1829. ಗೌರಿ ಗಂಡ (೧೯೬೮)


ಈ ಚಿತ್ರದ ಹಾಡುಗಳ ಸಾಹಿತ್ಯವನ್ನು ಒದಗಿಸಿದವರು ಶ್ರೀಯುತ.ಶಿವರಾಮರವರು.  ಅವರಿಗೆ ತುಂಬಾ ಧನ್ಯವಾದಗಳು    

ಗೌರಿ ಗಂಡ ಚಲನಚಿತ್ರದ ಹಾಡುಗಳು 
  1. ಆಚಾರವಿಲ್ಲದ ನಾಲಿಗೆ 
  2. ಬೆಂಗಳೂರು ಬ್ಯೂಟಿಫ್ಯೂಲ್ ಹೆಣ್ಣೇ 
  3. ಬಾಳಿಗಿಂದೇ ಮಂಗಳ ದಿನವೂ 
  4. ತಪ್ಪು ದೊಡ್ಡ ತಪ್ಪು 
  5. ಅಟ್ಟಾ ,ಮುಟ್ಟಾ ತನ್ನದೇವಿ 
  6. ಮೇರೇ ಮನಕಿ ತುಂಗಾ ಚಾರ್ 
  7. ಅಡಿಗೆ ಕೆಲಸಾನ್ ಬಿಡುವೇ 
  8. ಅಟ್ಟಾ ,ಮುಟ್ಟಾ ತನ್ನದೇವಿ 
ಗೌರಿ ಗಂಡ (೧೯೬೮) - ಆಚಾರವಿಲ್ಲದ ನಾಲಿಗೆ 
ಸಂಗೀತ : ತಾರೈ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ 

ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ ಆಚಾರವಿಲ್ಲದ ನಾಲಿಗೆ  
ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ ಆಚಾರವಿಲ್ಲದ ನಾಲಿಗೆ  

ಹರಿಯ ಸ್ಮರಣೆ ಮಾಡು ನಾಲಿಗೆ 
ನರಹರಿಯ ಭಜಿಸು ಕಂಡ್ಯ ನಾಲಿಗೆ 
ವರದ ಪುರಂದರ ವಿಠಲರಾಯನ 
ಚರಣಕಮಲ ನೆನೆ ನಾಲಿಗೆ 
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ 
ಆಚಾರವಿಲ್ಲದ ನಾಲಿಗೆ  
-----------------------------------------------------------------------------------------

ಗೌರಿ ಗಂಡ (೧೯೬೮) - ಬೆಂಗಳೂರು ಬ್ಯೂಟಿಫ್ಯೂಲ್ ಹೆಣ್ಣೇ 
ಸಂಗೀತ : ತಾರೈ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ. ಎಸ್.ಜಾನಕೀ  

ಮದನ : ಬೆಂಗಳೂರ ಬ್ಯೂಟಿಫ್ಯೂಲ್ ಹೆಣ್ಣೇ ಬಳಿ ಬಂದರೆ ಕೊಡುವೇನು ನನ್ನೇ 
             ರಿಯಲೀ ಐ ಲವ್ ಯೂ ಐ ಲವ್ ಯೂ ವೆರೀ ಮಚ್ 
ಯಾಮಿನೀ : ಮಂಗಳೂರ ಮನಮೋಹನನೇ ಬಳಿ ಬಂದರೆ ಹೊಂದುವೆ ನಿನ್ನೇ 
                  ಟೆಲ್ ಮೀ ಫಸ್ಟ್ ಯೂ ಲವ್ ಮೀ ಯೂ ಲವ್ ಮೀ ಹವ್ ಮಚ್ 
ಮದನ : ಬೆಂಗಳೂರ ಬ್ಯೂಟಿಫ್ಯೂಲ್ ಹೆಣ್ಣೇ ಬಳಿ ಬಂದರೆ ಕೊಡುವೇನು ನನ್ನೇ 
             ರಿಯಲೀ ಐ ಲವ್ ಯೂ ಐ ಲವ್ ಯೂ ವೆರೀ ಮಚ್ 
ಯಾಮಿನೀ : ಮಂಗಳೂರ ಮನಮೋಹನನೇ ಬಳಿ ಬಂದರೆ ಹೊಂದುವೆ ನಿನ್ನೇ 
                  ಟೆಲ್ ಮೀ ಫಸ್ಟ್ ಯೂ ಲವ್ ಮೀ ಯೂ ಲವ್ ಮೀ ಹವ್ ಮಚ್ 

