1831. ಪುಂಡರಗಂಡ (೧೯೯೦)

ಪುಂಡರಗಂಡ ಚಲನಚಿತ್ರದ ಹಾಡುಗಳು 
  1. ಆನಂದ ಇಂಥ ಆನಂದ 
  2. ಹೆಣ್ಣ ನೋಡಿ ಕಣ್ಣ ನೋಡಿ 
  3. ನಿನ್ನ ಬಿಟ್ಟೋರುಂಟನೇ 
  4. ಯಾರಿಗೇ ಕೊಡಬೇಕು 
  5. ನವನೀತ ಚೋರ 
ಪುಂಡರಗಂಡ (೧೯೯೦) - ಆನಂದ ಇಂಥ ಆನಂದ 
ಸಂಗೀತ : ಸತ್ಯಂ, ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ, ಕೋರಸ್ 

ಆನಂದ ಇಂಥ ಆನಂದ 
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೇನೂ ನನ್ನಾಣೆ ನಾ ಕಾಣೇನೂ 
(ಹಾಡಲೇ ನಾವು ಕಾಡಲೇ ನೋಡಲೇ ನಾವು ಈಗಲೇ)
ಆನಂದ ಇಂಥ ಆನಂದ 
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೇನೂ ನನ್ನಾಣೆ ನಾ ಕಾಣೇನೂ 
 
ಗಾಳಿಯಲೀ ಸೂಯ್ ಸೂಯ್ ಸೂಯ್   ದುಂಬಿಗಳ ಗುಯ್ ಗುಯ್ ಗುಯ್ 
ಕಣ್ಣುಗಳು ಧೀಮ್ ಧೀಮ್ ಧೀಮ್ ಮೈಯಲ್ಲಿ ಜೂಮ್ಮ್ ಜೂಮ್ಮ್ ಜೂಮ್ಮ್ 
ಈ ಅಂದಕ್ಕೆ ಈ ಅಂದಕ್ಕೆ ನಾ ಸೋತೆನೇ... ನಾ ಸೋತೇನೇ 
ಈ ಅಂದಕೆ ನಾ ಸೋತೇನೇ 
ಆನಂದ ಇಂಥ ಆನಂದ 
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೇನೂ ನನ್ನಾಣೆ ನಾ ಕಾಣೇನೂ 
 
ಕಾಡುತಿರೆ ಈ ಪ್ರಾಯ ಕೇಳುತಿರೆ ಹೊಸ ವಿಷಯ 
ನಾ ತಾಳೆ ಮೈಯ್ಯ ಬಿಸಿಯ ನಾ ಕಾಣೆ ನೆಮ್ಮದಿಯ 
ಕಾಡುತಿರೆ ಈ ಪ್ರಾಯ ಕೇಳುತಿರೆ ಹೊಸ ವಿಷಯ 
ನಾ ತಾಳೆ ಮೈಯ್ಯ ಬಿಸಿಯ ನಾ ಕಾಣೆ ನೆಮ್ಮದಿಯ 
ಈ ವೇದನೇ ಈ ವೇದನೇ ನಾ ತಾಳೇನೇ ನಾ ತಾಳೇನೇ 
ಈ ವೇದನೇ ನಾ ತಾಳೇನೇ 
ಆನಂದ ಇಂಥ ಆನಂದ 
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೇನೂ ನನ್ನಾಣೆ ನಾ ಕಾಣೇನೂ 
---------------------------------------------------------------------------------------------------------
  
ಪುಂಡರಗಂಡ (೧೯೯೦) - ಹೆಣ್ಣ ನೋಡಿ ಕಣ್ಣ ನೋಡಿ 
ಸಂಗೀತ : ಸತ್ಯಂ, ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ, 

