1842. ಹೆಣ್ಣಿನ ಕೂಗು (೧೯೮೬)

ಹೆಣ್ಣಿನ ಕೂಗು ಚಲನಚಿತ್ರದ ಹಾಡುಗಳು 
  1. ಎಂಥ ಜನ ನೋಡಮ್ಮಾ 
  2. ಎಂಥ ಜಾಣೆ ನೋಡಯ್ಯಾ 
  3. ನನ್ನಾಸೆಯ ಸಂಗಾತಿಯೇ 
  4. ಇದು ಹೆಣ್ಣಿನ ಕಥೆಯೋ 
  5. ನಿನ್ನ ಮುರುಳಿಗಾನ 
  6. ಬಾಳಲಿ ಇಂದು ಸುಖವನು ಕಂಡೇ  
ಹೆಣ್ಣಿನ ಕೂಗು (೧೯೮೬) - ಎಂಥ ಜನ ನೋಡಮ್ಮಾ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಲಾಲಾ... ಊಲಾಲಾ ಊಲಾಲಾ.... ಊಲಾಲಾ ಊಲಾಲಾ
ಓಯ್ ಎಂಥ ಜಾಣ ನೋಡಮ್ಮಾ ಬುದ್ಧಿವಂತ ಅಮ್ಮಮ್ಮಾ 
ಎಂಥ ಜಾಣ ನೋಡಮ್ಮಾ ಬುದ್ಧಿವಂತ ಅಮ್ಮಮ್ಮಾ 
ಹೈ ... ಎಲ್ಲೂ ದೊರಕದ ಈ ಚತುರ ಏಕೇ ಇಲ್ಲಿ ಬಂದ ಸುಂದರ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಲಲಲಾ.. ಲಲಲಾ  
 
ಈ ಊರಿಗೇ ಈತನು ಹೊಸಬನು ಸ್ನಾನ ಮಾಡಿಲ್ಲ ಬೆವರಿ ದಿನವೆಲ್ಲ 
ಕಂಪು ಮೈಯ್ಯೆಲ್ಲಾ ಕೊಬ್ಬೇನೂ ಆ ವಾಸನೆ ತಾಳದೆ ಈತನು 
ಬಿದ್ದು ನೀರಲ್ಲಿ ಒದ್ದೆ ಮೈಯ್ಯೆಲ್ಲಿ ಎದ್ದ ನೋಡಲ್ಲಿ ಇನ್ನೇನು 
ಸೋಪು ಗೀಪು ಶೀಗೆಕಾಯಿ ಒಂದು ಹಾಕೋದಿಲ್ಲವೇ 
ಅಯ್ಯೋ ಪಾಪ ಒದ್ದೆ ಬಟ್ಟೆ ನೆಗಡಿ ಆಗೋದಿಲ್ಲವೇ 
ಓಯ್... ಓಯ್... ಓಯ್... ಬಂತು ನೋಡು ಹಬ್ಬೀ ... 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಲಲಲಾ.. ಲಲಲಾ  
ಓಯ್ ಎಂಥ ಜಾಣ ನೋಡಮ್ಮಾ ಬುದ್ಧಿವಂತ ಅಮ್ಮಮ್ಮಾ 
ಎಂಥ ಜಾಣ ನೋಡಮ್ಮಾ ಬುದ್ಧಿವಂತ ಅಮ್ಮಮ್ಮಾ 
ಹೈ ... ಎಲ್ಲೂ ದೊರಕದ ಈ ಚತುರ ಏಕೇ ಇಲ್ಲಿ ಬಂದ ಸುಂದರ 

