1834. ಸಾಗರ ದೀಪ (೧೯೯೪)

ಸಾಗರ ದೀಪ ಚಲನಚಿತ್ರದ ಹಾಡುಗಳು 
  1. ಕಾತರ ತುಂಬುವಾ 
  2. ನನ್ನ ಚೆಲುವಾ 
  3. ನಕ್ಕಳು ಅಮ್ಮಯ್ಯಾ 
  4. ಕೇಳಣ್ಣ ಹನಿ ಹನಿ 
  5. ಕಾಂಚಾಣ ಕೈಗೆ ಬಂದಾಗ 
  6. ಬದುಕೊಂದು ದೈವಲೀಲೆ 
ಸಾಗರ ದೀಪ (೧೯೯೪) - ಕಾತರ ತುಂಬುವ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಏನ್.ವ್ಯಾಸರವ, ಗಾಯನ : ರಾಘವೇಂದ್ರ ರಾಜಕುಮಾರ, ಸಂಗೀತ ಕಟ್ಟಿ 

ಇಬ್ಬರು : ಓಓಓಓಓಓಓ.... ಓಓ .... ಓಓಓಓ .... ಓಓ 
             ಕಾತರ ತುಂಬುವ ಮೈಮನ ಕಾಡುವ ಪ್ರೀತಿಗೆ ಯಾವುದು ಸೀಮೆ 
             ಕಾತರ ತುಂಬುವ ಮೈಮನ ಕಾಡುವ ಪ್ರೀತಿಗೆ ಯಾವುದು ಸೀಮೆ 
             ನಯನಗಳ ಸೆಳೆವ ಹೃದಯಗಳ ಮಿಡಿವ 
             ಕನಸುಗಳ ಬರೆವ ಮನಸುಗಳ ಬೆಸೆವ 
             ಹೋಯ್ ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ 

ಗಂಡು : ಹೊಸ ರಾಗ ಕೇಳಿದಾಗ ವಶವಾಗುವಂತೆ ಒಲಿದಾಗ ನನಗೆ ನೀನು ಶರಣಾಗಿ ಹೋದೆ 
            ಹೊಸ ರಾಗ ಕೇಳಿದಾಗ ವಶವಾಗುವಂತೆ ಒಲಿದಾಗ ನನಗೆ ನೀನು ಶರಣಾಗಿ ಹೋದೆ 
ಹೆಣ್ಣು : ಎದೆಬಾನಿನಲ್ಲಿ ನೀನು ರವಿಯಾಗಿ ಬಂದೆ ದಳವೆಲ್ಲ ಬಿರಿದು ನಾನು ನೈದಿಲೆಯಾದೆ 
          ಈ ತನವು ಮನವು ನಿನದೇ ಈ ಜೀವದಾಣೆ   
          ಈ ತನವು ಮನವು ನಿನದೇ ಈ ಜೀವದಾಣೆ   
          ಮಧುರಾ ಒಲವೇ ನನ್ನಾ ಮಧುರ ಒಲವೇ  ನಿನಗೆ ನಾನಿಂದು ಸೋತೆ 
ಗಂಡು : ಕಾತರ ತುಂಬುವ ಮೈಮನ ಕಾಡುವ ಪ್ರೀತಿಗೆ ಯಾವುದು ಸೀಮೆ 
            ನಯನಗಳ ಸೆಳೆವ ಹೃದಯಗಳ ಮಿಡಿವ 
            ಕನಸುಗಳ ಬರೆವ ಮನಸುಗಳ ಬೆಸೆವ 
            ಹೋಯ್ ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ 
 
