1851. ನಾಗ ದೇವತೆ (೨೦೦೦)



ನಾಗ ದೇವತೆ ಚಲನಚಿತ್ರದ ಹಾಡುಗಳು 
  1. ಹಾಲುಂಡೂ ಹೋಗೆ ನಾಗಮ್ಮಾ 
  2. ಮುರಳಿ ರವಳಿ
  3. ಓ ಮಲ್ಲೇ ಓ ದುಂಬಿ 
  4. ಊರ ಕಾಯೋ ಮುತೈದೆ 
  5. ಜಗದಲ್ಲಿ ನೀ ಇದ್ದರೇ 
  6. ನಾಗ ನಾಗಿ 
ನಾಗ ದೇವತೆ (೨೦೦೦) - ಹಾಲುಂಡೂ ಹೋಗೆ ನಾಗಮ್ಮಾ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ, ಬಿ.ಜಯಶ್ರೀ 

ಹಾಲುಂಡು ಹೋಗೆ ನಾಗಮ್ಮಾ ಹಾಲು ಖೀರುಂಡು ಹೋಗೆ ನಾಗಮ್ಮಾ 
ಹಾಲುಂಡು ಹೋಗೆ ನಾಗಮ್ಮಾ ಹಾಲು ಖೀರುಂಡು ಹೋಗೆ ನಾಗಮ್ಮಾ 
ಬಾಗಿನ ಕೊಳ್ಳೆ ನಮ್ಮಮ್ಮಾ ನಾರಿ ನವನಾಗ ದೋಷ ಕಳಿಯಮ್ಮಾ 
ನಾಗರ ಪಂಚಮಿ ಫಲವ ತಾರಮ್ಮ... ಅಮ್ಮ 
ಬಾಗಿನ ಕೊಳ್ಳೆ ನಮ್ಮಮ್ಮಾ ನಾರಿ ನವನಾಗ ದೋಷ ಕಳಿಯಮ್ಮಾ 
ನಾಗರ ಪಂಚಮಿ ಫಲವ ತಾರಮ್ಮ... ಅಮ್ಮ 
ಹಾಲುಂಡು ಹೋಗೆ ನಾಗಮ್ಮಾ ಹಾಲು ಖೀರುಂಡು ಹೋಗೆ ನಾಗಮ್ಮಾ 

ಕಡಲನು ಕಡೆದೌನೇ ಶಿವಗಣ ಭೂಮಿಗೆ ತಂದೌನೇ 
ವಿಷವನು ಉಗುದೋನೆ ನುಂಗಲು ಶಿವನನು ಪಡೆದೋನೆ 
ಮೂಲದ ಕೊರಳಲ್ಲೇ ಮಾಲೆ ಆಗಿ ಮೆರೆದೋನೆ ನಾಗರ ನಾಗಪ್ಪ ನಮ್ಮ ಆದಿ ಶೇಷಪ್ಪ.... 
ಅಂಥ ನಾಗಮ್ಮನ ಮಗಳೇ ಬಾರಮ್ಮ... ಬಂಜೆ ದೋಷಾನ ಕಳೆಯೇ ನಾಗಮ್ಮಾ 
ಇಷ್ಟಿದ್ರೇ ಅಷ್ಟೈಶ್ವರ್ಯ ಕೊಡುವೇ ನಾಗಮ್ಮ ನಮಗೆ ತಾಳಿಯ ಭಾಗ್ಯ ತಾರಮ್ಮಾ 
ಕಾಸು ಕವಡೇನ ಕಾಯೇ ನಾಗಮ್ಮ... ಓ ಓ ಓ ಓ ಓ ಓ ಓ 
    
