ಬಹಳ ಚೆನ್ನಾಗಿದೆ ಚಲನಚಿತ್ರಗಳು
- ಶ್ರೀಕಾರ ಇದು
- ಬೊಂಬಾಟು ಬ್ರದ್ರಸೂ
- ಕಂಡ ಒಡನೇ
- ಚೋರಿ ಚೋರಿ
- ಹೊಸ ರಾಗದಲಿ
- ಹೋಲಿ ಹೋಲಿ
ಬಹಳ ಚೆನ್ನಾಗಿದೆ (೨೦೦೧) - ಶ್ರೀಕಾರ ಇದು
ಸಂಗೀತ : ಕೋಟಿ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಲತಾ ಹಂಸಲೇಖ
ಗಂಡು : ಆಆಆ...ಆಆಆ.. ಆ...ಆ..ಆ ಓಹೋಹೋ...ಓಹೋಹೋ...ಓಹೋಹೋ...
ಲಲಾಲಾಲ ಲಾ ಲಾ ಲಾ ಲಾ ಲಲಲಲ
ಶ್ರೀಕಾರ ಇದು ಹೊಸ ಬದುಕಿಗೆ
ಹೆಣ್ಣು : ಓಂಕಾರ ಇದು ಮಾಂಗಲ್ಯ ಭಾಗ್ಯಕೆ
ಗಂಡು : ಒಂದೇ ಭಾವ ಇಬ್ಬರಲ್ಲೂ ಉದಯಿಸಿದೆ
ಹೆಣ್ಣು : ಇಬ್ಬರ ಜೀವ ಒಂದಾಗಿ ಬೆರೆಯುತಿದೆ
ಓಹೋಹೋ...ಓಹೋಹೋ...ಓಹೋಹೋ...
ಹೆಣ್ಣು : ನಮ್ಮ ಮನೆ ಬೆಳಕಾಗಿ ಬಾಳಿನಲಿ ನೀ ಬಂದೆ ದೇವರಂತೆ ನೀ ಬಂದು ಜೊತೆಗೂಡಿದೆ
ನಾ ಯಾರೋ ನೀ ಯಾರೋ ಹಾದಿಯಲಿ ನೀ ಕಂಡೆ ಅಣ್ಣನಂತೆ ನೀನಿಂದು ಪ್ರೀತಿ ತೋರಿದೆ
ನನ್ನ ಅಕ್ಕರೆ ಗೆಳೆಯ ನೀನಾದೆ ನನ್ನ ಪ್ರೀತಿಯ ಹೃದಯ ನೀನಾದೆ
ಇದು ಎಂದಿಗೂ ಮುಗಿಯದ ನಂಟು ಇದು ಎಲ್ಲೂ ಹರಿಯದ ಗಂಟು ಇದು
ನನ್ನ ಹೆತ್ತತಾಯಿಯನು ಮರೆಯಿಸುವಂಥ ಪ್ರೀತಿ ತೋರಿದೆ
ಸಂತೋಷ ಇಂದು ಹೊಸ ಬದುಕಿಗೆ ಆನಂದ ಇಂದು ವಿಶ್ವಾಸ ಪ್ರೀತಿಗೆ
ಸಂತೋಷ ಇಂದು ಹೊಸ ಬದುಕಿಗೆ ಆನಂದ ಇಂದು ವಿಶ್ವಾಸ ಪ್ರೀತಿಗೆ
ಗಂಡು : ಕಣ್ಣು ಎರಡಾದರೂ ನೋಟ ಒಂದೇ ತಾನೇ ಅಂಥ ನಿಜ ನೋಟಕೆಂದು ಒಂದೇ ಗುರಿ