ಹೆಣ್ಣು : ಸವಿಯಾದ ನುಡಿಯು ಪ್ರೇಮ ನಿಜವಲ್ಲ ನೀನು ಯುಗದಿಂದ ಅವರ ಎಂದು ನಂಬಿಲ್ಲವೇನು  
ಗಂಡು : ಒಲವಿಂದ ಬೆಸೆದ ಬಂಧ ಚಿರವಾಗಲೆಂದೇ ನಿನಗಾಗಿ ಜೀವ ಹಿಡಿದು ನಾ ಓಡಿ ಬಂದೇ 
            ನನ ಬದುಕು ಬೆಳಕು ಉಸಿರು ನೀನಾದೆ ನಲ್ಲೇ 
            ಮಧುರ ಒಲವೇ ನನ್ನಾ ಮಧುರ ಒಲವೇ ನಿನಗೆ ನಾನಿಂದು ಸೋತೆ 
ಹೆಣ್ಣು : ಕಾತರ ತುಂಬುವ ಮೈಮನ ಕಾಡುವ ಪ್ರೀತಿಗೆ ಯಾವುದು ಸೀಮೆ 
          ನಯನಗಳ ಸೆಳೆವ ಹೃದಯಗಳ ಮಿಡಿವ 
          ಕನಸುಗಳ ಬರೆವ ಮನಸುಗಳ ಬೆಸೆವ 
          ಹೋಯ್ ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ 
------------------------------------------------------------------------------------------------------------------------
 
ಸಾಗರ ದೀಪ (೧೯೯೪) - ನನ್ನ ಚೆಲುವಾ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಶ್ರೀರಂಗ, ಗಾಯನ : ಮಂಜುಳಗುರುರಾಜ 

ಓಓ ... ಓಓಓ ... ಏ ... ಏಏಏ.... ಹಾ... 
ನನ್ನ ಚೆಲುವ ಈ ಚೆಲುವೆ ಇಷ್ಟನಾ... 
ಝಂಮ್ಮ ಎನುವ ನಿನ್ನ ಸನಿಯ ನಾ ಬಿಟ್ಟೇನಾ 
ಮಲಗೋಬಾ ಹಣ್ಣಿನಂಥ ಹೆಣ್ಣು ನಾನೂ 
ನನ್ನ ಚೆಲುವ ಈ ಚೆಲುವೆ ಇಷ್ಟನಾ... 
ಓಓ ... ಓಓಓ ... ಏ ... ಏಏಏ.... ಹಾ... 

ಮನ ಕೆಣಕಿದ ಗೆಣೆಕಾರ ನನ್ನ ಬಿಡದಿರೆ ನೀ ಬಾರ 
ಹಿಡಿಸದ ನಿನ ಬಾಯ್ತುಂಬಾ ಬಿಸಿ ಬಂಗ್ಡೆಯ ಕೊಡ್ತೀನಿ 
ಗಿಡಗಳ ಮರಗಳ ಆಚೇಲಿ ಬಿಡಿ ಹೂಗಳ ರಾಶೀಲಿ 
ಮೈಯ್ಯಚಳಿಯನು ಬಿಡುವಂತೆ ಹೊಸ ಅನುಭವ ಕೊಡ್ತೀನಿ 
ಈ ಹೆಣ್ಣು ಜೊತೆಯಲಿರೆ ಮನದೊಳಗೆ ಘಮಲ ಘಮ 
ನಾ ಕಣ್ಣು  ಮಿಸುಕಿದರೆ ಎದೆಯೊಳಗೆ ಝಾಮಕ ಝಮ್ 
ಮಲಗೋಬಾ ಹಣ್ಣಿನಂಥ ಹೆಣ್ಣು ನಾನೂ 
ನನ್ನ ಚೆಲುವ ಈ ಚೆಲುವೆ ಇಷ್ಟನಾ... 
ಓಓ ... ಓಓಓ ... ಏ ... ಏಏಏ.... ಹಾ... 

