ಚನ್ನಪ್ಪ ಚನ್ನೇಗೌಡ ಚಲನಚಿತ್ರದ ಹಾಡುಗಳು
- ಈ ಚನ್ನಪ್ಪ ಚನ್ನೇಗೌಡ
- ಬೆಂಗಳೂರು ಪೇಟೆ
- ಗೋವಿಂದಾನಂದ
- ಜಾಲೇ ಜಾಲೇ
- ಮಾವ ಮಾವ
ಚನ್ನಪ್ಪ ಚನ್ನೇಗೌಡ (೧೯೯೯) - ಈ ಚನ್ನಪ್ಪ ಚನ್ನೇಗೌಡ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ
ಗಂಡು : ಈ ಚನ್ನಪ್ಪಗೌಡ ಬಂದಾನಯ್ಯ ಬಂದನಯ್ಯಾ ಬೆಳ್ಳಿ ಬೆಳಕು ತಂದಾನಯ್ಯಾ
ಬೆಳಕು ಅಂದ್ರ ಸತ್ಯಾನಯ್ಯಾ ಥಳಕು ಬೆಳಕು ಎಲ್ಲಾ... ಥಳಕು ಬೆಳಕು ಎಲ್ಲಾ...
ಬೆಳಕು ಅಂದ್ರ ಸತ್ಯಾನಯ್ಯಾ ಥಳಕು ಬೆಳಕು ಎಲ್ಲಾ... ಥಳಕು ಬೆಳಕು ಎಲ್ಲಾ...
ಮಜ್ಜಿಗೆ ಪುರದ ಸಜ್ಜಿಗೆ ಸರದ ಚನ್ನಪ್ಪನ ಗೌಡ ದಯಮಾಡು ಚನ್ನಪ್ಪನೇ ಗೌಡ ದಯಮಾಡು
ಮಜ್ಜಿಗೆ ಪುರದ ಸಜ್ಜಿಗೆ ಸರದ ಚನ್ನಪ್ಪನ ಗೌಡ ದಯಮಾಡು ಚನ್ನಪ್ಪನೇ ಗೌಡ ದಯಮಾಡು
ಕೋರಸ್ : ಬಂಗಾರ ಬಳೆದ ಕುಬೇರ ಕುಲದ ಚನ್ನಪ್ಪ ಚನ್ನೇಗೌಡ ದಯಮಾಡು
ಗಂಡು : ಶ್ರೀರಾಮಚಂದಿರ ಕೋರಸ್ : ದಾನಶೂರ ಕರ್ಣ
ಗಂಡು : ಸತ್ಯ ಹರಿಶ್ಚಂದಿರ ಕೋರಸ್ : ಕೃಷ್ಣವಾತಾರ
ಗಂಡು : ಸುಂದರ ಸುಂದರ ಪುರುಷ ಕೋರಸ್ : ಸುಂದರ ಸುಂದರ ಪುರುಷ
ಗಂಡು : ಈ ಲೋಕಾನೇ ಬರಿ ಡ್ರಾಮ್ ಶಿವ ಭೂಲೋಕಾನೇ ಇದರ ಸ್ಟೇಜು ಶಿವ
ಸತ್ಯ ಅಂತ ನಂಬಂಗಿಲ್ಲ ಸುಳ್ಳು ಅಂತ ತಳ್ಳಂಗಿಲ್ಲ ಹೇಯ್ ಥಳಕು ಬೆಳಕು ಎಲ್ಲಾ
ಥಳಕು ಬೆಳಕು ಎಲ್ಲಾ
ಈ ಲೋಕಾನೇ ಬರಿ ಡ್ರಾಮ್ ಶಿವ ಭೂಲೋಕಾನೇ ಇದರ ಸ್ಟೇಜು ಶಿವ
ಸತ್ಯ ಅಂತ ನಂಬಂಗಿಲ್ಲ ಸುಳ್ಳು ಅಂತ ತಳ್ಳಂಗಿಲ್ಲ ಹೇಯ್ ಥಳಕು ಬೆಳಕು ಎಲ್ಲಾ
ಥಳಕು ಬೆಳಕು ಎಲ್ಲಾ
ಗಂಡು : ಪೇಟ ಇದ್ರೇ ತಲೆಗೆ ಮೈಸೂರ ರಾಜ್ ಕುದುರೆ ಇದ್ರೇ ಜೊತೆಗೆ ಬ್ಯಾಂಡು ಬಾಜಾ