ಸಾವಿರ ಬಾಗಿಲಂತೆ ಇವಳ ಮಣ್ಣಿನ ಅರಮನೆಗೆ 
ಅರಮನೆ ಸುತ್ತಿದರೆ ದೋಷ ಸುಳಿಯದು ಮನೆಯೊಳಗೇ 
ತಾಯಿ ವೈಕುಂಠ ಇವಳ ತಂದೆ ಕೈಲಾಸ ರಕ್ಷಿಸ ಬಂದಾಳೋ ಭೂಮಿ ಮ್ಯಾಲೇ 
ಇವಳ ಮನೆ ಮಣ್ಣ ಕಿಡಿಗೆ ಇವಳ ಮನೆ ಮುಂದೆ ದೀಪ ಹಚ್ಚಮ್ಮ 
ವಿದುರಾಶ್ವತ್ಥ ದಾಟಿ ಕುಂತೆ ಬಂದು ನೋಡಮ್ಮ ನಮ್ಮ ಮನೆದೇವರು ನೀನೇ ನಾಗಮ್ಮ  
ಏಳು ಅಕ್ಕ ತಂಗಿ ನೀನೇ ನಾಗಮ್ಮ ಓಓಓಓಓ 
--------------------------------------------------------------------------------------
  
ನಾಗ ದೇವತೆ (೨೦೦೦) - ಮುರಳಿ ರವಳಿ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ, ಎಸ್.ಪಿ.ಬಿ. 

ಗಂಡು : ಮುರುಳಿ ರವಳಿ ಎದೆಗೆ ಧುಮಿಕಿ ಅನುರಾಗದ ಅಮೃತ ಬಿಂದಿಗೆ ತುಂಬು ತುಂಬಿ 
            ತನುವ ಕಲಕಿ ಮನವೇ ತುಳುಕಿ ನೆನೆದಳೋ ರಾಧೇ... ರಾಧೇ... 
            ಮುರುಳಿ ರವಳಿ ಎದೆಗೆ ಧುಮಿಕಿ ಯಮುನಾ ನದಿಯಾಯಿತು 
            ಲಜ್ಜೆಯ ಗಿರಿ ಕರಗಿ ತನುವೆ ಗೋಕುಲ ಮನವೇ ಮುರಾರಿ 
            ಆದಳೋ ರುಕ್ಮಿಣಿ ... ರುಕ್ಮಿಣಿ 
ಗಂಡು : ಮುರುಳಿ ರವಳಿ ಎದೆಗೆ ಧುಮುಕಿ ಬೃಂದಾವನವಾಯಿತು 
            ಮಾನಸ ವನವೆಲ್ಲಾ ಜಗವೇ ಹೆಣ್ಣು ಹೆಣ್ಣೇ ಜಗವು ಎಂದನೇ ಶಾಮನು ಶಾಮನು 
ಇಬ್ಬರು : ಮುರುಳಿ ರವಳಿ ಎದೆಗೆ ಧುಮುಕಿ
             ಮುರುಳಿ ರವಳಿ ಎದೆಗೆ ಧುಮುಕಿ 

ಹೆಣ್ಣು : ಯೌವ್ವನವೆಲ್ಲಾ ಹೂಗಳ ಮಾಡಿ ಅರ್ಪಿಸುವೆ ಪೂಜಿಸುವೇ ಪ್ರೀತಿಯ ಸ್ವರ್ಗ ಯಾಚಿಸುವೇ  
          ತನುವನು ತೀಡು ಅಪ್ಪುಗೆ ಗಂಧ ಲೇಪಿಸುವೇ ಆಲಂಗಿಸುವೆ ಬಾಳಿನ ಭಾಗವಾಗಿರುವೆ 
ಗಂಡು : ಅಂದ ಚೆಂದ ಒಲ್ಲನೇ ಶಾಮನು 
ಇಬ್ಬರು : ಹೆಜ್ಜೆಯ ಮೇಲೆ ಹೆಜ್ಜೆಯ ಹಾಕಿ ಒಳ ಬಂದ ಮುಕುಂದ ಎಲ್ಲರ ಎದೆಯೊಳಗೆ 
             ಸಾವಿರ ಹೆಂಗಳ ಕಂಗಳು ನೀಡಲಿ ಶ್ರೀ ಹರಿಯ ಅರವಿಂದ ನನ್ನಲೇ ನೋಡಿದ ಸಾಕೆನದೇ 
ಗಂಡು : ಪ್ರೀತಿಗೆ ಭಕ್ತಿಗೆ ಸೊಲನೇ ಶಾಮನೆ 
ಇಬ್ಬರು : ಮುರುಳಿ ರವಳಿ ಎದೆಗೆ ಧುಮಿಕಿ ಅನುರಾಗದ ಅಮೃತ ಬಿಂದಿಗೆ ತುಂಬು ತುಂಬಿ 
             ತನುವ ಕಲಕಿ ಮನವೇ ತುಳುಕಿ... ತಾನನಾ ತಾನನಾ ತಾನನಾ  
             ಊಹೂಂ ಊಹೂಂ ಊಹೂಂ ಊಹೂಂ ಊಹೂಂ ಊಹೂಂ 
--------------------------------------------------------------------------------------
  