ತುಂಬಿದೆ ಖುಷಿ ಮನದಲ್ಲಿ ಜೇನಿದೆ ನನ್ನ ತುಟಿಯಲ್ಲಿ 
ಮೈಮನ ವಿರಹದಲಿ ಕಾದಿದೆ ನಿನ ಬಳಿಯಲ್ಲಿ 
ತುಂಬಿದೆ ಖುಷಿ ಮನದಲ್ಲಿ ಜೇನಿದೆ ನನ್ನ ತುಟಿಯಲ್ಲಿ 
ಮೈಮನ ವಿರಹದಲಿ ಕಾದಿದೆ ನಿನ ಬಳಿಯಲ್ಲಿ 
ನನ್ನೆದೇ ಅರಮನೆಯಲ್ಲಿ  ನನ್ನೊಲವಿನ ಸೆರೆಯಲ್ಲಿ 
ಜೊತೆ ನಲಿದು ಒಂದಾಗು ಈ ಹೆಣ್ಣಿಗೆ ಗಂಡಾಗು 
ಈ ತನುವ ಬಳಸುತಲಿ ತುಟಿ ತುಟಿಗೆ ಬೆಸುಗೆ ಇಡು 
ಈ ಛಳಿಯ ಸಮಯದಲಿ ಬಿಸಿ ಬಿಸಿಯ ಸುಖವ ಕೊಡು 
ಮಲಗೋಬಾ ಹಣ್ಣಿನಂಥ ಹೆಣ್ಣು ನಾನೂ 
ನನ್ನ ಚೆಲುವ ಈ ಚೆಲುವೆ ಇಷ್ಟನಾ... 
ಓಓ ... ಓಓಓ ... ಏ ... ಏಏಏ.... ಹಾ... 
------------------------------------------------------------------
 
ಸಾಗರ ದೀಪ (೧೯೯೪) - ನಕ್ಕಳು ಅಮ್ಮಯ್ಯಾ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ರಾಘವೇಂದ್ರ ರಾಜಕುಮಾರ, ಸಂಗೀತ ಕಟ್ಟಿ, ಮಂಜುಳಾ ಗುರುರಾಜ, ಕೋರಸ್  

ಕೋರಸ್ : ನಕ್ಕಾಳು ಅಮ್ಮಯ್ಯ ನಸುನಗೆಯನ್ನ ನಕ್ಷತ್ರ ನಗುವಂತೆ ಹಾ... 
ಗಂಡು : ಹೇ... ಏಏಏಏ ... ಏಏಏ .... ಏಏಏ 
            ಇಲ್ಲೇನೇ ಎಲ್ಲಾರ ಆನಂದ ಸೂರೆ ನಮ್ಮೂರ ಜನರೆಲ್ಲಾ ಆ ಚಂದ್ರ ತಾರೆ 
           ಈ ಅಂದ ಈ ಚಂದ ಸಿಗದಲ್ಲ ಬೇರೆ ನೀರೇ... ಏಏಏಏಏ 
           ಶರಣು ಗಂಗವ್ವ                 ಕೋರಸ್ : ದಯಮಾಡು 
ಗಂಡು : ನಿನ ಮಕ್ಕಳನ್ನೂ              ಕೋರಸ್ : ಕಾಪಾಡು 
ಗಂಡು : ಕಣ್ಣೀರ ಒರೆಸಿ                  ಕೋರಸ್ : ಕೈಯ ನೀಡು 
ಗಂಡು : ಬಲೆ ತುಂಬಾ ಭಾಗ್ಯ          ಕೋರಸ್ : ಕೊಡಮಾಡು 
ಗಂಡು : ಮೊಗ್ಗು ಹೂವಾಗಿ ದೇವಿಗೆ ಬೇಕಾಗಿ 
            ಈ ಪಾದ ಪೂಜೆ ಮಾಡಿ ಹಾಡಿತು ನಲಿದಾಡಿ 
            ಊರೆಲ್ಲ ಕೂಡಿಕೊಂಡು ಹಾಡಿ ನಿನ್ನನ್ನು ಬೇಡಿ 
           ಶರಣು ಗಂಗವ್ವ                 ಕೋರಸ್ : ದಯಮಾಡು 
ಗಂಡು : ನಿನ ಮಕ್ಕಳನ್ನೂ              ಕೋರಸ್ : ಕಾಪಾಡು 
ಗಂಡು : ಕಣ್ಣೀರ ಒರೆಸಿ                  ಕೋರಸ್ : ಕೈಯ ನೀಡು 
ಗಂಡು : ಬಲೆ ತುಂಬಾ ಭಾಗ್ಯ          ಕೋರಸ್ : ಕೊಡಮಾಡು 

