ಝೆಡ್ ಚಲನಚಿತ್ರದ ಹಾಡುಗಳು
- ರೀಲೋ ರೀಲೋ
- ಪ್ರೇಮ ಪ್ರೇಮ
- ನೀ ರತಿಯು ನಾ ರತುನು
- ತುಟಿಯಲಿ ತುಟಿಯು
- ಚೋಲಿ ಆಟ
- ಕೇಳೇ ಚೋರಿ
ಝೆಡ್ (೧೯೯೯) - ರೀಲೋ ರೀಲೋ
ಸಂಗೀತ : ಮುರುಳಿ ಮೋಹನ, ಸಾಹಿತ್ಯ : ಮುರುಳಿ ಮೋಹನ, ಗಾಯನ : ಮುರುಳಿ ಮೋಹನ, ಎಲ್.ಏನ್.ಶಾಸ್ತ್ರಿ
ರೀಲೋ ರಿಯಲೋ ಜಾನ್... ಸ್ಮೈಲೋ... ಐಲೋ ಜಾನ್ ಜಾನ್
ಹರುಕು ಮುರುಕು ಬಟ್ಟೆಯಲ್ಲಿ ಪ್ಯಾಚು ಮಾಡಿ ಶಾಟು ತೆಗೆದ ಡೈರೆಕ್ಟರ್
ಕುರುಕು ಮುರುಕು ತಿಂಡಿ ನೀಡಿ ಕಾಸು ಕೊಡದೆ ಕೆಲಸ ಕೇಳೋ ಪ್ರೋಡ್ಯೂಸರ್
ಖರ್ಚಿಗೆ ಕಾಸಿಲ್ಲ ಕುರ್ಚಿಗೆ ಬೇಸಿಲ್ಲ ಹೀರೊ ಫೇಸಿಲ್ಲ ಯಾರು ಮುಸಿಲ್ಲ
ಹಾಗೋ ಹೀಗೋ ಹ್ಯಾಗೋ ಶೂಟಿಂಗ್ ನಡಿತೈತಲ್ಲೋ...
ರೀಲೋ ರಿಯಲೋ ಜಾನ್... ಸ್ಮೈಲೋ... ಐಲೋ ಜಾನ್ ಜಾನ್
ಬಂದಾಳ ನೋಡು ಹೀರೋಯಿನ್ನು ಶ್ರೀಕೇಶ್ವರಿ
ಚೆಂದಾಗಿರೋ ಇವಳೇ ನೈಲೆಕ್ಸ ಪರಮೇಶ್ವರಿ
ಹಾಂ.. ಹಾಂ... ಥಕ ಥಕ ಕುಣಿಯೋ ಡಿಸ್ಕೋ ಶಾಂತೀಶ್ವರಿ
ಡಿಸ್ಕಾ ಗಿಸ್ಕಾ ತೋಮ್ ಎನ್ನೋ ಕಾಮೇಶ್ವರೀ
ಏಯ್ ಇನ್ನಿಲ್ಲೆಲ್ಲ ಮಜಾ ಸಿಕ್ತು ಓಕೆ.. ಓಕೆ.. ಎಲ್ಲಾ ಆಯ್ತು
ಬೇಕೇ ಬೇಕು ಸಕ್ಸಸ್ ನಂಗೇ ಹಿಂದೆ ಮುಂದೆ ಎಲ್ಲಾ ಕಂಡೆ
ಸೂಪರ್ ಫಿಗರ್ ಹಿಂದೆ ಮುಂದೆ ಹಾಕ್ಲೇ ಬೇಕು ಬಿಕನಿ ಇವಳ್ಗೆ
ಹೇ ಡಬ್ಬಲ್ ಮೀನಿಂಗು ಇರುವ ಡೈಲಾಗೂ ತ್ರೀಬ್ಬನಲ್ ಮೀನಿಂಗು ಇರುವ ಸೆಕ್ಸ್ ಸಾಂಗು
ಹಾಕಿದರೆ ಜನ ಮೆಚ್ಚಿ ಸೀಟಿ ಹಾಕ್ತಾರೆ
ರೀಲೋ ರಿಯಲೋ ಜಾನ್... ಸ್ಮೈಲೋ... ಐಲೋ ಜಾನ್ ಜಾನ್
ಕೈಕಾಲೆಲ್ಲ ಮುರಿದು ಹಾಕ್ಬಿಟ್ರೋ ಎಮ್ಮಾ... ಎಮ್ಮಾ..
