ಟೈಗರ್ ಗಂಗು ಚಲನಚಿತ್ರದ ಹಾಡುಗಳು
- ಮೀನಾಕ್ಷಿ ಕಣ್ಣ ಬಲೇ ಬೀಸಿ
- ಓಹ್ ವೀರಯ್ಯಾ ಈರಯ್ಯಾ
- ಕಂದಮ್ಮ ಕಣ್ಮಣಿಯೆ
- ನಾನೇನೇ ಹಂಟರವಾಲಿ
ಟೈಗರ್ ಗಂಗು (೧೯೯೦) - ಮೀನಾಕ್ಷಿ ಕಣ್ಣ ಬಲೇ ಬೀಸಿ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ, ಬಿ.ಆರ್.ಛಾಯಾ, ಕೋರಸ್
ನಿನ್ನಾಸೆ ಗಾಳದಲ್ಲಿ ಮೀನಾಗಿ ಜುಮ್ಮನೆ ಬಿದ್ದೆನೆಲ್ಲೋ
ಹೇ.. ಗಂಗೂ ನನ್ನಾಸೆ ಆಳದಲ್ಲಿ ನೀನು ಸುಮ್ಮನೆ ಇದ್ದಿಯೆಲ್ಲೋ...
ಮೀನಾಕ್ಷಿ ಕಣ್ಣ ಬಲೆ ಬೀಸಿ ದೋಚಿದ ಮೀನು ಇದು
ಹೇ... ಕಾಮಾಕ್ಷಿ ಹಾಕಿದಳು ಗಾಳ ಬುಟ್ಟಿಗೆ ಬಿತ್ತು ಇದು
ತೋಳೆಲ್ಲಾ.. ಬಾಳೇ ಮೀನಿದು ಆಹ್ ಕಾಲಲ್ಲ ದಿಂಡು ಮೀನಿದು
ಬಂಗಾರ ಬಣ್ಣ ನೋಡಿದು ನಿನಗಾಗಿ ಎಲ್ಲವು ಇದು
ಮೀನಾಕ್ಷಿ ಕಣ್ಣ ಬಲೆ ಬೀಸಿ ದೋಚಿದ ಮೀನು ಇದು
ಹೇ... ಕಾಮಾಕ್ಷಿ ಹಾಕಿದಳು ಗಾಳ ಬುಟ್ಟಿಗೆ ಬಿತ್ತು ಇದು
ಕಾಡೆಲ್ಲಾ ಓಡಾಡಿ ನಾ ಕಡಲಿಗೆ ಬಂದೋಳು
ಕಾಡೇಲ್ಲೇ ಇರಬಾರದಿತ್ತೇ ಯಾಕಾಗಿ ಈ ಗೋಳು
ನಿನ್ನ ನೋಡಲೆಂದು ನಾ ಬಂದೆ ಕಣೋ ಗಂಗೂ
ಅರೆರೆರೆರೇ... ಯಾಕಿವೇಲ್ಲಾ ರಂಗು ಬೇಡ ಇವೆಲ್ಲ ಗುಂಗು
ಕಡಲಿನ ಮಹಾರಾಣಿ ನಿನ್ನ ಬುದ್ದಿನೇ ಮುರಾಣಿ
ಕಡಲಿನ ಮಹಾರಾಣಿ ನಿನ್ನ ಬುದ್ದಿನೇ ಮುರಾಣಿ
ಮಹಾರಾಣಿ ಮಾತು ಕೇಳು ನೀನು ಮನ್ಮಥ ನೀನೇ ಕಣೋ ಮಾವ
ನನ್ನಾಣೆ ನೀನು ಇಲ್ಲದೇನೆ ಯಾವುದು ಇಲ್ಲ ಕಣೋ
ಕಡಲಿನ ತೆರೆಯೊಳಗೆ ಒಂದು ಮುತ್ತಿನ ಕಥೆ ಐತೇ
ಕಥೆಯೆಲ್ಲ ಕೇಳೋಕೆ ನಂಗೆ ಬಿಡುವಿಲ್ಲ ನೀ ಹೋಗೇ ಹೋಗು
ಹೇ... ಮುತ್ತು ಕೊಡು ಮಾವ ಕಥೆ ಹೇಳಲಾರೆ ಯಾವ
ಅಯ್ಯೋ ಕಾಡಬೇಡ ಜೀವ ನೀ ಬೆನ್ನು ಬಿಡದ ದೆವ್ವ
ದೆವ್ವ ನಾ ಅಲ್ಲ ಕಣೋ ನಂಗೆ ನಿನ್ನಲ್ಲೇ ಲವ್ವು ಕಣೋ
ದೆವ್ವ ನಾ ಅಲ್ಲ ಕಣೋ ನಂಗೆ ನಿನ್ನಲ್ಲೇ ಲವ್ವು ಕಣೋ
ಚಾಲಾಕಿ ಅಂದಗಾತಿ ನೀನು ಬೀಸಿದ ಮಾಯಾ ಬಲೇ
ಕಡೆಗಣ್ಣ ಹೂವ ಬಾಣದಿಂದ ಪ್ರಾಣವ ಹಿಡಿದಿಯಲ್ಲೇ