ಹೆಣ್ಣ ನೋಡಿ ಕಣ್ಣ ನೋಡಿ ತುಂಬಿಕೊಂಡ ಮೈಯ್ಯ ನೋಡಿ 
ಮನದಲ್ಲಿ ನಿನಗಾಸೆ ಬರಲಿಲ್ಲವೇ ಅಯ್ಯೋ ರಾಮ ಸೀತಾರಾಮ 
ಅಯ್ಯೋ ರಾಮ ಸೀತಾರಾಮ 
ಹೆಣ್ಣ ನೋಡಿ ಕಣ್ಣ ನೋಡಿ ತುಂಬಿಕೊಂಡ ಮೈಯ್ಯ ನೋಡಿ 
ಮನದಲ್ಲಿ ನಿನಗಾಸೆ ಬರಲಿಲ್ಲವೇ ಅಯ್ಯೋ ರಾಮ ಸೀತಾರಾಮ 
ಅಯ್ಯೋ ರಾಮ ಸೀತಾರಾಮ 

ಹಸಿವಿಲ್ಲ ಏಕೋ ನಿದ್ರೇ ಬರದು ಏಕೋ ಹೊರಳುವೇನು ಇರುಳೆಲ್ಲವೂ 
ಜೊತೆಗಾರರನನ್ನು ಹುಡುಕಾಡಿ ನಾನು ನರಳುವೆನು ದಿನವೆಲ್ಲವೂ 
ಸವಿಯಾದ ಮಾತಿಲ್ಲ ಹಿತವಾದ ಜೊತೆಯಿಲ್ಲ ನಿನಗೇಕೆ ಅರಿವಿಲ್ಲ... 
ಹೆಣ್ಣ ನೋಡಿ ಕಣ್ಣ ನೋಡಿ ತುಂಬಿಕೊಂಡ ಮೈಯ್ಯ ನೋಡಿ 
ಮನದಲ್ಲಿ ನಿನಗಾಸೆ ಬರಲಿಲ್ಲವೇ ಅಯ್ಯೋ ರಾಮ ಸೀತಾರಾಮ 
ಅಯ್ಯೋ ರಾಮ ಸೀತಾರಾಮ 

ವಯಸ್ಸಾಯ್ತು ನನಗೆ ಬಿಗಿಯಾಯ್ತು ರವಿಕೆ ಎದೆಯಲ್ಲಿ ಹೊಸತಾಳವು 
ಸಿಹಿ ಇರದ ಬೆಲ್ಲ ಕಹಿಯಾಗಿ ಎಲ್ಲ ಬದುಕಲ್ಲಿ ಸುಖ ಕಾಣೇನೂ 
ಕಿವುಡಾಗಿ ಹೋದೋನೇ  ಕುರುಡಾಗಿ ನಿಂತೋನೆ ನಿನ್ನ ಹಿಂದೆ ನಾ ಬಂದೇನೇ.... 
ಹೆಣ್ಣ ನೋಡಿ ಕಣ್ಣ ನೋಡಿ ತುಂಬಿಕೊಂಡ ಮೈಯ್ಯ ನೋಡಿ 
ಮನದಲ್ಲಿ ನಿನಗಾಸೆ ಬರಲಿಲ್ಲವೇ ಅಯ್ಯೋ ರಾಮ ಸೀತಾರಾಮ 
ಅಯ್ಯೋ ರಾಮ ಸೀತಾರಾಮ 
ಹೆಣ್ಣ ನೋಡಿ ಕಣ್ಣ ನೋಡಿ ತುಂಬಿಕೊಂಡ ಮೈಯ್ಯ ನೋಡಿ 
ಮನದಲ್ಲಿ ನಿನಗಾಸೆ ಬರಲಿಲ್ಲವೇ ಅಯ್ಯೋ ರಾಮ ಸೀತಾರಾಮ 
ಅಯ್ಯೋ ರಾಮ ಸೀತಾರಾಮ  ಅಯ್ಯೋ ರಾಮ ಸೀತಾರಾಮ 
ಅಯ್ಯೋ ರಾಮ ಸೀತಾರಾಮ ಅಯ್ಯೋ ರಾಮ ಸೀತಾರಾಮ 
-----------------------------------------------------------------------------------------------------------
  