ತುಟಿಯು ಎರಡಾದರೂ ನಗುವು ಒಂದೇ ತಾನೇ ಅಂಥ ಸಿರಿ ನಗೆಯೇ ಇರಲಿ ಎಂದೆಂದಿಗೂ
ನನ್ನ ಆಸೆಗೆ ನೀನೇ ಕನ್ನಡಿಯು ನನ್ನ ಭಾಷೆಗೆ ನೀನೇ ಮುನ್ನಡಿಯು
ಇದು ಹುಟ್ಟುವ ಮುಂಚಿನ ಅನುಬಂಧ ಇದು ಸ್ನೇಹ ಬಾಳಿನ ಶ್ರೀಗಂಧ
ನನ್ನ ಹೆತ್ತ ತಾಯಿಯನು ಮರೆಯಿಸುವಂಥ ಪ್ರೀತಿ ತೋರಿದೆ
ಸಂತೋಷ ಇಂದು ಹೊಸ ಬದುಕಿಗೆ ಆನಂದ ಇಂದು ವಿಶ್ವಾಸ ಪ್ರೀತಿಗೆ
ಸ್ನೇಹ ಪ್ರೀತಿ ಬಂಧನವ ಬೆಸೆಯುತಿದೆ ಮೈತ್ರಿಯಾ ಲೋಕ ಕಣ್ಮುಂದೆ ಹೊಳೆಯುತಿದೆ
ಆಆಆಅ... ಆಆಆಅ... ಆಆಆಅ... ಲಾಲಾ ಲಾಲಾ ಲಾಲಾ ಲಲಲಾಲಾ ಲಲಲಾಲಾ
---------------------------------------------------------------------------------------
ಬಹಳ ಚೆನ್ನಾಗಿದೆ (೨೦೦೧) - ಬೊಂಬಾಟು ಬ್ರದ್ರಸೂ
ಸಂಗೀತ : ಕೋಟಿ, ಸಾಹಿತ್ಯ : ಭಂಗಿ ರಂಗ, ಗಾಯನ : ಎಸ್.ಪಿ.ಬಿ,
ಆಹ್ ಬೊಂಬಾಟ್ ಬ್ರದರು ಈ ಫೀಗರು ಕಿಕ್ಕು ತಂದೈತೆ ಒಳಗೆ ಗುಂಡು ಪವರು
ಉಲ್ಟಾ ಆಗೈತೆ ಲೋಕ ಆಹ್ ಮೈಯ್ಯ ಮಾಟ ಉಬ್ಬು ತಗ್ಗು ಆಹ್ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಎಲವೋ ಸೋದರ ತಪ್ಪುವೆ ಎಚ್ಚರ
ಆಹ್ ಬೊಂಬಾಟ್ ಬ್ರದರು ಈ ಫೀಗರು ಕಿಕ್ಕು ತಂದೈತೆ ಒಳಗೆ ಗುಂಡು ಪವರು
ನೊರೆಯು ಬಂದ ಬ್ರಾಂಡಿಯಂಥ ಮೈಯ್ಯ ಬಣ್ಣ ಶಾಂಪೇನ್ ಶೀಷೆಯಂತೆ ನಡ ಸಣ್ಣ
ಮತ್ತು ತರುವ ಮುದ್ದು ಗಲ್ಲ ರಸಗುಲ್ಲ ವೈನಿಗಿಂತ ಫೈನು ನಿನ್ನ ತುಟಿ ಎಲ್ಲ ಅಯ್ಯೋ....
