1840. ಇಂದ್ರಧನುಷ್ (೨೦೦೦)

ಇಂದ್ರಧನುಷ್ ಚಲನಚಿತ್ರದ ಹಾಡುಗಳು 
  1. ಕೇಳು ಕೇಳವ್ವಾ ಕೇಳವ್ವಾ 
  2. ಇಂದ್ರಧನುಷ್ 
  3. ನಮ್ಮ ಪ್ರಪಂಚ 
  4. ನೈಟಿಂಗೇಲ್ ನೈಟಿಂಗೇಲ್ 
  5. ಯಾರ ಕನಸಲ್ಲ 
  6. ಓಲ್ಡೆನ್ ಡೇಸ್ ಓಲ್ಡೆನ್ ಡೇಸ್ 
  7. ಮಾಯಾ ಯಾ ಮಾಯಾ 
  8. ಚೆಂದವೋ ಚೆಂದೋ
ಇಂದ್ರಧನುಷ್ (೨೦೦೦) - ಕೇಳು ಕೇಳವ್ವಾ ಕೇಳವ್ವಾ 
ಸಂಗೀತ ಹಾಗೂ ಸಾಹಿತ್ಯ : ವಿ.ಮನೋಹರ, ಗಾಯನ : ಡಾ।। ರಾಜಕುಮಾರ 

ಕೇಳು ಕೇಳವ್ವ ಕೇಳವ್ವ ಗೊರವಂಶ ಕೇಳಿ ಒಂದು ಹಾಡ 
ಎಲ್ಲಾ ಬಲ್ಲನೋ ಸಿದ್ದಯ್ಯ ಸಿದ್ದಯ್ಯ ಸ್ವಾಮಿ ನಮ್ಮ ಹಾಡ 
ನಾರಿನಾಗೆ ಹೂವಕಟ್ಟು ನೀರಿನಾಗೆ ಆಣೆಕಟ್ಟು 
ನಾಲಿಗೆಗೊಂದು ನುಡಿ ಕಟ್ಟು ನೋಟದಾಗೆ ಓಣಿ ಕಟ್ಟು 
ಕಲ್ಲೂ ಮಾತಾಡೋ ಹಂಗೇ ಹೆಸರು ಕಟ್ಟೋ 
ಕೇಳು ಕೇಳವ್ವ ಕೇಳವ್ವ ಗೊರವಂಶ ಕೇಳಿ ಒಂದು ಹಾಡ 
ಎಲ್ಲಾ ಬಲ್ಲನೋ ಸಿದ್ದಯ್ಯ ಸಿದ್ದಯ್ಯ ಸ್ವಾಮಿ ನಮ್ಮ ಹಾಡ 

ಎಡಿಯೂರ ಮೂಡಣದಾಗೆ ಮಾರ್ಕೋನಳ್ಳಿಯಾ ಹೊಳೆಗೆ ಅಣೆಕಟ್ಟಿ ಬಂದ್ರು ವಿಶ್ವೇಶ್ವರಯ್ಯ  
ವಿಶ್ವೇಶ್ವರಯ್ಯ ಬಂದರೋ ಮೈಸೂರ ದೇಶ ಮಂತ್ರಿ ಕೂಡೆ 
ಅರಮಾನೇ ಮಂತ್ರಿ ಕುವರಿ ಚೆಲುವಾಂಬ ಬಂದ್ಳು ಊರ ನೋಡೇ 
ಊರಿಗೊಬ್ಬ ಮುತ್ತುಸ್ವಾಮಿಯ ಕೆತ್ತನೆಯ ನೋಡಿದಳು 
ಮೆಚ್ಚಿಕೊಂಡು ಮಾತನಾಡಿ ಆದರವ ತೋರಿದಳು 
ತಾನಿ ತಂದಾನೋ ತಾನೂ ತಂದನ್ನಾನೋ 
ಮೈಸೂರ ಒಡೆಯರು ಬಂದು ಆಣೆಕಟ್ಟೆ ತೆರೆದಾ ಮ್ಯಾಲು 
ಚೆಲುವಾಂಬೆ ಮುತ್ತುಸ್ವಾಮಿ ಸ್ನೇಹ ಬೆಳೆದೈತಣ್ಣ  
ಎಂಥಾ ಮೋಹವು ಹುಟ್ಟಿತೋ ಮನಸುಗಳೆರಡೂ ಸೇರೋ ಹಾಗೆ 
ಆಹಾ ಎಂಥಾ ಆನಂದ ಮೂಡಿತೋ ಮಿಂಚಂತೆ ಅವರ ಕಣ್ಣಮ್ಯಾಗೆ   
ಹೂವನ್ನ ಬಚ್ಚಿಡಬಹುದು ಕಂಪನ್ನ ಬಚ್ಚಿಡಬಹುದೇ 
ಉಸಿರನ್ನ ಹಿಡಿದಿಡ್ಕ೦ದ್ರು ಗಾಳಿಯ ಕಟ್ಟಿಡಬಹುದೇ 
ಅರಮನೆ ಮಂತ್ರಿ ಕಣ್ಣಿಗೆ ಸಂಶಯ ಹುಳ ಬಿದ್ದಿತಲ್ಲೋ 
ಎಲ್ಲೋ ಎಡವಟ್ಟು ಕಂಡಿತೋ ಹುಳ ಬೆಳೆದು ಹೆಬ್ಬುಲಿ ಆಯಿತಲ್ಲೋ 
ಬೆಚ್ಚಿದಳು ಮಲ್ಲೆ ಬಾಲೆ ಓಡಿದಳು ಕುದುರೆ ಮ್ಯಾಲೇ 
ಸೂಜಿಗಲ್ಲ ಮೋಹ ಮಾಲೆ ಮಾಯಾಗಾರನಾಡೋ ಲೀಲೆ 
ಜವರಾಯ ಯಾತರಂಥೋರು ಕುದುರೆಯ ಮ್ಯಾಲೆ ಏರಿ ಬಂದರೋ 
ಆಕಾಶ ಗಂಗೆ ಭೂಮಿಗೆ ಧುಮ್ಮಿಕ್ಕಿ ಹರಿದು ಬಂದಳೋ 
ಎಲ್ಲಿ ಹೋದೇವೋ ಹೇಗೆ ಉಳಿದೇವೋ ದಾರಿ ತೋರದೆ ಓಡಿದರೋ 
ಯಾವ ದೈವ ಕಾಯಲಿಲ್ಲವೋ ಕೈಯ್ಯ ನೀಡಲಿಲ್ಲವೋ ನೋಡಿರೋ.... 
ಮಂಗಳದ ಮಂದಹಾಸವೇ ಗುರುಸಿದ್ದಯ್ಯನೇ 
ಅಂಧಕಾರವಾಗಿ ಹೋಯ್ತಲ್ಲೋ ಜೋಡಿ ಜೀವ ಸೇರೋ ಕಾಲಕೆ 
ಕಾಲ ಭೈರವನೇ ಕಾಲದೊಳಗೆ ಸೇರಿ ಹೋದರೋ 
---------------------------------------------------------------------------

