1848. ಹೆಂಡ್ತಿ ಹೇಳಿದರೆ ಕೇಳಬೇಕು (೧೯೯೩)

ಹೆಂಡ್ತಿ ಹೇಳಿದರೆ ಕೇಳಬೇಕು ಚಲನಚಿತ್ರದ ಹಾಡುಗಳು 
  1. ಟೀನೇಜು ಬಂತೂ 
  2. ಗಂಡ ಹೇಳಿದರೇ 
  3. ಬಾರೇ ಬಂಗಾರ 
  4. ಮಾಲಾಶ್ರೀ ಮಾಲಾಶ್ರೀ 
  5. ಹೆಂಡತಿ ಹೇಳಿದರೇ 
ಹೆಂಡ್ತಿ ಹೇಳಿದರೆ ಕೇಳಬೇಕು (೧೯೯೩) - ಟೀನೇಜು ಬಂತೂ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಸ್ವರ್ಣಲತಾ 

ಗಂಡು : ಟೀನೇಜು ಬಂದು ನೂರಾಸೆ ತಂದಿದೆ 
ಹೆಣ್ಣು : ಓಹೋಹೋ.. ಮ್ಯಾರೇಜು ಏಕೆ ಆಗಿಲ್ಲ ಎಂದಿದೆ 
ಗಂಡು : ಕಣ್ಣು ಕಣ್ಣು ಒಂದಾಗಿ ಸೇರಿದಂತೆ ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ 
ಹೆಣ್ಣು : ಹೂವಾದರೇನು ,ಮುಳ್ಳಾದರೇನು 
ಗಂಡು : ಆನಂದ ಒಂದೇ ಎಲ್ಲಿದ್ದರೇನು ಬಿಡು 
ಗಂಡು : ಟೀನೇಜು ಬಂದು ನೂರಾಸೆ ತಂದಿದೆ 
ಹೆಣ್ಣು : ಓಹೋಹೋ.. ಮ್ಯಾರೇಜು ಏಕೆ ಆಗಿಲ್ಲ ಎಂದಿದೆ 

ಗಂಡು : ನಿನ್ನ ಒಂದು ಬೇಕು ಎಂದು ಕೇಳಲೇ ಕಿವಿಯಲ್ಲಿ ಕೇಳಲೇ ಓ ನಲ್ಲೆ ಈಗಲೇ 
ಹೆಣ್ಣು : ಕೆನ್ನೆ ರಂಗು ಏರಿತಲ್ಲ ಆಗಲೇ ಈ ನಿನ್ನ ಹಾಡಲೇ ಓ ನಲ್ಲ ಆಗಲೇ 
ಗಂಡು : ನೀ ತಂದ ಒಲವಿಂದ ನನಗಿಂದು ಹಿತವಾಯ್ತು 
            ಮೈಯ್ಯಲ್ಲಿ ಮಿಂಚೊಂದು ಹರಿದಂತೆ ನನಗಾಯ್ತು ನೀ ಹೇಳು ಹೀಗೆತಕೆ ಹೇ.. ಓಓಓಓಓ 
            ಟೀನೇಜು ಬಂದು ನೂರಾಸೆ ತಂದಿದೆ 
ಹೆಣ್ಣು : ಓಹೋಹೋ.. ಮ್ಯಾರೇಜು ಏಕೆ ಆಗಿಲ್ಲ ಎಂದಿದೆ 

