1832. ಎದುರ್ ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ (೧೯೯೨)

ಎದುರ್ ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ ಚಲನಚಿತ್ರದ ಹಾಡುಗಳು
  1. ಅಮ್ಮಯ್ಯಾ ಅಮ್ಮಯ್ಯಾ
  2. ಮೇಘವು ಹರಸಿದೇ
  3. ಕಣ್ಣು ಬಿಟ್ಟು ಕಣ್ಣು ಬಿಟ್ಟು
  4. ಲಂಬ ಚಿಕ್ಕ
  5. ಏಕ್ ದೋ ತೀನ್
ಎದುರ್ ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ (೧೯೯೨) - ಅಮ್ಮಯ್ಯಾ ಅಮ್ಮಯ್ಯಾ
ಸಂಗೀತ : ರಾಜಕೋಟಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಮಂಜುಳಾಗುರುರಾಜ

ಅಮ್ಮಯ್ಯ ದಮ್ಮಯ್ಯ ಬಾಗಿಲು ತೆಗೆಯಮ್ಮ ರಾಧಮ್ಮಾ ಮುನಿಸಿದು ಏಕಮ್ಮಾ
ತಪ್ಪಾಯಿತು ಇನ್ನೂ ಮುನಿಸೆನ್ನ ಚಿಲಕವ ತೆಗಿ ಚಿನ್ನ ಚಿನ್ನ 
ಅಂಗಳವೇ ಮಂಚವು ಆಕಾಶ ಹೊದಿಕೆಯು ನಿಂಗೆ ಇಂದು ನೀ ಕೇಳಯ್ಯಾ 
ನಾಟಕ ಸಾಕಯ್ಯ ನೀ ಆಚೆ ನಿಲ್ಲಯ್ಯ ಕೃಷ್ಣಯ್ಯ ಮನ್ನಿಸೆ ಹೋಗಯ್ಯಾ... ಓ... 
ಬೀದಿ ಬೀದಿ ಅಲೆದು ನೊಂದು ಬಂದಿರುವೆ 
ಕರುಣೆ ಬಾರದೇ ಫಸ್ಟ್ ಟೈಮು ಎಂದು ಬಾಗಿಲನು ತೆರೆಯಬಾರದೆ 

ಮೊಸಳೆಯ ಕಣ್ಣೀರು ನಂಬೆನು ನಾ ನಾಯಿ ಬಾಲ ಡೋಂಕೆಂದು ಬಲ್ಲೆನು ನಾ 
ಮೊಸಳೆಯ ಕಣ್ಣೀರು ನಂಬೆನು ನಾ ನಾಯಿ ಬಾಲ ಡೋಂಕೆಂದು ಬಲ್ಲೆನು ನಾ 
ಹೆಣ್ಣಿಗಿಂತ ಛಲವು ಯಾಕೇ ರಾಧಮ್ಮಾ ನನ್ನ ಮೇಲೆ ಮುನಿಸು ಏಕೇ ಹೇಳಮ್ಮಾ 
ಹೆಣ್ಣಿಗಿಂತ ಛಲವು ಯಾಕೇ ರಾಧಮ್ಮಾ ನನ್ನ ಮೇಲೆ ಮುನಿಸು ಏಕೇ ಹೇಳಮ್ಮಾ 
ಅಂಗಳವೇ ಮಂಚವು ಆಕಾಶ ಹೊದಿಕೆಯು ನಿಂಗೆ ಇಂದು ನೀ ಕೇಳಯ್ಯಾ 
ಅಮ್ಮಯ್ಯ ದಮ್ಮಯ್ಯ ಬಾಗಿಲು ತೆಗೆಯಮ್ಮ ರಾಧಮ್ಮಾ ಮುನಿಸಿದು ಏಕಮ್ಮಾ 
 