ಇಂದ್ರಧನುಷ್ (೨೦೦೦) - ಇಂದ್ರಧನುಷ್ 
ಸಂಗೀತ ಹಾಗೂ ಸಾಹಿತ್ಯ : ವಿ.ಮನೋಹರ, ಗಾಯನ : ಮನು, ಅನುಪಮಾ 

ಹೆಣ್ಣು : ಇಂದ್ರಧನುಷ್... ಇಂದ್ರಧನುಷ್... 
          ಮಳೆ ಬಿಲ್ಲಲಿ ಏಳೇ ಬಣ್ಣ ನನ್ನೊಳಗೆಲ್ಲಾ ಸಾವಿರ ಬಣ್ಣ 
          ಕನಸೇ ಕನಸೇ ಸುಂದರ ಕನಸೇ... ಹೇಹೇಹೇ
          ಇಂದ್ರಧನುಷ್... ಇಂದ್ರಧನುಷ್... 
ಗಂಡು : ಅಭಿಸಾರಿಕಾ.... ಅಭಿಸಾರಿಕಾ... 

ಕೋರಸ್ : ವೈಲೆಟ್ಟು ಗ್ರೀನ್ ಇಂಡಿಕೋ ಎಲ್ಲೋ ಆರೆಂಜ್ ರೆಡ್ ಬಣ್ಣಗಳ ಬೊಂಬೆ ಇವಳು 
                ನೂರಾರು ಕನಸುಗಳ ಮಿಂಚು ಇವಳು 
ಹೆಣ್ಣು : ಹೇ ಹೇ ಹೇ ಹೇ ಹೇ... 
           ಕಣ್ಣಲ್ಲಿ ಕಪ್ಪಾದೆ ಕಾಡಿಗೆ ಬಣ್ಣ ಆದರೂ ದೂರಾಗೋದು ಸಾವಿರ ಬಣ್ಣ 
           ಕಣ್ಣಿಗೂ ಕಾಣದ ಬಣ್ಣಗಳು ಎಲ್ಲಿವೆ ಬಯಸಿದ ಬಣ್ಣಗಳ ಬಿಲ್ಲ ಬರೆದೆ... 
           ಇಂದ್ರಧನುಷ್... ಇಂದ್ರಧನುಷ್... 
ಗಂಡು : ಅಭಿಸಾರಿಕಾ.... ಅಭಿಸಾರಿಕಾ... 

ಗಂಡು : ನೀಲಿಯ ನೀ ಕೆಂಪೆದರು ಚೆನ್ನ ಬರೆದೆ ನನ್ನ ಕನಸಿಗೆ ಹೊಸ ಬಣ್ಣ 
            ಯಾವದೇ ಬಣ್ಣವಾ ಮೀರಿದಾ ಹೆಣ್ಣು ನೀ ಮಣಿಯುತ ಮಣಿಸುವ ಮಾಯೆ ಮಣಿ      
            ಇಂದ್ರಧನುಷ್... ಇಂದ್ರಧನುಷ್... 
ಗಂಡು : ಅಭಿಸಾರಿಕಾ.... ಅಭಿಸಾರಿಕಾ... 
ಹೆಣ್ಣು : ಮಳೆ ಬಿಲ್ಲಲಿ ಏಳೇ ಬಣ್ಣ ನನ್ನೊಳಗೆಲ್ಲಾ ಸಾವಿರ ಬಣ್ಣ 
          ಕನಸೇ ಕನಸೇ ಸುಂದರ ಕನಸೇ... ಹೇಹೇಹೇ
          ಇಂದ್ರಧನುಷ್... ಇಂದ್ರಧನುಷ್... 
ಗಂಡು : ಅಭಿಸಾರಿಕಾ.... ಅಭಿಸಾರಿಕಾ... 
----------------------------------------------------------------------------