ಹೆಣ್ಣು : ನನ್ನ ನಿನ್ನ ಯಾರು ಬೇರೆ ಮಾಡರು ಮಾಡೋರು ನಿಲ್ಲರು ಎಂದೆಂದೂ ಗೆಲ್ಲರು 
ಗಂಡು :ಎಲ್ಲಿ ಹೋಗು ಅಲ್ಲೇ ದುಂಬಿ ಅಲ್ಲವೇ ಮಾತೇಕೆ ಆಡುವೆ ಏನೇನೋ ಕೇಳುವೆ 
ಹೆಣ್ಣು : ನಾ ಹೇಳೋ ಹಾಗೇನೇ ನೀ ಕೇಳಬೇಕಯ್ಯಾ 
ಗಂಡು : ಅಬ್ಬಬ್ಬಾ ಎಂದೆಂದೂ ನಿನದಾಸ ಸುಬ್ಬಯ್ಯ... 
ಹೆಣ್ಣು : ನಿನ್ನಿಗ ನಾ ಒಪ್ಪಿದೆ ... ಓಓಓಓಓಓ 
ಗಂಡು : ಟೀನೇಜು ಬಂದು ನೂರಾಸೆ ತಂದಿದೆ 
ಹೆಣ್ಣು : ಓಹೋಹೋ.. ಮ್ಯಾರೇಜು ಏಕೆ ಆಗಿಲ್ಲ ಎಂದಿದೆ 
ಗಂಡು : ಕಣ್ಣು ಕಣ್ಣು ಒಂದಾಗಿ ಸೇರಿದಂತೆ ಉಯ್ಯಾಲೆ ಆಡಿದಂತೆ ನಾವು ಪ್ರೇಮದಿ 
ಹೆಣ್ಣು : ಹೂವಾದರೇನು ,ಮುಳ್ಳಾದರೇನು 
ಗಂಡು : ಆನಂದ ಒಂದೇ ಎಲ್ಲಿದ್ದರೇನು ಬಿಡು 
ಗಂಡು : ಟೀನೇಜು ಬಂದು ನೂರಾಸೆ ತಂದಿದೆ 
ಹೆಣ್ಣು : ಓಹೋಹೋ.. ಮ್ಯಾರೇಜು ಏಕೆ ಆಗಿಲ್ಲ ಎಂದಿದೆ 
-----------------------------------------------------------------------------------------
 
ಹೆಂಡ್ತಿ ಹೇಳಿದರೆ ಕೇಳಬೇಕು (೧೯೯೩) -ಗಂಡ ಹೇಳಿದರೇ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಕೋರಸ್ 

ಗಂಡ ಹೇಳಿದರೆ ಕೇಳಬೇಕು ಗಂಡಿಗೆ ಜೈ ಜೈ ಜೈ ಎನ್ನಬೇಕು 
ಬಳ್ಳಿಗೆ ಮರವೇ ಆಸರೆ ಹೆಣ್ಣಿಗೆ ಗಂಡೇ ಆಸರೆ 
ಮನೆಗೆ ಗಾಡು ಬಾಡಿಗಾರ್ಡು ಗೃಹಣಿಗೆ ಪತಿಯೇ ಗಾಡ್ 
ಗಂಡ ಹೇಳಿದರೆ ಕೇಳಬೇಕು ಗಂಡಿಗೆ ಜೈ ಜೈ ಜೈ ಎನ್ನಬೇಕು 

ಪಾಪವ ಕಳೆವ ಗಂಗೆಗೆ ಜನ್ಮವ ಕೊಟ್ಟವ ವಿಷ್ಣು  ಗೊತ್ತೇನೂ 
ಆ ಶಿವ ತಾನೇ ವಿಷವನು ಕುಡಿದು ಲೋಕವ ಉಳಿಸಿದ ಸಾಕೇನೂ 
ಗಂಡನ ಮಾತು ಕೇಳದ ಸತಿಯು ಬೆಂಕಿಗೆ ಬಿದ್ದಳು ಗೊತ್ತೇನೂ 
ಜ್ಞಾನವ ಕೊಡುವ ವಾಣಿಯ ಗಂಡ ನಿನ್ನ ಹಾಗೆ ಹೆಣ್ಣೇನೂ 
ಹೆಣ್ಣೇ ಸುಡು ನಿನ ಗರ್ವದ ಹಿಡಿಯೇ ಇಲ್ಲಿ ಶ್ರೀಪಾದವಾ... 
ಗಂಡ ಹೇಳಿದರೆ ಕೇಳಬೇಕು ಗಂಡಿಗೆ ಜೈ ಜೈ ಜೈ ಎನ್ನಬೇಕು 