ಹೆಣ್ಣು ಎಂದು ಮಮತೆ ರೂಪ ಮನೆಯ ದೀಪ ಮುದ್ದು ರಾಧಿಕಾ 
ಕಣ್ಣ ನೀರು ಕಂಡು ಕರಗಿ ಚಿಲಕ ತೆಗೆಯೇ ಓನರ್ ಬಾಲಿಕ 
ಬೆಣ್ಣೆ ಹಚ್ಚಿ ಫಲವು ಏನು ಇಲ್ಲ ಕೃಷ್ಣ ನಿನ್ನ ಆಟವು ಸಾಗೋದಿಲ್ಲ 
ಬೆಣ್ಣೆ ಹಚ್ಚಿ ಫಲವು ಏನು ಇಲ್ಲ ಕೃಷ್ಣ ನಿನ್ನ ಆಟವು ಸಾಗೋದಿಲ್ಲ 
ಹಾಕಿದ ಗೀಟನ್ನು ದಾಟೋದಿಲ್ಲ ಲೇಟಾಗಿ ಇನ್ನೆಂದೂ ನಾ ಬರೋಲ್ಲ 
ಹಾಕಿದ ಗೀಟನ್ನು ದಾಟೋದಿಲ್ಲ ಲೇಟಾಗಿ ಇನ್ನೆಂದೂ ನಾ ಬರೋಲ್ಲ 
ಈ ಸಾರೀ ಎಸ್ಕ್ಯೂಸ್ ಮತ್ತೊಮ್ಮೆ ನೋ ಯುಸೂ ಬಾ ಬಾ ಒಳಗೆ ಓ ಕೃಷ್ಣಯ್ಯ... 
ಅಮ್ಮಮ್ಮಾ ಸಾಕಮ್ಮಾ ನಿಂಗಡ ಬಿದ್ದಮ್ಮ ರಾಧಮ್ಮಾ 
ಚೆಲುವಿನ ಚೆನ್ನಮ್ಮಾ ಅಂದದಲಿ ನಿನ್ನ ಸಾಟಿಯಿಲ್ಲ 
ನಿನ್ನಂತಹ ಹುಡುಗಿ ಎಲ್ಲೂ ಇಲ್ಲ 
ಹೊಗಳಿಕೆ ಸಾಕಿನ್ನೂ ಈ ಡೋರು ಓಪನ್ನೂ 
ಚುಪ್ ಛಾಪು ಹೋಗು ಒಳಗೆ ಇನ್ನೂ  ಓಕೇ ಮೇಡಂ 
-------------------------------------------------------------------------------------------------------------
  
ಎದುರ್ ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ (೧೯೯೨) - ಮೇಘವು ಹರಸಿದೇ 
ಸಂಗೀತ : ರಾಜಕೋಟಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಚಿತ್ರ 

ಮೇಘವು ಹರಿಸಿದೆ ಮುತ್ತನು ಸುರಿಸಿದೆ ಗಗನವು ಭೂಮಿಗೆ ತಂದಿತಿಂದು ಚುಂಬನ 
ಒಡಲಲಿ ಮೂಡಿತು ಹೊಸದೊಂದು ಕಂಪನ ಇದುವೇ ಸುಖದ ಕವನ 
ಮೇಘವು ಹರಿಸಿದೆ ಮುತ್ತನು ಸುರಿಸಿದೆ ಗಗನವು ಭೂಮಿಗೆ ತಂದಿತಿಂದು ಚುಂಬನ 

ಮೊದಲ ಸ್ಪರ್ಶದಿ ಎನಿತು ಹರ್ಷವು ಪ್ರೀತಿಗೆ ಮುನ್ನುಡಿಯು 
ಹೂವು ತನುವಲಿ ಚಿಮ್ಮೊ ಆಸೆಗೆ ಕಣ್ಣೇ ಕನ್ನಡಿಯೂ 
ಏನೋ ಅನುಭವ ನೂತನ ಸುಖ ತಲ್ಲಣ ನಾ ಕಂಡೆ 
ನಿನ್ನ ಹೃದಯದ ಮಾಳಿಗೆ ಅಲ್ಲಿ ಬಾಡಿಗೆ ನಾ ತಂದೆ 
ತನವು ಮನಸ್ಸೂ ನಿನದೇ 
ಮೇಘವು ಹರಿಸಿದೆ ಮುತ್ತನು ಸುರಿಸಿದೆ 