ಪುಂಡರಗಂಡ (೧೯೯೦) - ನಿನ್ನ ಬಿಟ್ಟೋರುಂಟನೇ 
ಸಂಗೀತ : ಸತ್ಯಂ, ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ 

ಹೇಯ್.. ನಿನ್ನ ಬಿಟ್ಟೋರುಂಟೇ ಬಿಟ್ಟು ಕೆಟ್ಟೋರುಂಟೇ 
ಕೆಟ್ಟು ಅತ್ತೋರುಂಟೇ ಚೆನ್ನ ನನ್ನ ಚೆನ್ನ ಹೇಳೋ ರನ್ನ 
ಹೇ.. ನಿನ್ನ ಬಿಟ್ಟೋರುಂಟೇ ಬಿಟ್ಟು ಕೆಟ್ಟೋರುಂಟೇ 
ಕೆಟ್ಟು ಅತ್ತೋರುಂಟೇ ಚೆನ್ನ ನನ್ನ ಚೆನ್ನ ಹೇಳೋ ರನ್ನ 
 
ಬೇಡವೇ ಹೆಣ್ಣು ಬೇಡವೇ ಇನ್ನೂ ಮೌನವೇ ಓ ವೀರ... 
ಬೇಡವೇ ಹೆಣ್ಣು ಬೇಡವೇ ಇನ್ನೂ ಮೌನವೇ ಓ ವೀರ... 
ನಿನ್ನ ಈ ದೇಹಕ್ಕೆ ತಂಪು ನೀಡೋದಕ್ಕೆ 
ನಿನ್ನ ಈ ದೇಹಕ್ಕೆ ತಂಪು ನೀಡೋದಕ್ಕೆ ಬಂದನೋ ಪಕ್ಕಕ್ಕೆ ಬಾರಯ್ಯಾ 
ಪ್ರೀತಿ ಮಾತೇ ಇಲ್ಲ ಮನದಿ ಆಸೇ ಇಲ್ಲ ನೀನು ಗಂಡೇ ಅಲ್ಲ ಹೋಗೋ ಗುಂಡಯ್ಯ... 
ಹೇ.. ನಿನ್ನ ಬಿಟ್ಟೋರುಂಟೇ ಬಿಟ್ಟು ಕೆಟ್ಟೋರುಂಟೇ 
ಕೆಟ್ಟು ಅತ್ತೋರುಂಟೇ ಚೆನ್ನ ನನ್ನ ಚೆನ್ನ ಹೇಳೋ ರನ್ನ 

ಬಂದರೇ ಈಗ ಬಂದರೆ ನಿನಗೆ ತೊಂದರೇ ಓ ಹೆಣ್ಣೇ 
ಬಂದರೇ ಈಗ ಬಂದರೆ ನಿನಗೆ ತೊಂದರೇ ಓ ಹೆಣ್ಣೇ 
ಸ್ನೇಹ ನನ್ನಲುಂಟು ಮೋಹ ನನ್ನಲುಂಟು 
ಸ್ನೇಹ ನನ್ನಲುಂಟು ಮೋಹ ನನ್ನಲುಂಟು 
ದಾಹ ನನ್ನಲುಂಟು ಮಣ್ಣ ಹಾಸಿಗೆ ಸಾಕು ಗಾದಿ ಹೊದ್ದಿಗೆ ಸಾಕು 
ನೀನು ಇದ್ದರೇ ಸಾಕು ಬಾರೇ ವಯ್ಯಾರೀ...  
ಹೇಯ್.. ನಿನ್ನ ಬಿಟ್ಟೋರುಂಟೇ ಬಿಟ್ಟು ಕೆಟ್ಟೋರುಂಟೇ 
ಕೆಟ್ಟು ಅತ್ತೋರುಂಟೇ ಚೆನ್ನ ನನ್ನ ಚೆನ್ನ ಹೇಳೋ ರನ್ನ 
ಹೇ.. ನಿನ್ನ ಬಿಟ್ಟೋರುಂಟೇ ಬಿಟ್ಟು ಕೆಟ್ಟೋರುಂಟೇ 
ಕೆಟ್ಟು ಅತ್ತೋರುಂಟೇ ಚೆನ್ನ ನನ್ನ ಚೆನ್ನ ಹೇಳೋ ರನ್ನ 
----------------------------------------------------------------------------------------------------------
  