ಭೂಮಿ ಇದ್ರೇ ಒಡೆಯ ಇಲ್ದೇ ಇದ್ರೇ ಮಡೆಯ ಕುರ್ಚಿ ಇದ್ರೆ ಪಟೇಲ ಇಲ್ದೇ ಇದ್ರೇ ಹಮಾಲ
ಓ.. ಕೂಗೋ ಕೋಳಿಗೆ ಮೂರೂ ಕಾಲು ಎರಡು ಕೊಂಬು
ಒಂದೇ ರೆಕ್ಕೆ ಅಂದರೆ ಹೂಂ ಅಂತೀಯಾ ಹೂಂ ಹೂಂ ಅಂತೀಯಾ
ಕೋರಸ್ : ನಿನ್ನ ಮಾತು ದಿಟ ನಿನ್ನ ಉಗುಳು ದಿಟ ಚನ್ನಪ್ಪಚನ್ನೇಗೌಡ ದಯಮಾಡು
ನಿನ್ನ ಮಾತು ದಿಟ ನಿನ್ನ ಉಗುಳು ದಿಟ ಚನ್ನಪ್ಪಚನ್ನೇಗೌಡ ದಯಮಾಡು
ಗಂಡು : ಹೋಯ್ ಕೋಳಿಗಿರೋದು ಎರಡು ಕಾಲು ಮೂರೂ ಕಾಲು ಅಂದ್ರೆ ಹೂಂ ಅಂತಿರಲ್ಲೋ
ಕೋರಸ್ : ನೀವು ಇನ್ನೂ ಸ್ವಲ್ಪ ಕಾಸ್ ಕೊಟ್ರೇ ಕಾಲೇ ಇಲ್ಲಾ ಅಂದ್ರು ಹೂಂ ಅಂತೀವಣ್ಣ
ಗಂಡು : ಹೌದಾ
ಕೋರಸ್ : ಕಾಸಿದ್ರೇ ವಿಷ್ಣು ಕಾಸಿದ್ರೇ ಬ್ರಹ್ಮ ಕಾಸು ಕೊಟ್ಟೋನೇ ಜಗದೀಶ
ಚನ್ನಪ್ಪ ಚನ್ನೇಗೌಡ ಪರಮೇಶ ಕಾಸಿದ್ರೆ ಅಮ್ಮ ಕಾಸಿದ್ರೆ ಬಂಧು ಕಾಸಿದ್ರೆ ಬಳಗ
ಕಾಸಿನೊಡೆಯ ಬಾರೋ ಕಾಸಿಗೆ ಕಾಸು ತಾರೋ
ಚನ್ನಪ್ಪ ಚನ್ನೇಗೌಡ ಪರಮೇಶ ಕಾಸಿದ್ರೆ ಅಮ್ಮ ಕಾಸಿದ್ರೆ ಬಂಧು ಕಾಸಿದ್ರೆ ಬಳಗ
ಕಾಸಿನೊಡೆಯ ಬಾರೋ ಕಾಸಿಗೆ ಕಾಸು ತಾರೋ
ಗಂಡು : ಈ ಲೋಕಾನೇ ಬರಿ ಕಾಸು ಭೂಕೈಲಾಸ ಕಾಸಿದ್ರೆ ಶಿವ
ತಿರುಪತಿಯ ಆ ವೆಂಕಟೇಶ ಕಾಸಿನ ಮುಂದೆ ದಾಸಾನುದಾಸ
ಹೋಯ್ ಥಳುಕು ಬಳುಕು ಎಲ್ಲಾ ಥಳುಕು ಬಳುಕು ಎಲ್ಲಾ
ಈ ಲೋಕಾನೇ ಬರಿ ಡ್ರಾಮ್ ಶಿವ ಭೂಲೋಕಾನೇ ಇದರ ಸ್ಟೇಜು ಶಿವ
ಸತ್ಯ ಅಂತ ನಂಬಂಗಿಲ್ಲ ಸುಳ್ಳು ಅಂತ ತಳ್ಳಂಗಿಲ್ಲ ಹೇಯ್ ಥಳಕು ಬೆಳಕು ಎಲ್ಲಾ
ಥಳಕು ಬೆಳಕು ಎಲ್ಲಾ
ಕೋರಸ್ : ಥೂ ಥೂ ಯಾರಗೋ ಇದು ಸಾವಾಯ್ತೋ ನಿಮ್ಮಪ್ಪನ ಹೆಣಕಣಪ್ಪ
ಮತ್ ನನ್ ಮುಂದೆ ಯಾಕ್ ಹೊಡಿತೀಯ
ಬದುಕಿರೋನ್ಗೆ ಬ್ಯಾಂಡ್ ಸೆಟ್ಟು ಅವರೆಲ್ಲೋ ಕೂಡುದು
ಮಲಗೋರಪ್ಪ ಹೊಡೆದು ಎಬ್ಸು