ಕಮೀಟ್ ಮಾಡಿ ಸಾಯ್ಸಕ ಬಿಟ್ರೋ ಅಯ್ಯೋ
ಏಯ್ ಸೆಕ್ಸು ಫೈಟು ಕಾಮಿಡಿ ಎಲ್ಲಾ ಸೂಪರ್... ಸೂಪರ್
ಪಿಕ್ಚರ್ ರಿಲೀಜ್ ಆದ್ಮೇಲ್ ನಿಂಗೆ ಬಂಪರ
ಬಣ್ಣದ ಬದುಕಿನಲ್ಲಿ ಎಲ್ಲಾ ಸುಳ್ಳಣ್ಣಾ ಸತ್ಯ ಯಾರೂ ಕೇಳೋರಿಲ್ಲಣ್ಣಾ
ಚೆಂದದ ಹೂವಿನಲ್ಲಿ ನೋಡೋರಿಲ್ಲಣ್ಣಾ ಜೇನ ಹೀರೋ ದುಂಬಿ ಜನರಣ್ಣಾ ...
ರೀಲೋ ರಿಯಲೋ ಜಾನ್... ಸ್ಮೈಲೋ... ಐಲೋ ಜಾನ್ ಜಾನ್
ಕೊಳಕು ಮುರುಕು ಸೆಟ್ಟನಲ್ಲೇ ಥಳಕು ಬಳುಕು ಫಿಲಂ ತೆಗೆದ ಡೈರೆಕ್ಟರ್
ಸಿಡುಕು ಕೆಡುಕು ಮನಸ್ಸಿನಲ್ಲೇ ಕೆಲಸ ಮುಗಿಸಿಕೊಂಡ ಜುಗ್ಗ ಪ್ರೊಡ್ಯೂಸರ್
ಏ ... ಗಂಟು ಎಗರೋಯ್ತು ಸೊಂಟ ಮುರೋದೋಯ್ತಾ ನಂಟು ಹಾಳಾಯ್ತು
ಶೂಟಿಂಗ್ ಮುಗದೋಯ್ತು ಕುಂಬಳಕಾಯಿ ತರೋದಕ್ಕು ಕಾಸ್ ಇಲ್ಲಣ್ಣ
-------------------------------------------------------------------------------------------------------------
ಝೆಡ್ (೧೯೯೯) - ಪ್ರೇಮ ಪ್ರೇಮ
ಸಂಗೀತ : ರಾಜೇಶ ರಾಮನಾಥ , ಸಾಹಿತ್ಯ : ಪ್ರವೀಣ ನಾಯಕ, ಗಾಯನ : ರಾಜೇಶ ರಾಮನಾಥ, ಸೌಮ್ಯ
ಗಂಡು : ಪ್ರೇಮಾ... ಪ್ರೇಮಾ... ಏನಿದು ಪ್ರೇಮ ಪ್ರೇಮಾ ಪ್ರೇಮಾ ಯಾವುದು ಪ್ರೇಮಾ
ಪ್ರೇಮಾ ಪ್ರೇಮಾ ಎಲ್ಲಿದೇ ಪ್ರೇಮಾ ನೀನೇ ತಾನೇ ನೀರೇ... ಬಾರೇ...
ತೆರೆಯನ್ನು ನೀ ಸರಿಸು ಬಾ...