ಈ ಗಂಡಿಗೂ ಕೋಪವು ಬರುತಿದೆ ಮೀಸೆ ಇಲ್ವೇನು ರೋಷ ಇಲ್ವೇನು 
ಕೋಪ ಅಲ್ದೇನೇ ಇನ್ನೇನೂ ಈ ಮೀಸೆಗೆ ಆಸೆಯೇ ಇಲ್ಲವೇ... 
ಆಸೇ ಇದ್ದೇನೆ ಊರು ಬಿಟ್ಟಿದ್ದು ಇಲ್ಲಿ ಬಂದಿದ್ದು ಗೊತ್ತೇನು 
ನನ್ನ ನೋಡಿ ಆಗು ಜೋಡಿ ಎಂದ ಇವನು ಆಗಲೇ... 
ಹೋಗೋ.. ಹೋಗೋ.. ಮೂರ್ಖ ಎನಲು ಬಿದ್ದ ಹೀಗೆ ನೀರಿಗೆ 
ಓಯ್... ಓಯ್... ಓಯ್... ಅಯ್ಯೋ ಪಾಪ ಹಬ್ಬೀ ... 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಲಲಲಾ.. ಲಲಲಾ  
ಓಯ್ ಎಂಥ ಜಾಣ ನೋಡಮ್ಮಾ ಬುದ್ಧಿವಂತ ಅಮ್ಮಮ್ಮಾ 
ಎಂಥ ಜಾಣ ನೋಡಮ್ಮಾ ಬುದ್ಧಿವಂತ ಅಮ್ಮಮ್ಮಾ 
ಹೈ ... ಎಲ್ಲೂ ದೊರಕದ ಈ ಚತುರ ಏಕೇ ಇಲ್ಲಿ ಬಂದ ಸುಂದರ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಲಲಲಾ.. ಲಲಲಾ  
-----------------------------------------------------------------------------------
 
ಹೆಣ್ಣಿನ ಕೂಗು (೧೯೮೬) - ಎಂಥ ಜಾಣೆ ನೋಡಯ್ಯಾ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. 

ಓಯ್... ಎಂಥ ಜಾಣೆ ನೋಡಯ್ಯ ಅಂದಗಾತಿ ತಮ್ಮಯ್ಯ 
ಎಂಥ ಜಾಣೆ ನೋಡಯ್ಯ ಅಂದಗಾತಿ ತಮ್ಮಯ್ಯ 
ಹೇ... ಸೂರ್ಯಕಾಂತಿ ಈ ಮೊಗವು ಬಳ್ಳಿ ಹಾಗೆ ಇವಳ ಸೊಂಟವು 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಪಬಪಪಪಪಾ.. 

ಈ ಊರಿಗೆ ಈಕೆಯು ಹಳಬಳು ಇವಳ ಅಂದಕ್ಕೆ ಇವಳ ಬಣ್ಣಕ್ಕೆ ಸಾಟಿ ಯಾರಿಲ್ಲ ನೋಡಪ್ಪ 
ನಾ ಎಲ್ಲಿಯೂ ಕಾಣದ ಕೊಳಕಲು ಸ್ನಾನ ಮಾಡೋಲ್ಲ ಬಟ್ಟೆ ಒಗೆಯಲ್ಲ ನೋಡೋಕಾಗಲ್ಲ ಅಯ್ಯಪ್ಪ... 
ಹೆಣ್ಣು ಅಂದ ಬುದ್ದಿ ಮಂದ ತಲೆಯೇ ನಿಲ್ಲೋದಿಲ್ಲವೇ... 
ನಮ್ಮ ಮುಂದೆ ಕೋಳಿ ಜಂಭ ಎಂದು ನಡೆಯೋದಿಲ್ಲವೇ... 
ಓಯ್... ಓಯ್... ಓಯ್... ಇನ್ನು ಆಯ್ತು ನೋಡು     
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಪಬಪಪಪಪಾ.. 
ಎಂಥ ಜಾಣೆ ನೋಡಯ್ಯ ಅಂದಗಾತಿ ತಮ್ಮಯ್ಯ 
ಹೇ... ಸೂರ್ಯಕಾಂತಿ ಈ ಮೊಗವು ಬಳ್ಳಿ ಹಾಗೆ ಇವಳ ಸೊಂಟವು.. ಆಆಆ 
 
 ಈ ಹೆಣ್ಣಿಗೂ ಕೋಪವು ಬರುತಿದೆ ಕೆನ್ನೆ ರಂಗಾಯ್ತು ಮೂಗು ಕೆಂಪಾಯ್ತು ತುಟಿಯು ಶೇಕಾಯ್ತು ನೋಡಯ್ಯ.. 
ಆ ಕಣ್ಣಲ್ಲಿ ಚಪಲವು ಕುಣಿದಿದೆ ಚಪಲ ಬಂದಾಯ್ತು ಮನಸು ಹುಚ್ಚಾಯ್ತು ಬಯಕೆ ನೂರಾಯ್ತು ಕೇಳಯ್ಯಾ... 
ಏನೋ ಹೋಯ್ತು ಎಲ್ಲಿ ಎಂದು ನನ್ನ ಕೇಳಲಿಲ್ಲವೇ.... 
ಹೋಗಿದ್ದೇನು ಎಂದು ನಿಮಗೆ ಈಗ ಕಾಣೋದಿಲ್ಲವೇ  
ಓಯ್... ಓಯ್... ಓಯ್... ನಾಚಿಕೆ ಬೇರೆ ಕೇಡು 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಪಬಪಪಪಪಾ.. 
ಎಂಥ ಜಾಣೆ ನೋಡಯ್ಯ ಅಂದಗಾತಿ ತಮ್ಮಯ್ಯ 
ಹೇ... ಸೂರ್ಯಕಾಂತಿ ಈ ಮೊಗವು ಬಳ್ಳಿ ಹಾಗೆ ಇವಳ ಸೊಂಟವು.. ರಬ ರಬಪಬಾ... 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಪಬಪಪಪಪಾ.. 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ 
ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಡಿಂಗಿ ಡಾಂಗ್ ಪಬಪಪಪಪಾ.. 
--------------------------------------------------------------------------------

