1841. ನಾಗರ ಬಯಲು (೧೯೮೫) ಬಿಡುಗಡೆಯಾಗಿಲ್ಲ



ನಾಗರ ಬಯಲು (ಪ್ರೀತಿ ನಿನ್ನದು ಮದುವೆ ನನ್ನದು) ಚಲನಚಿತ್ರದ ಹಾಡುಗಳು 
  1. ಶೃಂಗಾರ ಹಣ್ಣಿಂದ 
  2. ನೀ ಬಂದೇ 
  3. ಹೆಣ್ಣ ಕಣ್ಣ ತುಂಬಾ 
  4. ನಾನೇ ಹಾಡಲೀ 
ನಾಗರ ಬಯಲು (೧೯೮೫)  - ಶೃಂಗಾರ ಹಣ್ಣಿಂದ 
ಸಂಗೀತ : ಇಳೆಯರಾಜ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ. 

ಗಂಡು : ಲಾ.... ಲಾ...ಲಾಲಲಾಲಾ    
ಇಬ್ಬರು : ಲಾಲಲಾಲಾ ಲಾಲಲಾಲಾ ಲಾಲಲಾಲಾ ಲಾಲಲಾಲಾ ಲಾಲಲಾಲಾ 
ಗಂಡು : ಶೃಂಗಾರ ಹೆಣ್ಣಿಂದ ಸಂತೋಷ ಹೂವಿಂದ ಸಂಗೀತ ನೀನೂ 
            ಶೃಂಗಾರ ಹೆಣ್ಣಿಂದ ಸಂತೋಷ ಹೂವಿಂದ ಸಂಗೀತ ನೀನೂ 
            ನಲಿದಾಡಿ ಮನ ನವಿಲಾಗಿ ಸುಳಿದಾಡಿ ಸುಖ ಸುಳಿಯಾಗಿ ಬಾಳಲಿ 
            ಶೃಂಗಾರ ಹೆಣ್ಣಿಂದ ಸಂತೋಷ ಹೂವಿಂದ ಸಂಗೀತ ನೀನೂ 

ಗಂಡು : ನೀ ತಂದೆ ಅಂದು ಹೊಸ ಚೇತನ ನಾ ಕಂಡೇ ಇಂದು ನವಜೀವನ 
            ನೀ ತಂದೆ ಅಂದು ಹೊಸ ಚೇತನ ನಾ ಕಂಡೇ ಇಂದು ನವಜೀವನ 
ಹೆಣ್ಣು : ನೀನೇ ನನ್ನ ಬಾಳ ದೀಪ ನಾನೇ ನಿನ್ನ ಪ್ರೀತಿ ರೂಪ 
ಗಂಡು : ಬಳಿಯಾಡೋ ಕೈಯ್ಯಗೇ ಬಂಗಾರ ಬೇಕೇ ಚಳಿದಾಡೋ ನಿಂಗೇ ಸಂಗಾತಿ ಸಾಕೇ 
ಹೆಣ್ಣು : ಕೂಡಿ ಬಾಳೆಲ್ಲ ನಾವ್ ಸೇರಿ ಸಾಗೋಣ.. 
          ಸಿಂಧೂರ ಗಂಡಿದ ಸಂತೋಷ ನಿನ್ನಿಂದ ಶೃಂಗಾರ ನೀನೇ 
          ನಲಿದಾಡಿ ಮನ ನವಿಲಾಗಿ ಸುಳಿದಾಡಿ ಸುಖ ಸುಳಿಯಾಗಿ ಬಾಳಲಿ 
          ಸಿಂಧೂರ ಗಂಡಿದ ಸಂತೋಷ ನಿನ್ನಿಂದ ಶೃಂಗಾರ ನೀನೇ 
              
