1833. ಮಹಾಭಾರತ ಕಥೆ (೧೯೬೭)

ಈ ಚಿತ್ರದ ಹಾಡುಗಳ ಸಾಹಿತ್ಯವನ್ನು ಒದಗಿಸಿದವರು ಶ್ರೀಯುತ.ಶಿವರಾಮರವರು.  ಅವರಿಗೆ ತುಂಬಾ ಧನ್ಯವಾದಗಳು    

ಮಹಾಭಾರತ ಕಥೆ ಚಲನಚಿತ್ರದ ಹಾಡುಗಳು
  1. ಜೋ..ಜೋ... ಜ್ಯೋತಿ ನನ್ನಾಸೆ ಮಗುವೇ 
  2. ಮನಸು ಜೋಡಿ ಕೂಡಿದೆ 
  3. ಮಹದೇವ ಶಂಭೋ 
  4. ದುರಾಶೆಯಲಿ ಧುರ್ಯೋಧನಾದಿಯೂ 
  5. ಆ ರಾಧೆಯು ನಾನೇ 
  6. ಅಂತಿಹೆನು ಮಾವಾ  
  7. ಓಹೋ ಕರ್ಣಾನುದಾರ
  8. ಸಮರೋತ್ಸಾಹವಶರಾಗುತೇ 
  9. ಬೇಡ ನಷ್ಟವೇ 
  10. ಗೈದಿಹ ಕರ್ಮವೇ 
  11. ತುಂಬುತ ಎಸೆದಿಹ 
  12. ಇಹಜನ ಅವಂಗೆಲ್ಲ 
  13. ದೇವ ದೇವಾ ಜೀವಾತ್ಮಕ 
  14. ಬ್ರಹ್ಮದೇವ ಶುಭಭಾಗ್ಯ 
ಮಹಾಭಾರತ ಕಥೆ (೧೯೬೭)  - ಜೋ..ಜೋ... ಜ್ಯೋತಿ ನನ್ನಾಸೆ ಮಗುವೇ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ 

ಜೋ ಜೋ ಜ್ಯೋತಿ ನನ್ನಾಸೆ ಮಗುವೇ 
ಅಲೆಯ ಮೇಲೆ ತಾವರೆಯ ಅಂದವಾದ ಉಯ್ಯಾಲೆ 
ಮುದ್ದು ತುಟಿಯ ಜೊಲ್ಲಿನಲಿ ಗೀಲಿ ಗೀಲಿ ಗೀಲಿ ಉಲ್ಲಾಸವೇ 

ಚಿನ್ನಾರಿ ಆಡುವಾಗ ಆಡಿತಮ್ಮ ಕೋಗಿಲೆ 
ನಗೆಯಲಿ ಚಂದಮಾಮ ಮಾತಲಿ ಹಾಯನು ಕೊಡುವನು 
ಕಣ್ಣಿಗೋ ಮೋಡಿ ತಂದನೀವ ಪಾಪು 

ವಿದ್ಯಾರ್ಥಿ ಆದಿವನು ಪಡೆಯಬಲ್ಲ ಗೆಲುವು 
ಮಹಿಯಾಳಿತನ ಸಾಟಿ ಯಾರು 
ಎಳೆ ಪ್ರಾಯ ಬಂತು ಬಿಲ್ಲು ವಿದ್ಯೆ ಕಲಿತ 
ಎಸೆಯಿಲ್ಲ ಜಗದೇಕ ವೀರನೇನಿವಾತಾನು 
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಮನಸು ಜೋಡಿ ಕೂಡಿದೆ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, ಕೌಸಲ್ಯ  

ಹೆಣ್ಣು : ಮನಸು ಜೋಡಿ ಕೂಡಿದೆ ನೆರಳು ನಿನ್ನ ಪ್ರೇಮದೇ 
ಗಂಡು : ಮನಸು ಜೋಡಿ ಕೂಡಿದೆ ನೆರಳು ನಿನ್ನ ಪ್ರೇಮದೇ 