ನಡುಗೋ ಒಡಲನು ತೋಳು ಬಳಸಿರೇ ಬೆಂಕಿ ಕಣಕಣದೆ 
ಸುಡುವ ತನುವಿಗೆ ತಂಪು ಎರೆಯಲು ಮಾರ್ಗ ಗೊತ್ತೇ ಇದೆ 
ಪಾಠ ಕಲಿಸಲು ಬಂದಳೇ ಸುಖ ತೊಂದರೆ ನೀ ತಂದೆ 
ಕಲಿತ ಪಾಠವು ಸಾಲದು ತೃಪ್ತಿ ನೀಡದು ನನಗಿಂದೇ ಜೊತೆಗೆ ಕಲಿವ ಬಳಿ ಬಾ... 
ಮೇಘವು ಹರಿಸಿದೆ ಮುತ್ತನು ಸುರಿಸಿದೆ 
------------------------------------------------------------------------------------------------------------
  
ಎದುರ್ ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ (೧೯೯೨) - ಕಣ್ಣು ಬಿತ್ತು ಕಣ್ಣು ಬಿತ್ತು  
ಸಂಗೀತ : ರಾಜಕೋಟಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಮಂಜುಳಾಗುರುರಾಜ 

ಕಣ್ಣು ಬಿತ್ತು ಕಣ್ಣು ಬಿತ್ತು ನಿನ್ನ ಮೈಯ್ಯ ಅಂದಕ್ಕೆ 
ಬ್ರೇಕು ಬಿತ್ತು ಬ್ರೇಕು ಬಿತ್ತು ಎದೆ ಹಾಕೋ ತಾಳಕ್ಕೆ 
ಕಣ್ಣು ಬಿತ್ತು ಕಣ್ಣು ಬಿತ್ತು ನಿನ್ನ ಮೈಯ್ಯ ಅಂದಕ್ಕೆ 
ಬ್ರೇಕು ಬಿತ್ತು ಬ್ರೇಕು ಬಿತ್ತು ಎದೆ ಹಾಕೋ ತಾಳಕ್ಕೆ 
ಮಾತಿನಲ್ಲಿ ಮೋಡಿ ಮಾಡಿ ನನ್ನ ಗೆದ್ದ ಅಂದಗಾರ 
ನೀ ಕೊಟ್ಟ ಮುತ್ತು ತಂದಿತ್ತು ಮತ್ತು ಕಾಲಲ್ಲಿ ಶಕ್ತಿಯಿಲ್ಲಾಯಿತು 
ಕಣ್ಣು ಬಿತ್ತು ಕಣ್ಣು ಬಿತ್ತು ನಿನ್ನ ಮೈಯ್ಯ ಅಂದಕ್ಕೆ 
ಬ್ರೇಕು ಬಿತ್ತು ಬ್ರೇಕು ಬಿತ್ತು ಎದೆ ಹಾಕೋ ತಾಳಕ್ಕೆ 

ಕಣ್ಣಲ್ಲಿ ಬಾ ಅಂತಾ ಸನ್ನೆ ಲಜ್ಜೇಲಿ ಕೆಂಪಾದ ಕೆನ್ನೆ 
ಹೇಳಿದೆ ಮೌನದೆ ಕಥೆಯೊಂದು 
ಮನಸ್ಸು ಹಾಡಿರೋ ರಾಗ ಕೆಂಡದ ಒಡಲ ವೇಗ 
ಹೇಳಿದೆ ಆಗು ಬಾ ಜೋತೆಯಲ್ಲೂ 

ತೋಳಿನಲಲಿ ಬಂದು ಬಿಡು ಒಂದು ಕೊಡು ಲಜ್ಜೆ ಬಿಡು 
ನನ್ನ ಮನದ ತೋಟದಲ್ಲಿ ಪ್ರೀತಿ ಲತೆ ನೆಟ್ಟು ಬಿಡು 
ಕುಂಕುಮ ಇಂದು ಬೆವರಿಂದ ಜಾರಿ ಬರೆದಿದೆ 
ಹೊಸದೊಂದು ರಸಕಾವ್ಯ ನೋಡಿ ದಿನ 
ಕಣ್ಣು ಬಿತ್ತು ಕಣ್ಣು ಬಿತ್ತು ನಿನ್ನ ಮೈಯ್ಯ ಅಂದಕ್ಕೆ 
ಬ್ರೇಕು ಬಿತ್ತು ಬ್ರೇಕು ಬಿತ್ತು ಎದೆ ಹಾಕೋ ತಾಳಕ್ಕೆ 

