ ವಿಶ್ವಕಾರಂ ಗಗನ ಸದೃಶ್ಯಂ
ಮೇಘಮೇಘವರಣಂ ಶುಭಾಗಂ
ಮೇಘಮೇಘವರಣಂ ಶುಭಾಗಂ ಲಕ್ಷ್ಮೀಕಾಂತಂ ಕಮಲಾನಯನಂ
ಯೋಗಿ ಹೃಧ್ಯಾನ್ ಗಮ್ಯಮ್ ವಂದೇ ವಿಷ್ಣುಮ್ ಭವಭಯಹರಂ
ಸರ್ವ ಲೋಕೈಕ ನಾಥಮ್ .... ಸರ್ವ ಲೋಕೈಕ ನಾಥಮ್
---------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಅಂಬಾ ಮೋಹಿನಿ ದೇವತಾ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ಉದಯಕುಮಾರ, ಗಾಯನ : ಎಸ್.ಜಾನಕೀ
ಅಂಬಾ ಮೋಹಿನಿ ದೇವತಾ ತ್ರಿಭುವನ ಆನಂದ ಸಂದಾಯೀನಿ ವಾಣಿ ಪಲ್ಲವಪಾಣಿ
ವೇಣು ಮುರುಳಿ ಗಾನಪ್ರಿಯ ಲೋಲಿನಿ
ಕಲ್ಯಾಣಿ ಪರ ರಾಜ ಬಿಂಬವದನಾ ಧೂಮ್ರಾಕ್ಷ ಸಂಹಾರಿಣಿ
ಚಿದ್ರೂಪಿ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ ...
--------------------------------------------------------------------------------------------
ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಭವಾನೀ ಭವಾನೀ ಸಕಲ ಲೋಕ ಜನನಿ
ಸಂಗೀತ : ಎಸ್.ಹನಮಂತರಾವ, ಸಾಹಿತ್ಯ : ಉದಯಕುಮಾರ, ಗಾಯನ : ಪಿ.ಬಿ.ಎಸ್.
ಭವಾನಿ ಭವಾನಿ ಸಕಲಲೋಕ ಜನನಿ ಈ ಘೋರ ನೋಡಮ್ಮಾ
ಕರುಣೆ ತೋರಮ್ಮಾ ನೀನಿತ್ತ ವರಪುತ್ರಿ ಈ ವಂಶಕುಮಾರಿ
ನೀನೇ ಬಲಿ ಬಯಸುವುದು ನ್ಯಾಯವೇನಮ್ಮಾ
ಮೊರೆಯ ಕೇಳಮ್ಮಾ ಮೌನವೇಕಮ್ಮಾ ಮಾತಾ ಮಹೇಶ್ವರೀ ಮಮತೆ ತೋರಮ್ಮಾ
ನಿನ ಪಾದ ರೇಣು ಈ ಹಸು ಕಂದಳಮ್ಮಾ ಚಿರಂಜೀವಿಯಾಗೆಂದು ಹರಸಿ ಪೊರೆಯಮ್ಮಾ
ಭವಾನೀ ... ಮೃಡಾಣಿ... ಪಶುಪತಿಯ ರಾಣಿ ಭುವನೇಶ್ವರೀ ... ರಾಜರಾಜೇಶ್ವರೀ ...
--------------------------------------------------------------------------------------------
No comments:
Post a Comment