ಮೀನಂಥ ಮೈಯ್ಯ ಮಾಟವ ಏನಂತ ಹೇಳಲಿ ಕಣೇ
ಜೇನಂತ ಚೆಂದುಟಿಯಲಿ ಮತ್ತೇರೋ ಮುತ್ತಿದೆ ಕಣೆ
-----------------------------------------------------------------------------------------------------------
ಟೈಗರ್ ಗಂಗು (೧೯೯೦) - ಓಹ್ ವೀರಯ್ಯಾ ಈರಯ್ಯಾ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ, ಕೋರಸ್
ಓ.. ಈರಯ್ಯಾ ವೀರಯ್ಯಾ ನಮಗೆ ಹೆಂಡಾನೇ ಹೆಂಡತಿಯು
ಪೂಜಾರಯ್ಯ ಬೇಜಾರಯ್ಯಾ ಪೂಜೆಗೆ ಬೇಕಯ್ಯ ಈ ತೀರ್ಥವು
ಕೊಟ್ಟೋನು ಕೊಡಂಗಿಯೋ ಕುಡಿದೋನು ಕಮಂಗಿಯೋ
ಕುಡಿಯೋಕೆ ಕಾಸಿಲ್ಲದೇ ಗುಂಡಿಗೆ ಪರದಾಡೋ ಭಟ್ಟಂಗಿಯು
ಓ.. ಈರಯ್ಯಾ ವೀರಯ್ಯಾ ನಮಗೆ ಹೆಂಡಾನೇ ಹೆಂಡತಿಯು
ಪೂಜಾರಯ್ಯ ಬೇಜಾರಯ್ಯಾ ಪೂಜೆಗೆ ಬೇಕಯ್ಯ ಈ ತೀರ್ಥವು
ಎದೆಗುಂಡಿಗೆ ಈ ಗುಂಡಿಗೆ ಕಂಗಾಲೇ ಆಗಿತ್ತಲೋ
ಚಂದ್ರನು ಕುಡಿದೋರಿಗೆ ಅಗಸದಾಗೆ ಎರಡೇರಡು ಕಾಣ್ತನಲ್ಲೋ
ಗುಂಡು ಗಮ್ಮತ್ತು ಕುಡಿದೋನಿಗೆ ಗೊತ್ತು ಜ್ಞಾನ ಇಲ್ಲಂದ್ರೂನು
ಮಾತು ನಿಯತ್ತು ತಪ್ಪಲ್ಲ ಎಂದು ಹೆಜ್ಜೆ ತಪ್ಪಾದ್ರೂನು
ಹೆಂಡವ ಕುಡಿದಾಗ ಜಾತಿಗೀತಿ ಎಲ್ಲಾನು ಒಂದೇ ಕಣೋ
ಸ್ವಾರ್ಥನೇ ಇಲ್ದೊನೋ ಭೂಮಿ ಮ್ಯಾಲೆ ಕುಡುಕ ಮಾತ್ರ ಕಣೋ
ಓ.. ಈರಯ್ಯಾ ವೀರಯ್ಯಾ ನಮಗೆ ಹೆಂಡಾನೇ ಹೆಂಡತಿಯು
ಪೂಜಾರಯ್ಯ ಬೇಜಾರಯ್ಯಾ ಪೂಜೆಗೆ ಬೇಕಯ್ಯ ಈ ತೀರ್ಥವು
ಊರಲ್ಲಿ ನೀರಿಲ್ಲದೇಲೇ ಸಾಯೋಕಿಂತ ಸಾರಾಯಿ ತಂಪೈತಲ್ಲೋ
ಸಾಯೋರಗೇ ಸಾರಾಯಿನೇ ಸಂಜೀವಿನಿ ಡಾಕ್ಟರೇನೇ ಹೇಳ್ಯಾರಲ್ಲೋ
ಹೆಂಡ ಒಂದಿದ್ರೇ ಬೇರೇನೂ ಬೇಕು ಮೈಯ್ಯು ಹಗುರಾಗಲು
ಹುಂಡಿ ಕಾಸೆಲ್ಲಾ ಇಲ್ಲೇನೇ ಹಾಕು ಸ್ವರ್ಗ ಕೈಯ್ಯ ಸೇರಲೂ
ಹಳ್ಳನು ದಿಣ್ಣೆನೂ ಹೋದಾಗ ಎಲ್ಲಾನು ಒಂದಾಗೈತೆ
ಕಣ್ಣಿಗೆ ಕಾಣದೇನೆ ಮೋರಿಯಾಗೇ ಲಾರಿ ಸಿಕ್ಕಾಗೈತೆ
ಓ.. ಈರಯ್ಯಾ ವೀರಯ್ಯಾ ನಮಗೆ ಹೆಂಡಾನೇ ಹೆಂಡತಿಯು