ಪೋಲಿ ಆಟವು ಬಡ ಕಣೋ ಜಾಲಿ ಜೋಡಿಯು ಬೇಕು ಕಣೋ
ರಾಜ ರಾಜ ಕೆಂಪು ರೋಜಾ ನೀನೇ ರಾಣಿ ನಾನೇ ರಾಜ
ಒಳಗೆ ಇರುವ ಪರಮಾತ್ಮ ಆಹ್ ಮೈಯ್ಯಕೈಯ್ಯ ಎಲ್ಲ ಝಂ ಝಂ
ಓ.. ಬೇಡವೋ ಸೋದರ ತಪ್ಪುವೆ ಎಚ್ಚರ ಅಲೆಲೆಲೆಲೇ
ಆಹ್ ಬೊಂಬಾಟ್ ಬ್ರದರು ಈ ಫೀಗರು ಕಿಕ್ಕು ತಂದೈತೆ ಒಳಗೆ ಗುಂಡು ಪವರು
ಜೀನ್ಸು ಪ್ಯಾಂಟು ತೊಟ್ಟ ನನ್ನ ಜೀರ್ ಬೊಂಬೆ ಜೋಡಿ ಆಗು ಬಾರೆ ನನ್ನ ದಾಳಿಂಬೆ
ಕುಲುಕು ಬಳುಕು ನಡೆಯ ಲೇಡಿ ಲಕ್ಕಮ್ಮಾ ನಿನ್ನ ಕಣ್ಣ ಲುಕ್ಕೇ ನನ್ನ ಲಕ್ಕಮ್ಮಾ
ಹುಡುಗಿ ಹಿಂದೆ ಓಡೋದ್ ಬೇಡ ತಾಳೋ ಸ್ವಲ್ಪ ಹಿಡ್ಕೋಬ್ಯಾಡ
ರಮ್ಮು ಜಿನ್ನು ಕೋಕಾಕೋಲ ಜರ್ದಾ ಬೀಡ ಪಾನ್ ಮಸಾಲ
ಬಾರೋ ಮನೆಗೆ ಹೊತ್ತಾಗೈತೆ ಏ... ಗುಂಡು ಮತ್ತೇರೈತೆ
ಬೇಡವೋ ಸೋದರ ತಪ್ಪುವೇ ಎಚ್ಚರ...
ಆಹ್ ಬೊಂಬಾಟ್ ಬ್ರದರು ಈ ಫೀಗರು ಕಿಕ್ಕು ತಂದೈತೆ ಒಳಗೆ ಗುಂಡು ಪವರು
ಉಲ್ಟಾ ಆಗೈತೆ ಲೋಕ ಆಹ್ ಮೈಯ್ಯ ಮಾಟ ಉಬ್ಬು ತಗ್ಗು ಆಹ್ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಎಲವೋ ಸೋದರ ತಪ್ಪುವೆ ಎಚ್ಚರ
ಆಹ್ ಬೊಂಬಾಟ್ ಬ್ರದರು ಈ ಫೀಗರು ಕಿಕ್ಕು ತಂದೈತೆ ಒಳಗೆ ಗುಂಡು ಪವರು
-----------------------------------------------------------------------------------------
ಬಹಳ ಚೆನ್ನಾಗಿದೆ (೨೦೦೧) - ಕಂಡ ಒಡನೇ
ಸಂಗೀತ : ಕೋಟಿ, ಸಾಹಿತ್ಯ : ಕಲ್ಯಾಣ, ಗಾಯನ : ಎಸ್.ಪಿ.ಬಿ, ಹರಿಣಿ
ಹೆಣ್ಣು : ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಗಂಡು : ಮುಟ್ಟಿದೊಡನೆ ಮೈಯ್ಯೊಳಗೆ ಬೆಳದಿಂಗಳು
ಹೆಣ್ಣು : ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಗಂಡು : ಮುಟ್ಟಿದೊಡನೆ ಮೈಯ್ಯೊಳಗೆ ಬೆಳದಿಂಗಳು
ಹೆಣ್ಣು : ಅಂಗೈಯ ಒಳಗೆ ಹೃದಯವಿಡುವೆ ಉದಯ ರಾಗದಲಿ
ಗಂಡು : ಮಡಿಲ ಮೇಲೆ ತಲೆಯಿಡುವೆ ಸಂಧ್ಯಾ ರಾಗದಲಿ
ಹೆಣ್ಣು : ಓಹೋ .... ಗಂಡು : ಓಹೋಹೋ... ಹೋ ...