ಇಂದ್ರಧನುಷ್ (೨೦೦೦) - ನಮ್ಮ ಪ್ರಪಂಚ 
ಸಂಗೀತ ಹಾಗೂ ಸಾಹಿತ್ಯ : ವಿ.ಮನೋಹರ, ಗಾಯನ : ಶಿವರಾಜಕುಮಾರ, ಛಾಯ, ರಿತೀಶ್  

ಗಂಡು : ನಮ್ಮ ಪ್ರಪಂಚ ಹೂಮಂಚ ಹೂಮಂಚ ಮಾಯದ ಕುಂಚ ಬರೆದೈತೆ ಇಂಚಿಂಚ 
           ಹೇ... ಎಲ್ಲೆಲ್ಲೂ ಚಿತ್ತಾರ ಎಂಥೆಂಥ ಅಲಂಕಾರ ನಾವಿರುವ ಭೂಮಿಲೇ 
           ಓಲೆ ಓಲೆಲೆ ರಂಗಂಗೂ ರಂಗೋಲೇ... ಓಲೆ ಓಲೆಲೆ ರಂಗಂಗೂ ರಂಗೋಲೇ...  

ಬೇಬಿ : ಕಲ್ ಕಲೆನಾ ಕಲ್ಲಲ್ ಕಲೆನಾ... ಕಲ್ ಕಲೆನಾ ಕಲ್ಲಲ್ ಕಲೆನಾ 
          ಕಲ್ಲು ಕಲ್ಲು ಸ್ಮೈಲಿಂಗ್ ಸ್ಮೈಲಿಂಗ್ ವಾಟ್ ಎ ಲವ್ಲಿ ಕುಶಲ ಕಲಾ 
         ಕಲ್ ಕಲೆನಾ ಕಲ್ಲಲ್ ಕಲೆನಾ... 
ಗಂಡು : ಈ ಜಗದಾ ಲವ್ಲಿ ಕಾಟೇಜ್                ಬೇಬಿ : ಚಿಟ್ಟೆಯ ರೇಷ್ಮೆ ಫ್ಯಾಟ್ರ್ 
ಗಂಡು : ಜೇನಗಾರರ ಸ್ವೀಟು ಸ್ಟಾಲು              ಬೇಬಿ : ಕಣಜಾದ ಮಣ್ಣಿನ ರೂಮ್ 
ಗಂಡು : ಬಿಲ ಕಟ್ಟಿ ಕಾಯೋ ಕೋಲೆ               ಬೇಬಿ : ಗೆದ್ದಲಿನ ಎವರೆಸ್ಟ್ ಪ್ಯಾಲೇಸ್ 
ಗಂಡು : ಒಳಗೋಳಗೆ ಇರುವೆ ಗೋಡೌನ್       ಬೇಬಿ : ದುಂಬಿಗಳ ಕೆಂಡ ಗಾರ್ಡನ್ 
ಗಂಡು : ಯಾರ್ ಹೇಳ್ ಕೊಟ್ರನ್ನ ಕಲೆಯ ವಿಶ್ವೇಶ್ವರಯ್ಯನ್ ತಲೆಯಾ 
ಬೇಬಿ : ಆ ಸ್ಕೂಲ್ ಕಲ್ತೊರೆಲ್ಲ ನಮಗಿಂತ ಬುದ್ವಂತರಲ್ಲ 
ಗಂಡು : ಹೇ..... ಎಲ್ಲೆಲ್ಲೂ ಚಿತ್ತಾರ ಎಂಥೆಂಥ ಅಲಂಕಾರ ನಾವಿರುವ ಭೂಮಿಲೇ 
           ಓಲೆ ಓಲೆಲೆ ರಂಗಂಗೂ ರಂಗೋಲೇ... ಓಲೆ ಓಲೆಲೆ ರಂಗಂಗೂ ರಂಗೋಲೇ...  
           ನಮ್ಮ ಪ್ರಪಂಚ ಹೂಮಂಚ ಹೂಮಂಚ ಮಾಯದ ಕುಂಚ ಬರೆದೈತೆ ಇಂಚಿಂಚ 
ಬೇಬಿ : ಕಲ್ ಕಲೆನಾ ಕಲ್ಲಲ್ ಕಲೆನಾ...        

ಗಂಡು : ಹೂವುಗಳ ಬಣ್ಣದ ಸ್ಕರ್ಟ್             ಬೇಬಿ : ಚಿಟ್ಟೆಗಳ ಘಾಘ್ರ ಚೋಲಿ 
ಗಂಡು : ಚಿರತೆಯ ಚುಕ್ಕಿ ಕೋಟು               ಬೇಬಿ : ಹುಲಿರಾಯನ ಲೈನ್ ಲೈನ್ ಸೂಟು 
ಗಂಡು : ಮೀನಾಕ್ಷಿ ಸ್ವಿಮ್ಮಿಂಗ್ ಡ್ರೆಸ್ಸೂ         
ಗಂಡು :  ಹುಂಜಪ್ಪನ ಕೆಂಪು ಟೋಪಿ            ಬೇಬಿ : ನವಿಲ್ಲಣ್ಣನ ಚೋಕಿಲಂಗಾ 
ಗಂಡು : ಮಿಂಚ್ ಹುಳದ ಹಿಂಡದ ಬಲ್ಪು ಆಮೆಯ ಬೆನ್ನ ಮೇಲ ಬಾಂಡ್ಲಿ 
ಬೇಬಿ : ಯಾವ ಡಿಸೈನರ್ ಎಲ್ಲ ಸ್ಕೇಚ್ಚ್ ಹಾಕ್ದಂಗ್ ಕಮ್ಮಿಲ್ಲಣ್ಣ 
ಗಂಡು : ಹೇ..... ಎಲ್ಲೆಲ್ಲೂ ಚಿತ್ತಾರ ಎಂಥೆಂಥ ಅಲಂಕಾರ ನಾವಿರುವ ಭೂಮಿಲೇ 
           ಓಲೆ ಓಲೆಲೆ ರಂಗಂಗೂ ರಂಗೋಲೇ... ಓಲೆ ಓಲೆಲೆ ರಂಗಂಗೂ ರಂಗೋಲೇ...  
           ನಮ್ಮ ಪ್ರಪಂಚ ಹೂಮಂಚ ಹೂಮಂಚ ಮಾಯದ ಕುಂಚ ಬರೆದೈತೆ ಇಂಚಿಂಚ 
ಬೇಬಿ : ಕಲ್ ಕಲೆನಾ ಕಲ್ಲಲ್ ಕಲೆನಾ...        
----------------------------------------------------------------------------

