ಗೌರಿ ಕಲ್ಯಾಣ ಚಲನಚಿತ್ರದ ಹಾಡುಗಳು
- ನೋಡಪ್ಪ ನನಗೆ ಸಿಕ್ಕ ಮಗುವನ್ನು
- ಪ್ರೀತಿಯಲ್ಲಿ ಎಂಥಾ
- ಪ್ರೇಮದ ಕಲ್ಪನೆ
- ಗೌರಿ ಕಲ್ಯಾಣ ಕಥೆಯಿದು
- ಮಲ್ಲಿಗೆ ಮಲ್ಲಿಗೆ
ಗೌರಿ ಕಲ್ಯಾಣ (೧೯೯೧) - ನೋಡಪ್ಪ ನನಗೆ ಸಿಕ್ಕ ಮಗುವನ್ನು
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ನೋಡಪ್ಪ ನನಗೆ ಸಿಕ್ಕ ಮಗುವನ್ನು ಬೆಳೆಸೋದು ಹೇಗೆ ಹೇಳು ಇವಳನ್ನು
ಯೌವ್ವನ ತುಂಬುವ ಆ ಕಾಲ ಬರುವುದು ಇನ್ನೆಂದು ಪ್ರೀತಿಯ ಕಾಣುವ ಆ ವಯಸು
ಅರಳುವುದಿನ್ನೆಂದು ಅಮ್ಮಮ್ಮಾ ನಾ ಕಾಣೆ ಸುಳ್ಳಲ್ಲ ನನ್ನಾಣೆ
ನೋಡಪ್ಪ ನನಗೆ ಸಿಕ್ಕ ಮಗುವನ್ನು ಬೆಳೆಸೋದು ಹೇಗೆ ಹೇಳು
ಯಾರೂ ಕಾಣದ ಹೊಸ ರೀತಿ ಈ ಮಗು ಯಾರು ಕಾಣದೆಂದು ಇವಳ ಹೂ ನಗು
ಯಾರು ಕೇಳರು ಇವಳಾಡೋ ಮಾತನು ಕೆನ್ನೆ ಕಾಣದೆಂದು ಒಂದು ಮುತ್ತನು
ಹೂವಂತೆ ಈ ಕೆನ್ನೆ ಸವರುತಲಿರುವಾಗ ಜೇನಂತೆ ಚೆಂದುಟಿಯು ಕಿಲಕಿಲ ಎನ್ನುವಾಗ
ನನ್ನ ಅರಗಿಣಿ ಮರಿಗಿಣಿ ಕರಿಮಣಿ ಮಿಣಿ ಮಿಣಿ ಲಾಲಿ ಲಾಲಿ ಜೋ ಲಾಲಿ
ನೋಡಪ್ಪ ನನಗೆ ಸಿಕ್ಕ ಮಗುವನ್ನು ಬೆಳೆಸೋದು ಹೇಗೆ ಹೇಳು
ನೂರು ಹೆಣ್ಣನು ನಿನ್ನ ನೋಡಿ ಬಂದೆನು ಯಾರ ಬೇಡವೆಂದು ಓಡಿ ಹೋದೆನು
ನೋಡಿ ಹಿಗ್ಗಿದೆ ಈ ಹೆಣ್ಣ ಕಣ್ಣನು ಅಂದಗಾತಿ ಎಂದು ಒಪ್ಪಿಕೊಂಡೇನು
ಇವಳೆಂಥ ಹೆಣ್ಣೆಂದು ಅರಿತೆನು ನಾ ಈಗ ಅಮ್ಮಮ್ಮ ಗತಿ ಏನು ತಿಳಿಯನು ನಾ ಈಗ
ನನ್ನ ಚಿಣಿಮಣಿ ಕಣ್ಮಣಿ ಚಿನ್ನದ ಗಣಿಗಣಿ ಲಾಲಿ ಲಾಲಿ ಜೋ ಲಾಲಿ
ನೋಡಪ್ಪ ನನಗೆ ಸಿಕ್ಕ ಮಗುವನ್ನು ಬೆಳೆಸೋದು ಹೇಗೆ ಹೇಳು ಇವಳನ್ನು
ಯೌವ್ವನ ತುಂಬುವ ಆ ಕಾಲ ಬರುವುದು ಇನ್ನೆಂದು ಪ್ರೀತಿಯ ಕಾಣುವ ಆ ವಯಸು
ಅರಳುವುದಿನ್ನೆಂದು ಅಮ್ಮಮ್ಮಾ ನಾ ಕಾಣೆ ಸುಳ್ಳಲ್ಲ ನನ್ನಾಣೆ
ನೋಡಪ್ಪ ನನಗೆ ಸಿಕ್ಕ ಮಗುವನ್ನು ಬೆಳೆಸೋದು ಹೇಗೆ ಹೇಳು
--------------------------------------------------------------------------------------------