ಹೆಣ್ಣು : ಹೇ.. ತೆಂಗೆಲ್ಲ ತೂಗಿ ಕೈಯ್ಯ ಬೀಸಿ ಕೂಗಿ 
          ಮರಳೆಲ್ಲ ಸಿರಿಯಾಗಿ ಬಂತಿಲ್ಲಿ ನಮಗಾಗಿ 
          ಹೇ.. ತೆಂಗೆಲ್ಲ ತೂಗಿ ಕೈಯ್ಯ ಬೀಸಿ ಕೂಗಿ 
          ಮರಳೆಲ್ಲ ಸಿರಿಯಾಗಿ ಬಂತಿಲ್ಲಿ ನಮಗಾಗಿ 
          ಹೇ... ಆನಂದದಲ್ಲಿ ಆ ತಾಯಿ ಇಲ್ಲಿ 
          ಪನ್ನೀರ ಮಳೆಯಲ್ಲಿ ನಲಿದಾಳು ನಗೆ ಚೆಲ್ಲಿ   
          ಇಂಥಾ ಚೆಲುವಾದ ಈ ಚೈತ್ರ ಬೇರೆಲ್ಲಿದೇ 
          ಇಂಥ ಮಾದೇವಿ ಹಾರೈಕೆ ಬೇಕಾಗಿದೆ 
          ತಂತು ತಂಗಾಳಿ ಹೊಸ ಗಾನ ಈ ಪ್ರಾರ್ಥನೆ 
          ಬಂತು ಈ ದೇವಿ ಹೊಸಗಾನ ಆರಾಧನೆ 
ಗಂಡು : ಬೇವು ಸಿಹಿಯಾಗಿದೆ ನೋವು ಮರೆಯಾಗಿದೆ 
           ಶರಣು ಗಂಗವ್ವ                 ಕೋರಸ್ : ದಯಮಾಡು 
ಗಂಡು : ನಿನ ಮಕ್ಕಳನ್ನೂ              ಕೋರಸ್ : ಕಾಪಾಡು 
ಗಂಡು : ಕಣ್ಣೀರ ಒರೆಸಿ                  ಕೋರಸ್ : ಕೈಯ ನೀಡು 
ಗಂಡು : ಬಲೆ ತುಂಬಾ ಭಾಗ್ಯ          ಕೋರಸ್ : ಕೊಡಮಾಡು 

ಹೆಣ್ಣು : ಹೇ...  ಸರಿಯಾದ ಹೊತ್ತು ತೂಗಾಡಿ ಬಂತು 
          ಆವೇಶ ಬಿರುಗಾಳಿ ತಂತು ಬಲಿಯನ್ನು ಬೇಡೆಂದಿತು 
          ಹೇ... ಇಂಪಾಗಿ ಹಾಡಿ ಅಮ್ಮನ್ನ ಬೇಡಿ 
          ಝಂಮೆಂದು ಮಿಂಚಂತೆ ಓಡಿ ತಂತಲ್ಲ ಹೊಸ ಮೋಡಿ 
          ನಾಳೆ ಬಾಳಲ್ಲಿ ಬಿರುಗಾಳಿ ದುರಾಗಲಿ 
          ಬಾಳು ಎಂದೆಂದೂ ಶುಭವಾಗಿ ನಗೆ ತೋರಲಿ 
          ಆಗ ಹಾಯಾಗಿ ದೇವಿಗೆ ಜೈ ಎನ್ನುವ 
          ಬೇಗ ನಮ್ಮಾಸೆ ಕೈಗೂಡಿ ಕುಣಿದಾಡುವ 
ಗಂಡು : ಅಮ್ಮ ಏನೆಂದಳು                    ಕೋರಸ್ : ಎಲ್ಲ ಶುಭವೆಂದಳು 
ಗಂಡು : ಈ ಮೊಗ್ಗು ಹೂವಾಗಿ ದೇವಿಗೆ ಬೇಕಾಗಿ ಈ ಪದಾ ಪೂಜೆ ಮಾಡಿ ಹಾಡಿತು ನಲಿದಾಡಿ 
            ಊರೆಲ್ಲಾ ಕೂಡಿಕೊಂಡು ಹಾಡಿ ನಿನ್ನನ್ನು ಬೇಡಿ 
           ಶರಣು ಗಂಗವ್ವ                 ಕೋರಸ್ : ದಯಮಾಡು 
ಗಂಡು : ನಿನ ಮಕ್ಕಳನ್ನೂ              ಕೋರಸ್ : ಕಾಪಾಡು 
ಗಂಡು : ಕಣ್ಣೀರ ಒರೆಸಿ                  ಕೋರಸ್ : ಕೈಯ ನೀಡು 
ಗಂಡು : ಬಲೆ ತುಂಬಾ ಭಾಗ್ಯ          ಕೋರಸ್ : ಕೊಡಮಾಡು 
----------------------------------------------------------------------------------------------------------------------
 