ಹೆಣ್ಣು : ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಗಂಡು : ಮುಟ್ಟಿದೊಡನೆ ಮೈಯ್ಯೊಳಗೆ ಬೆಳದಿಂಗಳು
ಹೆಣ್ಣು : ಶುರುವು ಇಲ್ಲ ಗುರುವು ಇಲ್ಲ ಪ್ರೀತಿ ಪದಗಳಿಗೆ
ಗಂಡು : ಗೊತ್ತು ಇಲ್ಲ ಗುರಿಯು ಇಲ್ಲ ಇದರ ಒಳ ಹೊರಗೆ
ಹೆಣ್ಣು : ಮಾತು ಕೊಟ್ಟು ಮನಸು ಗಿಲ್ಲೋ ಇಂಥ ಪ್ರತಿ ಘಳಿಗೆ
ಗಂಡು : ಪ್ರೀತಿಗಾಗಿ ಸೋತು ಗೆಲ್ಲೊ ಆಸೆ ಅಡಿಗಡಿಗೆ
ಹೆಣ್ಣು : ಮನಸಿನ ಬೆಸುಗೆಯೇ ಜಾನಪದ
ಗಂಡು : ಹೃದಯದ ಬೆಸುಗೆಯ ಸರಿಗಮ ಪದ.... ಓ ಓ ಓ...
ಹೆಣ್ಣು : ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಗಂಡು : ಮುಟ್ಟಿದೊಡನೆ ಮೈಯ್ಯೊಳಗೆ ಬೆಳದಿಂಗಳು
ಗಂಡು : ಆಸೆಗಳಿಗೆ ಆಸೆ ಹಚ್ಚೋ ಮೊದಲ ಪಾಠವಿದು
ಹೆಣ್ಣು : ಕನಸುಗಳಿವು ಕನಸು ಬಿಚ್ಚೋ ಬಯಸೋ ಓಟವಿದು
ಗಂಡು : ಅರಿತ ಹೃದಯ ಬೆರೆತ ಮೇಲೆ ಏನು ಮಾಡುವುದು
ಹೆಣ್ಣು : ಆಣೆ ಮಾಡಿ ಕನ್ನಂಬಾಡಿ ಕಟ್ಟೆ ಸುತ್ತುವುದು
ಗಂಡು : ಜಗವಿಡಿ ಜನುಮದ ಜೋಡಿಗಳು
ಹೆಣ್ಣು : ಯುಗವಿಡಿ ಯುಗಳದ ಗೀತೆಗಳು
ಇಬ್ಬರು : ಎದೆ ಬಡಿತವೇ ಗಟ್ಟಿಮೇಳಗಳು... ಓ ಓ ಓ ಓ ಓ
ಹೆಣ್ಣು : ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಗಂಡು : ಮುಟ್ಟಿದೊಡನೆ ಮೈಯ್ಯೊಳಗೆ ಬೆಳದಿಂಗಳು
ಹೆಣ್ಣು : ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಗಂಡು : ಮುಟ್ಟಿದೊಡನೆ ಮೈಯ್ಯೊಳಗೆ ಬೆಳದಿಂಗಳು
ಹೆಣ್ಣು : ಅಂಗೈಯ ಒಳಗೆ ಹೃದಯವಿಡುವೆ ಉದಯ ರಾಗದಲಿ
ಗಂಡು : ಮಡಿಲ ಮೇಲೆ ತಲೆಯಿಡುವೆ ಸಂಧ್ಯಾ ರಾಗದಲಿ
ಹೆಣ್ಣು : ಓಹೋ .... ಗಂಡು : ಓಹೋಹೋ... ಹೋ ...
ಹೆಣ್ಣು : ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಗಂಡು : ಮುಟ್ಟಿದೊಡನೆ ಮೈಯ್ಯೊಳಗೆ ಬೆಳದಿಂಗಳು
-----------------------------------------------------------------------------------------
ಬಹಳ ಚೆನ್ನಾಗಿದೆ (೨೦೦೧) - ಚೋರಿ ಚೋರಿ
ಸಂಗೀತ : ಕೋಟಿ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ದೇವನ, ಹರಿಣಿ
ಗಂಡು : ಚೋರಿ ಚೋರಿ... ಚೋರಿ ಚೋರಿ... ಚೋರಿ...