ಹೆಣ್ಣಿನ ಕೂಗು (೧೯೮೬) - ನನ್ನಾಸೆಯ ಸಂಗಾತಿಯೇ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ  

ಹೆಣ್ಣು : ಆ ಆ ಆ ಆ ಆ ಅ ...                   ಗಂಡು : ನಿನಿಸಸ ಗಗಸಸ ನಿನಿಸಸ ಗಗಸಸ 
ಗಂಡು : ಆ ಆ ಆ ಆ ಆ ಅ ...                 ಕೋರಸ್ : ಸಸಗಗ ಪಪಮಮ ಸಸಗಗ ಪಪಮಮ 
ಹೆಣ್ಣು : ನನ್ನಾಸೆಯಾ ...                       ಗಂಡು : ಆ ಆ ಆ ಆ ಆ ಅ ...  ಸಂಗಾತಿಯೇ 
ಹೆಣ್ಣು : ಆಆಆಆಆಅ ...ನನ್ನಾಸೆಯ         ಗಂಡು : ಸಂಗಾತಿಯೇ 
ಹೆಣ್ಣು : ನಿನ್ನ ನೋಡದ ಕಂಗಳು ಏತಕೆ ಬೇಕಿಲ್ಲ
ಗಂಡು : ನಿನ್ನ ಸೇರದ ಬಾಳದು ವ್ಯರ್ಥವು ಸುಳ್ಳಲ್ಲಾ... 
ಹೆಣ್ಣು : ನಿನ್ನ ನೋಡದ ಕಂಗಳು ಏತಕೆ ಬೇಕಿಲ್ಲ
ಗಂಡು : ನಿನ್ನ ಸೇರದ ಬಾಳದು ವ್ಯರ್ಥವು ಸುಳ್ಳಲ್ಲಾ... 
ಹೆಣ್ಣು : ಜೀವದ ಜೀವವೇ ಪ್ರಾಣದ ಪ್ರಾಣವೇ... 
ಗಂಡು : ಜೀವದ ಜೀವವೇ ಪ್ರಾಣದ ಪ್ರಾಣವೇ... 
ಹೆಣ್ಣು : ನನ್ನಾಸೆಯಾ ...                       ಗಂಡು : ಸಂಗಾತಿಯೇ 

ಕೋರಸ್ : ಥಕದೊಂ... ಥಕದೊಂ... ಥಕದೊಂ... ಥಕದೊಂ...   ಗಂಡು : ಆಆಆ... 
ಕೋರಸ್ : ಥಕದೊಂ... ಥಕದೊಂ... ಥಕದೊಂ... ಥಕದೊಂ...   ಹೆಣ್ಣು : ಆಆಆ... 
ಗಂಡು : ನಾ ನಿನ್ನಿಂದ ಕ್ಷಣಕಾಲ ಕೂಡ ದೂರಾಗಲಾರೆ ನಿನ್ನನ್ನು ತೊರೆದು ನಾ ಬದುಕಲಾರೆ 
            ಜೊತೆಯಲೇ ಇರುವೇನು ಪ್ರೇಮದಿ ಜೊತೆಯಲೇ ಇರುವೇನು ಸ್ನೇಹದಿ 
ಹೆಣ್ಣು : ಸ್ನೇಹದ ಆರತಿ ಎತ್ತುವೇ... ಪ್ರೀತಿಯ ಗೀತೆಯ ಹಾಡುವೇ 
ಗಂಡು : ಹಿತವಾದ ಮಾತಾಡಿದೆ ಹೇ...ಹೇ... 
ಹೆಣ್ಣು : ನನ್ನಾಸೆಯಾ ...                       ಗಂಡು : ಸಂಗಾತಿಯೇ 