ಗಂಡು : ಹುಟ್ಟು ಸಾವು ಹುಟ್ಟು ಸಾವು ಹುಟ್ಟು ಸಾವು ಹುಟ್ಟುವಾಗ ಎಲ್ಲಾ ನಗ್ತಾರಿಲ್ಲಿ
ಸಾಯೋವಾಗ ಎಲ್ಲಾ ಆಳ್ತಾರಿಲ್ಲಿ
ನಾನು ಸ್ವಲ್ಪ್ ಉಲ್ಟಾ ಉಲ್ಟಾದಲ್ಲೂ ಪಲ್ಟಾ ಉಲ್ಟಾ ಪಲ್ಟಾ
ಆದ್ರೂ ಸತ್ಯ ಹೇಳ್ತಿನಿ ದ್ಯಾವ್ರು ಈ ಚನ್ನಪ್ಪಗೌಡ ಹುಟ್ಟ ನೋಡಿ ಅಳ್ತಾನಯ್ಯ
ಸಾವು ನೋಡಿ ನಗ್ತಾನಯ್ಯ ಕಾಸ್ ಕೊಡ್ತಾನೆ ಬೈಸ್ಕೊತಾನೇ
ಕೋರಸ್ : ನಿನ್ನ ಮನೆ ಕಾಯ್ ನೀನು ಜಲ್ದಿ ಸಾಯಾ ನಿನ್ನ ಹೊಟ್ಟೆಗೆ ಬೇಗ ಬೆಂಕಿ ಬೀಳ
ನಿನ್ನಿಂದ ಊರಿಗೆ ಕೆಟ್ಟ ಕಾಲ ಹಾಳಾಗಿ ಹೋಗು ಎಗ್ಗುಟ್ಟಿ ಹೋಗು
ಜಾನವಾರ ಹಣೆ ಸುಟ್ಟು ಬೂದಿ ಆಗು ಅಸುರ ಅಸುರ ನೀ ಬಿಡು ಬೇಗ ಉಸಿರ
ಗಂಡು : ಈ ಲೋಕಾನೇ ಬರಿ ಬೂಸಿ ಶಿವ ಭೂಲೋಕಾನೇ ಬರಿ ಘಾಸಿ ಶಿವ
ಬೂಸಿ ಅಂತಾ ಹೇಳಂಗಿಲ್ಲ ಘಾಸಿ ಅಂತ ಮಲಗಂಗಿಲ್ಲ
ಕೋರಸ್ : ಥಳುಕು ಬಳುಕು ಎಲ್ಲಾ ಥಳಕು ಬಳುಕು ಎಲ್ಲಾ
ಈ ಲೋಕಾನೇ ಬರಿ ಡ್ರಾಮ್ ಶಿವ ಭೂಲೋಕಾನೇ ಇದರ ಸ್ಟೇಜು ಶಿವ
ಸತ್ಯ ಅಂತ ನಂಬಂಗಿಲ್ಲ ಸುಳ್ಳು ಅಂತ ತಳ್ಳಂಗಿಲ್ಲ ಹೇಯ್ ಥಳಕು ಬೆಳಕು ಎಲ್ಲಾ
ಥಳಕು ಬೆಳಕು ಎಲ್ಲಾ
----------------------------------------------------------------
ಚನ್ನಪ್ಪ ಚನ್ನೇಗೌಡ (೧೯೯೯) - ಬೆಂಗಳೂರು ಪೇಟೆ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ
ಓಓಓ ಓಓಓಓ ಹೋಯ್ ಓಓಓ ಓಓಓಓ ಹೋಯ್
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ ಪಬಾಬಾಬಾಪಾ
ಬೆಂಗಳೂರು ಪೇಟೆಗ್ ಹೋಯ್ತಿನ್ ಗವರ್ನಮೆಂಟ್ ಚಾಕ್ರಿ ಹಿಡಿತೀನ್
ಸಾವಿರದ್ ಸಂಬಳ ತರ್ತಿನ ಬಣ್ಣದ ಕಾರೇರ್ ಬರ್ರ್ತಿನ್
ಕಣವಿಟ್ಟು ಚಿನ್ನವಿಟ್ಟು ಬೆಳದಿಂಗಳನ್ನ್ ಮದುವೆ ಆಗ್ತಿನ್