ಇಂದ್ರಧನುಷ್ (೨೦೦೦) - ನೈಟಿಂಗೇಲ್ ನೈಟಿಂಗೇಲ್ 
ಸಂಗೀತ ಹಾಗೂ ಸಾಹಿತ್ಯ : ವಿ.ಮನೋಹರ, ಗಾಯನ : ಮನು 

ಲೋಲಾ... ಲೋಲಾ ....ಹೋ ... 
ನೈಟಿಂಗೇಲ್ ನೈಟಿಂಗೇಲ್ ಸಿಂಗೆ ಸಾಂಗ್ ನೈಟಿಂಗೇಲ್ 
ಟ್ವೆಂಟಿ ಒನ್ ಸೆಂಚುರಿ ವೆಲ್ ಕಮ್ ಮಾಡು ನೈಟಿಂಗೇಲ್ 
ಇಟ್ ಟೂ ಥೌಸಂಡ್ ಟೂ ಥೌಸಂಡ್ 
ವೈಟೂಕೆ ಪ್ರಾಬ್ಲಮ್ ಸಾಲ್ವ್ ಆಗೋಯ್ತು ರೀಯಾ ರೀಯಾ ಹೋ ... 

ಮರಿಂದ ಮರಿಂದ ಕರಿಂದ ಕರಿಂದ ಸಿಂಗ್ ವಿಥ್ ದಿ ಫ್ಲವರ್ ಜಾಯ್ 
ಮರಿಂದ ಮರಿಂದ ಕರಿಂದ ಕರಿಂದ ಸಿಂಗ್ ವಿಥ್ ದಿ ಫ್ಲವರ್ ಜಾಯ್ 
ಇಪ್ಪತ್ತನೇ ಶತಮಾನ ಉದ್ದ ಉದ್ದುದ್ದ ಇಂಥ ಇತಿಹಾಸ ಕಲಿಸದ್ರು ಆಗಿಲ್ಲಾ ಯಾರು ಬುದ್ಧ 
ಇಂಟರನೆಟ್ ಬಂದು ಕ್ಲೋರಿನ್ ಬಂತು ಬೆಳಿತಾ ಇದೆ ವಿಜ್ಞಾನ 
ಏನಾದ್ರೂ ಈ ಮನುಷ್ಯ ಮನಸಲ್ ಮಾತ್ರ ಸೈತಾನ್ 
ಅವ್ರು ಹಂಗೆ ಇವ್ರು ಹಿಂಗೇ ಯಾರಂಗಾರ ಇರ್ಲಿ ನಮಗೂ ಮುಂದೆ ರಿಯಾ ರಿಯಾ ಹೋ .. 
ಲೋಲಾ... ಲೋಲಾ ....ಹೋ ... 
ನೈಟಿಂಗೇಲ್ ನೈಟಿಂಗೇಲ್ ಸಿಂಗೆ ಸಾಂಗ್ ನೈಟಿಂಗೇಲ್ 
ಟ್ವೆಂಟಿ ಒನ್ ಸೆಂಚುರಿ ವೆಲ್ ಕಮ್ ಮಾಡು ನೈಟಿಂಗೇಲ್ 
ಇಟ್ ಟೂ ಥೌಸಂಡ್ ಟೂ ಥೌಸಂಡ್ 
ವೈಟೂಕೆ ಪ್ರಾಬ್ಲಮ್ ಸಾಲ್ವ್ ಆಗೋಯ್ತು ರೀಯಾ ರೀಯಾ ಹೋ ... 