ಪ್ರೇಮಾ... ಪ್ರೇಮಾ... ಏನಿದು ಪ್ರೇಮ ಪ್ರೇಮಾ ಪ್ರೇಮಾ ಯಾವುದು ಪ್ರೇಮಾ
ಪ್ರೇಮಾ ಪ್ರೇಮಾ ಎಲ್ಲಿದೇ ಪ್ರೇಮಾ ನೀನೇ ತಾನೇ ನೀರೇ... ಬಾರೇ...
ತೆರೆಯನ್ನು ನೀ ಸರಿಸು ಬಾ...
ಗಂಡು : ಅರಳಿ ನಿಂತ ಮಾಮರವೇ ಮನದಲೇನು ಭಾವನೆ
ಕೊಳಲ ಗಾನ ಕೋಗಿಲೆಯೇ ತನುವೇಕೆ ವೇದನೆ
ಇದು ಮೋಹವೋ ವ್ಯಾಮೋಹವು ಮನವೆಲ್ಲ ಹುಡುಕಾಡಿದೆ
ನೀನೇ ತಾನೇ ನೀರೇ... ಬಾರೇ... ತೆರೆಯನ್ನು ನೀ ಸರಿಸು ಬಾ...
ಪ್ರೇಮಾ... ಪ್ರೇಮಾ... ಏನಿದು ಪ್ರೇಮ ಪ್ರೇಮಾ ಪ್ರೇಮಾ
ಯಾವುದು ಪ್ರೇಮಾ ಪ್ರೇಮಾ ಪ್ರೇಮಾ ಎಲ್ಲಿದೇ ಪ್ರೇಮಾ
ಗಂಡು : ಬಾಳಿನಲ್ಲಿ ಪ್ರೇಮದ ಮೊದಲ ಜ್ಞಾನ ಮೂಡಿತೇ
ಕವಿತೆಯೊಂದು ಹೃದಯದಲಿ ಮಧುರರಾಗ ಹಾಡಿತೇ
ಇದು ಪ್ರೀತಿಯೋ ಬರಿ ಭ್ರಾಂತಿಯೋ ಮನವೆಲ್ಲ ತೊಳಲಾಡಿದೆ
ನೀನೇ ತಾನೇ ನೀರೇ... ಬಾರೇ... ತೆರೆಯನ್ನು ನೀ ಸರಿಸು ಬಾ...
ಪ್ರೇಮಾ... ಪ್ರೇಮಾ... ಏನಿದು ಪ್ರೇಮ ಪ್ರೇಮಾ ಪ್ರೇಮಾ
ಯಾವುದು ಪ್ರೇಮಾ ಪ್ರೇಮಾ ಪ್ರೇಮಾ ಎಲ್ಲಿದೇ ಪ್ರೇಮಾ
-------------------------------------------------------------------------------------------------------------
ಝೆಡ್ (೧೯೯೯) - ನೀ ರತಿಯು ನಾ ರತುನು
ಸಂಗೀತ : ಪ್ರವೀಣಕುಮಾರ, ಸಾಹಿತ್ಯ : ಸಾಧುಕೋಕಿಲ, ಗಾಯನ : ಮಂಗಲಾ
ನಾ ರತಿಯು ನೀ ರತನು ಜತನ ತನ ರತಿಯು ಒಣಗಿದ ಎಲೆಯಲಿ ಹೂ ಮಂಚವೂ
ಬೆವರಿನ ಹನಿ ಹನಿ ರೋಮಾಂಚವು ನೀ ಚುಂಬಿಸು
ನಾ ರತಿಯು ನೀ ರತನು ಜತನ ತನ ರತಿಯು
ಪ್ರೇಮದ ಸಖಿಯ ಕಾಮದ ರತಿಯು ಮಳೆಯೂ ಸುರಿದಿದೆ ನಡು ನಡುಗಿದೆ ತನು ಜಿಲ್ಲಾಲಾಲ್ಲಾ
ಚಳಿ ಝಂ ಝಂ ಕೋರಿ ಕಚಗುಳಿ ಮನ ತನನಾನಾ ಮದ ಮದನನ ಪದ ಪದನಿಸ ದರಿ ಜೊತೆಗೂಡಿ
ಕದ ಕದಡಲು ಧಡ ನಡಗಲಿ ಹನಿ ಸರಿಗರಿ ಉಷೆಯನ್ನು ತಡೆಯುತ ನೀಷೆಯನ್ನು ಹಿಡಿಯುತ
ಬಾ.. ಬಾರೋ.. ಬಾ... ನಾ ರತಿಯು ನೀ ರತನು ಜತನ ತನ ರತಿಯು
ಬಾ ಪೂರಾ ನೀ ಜಾಲ ದೂರ ಸುಕುಮಾರ ಚಳಿ ಚಳಿ ನೀರಲಿ ಬಿಸಿ ತರುವೆನು
ಬಳಿಗೆ ನೀ ಬಾರದೆ ಹಸಿದಿರುವೆನು ನೀ ಬಂಧಿಸು ಹಾಂ...ಹಾಂ...ಹಾಂ...ಹಾಂ...ಹಾಂ...ಹಾಂ...