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
ರಜದಲ್ ಮೈಸೂರಗ್ ಹೋಗ್ತಿನ್ ಸಣ್ ಪುಟ್ ಬಿಜಿನೆಸ್ ಮಾಡ್ತೀನ್
ರಾತ್ರೀ ಹಗಲು ದುಡಿತೀನ್ ನೋಟಿನ ಮೂಟೆ ತರುತೀನ್
ದೊಡ್ ಹಟ್ಟಿ ಮನೆ ಕಟ್ಟಿ ಬೆಳದಿಂಗ್ಳನ್ ಮದರಾಸ್ ಸಾಕ್ತೀನ್
ಹಂಗಾದ್ರೆ ನಾನು ನೀನ್ ಪಾಲು ಹಂಗಾಗದಿದ್ರೆ ಕೆರೆಪಾಲು
ಬೆಳ್ಳಂ ಬೆಳ್ಳಿಗೆ ಸ್ವಪ್ನದೊಳಗೆ ನಾನು ಆಫಿಸರ್ ಆಗಿದ್ದೆ
ಹೆಣ್ಣೇ... ನೀನು ಮುಚ್ಚಳ ಕೊಡ್ತಿದ್ದೆ ಹೆಣ್ಣೇ... ಸಾರು ಓ ಸಾರು ಕಲ್ಯಾಣವು ಕನಸಲ್ಲ
ಕನಸು ನನಸಾಗದಿದ್ರೇ ನನ್ನ ಮುತ್ತು ತಮಗಿಲ್ಲ
ವಿಧಾನಸೌಧಾಕ್ ಹೋಯ್ತಿನ್ ಕಂಬದ ಕೈಕಾಲ ಹಿಡಿತೀನ್
ಸತ್ಯಾಗ್ರಹನಾರ ಮಾಡ್ತೀನ್ ಕೆಲ್ಸ್ ಹಿಡಿದೇ ಹಿಡಿತೀನ್
ಸರಕಾರೀ ಅಧಿಕಾರಿ ಆಗಿ ನೀನ್ ಕೈಲ್ ಮುತ್ತುಗಳ ಪಡೀತೀನಿ
ಹಂಗಾದ್ರೆ ನಾನು ನಿನ್ನ ಪಾಲು ಹಂಗಾಗದಿದ್ರೆ ಕೆರೆ ಪಾಲು
ಚಂದಿರ ಮುಖಿ ಪಿರಾಣ ಸಖಿ ಕಡೆತನಕ ಕಾಯುತೀನಿ
ಓಡಿ ಹೋಗುವಾದ್ರು ಬರುತೀಯ ಕನ್ಯೆ ನಾನ್ ಕನ್ಯೆ ನಮ್ಮಪ್ಪನ ಸ್ವಾಧೀನ
ಕನ್ಯಾದಾನ ಆದ್ರೇ ನಾನು ಗಂಡನ ಸ್ವಾಧೀನ
ಬೆಂಗಳೂರು ಪೇಟೆಗ್ ಹೋಯ್ತಿನ್ ಗವರ್ನಮೆಂಟ್ ಚಾಕ್ರಿ ಹಿಡಿತೀನ್
ಸಾವಿರದ್ ಸಂಬಳ ತರ್ತಿನ ಬಣ್ಣದ ಕಾರೇರ್ ಬರ್ರ್ತಿನ್
ಕಣವಿಟ್ಟು ಚಿನ್ನವಿಟ್ಟು ಬೆಳದಿಂಗಳನ್ನ್ ಮದುವೆ ಆಗ್ತಿನ್
ಹಂಗಾದ್ರೆ ನಾನು ನಿನ್ ಪಾಲು ಹಂಗಾಗದಿದ್ರೆ ಕೆರೆಪಾಲು
---------------------------------------------------------------
ಚನ್ನಪ್ಪ ಚನ್ನೇಗೌಡ (೧೯೯೯) - ಗೋವಿಂದಾನಂದ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಸುರೇಶ ಪೀಟರ್, ನಂದಿತಾ