ಸಿಲ್ ಸಿಲ್ ಸಿಲೆ ಸಿಲ್ ಸಿಲೆ ದಿಲ್ ದಿಲ್ ಮಿಲೇ ಮಿಲೇ 
ಸಿಲ್ ಸಿಲ್ ಸಿಲೆ ಸಿಲ್ ಸಿಲೆ ದಿಲ್ ದಿಲ್ ಮಿಲೇ ಮಿಲೇ 
ಕುಂತ್ರು ನಿಂತ್ರು ಎಲ್ಲಾ ಕೆಲ್ಸಕ್ ಕಂಪ್ಯೂಟರ್ ನಮ್ ಗೆಳೆಯ 
ಇಷ್ಟಾದ್ರೂ ಪ್ರೀತ್ಸೋಕೆ ಬೇಕೇ ಬೇಕಮ್ಮಾ ಹೃದಯ 
ಮುಂದಿನ ಶತಮಾನೆಲ್ಲ ಇನ್ನೂ ಹುಡುಗಿರದೇ ಕೈ ಮೇಲೂ 
ಆ ಮೇಲೂ ಫೀಮೇಲೂ ಹುಡುಗರ್ರೀ ಮೊಗಾಕ್ ಡೋಲು 
ಬರ್ ಬರ್ತಾ ಇನ್ಮೇಲು ಶೀಲಾ ಯುಗದ ಡ್ರೆಸ್ ಎಲ್ಲೆಲ್ಲೂ 
ರೀಯಾ ರಿಯಾ ಹೋ .. ರೀಯಾ ರಿಯಾ ಹೋ .. 
ಲೋಲಾ... ಲೋಲಾ ....ಹೋ ... 
ನೈಟಿಂಗೇಲ್ ನೈಟಿಂಗೇಲ್ ಸಿಂಗೆ ಸಾಂಗ್ ನೈಟಿಂಗೇಲ್ 
ಟ್ವೆಂಟಿ ಒನ್ ಸೆಂಚುರಿ ವೆಲ್ ಕಮ್ ಮಾಡು ನೈಟಿಂಗೇಲ್ 
ಇಟ್ ಟೂ ಥೌಸಂಡ್ ಟೂ ಥೌಸಂಡ್ 
ವೈಟೂಕೆ ಪ್ರಾಬ್ಲಮ್ ಸಾಲ್ವ್ ಆಗೋಯ್ತು ರೀಯಾ ರೀಯಾ ಹೋ ... 
---------------------------------------------------------------------------

ಇಂದ್ರಧನುಷ್ (೨೦೦೦) - ಯಾರ ಕನಸಲ್ಲಿ  
ಸಂಗೀತ ಹಾಗೂ ಸಾಹಿತ್ಯ : ವಿ.ಮನೋಹರ, ಗಾಯನ : ಡಾ।। ರಾಜಕುಮಾರ 

ಆ ಆ ಆ... ಯಾರಾ ಕನಸಲ್ಲಿ ಯಾರಾ ಕಥೆಯಲ್ಲಿ 
ಆಸೆಯಾ ಮಣಿ ಪೋಣಿಸಿ ತಾನೇ ಮಾಡಿದ ಹಾರಾ... ಮಾಯಾ ಹಾರಾ  ಮಾಯಾ ಹಾರಾ 
ಯಾರಾ ಕನಸಲ್ಲಿ ಯಾರಾ ಕಥೆಯಲ್ಲಿ 
ಆಸೆಯಾ ಮಣಿ ಪೋಣಿಸಿ ತಾನೇ ಮಾಡಿದ ಹಾರಾ... ಮಾಯಾ ಹಾರಾ  ಮಾಯಾ ಹಾರಾ 

ಹೊಳೆವ ಬೆಳ್ಳಿಯ ಧೂಳಿ ಚುಕ್ಕಿ ಬಿರಿದಾ ಅಂಬರದಿಂದ 
ಓಹೋ ... ಏನಿದು ತಾರೆ ಬಿದ್ದಿದೆ ಹೆಕ್ಕಲೇನು ನೆಲದಿಂದ 
ಹೊಳೆವ ಬೆಳ್ಳಿಯ ಧೂಳಿ ಚುಕ್ಕಿ ಬಿರಿದಾ ಅಂಬರದಿಂದ 
ಓಹೋ ... ಏನಿದು ತಾರೆ ಬಿದ್ದಿದೆ ಹೆಕ್ಕಲೇನು ನೆಲದಿಂದ 
ಸನಿಹ ಹೋದರೆ ಕೈಗೆ ಸಿಕ್ಕದೆ ಹಾರಿತೋ ಮಿಣುಕು ಹುಳ 
ಯಾರಾ ಕನಸಲ್ಲಿ ಯಾರಾ ಕಥೆಯಲ್ಲಿ 
ಆಸೆಯಾ ಮಣಿ ಪೋಣಿಸಿ ತಾನೇ ಮಾಡಿದ ಹಾರಾ... ಮಾಯಾ ಹಾರಾ  ಮಾಯಾ ಹಾರಾ 

ಸೂರ್ಯ ಕಿರಣದ ಮಂಜರಿಯ ನಾಡು ಪುಷ್ಯರಾಗದ ಮಣಿಗಳು 
ಎಣಿಸಿ ಒಯ್ಯುವೆ ಎಂದು ಹೋದೆ ಕುಣಿದು ಕುಣಿದು ಸನಿಹಕೆ 
ಸೂರ್ಯ ಕಿರಣದ ಮಂಜರಿಯ ನಾಡು ಪುಷ್ಯರಾಗದ ಮಣಿಗಳು 
ಎಣಿಸಿ ಒಯ್ಯುವೆ ಎಂದು ಹೋದೆ ಕುಣಿದು ಕುಣಿದು ಸನಿಹಕೆ 
ಎಣಿಕೆ ತಪ್ಪಿತು ಮಣಿಯು ಜಾರಿತು ಮಂಜಿನೊಲವಿನ ನೀರದು... 
ಯಾರಾ ಕನಸಲ್ಲಿ ಯಾರಾ ಕಥೆಯಲ್ಲಿ 
ಆಸೆಯಾ ಮಣಿ ಪೋಣಿಸಿ ತಾನೇ ಮಾಡಿದ ಹಾರಾ... ಮಾಯಾ ಹಾರಾ  ಮಾಯಾ ಹಾರಾ 