ಮದನ : ಐ ಹ್ಯಾವ್ ಸರ್ಚ್ಡ್ ಊರೂರು ಹುಡುಕಿದೆ ತುಮುಕೂರಲ್ಲದೇ ತಿಪಟೂರಲ್ಲದೇ 
             ಕೊಡಗೂ ಗದಗು ಎಲ್ಲಾ ಅಲೆದೆ ಕೋಲಾರ್ ಮೈಲಾರ್ ಸಾಗರ ಹರಿಹರ 
             ಗುಲ್ಬರ್ಗಾ ಚಿತ್ರದುರ್ಗ ಶಿವಮೊಗ್ಗ ಸುತ್ತಿದೆ ಕುಣಿಗಲ್ ಹಾನಗಲ್ಲ...ಹ್ಹಾ 
             ಬಟ್ ಲೈಕ್ ಯೂ ನೋ ಗರ್ಲ್ 
ಯಾಮಿನಿ : ಐ ನೋ ಯೂ ನಿಮ್ಮ ವಿಷಯ ಗೊತ್ತು 
                ತುಮುಕೂರು ತಿಪಟೂರು ಅಲೆದದ್ದು ಗೊತ್ತು ಕನ್ನಡ ನಾಡನು ಸುತ್ತಿದ್ದು ಗೊತ್ತು 
                ಕೋಲಾರ ಮೈಲಾರ ವ್ಯಾಪಾರ ಸಡಗರ ನನ್ನಲ್ಲಿ ನಡೆಯದು ಈ ಸುಳ್ಳು ಬಡಿವಾರ 
                ಸ್ವೀಟ್ ರಸಗುಲ್ಲ... 
ಮದನ : ರಸಗುಲ್ಲ... 
ಯಾಮಿನಿ : ಸ್ವೀಟ್ ರಸಗುಲ್ಲ ಮೈ ಸ್ವೀಟ್ ರಸಗುಲ್ಲ ಐ ನೋ ಯೂ ಪ್ರೆಟ್ರಿವೇಲ್ 

ಮದನ : ಓ ಮೈ ವರ್ಜಿನ್ ಫಿಲಂ ಸ್ಟಾರ್ ಲವ್ ಎಂಬುದೊಂದು ಸಾಗರದಂತೇ 
             ಅಳೆಯುವ ಮಾತು ಬೆಳಕು ಹಿಡಿದಂತೆ ಒಲವಿನ ಹೂವೇ ಬಲ್ಲೆಯಾ... 
ಯಾಮಿನಿ : ಓ ಮೈ ಬ್ಯಾಚುಲರ್ ಹೋಟೆಲ್ ಪ್ರೊಪ್ರೈಟರ್ ಲವಗಿವ್ ಎಲ್ಲ ಹೊಸದೇನಲ್ಲ 
                 ಸಿನಿಮಾ ನಟಿಗೆ ಲವ್ ದಿನವೆಲ್ಲ ಜಂಟಲ್ ಮ್ಯಾನ್ ಬಲ್ಲೆಯಾ 
ಮದನ : ಓ.. ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಕಮ್ ನಿಯರ್ ಮೈ ಸ್ವೀಟ್ ಡಾರ್ಲಿಂಗ್ ಕಮ್ ನಿಯರ್ 
ಯಾಮಿನಿ : ಐ ಫೀಯರ್ ಮೈ ಚಾರ್ಮಿಂಗ್ ಡಾರ್ಲಿಂಗ್ ಹೈ ಫೀವರ್ 
-----------------------------------------------------------------------------------------

ಗೌರಿ ಗಂಡ (೧೯೬೮) - ಬಾಳಿಗಿಂದೇ ಮಂಗಳ ದಿನವೂ 
ಸಂಗೀತ : ತಾರೈ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ  