ಬಿಸಿ ಬಿಸಿ ಅಲೆಯದೇ ಮಿಡಿದಿದೆ ಧೀಮ್ ಧೀಮ್ ತನನ
ಹಸಿ ಹಸಿರಿನ ಕರೆ ಕರೆದಿದೆ ತೊಂ ತೊಂ ತನನ
ಜ್ವಾಲೆ ಸುಡುತಲೇ ಮಾಲೆ ನಡುವಲೆ ರತಿ ನಡೆದಾಗ
ಒಲ್ಲೆ ಒಡೆದಿರೋ ಬಳ್ಳಿ ನಿನ ಬಳಿ ರವಿ ಹರಿದಾಗ
ಬಂಧನ ತೊರೆಯದೆ ನೀಡು ನೀ ಕಾತುರವಿದೆ ದಾಹ ತೀರಿಸು ಬಾ...
ನಾ ರತಿಯು ನೀ ರತನು ಜತನ ತನ ರತಿಯು ಒಣಗಿದ ಎಲೆಯಲಿ ಹೂ ಮಂಚವೂ
ಬೆವರಿನ ಹನಿ ಹನಿ ರೋಮಾಂಚವು ನೀ ಚುಂಬಿಸು
ನಾ ರತಿಯು ನೀ ರತನು ಜತನ ತನ ರತಿಯು
------------------------------------------------------------------------------------------------------------
ಝೆಡ್ (೧೯೯೯) - ತುಟಿಯಲಿ ತುಟಿಯು
ಸಂಗೀತ : ಮುರುಳಿ ಮೋಹನ, ಸಾಹಿತ್ಯ : ಪ್ರವೀಣ ನಾಯಕ, ಗಾಯನ : ಸೌಮ್ಯ
ತುಟಿಯಲ್ಲಿ ತುಟಿಯು ಸೇರಿ ರಸ ಹೀರಲಾರೆಯಾ
ಕಟಿಯಲ್ಲಿ ಕಟಿಯು ಸೇರಿ ಬಿಸಿ ತಾರಲಾರೆಯಾ
ಆಸೆ ಮೀಟುತಿದೆ ಮನವನು ಕಾಡುತಿದೆ
ದಾಹ ಮೀರುತಿದೆ ಈ ದೇಹ ಕಾಯುತಿದೆ
ತುಟಿಯಲ್ಲಿ ತುಟಿಯು ಸೇರಿ ರಸ ಹೀರಲಾರೆಯಾ
ಕಟಿಯಲ್ಲಿ ಕಟಿಯು ಸೇರಿ ಬಿಸಿ ತಾರಲಾರೆಯಾ
ನಾ ತಾಳಲಾರೆ ಈ ಛಳಿಯ ಝಂ ಝಂ ನಡುಗುತಿದೆ ಈ ನೀರೆ ಸಂತೈಸೆಯಾ
ಧಡ ಧಡ ಎದೆಯ ಬಡಿತವು ಗುಡುಗಿದೆ ಮನದ ತುಡಿತವೂ ಕಾದಿರುವೆ ಬಾ...