ರಾಮನ ಕಾಡಿಗೆ ಅಟ್ಟಿದ ಮುದುಕಿ ನಿನ್ನಾ ಹಾಗೆ ಹೆಣ್ಣೇನೆ 
ಗಂಡನ ದೂರ ತಳ್ಳಿದ ಹೆಣ್ಣು ಮನೆಯಲ್ಲಿದ್ದರೂ ಕಾಡೇನೆ 
ಕಡಲನು ದಾಟಿ ಸೀತೆಯ ಕಂಡ ಆ ಹನುಮಂತ ಗಂಡು ಕಣೇ 
ಮೊದಲನೇ ಪೂಜೆ ಪಡೆಯುವ ಗಣಪಗೆ ಹೆಂಡತಿ ಯಾರೂ ಇಲ್ಲ ಕಣೇ 
ಗಂಡೇ ನಿನ್ನ ಮಾಂಗಲ್ಯವು ಗಂಡೇ ನಿಂಗೆ ಎಂದೆಂದೂ ಸೌಭಾಗ್ಯವೂ 
ಗಂಡ ಹೇಳಿದರೆ ಕೇಳಬೇಕು ಗಂಡಿಗೆ ಜೈ ಜೈ ಜೈ ಎನ್ನಬೇಕು 
ಬಳ್ಳಿಗೆ ಮರವೇ ಆಸರೆ ಹೆಣ್ಣಿಗೆ ಗಂಡೇ ಆಸರೆ 
ಮನೆಗೆ ಗಾಡು ಬಾಡಿಗಾರ್ಡು ಗೃಹಣಿಗೆ ಪತಿಯೇ ಗಾಡ್ 
ಗಂಡ ಹೇಳಿದರೆ ಕೇಳಬೇಕು ಗಂಡಿಗೆ ಜೈ ಜೈ ಜೈ ಎನ್ನಬೇಕು 
-----------------------------------------------------------------------------------------
 
ಹೆಂಡ್ತಿ ಹೇಳಿದರೆ ಕೇಳಬೇಕು (೧೯೯೩) - ಬಾರೇ ಬಂಗಾರ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,  

ಹೆಣ್ಣು : ಬಾರೆ ಬಂಗಾರ ಲಕ್ಷ್ಮಿ ಬಾರೇ ಬಾರೆ ಬಾರೆ ಸೌಭಾಗ್ಯ ಲಕ್ಷ್ಮಿ ಬಾರೇ ಬಾರೆ   
         ಹೆಜ್ಜೆಯಾ ಮೇಲೆ ಹೆಜ್ಜೆಯ ಅಹ್ ಇಡುತಾ ಇಡುತಾ ಗೆಜ್ಜೆಯ ಸದ್ದು ಮಾಡುತ 
         ಆಹ್ ನಗುತಾ ನಗುತಾ ಎಲ್ಲೆಲ್ಲೂ ಬೆಳಕು ಚೆಲ್ಲುತಾ ಓಹೋ.. ಬರುತಾ ಬರುತಾ 
         ನಮ್ಮ ಈ ಮನೆಯಲ್ಲಿ ತುಂಬಿ ಆನಂದ 

ಹೆಣ್ಣು : ಪೂಜೆಯ ಮಾಡಲೆಂದು ಹೊಸ ಹೂವ ತಂದೆನಮ್ಮಾ 
          ಎಂದೆಂದೂ ನಮ್ಮಲ್ಲಿ ಪ್ರೀತಿ ಇಟ್ಟು ಬಾರಮ್ಮಾ 
          ಭಕ್ತಿಯಿಂದ ತಾಯಿ ದೀಪ ತಂದೆನಮ್ಮ ಎಂದೆಂದೂ ಬಾಳನ್ನು ನೀನು ಬೆಳಗಬೇಕಮ್ಮಾ 
          ಸಂತಸ ತುಂಬು ನಮ್ಮಲ್ಲಿ ಎಂದು ಉಲ್ಲಾಸ ತುಂಬು ಬದುಕಲಿ ಬಂದು 
          ಇನ್ನೇನು ನಾ ಕೇಳೇ ಕರುಣೆ ತೋರು ನನ್ನಮ್ಮಾ 
          ಬಾರೆ ಬಂಗಾರ ಲಕ್ಷ್ಮಿ ಬಾರೇ ಬಾರೆ ಬಾರೆ ಸೌಭಾಗ್ಯ ಲಕ್ಷ್ಮಿ ಬಾರೇ ಬಾರೆ   
         ಹೆಜ್ಜೆಯಾ ಮೇಲೆ ಹೆಜ್ಜೆಯ ಅಹ್ ಇಡುತಾ ಇಡುತಾ ಗೆಜ್ಜೆಯ ಸದ್ದು ಮಾಡುತ 
         ಆಹ್ ನಗುತಾ ನಗುತಾ ಎಲ್ಲೆಲ್ಲೂ ಬೆಳಕು ಚೆಲ್ಲುತಾ ಓಹೋ.. ಬರುತಾ ಬರುತಾ 
         ನಮ್ಮ ಈ ಮನೆಯಲ್ಲಿ ತುಂಬಿ ಆನಂದ 