ನಾಗ ದೇವತೆ (೨೦೦೦) - ಓ ಮಲ್ಲೇ ಓ ದುಂಬಿ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಕವಿತಾಕೃಷ್ಣಮೂರ್ತಿ 

ಓ.. ಮಲ್ಲೆ ಓ ದುಂಬಿ ಈ ರಾತ್ರಿ ನಿಮ್ಮದು ಈ ರಾತ್ರಿ ಈ ಚೆಂದ ಇನ್ನೆಂದು ಬರದು 
ಓಓಓ ಪ್ರೇಮಲೋಕದ ಪ್ರಣಯ ದೀಪವಾಗಿ ನೀವು ಉರಿಬೇಕು ಉರಿದು ಬೆಳಗಬೇಕು 
ಬೆಳಗಿ ಬಾಳಬೇಕು ಬಾಳಿ ಬದುಕಬೇಕು ಓ.. ದುಂಬಿ ಈ ರಾತ್ರಿ ನಿಮ್ಮದು 
ಓ.. ದುಂಬಿ ಈ ರಾತ್ರಿ ನಿಮ್ಮದು ಈ ರಾತ್ರಿ ಈ ಚೆಂದ ಇನ್ನೆಂದು ಬರದು 

ನಾಡಿ ಮನು ಸೂರ್ಯನು ಜೋಳಿಗೇಲಿ ತುಂಬಿದ ಸಾವಿರಾರು ನಾಳೆಗಳ ಕೇಳಿ ಪಡೆದಿರಿ 
ಸಾವೇ ಇಲ್ಲದ ಪ್ರೀತಿಯ ತೋಳಲಿ ನಲಿಯಿರಿ ಓ.. ಮಲ್ಲೆ ಓ ದುಂಬಿ ಈ ರಾತ್ರಿ ನಿಮ್ಮದು 
ಓ.. ಮಲ್ಲೆ ಓ ದುಂಬಿ ಈ ರಾತ್ರಿ ನಿಮ್ಮದು 

ಒಂದು ಪಡೆದ ವೇಳೆ ಒಂದು ಕೊಡಲೇಬೇಕು ಕೊಟ್ಟು ಕೊಳ್ಳು ವೇಳೆ ಬಾಳು ಶೋಧನೆ 
ಯಾರ ಮುದ್ದಿಸಲೀ ಸಿಹಿಯೇ ಕಹಿಯೇ ತಿಳಿಯದು ಓ.. ಮಲ್ಲೆ ಓ ದುಂಬಿ ಈ ರಾತ್ರಿ ನಿಮ್ಮದು 
ಓ.. ಮಲ್ಲೆ ಓ ದುಂಬಿ ಈ ರಾತ್ರಿ ನಿಮ್ಮದು 
--------------------------------------------------------------------------------------
  
ನಾಗ ದೇವತೆ (೨೦೦೦) - ಊರ ಕಾಯೋ ಮುತೈದೆ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ, 