ಯಾಮಿನಿ : ಬಾಳಿಗಿಂದೇ ಮಂಗಳ ದಿನವೂ ನನ್ನ ಬಾಳು ಬೆಳಗಿದ ಕ್ಷಣವೂ 
ಮದನ : ಗೃಹಲಕ್ಷ್ಮಿಯೇ ನಿನ್ನ ಪಡೆದುದೇ ಮಹಾ ಭಾಗ್ಯವೂ 
ಯಾಮಿನಿ : ಬಾಳಿಗಿಂದೇ ಮಂಗಳ ದಿನವೂ ನನ್ನ ಬಾಳು ಬೆಳಗಿದ ಕ್ಷಣವೂ 
ಮದನ : ಗೃಹಲಕ್ಷ್ಮಿಯೇ ನಿನ್ನ ಪಡೆದುದೇ ಮಹಾ ಭಾಗ್ಯವೂ 

ಯಾಮಿನಿ : ಮಹಾದೇವ ಶಿವಶಂಕರನೇ ಗೌರಿದೇವ ಪ್ರಿಯ ವಲ್ಲಭನೇ 
ಇಬ್ಬರು : ಸದಾಕಾಲ ರಕ್ಷಿಸು ನಮ್ಮ ಶಶಿಧರನೇ  
             ಸದಾಕಾಲ ರಕ್ಷಿಸು ನಮ್ಮ ಶಶಿಧರನೇ    
-----------------------------------------------------------------------------------------

ಗೌರಿ ಗಂಡ (೧೯೬೮) - ತಪ್ಪು ದೊಡ್ಡ ತಪ್ಪು 
ಸಂಗೀತ : ತಾರೈ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ, ಕೋರಸ್  

ರಾಮಣ್ಣ : ತಪ್ಪು... ದೊಡ್ಡ ತಪ್ಪು ತುಂಬಾ ದೊಡ್ಡ ತಪ್ಪು 
              ತಪ್ಪು ದೊಡ್ಡ ತಪ್ಪು ತುಂಬಾ ದೊಡ್ಡ ತಪ್ಪು 
              ಮಾನವನಾಗಿಯೂ ವಾನರನಂತೆ ಬುದ್ಧಿಹೀನ ಪಶುವಿನಂತೆ 
              ಬಾಳುವ ರೀತಿಯೂ ತಪ್ಪು ಕಣ್ಣಯ್ಯಾ ತಪ್ಪೂ... ತಪ್ಪೂ 

ಮದನ : ಯಾರಯ್ಯ.. ಇವನೂ... ನಮ್ಮನ್ ನೋಡ್ತಾನೇ ತನ್ನ ಕೈಯ್ಯ ನೋಡ್ಕೊತಾನೇ 
ಶ್ಯಾಮ : ನೋಡಿದ್ರೇ ... ಬೀಗಿನಿಂಗ್ ಸ್ಟೇಜಂತಾ ಕಾಣ್ಸತ್ತೇ 
ರಾಮಣ್ಣ : ಒಂದೇ ತಪ್ಪಿಗೆ ದಶಕಂಠನು ಜೀವ ತೊರೆದನು 
              ಒಂದೇ ತಪ್ಪಿಗೆ ಸುಯ್ಯೋಧನನು ಪ್ರಾಣ ತೆತ್ತನು 
              ಒಂದೇ ತಪ್ಪಿಗೆ ಶಾಪವನು ಪಡೆದ ಚಂದ್ರನು 
              ತಪ್ಪಿಗೆ ನಾಶ ಎಂದು ತಿಳಿದು ನಗುವುದು ನೀನು   
              ತಪ್ಪೂ... ತಪ್ಪೂ...  ತಪ್ಪೂ... ತಪ್ಪೂ  
             ತಪ್ಪು ದೊಡ್ಡ ತಪ್ಪು ತುಂಬಾ ದೊಡ್ಡ ತಪ್ಪು 
              ಮಾನವನಾಗಿಯೂ ವಾನರನಂತೆ ಬುದ್ಧಿಹೀನ ಪಶುವಿನಂತೆ 
              ಬಾಳುವ ರೀತಿಯೂ ತಪ್ಪು ಕಣ್ಣಯ್ಯಾ ತಪ್ಪೂ... ತಪ್ಪೂ 