ಪ್ಯಾರಿ ಪ್ಯಾರಿ.. ಪ್ಯಾರಿ ಪ್ಯಾರಿ.. ಪ್ಯಾರಿ..
ಚೋರಿ ಚೋರಿ... ಚೋರಿ ಚೋರಿ... ಚೋರಿ
ಕೈಯ್ಯ ಜಾರಿ ಜಾರಿ ಹೋಯ್ತು ಮನಸು
ಅಪ್ಸರೆ ಅಪ್ಸರೆ ಮತ್ತು ಭರಿಸಿದಳು
ದಾರಿಯಾ ತಪ್ಪಿಸಿ ಬೆವರು ಇಳಿಸಿದಳು
ಸಾವಿರ ಸುಳ್ಳಿನ ವಾತ್ಸಾಯನ ಗುಟ್ಟು ಬಯಲು
ಮನಸು ಕೆಡಿಸೋ ಮದ ಮನ್ಮಥನ ಕುರುಡು ತರಲೆಗಳು
ಚೋರಿ ಚೋರಿ... ಚೋರಿ ಚೋರಿ... ಚೋರಿ
ಪ್ಯಾರಿ ಪ್ಯಾರಿ.. ಪ್ಯಾರಿ ಪ್ಯಾರಿ.. ಪ್ಯಾರಿ..
ಹೆಣ್ಣು : ಬಾಯಾರೀ ಬಾ ಎಂದೇ ಹಸಿ ಹಸಿ ಸಲಿಗೆಯಲಿ
ಕೈಯ್ಯ ಜಾರಿ ನೀರಾದೇ ಒಂದೊಂದು ಸುಲಿಗೆಯಲಿ
ಗಂಡು : ಮಾತಾಡಿ ಮೈಗೂಡಿ ಸೋತು ಬಿಟ್ಟೆ ಸರಸದಲ್ಲಿ
ಯಾರುಂಟು ಯಾರಿಲ್ಲ ಎಂಬೋದು ಮರೆತೇ ಇಲ್ಲಿ
ಹೆಣ್ಣು : ಚಮ್ಮಚಕ್ಕ ಚಮ್ಮ ಚಕ್ಕ ಚಮಗು ಸೊಗಸು
ಗಂಡು : ಚೆಲ್ಲಾಪಿಲ್ಲಿ ಆಗಿಹೋಯ್ತು ತುಂಟು ಮನಸು
ಹೆಣ್ಣು : ಬಿಟ್ಟರೆ ಸಿಕ್ಕೊಲ್ಲ ಗಂಡು : ಬಿಡದೆ ದಕ್ಕೊಲ್ಲ
ಹೆಣ್ಣು : ಚೆಲುವೆ ಅಂಥದು
ಗಂಡು : ಚೋರಿ ಚೋರಿ... ಚೋರಿ ಚೋರಿ... ಚೋರಿ
ಪ್ಯಾರಿ ಪ್ಯಾರಿ.. ಪ್ಯಾರಿ ಪ್ಯಾರಿ.. ಪ್ಯಾರಿ..