ಹೆಣ್ಣು : ಊರ ಕಾಯೋ ಮುತೈದೆ ಬಾರಮ್ಮಾ ಅಣ್ಣಮ್ಮಾ 
          ಮಳೆಯ ಕಾಯೋ ಮುತೈದೆ ಮಾರಮ್ಮಾ ಮಾರಮ್ಮಾ 
          ಬಾರಮ್ಮಾ ಮಾರಮ್ಮಾ ಕರೆದಾಗ ಮುತೈದೆ 
          ಹೋಗದೆನೆ ಇರಬಹುದೇ ಬಾರಮ್ಮಾ ಹೋಗೋಣ ಕುಂಕುಂಮವ ಕಾಯೋಣ 

ಕೋರಸ್ : ಬನ ಬನ ಬನ ಬನ ಬನಶಂಕರಿ ಬಾ.. ಅಂಬಾ ... ಅಮ್ಮಾ... ಅಮ್ಮಾ... 
                ಎಲ್ಲಮ್ಮಾ ಎಲ್ಲಮ್ಮಾ ಬಾರಮ್ಮಾ ಬಾರಮ್ಮಾ ಅಂಬಾ... 
ಹೆಣ್ಣು : ದಿನ ಬೆಳಗಾಗಿ ಪ್ರತಿ ಮುತೈದೆ ನಮ್ಮನು ತಾನು ನೆನಿತಾಳೆ 
          ಎದೆಯೊಳಗಾಗೋ ಪದಗಳನ್ನೆಲ್ಲ ನಮಗೆ ತಾನೇ ಹೇಳುತ್ತಾಳೆ 
          ನಾರಿಯ ಕುಲವಿರದೇ ಗುಡಿಗಳಿಗೆ ಬೆಳಕಿಲ್ಲ ಭಕ್ತರೇ ಇರದಿದ್ರೆ ದೈವಗಳ ಕುಲವಿಲ್ಲ  
          ಅರಿಶಿನ ಕುಂಕುಮ ಹೂವು ಬಳೆ ಅಕ್ಷತೆ ಉಡಿ ತುಂಬಿಕೊಳ್ಳೋಣ ತಾಳಿನ ಕಾಯೋಣ 
          ತಾಳಿ ಕಾಯೋ ಮುತೈದೆ ಎಲ್ಲಮಾ ಎಲ್ಲಮಾ ಬಾರಮ್ಮಾ ಎಲ್ಲಮ್ಮಾ 
          ಹೊಸಿಲು ಕಾಯೋ ಮುತೈದೆ ಲಕ್ಕಮ್ಮ ಲಕ್ಕಮ್ಮ ಬಾಮ್ಮಾ ಅತ್ತಿ ಲಕ್ಕಮ್ಮ 
          ತಾಳಿ ಕಾಯೋ ಮುತೈದೆ ಎಲ್ಲಮಾ ಎಲ್ಲಮಾ ಬಾರಮ್ಮಾ ಎಲ್ಲಮ್ಮಾ 
          ಹೊಸಿಲು ಕಾಯೋ ಮುತೈದೆ ಲಕ್ಕಮ್ಮ ಲಕ್ಕಮ್ಮ ಬಾಮ್ಮಾ ಅತ್ತಿ ಲಕ್ಕಮ್ಮ 

ಹೆಣ್ಣು : ವೃತಗಳ ಮೇಲೆ ವೃತಗಳ ಮಾಡಿ ಪತಿವೃತೆಯಾಗಿ ಬಾಳುತ್ತಾಳೆ 
          ಕಲ್ಲೋ ಮಣ್ಣೋ ಮರವೋ ಕಟ್ಟೋ ನಾವೇ ಎಂದು ಮುಗಿತಾಳೆ 
          ಅವಳ ಆ ನಂಬಿಕೆಯೇ ನಮ್ಮಗಳ ಉಸಿರಮ್ಮ 
          ಆ ನಂಬಿಕೆಯ ಉಳಿಸಿದರೆ ನಮಗೆ ತಾನೇ ಹೆಸರಮ್ಮ 
          ಕರೆದಾಗ ಮುತ್ತೈದೆ ಹೋಗದೇನೇ ಇರಬಹುದೇ 
          ಬಾರಮ್ಮಾ ಹೋಗೋಣ ಅರಿಶಿನ ಉಳಿಸೋಣ 
          ಊರ ಕಾಯೋ ಮುತೈದೆ ಬಾರಮ್ಮಾ ಅಣ್ಣಮ್ಮಾ 
          ಮಳೆಯ ಕಾಯೋ ಮುತೈದೆ ಮಾರಮ್ಮಾ ಮಾರಮ್ಮಾ 
          ಬಾರಮ್ಮಾ ಮಾರಮ್ಮಾ ಕರೆದಾಗ ಮುತೈದೆ 
          ಹೋಗದೆನೆ ಇರಬಹುದೇ ಬಾರಮ್ಮಾ ಹೋಗೋಣ ಕುಂಕುಂಮವ ಕಾಯೋಣ 
 