ಯೌವ್ವನ ಮೈಯಗೆ ಭಾರ ಆಸರೆ ನೀವೇ ತತ್ತಾರ ನಿನ್ನನೇ ನಂಬಿದೆ ನಾನಿಂದೂ 
ಮಲ್ಲಿಗೆ ಹೂವಿನ ಭಾರ ತಾಳದ ಕೋಮಲೆ ಭಾರ ನನ್ನಲ್ಲಿ ಸೇರು ಬಾ ನೀನೆಂದು 
ರಾತ್ರಿಯಲ್ಲಿ ಸ್ವಪ್ನದಲ್ಲಿ ಕಾಣುತ್ತಿದ್ದೆ ನಿನ್ನ ಮುಖ 
ಕೆಂದುಟಿಯ ಜೇನಿನಲ್ಲಿ ತುಂಬಿಹುದು ಸ್ವರ್ಗ ಸುಖ 
ಓ ದಿಲ್ದಾರ ನನ್ ಜಾದೂಗಾರ ಮರೆಯದ ಅನುಭವ ನಿನ್ನಿಂದಲೇ 
ಕಣ್ಣು ಬಿತ್ತು ಕಣ್ಣು ಬಿತ್ತು ನಿನ್ನ ಮೈಯ್ಯ ಅಂದಕ್ಕೆ 
ಬ್ರೇಕು ಬಿತ್ತು ಬ್ರೇಕು ಬಿತ್ತು ಎದೆ ಹಾಕೋ ತಾಳಕ್ಕೆ 
ಕಣ್ಣು ಬಿತ್ತು ಕಣ್ಣು ಬಿತ್ತು ನಿನ್ನ ಮೈಯ್ಯ ಅಂದಕ್ಕೆ 
ಬ್ರೇಕು ಬಿತ್ತು ಬ್ರೇಕು ಬಿತ್ತು ಎದೆ ಹಾಕೋ ತಾಳಕ್ಕೆ 
ಮಾತಿನಲ್ಲಿ ಮೋಡಿ ಮಾಡಿ ನನ್ನ ಗೆದ್ದ ಅಂದಗಾರ 
ನೀ ಕೊಟ್ಟ ಮುತ್ತು ತಂದಿತ್ತು ಮತ್ತು ಕಾಲಲ್ಲಿ ಶಕ್ತಿಯಿಲ್ಲಾಯಿತು 
ಕಣ್ಣು ಬಿತ್ತು ಕಣ್ಣು ಬಿತ್ತು ನಿನ್ನ ಮೈಯ್ಯ ಅಂದಕ್ಕೆ 
ಬ್ರೇಕು ಬಿತ್ತು ಬ್ರೇಕು ಬಿತ್ತು ಎದೆ ಹಾಕೋ ತಾಳಕ್ಕೆ 
------------------------------------------------------------------------------------------------------------
  
ಎದುರ್ ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ (೧೯೯೨) - ಲಂಬ ಚಿಕ್ಕ 
ಸಂಗೀತ : ರಾಜಕೋಟಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಮಂಜುಳಾಗುರುರಾಜ 