ಹೆಣ್ಣು : ಪ್ರಿಯನ ಪ್ರೇಮ ಭಾವನೆ ಮಿಂಚಿ ಮಿಂಚಿ ಬಂದಿದೆ 
ಗಂಡು : ಪ್ರಿಯಳ ಕೈಯ್ಯ ಮಹಿಮೆ ಫಲಿಸಿ ಬಿಂಬ ಮೂಡಿ ಹಾಡಿದೆ 
ಹೆಣ್ಣು : ಮನಸು ಜೋಡಿ ಕೂಡಿದೆ ನೆರಳು ನಿನ್ನ ಪ್ರೇಮದೇ 
ಗಂಡು : ಮನಸು ಜೋಡಿ ಕೂಡಿದೆ ನೆರಳು ನಿನ್ನ ಪ್ರೇಮದೇ 

ಹೆಣ್ಣು : ಇನಿಯ ನೀನೇ ಬಾಳಿಗೆ ಬೆಲೆಯಿಲ್ಲದ ಕಾಣಿಕೆ 
ಗಂಡು : ಮನಸಿನಲ್ಲಿ ಹಾಯಿ ಹಾಯಿ ಮಧುರ ರಾಗ ತಂದಿದೆ 
ಹೆಣ್ಣು : ಮನಸು ಜೋಡಿ ಕೂಡಿದೆ ನೆರಳು ನಿನ್ನ ಪ್ರೇಮದೇ 
ಗಂಡು : ಮನಸು ಜೋಡಿ ಕೂಡಿದೆ ನೆರಳು ನಿನ್ನ ಪ್ರೇಮದೇ 
-------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಮಹದೇವ ಶಂಭೋ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ 

ಮಹಾದೇವ ಶಂಭೋ... ಮಹೇಶಾ .. ಗಿರೀಶಾ... ಪ್ರಭೋ ದೇವ ಶಂಭೋ  
ಮೊರೆಯು ಕೇಳಿ ಪಾಲಿಸು ನೀನೇ... 
ಮಹಾದೇವ ಶಂಭೋ... ಮಹೇಶಾ .. ಗಿರೀಶಾ... ಪ್ರಭೋ ದೇವ ಶಂಭೋ  
ಮೊರೆಯು ಕೇಳಿ ಪಾಲಿಸು ನೀನೇ... 

ಜಟಾ ಜೂಟಧಾರೆ ಶಿವಾ ಚಂದ್ರಮೌಳೇ 
ನಿಟಿಲಾಕ್ಷದೇವಾ ಸದಾ ನಮಗೆ ರಕ್ಷೇ 
ಪ್ರತಿಕಾರ ಶಕ್ತಿ ಪ್ರಸಾದಿಸೆಮುದೇವ ಪ್ರಸನ್ನಾತ್ಮಭಾವ  
ಪ್ರಸನ್ನಾತ್ಮಭಾವ ಮಹಾದೇವ ಶಂಭೋ 
ಮಹಾದೇವ ಶಂಭೋ... ಮಹೇಶಾ .. ಗಿರೀಶಾ... ಪ್ರಭೋ ದೇವ ಶಂಭೋ  
ಮೊರೆಯು ಕೇಳಿ ಪಾಲಿಸು ದೇವಾ... ಶಿವೋಹಂ... ಶಿವೋಹಂ... ಶಿವೋಹಂ... 
-------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ದುರಾಶೆಯಲಿ ಧುರ್ಯೋಧನಾದಿಯೂ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಬಿ.ಎಸ್.