ಹೆಣ್ಣು : ಬಳೆಯ ಕಾಯೋ ಮುತೈದೆ ಮಾರಮ್ಮಾ ಮಾರಮ್ಮಾ 
          ತಾಳಿ ಕಾಯೋ ಮುತೈದೆ ಎಲ್ಲಮ್ಮಾ ಎಲ್ಲಮ್ಮಾ  
          ಹೊಸಿಲು ಕಾಯೋ ಮುತೈದೆ ಲಕ್ಕಮ್ಮಾ ಅಟ್ಟೆ ಲಕ್ಕಮ್ಮಾ 
          ಕುಲವ ಕಾಯೋ ಮುತೈದೆ ಚೌಡಮ್ಮಾ ಚೌಡಮ್ಮಾ       
          ಬಸಿರು ಕಾಯೋ ಮುತೈದೆ ಬೀರಮ್ಮಾ ಬೀರಮ್ಮಾ 
          ಬಾಳ ಕಾಯೋ ಮುತೈದೆ ಕಾಳಮ್ಮಾ ಕಾಳಮ್ಮಾ 
--------------------------------------------------------------------------------------
  
ನಾಗ ದೇವತೆ (೨೦೦೦) - ಜಗದಲ್ಲಿ ನೀ ಇದ್ದರೇ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಜಾನಕೀ 

ರಕ್ಕಸರೆದುರಿಗೆ ಕಗ್ಗಲ್ಲಾಗದ ಕಲ್ಲಾಗಿರು ಹೇ.. ತಾಯಿ 
ಹಗಲು ಇರುಳು ನಿನ್ನ ನೆನೆಯುವ ಭಕ್ತರ ಮಾನ ಕಾಯೋ ಮಾಹಾತಾಯೇ 
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಶಿಲೆಯಾಗಿ ಹೋದೆ ಜಗದಂಬಾ 
ಎದ್ದು ಬರದೇ ಏನಾಡದೇ ನೀನು ಜಗದಂಬಾ ಹೇಗಾದೆಯಮ್ಮಾ 
ಜಗದಲಿ ನೀನಿದ್ದರೆ ಬದುಕಿದ್ದರೆ ನನ್ನುಳಿಸು ಬಾ... ನನ್ನುಳಿಸು ಬಾ..  
ನನ್ನುಳಿಸು ಬಾ..  ನನ್ನುಳಿಸು ಬಾ..  

ಅಳುವನು ನುಂಗಿ ಬದುಕುವ ದೀನರ ಕಂಡರೇ ನಿನಗೆ ನಗುವೇಕೆ 
ಅಳುವಾ ಹೆಣ್ಣು ಅಳಿಸಬೇಕು ಅನ್ನೋ ಸಣ್ಣತನದ ಸ್ತ್ರೀ ಛಲವೇನೇ 
ಉಳಿಸುವ ಬಲವಿದ್ದರೆ ಉಳಿದಿದ್ದರೆ ನನ್ನುಳಿಸು ಬಾ... ನನ್ನುಳಿಸು ಬಾ... 
ನನ್ನುಳಿಸು ಬಾ... ನನ್ನುಳಿಸು ಬಾ... 