ಮಳೆಯ ಬಿಲ್ಲಿನ ಏಳು ಎಳೆಗಳ ಎಳೆದು ಸರಿಸುತ ನೋಡಿದೆ 
ನಾನು ಬಯಸಿದ ಬಣ್ಣ ಬೇರೆಯೇ ಎಲ್ಲಿ ಹೋಯಿತು ದೊರೆಯದೆ 
ಅಷ್ಟರಲ್ಲಿಯೇ ಇದ್ದದು ಸಹ ಕರಗಿ ಹರಡಿತು ಕತ್ತಲು 
ಯಾರಾ ಕನಸಲ್ಲಿ ಯಾರಾ ಕಥೆಯಲ್ಲಿ 
ಆಸೆಯಾ ಮಣಿ ಪೋಣಿಸಿ ತಾನೇ ಮಾಡಿದ ಹಾರಾ... ಮಾಯಾ ಹಾರಾ  ಮಾಯಾ ಹಾರಾ 
 ----------------------------------------------------------------------------

ಇಂದ್ರಧನುಷ್ (೨೦೦೦) - ಓಲ್ಡೆನ್ ಡೇಸ್ ಓಲ್ಡೆನ್ ಡೇಸ್ 
ಸಂಗೀತ ಹಾಗೂ ಸಾಹಿತ್ಯ : ವಿ.ಮನೋಹರ, ಗಾಯನ : ರಮೇಶಚಂದ್ರ, ಶ್ಯಾನಭೋಗ 

ಓಲ್ಡನ್ ಡೇಸ್ ಗೋಲ್ಡನ್ ಡೇಸ್ ಓಲ್ಡನ್ ಡೇಸ್ ಗೋಲ್ಡನ್ ಡೇಸ್ 

ವಿಡಿಯೋ ಕ್ಯಾಸೆಟ್ಟನ್ನ ರೀವೈನ್ಡ್ ಮಾಡಬಹುದು  ಮಿಂಚಿ ಹೋದ ರೀವೈನ್ಡ್ ಮಾಡಬಹುದು 
ಬರಿಯೋ  ಚಿತ್ರ ತಪ್ಪಿದರೇ ತಿದ್ದಬಹುದು  ಕೆತ್ತೋ ಶಿಲ್ಪ ಒಡೆದೇ ಹೋದ್ರೇ ತಿದ್ದಬಹುದಾ 
ಕಳೆದುದಕ್ಕೆ ಸೆಲ್ಯೂಟ್ ಹೊಡೆದು ನಾಳೆದಕ್ಕೆ ಕಣ್ಣ ತೆರೆದು ಹೋಗ್ತಿರಬೇಕು ಮುಂದೆ ಮುಂದೇ 
ಓಲ್ಡನ್ ಡೇಸ್ ಗೋಲ್ಡನ್ ಡೇಸ್ ಓಲ್ಡನ್ ಡೇಸ್ ಗೋಲ್ಡನ್ ಡೇಸ್ 

ಬಬರೇ ..ಬಬರೇ ... ಬರ್ತಿಯಾ ಬರ್ತಿಯಾ ಪಾರ್ಕಿಗೆ ಬರ್ತಿಯಾ ಬರ್ತಿಯಾ ಹೋಟೆಲಿಗೆ 
ಐ ಲವ್ ಯು ಲವ್ ಯು ಲೈಲಾ ಲೈಲಾ ಲೈಲಾ ಲೈಲಾ   ಲೈಲಾ ಲೈಲಾ ಲೈಲಾ 
ಜೋರ್ ಕಾ ಜಟ್ಕಾ ಧೀರೇಸೆ ಲಗೇ ಜೋರ್ ಕಾ ಜಟ್ಕಾ ಧೀರೇಸೆ ಲಗೇ  
ಆ ಚಮಕ್ ಚಮಕಿನ್ ದಾರಿ ದೇಖೋ ತೆರೆ ಸರ್ ಪೆ ಪ್ರೇಮ ಪೂಜಾರಿ ಆಯಾ ದೇಖೋ 
ಆ ತೋಡ್ ಕೆ ಬಂಧನ್ ಆಜಾ ರಾಣಿ ಏ ದಿಲ್ ಮಾಂಗೇ ಪ್ಯಾರ್ 
ನೋ ಪ್ರಾಬ್ಲಮ್ ಇಟ್ಸ್ ಆಲ್ ಇನ್ ಲವ್ ನೋ ಪ್ರಾಬ್ಲಮ್ ನೋ ಪ್ರಾಬ್ಲಮ್    
ಓಲ್ಡನ್ ಡೇಸ್ ಗೋಲ್ಡನ್ ಡೇಸ್ ಓಲ್ಡನ್ ಡೇಸ್ ಗೋಲ್ಡನ್ ಡೇಸ್ 
ಓಲ್ಡನ್ ಡೇಸ್ ಗೋಲ್ಡನ್ ಡೇಸ್ ಓಲ್ಡನ್ ಡೇಸ್ ಗೋಲ್ಡನ್ ಡೇಸ್ 
----------------------------------------------------------------------------

ಇಂದ್ರಧನುಷ್ (೨೦೦೦) - ಮಾಯಾಯಯಾ ಮಾಯಾಯಯಾ 
ಸಂಗೀತ ಹಾಗೂ ಸಾಹಿತ್ಯ : ವಿ.ಮನೋಹರ, ಗಾಯನ : ವಿ.ಮನೋಹರ