ತುಟಿಯಲ್ಲಿ ತುಟಿಯು ಸೇರಿ ರಸ ಹೀರಲಾರೆಯಾ
ಕಟಿಯಲ್ಲಿ ಕಟಿಯು ಸೇರಿ ಬಿಸಿ ತಾರಲಾರೆಯಾ
ಧಗಧಗಿಸು ಜ್ವಾಲೇ ಸುಡುತಲಿದೆ ಮೈಯ್ಯ... ಹಾಂ..
ಕೆರಳುತಿದೆ ಈ ಬಾಲೇ ನೀ ಬಾರೆಯಾ
ಹಸಿ ಹಸಿ ಬಯಕೆ ತೀರಿಸು ಬಿಸಿ ಬಿಸಿ ತನುವ ಸೇರಿಸು ಬೀಡಲಾರೆನು
ತುಟಿಯಲ್ಲಿ ತುಟಿಯು ಸೇರಿ ರಸ ಹೀರಲಾರೆಯಾ
ಕಟಿಯಲ್ಲಿ ಕಟಿಯು ಸೇರಿ ಬಿಸಿ ತಾರಲಾರೆಯಾ
ಆಸೆ ಮೀಟುತಿದೆ ಮನವನು ಕಾಡುತಿದೆ
ದಾಹ ಮೀರುತಿದೆ ಈ ದೇಹ ಕಾಯುತಿದೆ
ತುಟಿಯಲ್ಲಿ ತುಟಿಯು ಸೇರಿ ರಸ ಹೀರಲಾರೆಯಾ
ಕಟಿಯಲ್ಲಿ ಕಟಿಯು ಸೇರಿ ಬಿಸಿ ತಾರಲಾರೆಯಾ
------------------------------------------------------------------------------------------------------------
ಝೆಡ್ (೧೯೯೯) - ಚೋಲಿ ಆಟ
ಸಂಗೀತ : ಪ್ರವೀಣರಾವ , ಸಾಹಿತ್ಯ : ಅಚ್ಯುತ, ಗಾಯನ : ಎಲ್.ಏನ್.ಶಾಸ್ತ್ರಿ
ಚೋಲಿ ಆಟ ಜಾಲಿ ಆಟ... ಆಡಬಾರದಂತಾರೇ... ಆಡಿ ಕೆಡಬಾರದಂತಾರೇ
ಚೆಂದುಳ್ಳಿ ಚೆಲುವೆ ಸಿಕ್ರೆ ತಾನೇ ಪೋಲಿ ಆಗ್ತಾರೇ ...
ಆಡುವುದೊಂದು ಮಾಡುವುದೊಂದು...
ಚೋಲಿ ಆಟ ಜಾಲಿ ಆಟ... ಆಡಬಾರದಂತಾರೇ... ಆಡಿ ಕೆಡಬಾರದಂತಾರೇ
ಹೋಯ್ .. ಹೆಣ್ಣು ಹೊನ್ನು ಮಣ್ಣು ಎಲ್ಲಾ ಪೊಳ್ಳು ಅಂತಾರೇ... ಜಗವೇ ಸುಳ್ಳು ಅಂತಾರೇ ..
ಶೋಕಿ ಮಾಡಿ ಮೆರೆಯೋದೆಲ್ಲಾ ಸುಳ್ಳು ಅಂತಾರೇ ... ಬೆಲ್ಲದಂಥ ಮಾತನಾಡಿ ಗಾಳ ಹಾಕ್ತಾರೇ ...