ಪೂಜಾರಯ್ಯ ಬೇಜಾರಯ್ಯಾ ಪೂಜೆಗೆ ಬೇಕಯ್ಯ ಈ ತೀರ್ಥವು
ಕೊಟ್ಟೋನು ಕೊಡಂಗಿಯೋ ಕುಡಿದೋನು ಕಮಂಗಿಯೋ
ಕುಡಿಯೋಕೆ ಕಾಸಿಲ್ಲದೇ ಗುಂಡಿಗೆ ಪರದಾಡೋ ಭಟ್ಟಂಗಿಯು
ಓ.. ಈರಯ್ಯಾ ವೀರಯ್ಯಾ ನಮಗೆ ಹೆಂಡಾನೇ ಹೆಂಡತಿಯು
ಪೂಜಾರಯ್ಯ ಬೇಜಾರಯ್ಯಾ ಪೂಜೆಗೆ ಬೇಕಯ್ಯ ಈ ತೀರ್ಥವು
---------------------------------------------------------------------------------------------------------
ಟೈಗರ್ ಗಂಗು (೧೯೯೦) - ಕಂದಮ್ಮಾ ಕಣ್ಮಣಿಯೇ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ, ಕೋರಸ್
ಕಂದಮ್ಮಾ ಕಂದಮ್ಮಾ ಕಣ್ಮಣಿಯೆ ಎಲ್ಲಿಗೂ ಹೋಗದಿರು
ನನ್ನಿಂದ ದೂರಕೆ ಹೋದರೆ ನೀ ಯಾರಿಲ್ಲ ನನ್ನವರು
ಕಾಣದ ತಂದೆಯ ನೀನು ಹುಡುಕುತ್ತ ಹೋಗುವೆ ಏನೂ
ಆಸರೆ ನಿನಗಾಗಿ ನಾನಿಲ್ಲವೇನು
ಕಂದಮ್ಮಾ ಕಂದಮ್ಮಾ ಕಣ್ಮಣಿಯೆ ಎಲ್ಲಿಗೂ ಹೋಗದಿರು
ನನ್ನಿಂದ ದೂರಕೆ ಹೋದರೆ ನೀ ಯಾರಿಲ್ಲ ನನ್ನವರು
ಕೇಳೋ ಕಂದ ಹಾರೋ ಹಕ್ಕಿಯ ತಂದೆ ಯಾರಮ್ಮಾ
ನೋಡೋ ಕಂದ ಈ ಹೂವಿಗೆ ತಾಯಿ ಯಾರಮ್ಮಾ
ನಮ್ಮ ಅಮ್ಮ ಭೂತಾಯಿ ನಮ್ಮ ತಂದೆ ಭಗವಂತ
ಅನ್ನ ಗಾಳಿ ನೀರು ಜೀವಕೆ ನೀಡುವವ ಯಾರು
ಕಾಣದಂತೆ ಸದಾ ನಮ್ಮನು ಕಾಯುತಿಹ ದೇವರು
ಕಂದಮ್ಮಾ ಕಂದಮ್ಮಾ ಕಣ್ಮಣಿಯೆ ಎಲ್ಲಿಗೂ ಹೋಗದಿರು
ನನ್ನಿಂದ ದೂರಕೆ ಹೋದರೆ ನೀ ಯಾರಿಲ್ಲ ನನ್ನವರು
ಹರಿವ ನದಿಯು ತಂದೆ ಯಾರು ಎಂದು ಕೇಳೀತೆ
ಸಾಗೋ ದಾರಿ ಮುಂದೆ ಇರಲು ಹಿಂದೆ ಬಂದಿತೇ
ನಮ್ಮ ಬದುಕು ಇಲ್ಲೇನೇ ಬೇರೆ ಏನು ನಾ ಕಾಣೆ
ಕಂದ ನಿನ್ನ ಬಾಳ ಹಾದಿಗೆ ಹೂವು ಹಾಸಲೆಂದು
ಪ್ರತಿದಿನ ನನ್ನ ಕೋರಿಕೆ ನಗುತಿರು ಎಂದು
ಕಂದಮ್ಮಾ ಕಂದಮ್ಮಾ ಕಣ್ಮಣಿಯೆ ಎಲ್ಲಿಗೂ ಹೋಗದಿರು
ನನ್ನಿಂದ ದೂರಕೆ ಹೋದರೆ ನೀ ಯಾರಿಲ್ಲ ನನ್ನವರು
ಕಾಣದ ತಂದೆಯ ನೀನು ಹುಡುಕುತ್ತ ಹೋಗುವೆ ಏನೂ