ಮಾಯಾಯಯಾ ಮಾಯಾಯಯಾ ಮಾಯಾಯಯಾ .... 
ಮಾಯಾಯಯಾ ಮಾಯಾಯಯಾ ಮಾಯಾಯಯಾ .... 
ಲೈಫಲ್ ಮದ್ವೆ ಮಾತ್ರ ಆಗ್ಬೇಡ ಬ್ರದರ್  ಇದು ಅನುಭವದ ಮಾತ್ ಕೇಳ್ ಬ್ರದರ್ 
ಮದ್ವೇಗ ಮುಂಚೆ ಕಿಂಗ್ ಆಗಿದ್ದೋನು ಆಮೇಲ್ ಇಂಗ್ ತಿಂದ ಮಂಗ ಬ್ರದರ್ 
ಮೊದ್ಲು ನಗ್ ನಗ್ತ ಬಿಳ್ಸೋ ಫಿಗರ್ ಗಂಡ್ಸು ಹಿಂದೆ ಹಿಂದೆ ಹೋಗೋ ಬೆಗ್ಗರ್ 
ಮದ್ವೆಗೇ ಮುಂಚೆ ನಾನಾಗಿದ್ದೆ ಟೈಗರ್ ಈಗ ಪಂಚರ್ ಆಗೋದ ಟಯರ್ 
ಮಾಯಾಯಯಾ ಮಾಯಾಯಯಾ ಮಾಯಾಯಯಾ .... 
ಮಾಯಾಯಯಾ ಮಾಯಾಯಯಾ ಮಾಯಾಯಯಾ .... 

ಮದ್ವೆಯಾದ ಹೊಸದರಲ್ಲಿ ನಾನ್ ಟ್ರಿಮ್ ಬಾಯ್ ಬ್ರದರ್ 
ಆಮೇಲ್ ಬೆಡ್ ಬಾಯ್ ತಂದ್ಕೊಡೋ ರೂಮಬಾಯ್ ಆದೆ ಬ್ರದರ್ 
ಸಿಲ್ಕ್ ಸ್ಯಾರೀ ಎಕ್ಸಿಭೂಷನ್ ಡ್ರಾಮ್ ಪಿಕ್ಚರ್ 
ಎಲ್ಲ ತೋರ್ಸಿ ಕೇಳಿದ್ ಕೊಡ್ಸಿ ನಾನಾದೇ ಪಾಪರ್  
ಹೊರಗೆ ಹೊಡೀತಾರೆ ನಂಗೆ ಸಲಾಂ ಆದ್ರೆ ನಮ ಮನೇಲ್ ಜೋರು ಕಾ ಗುಲಾಂ 
ಮಾಯಾಯಯಾ ಮಾಯಾಯಯಾ ಮಾಯಾಯಯಾ .... 
ಮಾಯಾಯಯಾ ಮಾಯಾಯಯಾ ಮಾಯಾಯಯಾ .... 

ಯಾವ ಹುಡುಗಿನೂ ನೋಡಂಗಿಲ್ಲ ಯಾವ ಹೆಂಗ್ಸಲ್ ಮಾತಾಡಾಂಗಿಲ್ಲ 
ಕಣ್ಣಲ್ ಬೆಂಕಿ ಕಾರುತ್ತಾಳೆ ಸಂತೇಲ್ ಮಂಗಳಾರತಿ ಮಾಡುತ್ತಾಳೆ 
ಹೊರಗೆ ಖರ್ಚೆನು ಮಾಡಾಂಗಿಲ್ಲ ಅವ್ಳು ಬಡ್ಸಿದ್ದು ಉಣ್ಣ0ಗಿಲ್ಲ  
ರಾತ್ರಿ ಲೇಟಾಗ್ ಬಂದ್ರೆ ಬ್ರದರ್ ಒಪ್ಪತ್ತು ಊಟಾನೂ ಕಟ್ಟು ಬ್ರದರ್ 
ಮಾಯಾಯಯಾ ಮಾಯಾಯಯಾ ಮಾಯಾಯಯಾ .... 
ಮಾಯಾಯಯಾ ಮಾಯಾಯಯಾ ಮಾಯಾಯಯಾ .... 

ಕಲರ್ ಟಿವಿ ಫ್ರಿಜ್ಜು ಫ್ಯಾನು ವಾಷಿಂಗ್ ಮಿಷಿನ್ 
ನನ್ ಬೀವಿ ಕೋಡೋ ಲಿಸ್ಟಿಗೆ ನೋ ಲಿಮಿಟೇಷನ್ 
ಏನ್ ತಂದು ಕೊಟ್ರು ಅವ್ಳಿಗಿಲ್ಲ ಸ್ಯಾಟಿಸ್ ಫ್ಯಾಷನ್ 
ಇಷ್ಟೇ ನಿಮ್ ಯೋಗ್ಯತೇ ಅಂತ ಮಾತಿನ ಇಂಜೆಕ್ಷನ್ 
ಎಂಥ ಫಿರಂಗಿ ಗಂಡು ಸಹ ಹೇಂಡ್ರ್ ಮುಂದೆ ಕಮಂಗಿ ಬ್ರದರ್ 
ಮಾಯಾಯಯಾ ಮಾಯಾಯಯಾ ಮಾಯಾಯಯಾ .... 
ಮಾಯಾಯಯಾ ಮಾಯಾಯಯಾ ಮಾಯಾಯಯಾ .... 
---------------------------------------------------------------------------