ಹೆಣ್ಣು :  ಆ ನೋಟ ಅಂದು ಹೊಸ ರಾಗವೂ ಈ ಆಟ ಇಂದು ಹೊಸ ಭಾಷೆಯೂ 
           ಆ ನೋಟ ಅಂದು ಹೊಸ ರಾಗವೂ ಈ ಆಟ ಇಂದು ಹೊಸ ಭಾಷೆಯೂ 
ಗಂಡು : ರಾಗ ನೀನೂ ತಾಳ ನಾನೂ ಹೂವೂ ನೀನೂ ದುಂಬಿ ನಾನೂ 
ಹೆಣ್ಣು : ಅನುರಾಗ ಎಲ್ಲಾ.. ಜೇನಾಗಿ ಇಂದು ಅನುಮಾನವೆಲ್ಲಾ ಧೂಳಾಯಿತಿಂದು 
ಗಂಡು : ಕೂಡಿ ಬಾಳೆಲ್ಲ ನಾವ್ ಸೇರಿ ಸಾಗೋಣ 
            ಶೃಂಗಾರ ಹೆಣ್ಣಿಂದ ಸಂತೋಷ ಹೂವಿಂದ ಸಂಗೀತ ನೀನೂ 
ಹೆಣ್ಣು :   ನಲಿದಾಡಿ ಮನ ನವಿಲಾಗಿ ಸುಳಿದಾಡಿ ಸುಖ ಸುಳಿಯಾಗಿ ಬಾಳಲಿ 
ಗಂಡು : ಲಲಲ ಲ್ಲಲ್ಲಲಾ...  ಲಲಲ ಲ್ಲಲ್ಲಲಾ...  ಲಲಲ ಲ್ಲಲ್ಲಲಾ...  ಅಹ್ಹಹಾ 
ಹೆಣ್ಣು : ಲಲಲ ಲ್ಲಲ್ಲಲಾ...  ಲಲಲ ಲ್ಲಲ್ಲಲಾ...  ಲಲಲ ಲ್ಲಲ್ಲಲಾ...  
-----------------------------------------------------------------------------------------------

ನಾಗರ ಬಯಲು (೧೯೮೫) ನೀ ಬಂದೇ 
ಸಂಗೀತ : ಇಳೆಯರಾಜ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ. 

ನೀ ಬಂದೇ ... ನನಗಾಗಿ ಹೆಣ್ಣೊಂದಾ ನೀನಾಗಿ 
ಸಿರಿಯೋ ಮೈಸಿರಿಯೂ ಸುರನಾಡಿಯೂ 
ಒಲವು ಈ ಛಲವೂ ಇದು ಯಾರದೋ.. 
ನೀ ಬಂದೇ ... ನನಗಾಗಿ ಹೆಣ್ಣೊಂದಾ ನೀನಾಗಿ 

ಎಲ್ಲಿಂದ ಬಂದೇ ಓ ನನ್ನ ಬಂಧೂ .. ಈ ನೋಟದ ಸಿರಿ ನಾ ನೋಡಿದೆ 
ಎಲ್ಲಿಂದ ಬಂದೇ ಓ ನನ್ನ ಬಂಧೂ .. ಈ ನೋಟದ ಸಿರಿ ನಾ ನೋಡಿದೆ 
ಆ ದೇವರ... ಸಂಕಲ್ಪವಾ... ಏನೇನ್ನುತಾ... ನಾ ಕೇಳಲಿ... 
ಆ ಪ್ರೇಮ ಏನೆಂದು ನೀ ಬಲ್ಲೆಯಾ..  
ಆ ಪ್ರೇಮ ಏನೆಂದು ನೀ ಬಲ್ಲೆಯಾ ಒಗಟ ಬಿಡಿಸಿ ಮಾತಾಡೆಯಾ 
ನೀ ಬಂದೇ ... ನನಗಾಗಿ ಹೆಣ್ಣೊಂದಾ ನೀನಾಗಿ 

ಈ ದಾರಿಯಲ್ಲಿ ಸಂಗಾತಿಯಾಗೆ ಹೂರಾಶಿಯೇ ಚೆಲ್ಲಿ ಬಾ ಎನ್ನುವೇ... 
ಈ ದಾರಿಯಲ್ಲಿ ಸಂಗಾತಿಯಾಗೆ ಹೂರಾಶಿಯೇ ಚೆಲ್ಲಿ ಬಾ ಎನ್ನುವೇ... 
ಮಾಂಗಲ್ಯವಾ ನಾ ನೀಡುವೇ ಆನಂದವಾ ಹೊಂದೋಣವೇ 
ಈ ಜೀವ ಎಂದೆಂದೂ ನನಗಾಗಿದೇ..   
ಈ ಜೀವ ಎಂದೆಂದೂ ನನಗಾಗಿದೆ ಮನದ ಮನೆಗೇ ಸುಸ್ವಾಗತ 
ನೀ ಬಂದೇ ... ನನಗಾಗಿ ಹೆಣ್ಣೊಂದಾ ನೀನಾಗಿ 
ಸಿರಿಯೋ ಮೈಸಿರಿಯೂ ಸುರನಾಡಿಯೂ 
ಒಲವು ಈ ಛಲವೂ ಇದು ಯಾರದೋ.. 
ನೀ ಬಂದೇ ... ನನಗಾಗಿ ಹೆಣ್ಣೊಂದಾ ನೀನಾಗಿ 
----------------------------------------------------------------------------------------------