ಬುದ್ಧಿ ಹೇಳೋ ಮಂದಿ ತಾವೇ ತಾಳ ತಪ್ತಾರೇ... ಆಡುವುದೊಂದು ಮಾಡುವುದೊಂದು
ಚೋಲಿ ಆಟ ಜಾಲಿ ಆಟ... ಆಡಬಾರದಂತಾರೇ... ಆಡಿ ಕೆಡಬಾರದಂತಾರೇ
ಕೋಪ ತಾಪ ಆಟಾಟೋಪ ಬ್ಯಾಡ ಅಂತಾರೇ .. ಪಾಪದ ಕೂಪ ಅಂತಾರೇ ..
ನೀತಿ ನೇಮ ಇದ್ರೇ ತಾನೇ ಪ್ರೀತಿ ಅಂತಾರೇ .. ಬದುಕೋ ರೀತಿ ಅಂತಾರೇ ..
ನಂಬಿ ಬಂದ ಮಂದಿ ಮ್ಯಾಲೇ ಗೋರಿ ಕಟ್ಟತಾರೇ... ಊರು ಕೇರಿ ನಾಶ ಮಾಡಿ ಜಾರಿಕೊಳ್ತಾರೇ ..
ಆಡುವುದೊಂದು ಮಾಡುವುದೊಂದು
ಚೋಲಿ ಆಟ ಜಾಲಿ ಆಟ... ಆಡಬಾರದಂತಾರೇ... ಆಡಿ ಕೆಡಬಾರದಂತಾರೇ
ಜೀವಾ ಜೀವಾ ಒಂದಾದ್ರೇನೇ ಸ್ನೇಹ ಅಂತಾರೇ .. ಗೆಳೆಯ ನೀನೇ ಅಂತಾರೇ ..
ಬಯಲಾಗ್ ನಿಂತು ಆಕಾಶಕ್ಕೆ ಏಣಿ ಹಾಕ್ತಾರೇ .. ಸ್ವರ್ಗ ಇಲ್ಲೇ ಅಂತಾರೇ ..
ಏಣಿ ಹತ್ತಿ ಸ್ನೇಹ ಮರತು ದೂರ ಹೋಗ್ತಾರೇ ... ಹೋಲ್ ದಾಟಿದ ಮೇಲೆ ತೆಪ್ಪ ಯಾಕ ಅಂತಾರೇ ..
ಆಡುವುದೊಂದು ಮಾಡುವುದೊಂದು
ಚೋಲಿ ಆಟ ಜಾಲಿ ಆಟ... ಆಡಬಾರದಂತಾರೇ... ಆಡಿ ಕೆಡಬಾರದಂತಾರೇ
ಚೆಂದುಳ್ಳಿ ಚೆಲುವೆ ಸಿಕ್ರೆ ತಾನೇ ಪೋಲಿ ಆಗ್ತಾರೇ ...
ಆಡುವುದೊಂದು ಮಾಡುವುದೊಂದು...