ಸಾಗರ ದೀಪ (೧೯೯೪) - ಕೇಳಣ್ಣ ಹನಿ ಹನಿ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ವಿ.ಮನೋಹರ, ಗಾಯನ : ರಾಘವೇಂದ್ರ ರಾಜಕುಮಾರ, ಕೋರಸ್ 

ಗಂಡು : ಕೇಳಣ್ಣಾ ಹನಿ ಹನಿ ಸೇರಿ ನದಿಯು 
            ಓ.. ತಮ್ಮಾ ಹಣ ಹಣ ಸೇರಿ ನಿಧಿಯು 
            ಮೈಯ್ಯ ಬಗ್ಗಿ ದುಡಿದವ ಫಲ ಪಡೀತಾನೆ 
            ಛಲವೂ ಇರೋ ಕಡೆ ಗೆಲುವು ತಾನೇ 
            ಊರೇ ದಿನಾನೇ ಆದರೂ ಜೊತೆ ಬೆರೆತಾಗ... 
            ವ್ಯಥೆ ಮರೆತಾಗ ನಗು ಹರಿದಾಗ ಜೀವನ... 
            ಕೇಳಣ್ಣಾ ಹನಿ ಹನಿ ಸೇರಿ ನದಿಯು ಓ.. ತಮ್ಮಾ ಹಣ ಹಣ ಸೇರಿ ನಿಧಿಯು 
  
ಕೋರಸ್ : ಹೋಯ್ಯಾರೇ  ಹೋಯ್ಯಾರೇ  ಹೋಯ್ಯಾರೇ  ಹೋಯ್ಯಾರೇ  
ಗಂಡು : ಸಾಗರ ಒಂದು ವಿಧ ವಿಧ ಜೀವನ ಐಕ್ಯದ ಸಂಕೇತ 
            ಸಾಗರ ಒಂದು ವಿಧ ವಿಧ ಜೀವನ ಐಕ್ಯದ ಸಂಕೇತ 
            ಸಾವಿರ ಸಾವಿರ ಉಸಿರನು ಕಾಯೋ ಕಾಯೋ ಮಮತೆಯ ಸಂಕೇತ 
            ಸಾಗರವೇ... ಓ ಸಾಗರವೇ... ಜಲಸಿರಿಗಳ ಓ... ಆಗರವೇ... 
            ನೀನೆಂಥ ರಮಣೀಯ ವೈಭವ ಗಾಂಭೀರ್ಯ 
            ನಿನ್ನಲ್ಲೇ ಐಶ್ವರ್ಯ ನಮಗೆ ನೀ ಮಹನೀಯ 
            ಬದುಕು ಕವಿತೆಗಳಾಲಯ ನೀನು ಉಪಕಾರಿ 
            ನಿನ್ನ ಕೃಪೆ ತೋರಿ ಕಾಯೋ ಹಿತಕಾರಿ ರಾಜನೇ 
            ಕೇಳಣ್ಣಾ ಹನಿ ಹನಿ ಸೇರಿ ನದಿಯು ಓ.. ತಮ್ಮಾ ಹಣ ಹಣ ಸೇರಿ ನಿಧಿಯು 