ನಾಗರ ಬಯಲು (೧೯೮೫) ಹೆಣ್ಣ ಕಣ್ಣ ತುಂಬಾ 
ಸಂಗೀತ : ಇಳೆಯರಾಜ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, 

ಹೆಣ್ಣಾ..  ಕಣ್ಣಾ ತುಂಬಾ ತುಂಬಿಕೋ ಅಂದ.. ಬೇಕೇ ನಿನಗೆ ತಬ್ಬಿಕೋ 
ಏಕೋ ಹೀಗೆ ನಾಚಿ ನಿಂತೇ ಈಗೋ ನಿನ್ನ ನೂರು ಚಿಂತೆ 
ಬಾರೋ ನನ್ನ ಕೂಡಿ ಕನಸ ನನಸ ಮಾಡಿಕೋ 
ಹೆಣ್ಣಾ..  ಕಣ್ಣಾ ತುಂಬಾ ತುಂಬಿಕೋ ಅಂದ.. ಬೇಕೇ ನಿನಗೆ ತಬ್ಬಿಕೋ 

ಆಸೆ ಬಳ್ಳಿ ಅಪ್ಪಿಕೋ ಸಾರವೆಲ್ಲ ಹೀರಿಕೋ 
ಆಸೆ ಬಳ್ಳಿ ಅಪ್ಪಿಕೋ ಸಾರವೆಲ್ಲ ಹೀರಿಕೋ 
ಬಂದಿದೆ ವೇಳೆಯೂ ತೂರಿಕೋ ಅಂದದ ಚೆಂದವ ಸೇರಿಕೋ 
ನೀನೂ ನಂಬು ನನ್ನ ಇಲ್ಲಿ ಬಾರೋ ನನ್ನ ಚಿನ್ನ 
ಬಾರೋ ನನ್ನ ಕೂಡಿ ಕನಸ ನನಸ ಮಾಡಿಕೋ 
ಹೆಣ್ಣಾ..  ಕಣ್ಣಾ ತುಂಬಾ ತುಂಬಿಕೋ ಅಂದ.. ಬೇಕೇ ನಿನಗೆ ತಬ್ಬಿಕೋ 
ಏಕೋ ಹೀಗೆ ನಾಚಿ ನಿಂತೇ ಈಗೋ ನಿನ್ನ ನೂರು ಚಿಂತೆ 
ಬಾರೋ ನನ್ನ ಕೂಡಿ ಕನಸ ನನಸ ಮಾಡಿಕೋ 
ಹೆಣ್ಣಾ..  ಕಣ್ಣಾ ತುಂಬಾ ತುಂಬಿಕೋ ಅಂದ.. ಬೇಕೇ ನಿನಗೆ ತಬ್ಬಿಕೋ 
 
ಕೈಯ್ಯ ಕೈಯ್ಯ ಕೂಡಿತೂ ತಾಳಮೇಳ ಹೊಂದಿತು 
ಕೈಯ್ಯ ಕೈಯ್ಯ ಕೂಡಿತೂ ತಾಳಮೇಳ ಹೊಂದಿತು ಜೇನಿನ ರಾತ್ರಿಯೂ ಈಗಲೇ... 
ಹೊಂದಿತು ಚೆಂದದ ಹೂ ಮಳೆ  
ಪ್ರೀತಿ ಮಾಡಬೇಕು ಸೇರಿ ಹೀಗೂ ಹೊಂದಬೇಕು 
ಬಾರಾ ನನ್ನ ಕೂಡಿ ಕನಸ ನನಸ ಮಾಡಿಕೋ 
ಹೆಣ್ಣಾ..  ಕಣ್ಣಾ ತುಂಬಾ ತುಂಬಿಕೋ ಅಂದ.. ಬೇಕೇ ನಿನಗೆ ತಬ್ಬಿಕೋ 
ಏಕೋ ಹೀಗೆ ನಾಚಿ ನಿಂತೇ ಈಗೋ ನಿನ್ನ ನೂರು ಚಿಂತೆ 
ಬಾರೋ ನನ್ನ ಕೂಡಿ ಕನಸ ನನಸ ಮಾಡಿಕೋ 
ಹೆಣ್ಣಾ..  ಕಣ್ಣಾ ತುಂಬಾ ತುಂಬಿಕೋ ಅಂದ.. ಬೇಕೇ ನಿನಗೆ ತಬ್ಬಿಕೋ 
-----------------------------------------------------------------------------------------------