ರಾಮಣ್ಣ : ಬೇರೆಯವರ ವಿಷಯದಲ್ಲಿ ತಲೆ ಹಾಕುವುದು ರಾವಣ ನಿನ್ನ ತಲೆ ಸರಿ ಅಯೋಗ್ಯ...  
              ಹಣೆಬರಹ ಇದೆಯೆನ್ನುವುದ ಮರೆತು ಮೆರೆವುದು 
              ಸುಯೋಧನ ನಿನ್ನ ಹಣೆ ಸರಿ ಸರಿ ಅಯ್ಯೋ ಮುಠ್ಠಾಳ 
              ಪರಸ್ತ್ರೀಯರ ಮೇಲೆ ನಿನ್ನ ಕಣ್ಣನ್ನಿಡುವುದು 
              ಚಂದ್ರಾ ನಿನ್ನ ಕಣ್ಣು ಸರಿ ಸರಿ ಸರಿ ರಾಸ್ಕಲ್ 
              ಪರನಿಂದೆಗೆ ಸದಾ ಕಾಲ ಬಾಯಿ ಬಿಡುವುದು 
ಮದನ : ಲೋ.. ಇವನಿಗೆಲ್ಲೋ ಬಾಯಿ ಹುಚ್ಹೂ ಅಂತಾ ಕಾಣುತ್ತೇ 
ರಾಮಣ್ಣ : ನಿನ್ನ ಬಾಯ್ ಬೊಂಬಾಯ್ ಬಂ ಬಂ ಬಂ ಬಂ ಬಂ ಬಂ 
              ಬೊಂಬಾಯಿ ಬೊಂಬಾಯ್ ತಪ್ ತಪ್  ತಪ್  ತಪ್  ತಪ್  ತಪ್ ತಪ್ಪೂ... ತಪ್ಪು 
              ದಪ ನಿದಪ ನಿಮ್ಮಪ್ಪ ಮಗ ದಪ ನಿಮ್ಮಮ್ಮ ಮಗ ದಪ 
              ಪದಸನಿದಪ ಮಪದನಿಗಮ ಗಾಮಮದಪ್ಪ ದಪ್ಪ ನಿದಪ ತಪ್ಪು ತಪ್ಪು ತಪ್ಪು ತಪ್ಪು 
              ತಪ್ಪು ತಪ್ಪು ತುಂಬಾ ದೊಡ್ಡ ತಪ್ಪು    
----------------------------------------------------------------------------------------

ಗೌರಿ ಗಂಡ (೧೯೬೮) - ಅಟ್ಟಾ ,ಮುಟ್ಟಾ ತನ್ನದೇವಿ 
ಸಂಗೀತ : ತಾರೈ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಸಾಯಿಬಾಬು, ಎಲ್.ಆರ್.ಈಶ್ವರಿ, ಪುಷ್ಪ, ನಾಡಕರ್ಣಿ, ಕೋರಸ್   