ಚೋಲಿ ಆಟ ಜಾಲಿ ಆಟ... ಆಡಬಾರದಂತಾರೇ... ಆಡಿ ಕೆಡಬಾರದಂತಾರೇ
--------------------------------------------------------------------------------------------------------------
ಝೆಡ್ (೧೯೯೯) - ಕೇಳೇ ಚೋರಿ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ರಾಜೇಶ ರಾಮನಾಥ, ಸೌಮ್ಯ
ಗಂಡು : ಹೇ..ಹೇ.... ಕಿಶೋರಿ ಕೇಳೇ ಕಿಶೋರಿ ಚೋರಿ ಚೋರಿ
ಪ್ರೇಮವೇ ಒಂದು ಮ್ಯಾಜಿಕ್ ಪ್ರೇಮಿಗೆ ಲವ್ವೇ ಟಾನಿಕ್ ಮುಳಗದ ಟೈಟಾನಿಕ್
ಹೆಣ್ಣು : ಹೇ..ಹೇ.... ಕಿಶೋರ ಚೋರ ಕಿಶೋರ
ಪ್ರೇಮವೇ ಒಂದು ಮ್ಯಾಜಿಕ್ ಪ್ರೇಮಿಗೆ ಲವ್ವೇ ಟಾನಿಕ್ ಮುಳಗದ ಟೈಟಾನಿಕ್
ಗಂಡು : ಬಾಂಬು ಬಿದ್ದ ಭೂಮಿಲಿ ಪ್ರೀತಿ ಬೆಳೆ ಬೆಳೆಯೋದುಂಟಾ
ಪ್ರೀತಿ ಬೆಳೆಯೋ ಭೂಮಿಲಿ ಯುದ್ಧವಾಗೋದುಂಟಾ ಎಲ್ಲಾ ಕಡೆ ಪ್ರೀತಿ ಬಿತ್ತೋಣ
ಹೆಣ್ಣು : ಪ್ರೇಮವೇ ಸಂದೇಶ ಲೈಫೇಲ್ಲ ಶಾಂತಿ ಕ್ರಾಂತಿ
ಪ್ರೇಮಿಗೆ ಎಲ್ಲೆಲ್ಲೂ ಹುಣ್ಣಿಮೆ ಚಂದ್ರಕಾಂತಿ ಲೋಕವೆಲ್ಲ ನಿತ್ಯ ಉತ್ಸವ...
ಗಂಡು : ಯುಗ ಯುಗ ಹರಿದು ಬಂದಾ ಗಂಗೆಯಾ ಪ್ರೇಮ ಎನುವ ಮಧುರ ಝರಿಯೂ ...
ಹೆಣ್ಣು : ಹೇ..ಹೇ.... ಕಿಶೋರ ಚೋರ ಕಿಶೋರ
ಪ್ರೇಮವೇ ಒಂದು ಮ್ಯಾಜಿಕ್ ಪ್ರೇಮಿಗೆ ಲವ್ವೇ ಟಾನಿಕ್ ಮುಳಗದ ಟೈಟಾನಿಕ್
ಗಂಡು : ಬೆಟ್ಟ ಗುಡ್ಡ ಹತ್ತಿ ಓಡಾಡ ಬೇಡ ಬಾರೇ
ನಿನ್ನ ಹೂವ ಪಾದ ನೋವಾದ್ರೆ ತಾಳಲಾರೆ ನನ್ನ ಪ್ರಾಣ ನೀನು ಜೋಪಾನ
ಹೆಣ್ಣು : ಕಣ್ಣು ತುಂಬ ನನ್ನೇ ನೀ ತುಂಬಿ ಕೊಳ್ಳಬೇಡ
ಕಂಬನಿ ಅಲ್ಲಿ ಇದೆ ನನಗೆ ಅಲ್ಲಿ ಜಾಗ ಬೇಡ ನನ್ನ ಎದೆಯಲ್ಲಿ ತುಂಬಿಕೋ
ಹೆಣ್ಣು : ಹೇ..ಹೇ.... ಕಿಶೋರ ಚೋರ ಕಿಶೋರ
ಗಂಡು : ನೆತ್ತರ ಕೊಳದ ತಾವರೆಯೇ... ಹೃದಯ ಅದರ ಒಳಗೆ ಇರುವ ಪ್ರಾಣ ನೀ
ಹೆಣ್ಣು : ಹೇ..ಹೇ.... ಕಿಶೋರ ಚೋರ ಕಿಶೋರ
ಗಂಡು : ಹೇ..ಹೇ.... ಕಿಶೋರಿ ಕೇಳೇ ಕಿಶೋರಿ ಚೋರಿ ಚೋರಿ
ಪ್ರೇಮವೇ ಒಂದು ಮ್ಯಾಜಿಕ್ ಪ್ರೇಮಿಗೆ ಲವ್ವೇ ಟಾನಿಕ್ ಮುಳಗದ ಟೈಟಾನಿಕ್
--------------------------------------------------------------------------------------------------------------
No comments:
Post a Comment