ದುರಾಶೆಯೂ ಧುರ್ಯೋಧನಾದಿಯೂ ದ್ರೋಹವೆನಿತೋ ಗೈದರೇ 
ಪಾಪಿ ದ್ಯೂತದೇ ಶಕುನಿ ಪಾಕದೆ ಪಾಂಡು ಸುತರೇ ಬಿದ್ದರೇ .. 
ನೀತಿ ಬಾಹೀರ ಜನರ ಸಭೆಯೋಳು ನಾರಿ ಸೀರೆಯವೈದರೇ 
ಸತ್ಯವಾಕ್ಯಕೆ ಮಾನಧನರು ಅಡವಿ ಪಾಲೇ ಆದರೆ... 
ತಿಳಿಯೆನು ನಾನೇ ನಿನ್ನ ಲೀಲೆಯಾ ಕಲಹವು ಕಾಣೆ ಎಂದೂ ನಾ ನಿಜದೇ ... 
ತಿಳಿಯೆನು ನಾನೇ ನಿನ್ನ ಲೀಲೆಯಾ ಕಲಹವು ಕಾಣೆ ಎಂದೂ ನಾ ನಿಜದೇ ... 
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಆ ರಾಧೆಯು ನಾನೇ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಸುಶೀಲಾ, ಕೌಸಲ್ಯ 

ಆ ರಾಧೆಯು ನಾನೇ ಎಡೆ ಬೇರೆಯೂ ಕಾಣೆ 
ಒಲಿದು ನಲಿನಲಿದು ನಿನ ನೆನೆದೆನು ನಿನ್ನಲ್ಲೇ 
ಆ ರಾಧೆಯು ನಾನೇ ಎಡೆ ಬೇರೆಯೂ ಕಾಣೆ 
ಒಲಿದು ನಲಿನಲಿದು ನಿನ ನೆನೆದೆನು ನಿನ್ನಲ್ಲೇ 

ಆ ರಾಧೆಯು ನಾನೇ ಎಡೆ ಬೇರೆಯೂ ಕಾಣೆ 
ಒಲಿದು ನಲಿನಲಿದು ನಿನ ನೆನೆದೆನು ನಿನ್ನಲ್ಲೇ 
ಮಾಧವ ಓ ದೇವಾ... 
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಅಂತಿಹೆನು ಮಾವಾ  
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಬಿ.ಎಸ್.

ಅಂತಿಹೆನು ಮಾವಾ ನಿನ ಕುಮಾರನು 
ದುರ್ಯೋಧನನು ದುರಾಶೆಗೊಳಗಾಗಿ 
ದ್ವೇಷಾಗ್ನಿಗೇ ದಾಸನಾಗಿಹನು 
ಅನುಪಮಾನ ಶೌರ್ಯಧನರಾಗಿಹ 
ಆತ್ಮ ಭಾಂದವರನ್ನು ದೂರವಾಗಿಸಿ 
ಪತಿತವಾಗಿಹ ಪರ ಸಹಾಯವ 
ಬಯಸಿ ಆನಂದದೊಳಿಹನು 
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಓಹೋ ಕರ್ಣಾನುದಾರ
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಬಿ.ಎಸ್

ಓಹೋ... ಕರ್ಣನುದಾರ ಶೌರ್ಯದೊಳು 
ವಿಶ್ವಾಸವಿಯುತೆ ಯುದ್ಧ ಸನ್ನಾಹದಾಕಾಂಕ್ಷೆ 
ತೋರೆ ಕರ್ಣನಾಗಿರಲಿತನ ಶಾಪ ಪ್ರಭಾವದಿಂ ಪೀಡಿತನ್ 
ಅಲ್ಪಾಯುಷ್ಯವ ಹೊಂದಿ ತಾನೇ ಅಳಿಯಲುಪಾಯ ಕಂಡಿಹನು 
ತಾವನೆಂತಯ್ಯ ಮರಳುತನ ಇನ್ನಿಗಳಾ ಸಂಧಿಯೇ ಅನುಪಮಾ 
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಸಮರೋತ್ಸಾಹವಶರಾಗುತೇ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಬಿ.ಎಸ್.