ಹೆಣ್ಣು : ಈ ಎದೆಯಲ್ಲಿ ಗುಡಿಯೊಂದ ಮಾಡಿ ನಿನ್ನನ್ನು ಇಡುವೇ 
          ಒಲವೆಂಬ ದೀಪ ನಿನಗಾಗಿ ತರುವೇ ...
          ಪ್ರೇಮದ ಮಾತಿನ ಮಲ್ಲಿಗೆ ಹೂವಲಿ ಪೂಜೆಯ ಮಾಡುವೇ 
ಗಂಡು : ಹರುಷವ ಬದುಕಲಿ ಬೆರೆಸುವೆ ಸುಖವನೆ ಬಾಳಲಿ ತುಂಬುವೇ 
ಹೆಣ್ಣು : ಸೊಗಸಾದ ಮಾತಾಡಿದೇ... ಹೇ..ಹೇ... 
ಗಂಡು : ನನ್ನಾಸೆಯಾ ...                       ಹೆಣ್ಣು : ಸಂಗಾತಿಯೇ 
ಗಂಡು : ನಿನ್ನ ನೋಡದ ಕಂಗಳು ಏತಕೆ ಬೇಕಿಲ್ಲ
ಹೆಣ್ಣು : ನಿನ್ನ ಸೇರದ ಬಾಳದು ವ್ಯರ್ಥವು ಸುಳ್ಳಲ್ಲಾ... 
ಹೆಣ್ಣು : ಜೀವದ ಜೀವವೇ ಪ್ರಾಣದ ಪ್ರಾಣವೇ... 
ಗಂಡು : ಜೀವದ ಜೀವವೇ                     ಹೆಣ್ಣು : ಪ್ರಾಣದ ಪ್ರಾಣವೇ... 
ಗಂಡು : ನನ್ನಾಸೆಯಾ (ನನ್ನಾಸೆಯ) ಸಂಗಾತಿಯೇ (ಸಂಗಾತಿಯೇ )
ಹೆಣ್ಣು : ನನ್ನಾಸೆಯಾ (ನನ್ನಾಸೆಯ) ಸಂಗಾತಿಯೇ (ಸಂಗಾತಿಯೇ )
-----------------------------------------------------------------------------------

ಹೆಣ್ಣಿನ ಕೂಗು (೧೯೮೬) - ಇದು ಹೆಣ್ಣಿನ ಕಥೆಯೋ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಹಸಿಯ ಮಾಂಸವ ಕಂಡು ಹದ್ದೆರಗಿ ಬರುವಂತೇ 
ಹೆಣ್ಣುಗಳ ಬಾಳನ್ನೇ ಕಿತ್ತು ತಿನ್ನುವ ಇವರು 
ಮಾನವರೋ... ಇಲ್ಲಾ ದಾನವರೋ 
ಇದು ಹೆಣ್ಣಿನ ಕಥೆಯೋ ಇಲ್ಲ ಮುಗಿಯದ ವ್ಯಥೆಯೋ 
ನೊಂದ ನಾರಿ ಹಾಡುತಿರುವ ಪಲ್ಲವಿಯೋ 
ಇಲ್ಲಾ ಅವಳ ಕಣ್ಣು ಮಿಡಿಯುತಿರುವ ಕಂಬನಿಯೋ  
ಇದು ಹೆಣ್ಣಿನ ಕಥೆಯೋ ಇಲ್ಲ ಮುಗಿಯದ ವ್ಯಥೆಯೋ... ಓ... 

ಆಆಆಆ... ಆಆಆಆಅ.... 
ನ್ಯಾಯ ನೀತಿ ಧರ್ಮ ಎಲ್ಲಾ ಗಂಡಿನ ಪಾಲೇ 
ಬದುಕಿನಲ್ಲಿ ಹೆಣ್ಣಿಗೆಂದು ದೊರೆವುದು ಸೋಲೇ 
ತಾಯೀ ಎನುವರು ಹೆಣ್ಣ ದೇವರೆನುವರು 
ಅವಳ ಬದುಕಿನಲ್ಲಿ ನೋವ ತುಂಬಿ ನಲಿವರು... ಆಆಆ ಆಆಆ 
ಇದು ಹೆಣ್ಣಿನ ಕಥೆಯೋ ಇಲ್ಲ ಮುಗಿಯದ ವ್ಯಥೆಯೋ... ಓ... 