ಹೆಣ್ಣು : ಆರು ಏಳು ಎಂಟು ನಿನಗಿಂತ ಭಾಗ್ಯ ತಂತು ಅತ್ತೇನಾ ಮಾವನ್ನಾ ಅಜ್ಜ ಅಜ್ಜಿ ಮಾಡೋಕೆ 
          ಮಡಿಲೊಂದು ಚಂದ್ರ ನಿನ್ನ ಅಮ್ಮ ಎನ್ನೋವಾಗ ಒಂದಾಗಿ ಕುಣಿಯೋಣ ಲಾಲಿ ಲಾಲಿ ಹಾಡೋಕೆ 
ಗಂಡು : ನನ್ನಣ್ಣ ಎಂಥಾ ಸಂತೋಷ ಕಂಡ ಮಾಣಿಕ್ಯದಂಥ ಅತ್ತಿಗೆ ತಂದ 
            ಹೂವಿನ ತೊಟ್ಟಿಲ ನಾವು ಸೇರಿ ಕಟ್ಟೋಣ 
ಕೋರಸ್ : ಬಾರೇ ಸಂತಾನ ಲಕ್ಷ್ಮಿ ಬಾರೇ ಬಾರೆ ಬಾರೆ ಸೌಭಾಗ್ಯ ಲಕ್ಷ್ಮಿ ಬಾರೇ ಬಾರೆ 
               ಹೆಜ್ಜೆಯಾ ಮೇಲೆ ಹೆಜ್ಜೆಯ ಅಹ್ ಇಡುತಾ ಇಡುತಾ ಗೆಜ್ಜೆಯ ಸದ್ದು ಮಾಡುತ 
               ಆಹ್ ನಗುತಾ ನಗುತಾ ಎಲ್ಲೆಲ್ಲೂ ಬೆಳಕು ಚೆಲ್ಲುತಾ ಓಹೋ.. ಬರುತಾ ಬರುತಾ 
               ನಮ್ಮ ಈ ಮನೆಯಲ್ಲಿ ತುಂಬಿ ಆನಂದ 
-----------------------------------------------------------------------------------------
 
ಹೆಂಡ್ತಿ ಹೇಳಿದರೆ ಕೇಳಬೇಕು (೧೯೯೩) -ಮಾಲಾಶ್ರೀ ಮಾಲಾಶ್ರೀ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಸ್ವರ್ಣಲತಾ 

ಗಂಡು : ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೇ 
           ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೇ 
           ಕೈಗಳ ಕೆರೆಯುತ ಕಡಿತ ಹೆಚ್ಚಾಯ್ತು ಮಂಚದಿ ಹೊರಳುತ್ತಾ ಸಾಕು ಸಾಕಾಯ್ತು.. 
           ಕೈಗಳ ಕೆರೆಯುತ ಕಡಿತ ಹೆಚ್ಚಾಯ್ತು ಮಂಚದಿ ಹೊರಳುತ್ತಾ ಸಾಕು ಸಾಕಾಯ್ತು.. 
ಹೆಣ್ಣು  : ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ ಏಕೆ ಕೂಗುವೇ  
           ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ ಏಕೆ ಕೂಗುವೇ  
           ಪ್ರತಿ ದಿನ ಸುಳ್ಳನು ಕೇಳಿ ಸಾಕಾಯ್ತು ಎಲ್ಲಿಯೂ ಕಾಣೆನೇ ಸೊಳ್ಳೆ ಏನಾಯ್ತು 
           ಪ್ರತಿ ದಿನ ಸುಳ್ಳನು ಕೇಳಿ ಸಾಕಾಯ್ತು ಎಲ್ಲಿಯೂ ಕಾಣೆನೇ ಸೊಳ್ಳೆ ಏನಾಯ್ತು 