ಸಮರೋತ್ಸಾಹ ವಶರಾಗುತೆ ತೋಳ ತಟಲಿದು ಕುಚೋದ್ಯವಹುದು 
ಆ ಸಮರವು ಸಂದ ಕಾರಣ ಪ್ರಜಾಕ್ಷಯವೆಂತದೋ ಪುಣ್ಯಭರಿತ ದೇಶದಲ್ಲಿ 
ಭಾದೆಯಂತೆ ವಿಚಾರಗೈಯರೇ ಬೇಡ 
ಕೂಡದೀ ಸಮರವು ಸರ್ವನಾಶವು ಶಾಶ್ವತ ಸೌಖ್ಯವು ಶಾಂತಿಯೇ ಸರಿ     
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಬೇಡ ನಷ್ಟವೇ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಬಿ.ಎಸ್

ಬೇಡ ನಷ್ಟವೇ ಬಹಬವರವದೇಕೆ ಸಲ್ಲ ಸರ್ವನಾಶವೇ ಫಲವೇನಿಸೆ
ಜಯವು ಬೇಡ ಗ್ರಾಸ ವಾಸಾದಿಗಳ ಕೊರತೆಯಿರದಂತೇ 
ಐದು ಗ್ರಾಮಗಳೆಮಗೆ ಭಾಗದಲಿ ಸಾಕೂ 
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಗೈದಿಹ ಕರ್ಮವೇ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ 

ಗೈದಿಹ ಕರ್ಮವೇ ಜೀವಿಗೆ ಚುಕ್ಕಾಣಿ ಕರ್ಣಧಾರಿಯು ಕಾರ್ಯಕಾರಿಣಿ ಅಲ್ಲ 
ಅನುಭವಿಸದೆಯೇ ತೀರದಿ ಕರ್ಮಾ.. 
ಫಲಿತವಿದ್ದು ಸಾವೇನು ಬದುಕಿನ್ನು ಸೌಖ್ಯವೇನ್ನು 
ಅಂತೆಯೇ ಬಹಳ ವೀರರ ಸಾವಿಗೆ   
ಬಿರುದು ಮಾತ್ರವೇ ನಿನಗೆ ವೀರವರ್ಯಾ...  
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ತುಂಬುತ ಎಸೆದಿಹ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ. 

ತುಂಬುತ ಎಸೆದಿಹ ಕುಂಡಲದ್ವಯ ಕಾಂತಿ ಗಗನ ಭಾಗವನೇಲ್ಲ ಅಪ್ಪಿತೀಗ 
ಕುಣಿದ ಕೂಡಲೇ ಉದರದೊಳಗಿರುವಂಥ ಜಗವು ಅಲ್ಲಾಡೇ ಸೃಷ್ಟಿಕದಲೇ 
ಚಕ್ರವಂ ನೆರೆಪೀಡಿದು ಚಿತ್ತೈಸೇ ರಂಗದಲ್ಲಿ ಬಲು ಚಂದದಾ ಪಚ್ಚೇ ವಸ್ತ್ರ ಜಾರೆ .. 
ನಂಬಿದೆ ನಾನೆನಿತೋ ನಗುಪಾಟಲೇನಿಸದಿರು 
ಫಲುಣನು ಮೈ ಬಾಗಿ ಮನ್ನಿ ಪೆನ್ನಿ ಪೆನ್ನು ಯಾಚಿಕನು 
ದಯವಾಕರಗಿ ಎರಗುವ ಸಿಂಹವೋ ಎಂದಪರಿಯೇ 
ಇಂದು ಭೀಷ್ಮನನ ಅಳಿಪನ ನಿನ್ನ ತೊರೆದು 
ಬೀಡು ನೀ ಫಲ್ಲುಣನೇ ನನಗೆ ಮುಕ್ತಿ ಬರಲಿ 
ಇಲ್ಲಿದಯೆಗೈವೆ ದಿವ್ಯನೇ ದಿಕ್ಕು ನೀನು      
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಇಹಜನ ಅವಂಗೆಲ್ಲ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ. 