ಕೋರಸ್ : ಗೋವಿಂದನಾದ ಚನ್ನಪ್ಪ ಚನ್ನಪ್ಪ ಈಗ ಗೋವಿಂದ
ಪದ್ಮವಾತಿ ನೀನೇ ಗತಿ ಎಂದ ನಮ್ಮ ಗೋವಿಂದ... ಗೋವಿಂದ
ಗಂಡು : ಹುಡುಗಿಗಾಗಿ ನಾನಾವೇಷನಾನಾ ಮೋಸ ಶ್ರೀನಿವಾಸ
ಪ್ರೀತಿಗಾಗಿ ಹಾಕು ವೇಷಕೆ ದೋಷ ಇಲ್ಲ ಶ್ರೀನಿವಾಸ
ಅಪ್ಪಿಟ್ಟ ಹೆಸರು ಗೋವಿಂದ ಅಮ್ಮಿಟ್ಟ ಹೆಸರು ಗೋವಿಂದ
ಹುಡುಗಿಗಾಗಿ ನಾನಾವೇಷನಾನಾ ಮೋಸ ಶ್ರೀನಿವಾಸ
ಪ್ರೀತಿಗಾಗಿ ಹಾಕು ವೇಷಕೆ ದೋಷ ಇಲ್ಲ ಶ್ರೀನಿವಾಸ
ಗಂಡು : ಬ್ಯೂಟಿನೇ ದೊಡ್ಡದು ಎನ್ನುವುದೊಂದು ಫ್ಯಾಷನ್
ಲವ್ ಎಂಬುದೊಂದು ಉದ್ದ ಆಳ ತಿಳಿಯದ ಓಷನ್
ಓಷನ್ನು ನಿಂಗೆ ಬೇಕಾ ಫ್ಯಾಷನ್ನು ನಿಂಗೆ ಸಾಕಾ
ಶ್ರೀನಿವಾಸ ಕಷ್ಟಮ್ಮ ಚಕೋರಿ ಅಂಗ ದೋಷ ಇಲ್ಲಮ್ಮ
ಚಕೋರಿ.. ಚಕೋರಿ.. ಚಕೋರಿ..
ಗೋವಿಂದ ಪ್ರೀತಿ ಗಣಿಯಮ್ಮ ನಿನಗೆಷ್ಟು ಬೇಕು ಅಗಿಯಮ್ಮ
ಮುಖದಲ್ಲಿ ಏನೂ ಇಲ್ಲಮ್ಮ ಎದೆ ಸಿಗಿದು ನೋಡೇ ಪದುಮಮ್ಮ
ಗೌರಿಗೆ ಶಿವನ ಅರ್ಧ ದೇಹ ನಿನಗೆ ನನ್ನಾ ಪೂರ್ತಿ ದೇಹ
ಹುಡುಗಿಗಾಗಿ ನಾನಾವೇಷ ನಾನಾ ಮೋಸ ಶ್ರೀನಿವಾಸ
ಪ್ರೀತಿಯಲ್ಲಿ ಆಗೋ ಮೋಸಕೆ ಶಿಕ್ಷೆ ಇಲ್ಲ ಶ್ರೀನಿವಾಸ
ಅಪ್ಪಿಟ್ಟ ಹೆಸರು ಗೋವಿಂದ ಅಮ್ಮಿಟ್ಟ ಹೆಸರು ಗೋವಿಂದ
ಹುಡುಗಿಗಾಗಿ ನಾನಾವೇಷನಾನಾ ಮೋಸ ಶ್ರೀನಿವಾಸ
ಪ್ರೀತಿಗಾಗಿ ಹಾಕು ವೇಷಕೆ ದೋಷ ಇಲ್ಲ ಶ್ರೀನಿವಾಸ
ಹೆಣ್ಣು : ಬಾರೋ ಬಾರೋ ಬಾರೋ ಬಾ ಚಕೋರ
ಹೇಳಿ ಕೋಡು ಬಾರೋ ಪ್ರೀತಿಯ ವಿಚಾರ ಹಮ್ಮಿರ ಸರದಾರ
ನನಗೀಗ ನೀನೇ ನವತಾರೆ ಎದೆ ಬಾನು ಬೆಳಗೋ ಧೃವತಾರೆ
ಆರವತ್ತ ನಾಲ್ಕು ಕಲೆಗಾರನ್ ಕಲೆಯಲ್ಲಿ ಗೆಲ್ಲೋ ಎದೆಗಾರ
ಅಂದ ಒಂದು ಸೋರವರ ಹೃದಯ ಅಳಿಯದ ಆಸೆಯ ಸಾಗರ