ಆಸರೆ ನಿನಗಾಗಿ ನಾನಿಲ್ಲವೇನು
ಕಂದಮ್ಮಾ ಕಂದಮ್ಮಾ ಕಣ್ಮಣಿಯೆ ಎಲ್ಲಿಗೂ ಹೋಗದಿರು
------------------------------------------------------------------------------------------------------------
ಟೈಗರ್ ಗಂಗು (೧೯೯೦) - ನಾನೇನೇ ಹಂಟರವಾಲಿ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ವಿ.ಮನೋಹರ, ಗಾಯನ : ಬಿ.ಆರ್.ಛಾಯಾ, ಕೋರಸ್
ನಾನೇನೇ ಹಂಟರವಾಲೀ ನಾ ಬಂದ್ರೇ ಸುಂಟರಗಾಳಿ
ಮಳೆಯೇನು... ಹೇ... ಚಳಿಯೇನು... ಹೇ...
ಕುಚುಗುಳಿ ಇಟ್ಟು ಇಟ್ಟರೆ ಕೈಯ್ಯ ಒಳಗಿನ ಗುಟ್ಟು ಬಟ್ಟಬಯಲು
ನಾನೇನೇ ಹಂಟರವಾಲೀ ನಾ ಬಂದ್ರೇ ಸುಂಟರಗಾಳಿ
ಮಳೆಯೇನು... ಹೇ... ಚಳಿಯೇನು... ಹೇ...ಹೇ
ಕುಚುಗುಳಿ ಇಟ್ಟು ಇಟ್ಟರೆ ಕೈಯ್ಯ ಒಳಗಿನ ಗುಟ್ಟು ಬಟ್ಟಬಯಲು
ಮಾಗಿದ ಹಣ್ಣಂತಿರುವ ಹೆಣ್ಣನ್ನು ಕಂಡು ಏನಿದು ಒಂದೇ ಸಮನೇ ಏರಿದೇ ಗುಂಡು
ಗುಂಡಿಗೆ ಬೀಳೋ ಗಂಡಿಗೆ ಸಿಕ್ಕದ ಕೆಂಡಸಂಪಿಗೆ
ಇಲ್ಲಿದೇ ... ಇಲ್ಲಿದೇ ... ಸ್ವರ್ಗದ ಬಾಗಿಲು
ನಾನೇನೇ ಹಂಟರವಾಲೀ ನಾ ಬಂದ್ರೇ ಸುಂಟರಗಾಳಿ
ಮಳೆಯೇನು... ಹೇ... ಚಳಿಯೇನು... ಹೇ...ಹೇ
ಕುಚುಗುಳಿ ಇಟ್ಟು ಇಟ್ಟರೆ ಕೈಯ್ಯ ಒಳಗಿನ ಗುಟ್ಟು ಬಟ್ಟಬಯಲು
ಕಾಡಲ್ಲಿ ಬೇಟೆಯನಾಡಿ ಬೇಸರವಾಗಿ
ನಾಡಿಗೆ ಬಂದರೇ ಇಲ್ಲಿ ಏನಿದು ಸುಗ್ಗಿ
ಎಲ್ಲವೂ ನನ್ನ ಬಗಲಿಗೆ ದೋಚುವೆ ಬಾಚಿ ಮೆಲ್ಲಗೆ
ಹುಡುಕುವ ಬಳ್ಳಿಯೇ ತಗುಲಿದೆ ಮೈಯ್ಯಿಗೇ
ನಾನೇನೇ ಹಂಟರವಾಲೀ ನಾ ಬಂದ್ರೇ ಸುಂಟರಗಾಳಿ
ಮಳೆಯೇನು... ಹೇ... ಚಳಿಯೇನು... ಹೇ...ಹೇ
ಕುಚುಗುಳಿ ಇಟ್ಟು ಇಟ್ಟರೆ ಕೈಯ್ಯ ಒಳಗಿನ ಗುಟ್ಟು ಬಟ್ಟಬಯಲು
----------------------------------------------------------------------------------------------------------
No comments:
Post a Comment