ಹೆಣ್ಣು : ನಾ ನಿಂಗೆ ನೀ ನಂಗೆ ಜಿಗುಟುವ ಚಿಟ್ಟೆಗಳು ಹಾಡೋಕೆ ಹೋದಾಗ ಬಿಗಿಯಿತು ಬಟ್ಟೆಗಳು
ಗಂಡು : ಎಲ್ಲಿಂದ ಹೇಗಿಂದ ನೆಪವೇ ಹಗಲಿರುಳು ಯಾಕಾಗಿ ಹೇಳೋಣ ನಮ್ಮೆಲ್ಲ ಗುಟ್ಟುಗಳು
ಹೆಣ್ಣು : ಪ್ರೀತಿ ಎಂಬ ಮೈದಾನಕ್ಕೆ ಅಂಟಿಕೊಳ್ಳುವ
ಗಂಡು : ಮೈಯ್ಯ ದಾನ ಮನಸು ದಾನ ಮಾಡೇಬಿಡುವೇ
ಹೆಣ್ಣು : ಮಾಯದ ಈ ಪ್ರಾಯ
ಗಂಡು : ಪ್ರಾಯದ ಈ ಮಾಯಾ
ಹೆಣ್ಣು : ಯಾರ ಕೈಯ್ಯಲಿದೇ
ಗಂಡು : ಚೋರಿ ಚೋರಿ... ಚೋರಿ ಚೋರಿ... ಚೋರಿ...
ಪ್ಯಾರಿ ಪ್ಯಾರಿ.. ಪ್ಯಾರಿ ಪ್ಯಾರಿ.. ಪ್ಯಾರಿ..
ಚೋರಿ ಚೋರಿ... ಚೋರಿ ಚೋರಿ... ಚೋರಿ
ಕೈಯ್ಯ ಜಾರಿ ಜಾರಿ ಹೋಯ್ತು ಮನಸು
ಅಪ್ಸರೆ ಅಪ್ಸರೆ ಮತ್ತು ಭರಿಸಿದಳು
ದಾರಿಯಾ ತಪ್ಪಿಸಿ ಬೆವರು ಇಳಿಸಿದಳು
ಸಾವಿರ ಸುಳ್ಳಿನ ವಾತ್ಸಾಯನ ಗುಟ್ಟು ಬಯಲು
ಮನಸು ಕೆಡಿಸೋ ಮದ ಮನ್ಮಥನ ಕುರುಡು ತರಲೆಗಳು
ಚೋರಿ ಚೋರಿ... ಚೋರಿ ಚೋರಿ... ಚೋರಿ
ಪ್ಯಾರಿ ಪ್ಯಾರಿ.. ಪ್ಯಾರಿ ಪ್ಯಾರಿ.. ಪ್ಯಾರಿ..
---------------------------------------------------------------------------------------
ಬಹಳ ಚೆನ್ನಾಗಿದೆ (೨೦೦೧) - ಹೊಸ ರಾಗದಲಿ
ಸಂಗೀತ : ಕೋಟಿ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಪಲ್ಲವಿ
ಗಂಡು : ಹೊಸರಾಗದಲಿ ಹೊಸ ತಾಳದಲಿ ಹೊಸ ಬಾಳಿನ ಶುಭ ಘಳಿಗೆ ಇದು
ಶಿವ ಪತಿಯಾಗಿ ಶಿವೆ ಸತಿಯಾಗಿ ಜೊತೆ ಸೇರಿದ ಮಂಗಳ ಸಮಯವಿದು
ಮನದಾಳದಲಿ ಅನುರಾಗದಲಿ ಮನೆ ಮಾಡಿದ ಪ್ರೀತಿಯ ಬೆಸುಗೆ ಇದು
ನಿಜ ಜೀವನದ ಸಿರಿ ಚೈತ್ರದಲಿ ನವ ಕೋಗಿಲೆ ಹಾಡಿದ ಗಾನ ಇದು
ಕಲ್ಯಾಣ ಅನುವಾಗಿ ಶುಭ ಕಂಕಣ
