1843. ಕಿಲ್ಲರ್ ಡೈರಿ (೧೯೯೫)

ಕಿಲ್ಲರ್ ಡೈರಿ ಚಲನಚಿತ್ರದ ಹಾಡುಗಳು 
  1. ಅಮ್ಮಮ್ಮಾ ಏನು ಮಾಡಲಿ 
  2. ಕೇಳು ಕುಸುಮವೇ 
  3. ಭಾರತಾಂಬೆ 
  4. ಹಾಲು ಕೊಡು ಹಾಲು 
ಕಿಲ್ಲರ್ ಡೈರಿ (೧೯೯೫) - ಅಮ್ಮಮ್ಮಾ ಏನು ಮಾಡಲಿ 
ಸಂಗೀತ : ವಿಜಯಾನಂದ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಮಂಜುಳಾಗುರುರಾಜ 
  
ಅಮ್ಮಮ್ಮಾ ಏನ್ ಮಾಡಲೀ ನನ್ನ ನೋವು ಏನ್ ಹೇಳಲಿ 
ಮುದಕಯ್ಯ ಸಿಕ್ಕನು ಈ ಮೈಯ್ಯ ಮಿಟನು ಕರೆದಾಗ 
ಬರಲಾರ ಅನುರಾಗ ಕೊಡಲಾರ 

ಮಿಂಚಿನಂತೆ ಮಂಚ ಏರಿ ಬಾರೋ ಕಾಣದ ಸಿಹಿ ಗೊಂಚಲನು ಹೀರು ಎನ್ನುವೇ 
ರಂಭೆ ಕೂಡ ನಾಚುವಂಥ ಬೊಂಬೆ ನೋಡು ಸುರಸುಂದರಾಂಗ ಏಕೆ ತಳ್ಳುವೇ 
ಜ್ವಾಲೆಯನ್ನು ನಾ ತಾಳೆ ಇನ್ನೂ ಜಾಲಿಯಾಗಿ ನಾ ಬಾಳೆ ಇನ್ನೂ 
ರಂಗೇರಿದ ಅಂಗಾಗವ ಸಂಭಾಳಿಸು 
ಅಮ್ಮಮ್ಮಾ ಏನ್ ಮಾಡಲೀ ನನ್ನ ನೋವು ಏನ್ ಹೇಳಲಿ 
ಮುದಕಯ್ಯ ಸಿಕ್ಕನು ಈ ಮೈಯ್ಯ ಮಿಟನು ಕರೆದಾಗ 
ಬರಲಾರ ಅನುರಾಗ ಕೊಡಲಾರ 

ಪ್ರೇಮದಿಂದ ಬಂದ ಹೆಣ್ಣ ಬಾಚಿಕೊಂಡು ಈ ಕಾಮಧೇನು ದಾಹ ತೀರಿಸು 
ಪ್ರೀತಿ ಎಂಬ ಬೆಳ್ಳಿ ತೇರ ಏರಬೇಕು ಆ ರೀತಿಯನ್ನು ಇಂದು ತೋರಿಸು 
ತೋಳಿನಲ್ಲಿ ನಾ ಸೇರಬೇಕು ಪ್ರಾಯವೆಲ್ಲ ನೀ ಹೀರಬೇಕು 
ಓಲ್ಡ್ ಏಜಿಗೆ ವೋಲ್ಟೇಜನು ನಾ ತುಂಬುವೆ 
ಅಮ್ಮಮ್ಮಾ ಏನ್ ಮಾಡಲೀ ನನ್ನ ನೋವು ಏನ್ ಹೇಳಲಿ 
ಮುದಕಯ್ಯ ಸಿಕ್ಕನು ಈ ಮೈಯ್ಯ ಮಿಟನು ಕರೆದಾಗ 
ಬರಲಾರ ಅನುರಾಗ ಕೊಡಲಾರ 
--------------------------------------------------------------------------------------------------

ಕಿಲ್ಲರ್ ಡೈರಿ (೧೯೯೫) - ಕೇಳು ಕುಸುಮವೇ 
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ 
  
ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ 
ಧೈರ್ಯವಾಗಿರು ನಾ ನಿನ್ನ ಕಾಯುವೇ 
ಮೇಲೆ ನೋಡೋಕೆ ಎಲ್ಲಾ ಹಣೆ ಒಂದೇ ತರಹ 
ಆವ ಬರೆದಿಹನು ಒಂದೊಂದು ಬೇರೆ ಬರಹ 
ಒಂದೊಂದು ಗೆರೆ ಕಣ್ಣೀರ ಸಂಗ್ರಹ 
ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ 
ಧೈರ್ಯವಾಗಿರು ನಾ ನಿನ್ನ ಕಾಯುವೇ 

ಓ ದೈವ ನೀ ಗೊಂಬೆಯ ಮಾಡುವೆ ಉಸಿರು ತುಂಬುವೆ ಜೊತೆ ಆಟವಾಡುವೇ 
ನೀ ಹೆಣ್ಣಿಗೇ ತಾಯ್ತನ ನೀಡುವೆ ಶಿಶುವ ನೀಡುವೆ ನೀ ದೂರ ಮಾಡುವೆ 
ಹೇಳು ಕ್ರೂರ ದೈವವೇ ಇದು ನ್ಯಾಯವೇ  
ಮುಂದೆ ಏನೋ ಹೇಗೆಯೋ ಎಲ್ಲಾ ಗೌಪ್ಯವೇ 
ಬರೆದಿಹುದನ್ನೂ ಸ್ವೀಕರಿಸಲೇ ಬೇಕಿದೆ 
ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ 
ಧೈರ್ಯವಾಗಿರು ನಾ ನಿನ್ನ ಕಾಯುವೇ 

ತಾಯಾಗುವ ನಿನ್ನಯ ಆಸೆಗೆ ಬೆಂಕಿ ಮಳೆಯನು ಭಗವಂತ ಸುರಿಸಿದ 
ಅಸಹಾಯಕ ಪ್ರಾಣದ ಜೊತೆಯಲಿ ಕರುಣೆ ತೋರದೆ ಚೆಲ್ಲಾಟವಾಡಿದ 
ನಿನ್ನ ಮುಂದೆ ನಿನ್ನಯ ಕನಸೇ  ಛಿಧ್ರವೂ 
ಕಣ್ಣ ಮುಂದೆ ಮುದ್ದಿನ ಕುಡಿಯ ಅಂತ್ಯವು 
ಇದು ಆ ದೈವ ಕೃಪೆ ಮಾಡಿದ ವ್ಯಂಗ್ಯವೂ 
ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ 
ಧೈರ್ಯವಾಗಿರು ನಾ ನಿನ್ನ ಕಾಯುವೇ 
ಮೇಲೆ ನೋಡೋಕೆ ಎಲ್ಲಾ ಹಣೆ ಒಂದೇ ತರಹ 
ಆವ ಬರೆದಿಹನು ಒಂದೊಂದು ಬೇರೆ ಬರಹ 
ಒಂದೊಂದು ಗೆರೆ ಕಣ್ಣೀರ ಸಂಗ್ರಹ 
ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ 
ಧೈರ್ಯವಾಗಿರು ನಾ ನಿನ್ನ ಕಾಯುವೇ 
--------------------------------------------------------------------------------------------------

ಕಿಲ್ಲರ್ ಡೈರಿ (೧೯೯೫) - ಭಾರತಾಂಬೆ 
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ 
  
ಭಾರತಾಂಬೆ ಇದೆ ನಿನ್ನ ಗತಿ ನ್ಯಾಯ ದೇವಿ ಇದು ಏನು ಸ್ಥಿತಿ 
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲಿ 
ಇದೆ ಸತ್ಯ ನ್ಯಾಯಕೆ ಹೊಸ ಗೋರಿ ಮಣ್ಣಲಿ ಕೊನೆ ಎಲ್ಲಿ ಇದಕೆ 
ಭಾರತಾಂಬೆ ಇದೆ ನಿನ್ನ ಗತಿ ನ್ಯಾಯ ದೇವಿ ಇದು ಏನು ಸ್ಥಿತಿ 
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲಿ 