ಗಂಡು : ಮುಳುಗಲು ಸೂರ್ಯ                  ಹೆಣ್ಣು : ಏನಯ್ಯಾ ಏನಯ್ಯ 
ಗಂಡು : ಸೊಳ್ಳೆಯ ಕಾರ್ಯ                     ಹೆಣ್ಣು : ಎಲ್ಲಯ್ಯ ಎಲ್ಲಯ್ಯ 
ಗಂಡು : ಎಮ್ಮೆ ಗಾತ್ರದಲಿ ದಪ್ಪ ಚರ್ಮವಿರೇ ಹೇಗೆ ತಿಳಿಸೋದು 
ಹೆಣ್ಣು : ಕೊನೆಗೆ ಕರೆದು                           ಗಂಡು : ಅಯ್ಯಯ್ಯೋ ಅಲ್ಲಮ್ಮಾ 
ಹೆಣ್ಣು : ಬಾಗಿಲ ಬಡಿತ                            ಗಂಡು : ನನ್ನಾಣೆ ಇಲ್ಲಮ್ಮಾ 
ಹೆಣ್ಣು : ಕೆನ್ನೆ ಮುಟ್ಟುವುದು ಬೆನ್ನು ತಟ್ಟುವುದು ನನ್ನಾ ಅಳಿಸೋದು 
ಗಂಡು : ಅಂಥಾ ಗತಿ ಬಂದಿಲ್ಲ                 ಹೆಣ್ಣು : ನಿನ್ನಾ ನುಡಿ ನಂಬೋಲ್ಲ 
ಗಂಡು : ಇಂದು ನೀನು ಬಂದು ನೋಡು ಆಗೆಲ್ಲ ತಿಳಿವೆ 
ಹೆಣ್ಣು  : ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ ಏಕೆ ಕೂಗುವೇ  
           ಪ್ರತಿ ದಿನ ಸುಳ್ಳನು ಕೇಳಿ ಸಾಕಾಯ್ತು ಎಲ್ಲಿಯೂ ಕಾಣೆನೇ ಸೊಳ್ಳೆ ಏನಾಯ್ತು 
ಗಂಡು : ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೇ 
      
ಹೆಣ್ಣು : ಪ್ರಣಯದ್ ಆಟ                        ಗಂಡು : ಬೇಕಿಲ್ಲ ಬೇಕಿಲ್ಲ 
ಹೆಣ್ಣು : ಅನುದಿನ ಕಾಟ                         ಗಂಡು : ಇಂದಲ್ಲ ಇಂದಲ್ಲ 
ಹೆಣ್ಣು : ಸೊಂಟ ಬಳುಕಿದರೆ ಸೆರಗು ಹಾರಿದರೆ ಆಗ ಗತಿ ಏನು 
ಗಂಡು : ಅರಳಿದ ವಯಸ್ಸೂ                   ಹೆಣ್ಣು : ನಾ ಬಲ್ಲೆ ನಾ ಬಲ್ಲೆ 
ಗಂಡು : ಕುಣಿಯುವ ವಯಸ್ಸೂ               ಹೆಣ್ಣು : ನಿಲ್ಲಲ್ಲೇ ನಿಲ್ಲಲ್ಲೇ 
ಗಂಡು : ಹೇಗೆ ತಾಳುವೆನು ರಾತ್ರಿ ಕಳೆಯುವೆನು ಮನಸು ಕಲ್ಲೇನೂ 
ಹೆಣ್ಣು : ವಯಸ್ಸು ಯಾಕೆ ಬೇಕೇನು           ಗಂಡು : ಜೇನು ಬೇಕು ಹೇಳಿನ್ನೂ 
ಹೆಣ್ಣು : ಕೇಳೋದಲ್ಲ ಹೇಳೋದಲ್ಲ ನೀನಾಗೇ ತಿಳಿಯೋ 
ಗಂಡು : ಮಾಲಾಶ್ರೀ ಮಾಲಾಶ್ರೀ ಅಬ್ಬಬ್ಬ ಅಬ್ಬಬ್ಬ ಸೊಳ್ಳೆ ಕಚ್ಚಿದೇ 
           ಕೈಗಳ ಕೆರೆಯುತ ಕಡಿತ ಹೆಚ್ಚಾಯ್ತು ಮಂಚದಿ ಹೊರಳುತ್ತಾ ಸಾಕು ಸಾಕಾಯ್ತು.. 
ಹೆಣ್ಣು  : ಸುಬ್ಬಯ್ಯ ಸುಬ್ಬಯ್ಯ ಎಲ್ಲಯ್ಯ ಎಲ್ಲಯ್ಯ ಏಕೆ ಕೂಗುವೇ  
           ಪ್ರತಿ ದಿನ ಸುಳ್ಳನು ಕೇಳಿ ಸಾಕಾಯ್ತು ಎಲ್ಲಿಯೂ ಕಾಣೆನೇ ಸೊಳ್ಳೆ ಏನಾಯ್ತು 
-----------------------------------------------------------------------------------------
 