ಗೌರಿ ಕಲ್ಯಾಣ (೧೯೯೧) - ಪ್ರೀತಿಯಲ್ಲಿ ಎಂಥಾ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್ , ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ಪ್ರೀತಿಯಲ್ಲಿ ಎಂಥಾ ಸುಖವು ತುಂಬಿದೆ
ಹೆಣ್ಣು : ಮೈಮರೆತು ನಾ ನಿನ್ನ ಸೇರಿದೆ
ಗಂಡು : ಹಿಂದೆ ಎಂದೂ ಕಾಣದಂಥ ಅನುಭವ ಇದೆ
ಬೇರೆ ಒಂದು ಲೋಕಕ್ಕಿಂದು ನಮ್ಮ ಕರೆದಿದೆ
ಹೆಣ್ಣು : ನೀ ಇರುವ ಆಲಯವು ನನ್ನ ಈ ಮನ
ಗಂಡು : ಪ್ರೀತಿಯಲ್ಲಿ ಎಂಥಾ ಸುಖವು ತುಂಬಿದೆ
ಹೆಣ್ಣು : ಮೈಮರೆತು ನಾ ನಿನ್ನ ಸೇರಿದೆ
ಗಂಡು : ತುಂಟು ಕಣ್ಣಲ್ಲಿ ಆಡೋ ಮಾತಲ್ಲಿ ಕಂಡೆ ನಾನು ತುಸು ಸಂಭ್ರಮ
ಹೆಣ್ಣು : ನಿನ್ನ ತೋಳಲ್ಲಿ ನಿಂತು ನಾನಿಲ್ಲಿ ಕಂಡೆ ಈ ಜೀವ ಸಂಗಮ
ಗಂಡು : ನನ್ನ ಬಾಳ ದೇವಿಯೇ ನಿನಗೆ ಪ್ರೇಮ ಪೂಜೆಯು
ಹೆಣ್ಣು : ನೀನೇ ನನ್ನ ದೇವರು ನಾನೇ ದಾಸಿಯು ಪ್ರಿಯತಮ
ಗಂಡು : ಪ್ರೀತಿಯಲ್ಲಿ ಎಂಥಾ ಸುಖವು ತುಂಬಿದೆ
ಹೆಣ್ಣು : ಮೈಮರೆತು ನಾ ನಿನ್ನ ಸೇರಿದೆ
ಗಂಡು : ನಿನ್ನ ಈ ಪಾದ ನಡೆವ ದಾರಿಗೆ ನಾನು ಹೂವನ್ನು ಹಾಸಿದೆ
ಹೆಣ್ಣು : ಕರೆದ ರೀತಿಲಿ ನುಡಿಯ ಇಂಪಲ್ಲಿ ಪ್ರೇಮ ಸಂದೇಶ ಕೇಳಿದೆ
ಗಂಡು : ಇರಲು ನೀನು ಜೊತೆಯಲಿ ಎಲ್ಲೇ ಎಲ್ಲೋ ತೇಲಿದೆ
ಹೆಣ್ಣು : ಹೀಗೆ ನಗಲೀ ಎಂದಿಗೂ ನಮ್ಮ ಬಂಧನ
ಗಂಡು : ಪ್ರಿಯತಮೆ ...ಪ್ರೀತಿಯಲ್ಲಿ ಎಂಥಾ ಸುಖವು ತುಂಬಿದೆ
ಹೆಣ್ಣು : ಮೈಮರೆತು ನಾ ನಿನ್ನ ಸೇರಿದೆ
ಗಂಡು : ಹಿಂದೆ ಎಂದೂ ಕಾಣದಂಥ ಅನುಭವ ಇದೆ
ಬೇರೆ ಒಂದು ಲೋಕಕ್ಕಿಂದು ನಮ್ಮ ಕರೆದಿದೆ
ಹೆಣ್ಣು : ನೀ ಇರುವ ಆಲಯವು ನನ್ನ ಈ ಮನ
ಗಂಡು : ಪ್ರೀತಿಯಲ್ಲಿ ಎಂಥಾ ಸುಖವು ತುಂಬಿದೆ
ಹೆಣ್ಣು : ಮೈಮರೆತು ನಾ ನಿನ್ನ ಸೇರಿದೆ
-------------------------------------------------------------------------------------------
ಗೌರಿ ಕಲ್ಯಾಣ (೧೯೯೧) - ಪ್ರೇಮದ ಕಲ್ಪನೆ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ, ಚಿತ್ರಾ