ಗಂಡು : ಆಳುವರಾರು ಇಲ್ಲದೆ ಇಲ್ಲಿ ಅಳಿಯದ ಸಾಮ್ರಾಜ್ಯ 
            ಹಾಡುವ ಯಾರು ಅರಿತವರಿಲ್ಲ ಒಲಿದರೆ ಬಲು ಪೂಜ್ಯ 
            ವಾರಿಧಿಯೇ... ಓ.. ವಾರಿಧಿಯೇ... ಭೂರಮೆಗೆ ನೀ ವರ ನಿಧಿಯೇ  
            ಹೊಸದೊಂದು ಬೆಳಕನ್ನ ಕಂಡೆವು ನಾವಿಂದು 
            ನಮ್ಮನ್ನು ನೀ ಹರಸು ಭೂದೇವಿಯಾ ಬಂಧು 
            ಕಡಲ ಕುಡಿಗಳ ಭಾಗ್ಯವು ನೋಡು 
            ಕೈಯ್ಯಸೇರಿ ಗೂಡು ಬಲವಾಯ್ತು ಸುಖ ನೆಲೆಯಾಯ್ತು ನಾಳೆಗೇ 
             ಕೇಳಣ್ಣಾ ಹನಿ ಹನಿ ಸೇರಿ ನದಿಯು ಓ.. ತಮ್ಮಾ ಹಣ ಹಣ ಸೇರಿ ನಿಧಿಯು 
            ಓ.. ತಮ್ಮಾ ಹಣ ಹಣ ಸೇರಿ ನಿಧಿಯು 
            ಮೈಯ್ಯ ಬಗ್ಗಿ ದುಡಿದವ ಫಲ ಪಡೀತಾನೆ 
            ಛಲವೂ ಇರೋ ಕಡೆ ಗೆಲುವು ತಾನೇ 
            ಊರೇ ದಿನಾನೇ ಆದರೂ ಜೊತೆ ಬೆರೆತಾಗ... 
            ವ್ಯಥೆ ಮರೆತಾಗ ನಗು ಹರಿದಾಗ ಜೀವನ... 
            ಕೇಳಣ್ಣಾ ಹನಿ ಹನಿ ಸೇರಿ ನದಿಯು ಓ.. ತಮ್ಮಾ ಹಣ ಹಣ ಸೇರಿ ನಿಧಿಯು 
-----------------------------------------------------------------------------------------------
 
ಸಾಗರ ದೀಪ (೧೯೯೪) - ಕಾಂಚಾಣ ಕೈಗೆ ಬಂದಾಗ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಏನ್.ವ್ಯಾಸರವ, ಗಾಯನ : ರಾಘವೇಂದ್ರ ರಾಜಕುಮಾರ, ಸಂಗೀತ ಕಟ್ಟಿ, ರಾಜೇಶ, ಕೋರಸ್  

ಗಂಡು : ಕಾಂಚಾಣ ಕೈಗೇ ... ಕಾಂಚಾಣ ಕೈಗೆ ಬಂದಾಗ ಜೇಬೆಲ್ಲ ಝಣ.. ಝಣ.. ಝಣ..    
           ಕಾಂಚಾಣ ಕೈಗೆ ಬಂದಾಗ ಜೇಬೆಲ್ಲ ಝಣ.. ಝಣ.. ಝಣ..    
           ಕಾಸು ಕೈತುಂಬ ಇದ್ದಾಗ ನೋಡು ಶಿವ ಈ ಲೋಕ ಝಂಝಂಝಂ 
 