ಹೆಂಡ್ತಿ ಹೇಳಿದರೆ ಕೇಳಬೇಕು (೧೯೯೩) -ಹೆಂಡತಿ ಹೇಳಿದರೇ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮಂಜುಳಾ ಗುರುರಾಜ , ಸ್ವರ್ಣಲತಾ 

ಹೆಂಡತಿ ಹೇಳಿದರೆ ಕೇಳಬೇಕು ನೀ ಹೆಣ್ಣಿಗೆ ಜೈ ಜೈ ಜೈ ಎನ್ನಬೇಕು 
ಮನೆಗೆ ಹೆಣ್ಣೇ ದೀಪವು ಮಡದಿ ಮನೆಗೆ ಲಕ್ಷ್ಮಿಯು 
ಗಂಡನ ಪ್ರಾಣ ಗಂಡನ ಮಾನ ಅವನಾ ಶ್ರೀಮತಿಯೂ .. 
ಹೆಂಡತಿ ಹೇಳಿದರೆ ಕೇಳಬೇಕು ನೀ ಹೆಣ್ಣಿಗೆ ಜೈ ಜೈ ಜೈ ಎನ್ನಬೇಕು 

ಪಾಪವ ಕಳೆದು ಪ್ರಾಣವ ಕೊಡುವ ರಂಭೆಯು ಹೆಣ್ಣು ಗೊತ್ತೇನೂ 
ಆ ಶಿವ ಕೂಡ ಈ ನಿಜ ಅರಿತು ಶಿರದಲಿ ಇಟ್ಟ ಇನ್ನೇನೂ 
ಸೂರ್ಯನ ತಡೆದ ಆ ಸತಿ ಸುಮತಿ ನಾರೀಮಣಿಯ ಸಾಕೇನೂ 
ಜ್ಞಾನವ ಕೊಡುವ ವಾಣಿಯು ಯಾರು ಬ್ರಹ್ಮನ ರಾಣಿ ಗಂಡೇನು 
ಹೆಣ್ಣಾ ನಡೆ ಸಂತೋಷವು ಹೆಣ್ಣಾ ನುಡಿ ಇಂಪಾದ ಸಂಗೀತವೂ 
ಹೆಂಡತಿ ಹೇಳಿದರೆ ಕೇಳಬೇಕು ನೀ ಹೆಣ್ಣಿಗೆ ಜೈ ಜೈ ಜೈ ಎನ್ನಬೇಕು 

ಜನ್ಮವ ಕೊಡುವ ತಾಯಿಯು ಕೂಡ ಹೆಣ್ಣೇ ತಾನೇ ನನ್ನೊನೆ 
ಗಂಡನಿಗಾಗಿ ಗೌರಿಯ ಪೂಜೆ ವೃತ ಮಾಡುವಳು ಹೆಣ್ಣೆನೇ 
ವಂಶವ ಬೆಳೆಸಿ ವಂಶವ ಉಳಿಸೋ ದಿವ್ಯ ಶಕ್ತಿಯು ಅವಳೇನೇ 
ಹುಟ್ಟಿದ ಮನೆಗೆ ಮೆಟ್ಟಿದ ಮನೆಗೆ ಕೀರ್ತಿಯ ತರುವಳು ಹೆಣ್ಣೆನೇ 
ತಿಳಿಯೋ ನೀ ಈ ಸತ್ಯವ ಪಡೆಯೋ ಇಲ್ಲಿ ಅನುರಾಗದಾನಂದವಾ 
ಹೆಂಡತಿ ಹೇಳಿದರೆ ಕೇಳಬೇಕು ನೀ ಹೆಣ್ಣಿಗೆ ಜೈ ಜೈ ಜೈ ಎನ್ನಬೇಕು 
ಮನೆಗೆ ಹೆಣ್ಣೇ ದೀಪವು ಮಡದಿ ಮನೆಗೆ ಲಕ್ಷ್ಮಿಯು 
ಗಂಡನ ಪ್ರಾಣ ಗಂಡನ ಮಾನ ಅವನಾ ಶ್ರೀಮತಿಯೂ .. 
ಹೆಂಡತಿ ಹೇಳಿದರೆ ಕೇಳಬೇಕು ನೀ ಹೆಣ್ಣಿಗೆ ಜೈ ಜೈ ಜೈ ಎನ್ನಬೇಕು 
----------------------------------------------------------------------------------------

No comments:

Post a Comment