ಹೆಣ್ಣು : ಪ್ರೇಮದಾ ಕಲ್ಪನೆ ಅಂದು ಮೂಡಿದಾಗ ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಎದೆ ಕೂಗಿ ಹೇಳಿತು ಜೊತೆ ಬೇಡಿ ಬಂದಿತು ಪ್ರೀತಿಗೆ ಪ್ರೀತಿಯ ನೀಡು ಎಂದಿತು
ಗಂಡು : ಪ್ರೇಮದಾ ಕಲ್ಪನೆ ಅಂದು ಮೂಡಿದಾಗ ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಮನಸೋತು ಹೋಯಿತು ಒಲವನು ಕೇಳಿತು ಪ್ರೀತಿಗೆ ಪ್ರೀತಿಯ ನೀಡು ಎಂದಿತು
ಪ್ರೇಮದಾ ಕಲ್ಪನೆ ಅಂದು ಮೂಡಿದಾಗ ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಹೆಣ್ಣು : ಲೋಕವೇ ತುಂಬಿರಲು ನಮ್ಮಂಥ ಪ್ರೇಮಿಗಳು
ಗಂಡು : ಪ್ರಾಣವೇ ಮುಡಿಪಿಟ್ಟು ಹಾತೊರೆದು ಕಾದಿರಲು
ಹೆಣ್ಣು : ಇರಲಿ ಈ ಪ್ರೀತಿ ಶ್ರೀರಕ್ಷೆ ನನಗೆಂದೆಂದೂ
ಗಂಡು : ಕೊಡಲಿ ಆ ದೇವಾ ನಿನ್ನನ್ನೇ ಜೊತೆಗೆಂದೆಂದೂ
ಹೆಣ್ಣು : ಈ ಜೀವ ಒಂದಾಗಿ ಪ್ರಾಣ ನಿಂಗಾಗಿ ಈ ಮೋಹ ನೂರಾಗಿ ದಾಹ ಹೆಚ್ಚಾಗಿ
ಗಂಡು : ಸೇರುವೆ ನಿನ್ನನ್ನು ನಂಬು ನನ್ನನ್ನೂ
ಪ್ರೇಮದಾ ಕಲ್ಪನೆ ಅಂದು ಮೂಡಿದಾಗ ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಕೋರಸ್ : ಬೀಸುವ ಪದ ಚಂದ ಕೂಸಿನ ಧ್ವನಿ ಚಂದ ರಾಗಿ ಬೀಸೋ ಕಲ್ಲೇ ರಾಯರ ಮುಡಿಗಲ್ಲೇ
ಗಂಡು : ಯಾವುದೋ ಅನುಬಂಧ ನಮ್ಮನು ಕೂಡಿಸಿದೆ ಸ್ನೇಹದ ಶ್ರೀಗಂಧ ಕಂಪಿಂದ ಬಂಧಿಸಿದೆ
ಹೆಣ್ಣು : ನಿನಗೆ ಈ ಜೀವ ವಶವಾಗಿ ಸೆರೆಯಾದಂತೆ ಪಡೆದೆ ಹೊಸ ಬಾಳು ನಿನ್ನಿಂದ ಬೆಳಕಾದಂತೆ
ಗಂಡು : ಆ ಸ್ವರ್ಗ ಬೇಕಿಲ್ಲ ರಂಭೆ ಬೇಕಿಲ್ಲ ಈ ಲೋಕ ಬೇಕಿಲ್ಲ ನೀನೇ ಸಾಕಲ್ಲ
ಹೆಣ್ಣು : ಸಾರುವೇ ಲೋಕಕೆ ನೀನೇ ಪ್ರಾಣವೂ ... ವೂ
ಪ್ರೇಮದಾ ಕಲ್ಪನೆ ಅಂದು ಮೂಡಿದಾಗ ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಎದೆ ಕೂಗಿ ಹೇಳಿತು ಜೊತೆ ಬೇಡಿ ಬಂದಿತು ಪ್ರೀತಿಗೆ ಪ್ರೀತಿಯ ನೀಡು ಎಂದಿತು
ಗಂಡು : ಪ್ರೇಮದಾ ಕಲ್ಪನೆ ಅಂದು ಮೂಡಿದಾಗ ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಮನಸೋತು ಹೋಯಿತು ಒಲವನು ಕೇಳಿತು ಪ್ರೀತಿಗೆ ಪ್ರೀತಿಯ ನೀಡು ಎಂದಿತು