ಕೋರಸ್ : ಸಾ ಸಸ ಗರಿಸ ಸಪನಿ ಸನಿ ಸಾ ಸಾ ಸಸ ಗರಿಸ ಸಪನಿ ಸನಿ ಸಾ
ಸಾ ಸಸ ಗರಿಸ ಸಪನಿ ಸನಿ ಸಾ
ಹೊಸರಾಗದಲಿ ಹೊಸ ತಾಳದಲಿ ಹೊಸ ಬಾಳಿನ ಶುಭ ಘಳಿಗೆ ಇದು
ಶಿವ ಪತಿಯಾಗಿ ಶಿವೆ ಸತಿಯಾಗಿ ಜೊತೆ ಸೇರಿದ ಮಂಗಳ ಸಮಯವಿದು
ಗಂಡು : ಇದು ಸಮ್ಮಿಲನದ ಇದು ಹೊಂಗಿರಣ ಸಮುದಾಯವು ಮಾಡಿದ ಬಂಧ ಇದು
ನವ ಮದುಮಗನ ವಧು ಅನುರಣನಾ ದಿನ ಪ್ರೇಮವು ತಂದಿಹ ಗಂಧ ಇದು
ಹೆಣ್ಣು : ತನುಮನ ಕೂಡಿ ಅನುಕ್ಷಣ ಹಾಡಿ ಆತ್ಮದ ಯೋಗವಿದು... ದಾಂಪತ್ಯ ರಾಗವಿದು
ಗಂಡು : ಎದೆ ಮಂದಿರದ ಸಿರಿ ಘಂಟೆಗಳು ಮೊಳಗುವ ತಾಣ ವಿತಾನವಿದು
ಬದುಕಿನ ಬನದಲಿ ಪ್ರಣಯದ ಪರಿಣಯ ಕರುಣಿಸುವ ಮಾಂಗಲ್ಯ ಭಾಗ್ಯವಿದು
ಕೋರಸ್ : ಸಾ ಸಸ ಗರಿಸ ಸಪನಿ ಸನಿ ಸಾ ಸಾ ಸಸ ಗರಿಸ ಸಪನಿ ಸನಿ ಸಾ
ಸಾ ಸಸ ಗರಿಸ ಸಪನಿ ಸನಿ ಸಾ
ಹೊಸರಾಗದಲಿ ಹೊಸ ತಾಳದಲಿ ಹೊಸ ಬಾಳಿನ ಶುಭ ಘಳಿಗೆ ಇದು
ಶಿವ ಪತಿಯಾಗಿ ಶಿವೆ ಸತಿಯಾಗಿ ಜೊತೆ ಸೇರಿದ ಮಂಗಳ ಸಮಯವಿದು
ಕೋರಸ್ : ಧೀಂತನ ಧೀಂತನ ಧೀಂತನ ಧೀಂತನ ಧೀಂತನ ಧೀಂತನ ಧೀಂತನ
ಧೀಂತನ ಧೀಂತನ ಧೀಂತನ ಧೀಂತನ ಧೀಂತನ ಧೀಂತನ ಧೀಂತನ
ಹೆಣ್ಣು : ಇದು ಸ್ವರ್ಗದಲಿ ಜನ್ಮಜನ್ಮದಲಿ ಆ ಬ್ರಹ್ಮನು ಹಾಕಿದ ನಂಟು ಇದು
ಗಂಡು : ಇದು ಸಪ್ತಪದಿ ಇದು ಧರ್ಮ ನಿಧಿ ಸಂಸಾರದ ಜೀವನ ನಂಟು ಇದು
ಸಮರಸದಿಂದ ಸ್ನೇಹದಿ ಸಾಗಿ ಬೆಸೆಯುವ ಪ್ರೀತಿ ಇದು
ಬದುಕುವ ದಾರಿ ಇದು
ಹೆಣ್ಣು : ಆನಂದದಲಿ ಆ ಮೋದದಲಿ ಈ ಬದುಕಿನ ಪ್ರೇಮದ ಹಾದಿ ಇದು
ಗಂಡು : ಗಂಡಿನ ಹೆಣ್ಣಿನ ಒಲವು ಬಂಧಿಸೋ ಸಂತೋಷ ಸಂಸಾರ ಸೂತ್ರವಿದು
ಸಾ ಸಸ ಗಮ ಪದ ಪಮಪ ಗಮಪದ ಪಮಪ ಗಮ ಪದ ಪಮ ಗರಿಗರಿ ಸಾಸಸಸ