ಹಾಡ ಹಗಲಿನಲ್ಲಿ ಯಾಕೆ ಯಾಕೆ ಇಂಥ ಹಾಳು ನಿದ್ದೆಯಲಿ ಮುಳುಗಿರುವೇ 
ಮಾಟ ಮಂತ್ರ ಬೀಗೋ ಬಾಗ್ಲು ನಿನಗೆಟ್ಟಿನಾ ಎದ್ದು ಬಾ 
ನಾನು ಹೆಣ್ಣು ನೀನು ಹೆಣ್ಣು ಹೆಣ್ಣಿನ ಕ್ಪಷ್ಟ ತಿಳಿಬಾರದ 
ಆದರೆ ದೀನಳ ಕಾಪಾಡು ಇಲ್ಲ ಸೋಲೋಪ್ಪಿಕೋ ಇಳಿದು ಬಾ 
ಏನು ಏನು ಮಹಾ ಕೇಳಿಬಿಟ್ಟೇ ಅಂತ ಮಾತನಾಡದೆ ಮೂಕಾದೆ 
ತಾಳಿ ಭಾಗ್ಯ ಕೇಳೋ ಹೆಣ್ಣಿನಾಸೆ ತಪ್ಪೇನೆ 
ಹೇ... ಮುತೈದೆ ಬಾಗಿನ ಪಡೆದಿದ್ದರೇ ನೆನಪಿದ್ದರೇ ನನ್ನುಳಿಸು ಬಾ...  
ನನ್ನುಳಿಸು ಬಾ...  ನನ್ನುಳಿಸು ಬಾ...  ನನ್ನುಳಿಸು ಬಾ...  