ಪ್ರೀತಿ ರೀತಿ ಎಂಬುದೆಲ್ಲಾ ಬರಿಯ ಮಾತಲಿ... 
ಸ್ವಾರ್ಥ ಒಂದೇ ತುಂಬಿರುವುದು ಎಲ್ಲರೆದೆಯಲಿ    
ಚಿನ್ನ ಎನುವರು ಹೆಣ್ಣ ಹೂವು ಎನುವರು   
ತಮ್ಮ ಕಾಲಿನಲ್ಲಿ ಹೂವ ತುಳಿದು ನಡೆವರು... ಆಆಆ ಆಆಆ ಆಆಆ 
ಇದು ಹೆಣ್ಣಿನ ಕಥೆಯೋ ಇಲ್ಲ ಮುಗಿಯದ ವ್ಯಥೆಯೋ... ಓ... 

ತಾನೇ ಕಟ್ಟಿದಂಥ ತಾಳಿ ಮರೆತು ಬಿಡುವನು 
ಸಪ್ತಪದಿಯ ಅರ್ಥವನ್ನು ಅರಿಯಲಾರನು... 
ಮೂರ್ಖನಾದರೂ ಈತ ಮೀಸೆ ಹೊತ್ತವ 
ಮನೆಯ ಲಕ್ಷ್ಮಿಯ ಹೇಗೆ ಹೊರಗೆ ಅಟ್ಟುವ 
ಬೊಂಬೆಯಂತೆ ಹೆಣ್ಣನಿಟ್ಟು ಆಟವಾಡುವ.. ಆಟವಾಡುವ.. 
ಇದು ಹೆಣ್ಣಿನ ಕಥೆಯೋ ಇಲ್ಲ ಮುಗಿಯದ ವ್ಯಥೆಯೋ 
ನೊಂದ ನಾರಿ ಹಾಡುತಿರುವ ಪಲ್ಲವಿಯೋ 
ಇಲ್ಲಾ ಅವಳ ಕಣ್ಣು ಮಿಡಿಯುತಿರುವ ಕಂಬನಿಯೋ  
ಇದು ಹೆಣ್ಣಿನ ಕಥೆಯೋ ಇಲ್ಲ ಮುಗಿಯದ ವ್ಯಥೆಯೋ... ಓ... 
-----------------------------------------------------------------------------------

ಹೆಣ್ಣಿನ ಕೂಗು (೧೯೮೬) - ನಿನ್ನ ಮುರುಳಿಗಾನ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಆ... ಆಆಆಆ...  ಆಆಆಆ ಆಆ ಆಆಆಆ ಆ ಗರಿ ರಿಸ ಸನಿ ನಿದ ಆಆ ಆಆಆಆ ಆ
ನಿನ್ನ ಮುರುಳಿಗಾನ ಕೇಳಿ ಬಂದೆ ಕೃಷ್ಣ 
ನಿನ್ನ ಮುರುಳಿಗಾನ ಕೇಳಿ ಬಂದೆ ಕೃಷ್ಣ 
ರಾಗವು ಸೊಗಸು ಭಾವವು ಸೊಗಸು 
ರಾಗವು ಸೊಗಸು ಭಾವವು ಸೊಗಸು ಸೋತಿದೆ ನನ್ನೀ ಮನಸು 
   
ಓ ಸುಖ ಇದೇ ಮೊದಲು ಈ ಸುಖ ಇಂಥ ಇರಳು 
ಓ ಸುಖ ಇದೇ ಮೊದಲು ಈ ಸುಖ ಇಂಥ ಇರಳು ಪ್ರೇಮದ ಕೂಗು... ಆಆಆ 
ಗಮಪಸನಿ ಪನಿದಮದಪಗರಿನಿಸ ಗಮಪನಿಸ ಗಮಪನಿಸ ಗಮಪನಿಸ    
ಪ್ರೇಮದ ಕೂಗು ಕೇಳಿದ ಹಾಗೆ ಮನದಲ್ಲಿ ಮನದಲ್ಲಿ ಭಾವನೆಯು ವೇಣು ಗಾನಲೋಲ 
ನಿನ್ನ ಮುರುಳಿಗಾನ ಕೇಳಿ ಬಂದೆ ಕೃಷ್ಣ 