ಇಹಜನ ಅವಂಗೇಲ್ಲ ಅಂಬುಗೋಡೆ ಪ್ರತಿಜ್ಞೆ ಗೈವೇ 
ದಿಕೃತಿಗಳ ಸಾಕ್ಷಿ ಅರಸಗಾಳಲು ನಾನು ಗಳಿಸಿಹ
ತಕ್ಕಾಧಿಕಾರವಂ ವಿಸರ್ಜಿಪೇನ್ 
ಈ ರಾಜೀವಾಕ್ಷಿಸುತನಿನ್ನೂ ಅವನ ಸುತರಿಂ 
ರಾಜ್ಯ ಪರಿಪಾಲಿಪನ ಈ ಜನ್ಮಾಂತರವು 
ಬ್ರಹ್ಮಚರ್ಯೆದೇ ಸೇವಿಪೆನ್ ಸದಾ ರಾಜ್ಯವನ... 
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ದೇವ ದೇವಾ ಜೀವಾತ್ಮಕ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ. 

ದೇವದೇವ ಜೀವಾತ್ಮಕ ದೇವವಂದ್ಯ ಶಂಖ ಚಕ್ರ 
ಗಧಾ ಪದ್ಮ ಬಾರುಹಸ್ತ ವಾಸುದೇವ ತ್ರಿವಿಕ್ರಮ 
ಪರದಾ ಪರಮಪುರುಷ ಪದತಲದ ವಂದನೆಯು ಕರುಪೆಯಿಡು ಬಾ.. 
--------------------------------------------------------------------------------------------
 
ಮಹಾಭಾರತ ಕಥೆ (೧೯೬೭) - ಬ್ರಹ್ಮದೇವ ಶುಭಭಾಗ್ಯ 
ಸಂಗೀತ : ಎಸ್.ರಾಜೇಶ್ವರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಘಂಟಸಾಲ 

ಬ್ರಹ್ಮದೇವ ಶುಭಭಾಗ್ಯ ವಿಧಾತ 
ಬ್ರಹ್ಮದೇವ ಶುಭಭಾಗ್ಯ ವಿಧಾತ 
ಬ್ರಹ್ಮದೇವ ಶುಭಭಾಗ್ಯ ವಿಧಾತ 
ಫಾಹೀ... ಫಾಹೀ... ಹೇ ಭಾವಾತೀತ 
ಫಾಹೀ... ಫಾಹೀ... ಹೇ ಭಾವಾತೀತ 
ಬ್ರಹ್ಮದೇವ ಶುಭಭಾಗ್ಯ ವಿಧಾತ 

ಸೀತಾಕಮಲಾಸನ ಸೃಷ್ಟಿ ಕಾರಣ 
ಸೀತಾಕಮಲಾಸನ ಸೃಷ್ಟಿ ಕಾರಣ 
ನತಜನಾಭನ ಓ ಚತುರಾಸನ 
ನತಜನಾಭನ ಓ ಚತುರಾಸನ 
ವೇದಶಾಸ್ತ್ರ ವಿಜ್ಞಾನ ವಿಧಾನ 
ವೇದಶಾಸ್ತ್ರ ವಿಜ್ಞಾನ ವಿಧಾನ 
ಸಕಲ ಲೋಕ ಸಂಸೇವಿತ ಚರಣಾ    
ಬ್ರಹ್ಮದೇವ ಶುಭಭಾಗ್ಯ ವಿಧಾತ 
ಬ್ರಹ್ಮದೇವ ಶುಭಭಾಗ್ಯ ವಿಧಾತ 
ಫಾಹೀ... ಫಾಹೀ... ಹೇ ಭಾವಾತೀತ 
ಬ್ರಹ್ಮದೇವ ಶುಭಭಾಗ್ಯ ವಿಧಾತ 
------------------------------------------------------------------------------------------

No comments:

Post a Comment