ಹೇ... ತಾಯಂದಿರೇ ಎಳಕ್ಕಂದಿರೇ ಜಗದಲಿ ನೀವು ಪ್ರಬಲೆಯರು 
ಪ್ರಬಲರೇ ಇಂದು ಅಬಲೆಯಾದರೆ ಅಳಲೇ ನಗಲೇ ಹೇಳಿ 
ನಿಜವೇ ಇಲ್ಲಿ ಸಾಯುತ್ತಲಿದ್ದರೂ ನಿಜ ನಾ ನಿಮ್ಮನು ಕೂಗೋದು 
ಈ ನಿಜವು ಇಂದು ಸುಳ್ಳಾದರೇ ನಿಜವಮ್ಮ ನಾ  ಸಾಯೋದು 
ಏಳು ಅಕ್ಕ ತಂಗಿಯರೆಂದು ಕುಂಕುಮ ಪಡೆದುದು ಮರತ ಹೋಯ್ತಾ 
ರಾಜ ಮಂತ್ರಿ ಸಿರಿ ಸೇವೆಯಲ್ಲಿ ಬಡವಳ ತುಳಿಸಿ ಕಹಿಯಾಯ್ತಾ 
ಭಕ್ತರ ಮನೆ ಬೀದಿಯ ಗುರುತಿದ್ದರೇ ದಯಮಾಡಿಸಿ 
ನೀವೇನೆಂದು ನಿರೂಪಿಸಿ... ನಿರೂಪಿಸಿ  
ಕಾಳಿ ಮಾರಿ ಬೀರಿ ದುರ್ಗೆ ಚಂಡಿ ಚೌಡಿ ಚಾಮುಂಡಿ 
ಬನ್ನಿ ತನ್ನಿರಿ ಅಸ್ತ್ರ ಶಸ್ತ್ರ ನನ್ನ ತೊಳಲಿ ಈ ಪಾಖಂಡಿ 
ಬನ್ನಿರಿ ಅಮ್ಮಂದಿರೇ ತಾಯಂದಿರೇ 
ಕಲಿಯುಗವೆಲ್ಲ ಪಾಪಗಳಲ್ಲಿ ಮುಳುಗಿರುವುದರ ಅರಿವಿದೆಯೇ 
ಅರಿವಿದ್ದರೆ ಘನ ಮೌನವಿದೇಕೆ  ಸತ್ಯದ ನಾಶ ಆಗಬೇಕೇ 
ಬನ್ನಿರಿ ಅಮ್ಮಂದಿರೇ ತಾಯಂದಿರೇ... ಬನ್ನಿರಿ ಅಮ್ಮಂದಿರೇ ತಾಯಂದಿರೇ 
ಓಂಕಾಳಿ ಶ್ರೀಕಾಳಿ ಮಾಂಕಾಳಿ ಮಹಾಕಾಳಿ ಯಮಕಾಳಿ ಭೀಮಕಾಳಿ ಜಗದಂಬಿಕೆ   
ಓಂಕಾಳಿ ಶ್ರೀಕಾಳಿ ಮಾಂಕಾಳಿ ಮಹಾಕಾಳಿ ಯಮಕಾಳಿ ಭೀಮಕಾಳಿ ಜಗದಂಬಿಕೆ   
ಅರಿಕಾಳಿ ವರಕಾಳಿ ಸಿರಿಕಾಳಿ ಗುರುಕಾಳಿ ಮುಕ್ಕಣ್ಣನುರಿಗಣ್ಣು ಜ್ವಾಲಾಂಬಿಕೆ 
ಅರಿಕಾಳಿ ವರಕಾಳಿ ಸಿರಿಕಾಳಿ ಗುರುಕಾಳಿ ಮುಕ್ಕಣ್ಣನುರಿಗಣ್ಣು ಜ್ವಾಲಾಂಬಿಕೆ 
ಗಣ ದೂತಗಣ ಭೂತ ಗಣ ಪ್ರೇತಗಣ ನಾಯ್ಕ ಗುಣ ಗುಣಿಸಿ ದಿನ ನಮಿಸೋ ಮೂಕಾಂಬಿಕೆ 
ಗಣ ದೂತಗಣ ಭೂತ ಗಣ ಪ್ರೇತಗಣ ನಾಯ್ಕ ಗುಣ ಗುಣಿಸಿ ದಿನ ನಮಿಸೋ ಮೂಕಾಂಬಿಕೆ 
ಓಂಕಾಳಿ ಶ್ರೀಕಾಳಿ ಮಾಂಕಾಳಿ ಮಹಾಕಾಳಿ ಮಾಕಾಳಿ ಘ್ರಿಂಕಾಳಿ ಜಗದಂಬಿಕೆ... ಜಗದಂಬಿಕೆ  
ಜಗದಂಬಿಕೆ... ಜಗದಂಬಿಕೆ... ಜಗದಂಬಿಕೆ...        
------------------------------------------------------------------------------------
  
ನಾಗ ದೇವತೆ (೨೦೦೦) - ನಾಗ ನಾಗಿ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಹರಿಹರನ್, ಲತಾ ಹಂಸಲೇಖ 

ಹೆಣ್ಣು : ಓ..ಪ್ರಿಯ... ಓ..ಪ್ರಿಯ... ಓ..ಪ್ರಿಯ... 
ಗಂಡು : ಓ..ಪ್ರಿಯೇ... ಓ..ಪ್ರಿಯೇ...ಓ..ಪ್ರಿಯೇ...ಓ..ಪ್ರಿಯೇ...   
ಹೆಣ್ಣು : ಓ..ಪ್ರಿಯ... ಓ..ಪ್ರಿಯ... ಓ..ಪ್ರಿಯ... 
ಗಂಡು : ಓ..ಪ್ರಿಯೇ... ಓ..ಪ್ರಿಯೇ...ಓ..ಪ್ರಿಯೇ...ಓ..ಪ್ರಿಯೇ...   
ಹೆಣ್ಣು : ನಾಗ ನಾಗಿ                    ಗಂಡು : ರಾಜ ರಾಣಿ ಆಗಿ 
ಹೆಣ್ಣು : ಹಾಡೋ ವೇಳೆ               ಗಂಡು : ಪ್ರಣಯ ರಾತ್ರಿಯಾಗಿ 
ಹೆಣ್ಣು : ಓಹೋ .. ನೋಡೋ ಭೂಮಿ ಹುಣ್ಣಿಮೆ 
ಗಂಡು : ತಾನು ಕಾಣದಾ ನಾಡಲೇ ಕಂಡಿದೆ 
ಹೆಣ್ಣು : ನಾಗ ನಾಗಿ                    ಗಂಡು : ರಾಜ ರಾಣಿ ಆಗಿ 
ಹೆಣ್ಣು : ಹಾಡೋ ವೇಳೆ               ಗಂಡು : ಪ್ರಣಯ ರಾತ್ರಿಯಾಗಿ 