ಓ.. ಓ.. ಓ.. ಓ.. ಓ.. ಓ.. 
ಗಂಡು : ಹೋಯ್  ಲಂಬ ಚಿಕ್ಕ್ ಲಂಬ ಚಿಕ್ಕ್ ಲಂಬ ಚಿಕ್ಕ್ ಲಂಬ 
ಮಗು : ಹೇ ಲಂಬ್ ಚಿಕ್ಕ್  ಲಂಬ್ ಚಿಕ್ಕ್  ಲಂಬ್ ಚಿಕ್ಕ್  ಲಂಬ್ 
ಗಂಡು : ಹಳ್ಳಿ ದಿಲ್ಲಿ ಎಲ್ಲಿದ್ರೂ ಒಂದೇ ದುಡ್ಡೇ ದೊಡ್ಡಪ್ಪ ಕೇಳೋ ತಮ್ಮಾ... 
ಮಗು : ಖರ್ಚು ಮಾಡಿ ಬಚ್ಚಿಟ್ಟ ಗೂಟ ಜಾಣ ಕೇಳೋ ಮಂಕು ತಿಮ್ಮಾ... 
ಗಂಡು : ಈ ಮಾತು ಹೇಳೋ ನಾನು ಸರ್ವಜ್ಞನಲ್ಲ ಕೇಳೋ 
            ಹೋಯ್ ಈ ಮಾತು ಹೇಳೋ ನಾನು ಸರ್ವಜ್ಞನಲ್ಲ ಕೇಳೋ 
ಮಗು : ಈ ಸೃಷ್ಟಿ ಹೇಳೋ ಕೇಳಿ ನೀಶ್ಚಿಂತೆಯಿಂದ ಬಾಳೋ... 
ಗಂಡು : ಹೋಯ್  ಲಂಬ ಚಿಕ್ಕ್ ಲಂಬ ಚಿಕ್ಕ್ ಲಂಬ ಚಿಕ್ಕ್ ಲಂಬ 
ಮಗು : ಹೇ ಲಂಬ್ ಚಿಕ್ಕ್  ಲಂಬ್ ಚಿಕ್ಕ್  ಲಂಬ್ ಚಿಕ್ಕ್  ಲಂಬ್ 
             
ಗಂಡು : ಹಲ್ಲು ತಿಕ್ಕಿ ನಿಂತ್ಯಾ ವಸೂಲಿ ನಿಂದಲೇನೇ 
ಮಗು : ಬೂದಿಯಾದ್ರೂ ಒಳ್ಳೆದು ಇನ್ನೂರೀ.. 
ಗಂಡು : ಅಕ್ಕಿ ಬೆಳೆ ದಿನಸಿ ಅರೇ ಖರ್ಚು ನೀವು ಬಿಡಿಸಿ 
ಮಗು : ಸಂಪು ನೀರು ಕುಡಿದೂ ಬಾಳಿರೀ ... 
ಗಂಡು : ಪೆಟ್ರೋಲ್ ಖರ್ಚು ಏಕೇ ಓಡಾಡಿರೋ.. 
ಮಗು : ಪಕ್ಕದೋರ ಪೇಪರ್ ನೀವ್ ಓದಿರೋ... 
ಗಂಡು : ಪಾರ್ಕಲ್ಲಿ ಬಿಟ್ಟಿ ಸಿನಿಮಾ ನೀವ್ ನೋಡಿರೋ.. 
ಮಗು : ಬೀದಿಯ ದೀಪದಲ್ಲಿ ನೀವ್ ಓದಿರೋ.. 
ಹುಚ್ಚ : ಇಂಥ ಜುಗ್ಗ ಜೋಡಿ ಇನೇಲ್ಲೂ ಇಲ್ಲ ನೋಡಿ   
          ಹುಚ್ಚಾದೇ ನಾನೂ ಇದನ್ನೆಲ್ಲ ನೋಡಿ ನನ್ನ ಮಾತು ಕೇಳರೋ... 
ಮಗು : ಈ ಲಂಬ್ ಚಿಕ್ಕ್  ಲಂಬ್ ಚಿಕ್ಕ್  ಲಂಬ್ ಚಿಕ್ಕ್  ಲಂಬ್ 
ಗಂಡು : ಹೋಯ್  ಲಂಬ ಚಿಕ್ಕ್ ಲಂಬ ಚಿಕ್ಕ್ ಲಂಬ ಚಿಕ್ಕ್ ಲಂಬ 
  