ಪುಂಡರಗಂಡ (೧೯೯೦) - ಯಾರಿಗೇ ಕೊಡಬೇಕು 
ಸಂಗೀತ : ಸತ್ಯಂ, ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ, 

ಯಾರಿಗೇ ಕೋಡಬೇಕು ನಾ ಯಾರಿಗೇ ಕೋಡಬೇಕು 
ಜುಮ್ ಎನ್ನಿಸಿ ಮೈಯ್ಯಲ್ಲಿ ಬಿಸಿಯ ತುಂಬೋ ಈ ಮುತ್ತನು ನಿನಗೇ ನಿನಗೇ 
ಯಾರಿಗೇ ಕೋಡಬೇಕು ನಾ ಯಾರಿಗೇ ಕೋಡಬೇಕು 
ಜುಮ್ ಎನ್ನಿಸಿ ಮೈಯ್ಯಲ್ಲಿ ಬಿಸಿಯ ತುಂಬೋ ಈ ಮುತ್ತನು ನಿನಗೇ ನಿನಗೇ 

ವಯಸ್ಸಾದ ಮೇಲೆ ಇಂಥ ಚಪಲ ಗಿಪಲ ಬರದಲ್ಲ 
ಮನಸ್ಸಾದ ಮೇಲೆ ಸಿಕ್ಕ ಗೆಳೆಯ ನಿನಗೆ ಸರಿಯಲ್ಲ 
ಹದಿನಾರ ಪ್ರಾಯ ಇನ್ನೂ ಯಾರ ಸ್ನೇಹ ಕಂಡಿಲ್ಲ 
ಬಳಿ ಬಾರೇ ಎಂದು ನನ್ನ ಯಾರೂ ಇನ್ನೂ ಕೂಗಿಲ್ಲ 
ನಿನಗಾಗಿಯೇ ಬಂದೆ ನಾ ಇಲ್ಲಿ ನೀ ರಾಜ ಬಾ ಇಲ್ಲಿ 
ನಿನಗಾಗಿಯೇ ಬಂದೆ ನಾ ಇಲ್ಲಿ ನೀ ರಾಜ ಬಾ ಇಲ್ಲಿ 
ಯಾತಕೆ ಬಿಡಬೇಕು ನೀ ಏತಕೆ ಬಿಡಬೇಕು 
ಜುಮ್ಮ ಎನಿಸೋ ಹೆಣ್ಣಿನ ತುಟಿಯ ಸಿಹಿಯ ಈ ಮುತ್ತನು ನಿನಗೆ ನಿನಗೆ 

ತೋಳಿಂದ ತನುವ ಬಳಸಿ ಕೊಡುವೆ ಹರುಷ ದಿನವೆಲ್ಲ 
ಒಳಗಿಂದ ಚೆಲುವೇ ತರುವ ಸುಖವ ಮೆರೆಯೇ ಬಾಳೆಲ್ಲ 
ಹೂ ಮಂಚ ಹಾಸಿ ನಿನಗೆ ಹಾಡಿ ಹಾಡಿ ಇರುಳೆಲ್ಲ 
ಹೊಸ ಆಟ ಹೇಳಿಕೊಡುವೇ ನೀನು ಸಾಕು ಏನಲ್ಲ 
ಸುಖ ಬೇಡುವೇ ಹೇಳು ನೀನೀಗ ಬೇಕೆಂದರೇ ಬಾ ಬೇಗ 
ಸುಖ ಬೇಡುವೇ ಹೇಳು ನೀನೀಗ ಬೇಕೆಂದರೇ ಬಾ ಬೇಗ 
ಯಾರಿಗೇ ಕೋಡಬೇಕು ನಾ ಯಾರಿಗೇ ಕೋಡಬೇಕು 
ಜುಮ್ ಎನ್ನಿಸಿ ಮೈಯ್ಯಲ್ಲಿ ಬಿಸಿಯ ತುಂಬೋ ಈ ಮುತ್ತನು ನಿನಗೇ ನಿನಗೇ 
ಯಾರಿಗೇ ಕೋಡಬೇಕು ನಾ ಯಾರಿಗೇ ಕೋಡಬೇಕು 
ಜುಮ್ ಎನ್ನಿಸಿ ಮೈಯ್ಯಲ್ಲಿ ಬಿಸಿಯ ತುಂಬೋ ಈ ಮುತ್ತನು ನಿನಗೇ ನಿನಗೇ 
----------------------------------------------------------------------------------------------------------
  