ಹೆಣ್ಣು : ಮಾಗಿ ಮಲ್ಲಿಗೆ                               ಗಂಡು : ಸುರಭಿ ಸಂಪಿಗೆ 
ಹೆಣ್ಣು : ತಾಳೆಯ ಘಮ ಘಮ                      ಗಂಡು : ತಂಗಾಳಿಯ ಸರಿಗಮ 
ಹೆಣ್ಣು : ಈ ಪ್ರಣಯಿಗಳ ಆಲಿಂಗನಾ             ಗಂಡು : ಈ ಪ್ರೇಮಿಗಳ ಎದೆ ಮಾತುಗಳಾ 
ಹೆಣ್ಣು : ಕದ್ದು ಕದ್ದು ಕೇಳಿ ಕದ್ದು ಮುಚ್ಚಿ ನೋಡಿ ಆನಂದ ಅಶ್ರುಗರೆದರೋ ... 
          ಓ... ಪ್ರೀಯ... ಓ... ಪ್ರೀಯ...  ಓ... ಪ್ರೀಯ...  ಓ... ಪ್ರೀಯ...  
          ನಾಗ ನಾಗಿ                    ಗಂಡು : ರಾಜ ರಾಣಿ ಆಗಿ 
ಹೆಣ್ಣು : ಹಾಡೋ ವೇಳೆ               ಗಂಡು : ಪ್ರಣಯ ರಾತ್ರಿಯಾಗಿ 

ಗಂಡು : ಅಮೃತ ಬಿಂದುವೇ                ಹೆಣ್ಣು : ಒಲವಿನ ಸಿಂಧುವೇ 
ಗಂಡು : ಭಾವದ ಬಂಧುವೇ                ಹೆಣ್ಣು : ಜನುಮದ ಬಂಧುವೇ 
ಗಂಡು : ಈ ಸಂಗಮಕೆ ವಿರಹ ಇಲ್ಲ      ಹೆಣ್ಣು : ಈ ಸುಖಕೆ ಕೊನೆಯೇ ಇಲ್ಲ 
ಗಂಡು : ಆಡು ಆಡು ಆಡು ನಾಗ ಲಾಸ್ಯವಾಡು ಬ್ರಹ್ಮಾಂಡ ಮೆಚ್ಚಿ ನೋಡಲೀ 
            ಓ..ಪ್ರಿಯೇ... ಓ..ಪ್ರಿಯೇ... ಓ..ಪ್ರಿಯೇ... 
ಹೆಣ್ಣು : ನಾಗ ನಾಗಿ                    ಗಂಡು : ರಾಜ ರಾಣಿ ಆಗಿ 
ಹೆಣ್ಣು : ಹಾಡೋ ವೇಳೆ               ಗಂಡು : ಪ್ರಣಯ ರಾತ್ರಿಯಾಗಿ 
ಹೆಣ್ಣು : ಓಹೋ .. ನೋಡೋ ಭೂಮಿ ಹುಣ್ಣಿಮೆ 
ಗಂಡು : ತಾನು ಕಾಣದಾ ನಾಡಲೇ ಕಂಡಿದೆ 
ಹೆಣ್ಣು : ನಾಗ ನಾಗಿ                    ಗಂಡು : ರಾಜ ರಾಣಿ ಆಗಿ 
ಹೆಣ್ಣು : ಹಾಡೋ ವೇಳೆ               ಗಂಡು : ಪ್ರಣಯ ರಾತ್ರಿಯಾಗಿ 
-------------------------------------------------------------------------------------

No comments:

Post a Comment