ಹುಡುಗಿಗಾಗಿ ನಾನಾವೇಷ ನಾನಾ ಮೋಸ ಶ್ರೀನಿವಾಸ
ಪ್ರೀತಿಯಲ್ಲಿ ಆಗೋ ಮೋಸಕೆ ಶಿಕ್ಷೆ ಇಲ್ಲ ಶ್ರೀನಿವಾಸ
ಅಪ್ಪಿಟ್ಟ ಹೆಸರು ಗೋವಿಂದ ಅಮ್ಮಿಟ್ಟ ಹೆಸರು ಗೋವಿಂದ
ಹುಡುಗಿಗಾಗಿ ನಾನಾವೇಷನಾನಾ ಮೋಸ ಶ್ರೀನಿವಾಸ
ಪ್ರೀತಿಗಾಗಿ ಹಾಕು ವೇಷಕೆ ದೋಷ ಇಲ್ಲ ಶ್ರೀನಿವಾಸ
----------------------------------------------------------------
ಚನ್ನಪ್ಪ ಚನ್ನೇಗೌಡ (೧೯೯೯) - ಝಲೇ ಝಲೇ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಮೇಶಚಂದ್ರ, ಚಿತ್ರಾ
ಗಂಡು : ದಿಗಿದಿತ್ ತಾ ದಿಗಿದಿತ್ ತಾ ದಿಗಿದಿತ್ ದಿಗಿದಿತ್ ತಾ ಝಲೇ ಝಲೇ ಝಲೇ ಝಲೇ ....
ಝಲೇ ಝಲೇ ಝಲೇ ಝಲೇ ....
ಸಿಹಿಗೇ ಡೊಂಕಿಲ್ಲ ಹೆಣ್ಣು : ರತಿಗೆ ಕೊಂಕಿಲ್ಲ
ಗಂಡು : ಪ್ರಣಯದ ಹೆಣ್ಣು : ಪ್ರೇಮದಾ ಮಧುರ ಪಾನವಿದು
ಇಬ್ಬರು : ಸುರ ಪಾನವಿದು... ಸುರ ಪಾನವಿದು...
ಗಂಡು : ಝಲೇ ಝಲೇ ಝಲೇ ಝಲೇ .... ಸಿಹಿಗೇ ಡೊಂಕಿಲ್ಲ
ಹೆಣ್ಣು : ರತಿಗೆ ಕೊಂಕಿಲ್ಲ ಗಂಡು : ಪ್ರಣಯದ
ಹೆಣ್ಣು : ಪ್ರೇಮದಾ ಮಧುರ ಪಾನವಿದು
ಇಬ್ಬರು : ಸುರ ಪಾನವಿದು... ಸುರ ಪಾನವಿದು...
ಗಂಡು : ಪಚ್ಚೆ ಪೈರು ತೂಗಿ ತೂಗಿ ಅಂಕು ಡೊಂಕು ಮಾಡಬಲ್ಲ
ಗಾಳಿಗೆ ಡೊಂಕಿಲ್ಲ ತಂಗಾಳಿಗೆ ಡೊಂಕಿಲ್ಲ
ಹೆಣ್ಣು : ಅಂಕು ಡೊಂಕು ಕಾಣುವ ದೇಹದೊಳಗೆ ಬಾಳುವ
ರುಚಿಯಾದ ಈ ಪ್ರೀತಿಗೂ ಅಂಕಿಲ್ಲ ಕೊಂಕಿಲ್ಲ ಡೊಂಕಿಲ್ಲ ಬಿಂಕವಿಲ್ಲ
ಗಂಡು : ಝಲೇ ಝಲೇ ಝಲೇ ಝಲೇ .... ಸಿಹಿಗೇ ಡೊಂಕಿಲ್ಲ
ಹೆಣ್ಣು : ರತಿಗೆ ಕೊಂಕಿಲ್ಲ ಗಂಡು : ಪ್ರಣಯದ
ಹೆಣ್ಣು : ಪ್ರೇಮದಾ ಮಧುರ ಪಾನವಿದು
ಇಬ್ಬರು : ಸುರ ಪಾನವಿದು... ಸುರ ಪಾನವಿದು...