ಗಂಡು : ಪಂಚೆ ಲುಂಗಿ ಏಕೇ ಶರ್ಟು ಪ್ಯಾಂಟೂ ಬೇಕೇ 
ಮಗು : ಪುಟಗೋಸಿ ಶಾಪೂ ನೋಡಿರೋ... 
ಗಂಡು : ನಿತ್ಯಾ ಶೇವೂ ಏಕೇ ಈ ಬ್ಲೇಡು ಖರ್ಚು ಏಕೇ...  
ಮಗು : ಹೈಟೆಕ್ ಹಾಗೇ ನೀವು ಆಗಿರೋ... 
ಗಂಡು : ತಲೆಗ್ಯಾಕೆ ಅಷ್ಟೊಂದು ಕೊಬ್ಬರೀ ಎಣ್ಣೇ ... 
ಮಗು : ಮತ್ತಿಲ್ಲ ಹೊಡಕೊಂಡರೇ ಖರ್ಚು ಕಮ್ಮಿ 
ಗಂಡು : ಬೆಂಕಿಯ ಕಡ್ಡಿ ಗೀಚಿ ಹಾಳಮಾಡದೇನೇ 
ಮಗು : ಸೂರ್ಯಂಗೇ ಲೇನ್ಸು ಹಿಡಿದು ಬೆಂಕಿ ಮಾಡಿ 
ಹುಚ್ಚ : ಇಂಥ ಜುಗ್ಗ ಜೋಡಿ ಇನೇಲ್ಲೂ ಇಲ್ಲ ನೋಡಿ.. ಅಯ್ಯೋ...    
          ಹುಚ್ಚಾದೇ ನಾನೂ ಇದನ್ನೆಲ್ಲ ನೋಡಿ ನನ್ನ ಮಾತು ಕೇಳರೋ... 
ಗಂಡು : ಲಂಬ ಚಿಕ್ಕ್ ಲಂಬ ಚಿಕ್ಕ್ ಲಂಬ ಚಿಕ್ಕ್ ಲಂಬ 
ಮಗು : ಹೇ ಲಂಬ್ ಚಿಕ್ಕ್  ಲಂಬ್ ಚಿಕ್ಕ್  ಲಂಬ್ ಚಿಕ್ಕ್  ಲಂಬ್ 
-----------------------------------------------------------------------------------------------------------
  
ಎದುರ್ ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ (೧೯೯೨) - ಏಕ್ ದೋ ತೀನ್ 
ಸಂಗೀತ : ರಾಜಕೋಟಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಮಂಜುಳಾಗುರುರಾಜ 

ಏಕ್ ದೋ ತೀನ್ ನಾ ಓಪನಿಂಗ್ ಬ್ಯಾಟ್ಸಮನ್ ಇಂದಾಡೋ ಈ ಆಟಕ್ಕೆ 
ಏಕ್ ದೋ ತೀನ್ ನಾ ಓಪನಿಂಗ್ ಬ್ಯಾಟ್ಸಮನ್ ಇಂದಾಡೋ ಈ ಆಟಕ್ಕೆ 
ಬನ್ನಿ ಬನ್ನಿ ಬನ್ನಿ ಬನ್ನಿ ನಾವೆಲ್ಲರೂ ಆಡುವ ಉಲ್ಲಾಸದಿ ಕೂಡಿ ಕುಡಿಯುವ 
(ಮೇಡಂ ಕುಡಿಯುವ ಅಂದ್ರೇ ಡ್ರಿಂಕ್ಸ್ ಕುಣಿಯುವ ಅಂದ್ರೆ ಡಾನ್ಸ್)
ಓ ಬನ್ನಿ ಬನ್ನಿ ನಾವೆಲ್ಲರೂ ಆಡುವ ಉಲ್ಲಾಸದಿ ಕೂಡಿ ಕುಣಿಯುವ (ಇದು ಕರೆಕ್ಟ್) 

ಅಮ್ಮಮ್ಮ ಫಿಗರ್ ಫಿಗರ್ ಸೂಪರೋ ಸೂಪರ್ ಹೆಣ್ಣಂದ್ರೆ ಜೋಪಾನ ಡೇಂಜರ್ ಡೇಂಜರ್ 
ಅಮ್ಮಮ್ಮ ಫಿಗರ್ ಫಿಗರ್ ಸೂಪರೋ ಸೂಪರ್ ಹೆಣ್ಣಂದ್ರೆ ಜೋಪಾನ ಡೇಂಜರ್ ಡೇಂಜರ್ 
ನೋಡೋಕ್ ರಂಭೆ ಆಟೋ ಬಾಂಬೆ ಹೆಣ್ಣ ನಂಬಬೇಡಿ ದೂರ ಇಡಿ ಬೃಹ್ಮಚರ್ಯ ಕಾಪಾಡಿ 
 