ಪ್ರೇಮದಾ ಕಲ್ಪನೆ ಅಂದು ಮೂಡಿದಾಗ ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
--------------------------------------------------------------------------------------------
ಗೌರಿ ಕಲ್ಯಾಣ (೧೯೯೧) - ಗೌರಿ ಕಲ್ಯಾಣ ಕಥೆಯಿದು
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು ಕೇಳಿ ಕಲಿಗಾಲಲ್ಲೇ ನಡೆದುದು
ಊರು ಬಿಟ್ಟು ಊರಿಗೆ ಬಂದೆ ನನ್ನ ಗೌರಿಗಾಗಿ
ಬಿಸಿಲಿನಲ್ಲಿ ಸೈಕಲ್ ತುಳಿದೇ ಅವಳ ಪ್ರೀತಿಗಾಗಿ
ವಳಿಗಾಗಿ ಪ್ರಾಣ ಬಿಡಲು ನಾ ಸಿದ್ದನಾಗಿ
ನಿಂತಾಗ ತಡೆದ ಈತ ನನ್ನ ಗುರುವಾಗಿ
ಅಂತೂ ಇಂತೂ ನಾ ಒಂಟಿಯಾಗಿ
ಅಯ್ಯೋ ಪಾಪ ಗೌರಿಯಿಂದ ನಾ ದೂರವಾಗಿ
ಬೇರೆ ದಾರಿಯೇ ಕಾಣದೆ ನೊಂದೆ
ವಿರಹದ ಉರಿಯಲಿ ಅನುದಿನ ಬೆಂದೇ ..
ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು ಕೇಳಿ ಕಲಿಗಾಲಲ್ಲೇ ನಡೆದುದು
ಒಮ್ಮೆ ತಾವು ಯುವಕರು ಎಂಬ ಜ್ಞಾನವೇಕೆ ಇಲ್ಲ
ತಮಗೂ ಹೀಗೆ ಆಸೆ ಇದ್ದ ನೆನಪು ಏತಕೆ ಇಲ್ಲ
ಯುವಕರಲ್ಲಿ ಮುದುಕರಿಗಿಂದು ಮರುಕವೇಕೆ ಇಲ್ಲ
ತಮ್ಮ ಹಾಗೆ ನಾವು ಎಂಬ ಅರಿವು ಏತಕಿಲ್ಲ
ಹಗಲು ರಾತ್ರಿ ನನ್ನ ಗೌರಿ ಚಿಂತೆ
ಕುಡಿದು ಬಂದೆ ದೇವದಾಸನಂತೆ
ಹೆಣ್ಣನು ಕಂಡನು ತಳ್ಳಲು ಬಂದೆ
ಪಡೆಯುವ ನಾಯಿಯ ಜನ್ಮವು ಮುಂದೆ
ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು ಕೇಳಿ ಕಲಿಗಾಲಲ್ಲೇ ನಡೆದುದು
--------------------------------------------------------------------------------------------
ಗೌರಿ ಕಲ್ಯಾಣ (೧೯೯೧) - ಮಲ್ಲಿಗೆ ಮಲ್ಲಿಗೆ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ
ತಂದಾನ ತಂದಾನ ತಾನ ತಂದಾನನ.. ತಂದಾನ ತಂದಾನ ತಾನ ತಂದಾನನ
ಮಲ್ಲಿಗೇ ಮಲ್ಲಿಗೆ ಹೃದಯದ ಮಾತು ಕೇಳಿದೇಯಾ