ನಾಗರ ಬಯಲು (೧೯೮೫) ನಾನೇ ಹಾಡಲೇ  
ಸಂಗೀತ : ಇಳೆಯರಾಜ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.

ಕೋರಸ್ : ಕೂಕೂ ಕೂ... ಜೂಜೂ ಜೂ... ಜುಗೂ ಜುಗೂ ಜುಗೂ ಜುಗೂ ಜುಗೂ ಜುಗೂ ಜುಗೂ ಜುಗೂ      
ಹೆಣ್ಣು : ನಾನೇ ಹಾಡಲೇ ಹೊಸ ರಾಗವ ಸದಾ ಪ್ರೇಮದಾ ಸವಿ ಗಾನವ 
ಗಂಡು : ಸಾವಿರ ಸ್ವರಗಳ ಸಂಗೀತವೇ ಈ ರಾಗ ಸುಂದರ ಸುಮಧುರ ಸಂತೋಷದ ಪರಾಗ 
ಹೆಣ್ಣು : ನಾನೇ ಹಾಡಲೇ ಹೊಸ ರಾಗವ 
ಕೋರಸ್ : ಜೂಜೂ ಜೂ... ಜೂಜೂ ಜೂ.ಜೂಜೂ ಜೂ.ಜೂಜೂ ಜೂ.ಜೂಜೂ ಜೂ.ಜೂಜೂ ಜೂ.
 
ಗಂಡು : ಯಾವ ದಾಹದಾಸೆಗೆ ಮೋಹದಾಟ ಮಾಗಿದೆ ವೇದವೇ ಕಾಲದ ದೇವಗಾನ ಹಾಡಿದೆ 
ಹೆಣ್ಣು : ಯೌವ್ವನ ಚೇತನ ಬಾಳಿನೀ ... ಹೂವಿಗೂ ಪ್ರೇಮದ ಪೂಜೆಗೆ 
          ಜೀವ ಜೀವ ಕೂಡಿ ಪ್ರೇಮಕ್ಕಾಗಿ ಹಾಡಿ 
          ಅದೇ ದೇವರು ಹಾಡಿದ ಪ್ರೇಮಾನುರಾಗ 
ಗಂಡು : ನೀನೇ ಹಾಡಿದ ಹೊಸ ರಾಗದಿ ಶೃತಿ ಮಾಡಿದ ಕವಿ ಸೇವೆಗೆ... 

ಕೋರಸ್ : ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ 
ಹೆಣ್ಣು : ಕೇಳದಿಶ ಪೂಜ್ಯವ ಸೇರಿದೆ ಸಂತೋಷವು ಪ್ರೇಮದ ಈ ಬಾಳಿಗೆ ಸ್ನೇಹದಾ ಸಂದೇಶವು 
ಗಂಡು : ನೇಸರ ಮಾಡಿದ ಮೋಡಿಗೆ... ದೇವರೇ ಕೈಸೆರೆ ಆದರೆ 
           ಹಾವಭಾವ ಸೇರಿ ಮಾತುಮೌನವಾಗಿ ಅದೇ ದೇವತೆ ನೀಡಿದ ಜೀವಾನುರಾಗ            
ಹೆಣ್ಣು : ನಾನೇ ಹಾಡಲೇ ಹೊಸ ರಾಗವ ಸದಾ ಪ್ರೇಮದಾ ಸವಿ ಗಾನವ 
ಗಂಡು : ಸಾವಿರ ಸ್ವರಗಳ ಸಂಗೀತವೇ ಈ ರಾಗ 
ಹೆಣ್ಣು : ಸುಂದರ ಸುಮಧುರ ಸಂತೋಷದ ಪರಾಗ 
ಇಬ್ಬರು : ಸದಾ ಪ್ರೇಮವೂ ಸವಿಗಾನವು 
---------------------------------------------------------------------------------------------

No comments:

Post a Comment