ಹೆಣ್ಣು : ಬೀದಿಗೆ ಚಂದ್ರ ನೋಡೇ ಡೊಂಕು ಕಪ್ಪು ಮೋಡ ನೋಡೇ ಡೊಂಕು
ಕಿರಣಕೆ ಡೊಂಕಿಲ್ಲ ಮಳೆಧಾರೆಗೆ ಡೊಂಕಿಲ್ಲ
ಗಂಡು : ಅಂಕು ಡೊಂಕು ಕಾಣುವ ತುಟಿಗಳೆರಡೂ ನೋಡುವ
ಸಿಹಿಯಾದ ಈ ಮುತ್ತಲ್ಲಿ ಅಂಕಿಲ್ಲ ಡೊಂಕಿಲ್ಲ ಬಿಂಕವಿಲ್ಲ
ಝಲೇ ಝಲೇ ಝಲೇ ಝಲೇ .... ಸಿಹಿಗೇ ಡೊಂಕಿಲ್ಲ
ಹೆಣ್ಣು : ರತಿಗೆ ಕೊಂಕಿಲ್ಲ ಗಂಡು : ಪ್ರಣಯದ
ಹೆಣ್ಣು : ಪ್ರೇಮದಾ ಮಧುರ ಪಾನವಿದು
ಇಬ್ಬರು : ಸುರ ಪಾನವಿದು... ಸುರ ಪಾನವಿದು...
----------------------------------------------------------------
ಚನ್ನಪ್ಪ ಚನ್ನೇಗೌಡ (೧೯೯೯) - ಮಾವ ಮಾವ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಮೇಶಚಂದ್ರ, ನಂದಿತಾ, ಲತಾಹಂಸಲೇಖ
ಹೆಣ್ಣು : ಹೇ... ಮಾಮಾ...ಮಾಮಾ... ಮಾಮಾ ನೀ ಲೂಸಾ
ಹೆಂಡತಿಗೆ ಮುತ್ತು ಕೋಟ್ರೇ ಲಾಸಾ..
ಗಂಡು : ಬೇಡಾ ಬೇಡಾ ಹೆಂಡ್ತಿ ಸಹವಾಸ ಬಲವಂತ ಬಿಡ್ತೀನ ದೇಶ
ಕೋರಸ್ : ಬೇಡಾ ಅಂದ್ರೆ ಕೊಡ್ತೀನ್ ನಿಂಗೆ ಗೂಸಾ ಪ್ರಾಯಕ್ಕೆ ಯಾಕೆ ಮಾಡ್ತಿ ಮೋಸ
ಹೆಣ್ಣು : ಚುಂಚನ ಕಟ್ಟೆ ಜಾತ್ರೆಯಲಿ ಟಗರು ಕಾದಂಗ್ ಕಾಡುತಿಯ
ಮೈಸೂರಿನ್ ಮಲ್ಲರ ಮೇಲೆ ಗೂಳಿ ನುಗ್ಗದಂಗ್ ಹಾರುತೀಯ
ಕೋರಸ್ : ಹೆಂಡ್ತಿ ಅಂದ್ರೆ ಓಡುತಿಯಲ್ಲೋ ಪುಕ್ಕಲು ಪುಕ್ಕಲು ಮಾಮ
ಹೆಣ್ಣು : ಹೇ... ಮಾಮಾ...ಮಾಮಾ... ಮಾಮಾ ನೀ ಲೂಸಾ
ಹೆಂಡತಿಗೆ ಮುತ್ತು ಕೋಟ್ರೇ ಲಾಸಾ..
ಗಂಡು : ನಾವು ಇನ್ನು ಪಳಗಬೇಕು ಅರ್ಥ ಮಾಡಿಕೊಳ್ಳಬೇಕು
ಆಸೆ ತಲೆಗ್ ಹುಟ್ಟಬೇಕು ಗಂಡನ್ನ ಬಿದಿಗೆಳೆದೆಯಲ್ಲೇ ಚಂಗುಲಿ ಚಂಗುಲಿ ಹೆಣ್ಣೇ
ಹೆಣ್ಣು : ಹೇ... ಮಾಮಾ...ಮಾಮಾ... ಮಾಮಾ ನೀ ಲೂಸಾ
ಹೆಂಡತಿಗೆ ಮುತ್ತು ಕೋಟ್ರೇ ಲಾಸಾ..