ನೀತಿ ಧರ್ಮವು ವಂಚಕರ ಜೇಬಲಿ ಪದವಿ ತರುವ ಅಹಂಕಾರ 
ಹಸಿವು ವೇದನೆ ಬಡ ಜನರ ಬಾಳಲಿ ಮರಣ ಉಪಕಾರ 
ಅಹಿಂಸೆ ಬೋಧಿಸೋ ದೇಶದಲ್ಲಿ ರಕ್ತದ ಹೊಳೆಯೇ ಹರಿದಿದೆ 
ಶಾಂತಿಯ ಸಾರುವ ಮಣ್ಣಿನಲಿ ದ್ವೇಷದ ಯುದ್ಧ ಸಾಗುತಿದೆ 
ಇದಕೆ ಅಂತ್ಯವೂ ಎಂದೂ 
ಭಾರತಾಂಬೆ ಇದೆ ನಿನ್ನ ಗತಿ ನ್ಯಾಯ ದೇವಿ ಇದು ಏನು ಸ್ಥಿತಿ 
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲಿ 

ನಾಡಗಡಿಯಲಿ ಕಾದಿಹರು ಯೋಧರು ತಾಯರಕ್ಷೆ ಪಣ ತೊಟ್ಟು 
ನಾಡ ಒಳಗಡೆ ನರಿಯಂಥ ಖೂಳರು ತಾಯ ಮಾರೋ ಒಳಗುಟ್ಟು 
ಬೇಲಿಯೇ ಹೊಲವ ಮೇಯುತಿರೆ ಸ್ವಾರ್ಥದ ರಾಜ್ಯ ಸಾಗುತಿದೆ 
ಮುಳ್ಳನು ಮುಳ್ಳಲೇ ತೆಗಿಯುವ ಕಲ್ಕಿಯ ರೂಪ ತಾಳುವ ಬರೆವ ಅಂತ್ಯ ಇಂದು 
ಭಾರತಾಂಬೆ ಇದೆ ನಿನ್ನ ಗತಿ ನ್ಯಾಯ ದೇವಿ ಇದು ಏನು ಸ್ಥಿತಿ 
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲಿ 
ಇದೆ ಸತ್ಯ ನ್ಯಾಯಕೆ ಹೊಸ ಗೋರಿ ಮಣ್ಣಲಿ ಕೊನೆ ಎಲ್ಲಿ ಇದಕೆ 
ಭಾರತಾಂಬೆ ಇದೆ ನಿನ್ನ ಗತಿ ನ್ಯಾಯ ದೇವಿ ಇದು ಏನು ಸ್ಥಿತಿ 
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲಿ 
--------------------------------------------------------------------------------------------------

ಕಿಲ್ಲರ್ ಡೈರಿ (೧೯೯೫) - ಹಾಲು ಕೊಡು ಹಾಲು 
ಸಂಗೀತ : ವಿಜಯಾನಂದ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ, ರಾಜೇಶ 
  
ಹಾಲು ಕೊಡು ಹಾಲು ಕೊಡು ಭಾವ ಹಾಲು ಕುಡಿಯೋ ಹುರುಪು ರೋಮ ರೋಮ 
ಹಾಲು ಕೊಡು ಹಾಲು ಕೊಡು ಭಾವ ಹಾಲು ಕುಡಿಯೋ ಹುರುಪು ರೋಮ ರೋಮ 
ಗೊಲ್ಲನಾಗಿ ಬಂದೆ ಹಾಲೆಲ್ಲ ಹಿಂಡಲೆಂದೇ ನಾ ಹಿಂಡಿ ಹಿಂಡಿ ಮಡಿಕೆ ತುಂಬುವೆ 