ಮಲ್ಲಿಗೇ ಮಲ್ಲಿಗೆ ಹೃದಯದ ಮಾತು ಕೇಳಿದೇಯಾ ಒಲವಿನ ರೀತಿ ನೋಡಿದೇಯಾ
ಮೆಲ್ಲಗೆ ಮೆಲ್ಲಗೆ ನನ್ನ ಕಂಡು ನೀನು ನಗುವೇಯಾ ಹುಚ್ಚ ಎಂದು ನನ್ನ ಕರೆದೆಯಾ
ಪ್ರೀತಿ ಮಾಡಬೇಕು ಎಂದು ನೀನು ನುಡಿದೆಯಾ
ಮೋಸ ಹೋಗಬೇಡ ಎಂದು ಎಚ್ಚರ ತಂದೆಯಾ
ನಾನು ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೇನು
ಮಲ್ಲಿಗೇ ಮಲ್ಲಿಗೆ ಹೃದಯದ ಮಾತು ಕೇಳಿದೇಯಾ ಒಲವಿನ ರೀತಿ ನೋಡಿದೇಯಾ
ನಲ್ಲೆ ಬರೋ ದಾರಿಗೆ ಬಿಡಿ ಹೂವ ಹಾಸಿದೆ ಹೂವ ಜೊತೆ ನನ್ನ ಕನಸೆಲ್ಲ ಚೆಲ್ಲಿದೆ
ಮನದ ಗುಡಿಯಲ್ಲಿ ದಿನ ಪೂಜೆ ಮಾಡಿದೆ ರಾತ್ರಿ ಹಗಲೆಲ್ಲ ಹೆಸರ ಹಾಡಿದೆ
ಹಕ್ಕಿ ಜೊತೆಯಂತೆ ಹಾರಾಡಿ ಮೆರೆದೆವು ಮಳೆ ಬಿಲ್ಲ ಮೇಲೆ ಹಾರಾಡಿ ನಲಿದೇವು
ನಂಬಿ ಮೋಸ ಹೋದೆ ಸಾಕಿನ್ನು ನಾಟಕ ಸರಿಯಾದ ಪಾಠ ಕಲಿತೆನು
ಇನ್ನು ಮೇಲೆ ಎಂದು ಮರೆಯೇನು
ಮಲ್ಲಿಗೇ ಮಲ್ಲಿಗೆ ಹೃದಯದ ಮಾತು ಕೇಳಿದೇಯಾ ಒಲವಿನ ರೀತಿ ನೋಡಿದೇಯಾ
ಬಾನು ನನ್ನ ನೋಡಿ ಜೊತೆಯಾಗಿ ಅಳುತ್ತಿದೆ ಮುತ್ತು ಮಳೆಯನ್ನೂ ನನಗಾಗಿ ಸುರಿಸಿದೆ
ಚಂದ್ರ ಮೊಗವನ್ನು ಮುಗಿಲಲ್ಲಿ ಮರೆಸಿದೆ ನನ್ನ ಸಂತೈಸಿ ತಂಗಾಳಿ ಕಳಿಸಿದ
ಹೂವಿನಂಥ ,ಮನಸ್ಸು ಕಲ್ಲಾಗಿ ಹೋಯಿತೇ ಆಡಿದಂಥ ಆಟ ಹುಸಿಯಾಗಿ ಹೋಯಿತೇ
ನಂಬಿ ಮೋಸ ಹೋದೆ ಸಾಕಿನ್ನು ನಾಟಕ ಸರಿಯಾದ ಪಾಠ ಕಲಿತೆನು
ಇನ್ನು ಮೇಲೆ ಎಂದು ಮರೆಯೇನು
ಮಲ್ಲಿಗೇ ಮಲ್ಲಿಗೆ ಹೃದಯದ ಮಾತು ಕೇಳಿದೇಯಾ ಒಲವಿನ ರೀತಿ ನೋಡಿದೇಯಾ
ಮೆಲ್ಲಗೆ ಮೆಲ್ಲಗೆ ನನ್ನ ಕಂಡು ನೀನು ನಗುವೇಯಾ ಹುಚ್ಚ ಎಂದು ನನ್ನ ಕರೆದೆಯಾ
ಪ್ರೀತಿ ಮಾಡಬೇಕು ಎಂದು ನೀನು ನುಡಿದೆಯಾ
ಮೋಸ ಹೋಗಬೇಡ ಎಂದು ಎಚ್ಚರ ತಂದೆಯಾ
ನಾನು ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೇನು
ಮಲ್ಲಿಗೇ ಮಲ್ಲಿಗೆ ಹೃದಯದ ಮಾತು ಕೇಳಿದೇಯಾ ಒಲವಿನ ರೀತಿ ನೋಡಿದೇಯಾ
---------------------------------------------------------------------------------------------
No comments:
Post a Comment