ಹೆಣ್ಣು : ಮದುವೆ ಆದ ವರ್ಷದೊಳಗೆ ಹೆಂಡ್ತಿ ವಾಂತಿ ಮಾಡಬೇಕು
ಇಲ್ದೇ ಇದ್ರೇ ಊರೇ ವಾಂತಿ ಮಾಡತೈತೋ
ಗಂಡು : ನಾನು ಒಬ್ಬ ಈ ದೇಶದ ಭಕುತ ಮಕ್ಕಳ ಕಡಿಮೆ ಆಗಬೇಕು ಅನ್ನೋ ನಂಗೆ
ಮಕ್ಕಳು ಯಾಕೆ ಆಗಬೇಕು
ಹೆಣ್ಣು : ದೇಶ ಭಕ್ತರೆಲ್ಲ ಸತ್ತು ನಿಂಗ್ ಇನ್ನೂ ಹುಟ್ಲಿ ತಂದೆ ನೀನು ತಂದೆ ಆಗದಿದ್ರೆ
ವಂಶ ಬೆಳೆಸೋರ ಯಾರು ಮುಂದೆ ದೇಶಕ್ಕೆ ಮೋಸ ಮಾಡ್ಬೇಡವೋ ಪುಕ್ಕಲು ಪುಕ್ಕಲು ಮಾಮ
ಹೆಣ್ಣು : ಹೇ... ಮಾಮಾ...ಮಾಮಾ... ಮಾಮಾ ನೀ ಲೂಸಾ
ಹೆಂಡತಿಗೆ ಮುತ್ತು ಕೋಟ್ರೇ ಲಾಸಾ..
ಹೇ... ಮಾಮಾ...ಮಾಮಾ... ಮಾಮಾ ನೀ ಲೂಸಾ
ಹೆಂಡತಿಗೆ ಮುತ್ತು ಕೋಟ್ರೇ ಲಾಸಾ..
ಹೆಣ್ಣು : ನುಗ್ಗೇಕಾಯಿ ಪಡುವಲಕಾಯಿ ಪಕ್ಷ ಭೋಜ್ಯ ಮಾಡಿಟ್ಟೆ
ಫಲ ಇಲ್ದೇ ನಾನೇ ಬಂದು ಬಾಯ್ಬಿಟ್ಟೇ
ಗಂಡು : ಹುಣ್ಣಿಮೆ ನೀನು ಕತ್ತಲು ನಾನು
ನಾನು ನಿನಗೆ ಸಮವಿಲ್ಲ ಅನ್ನೋದೊಂದೇ ಅಳುಕು ಕಾಡುತಿದೆಯಲ್ಲ...
ಹೆಣ್ಣು : ನೀನು ಹೇಳೋ ಮಾತಿಗೆಲ್ಲ ತಲೆ ಇಲ್ಲ ಬಾಲ ಇಲ್ಲ
ಇವ್ಳು ಬಸರಿ ಆಗದಿದ್ರೇ ನೀನು ವೀರ ಪುರುಷನಲ್ಲ
ಊರೆಲ್ಲ ನಗಂಗ್ ಆದ್ಯೆಲ್ಲೋ ಪುಕ್ಕಲು ಪುಕ್ಕಲು ಮಾಮ
ಹೇ... ಮಾಮಾ...ಮಾಮಾ... ಮಾಮಾ ನೀ ಲೂಸಾ
ಹೆಂಡತಿಗೆ ಮುತ್ತು ಕೋಟ್ರೇ ಲಾಸಾ..
ಗಂಡು : ಬೇಡಾ ಬೇಡಾ ಹೆಂಡ್ತಿ ಸಹವಾಸ ಬಲವಂತ ಬಿಡ್ತೀನ ದೇಶ
ಕೋರಸ್ : ಬೇಡಾ ಅಂದ್ರೆ ಕೊಡ್ತೀನ್ ನಿಂಗೆ ಗೂಸಾ ಪ್ರಾಯಕ್ಕೆ ಯಾಕೆ ಮಾಡ್ತಿ ಮೋಸ
ಹೆಣ್ಣು : ಚುಂಚನ ಕಟ್ಟೆ ಜಾತ್ರೆಯಲಿ ಟಗರು ಕಾದಂಗ್ ಕಾಡುತಿಯ
ಮೈಸೂರಿನ್ ಮಲ್ಲರ ಮೇಲೆ ಗೂಳಿ ನುಗ್ಗದಂಗ್ ಹಾರುತೀಯ
ಕೋರಸ್ : ಹೆಂಡ್ತಿ ಅಂದ್ರೆ ಓಡುತಿಯಲ್ಲೋ ಪುಕ್ಕಲು ಪುಕ್ಕಲು ಮಾಮ
ಹೆಣ್ಣು : ಹೇ... ಮಾಮಾ...ಮಾಮಾ... ಮಾಮಾ ನೀ ಲೂಸಾ
ಹೆಂಡತಿಗೆ ಮುತ್ತು ಕೋಟ್ರೇ ಲಾಸಾ..
----------------------------------------------------------------
No comments:
Post a Comment