ಸಾ ಸಸ ಗಮ ಪದ ಪಮಪ ಗಮಪದ ಪಮಪ ಗಮ ಪದ ಪಮ ಗರಿಗರಿ ಸಾಸಸಸ
-----------------------------------------------------------------------------------------
ಬಹಳ ಚೆನ್ನಾಗಿದೆ (೨೦೦೧) - ಹೋಲಿ ಹೋಲಿ
ಸಂಗೀತ : ಕೋಟಿ, ಸಾಹಿತ್ಯ : ಕಲ್ಯಾಣ, ಗಾಯನ : ಎಸ್.ಪಿ.ಬಿ, ಚಿತ್ರಾ
ಹೆಣ್ಣು : ಹೋಲಿ ಹೋಲಿ ಹೋಲಿ ಕಾಮ ಕೇಳಿ ಹೋಲಿ ಢವ ಢವ ಎದೆಯಲಿ ಧೀರನನ ಧೀರನನ
ಯಾವುದು ಯಾವುದು ಈ ಕಂಪನ ಹೃದಯದ ಬಾಗಿಲು ತೆರೆಯುವ ಮುಂಚೆಯೇ
ರೋಮ ರೋಮಕೂ ರೋಮಾಂಚನ ಓ ಓಓ ಓಓಓ ಓಓಓ
ಹೋಲಿ ಹೋಲಿ ಹೋಲಿ ಕಾಮ ಕೇಳಿ ಹೋಲಿ
ಗಂಡು : ವಯಸೊಂದು ಬೆಂಕಿಯ ಬಲೆಯಾಯಿತು ಮೈಯ್ಯ ಅಂದ ಮೈಮರೆತು ನೀರಾಯಿತು
ಹೆಣ್ಣು : ಆವೇಗ ಉದ್ವೇಗ ಒಂದಾಯಿತು ಮನಸಲ್ಲಿ ಮನಸೋತು ಶರಣಾಯಿತು
ಗಂಡು : ತುಟಿಗಳಲ್ಲಿ ತುಟಿಗಳಾಡೋ ಬಿಸಿಯ ತುಂಟಾಟ ಎದೆಗಳಲ್ಲಿ ಬೆರಳು ಗೀಚೋ ಕುದುರೆಗಳ ಓಟ
ಹೆಣ್ಣು : ನರ ನರವು.... ಚಳಿ ಜ್ವರವು... ಕಾಮನ ಕಾಳಗವೂ
ಗಂಡು : ಹೋಲಿ ಹೋಲಿ ಹೋಲಿ ಕಾಮ ಕೇಳಿ ಹೋಲಿ
ಹೆಣ್ಣು : ಆಕಾಶ ಭೂಮಿಯ ಒಳಗೆ ಇದೆ ಈ ಭೂಮಿ ಕಡಲಾಚೆ ಎಲ್ಲೋ ಇದೆ
ಗಂಡು : ನೆನಪಿಗೂ ಮೆರೆವಿಗೂ ಸ್ಪರ್ಶ ಇದೆ ಆನಂದ ಇನ್ನೆಲ್ಲೂ ಹಾಯಾಗಿದೆ
ಹೆಣ್ಣು : ತೆಕ್ಕೆಗಳಿಗೆ ಪ್ರೇಮ ರಕ್ಕೆ ಬಿಡಿಸೋ ಬಳುವಳಿಯೋ
ಪಕ್ಕೆಗಳಿಗೆ ಕಾಮಚುಕ್ಕಿ ಇಡುವ ಕುಚಗುಳಿಯೋ
ಗಂಡು : ಇದು ವರವೋ ಹಣೆ ಬರಹವೋ ರತಿಯರ ಓಲಗವೋ
ಹೆಣ್ಣು : ಹೋಲಿ ಹೋಲಿ ಹೋಲಿ ಗಂಡು : ಕಾಮಕೇಳಿ ಹೋಲಿ
----------------------------------------------------------------------------------------
No comments:
Post a Comment