ಗಂಡು : ಪುಡಿಕಾಸು ಕೂಡ ಉಸಿರಾಡೋ ಜೀವ ಹಣ ಒಂದೇ ಶೂರ ಹಣದಿಂದ ಧೀರ 
            ಇಡೀ ಬಾಜಾರೇ  ಕೊಳ್ಳುವ ಮಜಾವಾ ಮಾಡುವ ವಾಹ್ಹರೇ ವ್ಹಾ... ವಾವಾವಾ 
ಹೆಣ್ಣು : ಸಂತೇಲಿ ಸಿಕ್ದೊಳ ಭತ್ತಾತನು ತಿನ್ನೋಳ 
ಗಂಡು : ಕಾಲ್ಗಜ್ಜೆ ಕೇಳು ಮೂಗಬೊಟ್ಟು ಹೇಳು ನಿಂಗಾಗಿ ಇಂದೇ ಕೊಡು ಕೊಳ್ಳುವೇ 
ಹೆಣ್ಣು : ಡಾಬೊಂದೇ ಸಾಕು ಸೈಯ್ಯ ಅನ್ನಬೇಕು ನೀ ತಂದದೆಲ್ಲ ತೊಟ್ಟುಕೊಳ್ಳುವೇ 
ಗಂಡು : ಮುದ್ದಾಗಿ ನಿನ್ನ ಅಪ್ಪಿಕೊಳ್ಳುವೆ 
ಹೆಣ್ಣು : ರಂಗನ್ನ ಕೆನ್ನೆಗೆ ಕಪ್ಪನ್ನನ್ನು ಕಣ್ಣಿಗೆ 
ಗಂಡು : ಸೂಜಿಯ ಮಲ್ಲಿಗೆ ಈ ನನ್ನ ನಲ್ಲೆಗೆ 
ಇಬ್ಬರು : ಕೊಟ್ಟಾಗ ನಂಗೆ ಸ್ವರ್ಗ ಸಿಕ್ಕಿದಂತೇ 
           ಕಾಂಚಾಣ ಕೈಗೆ ಬಂದಾಗ ಜೇಬೆಲ್ಲ ಝಣ.. ಝಣ.. ಝಣ..    
           ಕಾಸು ಕೈತುಂಬ ಇದ್ದಾಗ ನೋಡು ಶಿವ ಈ ಲೋಕ ಝಂಝಂಝಂ 

ಕೋರಸ್ : ಶಿವನೊಲುಮೆಯ ಸಿರಿ ಗಿರಿಜೆಗೆ ಸೋಬಾನೆ ಸೋಬಾನೆ 
                ಮನಸೆಳೆಯುವ ನಳಿನಾಕ್ಷಿಗೆ ಸೋಬಾನೆ ಸೋಬಾನೆ 
                ಶ್ರೀಗಂಧ ಸೌಗಂಧಿಗೆ ಸೋಬಾನೆ ಸೋಬಾನೆ 
                ಆನಂದದ ಶ್ರೀಗೌರಿಗೇ ಸೋಬಾನೆ ಸೋಬಾನೆ 
                ಹದಿಹರೆಯದ ಹೊಸ ಚೆಲುವೆಗೆ ಸೋಬಾನೆ ಸೋಬಾನೆ 
                ಮನ ಸೆಳೆಯುವ ವಧು ವರರಿಗೆ ಸೋಬಾನೆ ಸೋಬಾನೆ 
                ರತಿ ಸೊಬಗಿನ ಸತಿದೇವಿಗೆ ಸೋಬಾನೆ ಸೋಬಾನೆ 
                ಮನ ಬೆಳಗುವ ಮಧುಮಗಳಿಗೆ ಸೋಬಾನೆ ಸೋಬಾನೆ 
ಗಂಡು : ಬಾಳಲ್ಲಿ ನಮಗೆ ಗುರಿಯೊಂದು ಬೇಕು ಛಲದಿಂದ ನಾವು ಪಡಿಯೋಣ 
ಹೆಣ್ಣು : ಮನಸಿದ್ರೇ ಮಾರ್ಗ ಈ ಬಾಳೆ ಸ್ವರ್ಗ ನಮ್ಮಾಸೆ ಕನಸು ನನಸೂ ಮಾಡೋಣ 
ಗಂಡು : ಒಟ್ಟಾಗಿ ನಾವು ಮೇಲೆ ಬರೋಣ 
ಹೆಣ್ಣು : ದುಡಿದಾಗ ಒಟ್ಟಿಗೆ ಸಿಕ್ತಾದೇ ರೊಟ್ಟಿಗೆ 
ಗಂಡು : ಕೂಡಿಟ್ರೆ ನಾಳೆಗೇ ಇರ್ತಾದೇ ಬಾಳಿಗೆ 
ಹೆಣ್ಣು : ದೊಡ್ಡೋರ ಮಾರ್ಗ ನಂಬಿ ಸಾಗಿದಂತೇ 
ಎಲ್ಲರು : ಕಾಂಚಾಣ ಕೈಗೆ ಬಂದಾಗ ಜೇಬೆಲ್ಲ ಝಣ.. ಝಣ.. ಝಣ..    
            ಕಾಸು ಕೈತುಂಬ ಇದ್ದಾಗ ನೋಡು ಶಿವ ಈ ಲೋಕ ಝಂಝಂಝಂ 
----------------------------------------------------------------------------------------------
 