ಹೆಣ್ಣ ಅಳಿಯುವುದ ಕಂಡು ಹುಡುಗಿಯಾಗುವಳೂ ಗಂಡು 
ಹೆಣ್ಣ ಅಳಿಯುವುದ ಕಂಡು ಹುಡುಗಿಯಾಗುವಳೂ ಗಂಡು 
ರೋಷ ಬಂದರೆ ಹುಲಿಯಾದರೆ ಗ್ರಹಚಾರವು ಜೋಪಾನ 
ರೋಷ ಬಂದರೆ ಹುಲಿಯಾದರೆ ಗ್ರಹಚಾರವು ಜೋಪಾನ... ಓಓಓ 

ಇದು ಇಲ್ಲಿ ನೀವು ಪ್ರೇಮಗೀತೆ ಹಾಡಿ ನೀವ್ ಜಗಳ ಬಿಟ್ಟು ಸೇರಿ ಒಂದುಗೂಡಿ 
ಈ ಕಲಹ ಬೇಡ ಮುಂದು ಕೊನೆಯಾಗಬೇಕು ಇಂದು 
ಅದರಿಂದ ನನಗೆ ಹೊಸ ಗರ್ಭವು 
(ಶಿವ ಶಿವ ಮೇಡಂ ಗರ್ಭ ಅಲ್ಲ ಗರ್ವ ಗರ್ವ್ ಓ ಇಟ್ಸ್ ಆಲ್ ದಿ ಸೇಮ್ )

ಥೈಯ್ಯ ತಕ್ಕ ಥೈಯ್ಯ ತಕ್ಕ ಕನ್ನಡದ ಕೊಲೆಯಿಲ್ಲಿ ಹಿಂಗ್ಯಾತಕ 
ಬೇಡ ತಾಯೇ ನೀ ಮೌನ ಕಾಯೇ 
ಅಮ್ಮಾ ಬೇಡ ತಾಯೇ ನೀ ಮೌನ ಕಾಯೇ 
ಮುಂದೆ ಆಟ ಸಾಗಲೀಗ ಬಾ ಬೊಂಬಾಯಿ 

ಏನ್ ಹೆಂಗಸ್ರೋ ಇದ್ಯಾಕಿಂಗ್  ಹಿಂಗಾಡ್ತಿರೋ 
ಸಿಗರೇಟ್ ಸೇದಿ ಬೂದಿ ಮಾಡಕ್ ಖರ್ಚ ಮಾಡ್ತಿರೋ 
ಮೂಡು ಮೂಡು ನಂಗೆ ಬಂದಿತು ಮೂಡು ಕಥೆ ಬರೆಯುವ ಮೂಡು 
ಈ ಪ್ರೀತೀಯ ಕಥೆಯು ಸಂಸಾರದ ಕಥೆಯು ನೀ ಪೇಪರ್ ಕೊಂಡು ಬಾ ಓಡು 
ಮೂಡು ಮೂಡು ಓಡು ಓಡು 

ಶಂಭುಲಿಂಗ ಆತ್ಮಲಿಂಗ 
ಶಂಭುಲಿಂಗ ಆತ್ಮಲಿಂಗ ಕಥೆಯಾಕೆ ಬರೀತೀಯೇ ಶಂಭುಲಿಂಗ 
ನನ್ನ ಕೈಯ್ಯಾಗ ಮುರೀತೀಯೇ ಆತ್ಮಲಿಂಗ 
ಶಂಭುಲಿಂಗ ಆತ್ಮಲಿಂಗ ಭಜಗೋವಿಂದ ನಿತ್ಯಾನಂದ 
ಪ್ರೀತಿಯ ಮಾಡು ಬಾರೇ ಭಜಗೋವಿಂದ 
ಶೋಭಾನ ಆಗೋಗ್ಬಾರೇ ನಿತ್ಯಾನಂದ  
ಭಜಗೋವಿಂದ ನಿತ್ಯಾನಂದ ಭಜಗೋವಿಂದ ನಿತ್ಯಾನಂದ 
ಗೋವಿಂದ ಗೋವಿಂದ 
------------------------------------------------------------------------------------------------------------

No comments:

Post a Comment