ಯಾಮಿನಿ : ಅಟ್ಟಾ ಮುಟ್ಟಾ ತನ್ನಾದೇವಿ ನನ್ನ ಗಂಡ ಎಲ್ಲಿ ಹೋದ 
ಮದನ : ಮಲ್ಲಪ್ಪನಾಯ್ಕನ ಕೇರಿಗೆ ಹೋದ 
ಹುಡುಗಿಯರು : ಏನ್ ತಂದ ..                     ಮದನ : ಗಿಳಿಯ ತಂದ 
ಹುಡುಗಿಯರು : ಅದರಂದ ಬಲು ಚಂದ          ಯಾಮಿನಿ : ಗಿಳಿಯ ಜೊತೆ ಸರಸವಾಡ್ದ 
ಹುಡುಗಿಯರು : ಓ ಓ ಓ ಓ ಓ ಓ ಓ              ಯಾಮಿನಿ : ಪ್ರೇಮದಿಂದ ಮದುವೆಯಾದ 
ಹುಡುಗಿಯರು : ಚೂ... ಚೂ... ಚೂ... ಚೂ...   ಯಾಮಿನಿ : ಈ ಹರುಷ ರಸನಿಮಿಷ ಮುಗಿದೊಡನೇ
ಮದನ : ಬಂತು ವಿರಸ                              ಯಾಮಿನಿ : ಗಿಳಿಯ ಕೂಡ ಜಗಳ ಕಾದ 
ಹುಡುಗಿಯರು : ಯ್ ಯ್ ಯ್ ಯ್               ಯಾಮಿನಿ : ಜೊತೆಯ ಬಿಟ್ಟು ಓಡಿಹೋದ 
ಹುಡುಗಿಯರು : ಟೂ ಟೂ ಟೂ ಟೂ               ಹುಡುಗಿ : ಎಲ್ಲಿ ಆ ಬಹುದ್ದೂರ ಗಂಡ
ಹುಡುಗಿ : ಇಲ್ಲೇ ಆ ಉಂಡಾಡಿ ಗುಂಡ 
                                             (ಕೊಂಕಣಿ ಭಾಷೆ) 
ಯಾಮಿನಿ : ಫಸಯಲೇ ಮಕ್ಕಾ ಹ್ಯಾ ಹೋಟೆಲ್ ಮ್ಯಾನೇ ಲಫ್ನ ಜಾವ್ನೂ ಮೈನೋ ಚಾಯ್ನೆ 
                ಮುಲ್ಯಾಗ್ಹಲ್ಲಿ ತನ್ನೇ ಮಕ್ಕಾ ಮುಲ್ಯಾಗ್ಹಲ್ಲಿ ತನ್ನೇ 
ಮದನ : ರೋಣ್ಗ ರೋಣ್ಗ ನಾಟಕ ಕಲ್ಯಾರೀ ಆಯ್ಕನಾ ಚಿಕ್ಕಿಪುಣೆ 
             ಕಂಸ್ಲೇ ಜಾಲ್ಯಾರ ತೊಂಡಾ ಬಣ್ಣಾಚಿ ಮೊಹರೂಪಕ ರಾಣೆ 
ಯಾಮಿನಿ : ಫಸಯಲೇ ಮಕ್ಕಾ ಮಗಲ್ ಭಮ್ಮ ಫಸೈಲೇ ಆಫ್ನ ಜಾವ್ನು ಮೈಗೇ ಜಾಯ್ನೇ 
                ಮುಲ್ಯಾಗ್ಹಲ್ಲಿ ತನೆಲ್ಲಿ ಮಕ್ಕಾ ಮುಲ್ಯಾಗ್ಹಲ್ಲಿ ತನೇ 
                                            (ತುಳು ಭಾಷೆ) 
ಯಾಮಿನಿ : ತುಳು ಮೆಗ್ಗೆ ಫಲಯರೇ ನ್ಯಾಯನೀ ಕ್ಕೆ ಕೊರ್ಪು ನಾಟಾ 
                 ಕುಡಲಾದಾರೂ ಹೋಟೆಲ್ ಜನರು ಮೊಂಟಾರ್ ಒಯ ತಂದು  ಮಾನ ಹೋಯ್ತೆರೇ 
                 ಮೊಕ್ಕಡೇ ಎನ್ನನು ಮದುಮೆಯರೇ ಬೆಂಗಳೂರು ಪೊನ್ನಗೂ ಕೈ ಕೊರಿಯೇರೇ 
ಮದನ : ಫಿದಾಯೀದ ಪೊರ್ಲಗು ಮರ್ಲಾಯೆನೆ ಮನಸುದ ಕಷ್ಟೊನು ಇತ್ತೆ ತೂಯೆನೆ 
              ಕೈ ಕೆಕ್ಕುನ ಪೊನ್ನತ ಉಂಡು ಡೇಂಜರ್ 
             ಬೊಡ್ಬೊಂಕು ಬೊಡ್ಬೊಂಕು ಬೊಡ್ಬೊಂಕು ಪೋ ಪೊಣ್ಣೆ ಪೋ ಪೊಣ್ಣೆ ಪೋ ಪೂನೆ 
                                            (ಕೊಡಗು ಭಾಷೆ) 
ಹುಡುಗಿ : ಹೆಣ್ಣೇ ಮೊಳಿಗೊಂಡು ಕಣ್ಣೇರು ಕಾಂಬದೋ ಚೈನ್ದಿ ಯಾಮಿನಿಯೋ 
ಯಾಮಿನಿ : ಕೊಡಗುರ ಕೊದಿಮೊಳೆ ಕೇಳೆನ್ನ ಡಾ ಗೌರಿ ಚದಿಚತ್ ಚಂಇದೀಯೋ 
                ಹೋಟೆಲ್ ಯಜಮಾನ ನೋಟ್ವಕ್ ಚಾಯಾನಾ ಮಗಳೂರು ಪಣಕಾರನೋ           
                ಕಾರಿಲೇ ಬಲಿಚಿತ್ ಪ್ಲೇನಿಲೇ ಕಳಿಚಿತ್ ಮನಸನ್ ಗೆದ್ದೆತ್ ಲೋ 
                ಮಂಗಲ ಕಯಿಂಜದು ಸಿನೆಮಾ ಬುಟ್ಟಿತ ಬಯಂದಿತ್ ಬಂದಕಲೋ 
                ಸಂಶಯ ಪಟ್ಟಂದ್ ಮೂಡೇ ನೋಟುಲೇ ವಿಧಿಯೇನ್ ಮಾಡಿ ಚಲೋ 
ಮದನ : ಪೊಣ್ಣೆ ನಿಲ್ಲು ನಿನ್ನಡ ಸೊಲ್ಲು ಕೆಪಕ್ ನಾನಿಲ್ಲೇ 
             ಸಿನೆಮಾ ಚಾಯಿರ ಪಾತರಗಿತ್ತಿ ನಾನರಿಂಜದಲ್ಲೆ     
             ಚದಿಚಿತ್ ಮದಿಚಿತ್ ಕಳಿಚವ ನೀನ್ ದೂರಿತ್ ಫಲ್ ಇಲ್ಲೆ 
ಯಾಮಿನಿ : ನನ್ನಡ ಮನ ಮಲ್ಲಿಗೆ ಬನ ಚಣ್ಣೂರಂಡ್ ಮಿಂಇ       
                 ಕೊರ ಬಾಂಗಿತ್ ಪಣತೊಡುವಿನೋ ಕಳಂಕಿ ನಾನಲ್ಲ 
ಮದನ : ಪೊಣ್ಣೆ ನಿಲ್ಲು ನಿನ್ನಡ ಸೊಲ್ಲು ಕೆಪಕ್ ನಾನಿಲ್ಲೇ... ಕೆಪಕ್ ನಾನಿಲ್ಲೇ 
ಹುಡುಗಿಯರು : ಛೀ...  ಛೀ...  ಛೀ...  
------------------------------------------------------------------------------------------