ಇಂದ್ರಧನುಷ್ (೨೦೦೦) - ಚೆಂದವೋ ಚೆಂದೋ 
ಸಂಗೀತ ಹಾಗೂ ಸಾಹಿತ್ಯ : ವಿ.ಮನೋಹರ, ಗಾಯನ : ಸಂಗೀತ ಕಟ್ಟಿ 

ಚೆಂದವೋ ಚೆಂದೋ ಚೆನ್ ಚೆಂದೋ 
ಚೆಂದವೋ ಚೆಂದೋ ಓಡೋ ನದಿ ಚೆಂದೋ ಚಿನ್ ಚೆಂದೋ 
ನೀರನಲೇ ಚೆಂದೋ ಜುಳು ಜುಳು ಬಲು ಬಳುಕಿ 
ಮಿಣು ಮಿಣುಕಿ ವೇಳಾ ಹದಿನಾರು ಹೆಣ್ಣುಡುಗಿ ಹರಿತಾಳೆ ನೀಳಾ 
ಕೇಳಬ್ಯಾಡ ತಿಳಿಬ್ಯಾಡ ನದಿ ನೀರಾ ಮೂಲ ನೂರು ಸುಳಿಯ ಮನಸೊಳಗೆ ಇಳಿದರೆ ಪಾತಾಳ 
ಕೇಳಬ್ಯಾಡ ತಿಳಿಬ್ಯಾಡ ನದಿ ನೀರಾ ಮೂಲ ನೂರು ಸುಳಿಯ ಮನಸೊಳಗೆ ಇಳಿದರೆ ಪಾತಾಳ 
ಕೊಂಡೆ ಹೂ ಕೊಂಡೆ ಅಪ್ಸಲ್ಗಿ ಜಾಜಿ ಹೂ ಕೊಂಡೆ ನಾಗ ಸಂಪಿಗೆ ಕರವೀರ ಹೂವ ಮುಡುಕೊಂಡೇ 
ಕನ್ನೇ ಹೂ ಕನ್ನೇ ಹೂ ದಪ್ಪಾದ ಚೆಂದ ಆ ಚೆಂದ ಈ ಚೆಂದ ನನಗೆ ಎಲ್ಲಾ ಮಕರಂದ 
ನಾರಿ ನಾರಿ ಸಿಂಗಾರಿ ಎದೆಯೊಳಗ್ ಕಡಲಿತ್ತು ಹಾಲು ಕಡಲು ಸೊಗಸಂತ ಅಂಬರ ಕನಸಿತ್ತು 
ನಾರಿ ನಾರಿ ಸಿಂಗಾರಿ ಎದೆಯೊಳಗ್ ಕಡಲಿತ್ತು ಹಾಲು ಕಡಲು ಸೊಗಸಂತ ಅಂಬರ ಕನಸಿತ್ತು 
ಕಾಣಿ ಚುಕ್ಕಾಣಿ ಚುಕ್ಕಾಣಿ ಮಾಯ್ದು ಚುಕ್ಕಾಣಿ ಮಾಯ್ದು ಚುಕ್ಕಾಣಿ ನಡೆಸೋದು ಬಣ್ಣದಾ ದೋಣಿ 
ಜಲಧಾರೇ ಅಲೆಮ್ಯಾಲೆ ಆಸೆಯಾ ದೋಣಿ ಗಂಡಿಗೆ ತಪ್ಪನ್ನು ಪ್ರೀತಿಯಾ ಗೇಣಿ 
ಗೇಣಿ ಕಟ್ಟುಸ್ ಕೊಂಡವ್ಳು ನಾಗರ ನೀಲವೇಣಿ  ವೇಣಿ ಬೆನ್ನಕ್ ಕೊಸೊವನ್ಗೆ ಒಲಿದವ್ಳು ಕಲ್ಯಾಣಿ 
ಗೇಣಿ ಕಟ್ಟುಸ್ ಕೊಂಡವ್ಳು ನಾಗರ ನೀಲವೇಣಿ  ವೇಣಿ ಬೆನ್ನಕ್ ಕೊಸೊವನ್ಗೆ ಒಲಿದವ್ಳು ಕಲ್ಯಾಣಿ 
ಜಾಣೆ ಬಲು ಜಾಣೆ ಈ ಜಾಣೆ ಜಗದಾಣೆ ಸಂದಿಗೊಂದಿಲೆ ಹಾದಿಯ ಕಂಡ ಬಲು ಜಾಣೆ 
ಚಾಲಾಕಿ ನಾಜೂಕಿ ಹೆಣ್ಣೇಕೆ ಒಳಗೊಳ್ಗೆ ಜಾಣ್ಯಾಗು ಹರಿಯೋದು ಹಳ್ಳದ ಕಡಿಗೆ 
ಕಾಣ ಬಂದ್ರೆ ಗಡಿ ದಾಟಿ ಹಕ್ಕಿ ಹರಿವಾಕೆ ಕಾಣದಂಥ ಬಪ್ಪಳವಳಾಲ ಅಳಿಬ್ಯಾಡ ಜ್ವಾಕೆ 
ಕಾಣ ಬಂದ್ರೆ ಗಡಿ ದಾಟಿ ಹಕ್ಕಿ ಹರಿವಾಕೆ ಕಾಣದಂಥ ಬಪ್ಪಳವಳಾಲ ಅಳಿಬ್ಯಾಡ ಜ್ವಾಕೆ 
---------------------------------------------------------------------------

No comments:

Post a Comment