ಸಾಗರ ದೀಪ (೧೯೯೪) - ಬದುಕೊಂದು ದೈವಲೀಲೆ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಏನ್.ವ್ಯಾಸರವ, ಗಾಯನ : ಡಾ|| ರಾಜಕುಮಾರ, 

ಬದುಕೊಂದು ದೈವ ಲೀಲೆ ಚದುರಂಗದಾಟ 
ಬದುಕೊಂದು ದೈವ ಲೀಲೆ ಚದುರಂಗದಾಟ 
ಸವಿ ಬಂಧನ ಕಳಚುವ ಗುರಿ ಕಾಣದೆ ನರಳುವ ಗತಿಯು ಏಕೋ ಕಾಣೆ.. 
ಬದುಕೊಂದು ದೈವ ಲೀಲೆ ಚದುರಂಗದಾಟ 

ಸ್ನೇಹ ಮರೆಯಾಯಿತೇಕೆ ಸಂಬಂಧ ವಿಷವಾಯಿತೇಕೆ 
ದ್ವೇಷ ಮಿತಿ ಮೀರಿತೇಕೆ ಸೇದೊಂದೇ ಮೆರೆದಾಡಿತೇಕೆ 
ಪ್ರೀತಿ ಅನುರಾಗ ನೀತಿ ಮರೆತಾಗ ಇಡೀ ಬಾಳೆಲ್ಲ ಒಗಟಾಗದೇನು 
ಬದುಕೊಂದು ದೈವ ಲೀಲೆ ಚದುರಂಗದಾಟ 

ದ್ರೋಹ ಗುರಿಯಾಯಿತೇಕೆ ಆವೇಶ ಮನೆಮಾಡಿತೇಕೆ 
ಭ್ರಾಂತಿ ಸುಳಿದಾಡಿತೇಕೆ ಅಜ್ಞಾನ ನೆಲೆಯಾಯಿತೇಕೆ 
ಕೋಪ ಇರುವಾಗ ತಾಪ ಸುಡುವಾಗ  ಇಡೀ ಕನಸೆಲ್ಲ ಬರಡಾಗದೇನು 
ಬದುಕೊಂದು ದೈವ ಲೀಲೆ ಚದುರಂಗದಾಟ 
ಬದುಕೊಂದು ದೈವ ಲೀಲೆ ಚದುರಂಗದಾಟ 
ಸವಿ ಬಂಧನ ಕಳಚುವ ಗುರಿ ಕಾಣದೆ ನರಳುವ ಗತಿಯು ಏಕೋ ಕಾಣೆ.. 
ಬದುಕೊಂದು ದೈವ ಲೀಲೆ ಚದುರಂಗದಾಟ 
----------------------------------------------------------------------------------------------------------------------

No comments:

Post a Comment