ಕೈ ಬಿಡು ಇನ್ನೀ ಕೊಳಲು ಕೈ ಹಿಡಿ ನನ್ನ ಮೊದಲು 
ಕೈ ಬಿಡು ಇನ್ನೀ ಕೊಳಲು ಕೈ ಹಿಡಿ ನನ್ನ ಮೊದಲು ನಿನ್ನನ್ನೂ ನೀನು... 
ನಿನ್ನನ್ನೂ ಇನ್ನು ನಾ ಬೀಡಲಾರೆ ರಾಧೇಯನು ಉಳಿಸು ವೇಣುಗೋಪಾಲ 
ನಿನ್ನ ಮುರುಳಿಗಾನ ಕೇಳಿ ಬಂದೆ ಕೃಷ್ಣ 
ರಾಗವು ಸೊಗಸು ಭಾವವು ಸೊಗಸು 
ರಾಗವು ಸೊಗಸು ಭಾವವು ಸೊಗಸು ಸೋತಿದೆ ನನ್ನೀ ಮನಸು... ಕೃಷ್ಣ.. ಆಆಆ  
----------------------------------------------------------------------------------

ಹೆಣ್ಣಿನ ಕೂಗು (೧೯೮೬) - ಬಾಳಲಿ ಇಂದು ಸುಖವನು ಕಂಡೇ  
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಓಂ... ಓಂ... ಶಂಕರ... ಓಂ.. ಶಶಿಧರ... ಓಂ... ಸುಂದರ.. ಓಂ ಗಂಗಾಧರ.. 
ಓಂ ಈಶ್ವರ... ಓಂ ಮನೋಹರ...  ಓಂ ಕರುಣಾಸಾಗರ... ಓಂ 
ಬಾಳಲಿ ಇಂದು ಸುಖವನು ಕಂಡೆ ಪ್ರೀತಿಸುವ ಸಂಗಾತಿ ಕಂಡೆ 
ಬಾಳಲಿ ಇಂದು ಸುಖವನು ಕಂಡೆ ಪ್ರೀತಿಸುವ ಸಂಗಾತಿ ಕಂಡೆ 

ಅಂದವನೇ ಎಲ್ಲೆಲ್ಲೂ ನಾನು ಈ ದಿನ ಕಾಣುತಿಹೆ 
ಆನಂದವೇನೇ ಎಲ್ಲೆಲ್ಲೂ ಇಂದು ಈ ಕ್ಷಣ ನೋಡುತಿಹೆ 
ಜೀವನವು ವಿಷಾದವಲ್ಲ ಎಂಬುದ ನಾನರಿತೆ ಈಗ 
ಕಂಬನಿಯೇ ಎಂದೆಂದೂ ಇರದು ಎಂಬುದ ನಾ ತಿಳಿದೆ ಸ್ವಾಮೀ 
ಶೋಕವನು ನನ್ನಾಣೆ ಮರೆತೇ 
ಶೋಕವನು ನನ್ನಾಣೆ ಮರೆತೇ... 
ಬಾಳಲಿ ಇಂದು ಸುಖವನು ಕಂಡೆ ಪ್ರೀತಿಸುವ ಸಂಗಾತಿ ಕಂಡೆ 
ಬಾಳಲಿ ಇಂದು ಸುಖವನು ಕಂಡೆ 
 
ನಂಬಿಕೆಯೇ ಮಣ್ಣಾಗಿ ಹೋಗಿ ವೇದನೆ ತುಂಬಿರಲು 
ಆಸರೆಯ ನಾ ಕಾಣದಾಗಿ ಕಂಬನಿ ಮಿಡಿದಿರಲು 
ಕತ್ತಲಲಿ ಬೆಳಕಾದ ಹಾಗೆ ಕರುಣೆಯ ತೋರಿದೆಯಾ ದೇವ 
ಸಾಗರದಿ ಮುಳುಗೇಳುತಿರಲು ಉಳಿಸಿದೆ ನನ್ನನ್ನು ಸ್ವಾಮಿ 
ಬದುಕಲಿ ನಾ ಗೆಲ್ಲಲೆಂದೆ 
ಬದುಕಲಿ ನಾ ಗೆಲ್ಲಲೆಂದೆ... 
ಬಾಳಲಿ ಇಂದು ಸುಖವನು ಕಂಡೆ ಪ್ರೀತಿಸುವ ಸಂಗಾತಿ ಕಂಡೆ 
ಬಾಳಲಿ ಇಂದು ಸುಖವನು ಕಂಡೆ... ಆಆಆಅ 
-----------------------------------------------------------------------------------

No comments:

Post a Comment