ನಿನ್ನ ಹಾಲನ್ನೆಲ್ಲ ನಾನೇ ಕುಡಿಯುವೆ ಕದ್ದು ನಿನ್ನ ಒಯ್ಯುವೇನು  
ಮುದ್ದು ಮಾಡಿ ಸಾಕುವೇನು ಸೇವೆಗಾಗಿ ಕಾದಿಹೆನು ನಾ 
ಹೆಣ್ಣೇ ಇಂಥ ಮೈಯ್ಯ ತಿಕ್ಕಿ ಎಣ್ಣೆ ಸ್ನಾನ ಮಾಡಿಸುವೆ 
ಹಣ್ಣು ಬಿಚ್ಚಿ ತಿನ್ನಿಸುವೆ ನಾ ಚೆಲುವಿನ ಮೋಡಿಗೆ ಮುಪ್ಪು ಮಾಯವಾಗಿದೆ 
ಚೆಲುವಿನ ಮೋಡಿಗೆ ಮುಪ್ಪು ಮಾಯವಾಗಿದೆ  
ಏ ತಾಕತ್ತು ನೋಡು ಎಷ್ಟಿದೆ ವಯಸ್ಸು ಇಪ್ಪತ್ತು ಆದ ಹಾಗಿದೆ 
ಹಾಲು ಕೊಡು ಹಾಲು ಕೊಡು ಭಾವ ಹಾಲು ಕುಡಿಯೋ ಹುರುಪು ರೋಮ ರೋಮ 
ಗೊಲ್ಲನಾಗಿ ಬಂದೆ ಹಾಲೆಲ್ಲ ಹಿಂಡಲೆಂದೇ ನಾ ಹಿಂಡಿ ಹಿಂಡಿ ಮಡಿಕೆ ತುಂಬುವೆ 

ಮುಂದೆ ಬಂದ್ರೆ ಹಾಯುತಿರು ಹಿಂದೆ ಬಂದ್ರೆ ಒದೆಯುತಿರು 
ಮುಪ್ಪಿನೊರ ನಂಬದಿರು ನೀ ಮಂಕಿಯಂತೆ ಆಡುವರು 
ಮಂಕುಬೂದಿ ನೀಡುವರು ಇಂಥೋರಿಂದ ದೂರವಿರೂ ನೀ 
ರಸಿಕರ ರಾಜನು ರೂಪದಲಿ ಶಾಮನೂ 
ರಸಿಕರ ರಾಜನು ರೂಪದಲಿ ಕಾಮನೂ 
ಹೇ.. ಟೀನೇಜು ನೋಡು ಇಲ್ಲಿದೆ ಅಂತ ಮಾಡಲ್ಲು ವೋಲ್ಟು ಆಗಿದೆ 
ಹಾಲು ಕೊಡು ಹಾಲು ಕೊಡು ಭಾವ ಹಾಲು ಕುಡಿಯೋ ಹುರುಪು ರೋಮ ರೋಮ 
ಗೊಲ್ಲನಾಗಿ ಬಂದೆ ಹಾಲೆಲ್ಲ ಹಿಂಡಲೆಂದೇ ನಾ ಹಿಂಡಿ ಹಿಂಡಿ ಮಡಿಕೆ ತುಂಬುವೆ 

ನೀನು ಉಣ್ಣೋ ತಟ್ಟೆಯಲಿ ನಾನು ಕೂಡ ಉಣ್ಣುವೆನು 
ಏನು ಬೇಕೋ ಹಾಕುವೆನು ಬಾ ತುಂಟ ಕೃಷ್ಣ ಆಗುವೆನು 
ರಂಗಿನಾಟ ಆಡುವೆನು ರಾಸಲೀಲೆ ತೋರುವೇನು ಬಾ 
ಹುಣಿಸೆಯು ಮಾಗಿದೆ ಹುಳಿಗೆ ಎಲ್ಲಿ ಮುಪ್ಪಿದೆ 
ತಾರುಣ್ಯ ಉಕ್ಕಿ ಬಂದಿದೆ ಭಾಮ ಲಾವಣ್ಯ ಸುಗ್ಗಿ ತಂದಿದೆ 
ಹಾಲು ಕೊಡು ಹಾಲು ಕೊಡು ಭಾವ ಹಾಲು ಕುಡಿಯೋ ಹುರುಪು ರೋಮ ರೋಮ 
ಗೊಲ್ಲನಾಗಿ ಬಂದೆ ಹಾಲೆಲ್ಲ ಹಿಂಡಲೆಂದೇ ನಾ ಹಿಂಡಿ ಹಿಂಡಿ ಮಡಿಕೆ ತುಂಬುವೆ 
--------------------------------------------------------------------------------------------------

No comments:

Post a Comment