ಗೌರಿ ಗಂಡ (೧೯೬೮) - ಮೇರೇ ಮನಕಿ ತುಂಗಾ ಚಾರ್ 
ಸಂಗೀತ : ತಾರೈ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಲ್.ಆರ್.ಈಶ್ವರಿ 

ಯಾಮಿನಿ :  ಮೇರೇ ಮನಕಿ ತುಂಗಾ ಚಾರ್ ತೆರೆ ಮನಕಿ ಭದ್ರಕಾ 
                 ಹೇಳು ಡಾರ್ಲಿಂಗ್ ಹೇಳು ಸಂಗಮ್ ಆಗುತ್ತೋ ಇಲ್ವೋ 
ಮದನ : ಇಲ್ಲ ಕಭೀ ನಹಿ.. ಅರೇ ಜಾ....   
-----------------------------------------------------------------------------------------

ಗೌರಿ ಗಂಡ (೧೯೬೮) - ಅಡಿಗೆ ಕೆಲಸಾನ್ ಬಿಡುವೇ 
ಸಂಗೀತ : ತಾರೈ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ, ಬಿ.ಕೆ.ಸುಮಿತ್ರಾ  

ಮಹಾಬಲಿ : ಅಡಿಗೆ ಕೆಲ್ಸಾನಾ ಬಿಡುವೇ ಸಂಗೀತ ಹಾಡುವೆ 
                  ತಂಬೂರಿ ಹುಡುಕಿ ತರುವೆ ಸಾಧಕವ ಮಾಡಿಕೊಳ್ಳುವೆ 
                  ಕಚೇರಿ ಮಾ... ಪಪ ನಿನಿಪ ನಿನಿಪ ನಿನಿಪಮ ಗಮಗಸ 
                 ಗಮಗಪ ಗಮಗಸಗ ಒಬ್ಬ ಭಾಗವತರ ಆಗಿಬಿಡುವೇ 
ರೋಹಿಣಿ : ಅಯ್ಯೋ ಅಯ್ಯೋ ಅಯ್ಯೋ 
ಮಹಾಬಲಿ : ಕಚೇರಿ ಮಾಡಿ ಬರುವೆ ಭಾಗವತರ ಆಗಿಬಿಡುವೆ 
                 ಭಾಗವತರ ಆಗಿ ಸಂಗೀತ ಹಾಡುವೆ     
                  ಅಡಿಗೆ ಕೆಲ್ಸಾನಾ ಬಿಡುವೇ ಸಂಗೀತ ಹಾಡುವೆ.... 