ಪುಂಡರಗಂಡ (೧೯೯೦) - ನವನೀತ ಚೋರ 
ಸಂಗೀತ : ಸತ್ಯಂ, ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ, ಕೋರಸ್, ಎಸ್.ಪಿ.ಬಿ  

ನವನೀತ ಚೋರ ನೀನಲ್ಲವೇ ಕೃಷ್ಣ ಗೋಪಾಲ ಗೋವಿಂದ ನೀ ನಲ್ಲವೇ 
ನವನೀತ ಚೋರ ನೀನಲ್ಲವೇ ಕೃಷ್ಣ ಗೋಪಾಲ ಗೋವಿಂದ ನೀ ನಲ್ಲವೇ 

ಬೆಣ್ಣೆಯ ಕದ್ದ ತುಂಟನ ಹೊಗಳಿ ಕೃಷ್ಣನ ಲೀಲೆ ಎನ್ನುತಿರಲೀ 
ನುಡಿಸಿದ ಕೊಳಲಿನ ನಾದವ ಕೇಳಿ ಮುರುಳಿ ಲೋಲ ಎನ್ನುತಲಿ 
ಗುಡಿ ಗೋಪುರವ ಕಟ್ಟಿರು ನಿನ್ನನ್ನೂ ಪೂಜಿಸಿ ಹಾಡಿದರು 
ನವನೀತ ಚೋರ ನೀನಲ್ಲವೇ ಕೃಷ್ಣ ಗೋಪಾಲ ಗೋವಿಂದ ನೀ ನಲ್ಲವೇ 
ನವನೀತ ಚೋರ ನೀನಲ್ಲವೇ ಕೃಷ್ಣ ಗೋಪಾಲ ಗೋವಿಂದ ನೀ ನಲ್ಲವೇ 

ದೇವರಿಗೇಕೆ ಬಂಗಾರ ಸಾಕು ಈ ತುಳುಸಿ ಹಾರ  
ಕೃಷ್ಣನಿಗೇಕೋ ಮಡಿ ಹಾರ ಬರಿ ಭಕ್ತಿಯೇ ಅವನಿಗೆ ಸಿಂಗಾರ 
ದೇವಕಿ ಕಂದ ಸಹಜಾನಂದ 
ದೇವಕಿ ಕಂದ ಸಹಜಾನಂದ ಎಂದೆಂದೂ ಸುಂದರ ಚಂದಿರ 
ನವನೀತ ಚೋರ ನೀನಲ್ಲವೇ ಕೃಷ್ಣ ಗೋಪಾಲ ಗೋವಿಂದ ನೀ ನಲ್ಲವೇ 
ನವನೀತ ಚೋರ ನೀನಲ್ಲವೇ ಕೃಷ್ಣ ಗೋಪಾಲ ಗೋವಿಂದ ನೀ ನಲ್ಲವೇ 
ನವನೀತ ಚೋರ ನೀನಲ್ಲವೇ ಕೃಷ್ಣ ಗೋಪಾಲ ಗೋವಿಂದ ನೀ ನಲ್ಲವೇ 
ನವನೀತ ಚೋರ ನೀನಲ್ಲವೇ ಕೃಷ್ಣ ಗೋಪಾಲ ಗೋವಿಂದ ನೀ ನಲ್ಲವೇ 
-----------------------------------------------------------------------------------------------------------

No comments:

Post a Comment