ಮಹಾಬಲಿ : ಆಕಾಶವಾಣಿಯಲ್ಲಿ ನಾನು ತಾನಸೇನನಂತೆ ಹಾಡುವೆ 
                 ಆಕಾಶವಾಣಿ ಬೆಂಗಳೂರು ಆಕಾಶವಾಣಿ 
                 ಧಾರವಾಡ ಆಕಾಶವಾಣಿಯಲ್ಲಿ ನಾನು ತಾನಸೇನನಂತೆ ಹಾಡುವೆ 
                 ಸಿನಿಮಾ ಸ್ಟುಡಿಯೋ ಸೇರುವೆ ಮಾಬಚ್ಕುಮಾರ ಆಗುವೆ 
ರೋಹಿಣಿ : ಕಲೆ ಎನ್ನುವುದು ಬೆಲೆಗೆ ಸಿಕ್ಕುವ ಕಡಲೆಯ ಪುರಿಯಲ್ಲ      
               ಪೂರ್ವ ಜನ್ಮ ಸುಕೃತವ ಪಡೆಯದೇ ಕಲೆಯಿಲ್ಲ   
               ಈಗಿನ ಕಾಲದಿ ಹಣದ ರಾಶಿಯನು ಗಳಿಸಲು 
               ಇಹುದೊಂದು ಸುಲಭದ ದಾರಿಯು ಹೇಳುವೆ 
ಮಹಾಬಲಿ : ಯಾವುದು.. 
ರೋಹಿಣಿ : ಅಡಿಗೆಯ ಬಿಡದೆ ಸಂಗೀತ ಹಾಡದೆ ಹಿಡಿದಿರು ಸೌಟನ್ನು 
                ಕೊಡುವುದು ಧನವನ್ನು ಉಡುಪಿಯ ಹೋಟೆಲ್ಲು 
ಇಬ್ಬರು : ಕೊಡುವುದು ಧನವನ್ನು ಉಡುಪಿಯ ಹೋಟೆಲ್ಲು 
ಮಹಾಬಲಿ : ಅಯ್ಯೋ ನನ್ನ ದುಂಡು ಮಲ್ಲಿಗೆ 
                 ಮನೆ ಗುಡಿಸೇದಲ್ದೇ ನನ್ನ ತಲೆ ಒಳಗೂ ಗುಡಿಸಿಬಿಟ್ಟೇ ಕಣೇ 
------------------------------------------------------------------------------------------

ಗೌರಿ ಗಂಡ (೧೯೬೮) - ಅಟ್ಟಾ ,ಮುಟ್ಟಾ ತನ್ನದೇವಿ  
ಸಂಗೀತ : ತಾರೈ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಲ್.ಆರ್.ಈಶ್ವರಿ, ಸಾಯಿಬಾಬು, ಕೋರಸ್  

ಯಾಮಿನಿ : ಅಟ್ಟಾ ಮುಟ್ಟಾ ತನ್ನಾದೇವಿ ನನ್ನಾ ಗಂಡ ಎಲ್ಲಿ ಹೋದ 
ಮದನ : ರಾಜಾಜಿ ನಗರದ ರಂಗಣ್ಣೋರ ಮಗ ರಾಮಣ್ಣನ ಮನೆಗೆ ಹೋದ 
ಯಾಮಿನಿ : ಅಲ್ಲಿಗೆ ಯಾಕೇ ಓಡಿ ಹೋದ
ಮದನ : ತಪ್ಪಾಯ್ತೆಂದು ಹೇಳಲು ಹೋದ ತಪ್ಪಾಯ್ತು 
ಯಾಮಿನಿ : ಯ್... ಯ್... ಯ್...   ತಪ್ಪಾಯ್ತು 
ಎಲ್ಲರು : ಟೂ ಟೂ ಟೂ ತಪ್ಪಾಯ್ತು ಆನಂದ ಆನಂದ ಆನಂದ ಆನಂದ ಆನಂದ     
------------------------------------------------------------------------------------------

No comments:

Post a Comment